ಶ್ರೀ ಬ್ರಹ್ಮಲಿಂಗೇಶ್ವರ ಭದ್ರಕಾಳಿ ಕ್ಷೇತ್ರ ಮಡುಂಬು

  • Home
  • India
  • Udupi
  • ಶ್ರೀ ಬ್ರಹ್ಮಲಿಂಗೇಶ್ವರ ಭದ್ರಕಾಳಿ ಕ್ಷೇತ್ರ ಮಡುಂಬು

ಶ್ರೀ ಬ್ರಹ್ಮಲಿಂಗೇಶ್ವರ ಭದ್ರಕಾಳಿ ಕ್ಷೇತ್ರ ಮಡುಂಬು ಶ್ರೀ ಬ್ರಹ್ಮಲಿಂಗೇಶ್ವರ ಹಾಗು ಭದ್ರಕಾಳಿ ಅಮ್ಮನವರ ಕ್ಷೇತ್ರ ಬೆರ್ಮೊಟ್ಟು ಮಡುಂಬು-Shree bramhalingeshwara bhadrakali temple Bermot Madumbu

24/07/2020

" ನಾಗರ ಪಂಚಮಿ ಹಬ್ಬದ ಶುಭಾಶಯಗಳು "

ತುಳು ನಾಡ ಜನರ ಪಾಲಿನ ಮೊದಲ ಹಬ್ಬ ನಾಗರ ಪಂಚಮಿ. ತನು ಮೈಪಾವೊಡು, ತಂಬಿಲ ಕಟ್ಟಾವೊಡು’ ಎಂಬ ಪೂರ್ವ ವಾಡಿಕೆಯಂತೆ ಮೂಲಸ್ಥಾನಗಳಲ್ಲಿ ನಾಗದೇವರಿಗೆ ನಾಗರಪಂಚಮಿ ಪರ್ವಕಾಲದಲ್ಲಿ ತಂಪೆರೆಯಿಸಿ, ತನಿ ಹರಕೆಗೊಂಡು ತನಿಯನ್ನು ಬಯಸುತ್ತಾ ಮೂಲನಾಗನ ದರ್ಶನದಿಂದ ಧನ್ಯರಾಗುವ ಆಸ್ತಿಕರು ’ನಗುತ್ತಾ ಬರುವ ನಾಗರಪಂಚಮಿ’ಯನ್ನು ಪ್ರಥಮ ಹಬ್ಬವೆಂದು ಸ್ವೀಕರಿಸುತ್ತಾರೆ.
ಸಂತಾನ, ಸಂಪತ್ತುಗಳನ್ನು ಅನುಗ್ರಹಿಸುವ ನಾಗದೇವರು ಚರ್ಮವ್ಯಾಧ , ದೃಷ್ಟಿ ದೋಷಗಳನ್ನು ಪರಿಹರಿಸಿ ಕೃಷಿ ಭಾಗ್ಯವನ್ನು, ಸರ್ವಸಮೃದ್ಧಿಯನ್ನು ನೀಡುವ ದೇವರೆಂಬುದು ಸನಾತನ ನಂಬಿಕೆ. ಮಾನವ ಬೇಟೆ ಸಂಸ್ಕೃತಿಯಿಂದ ಕೃಷಿ ಸಂಸ್ಕೃತಿಗೆ ತನ್ನ ಜೀವನ ವಿಧಾನವನ್ನು ಬದಲಾಯಿಸಿ ಕೊಂಡಾಗ ಒಂದೆಡೆ ನೆಲೆವೂರುವುದು ಅನಿವಾರ್ಯವಾಯಿತು. ಈ ಸಂದರ್ಭವೇ ಹರಿದಾಡುವ ಉರಗಜಾತಿಯ ಭಯದಿಂದ ರಕ್ಷಣೆ ಪಡೆಯಲು ’ಎಡ್ಡೆಂದಿನವು’ ಎಂದು ಹೆಸರಿಸುವ ’ನಾಗ’ನ ಆರಾಧನೆ ನಮ್ಮಲ್ಲಿ ಆರಂಭ ವಾಯಿತೆನ್ನಲಡ್ಡಿಯಿಲ್ಲ.

