Originally this place was called
Shri Maliyuru/Maluraiaha Beereshwara Swamy temple,
it has rich history of over 400 years. The History of this place says that, Kuruba is a Hindu caste whose traditional occupation was that of shepherding and farming. Shri Maliyuru/Maluraiaha Beereshwara Swamy temple worshiped by the Kuruba Gowdas and today all our religious traditions and this philosophy in actio
n is the glory of Shri Maliyuru/Maluraiaha Beereshwara Swamy temple....
ಕುರುಬರ ಇತಿಹಾಸ
ಕುರುಬ ಜನಾಂಗ ಪುರಾತನವಾದ ಜನಾಂಗ.ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿಯೂ ಸಹ ಕುರು ವಂಶ ಮತ್ತು ಯದುವಂಶಗಳ ಪ್ರಸ್ಥ್ತಾವನೆಯಾಗಿದೆ. ಭಾರತ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದ ಚಂದ್ರಗುಪ್ತನು ಕುರಿಗಾಹಿಯಾಗಿದ್ದನು. ಮೌರ್ಯರ ಮೊದಲ ದೊರೆ ಚಂದ್ರಗುಪ್ತನು ಆಗಿನ ನಂದ ದೊರೆಗಳ ವಿರುದ್ದ ಸಿಡಿದ್ದೆದ್ದು ತನ್ನದೇ ಸಾಮ್ರಾಜ್ಯವನ್ನು ಚಾಣಾಕ್ಯನ ಸಹಾಯದಿಂದ ಕಟ್ಟಿದನು. ಇದರ ಗುರುತಾಗಿ ಭಾರತ ಸರ್ಕಾರವು ನವ ದೆಹಲಿಯ ಪಾರ್ಲಿಮೆಂಟ್ ಕಟ್ಟಡದ 5ನೇ ಮಹಾದ್ವಾರದ ಬಳಿ ಚಂದ್ರಗುಪ್ತನ ಪುತ್ಥಳಿಯನ್ನು ಸ್ಥಾಪನೆ ಮಾಡಿ ಅದರ ಕೆಳಗೆ ಕುರಿ ಕಾಯುವ ಹುಡುಗ ತಾನು ಕಟ್ಟಲಿರುವ ಸಾಮ್ರಾಜ್ಯದ ಬಗ್ಗೆ ಕನಸು ಕಾಣುತ್ತಿರುವುದು ಎಂದು ಬರೆಯಲಾಗಿದೆ.
ವಿಜಯನಗರ ಸಾಮ್ರಾಜ್ಯದ ಹಕ್ಕ-ಬುಕ್ಕರಾಯರು ಕುರುಬಜನಾಂಗದವರು, ಮೊದಲಿಗೆ ಹಕ್ಕರಾಯರು ವಾರಂಗಲ್ ರಾಜರ ಸೇನಾದಿಪತಿಯಾಗಿದ್ದು ಮಲ್ಲಿಕಾಪ್‍ರ್‍ನು ವಾರಂಗಲ್ ಮೇಲೆದಂಡೆತ್ತಿ(ಯುದ್ದಕ್ಕೆ) ಬಂದಾಗ ಯುದ್ದದಲ್ಲಿ ಸೋತು ಸೆರೆಯಾಳಾಗಿ (ರಾಜಾಧಾನಿ ದೆಹಲಿ) ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರೆ ಪ್ರಾಣ ಭಿಕ್ಷೆ ದೊರೆಯುತ್ತದೆ ಎಂಬ ಬೆದರಿಕೆÀಗೆ ಮಣಿಯದೆ ಮಲ್ಲಿಕಾಪ್‍ರ್‍ನ ಸಾಮ್ರಾಜ್ಯದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಕಣ್ಣಾರೆ ಕಂಡು ಮರುಗಿದ ಹಕ್ಕರಾಯರು ದೆಹಲಿಯಿಂದ ತಪ್ಪ್ಪಿಸಿಕೊಂಡು ಬಂದು ತಮ್ಮ ಅಳಿದುಳಿದ ಸೈನ್ಯವನ್ನು ಅಪಾರ ಸಂಖ್ಯೆಯಲ್ಲಿದ್ದ ಕುರುಬಜನಾಂಗವನ್ನು ಒಟ್ಟುಗೂಡಿಸಿ ವಿದ್ಯಾರಣ್ಯರೆಂಬ ಸಾದು ಮಹಾತ್ಮರ ಮಾರ್ಗದರ್ಶನದಂತೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಿದರು.ಈ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯನ್ನು ಕರ್ನಾಟಕÀದ ಇತಿಹಾಸದಲ್ಲಿ ಸ್ವರ್ಣಯುಗವೆಂದೆ ಕರೆಯಲಾಗಿದೆ.ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕುರುಬಜನಾಂಗದವರು ಕಡೆÀಗಣಿಸಲ್ಪಟ್ಟರು ಆಲ್ಲದೆ ತುಂಬಾ ಹಿಂದುಳಿದರು, ಹೊಸ ರಾಜಕೀಯ ