ಶ್ರೀರಾಮೇಶ್ವರ ದೇವಸ್ಥಾನ ಆಲೂರು

  • Home
  • India
  • Udupi
  • ಶ್ರೀರಾಮೇಶ್ವರ ದೇವಸ್ಥಾನ ಆಲೂರು
Directions

ಶ್ರೀರಾಮೇಶ್ವರ ದೇವಸ್ಥಾನ ಆಲೂರು Contact information, map and directions, contact form, opening hours, services, ratings, photos, videos and announcements from ಶ್ರೀರಾಮೇಶ್ವರ ದೇವಸ್ಥಾನ ಆಲೂರು, Hindu temple, ಆಲೂರು , ಕುಂದಾಪುರ ತಾಲೋಕು, Udupi.

ಉಡುಪಿ ಜಿಲ್ಲೆಯ ಆಲೂರು ಗ್ರಾಮದ ಐತಿಹಾಸಿಕ 800 ವರುಷಕ್ಕೂ ಪುರಾತನವಾದ ಹಿಂದೂ ದೇವಾಲಯವಿದು.ಜೀರ್ಣೋದ್ಧಾರಕ್ಕೆ ಅಣಿಯಾಗಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ ಸಾಗುತ್ತಿದೆ.
ಕೇವಲ ದೇವಾಲಯಕ್ಕೆ ಸಂಬಂಧಿಸಿದಂತೆ *ದೇವಾಲಯದಲ್ಲಿಂದು* ಎನ್ನುವ ಶೀರ್ಷಿಕೆಯಲ್ಲಿ ದಿನದಿನದ ವಿಶೇಷ ಕಾರ್ಯಕ್ರಮದ ಮಾಹಿತಿ ವಿಸ್ತರಣೆಗೆ ಈ ಪೇಜ್

*ಶ್ರೀ ರಾಮೇಶ್ವರ ದೇವಸ್ಥಾನ, ಆಲೂರು*      ಜೀರ್ಣೋದ್ಧಾರ ಸಮಿತಿಯ ಹೆಮ್ಮೆಯ ಉಪಾಧ್ಯಕ್ಷರಾದ ಶ್ರೀ ಶಿವರಾಮ ಶೆಟ್ಟಿ ಮತ್ತು ಮಕ್ಕಳು ಗೋಳಿಕಟ್ಟೆ ,...
09/06/2026

*ಶ್ರೀ ರಾಮೇಶ್ವರ ದೇವಸ್ಥಾನ, ಆಲೂರು*

ಜೀರ್ಣೋದ್ಧಾರ ಸಮಿತಿಯ ಹೆಮ್ಮೆಯ ಉಪಾಧ್ಯಕ್ಷರಾದ ಶ್ರೀ ಶಿವರಾಮ ಶೆಟ್ಟಿ ಮತ್ತು ಮಕ್ಕಳು ಗೋಳಿಕಟ್ಟೆ ,ಆಲೂರು ಇವರು ದೇವಸ್ಥಾನದ ಜೀರ್ಣೋದ್ಧಾರ ಹಿನ್ನಲೆಯಲ್ಲಿ ಪ್ರಥಮ‌ ಹಂತವಾಗಿ 5,00,001( ಐದು ಲಕ್ಷದ ಒಂದು ರೂಪಾಯಿ) ನೀಡಿರುತ್ತಾರೆ.ಹಾಗೆಯೇ ಪ್ರತಿವರ್ಷ ಮಹಾಶಿವರಾತ್ರಿ ದಿನದಂದು ದೇವಸ್ಥಾನ ಮುಂಭಾಗದಲ್ಲಿ ಶ್ರೀ ಕ್ಷೇತ್ರ ಮಾರಣಕಟ್ಟೆ ಮೇಳದವರಿಂದ ಯಕ್ಷಗಾನ ಪ್ರದರ್ಶನ ಮತ್ತು ಫಲಹಾರ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿರುತ್ತಾರೆ.

ಶ್ರೀಯುತರಿಗೆ ಶ್ರೀ ದೇವರು *ಆಯುರ್- ಆರೋಗ್ಯ- ಆಯುಷ್ಯ* ಸಕಲವನ್ನು ಕರುಣಿಸಲಿ ಎಂದು ಶ್ರೀ ರಾಮೇಶ್ವರ ದೇವರಲ್ಲಿ ಬೇಡುತ್ತೇವೆ ಹಾಗೂ ಶ್ರೀ ದೇವಾಲಯದ ನಿರ್ಮಾಣ ಕಾರ್ಯಕ್ಕೆ *ತನು-ಮನ-ಧನ* ಸಹಾಯ ಮಾಡಲು ಮುಂದೆ ಬಂದಿರುವ ಶ್ರೀಯುತರಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ. 🙏🙏🙏

ಶ್ರೀ ರಾಮೇಶ್ವರ ದೇವಸ್ಥಾನ, ಆಲೂರು   ದೇವಸ್ಥಾನದ ನೆಲದ ಮೇಲ್ಗಡೆಯ ಪಂಚಾಂಗದ ಕೆಲಸ ಪ್ರಾರಂಭವಾಗಿದೆ.
29/05/2026

ಶ್ರೀ ರಾಮೇಶ್ವರ ದೇವಸ್ಥಾನ, ಆಲೂರು

ದೇವಸ್ಥಾನದ ನೆಲದ ಮೇಲ್ಗಡೆಯ ಪಂಚಾಂಗದ ಕೆಲಸ ಪ್ರಾರಂಭವಾಗಿದೆ.

*ಶ್ರೀ ರಾಮೇಶ್ವರ ದೇವಸ್ಥಾನ, ಆಲೂರು*        *ದೇವಸ್ಥಾನ ಜೀರ್ಣೋದ್ದಾರದ ಹಿನ್ನೆಲೆಯಲ್ಲಿ ನಿನ್ನೆ (26-05-2026) ಬೆಂಗಳೂರಿನಲ್ಲಿ ಮಾನ್ಯ ಮಾಜಿ...
26/05/2026

*ಶ್ರೀ ರಾಮೇಶ್ವರ ದೇವಸ್ಥಾನ, ಆಲೂರು*

*ದೇವಸ್ಥಾನ ಜೀರ್ಣೋದ್ದಾರದ ಹಿನ್ನೆಲೆಯಲ್ಲಿ ನಿನ್ನೆ (26-05-2026) ಬೆಂಗಳೂರಿನಲ್ಲಿ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ವೀರಪ್ಪ ಮೊಹಿಲಿಯವರನ್ನು,ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಸಚಿವರಾದ ಶ್ರಿ ರಾಮಲಿಂಗ ರೆಡ್ಡಿಯವರನ್ನು ಬೇಟಿ ನೀಡಿ ಸರಕಾರದ ಅನುದಾನ ಹಿನ್ನಲೆಯಲ್ಲಿ ಮನವಿ ಸಲ್ಲಿಸಲಾಯಿತು.ಅನುದಾನ ನೀಡುವ ಭರವಸೆ ನೀಡಿದರು.*
*ಹಾಗೆಯೇ ಭಕ್ತಬಂಧುಗಳಾದ ತಿರುಮಲ ಜೋಯಿಸ್,ಸುಮನ ಶ್ರೀನಿವಾಸ ಜೋಯಿಸ್,ರತ್ನಾಕರ ಶೆಟ್ಟಿ ಗೋಳಿಕಟ್ಟೆ CA,ಸತ್ಯನಾರಾಯಣ ಜೋಯಿಸ್,ವೇಣುಮಾಧವ,ವಿಶ್ವನಾಥ ದೇವಾಡಿಗ ,ಲವೇಶ ಶೆಟ್ಟಿ, ಪ್ರಕಾಶ ಜೋಯಿಸ್ ಬೇಟಿ ನೀಡಲಾಯಿತು.*
*ಎಲ್ಲಾ ಗೌರವಾನ್ವಿತ ಬಂಧುಗಳು ನಮ್ಮನ್ನು ಪ್ರೀತಿಯಿಂದ ಸ್ವಾಗತಿಸುವುದರ ಜೊತೆಗೆ ಪ್ರಾರಂಭಿಕ ಹಂತವಾಗಿ ತಿರುಮಲ ಜೋಯಿಸ್ 5 ಲಕ್ಷ,ಸುಮನ ಶ್ರೀನಿವಾಸ ಜೋಯಿಸ್ 50,000,ಸತ್ಯನಾರಾಯಣ ಜೋಯಿಸ್ 35,000, ರತ್ನಾಕರ ಶೆಟ್ಟಿ 75,000 ,ಪ್ರಕಾಶ ಜೋಯಿಸ್ 25,000 ನೀಡಿ ಸಹಕರಿಸಿದರು. ಮುಂದಿನ ದಿನಗಳಲ್ಲಿ ಮತ್ತೆ ಹೆಚ್ಚಿನ ಧನಸಹಾಯ ನೀಡುವುದಾಗಿ ತಿಳಿಸಿದರು.ಹಾಗೆಯೇ ಉಳಿದು ಗೌರವಾನ್ವಿತ ಭಕ್ತಬಂಧುಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ತನು,ಮನ, ಧನಸಹಾಯ ನೀಡುವುದಾಗಿ ತಿಳಿಸಿದರು.ಎಲ್ಲಾ ಗೌರವಾನ್ವಿತ ಬಂಧುಗಳಿಗೆ ಗೌರವಪೂರ್ವಕ‌ ಧನ್ಯವಾದಗಳನ್ನು ತಿಳಿಸುತ್ತಾ,ಶ್ರೀ ರಾಮೇಶ್ವರ ಆಶೀರ್ವಾದ ತಮಗೂ ತಮ್ಮ ಕುಟುಂಬಕ್ಕೂ ಸದಾ ಇರಲಿ ಎಂದು ಹಾರೈಸುತ್ತೇವೆ.*