ನಾಗ - ವೃಕ್ಷ ಅವಳಿ ಚೇತನಗಳೆಂಬದು ಒಂದು ಅನುಸಂಧಾನ. ಆದುದರಿಂದಲೇ ನಮ್ಮ ಆರಾಧನಾ ಶಕ್ತಿಗಳ ಪ್ರತೀಕಗಳನ್ನು ಮಾನವ ಮರಗಳ ಬುಡದಲ್ಲೇ ನೆಲೆಗೊಳಿಸಿ ಸಾಂದರ್ಭಿಕ ವಾಗಿ ಪೂಜಿಸುತ್ತಾ ಬಂದ. ಸರಳ, ಮುಗ್ಧ ಹಾಗೂ ವಿಮರ್ಶೆಗೆ ಒಳಗಾಗದ ಶ್ರದ್ಧೆ - ಭಕ್ತಿಯೇ ಪ್ರಧಾನವಾಗಿ ಈ ಆರಾಧನೆಗಳು ಸಂಪನ್ನಗೊಳ್ಳುತ್ತಿದ್ದುವು. ಮರದ ಬುಡವೇ ಬಳ್ಳಿಗಳಿಂದ ಆವೃತವಾಯಿತು. ಕಡಿಯದೆ ಉಳಿಸಲಾಯಿತು. ಕಾಲ ಉರುಳುತ್ತಾ ಸುಂದರ ವನವೇ ನಿರ್ಮಾಣವಾಯಿತು. ಇವೆ ನಾಗಬನಗಳಾದುವು. (ಬೇರೆ ಬೇರೆ ಹೆಸರಿನ ಬನಗಳೂ ಇವೆ - ಆದರೆ ವನಮಾತ್ರ ಪ್ರದಾನ).
ನಮ್ಮ ಜಿಲ್ಲೆಗಳಲ್ಲಿ (ಕರಾವಳಿಯಲ್ಲಿ) ಬನಗಳು ಸಹಜವಾಗಿ ಬೆಳೆದುವು. ಇವು ಪ್ರಕೃತಿ ನಿರ್ಮಿಸಿದ ವೃಕ್ಷ ವೈವಿಧ್ಯ ಕಾಣಸಿಗುವ ಔಷದೀಯ ಮರ-ಗಿಡಗಳಿಗೆ ನೆಲೆಯಾಗುವ ಪ್ರಾಣಿ. ಪಕ್ಷಿ ಸಂಕುಲ ಗಳಿಗೆ ಆಶ್ರಯಸ್ಥಾನವಾಗುವ ಬನಗಳು.

ಆದರೆ ಇಂತಹ ಪ್ರಕೃತಿಯ ಮಡಿಲಲ್ಲಿ ಪ್ರಕೃತಿ ಜನ್ಯ ಶಕ್ತಿಗಳನ್ನು ಪ್ರಕೃತಿಯನ್ನು ನಂಬಿ ಬದುಕುವ ಮಾನವ ಪೂಜಿಸತೊಡಗಿದ. ತಂಪಾಗಿರಲಿ ಎಂಬುದು ಆಶಯ, ಭಯ ಮತ್ತು ಭಕ್ತಿಯೇ ಕಾರಣ ವಾಗಿ ಕಡಿಯದೆ ಉಳಿಸಿದ. ಇದೇ ನಮ್ಮಲ್ಲಿ ಮೂಲವನ್ನು ಹೊಂದಿರುವ ಎಲ್ಲಾ ಪೂಜಾ ವಿಧಾನಗಳಿಗೆ ಆಶ್ರಯ. ಇಂತಹ ಆಶಯವನ್ನು ಆಧರಿಸಿಯೇ ಪ್ರಕೃತಿ ನಿರ್ಮಿಸಿದ ಬನಗಳು ಜೀರ್ಣವಾಗುವುದಿಲ್ಲ ಎಂಬುದು ಒಂದು ಒಡಂಬಡಿಕೆ. ಈಗ ಬಹುತೇಕ ಬನಗಳು ಜೀಣೋìದ್ಧಾರವಾಗಿವೆ. (ಜೀರ್ಣವಾಗಿದೆಯೋ ಇಲ್ಲವೋ ಗೊತ್ತಿಲ್ಲ, ಜೀರ್ಣವಾಗುವುದೆಂದರೇ ನೆಂಬುದಕ್ಕೆ ನಿಖರತೆ ಇಲ್ಲ) ಒಟ್ಟಿನಲ್ಲಿ ವೈಭವೀಕರಣ, ಸುಂದರವಾಗಿಸುವ ಹುಚ್ಚು ಸಾಹಸ. ಆ ಮೂಲಕ ಮೂಲ ಆಶಯ - ಆರಾಧನಾ ವಿಧಾನ ವಿರೂಪಗೊಳ್ಳುತ್ತಿವೆ.

