17/12/2017
#ಧನುರ್ಮಾಸ #ವ್ರತ – ಬ್ರಾಹ್ಮೀ ಮುಹೂರ್ತ ಮಾತ್ರ ಪೂಜೆ
ಸೂರ್ಯನು ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಧನುಸ್ಸು ರಾಶಿಯನ್ನು ಪ್ರವೇಶಿಸುತ್ತಾನಾದ್ದರಿಂದ ಈ ಮಾಸವನ್ನು ಧನುರ್ಮಾಸವೆಂದು ಕರೆಯಲಾಗುತ್ತದೆ. ಸೂರ್ಯನು ಒಂದೊಂದು ರಾಶಿಯಲ್ಲಿ ಒಂದೊಂದು ತಿಂಗಳಕಾಲ ಉಪಸ್ಥಿತನಿದ್ದು ನಂತರ ಮುಂದಿನ ರಾಶಿಗೆ ಪ್ರಯಾಣಿಸುವನಾದ್ದರಿಂದ ವರ್ಷವೊಂದನ್ನು ಹನ್ನೆರಡು ತಿಂಗಳುಗಳಾಗಿ ವಿಭಜಿಸಲಾಗಿದೆ. ಧನುರ್ಮಾಸದ ಸಂದರ್ಭದಲ್ಲಿ ಛಳಿಗಾಲವು ಆರಂಭವಾಗುತ್ತದೆ ಮತ್ತು ಈ ಕಾಲವು ಭಗವದಾರಾಧನೆಗೆ ಅತ್ಯುತ್ತಮವಾದ ಕಾಲವೆಂದು ಶಾಸ್ತ್ರಗಳು ಸಾರುತ್ತವೆ. ಬ್ರಾಹ್ಮೀ ಮುಹೂರ್ತದಲ್ಲಿ ನಿದ್ರೆಯಿಂದೆದ್ದು ಸ್ನಾನ, ಜಪ, ತಪ, ಪೂಜಾದಿಗಳನ್ನು ಕೈಗೊಂಡು ಸೂರ್ಯೋದಯಕ್ಕಿಂತ ಮುಂಚಿತವಾಗಿ ಭಗವಂತನಿಗೆ ನೈವೇದ್ಯವನ್ನು ಸಮರ್ಪಿಸಿದರೆ ಮೋಕ್ಷವು ಪ್ರಾಪ್ತವಾಗುತ್ತದೆ.
ಪೌರಾಣಿಕ ಹಿನ್ನೆಲೆ:
ಶ್ರೀಮನ್ಮಹಾಭಾರತದಲ್ಲಿ ಉಲ್ಲೇಖಿಸಲಾಗಿರುವ ವೃತ್ತಾಂತದಲ್ಲಿ ಧನುರ್ಮಾಸದ ಮಹಿಮೆಯು ತಿಳಿದುಬರುತ್ತದೆ. ಸ್ವರ್ಗಾಧಿಪತಿ ಇಂದ್ರನು ದೇವತೆಗಳ ಅಪೇಕ್ಷೆಯಂತೆ, ದೇವ-ಬ್ರಾಹ್ಮಣರನ್ನು ಹಿಂಸಿಸುತ್ತಿದ್ದ ಮತ್ತು ಅಧರ್ಮಿಯಾಗಿದ್ದ, ವರಬಲದಿಂದ ಉನ್ಮತ್ತನಾಗಿದ್ದ, ಆದರೂ ಮೂಲತಃ ಶ್ರೀ ವಿಷ್ಣುವಿನ ಉಪಾಸಕನಾಗಿ ಭಕ್ತಾಗ್ರೇಸರನೆಂದು ಗುರುತಿಸಲ್ಪಟ್ಟಿದ್ದ ವೃತ್ರಾಸುರನನ್ನು ತನ್ನ ವಜ್ರಾಯುಧದಿಂದ ಕೊಲ್ಲಬೇಕಾಯಿತು. ಅದಕ್ಕೂ ಮುಂಚೆ, ವೃತ್ರಾಸುರನು ದೇವೇಂದ್ರನನ್ನೂ ಪರಾಭವಗೊಳಿಸಿ ಸ್ವರ್ಗಾಧಿಪತ್ಯವನ್ನು ಪಡೆದುಕೊಂಡಿರುತ್ತಾನೆ. ನಂತರ ದೇವೇಂದ್ರನು ದಧೀಚಿ ಋಷಿಗಳ ಅಸ್ತಿಯಿಂದಲೇ ನಿರ್ಮಿತವಾದ ವಜ್ರಾಯುಧದಿಂದ ವೃತ್ರನನ್ನು ಸಂಹರಿಸುತ್ತಾನೆ. ತಮ್ಮ ಅಸ್ತಿಯನ್ನು ದೇವಕಾರ್ಯಕ್ಕೆ ನೀಡುವಾಗ ದಧೀಚಿ ಮುನಿಗಳು ಪ್ರಾಣಾರ್ಪಣೆ ಮಾಡಿದುದರಿಂದ ಅವರ ಮೃತ್ಯುವಿಗೆ ಕಾರಣಕರ್ತನಾದ ಇಂದ್ರನಿಗೆ ಬ್ರಹ್ಮಹತ್ಯಾದೋಷವುಂಟಾಗುತ್ತದೆ. ಈ ದೋಷದ ಪರಿಹರಿಕೊಳ್ಳುವ ಉಪಾಯವೇನೆಂದು ದೇವೇಂದ್ರನು ಋಷಿ-ಮುನಿಗಳ ಅಭಿಪ್ರಾಯವನ್ನು ಕೇಳಿದಾಗ ಅವರು ಇಂದ್ರನಿಗೆ ಧನುರ್ಮಾಸದ ಪರ್ಯಂತ, ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ವಿಷ್ಣುವನ್ನು ಅರ್ಚಿಸಿ ಮುದ್ಗಾನ್ನವನ್ನು ಸೂರ್ಯೋದಯಕ್ಕಿಂತ ಮುಂಚಿತವಾಗಿ ನೈವೇದ್ಯ ಮಾಡಿ ಭುಂಜಿಸಬೇಕೆಂದು ಸಲಹೆ ನೀಡುತ್ತಾರೆ. ಅಂತೆಯೇ ಧನುರ್ಮಾಸದಲ್ಲಿ ಇಂದ್ರನು ವ್ರತವನ್ನಾಚರಿಸಿ ದೋಷಮುಕ್ತನಾಗುತ್ತಾನೆ. ಬ್ರಹ್ಮಹತ್ಯೆಯಂತಹ ಘೋರ ದೋಷಗಳನ್ನೂ ಧನುರ್ಮಾಸ ವ್ರತದಿಂದ ಪರಿಹರಿಸಿಕೊಳ್ಳಬಹುದಾದರೆ, ಇತರ ಸಾಮಾನ್ಯ ಪಾಪಗಳು ಈ ವ್ರತಾಚರಣೆಯಿಂದ ಪರಿಹಾರವಾಗುವುದರಲ್ಲಿ ಸಂಶಯವಿಲ್ಲ.
ಆದ್ದರಿಂದ, ಅನೇಕರು ಧನುರ್ಮಾಸ ವ್ರತವನ್ನು ಶ್ರದ್ಧಾಭಕ್ತಿಗಳಿಂದ ಶಾಸ್ತ್ರೋಕ್ತವಾಗಿ ಆಚರಿಸುತ್ತಾರೆ. ಹುಗ್ಗಿಯನ್ನು ತಯಾರಿಸುವಾಗ ಅಕ್ಕಿ ಮತ್ತು ಹೆಸರುಬೇಳೆಯನ್ನು ಸಮಪ್ರಮಾಣದಲ್ಲಿ ಬಳಸುವುದು ಕ್ರಮ. ಧನುರ್ಮಾಸದಲ್ಲಿ ಹುಗ್ಗಿಯನ್ನು ಸೇವಿಸುವುದು ವೈಜ್ಞಾನಿಕವಾಗಿಯೂ ಅತ್ಯಂತ ಆರೋಗ್ಯಕರವೆಂದು ಹೇಳಲಾಗಿದೆ. ಇದಕ್ಕೆ ಕಾರಣವೇನೆಂದರೆ, ಹುಗ್ಗಿಯನ್ನು ಮಾಡುವಾಗ ಬಳಸುವ ಇತರ ಪದಾರ್ಥಗಳಾದ ಶುಂಠಿ, ಕರಿ ಅಥವ ಕಾಳುಮೆಣಸು, ಜೀರಿಗೆ ಇತ್ಯಾದಿಗಳು ಶೀತಸಂಬಂಧಿತ ವ್ಯಾಧಿಗಳಿಂದ ರಕ್ಷಿಸುತ್ತವೆ.
ಆಚರಿಸದ್ದರ ಪರಿಣಾಮ:
ಆಜ್ನೇಯ ಪುರಾಣದಲ್ಲಿ ಧನುರ್ಮಾಸವನ್ನು ಆಚರಿಸದಿದ್ದರೆ ಉಂಟಾಗಬಹುದಾದ ವಿಪರೀತ ಪರಿಣಾಮವನ್ನು ಈ ರೀತಿ ಪ್ರಸ್ತುತ ಪಡಿಸಲಾಗಿದೆ:
ಯಸ್ತು ದಾರಿದ್ರಬುದ್ಧ್ಯಾ ಮುದ್ಗರಾನ್ನಂ ನ ನಿವೇದಯೇತ್|
ವಿಷ್ಣವೇ ಕಾರ್ಮುಕೇ ಪ್ರಾತಃ ಸಪ್ತಜನ್ಮಸು ನಿರ್ಧನಃ||
“ಯಾರು ದಾರಿದ್ರ್ಯಭಾವನೆಯಿಂದ ಧನುರ್ಮಾಸದಲ್ಲಿ ಶ್ರೀ ವಿಷ್ಣುವಿಗೆ ಮುದ್ಗಾನ್ನವನ್ನು ನಿವೇದಿಸುವುದಿಲ್ಲವೋ ಅವರು ಮುಂದಿನ ಏಳು ಜನ್ಮಗಳಪರ್ಯಂತ ದಾರಿದ್ರ್ಯವನ್ನನುಭವಿಸುವರು”.
