14/12/2025
ಸ್ಕಾಂದ ಪುರಾಣಾಂತರ್ಗತಂ
|| ಶ್ರೀ ಶಿವಪುರಾಣಮಹಾತ್ಮಂ ||
ಮೊದಲ ಅಧ್ಯಾಯ ಶ್ಲೋಕ ಮತ್ತು ಅದರ ತಾತ್ಪರ್ಯ ೪ ರಿಂದ ೬ ವರೆಗೆ.
ನಿನ್ನೆಯ ಸಂಚಿಕೆಯ ಮುಂದುವರೆದ ಭಾಗ :-
https://t.me/pranathagamya
https://whatsapp.com/channel/0029VaFdz5o6WaKlCnqmZJ1R
https://chat.whatsapp.com/E7Zz17vzyDb5VVsugCzo7F
https://www.facebook.com/profile.php?id=100091678419688&mibextid=kFxxJD
ಯದಸ್ತಿ ವಸ್ತು ಪರಮಂ ಶ್ರೇಯಸಾಂ ಶ್ರೇಯ ಉತ್ತಮಂ |ಪಾವನಂ ಪಾವನಾನಾಂ ಚ ಸಾಧನಂ ತದ್ವದಾಧುನಾ || ೪ ||
೪. ಮೇಲೆ ಹೇಳಿದ ರೀತಿಯಲ್ಲಿರುವ ಜನರು ಸನ್ಮಾರ್ಗ ಪ್ರವೃತ್ತರಾಗಲು ಈ ಪ್ರಪಂಚದಲ್ಲಿ ಶ್ರೇಯಸ್ಸೆಂದು ಯಾವುದಿದೆಯೋ ಅದಕ್ಕಿಂತಲೂ ಉತ್ತಮವಾದ ಶ್ರೇಯಸ್ಸುಳ್ಳ ಹಾಗೂ ಪವಿತ್ರವಾದುದು ಯಾವುದಿದೆಯೋ ಅದಕ್ಕಿಂತಲೂ ಪವಿತ್ರವಾದ ಸಾಧನೆಗಳನ್ನು ನನಗೆ ಈಗ ಹೇಳು.
* ಇಲ್ಲೊಂದು ಸೂಕ್ಷ್ಮವಿಚಾರ ಮೇಲ್ನೋಟಕ್ಕೆ ಅಂತಹ ಅರ್ಥವಿಲ್ಲವೆಂದು ಕಂಡರೂ ಸೂಕ್ಷ್ಮವಾಗಿ ಅವಲೋಕಿಸಿದಾಗ "ಶ್ರೇಯನಾಂ ಶ್ರೇಯಃ" ಎಂಬಲ್ಲಿ ಗಾಢವಾದ ಅರ್ಥವಿದೆ. "ಕಠೋಪನಿಷತ್ತಿ"ನಲ್ಲಿ ಯಮನಚಿಕೇತರ ಸಂವಾದದಲ್ಲಿ "ಶ್ರೇಯಸ್ಸಿನ ವಿಚಾರ" ವನ್ನು ಯಮದೇವನು ಚೆನ್ನಾಗಿ ವಿವರಿಸಿದ್ದಾನೆ. ಪ್ರೇಯಸ್ಸು ಮತ್ತು ಶ್ರೇಯಸ್ಸು ಎಂದು ಎರಡು ವಿಧ.
* ಪ್ರೇಯಸ್ಸೆಂದರೆ - ಯಜ್ಞದಾನಾತಪ, ಜಪಾದಿ ಕರ್ಮ ಶಾಸ್ತ್ರ ವಿಹಿತ ಕಾಮ್ಮ ಕರ್ಮಗಳಿಂದ ದೊರೆಯುವುದು. ಸ್ವರ್ಗಾದಿ ಐಹಿಕ ಫಲವುಳ್ಳದ್ದು.
* ಶ್ರೇಯಸ್ಸೆಂದರೆ :- ಶಾಶ್ವತವಾದ ಜ್ಞಾನ ರೂಪವುಳ್ಳ ಮೋಕ್ಸ ಫಲವುಳ್ಳದ್ದು ಎಂದರ್ಥ. ಆದ್ದರಿಂದ ಜನ್ಮಮರಣರಹಿತವಾದ ಮೋಕ್ಸವನ್ನು ನೀಡುವಂತಹದ್ದೇ ಶ್ರೇಯಸ್ಸು. ಅಜ್ಞಾನ ನಿವೃತ್ತಿಯಾಗಿ ಅಂತಹ ಶ್ರೇಯಃಪ್ರದವಾದ ಸಾಧನವನ್ನು ನನಗೆ ತಿಳಿಸು ಎಂದು ಅಂತರಾರ್ಥ.