ಮೂಲ ನಾಗ ದರ್ಶನ :
ನಾಗರ ಪಂಚಮಿಯ ಶುಭ ಅವಸರದಲ್ಲಿ ವೈಭವದ ಅಲಂಕರಣಗಳಿಂದ ಅಲಂಕೃತನಾದ ನಾಗದೇವರ ಅಥವಾ ನಾಗಬನಗಳ ಆಡಂಬರದ ಅಲಂಕಾರಗಳನ್ನು ಸ್ವಲ್ಪ ಸರಿಸಿ ನಾಗದೇವ ರನ್ನು ಗಮನಿಸಿದರೆ ಅಲ್ಲಿ ನಮಗೆ ಮೂಲನಾಗನ ದರ್ಶನವಾಗುವುದು, ಸರಳ ಸುಂದರ ಪೂಜಾವಿಧಾನವೊಂದು ತೆರೆದುಕೊಳ್ಳುವುದು, ಒಟ್ಟಿನಲ್ಲಿ ನಾಗಾರಾಧನೆಯ ಮೂಲ ಸ್ವರೂಪದ ದರ್ಶನವಾಗುವುದು.
ಸರಿಪಡಿಸಲಾಗದಷ್ಟು ನಮ್ಮ ಉಪಾಸನಾ ವಿಧಾನಗಳು ರೂಪುಗೆಟ್ಟಿವೆ. ಯಾವುದು ಹೇಗಿರ ಬೇಕೆಂಬ ಪ್ರಾಥಮಿಕ ಜ್ಞಾನದ ಕೊರತೆ, ಭವ್ಯವಾಗಿಸುವ ಮಹತ್ವಾಕಾಂಕ್ಷೆ, ’ಬನ’ಗಳ ನಾಶಕ್ಕೆ ಕಾರಣ. ವೇದಿಕೆ, ಕಟ್ಟೆ, ಗುಡಿ, ಮಂದಿರ, ದೇವಸ್ಥಾನ ಹೀಗೆ ನಾಗಾರಾಧನಾ ನೆಲೆಗಳು ಬದ ಲಾದುವು. ಬನ - ನಾಗ ಈ ಪವಿತ್ರ ಕಲ್ಪನೆಯು ನೇಪಥ್ಯಕ್ಕೆ ಸರಿಯಿತು.

ನಾಗದೇವರಿಗೂ ಮನುಕುಲಕ್ಕೂ ಅವಿನಾಭಾವ ಸಂಬಂಧ. ವಿಶ್ವದೆಲ್ಲೆಡೆ ಬೇರೆ ರೀತಿಯ ಸ್ವಿಕಾರ ಮತ್ತು ನಂಬಿಕೆಗಳ ಆರಾಧನೆ ಇದೆ. ಆದರೆ ಭಾರತದಲ್ಲಿ ಭಿನ್ನ ಆಶಯದ, ಚಿಂತನೆಯ ದೇವ ರೆಂಬ ಸ್ಥಾನಮಾನವಿದೆ. ಜಾನಪದ - ಪುರಾಣ ಕಥೆಗಳು ಪುಷ್ಟಿ ನೀಡುತ್ತಾ ಈ ಪ್ರಾಚೀನ ಆರಾಧ ನೆಗೆ ಆಧಾರವಾಗುತ್ತವೆ. ವೇದೋಕ್ತ ಕ್ರಮವೂ ರೂಢಿಗೆ ಬಂತು. ಆದರೆ ಕರಾವಳಿಯ ಉಡುಪಿ - ದಕ್ಷಿಣ ಕನ್ನಡ ಕಾಸರಗೋಡು - ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಾಗ ಸಂಬಂಧ ಶ್ರದ್ಧೆ ಭಿನ್ನವಾದುದು. ಅದು ಯಾವುದೆಂದರೆ ನಾವು ಕಳೆದುಕೊಳ್ಳುತ್ತಿರುವ ಅಮೂಲ್ಯವೂ ಅಪೂರ್ವವೂ ಆದ ಬನಗಳು ಸಾಗೂ ಆರಾಧನಾ ವೈಶಿಷ್ಟ್ಯಗಳು.
ಮ್ ಆನವನಿಂದ ಮೂತ್ತಮೂದಲು ದೈವೀಕರಿಸಲ್ಪಟ್ಟ ಪ್ರಾಣಿ ’ನಾಗ’, ದನವನ್ನು ನಮ್ಮ ಸಂಸ್ಕೃತಿಯ ಸಂಕೇತವಾಗಿ ಪೂಜೆಗೊಳ್ಳುವ ಪ್ರಾಣಿ. ಆದರೆ ನಾಗನ ಸಂದರ್ಭ ಬಂದಾಗ ನಾವು ನಾಗನಿಗೆ ’ಸರ್ಪಸಂಸ್ಕಾರ’ದಂತಹ ನಮ್ಮ ಹಿರಿಯರಿಗೆ ನೆರವೇರಿಸುವ ವಿಧಾನದ ಕರ್ಮಾಂಗ ಗಳನ್ನು ಹಾಗಾದರೆ ನಮ್ಮ - ನಾಗನ ಸಂಬಂಧ ಹೇಗೆ ನೇರ್ಪುಗೊಂಡಿತು, ಗಾಢವಾಯಿತು ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಈ ಪ್ರಶ್ನೆಗಳಿಗೆ ವೈಭವದ ಭವ್ಯ ಅಲಂಕರಣಗಳ ಆಳದಲ್ಲಿ ಉತ್ತರವಿದೆ ಎಂಬುದು ’ನಾಗರಪಂಚಮಿ’ಯಂದು ತಿಳಿಯಬೇಕಿದೆ.

