28/01/2026
ಹಿಂದೂ ಸಮಾಜೋತ್ಸವದಲ್ಲಿ ಮಿಂಚಿದ ವಿಜಯಪುರ ವಿವೇಕ ಮಂದಿರದ ಬಾಲಗೋಕುಲದ ಮಕ್ಕಳು! 🚩✨
ದಿನಾಂಕ 26-01-2026 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಅತ್ಯಂತ ವೈಭವದಿಂದ ಜರುಗಿದ "ಹಿಂದೂ ಸಮಾಜೋತ್ಸವ" ಕಾರ್ಯಕ್ರಮದಲ್ಲಿ ನಮ್ಮ ವಿಜಯಪುರದ ವಿವೇಕ ಮಂದಿರದ ಬಾಲಗೋಕುಲದ ಪುಟಾಣಿ ಮಕ್ಕಳು ವಿಶೇಷ ಆಕರ್ಷಣೆಯಾಗಿ ಮೂಡಿಬಂದರು. 🌸
ಹಿಂದೂ ಸಮಾಜೋತ್ಸವದ ಭವ್ಯ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ ನಮ್ಮ ಮಕ್ಕಳು, ವಿವಿಧ ದೇವಾನುದೇವತೆಗಳ ಹಾಗೂ ವೀರ ದೇಶಭಕ್ತರ ವೇಷಭೂಷಣಗಳನ್ನು ತೊಟ್ಟು ಆಕಾಶದ ನಕ್ಷತ್ರಗಳಂತೆ ಕಂಗೊಳಿಸಿದರು. 🔱 ವೇಷಭೂಷಣಗಳ ಮೂಲಕ ಭಾರತದ ಭವ್ಯ ಹಿಂದೂ ಧರ್ಮದ ಸಂಸ್ಕೃತಿ ಹಾಗೂ ದೇಶಭಕ್ತರ ಇತಿಹಾಸವನ್ನು ಜನಮನಕ್ಕೆ ಸಾರುವಲ್ಲಿ ಮಕ್ಕಳು ಯಶಸ್ವಿಯಾದರು. 🇮🇳
ಈ ಒಂದು ಅದ್ಭುತ ಕಾರ್ಯಕ್ರಮವು ಇಷ್ಟು ಅರ್ಥಪೂರ್ಣವಾಗಿ ಮೂಡಿಬರಲು ಸಹಕರಿಸಿದ ಎಲ್ಲಾ ಬಾಲಗೋಕುಲದ ಮಕ್ಕಳಿಗೆ, ಪ್ರೋತ್ಸಾಹ ನೀಡಿದ ಪೋಷಕರಿಗೆ ಹಾಗೂ ಮಾರ್ಗದರ್ಶನ ನೀಡಿದ ಎಲ್ಲರಿಗೂ ನಮ್ಮ ಬಾಲಗೋಕುಲದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು. 🙏🧡
ನಮ್ಮ ಸಂಸ್ಕೃತಿ - ನಮ್ಮ ಹೆಮ್ಮೆ! 🚩