Shee Banashankari Temple

Shee Banashankari Temple Its a combination of Banashankari matha, Shakthi Ganapathi , Shreekanteshwara and Navagraha vana with statues.

here all types of religious activites such as 'Sankastahara Ganapathi pooja', 'Pradosha Pooja', 'navagraha pooja' are goin on...

OM GANAPATHI
25/12/2018

OM GANAPATHI

24/06/2018
22/06/2018

ನಿತ್ಯ ಪೂಜೆಯಲ್ಲಿ ಈ ನಿಯಮಗಳನ್ನು ಪಾಲಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಿ

ನಾವು ಈಗಾಗಲೇ ನಿತ್ಯ ದೇವರಿಗೆ ಪೂಜೆ ಮಾಡುವಾಗ ತಿಳಿದೊ ತಿಳಿಯದೆಯೋ ಮಾಡುವ ತಪ್ಪುಗಳ ಬಗ್ಗೆ ತಿಳಿದುಕೊಂಡೆವು. ಈಗ ನಾವು ದೇವರಿಗೆ ಪೂಜೆ ಮಾಡುವಾಗ ನಮ್ಮ ಗಮನಕ್ಕೆ ಬಾರದೇ ಹೋಗುವ ಕೆಲವು ಸಂಗತಿಗಳ ತಿಳಿದುಕೊಳ್ಳೋಣ.
ಈ ವಿಚಾರಗಳನ್ನು ತಿಳಿಯುವ ಮೂಲಕ ಕ್ರಮವಾಗಿ ನಿತ್ಯ ಪೂಜೆ ಮಾಡುವುದರಿಂದ ನಮ್ಮ ಇಷ್ಟಾರ್ಥಗಳನ್ನು ಆ ಭಗವಂತನಿಂದ ಪಡೆದುಕೊಳ್ಳೋಣ. ಅಲ್ಲದೇ ಪೂಜೆಯ ಸಂಪೂರ್ಣ ಅನುಕೂಲಗಳನ್ನು ಪಡೆದು

 ಪಂಚಾಮೃತವೂ ಕೂಡ ಅಮೃತದಷ್ಟೇ ಪವಿತ್ರವಾದುದು ಎಂದು ಶಾಸ್ತ್ರ ವಿಧಿಗಳು ಹೇಳುತ್ತದೆ. ಹಾಗಾಗಿ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿದ ನಂತರ ತೀರ್ಥ ತೆಗೆದುಕೊಂಡರೆ ಅಮೃತವನ್ನು ಸೇವಿಸಿದಷ್ಟೇ ಶ್ರೇಷ್ಠವಾಗಿರುತ್ತದೆ. ಅಲ್ಲದೇ, ಪೂಜೆಯ ವೇಳೆ ಪಂಚಾಮೃತವನ್ನು ಬಳಕೆ ಮಾಡುವುದರಿಂದ ದೇವರ ಅನುಗ್ರಹವನ್ನು ಪಡೆಯಬಹುದು.
 ಲಕ್ಷ್ಮೀಪೂಜೆಯಲ್ಲಿ ಕೆಂಪು ಬಣ್ಣವನ್ನು ಬಳಕೆ ಮಾಡುವುದು ಶ್ರೇಷ್ಠ. ಹಾಗಾಗಿ ನಿತ್ಯ ಪೂಜೆಗೆ ಬಳಸುವ ದೀಪಕ್ಕೆ ಕೆಂಪು ಬತ್ತಿಯನ್ನು ಬಳಸುವುದರಿಂದ ಅನುಕೂಲವಾಗುತ್ತದೆ. ದೇವರಿಗೆ ದೀಪ ಬೆಳಗಿದ ಬಳಿಕ ಬಲಭಾಗದಲ್ಲಿ ಇರಿಸುವುದು ಉತ್ತಮ.


 ನಿತ್ಯ ದೇವರ ಪೂಜೆ ಮಾಡುವಾಗ ಶಂಖನಾದ ಮಾಡುವುದರಿಂದ ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳನ್ನು ಹೊರ ಹಾಕಲು ನೆರವಾಗುತ್ತದೆ. ಅಲ್ಲದೇ ಮನೆಯಲ್ಲಿ ಧನಾತ್ಮಕ ಶಕ್ತಿಗಳ ಸಂಚಯವಾಗುತ್ತದೆ. ಇದೇ ಕಾರಣಕ್ಕಾಗಿ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಶಂಖನಾದ ಮೊಳಗಿಸಲಾಗುತ್ತದೆ. ಶಂಖನಾದದಿಂದ ಲಕ್ಷ್ಮಿದೇವಿಯೂ ಪ್ರಸನ್ನಳಾಗುತ್ತಾಳೆ.
 ಸಾಮಾನ್ಯವಾಗಿ ದೇವರಿಗೆ ಪೂಜೆ ಮಾಡುವಾಗ ಉಣ್ಣೆಯ ಚಾಪೆ ಮೇಲೆ ಕುಳಿತುಕೊಳ್ಳುವುದು ಶ್ರೇಯಸ್ಕರ.
 ಲಕ್ಷ್ಮೀದೇವಿಗೆ ಪೂಜೆ ಮಾಡುವಾಗ ಕಮಲದ ಹೂವನ್ನು ಪೂಜೆ ಮಾಡುವುದು ಪವಿತ್ರವಾದುದಾಗಿದೆ.


 ದೇವರಿಗೆ ವೀಳ್ಯದೆಲೆ ಹಾಗೂ ಗುಲ್ಕಂದ್ ಸಹಾ ಇಷ್ಟವಾಗುವುದರಿಂದ ಪೂಜೆಯ ವೇಳೆ ಬಳಸಬಹುದು.
 ವಿಷ್ಣುದೇವರನ್ನು ಆರಾಧಿಸುವಾಗ ಹಳದಿ ವಸ್ತ್ರಗಳನ್ನು ಅರ್ಪಿಸಿ. ಸಾಧ್ಯವಾದಷ್ಟೂ ಹಳದಿ ಬಣ್ಣದ ಬಟ್ಟೆಗಳನ್ನೇ ತೊಟ್ಟು ಪೂಜೆ ಮಾಡಿ. ಇದರಿಂದ ಸಾಕಷ್ಟು ಅನುಕೂಲವಾಗಲಿದೆ.


 ಸಾಮಾನ್ಯವಾಗಿ ಪೂಜೆ ಮಾಡುವಾಗ ಗಣಪತಿ, ರವಿ, ಹರಿ, ಹರ ಹಾಗೂ ದುರ್ಗಾ ದೇವಿಯನ್ನು ಸ್ತುತಿಸುವುದು ಒಳ್ಳೆಯದು. ಈ ಪಂಚ ದೇವರ ಸ್ತುತಿ ಪ್ರತಿ ಪೂಜೆಯಲ್ಲಿಯೂ ಕಡ್ಡಾಯ ದು ಹಿಂದೂ ಶಾಸ್ತ್ರ ವಿಧಾನಗಳು ಹೇಳುತ್ತವೆ.

22/06/2018
29/10/2016

Address

Jayanagar West
Tumkur
572102

Telephone

9964383054

Website

Alerts

Be the first to know and let us send you an email when Shee Banashankari Temple posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shee Banashankari Temple:

Share

Category