ತನುಕು ಅನುಕೊರ್ಲೆ :
ಪ್ರಾಚೀನ, ಮೂಲವನ್ನು ಅನಾವರಣ ಗೊಳಿಸುವ ಬೇಸಗೆಯಲ್ಲಿ ಮಾತ್ರ ತಂಪೆರೆಸಿಕೊಳ್ಳುವ ನಾಗಬನಗಳು ನಮ್ಮಲ್ಲಿವೆ. ಈ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ವೈಭವೀಕರಣದ ಗಾಳಿ ಅತ್ತಲೂ ಬೀಸುತ್ತಿದೆ. ’ಅಡಿಪೋಯಿನಾಗೆ, ಕೊಡಿಪೋಯಿ ಬೆಮ್ಮೆರ್’ ಎಂದು ಸ್ತುತಿಸುತ್ತಾ ’ಕಾಲಾದಿದ ತನುಕು ಅನುಕೊಲೆì' ಎನ್ನುತ್ತಾ ತಂಪೆರೆಯುವವರು ಇದ್ದಾರೆ, ಬನಗಳೂ ಇವೆ. ಇಲ್ಲಿ ಕರಾವಳಿಯ ನಾಗಾರಾಧನೆಯ ಮೂಲ ಇದೆ. ಅಳಿಯುವ ಅಥವಾ ಸ್ಥಿತ್ಯಂತರಕ್ಕೆ ಮೂದಲು ಅತ್ತ ಗಮನಿಸೋಣ. ಮೂಲನಾಗನ ಕೃಪೆಗೆ ಪಾತ್ರರಾಗೋಣ.

Courtesy : ಲೇಕನ : ಚೇತನ್ ಮಾವೆ ©
http://kmahendranath.blogspot.in/

06/06/2020
24/05/2020

ಪತ್ತನಾಜೆ

ತುಳು ಲೆಕ್ಕಾಚಾರೊದ ರಡ್ಡನೆ ತಿಂಗೊಳು.'ಬೇಸ ಪತ್ತೇನಾನಿ ಪತ್ತನಾಜೆ.
ಆಲಡೆದು ಅಕೇರಿದ ಅಯನ ಖಂಡೆವುದ, ದೇವಸ್ಥಾನಡು ಅಕೇರಿದ ಬಲಿ ಕಾರಿಂಜದ
ನೇಮೊಡು ಅಕೇರಿದ ಪಿರಿ ಬೂಲ್ಯ ಕೊಂಡಾಣದ.
ಪತ್ತನಾಜೆ ಕರಿದ್ ಆಟ ಇಜ್ಜಿ, ಪತ್ತನಾಜೆ ಬುಕ್ಕ ಕೊಡಿಯಡಿಟು ಗಗ್ಗರ ತೋಜುಜಿ.
ಚೆಂಡೆ ಮದ್ದಳೆದ ಸ್ವರ ಕೆನುಜಿ. ಜಾತ್ರೆದ ಗೌಜಿ ಗದ್ದಲ ಇಜ್ಜಿ,
ರಂಗಪೂಜೆದ ಜಾಗಟೆ ಕೆನುಜಿ. ದೇವೆರೆ ಬಲಿತ ಪೊರ್ಲು ತೋಜುಜಿ
ನನ ದಾಲ ಇತ್ತುಂಡಲ ಬುಲೆ ಸಲೆ ಕಂಜಿ ಕೈಕಂಜಿ ಕಾಪುನ ಗುಡ್ಡೆದ ಬೈರವನ.
ಪತ್ತನಾಜೆದ ಪತ್ತ್ ಪನಿ ಬರ್ಸದ ಒಟ್ಟುಗು ಮರಿಯಲೋನು ಎದುಕೊನ್ಗ...