ಮುದ್ಗಾನ್ನ ನಿವೇದನೆಯ ಲಾಭಾಂಶಗಳು:
ದಧ್ಯಾರ್ದ್ರಕಮ್ ಚ ಮುದ್ಗಾನ್ನಮ್ ದದ್ಯಾಚ್ಚೈಲಾಗುಡೋಜ್ಜ್ವಲಮ್|
ಸುಸುಖೋಷ್ಣಂ ಸಕಂದಂ ಚ ವಿಷ್ಣವೇ ಯಃ ಸಮರ್ಪಯೇತ್||
ದೃಷ್ಟ್ವಾ ತಚ್ಛುಭಮುದ್ಗಾನ್ನಂ ಸಂತುಷ್ಟೋ ಭಕ್ತವತ್ಸಲಃ|
ದದಾತಿ ಸಕಲಾನ್ ಭೋಗಾನ್ ಮೋಕ್ಷಂ ಚ ಜಗದೀಶ್ವರಃ||(ಸ್ಮೃತಿಮುಕ್ತಾವಳಿ)||
ಶಾಸ್ತ್ರೋಕ್ತರೀತಿಯಲ್ಲಿ ಮುದ್ಗಾನ್ನವನ್ನು ತಯಾರಿಸಿ ಭಗವಂತನಿಗೆ ಅರ್ಪಿಸಿದಲ್ಲಿ ಭಕ್ತವತ್ಸಲನಾದ ಮಹಾವಿಷ್ಣುವು ಸಂಪ್ರೀತನಾಗಿ ಸಕಲ ಅಭೀಷ್ಟಗಳನ್ನೂ ಕರುಣಿಸುತ್ತಾನೆ. ನಂತರ ಜ್ನಾನವನ್ನೂ ನೀಡಿ ತನ್ಮೂಲಕ ಮೋಕ್ಷವನ್ನೂ ನೀಡುತ್ತಾನೆ, ಎಂದು ಸ್ಮೃತಿಮುಕ್ತಾವಳಿಯಲ್ಲಿ ಹೇಳಲಾಗಿದೆ.
: of lord in the morning hours
The moves from one sign (Rashi) to another and spends a month in each of these twelve zodiac signs. The entry of Sun into Dhanur Rashi (Sagittarius), which happens in the middle of December, is denoted as Dhanus Sankramana, a period of special significance and positive energy. It marks the onset of winter. Worship is offered to gods in temples and at homes in the early hours of the morning called Brahmi Muhurta, which is approximately one-and-a-half hours before actual sunrise, throughout Masa. Practice of early rise and offer of libations in the early hours, before sunrise, rejuvenates positive energy everywhere and brings good health.
Legend
According to Puranic literature, including , Lord Indra committed the highest sin called Brahma Hatya by killing Vritrasura, who was a committed devotee of Lord Vishnu, albeit at the behest of deities as Vritrasura was tormenting the entire universe. In fact, had defeated Indra and usurped his throne. Later, Indra was advised by sages to observe Vrat to get relieved from the sin and regain the throne. Indra, along with his wife Shacheedei, observed this Vrat for one full month and offered “Mudganna” every day to Lord Vishnu and Goddess Lakshmi. At last, he procured the vision and the grace of Lord Vishnu and got relieved from the ill-effects of Hatya Dosha. Lord Indra was able to kill Vritra and reclaim his throne.
Therefore, people across the country offer Mudganna to Lord Vishnu during Dhanus Masa in the early hours of morning, which is considered highly meritorious. Mudganna or ‘Huggi’ is especially prepared with equal quantities of rice and moong dal and offered to the Lord as Naivedya.
Scientifically, consumption of Mudganna or Huggi in the early hours of morning during winter (Dhanus Masa) is very health as the other ingredients of Huggi, namely ginger and pepper, drives away the ill-effects the cold season.
Impact of non-performance
It is mentioned in Ajneya Purana:
Yastu dAridrabuddhyA mudgAnnam na nivEdayEt|
ViShNavE kArmukE prAtaha saptajanmasu nirDhanaha||
“Anyone who, even with a miserly sense, does not offer Mudganna to the Lord in the early hours of morning during , shall be impoverished in the next seven lives”.
Merits of offering Mudganna:
DaDhyArdrakam cha mudgAnnam dadyAchChailAguDOjjwalam|
SusuKhOShNam sakandam cha ViShNavE yaha samarpayEt||
DruShTwA tachChuBhamudgAnnam santuShTO Bhaktavatsalaha|
DadAti sakalAn BhOgAn mOkSham cha Jagadeeshwaraha||SmrutimuktAvali||
The will be highly impressed if is prepared in the manner specified in the and offered to him in the prescribed manner and he will not only bestow all comforts of life but also salvation in the end through knowledge or realization of ultimate truth.
For more updates on and more, Download from the below links.
Users: https://goo.gl/UwCeDs
Users: https://goo.gl/UKvCkN
visit our :https://goo.gl/1TSm3X