ಕಳಿ, ಕಾಳಿಕಾಂಬ ನಗರ,ಹರ್ಕೂರು ಮನವಿ ,ಆಮಂತ್ರಣ ವಿತರಣೆ...ಸಂತೋಷ್ ಶೆಟ್ಟಿ , ಶಿವಾನಂದ ಆಚಾರ್ಯ,ರತ್ನಾಕರ ಶೆಟ್ಟಿ, ಪೂರ್ಣಿಮಾ ಗುರುರಾಜ್, ಸುಜಾತ...
13/04/2026

ಕಳಿ, ಕಾಳಿಕಾಂಬ ನಗರ,ಹರ್ಕೂರು ಮನವಿ ,ಆಮಂತ್ರಣ ವಿತರಣೆ...ಸಂತೋಷ್ ಶೆಟ್ಟಿ , ಶಿವಾನಂದ ಆಚಾರ್ಯ,ರತ್ನಾಕರ ಶೆಟ್ಟಿ, ಪೂರ್ಣಿಮಾ ಗುರುರಾಜ್, ಸುಜಾತ ಅರುಣ್ ಗೌಡ, ಸಂದೀಪ ಆಚಾರ್ಯ, ಯೋಗೀಶ್ ಆಚಾರ್ಯ,ಪ್ರಭಾಕರ ಪೂಜಾರಿ ಸಸಿಹಿತ್ಲು,ಸೀತಾರಾಮ ಶೆಟ್ಟಿ ಇವರುಗಳಿಂದ..

ಸಾತ್ ಕೋಡ್ ,ಮೈರ್ಗುಳಿ,ಕೆರೆಕೊಡ್ಲು  ಭಾಗದಲ್ಲಿ ಆಮಂತ್ರಣ ಪತ್ರಿಕೆ ಮತ್ತು ಮನವಿ ಪತ್ರ ವಿತರಣೆ ಮಾಡಿದ ನಮ್ಮ ಹೆಮ್ಮೆಯ ಸದಸ್ಯರಾದ ಪ್ರಭಾಕರ ಪೂಜಾ...
13/04/2026

ಸಾತ್ ಕೋಡ್ ,ಮೈರ್ಗುಳಿ,ಕೆರೆಕೊಡ್ಲು ಭಾಗದಲ್ಲಿ ಆಮಂತ್ರಣ ಪತ್ರಿಕೆ ಮತ್ತು ಮನವಿ ಪತ್ರ ವಿತರಣೆ ಮಾಡಿದ ನಮ್ಮ ಹೆಮ್ಮೆಯ ಸದಸ್ಯರಾದ ಪ್ರಭಾಕರ ಪೂಜಾರಿ, ಸುಧಾಕರ ಪೂಜಾರಿ.

ಗುಂಡೂರಿನಿಂದ ನರ್ಲೆಗುಳಿಯವರೆಗೆ ಉಮೇಶ ಆಚಾರ್ಯ, ಚಂದ್ರಶೇಖರ ಬಿಲ್ಲವ,ವಸಂತ ಶೆಟ್ಟಿ ನರ್ಲೆಗುಳಿ,ಪ್ರಶಾಂತ ಆಚಾರ್ಯ,ಮಹಾಬಲ ಪೂಜಾರಿ ಮಡ್ಲಕೋಡು ಇಂದ...
13/04/2026

ಗುಂಡೂರಿನಿಂದ ನರ್ಲೆಗುಳಿಯವರೆಗೆ ಉಮೇಶ ಆಚಾರ್ಯ, ಚಂದ್ರಶೇಖರ ಬಿಲ್ಲವ,ವಸಂತ ಶೆಟ್ಟಿ ನರ್ಲೆಗುಳಿ,ಪ್ರಶಾಂತ ಆಚಾರ್ಯ,ಮಹಾಬಲ ಪೂಜಾರಿ ಮಡ್ಲಕೋಡು ಇಂದು ಅಮಂತ್ರಣ ಪತ್ರಿಕೆ ಮತ್ತು ಮನವಿ ಪತ್ರ ವಿತರಣೆ ಮಾಡಿದರು.

ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ  *ಪಡು ತಾರಿಬೇರು* ಭಾಗದಲ್ಲಿ   *ಶ್ರೀ ರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರದ ಮನವಿ ಪತ್ರ ಹಾಗೂ  ದೇವಳದ ಶಿ...
13/04/2026

ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ *ಪಡು ತಾರಿಬೇರು* ಭಾಗದಲ್ಲಿ *ಶ್ರೀ ರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರದ ಮನವಿ ಪತ್ರ ಹಾಗೂ ದೇವಳದ ಶಿಲಾನ್ಯಾಸ* ಕಾರ್ಯಕ್ರಮಕ್ಕೆ ಅಲ್ಲಿನ ಮನೆಗಳಿಗೆ ಆಮಂತ್ರಣ ನೀಡಲಾಯಿತು.

ಈ ವೇಳೆಯಲ್ಲಿ ಬಿಡುವಿಲ್ಲದ ಕೆಲಸದ ನಡುವೆಯೂ ನಮ್ಮ ಜೊತೆಯಾಗಿ ಆಮಂತ್ರಣ ನೀಡಲು ಮನೆ ಮನೆಗೆ ಬಂದು ಸಹಕರಿಸಿದ ಸ್ಥಳೀಯ ಮುಖಂಡರುಗಳಾದ ಆನಂದ ಗಾಣಿಗ ಹಾಗೂ ಅರುಣ ಗೌಡ ಅವರಿಗೆ ಧನ್ಯವಾದಗಳು🙏🏼🙏🏼💐

ಇಂದು ಗೋಳಿಕಟ್ಟೆಯಿಂದ ನವಗ್ರಾಮ ಕಾಲೋನಿ ತನಕ ಶ್ರೀ ರಾಮೇಶ್ವರ ದೇವಳದ ಮನವಿ ಪತ್ರ ಹಾಗೂ ಶಿಲಾನ್ಯಾಸ ಆಮಂತ್ರಣ ಪತ್ರಿಕೆಯನ್ನು  *ಹಿರಿಯರಾದ, ಜೀರ್...
13/04/2026