24/04/2020

🚩 *ಬ್ರಾಹ್ಮಣ ಪ್ರಿಯ* 🚩

ಸಂಧ್ಯಾವಂದನೆಯಿಂದಾಗುವ ಪರಿಣಾಮಗಳು..

* ನಿತ್ಯವೂ ಸಂಧ್ಯಾವಂದನೆ ಮಾಡುವುದರಿಂದ ಚಿತ್ತಚಾಂಚಲ್ಯ ದೂರವಾಗಿ ಏಕಾಗ್ರತೆ ಹೆಚ್ಚುತ್ತದೆ.

* ಭಗವಂತನಲ್ಲಿ ಶ್ರದ್ಧೆ,ನಂಬಿಕೆ,ಪ್ರೀತಿ,ಭಕ್ತಿ ಮುಂತಾದ ಭಾವನೆಗಳು ಅಚಲವಾಗಿ ವ್ಯಕ್ತಿ ಆಧ್ಯಾತ್ಮ ಸಾಧನೆಗೆ ಅರ್ಹನಾಗುತ್ತಾನೆ.

* ವ್ಯಕ್ತಿಯ ಅಂತಃಪ್ರೇರಣೆ ಜಾಗೃತವಾಗಿ ಜೀವನದ ಪ್ರತಿಕ್ಷಣದಲ್ಲೂ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ.

* ಅಂತಃಕರಣದ ಸಂಸ್ಕಾರದಿಂದ ಜನ್ಮಜನ್ಮಾಂತರದ ಅಜ್ಞಾನ ದೂರವಾಗಿ ವ್ಯಕ್ತಿ ಸಂಸ್ಕಾರವಂತನಾಗುತ್ತಾನೆ.

* ಮನುಷ್ಯನ ಕಾಂತಿ ಹಾಗೂ ತೇಜಸ್ಸು ಅಧಿಕವಾಗುತ್ತದೆ.

* ಮಾತಿನಲ್ಲಿ ಮೃದುತ್ವ , ವಿನಯ ಹಾಗೂ ಸತ್ಯ ನೆಲೆಗೊಳ್ಳುತ್ತದೆ.

* ಮನಸ್ಸಿನಲ್ಲಿ ಸದ್ಭಾವನೆ,ಶ್ರೇಷ್ಟವಿಚಾರ ಹಾಗೂ ಸಾತ್ವಿಕಗುಣಗಳು ಸ್ಥಾನ ಪಡೆಯುತ್ತವೆ.

* ಮನಸ್ಸಿನಲ್ಲಿ ಸಂಕಲ್ಪ ಶಕ್ತಿಯು ಪ್ರಬಲವಾಗುತ್ತದೆ.

* ಶಾಂತಿ,ಸಂತೋಷ,ಕ್ಷಮೆ,ದಯೆ,ಪ್ರೀತಿ ಮುಂತಾದ ಸದ್ಭಾವನೆಗಳು ಮನದಲ್ಲಿ ನೆಲೆಗೊಳ್ಳುತ್ತವೆ.

* ಮನುಷ್ಯನಲ್ಲಿರುವ ಪ್ರಮುಖ ಗುಣ ಅಹಂಕಾರ.ಅಹಂಕಾರದ ಮೂಲರೂಪ ನಾನು.ನಾನು ಎಂಬ ಭಾವನೆ ಬಂದಾಗ ಆಧ್ಯಾತ್ಮಸಾಧನೆ ಸಾಧ್ಯವಿಲ್ಲ.ಸಂಧ್ಯಾವಂದನೆ ನಾನು ಎಂಬ ಅಹಂಕಾರವನ್ನು ದೂರಮಾಡಿ,ವ್ಯಕ್ತಿ ಆಧ್ಯಾತ್ಮಸಾಧನೆ ಮಾಡಲು ಪ್ರೇರೇಪಿಸುತ್ತದೆ.

* ಪ್ರಾತಃಕಾಲದ ಸಂಧ್ಯಾವಂದನೆ ರಾತ್ರಿಯ ಪಾಪಗಳನ್ನು ನಾಶಗೊಳಿಸುತ್ತದೆ.
ಮಧ್ಯಾಹ್ನದ ಸಂಧ್ಯಾವಂದನೆ ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ
ಸಾಯಂಕಾಲದ ಸಂಧ್ಯಾವಂದನೆ ಮಧ್ಯಾಹ್ನದಿಂದ ಸಂಜೆಯವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ.
ಹಾಗಾಗಿ ನಿತ್ಯಸಂಧ್ಯಾವಂದನೆಯನ್ನು ಮಾಡುವವನು ಪಾಪಗಳಿಂದ ವಿಮುಕ್ತನಾಗಿರುತ್ತಾನೆ.