ಯೇನ ತತ್ಸಾಧನೇನಾಶು ಶುಧ್ಯತ್ಯಾತ್ಮಾ ವಿಶೇಷತಃ |
ಶಿವಪ್ರಾಪ್ತಿರ್ಭವೇತ್ತಾತ ಸದಾ ನಿರ್ಮಲಚೇತಸಃ || ೫ ||
೫. ಯಾವ ಅಂತಹ ಶ್ರೇಯಃಪ್ರದವಾದ ಸಾಧನದಿಂದ ಬೇಗನೇ, ನಿರ್ಮಲ ಮನಸ್ಸುಳ್ಳವನಾಗಿ ಆತ್ಮಶುದ್ದಿಯನ್ನು ಹೊಂದಿ ನಂತರ ಶಿವಪ್ರಾಪ್ತಿಯನ್ನು ಪಡೆಯಲು ಸಾಧ್ಯವಾದ ಸಾಧನವನ್ನು ನನಗೆ ಎಲೈ ಪೂಜ್ಮನೇ ತಿಳಿಸು. "ಮೋಕ್ಸ ಪ್ರಾಪ್ತಿಗೆ ಚಿತ್ತಶುದ್ದಿ ಅವಶ್ಶ" ವೆಂಬುದನ್ನು ಮತ್ತೆ ತಿಳಿಸಿದಂತಾಯ್ತು.
|| ಸೂತಉವಾಚ ||
ಧನ್ಯಸ್ತ್ಯಂ ಮುನಿಶಾರ್ದೂಲ ಶ್ರವಣಪ್ರೀತಿಲಾಲಸಃ |
ಅತೋ ವಿಚಾರ್ಯ ಸುಧಿಯಾ ವಚ್ಮಿ ಶಾಸ್ತ್ರಂ ಮಹೋತ್ತಮಂ || ೬ ||
ಸೂತ ಉವಾಚ ಸೂತರು ಹೇಳುತ್ತಾರೆ.
೬. ಎಲೈ ಮುನಿಶ್ರೇಷ್ಠನೇ, ನೀನೇ ಧನ್ಯನು. ಏಕೆಂದರೆ, ಶಿವಸಂಬಂಧವಾದ ಶಾಸ್ತ್ರವನ್ನು ಕೇಳಬೇಕೆಂಬ ಪ್ರೀತಿ, ಆದರಗಳುಳ್ಳವನಾಗಿರುವೆ. ಆದ್ದರಿಂದ ಚೆನ್ನಾಗಿ ಆಲೋಚಿಸಿ ಅತ್ಯಂತ ಉತ್ತಮವಾದ ಶಾಸ್ತ್ರವನ್ನು ಹೇಳುವೆನು. ಸತ್ಕರ್ಮದಲ್ಲಿ, ಸಚ್ಛಾಸ್ತ್ರದಲ್ಲಿ ಆಸಕ್ತಿಯು ಅನೇಕವಾದ ಪುಣ್ಯದಿಂದ ಲಭ್ಯವಾಗುವಂತಹದು. ಅದಕ್ಕಾಗಿಯೇ ಸೂತರು "ಧನ್ಮ" ಎಂದು ಹೇಳಿದ್ದಾರೆ. ಇನ್ನು "ಶಾಸ್ತ್ರ"ವೆಂದರೆ, ಇದೇನು ಇಲ್ಲಿ "ಯಾವ ಶಾಸ್ತ್ರ ಪ್ರಾರಂಭ" ಎಂದು ಸಂಶಯ ಬರಬಹುದು. ಶಾಸ್ತ್ರವೆಂದರೆ "ಶಾಸ್ತ್ರೀ ಇತಿ ಶಾಸ್ತ್ರ" ಎಂದು. ಹೀಗೆಯೇ ಮಾಡಬೇಕೆಂದು ವಿಧಿಸುವುದೇ "ಶಾಸ್ತ್ರ" ಎಂದು ಕರೆಯಲ್ಪಡುತ್ತದೆ.
ಸರ್ವಸಿದ್ಧಾಂತನಿಷ್ಟನ್ನಂ ಭಕ್ತ್ಯಾದಿಕವಿವರ್ಧನಂ |
[ಮುಂದುವರೆಯುವುದು]