ಇಂದು ಗೋಳಿಕಟ್ಟೆಯಿಂದ ನವಗ್ರಾಮ ಕಾಲೋನಿ ತನಕ ಶ್ರೀ ರಾಮೇಶ್ವರ ದೇವಳದ ಮನವಿ ಪತ್ರ ಹಾಗೂ ಶಿಲಾನ್ಯಾಸ ಆಮಂತ್ರಣ ಪತ್ರಿಕೆಯನ್ನು *ಹಿರಿಯರಾದ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರು ಆದ ಶಿವರಾಮ ಶೆಟ್ಟಿ ಗೋಳಿಕಟ್ಟೆ* ಹಾಗೂ *ಕಿರಿಯರಾದ ರಾಘವೇಂದ್ರ ದೇವಾಡಿಗ ,ಅರುಣ ದೇವಾಡಿಗ* ಅವರು ವಿತರಣೆ ಮಾಡಿದರು....🙏🙏🙏

13/04/2026

*ಶ್ರೀ ರಾಮೇಶ್ವರ ದೇವಸ್ಥಾನ, ಆಲೂರು*

*ಗೌರವಾನ್ವಿತ ಭಕ್ತಬಂಧುಗಳೇ,*

*ದಿನಾಂಕ 14-04-2026 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ರಾಮ ಭಜನಾ ಮಂದಿರ ವಠಾರದಲ್ಲಿ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಹಿನ್ನೆಲೆಯಲ್ಲಿ, ಪೂರ್ವಭಾವಿ ಸಭೆ ಕರೆಯಲಾಗಿದೆ. ನಿಗದಿತ ಸಮಯಕ್ಕೆ ಭಕ್ತಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಸಲಹೆ ಸೂಚನೆ ನೀಡಿ ,ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ*

*ಆಡಳಿತ ಮೊಕ್ತೇಸರರು/ಅಧ್ಯಕ್ಷರು,/ಉಪಾಧ್ಯಕ್ಷರು/ಕಾರ್ಯದರ್ಶಿ/ಖಜಾಂಚಿಗಳು ಹಾಗೂ ಪದಾಧಿಕಾರಿಗಳು ಜೀರ್ಣೋದ್ಧಾರ ಸಮಿತಿ ಶ್ರೀ ರಾಮೇಶ್ವರ ದೇವಸ್ಥಾನ ಆಲೂರು**

09/03/2026

*ಶ್ರೀ ರಾಮೇಶ್ವರ ದೇವಸ್ಥಾನ, ಆಲೂರು*

ಗೌರವಾನ್ವಿತ ಭಕ್ತಬಂಧುಗಳೇ,

ದಿನಾಂಕ 10-03-2026 ಮಂಗಳವಾರ ಸಂಜೆ 4 ಗಂಟೆಗೆ ವಾಸ್ತುತಜ್ಞರಾದ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟರು ದೇವಸ್ಥಾನಕ್ಕೆ ಆಗಮಿಸಿ ಮಾರ್ಕಿಂಗ್ ಕಾರ್ಯವನ್ನು ಮಾಡಲಿದ್ದಾರೆ.ನಿಗದಿತ ಸಮಯಕ್ಕೆ ಭಕ್ತಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶ್ರೀ ದೇವರ ಕ್ರಪೆಗೆ ಪಾತ್ರರಾಗಬೇಕಾಗಿ ವಿನಂತಿ

ಆಡಳಿತ ಮೊಕ್ತೇಸರರು/ಅಧ್ಯಕ್ಷರು,/ಉಪಾಧ್ಯಕ್ಷರು/ಕಾರ್ಯದರ್ಶಿ/ಖಜಾಂಚಿಗಳು ಹಾಗೂ ಪದಾಧಿಕಾರಿಗಳು ಜೀರ್ಣೋದ್ಧಾರ ಸಮಿತಿ ಶ್ರೀ ರಾಮೇಶ್ವರ ದೇವಸ್ಥಾನ ಆಲೂರು.

Address

ಆಲೂರು , ಕುಂದಾಪುರ ತಾಲೋಕು
Udupi

Website

Alerts

Be the first to know and let us send you an email when ಶ್ರೀರಾಮೇಶ್ವರ ದೇವಸ್ಥಾನ ಆಲೂರು posts news and promotions. Your email address will not be used for any other purpose, and you can unsubscribe at any time.

Shortcuts

Share

Category