* ಸಂಧ್ಯಾವಂದನೆಯಿಂದ ದೈಹಿಕ ಆರೋಗ್ಯ ಸ್ಥಿರವಾಗಿರುತ್ತದೆ.ಸಂಧ್ಯಾವಂದನೆಯಲ್ಲಿ ಮಾಡುವ ಪ್ರಾಣಾಯಾಮ ಹಲವು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಷ್ಣುಪುರಾಣದಲ್ಲಿ ಔರ್ವ ಎಂಬ ಋಷಿ ಸಗರರಾಜನಿಗೆ ತಿಳಿಸುತ್ತಾನೆ..

"ಹೇ ಸಗರರಾಜ,ಬುದ್ಧಿವಂತನಾದ ಮನುಷ್ಯ ಪ್ರಾತಃಸಂಧ್ಯೋಪಾಸನೆ ಹಾಗೂ ಸಾಯಂಸಂಧ್ಯೋಪಾಸನೆಯನ್ನು ಪ್ರತಿನಿತ್ಯ ತಪ್ಪದೇ ಮಾಡಿ ಪಾಪಗಳಿಂದ ವಿಮುಕ್ತನಾಗುತ್ತಾನೆ.ಸಂಧ್ಯಾಕಾಲದಲ್ಲಿ ಯಾರು ಸಂಧ್ಯಾವಂದನೆಯನ್ನು ಮಾಡದೇ ಮಲಗಿರುತ್ತಾರೋ ಅಥವಾ ಅನ್ಯಕಾರ್ಯಗಳಲ್ಲಿ ಮಗ್ನರಾಗಿರುತ್ತಾರೋ ಅಂತವರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ.ಆದ್ದರಿಂದ ಹೇ ರಾಜ..ಪ್ರಾತಃಕಾಲೀನ ಹಾಗೂ ಸಾಯಂಕಾಲದ ಸಂಧ್ಯಾವಂದನೆಯನ್ನು ತಪ್ಪದೇ ಮಾಡಬೇಕು.ಇದರಿಂದ ಮನುಷ್ಯ ಉತ್ತರೋತ್ತರ ಶ್ರೇಯಸ್ಸನ್ನು ಪಡೆಯುತ್ತಾನೆ."
(ವಿಷ್ಣುಪುರಾಣ,ತೃತೀಯ ಅಂಶ - ೧೧-೧೦೨,೧೦೩)

ಹಾಗಾಗಿ ಸಂಧ್ಯಾವಂದನೆ ನಿತ್ಯನೈಮಿತ್ತಿಕಕರ್ಮಗಳಲ್ಲೊಂದಾಗಿದೆ.ಅದನ್ನು ತಪ್ಪದೇ ಆಚರಿಸುವುದು ನಮ್ಮ ಕರ್ತವ್ಯ..

18/04/2020
12/04/2020

✡ *ಶ್ರೀಚಕ್ರ* ✡

✡ *ಶ್ರೀಚಕ್ರ* ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಸೃಷ್ಟಿಯ ಜನನಿ ಶ್ರೀ ಲಲಿತೆಯ ಮೂರ್ತ ರೂಪದ ರೇಖಾಯಂತ್ರ.

✡ಆದಿ ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ *ಶ್ರೀಚಕ್ರವನ್ನು* ಪರಿಷ್ಕರಿಸಿ ಮಂಗಳಕರ ಶಕ್ತಿದೇವಿಯ ಸಾತ್ವಿಕ ರೂಪವು ಉಗಮಿಸುವಂತೆ ಮಾಡಿದರು.

✡ಕ್ರಮಬದ್ಧವಾಗಿ ರಚಿಸಿದ *ಶ್ರೀಚಕ್ರದ* ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀಲಲಿತಾ ದೇವಿಯ ಚಿತ್ರ ಗೋಚರಿಸಿದ್ದು ದಾಖಲಾಗಿದೆ.

✡ಜೊತೆಗೆ ಶಬ್ಧವನ್ನು ದೃಶ್ಯರೂಪವಾಘಿ ಪರಿವರ್ತಿಸುವ ವಿಜ್ಞಾನ ಶಬ್ಧ ಹಾಗೂ ಕಂಪನಗಳ ಪ್ರಭಾವದ ಅರಿವು ಮೂಡಿಸುತ್ತಿದೆ, ಶ್ರೀಚಕ್ರದ ಮೇಲೆ ಇಟ್ಟ ದೃಷ್ಟಿ ನರಮಂಡಲದಲ್ಲಿ ಉಂಟಾಗುವ ಕಂಪನ ಇಇಜಿಯಲ್ಲಿ (ಎಲೆಕ್ಟ್ರೋ ಎನ್ ಕೆಫಲೋಗ್ರಾಫ್) ಆಲ್ಫಾ ಅಲೆ ಹೊರಡಿಸುತ್ತದೆ.

✡ಧ್ಯಾನ ಸ್ಥಿತಿಯಲ್ಲೂ ಈ ಅಲೆ ನಿಧಾನಗತಿಯಲ್ಲಿ ಹೊರಹೊಮ್ಮುತ್ತದೆ, ಯಾವುದೇ ಇತರ ಚಕ್ರ ವೀಕ್ಷಿಸಿದಾಗ ಇಇಜಿ ಅಲೆಗಳಲ್ಲಿ ಬದಲಾವಣೆ ಕಂಡುಬರುವುದಿಲ್ಲ,

✡ಶಕ್ತಿಯುತ ಅಣು ಕ್ಷಣಗಳಿಂದಾದ ಅಲೆ ವಿದ್ಯುತ್ ಅಯಸ್ಕಾಂತ ಬಲಕಾರಕ ಶಕ್ತಿ ಸಮಾಗಮಕ್ಕೆ ನಾಂದಿ, ಶ್ರೀಚಕ್ರದ ಮೂಲಕ ದಿವ್ಯ ಮಂತ್ರೋಚ್ಚಾರಗಳಿಂದಾದ ಶಬ್ಧ ಬ್ರಹ್ಮ ಶಕ್ತಿ ಇದನ್ನು ಸಾಧಿಸುತ್ತದೆಂದು ಭಾವಿಸಬಹುದು, ಒಂದು ದೃಷ್ಟಿಯಲ್ಲಿ ಆದಿ ಶಂಕರಾಚಾರ್ಯರನ್ನು ಕಣ ಭೌತ ಶಾಸ್ತ್ರದ ಪಿತಾಮಹ ಎನ್ನಬಹುದು.

✡ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನೇ ನಿಗ್ರಹಿಸಿದರು, ಶ್ರೀ ಸೌಂದರ್ಯ ಲಹರಿಯ ಕಮಲ ಶಕ್ತಿ ತುಂಬಿಸಿ ಕಣ ಭೌತ ಶಾಸ್ತ್ರಕ್ಕೆ ಸವಾಲು ನೀಡಿದ್ದಾರೆ, ಆಧುನಿಕ ವಿಜ್ಞಾನದ ದೇವಕಣ (god particle)ದ ಮೂಲ ಶ್ರೀ ಚಕ್ರದಲ್ಲೋ ಸೌಂದರ್ಯ ಲಹರಿಯ ಕಮಲದಲ್ಲೋ ಇರಬಹುದೇನೋ ಎನ್ನುವ ಗ್ರಹಿಕೆಗೆ ಇಂಬು ಕೊಟ್ಟಿದ್ದಾರೆ.

✡ಶ್ರೀಚಕ್ರ ನರ ಚಟುವಟಿಕೆಯ ವೈಜ್ಞಾನಿಕ ವಿವರಣೆಗೂ ಪ್ರೇರಕ ಸೂತ್ರ, ಈ ಚಕ್ರದ ಚೌಕಟ್ಟು ಜ್ಞಾನೇಂದ್ರಿಯ ಮಟ್ಟದ ಆಧುನಿಕ ನರಶಾಸ್ತ್ರ ವಿವರಣೆಗೆ ಹೋಲಿಕೆ ಇದೆ, ಬಲ ಮಿದುಳು, ದೃಷ್ಟಿ, ಶ್ರವಣಶಕ್ತಿ ಚೇತಕವೆಂದು ನಂಬಿದ್ದ ಋಷಿಗಳು ಮಾನವ ದೇಹ ಕಾರ್ಯಶೀಲತೆಯ ವಿಸ್ತಾರ ಜ್ಞಾನ ಪಡೆದಿದ್ದುದರಲ್ಲಿ ಆಶ್ಚರ್ಯವಿಲ್ಲ.

✡ಜೊತೆಗೆ ಅವರು ಅದ್ವಿತೀಯ ಮನೋಗೋಚರ ಶಕ್ತಿ ಹೊಂಡಿದ್ದರು, ಈಜಿಪ್ಟ್ ದೇಶದ ಪಿರಮಿಡ್ ರಚನಾ ಶಾಸ್ತ್ರಕ್ಕೂ ಶ್ರೀಚಕ್ರದ ರೇಖಾಗಣಿತ ರಹಸ್ಯದ ಕೊಡುಗೆ ಇದೆ ಎನ್ನುವ ಅಭಿಪ್ರಾಯವೂ ಇದೆ, ಶ್ರೀಚಕ್ರದ ರಹಸ್ಯ ಭೇದಿಸಲು ರಷ್ಯಾದ ಮನಃಶರೀರಶಾಸ್ತ್ರದ ವಿಜ್ಞಾನಿಗಳು ಮಾಸ್ಕೋ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.

✡ಭಾರತದಲ್ಲಿ ವೇದಶಾಸ್ತ್ರ ವಿಜ್ಞಾನ ಹಾಗೂ ವೈದ್ಯವಿಜ್ಞಾನದ ಸಂಶೋಧನೆಗಳು ಸಂಯೋಜಿತ ರೀತಿಯಲ್ಲಿ ಸಾಗಬೇಕಾಗಿದೆ, ಇತ್ತೀಚಿನ ವರದಿಯೊಂದು ಶ್ರೀಚಕ್ರದ ಆರಾಧನೆ ಜೀವಕೋಶದಲ್ಲಿರುವ ಡಿ.ಎನ್.ಎಯನ್ನು ಕಾರ್ಯಚಟುವಟಿಕೆಯ ಪರಿಧಿಗೆ ಬರುವಂತೆ ಪ್ರಚೋದಿಸುತ್ತದೆ ಎಂದು ಹೇಳಿದೆ.

12/04/2020

*ತುಳಸಿ ಕಟ್ಟೆಯಲ್ಲಿ ಎಷ್ಟು ಹೊತ್ತು ದೀಪ ಹಚ್ಚಬೇಕು? ಏಕೆ?*

🕉ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ.

🕉ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.

*ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ|*
*ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:||*

🕉ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ.

🕉ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ.

*ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು ? ಏಕೆ?*

🕉ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ.

🕉ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ.

🕉ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇತ್ಯಾದಿಗಳನ್ನೂ ಮಾಡುವುದು ಅಗತ್ಯವಾಗಿದೆ.

🕉ಗೃಹಿಣಿಯರು ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತುಳಸಿಕಟ್ಟೆಯಲ್ಲಿ ತುಳಸಿಯ ಕಡೆಗೆ ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಯಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಉರಿಸಿಟ್ಟು ತುಳಸಿಗೆ ಪ್ರದಕ್ಷಿಣೆ ಗೈದು ನಮಸ್ಕರಿಸಬೇಕು.

🕉ತುಳಸಿಯ ಸ್ತೋತ್ರವನ್ನೂ ಹೇಳಬಹುದು. ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು ಬ್ರಹ್ಮಾಂಡದಿಂದ ಶ್ರೀಕೃಷ್ಣನ ಮಾರಕ ತತ್ತ್ವವನ್ನು ಆಕರ್ಷಿಸಿ ತುಳಸಿಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಪ್ರಕ್ಷೇಪಿಸಿ ಕಣ್ಣಿಗೆ ಗೋಚರವಾಗದ ಸೂಕ್ಷ್ಮರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು

🕉ದೀಪ ಜ್ಯೋತಿಯ ಸ್ತೋತ್ರವು ಈ ಕೆಳಗೆ ಕಂಡಂತಿರುವುದು

*ಶುಭಂ ಕರೋತಿ ಕಲ್ಯಾಣಂ*
*ಆರೋಗ್ಯಂ ಧನಸಂಪನದಃ*
*ಶತ್ರುಬುದ್ಧಿ ವಿನಾಶಾಯ*
*ದೀಪಜ್ಯೋತಿರ್ನಮೋಸ್ತುತೆ|*
*ದೀಪಜ್ಯೋತಿಃ ಪರಬ್ರಹ್ಮಾ*
*ದೀಪಜ್ಯೋತಿರ್ಜನಾರ್ದನಃ*
*ದೀಪೋ ಹರತಿ ಪಾಪಾನಿ*
*ಸಂಧ್ಯಾದೀಪ ನಮೋಸ್ತುತೇ||*

ಸರ್ವೇಜನಾ ಸುಖಿನೋ ಭವಂತು

Address

Shree Bramhalingeshwara Bhadrakali Temple Bermot Madumbu
Udupi
576122

Website

Alerts

Be the first to know and let us send you an email when ಶ್ರೀ ಬ್ರಹ್ಮಲಿಂಗೇಶ್ವರ ಭದ್ರಕಾಳಿ ಕ್ಷೇತ್ರ ಮಡುಂಬು posts news and promotions. Your email address will not be used for any other purpose, and you can unsubscribe at any time.

Share

Category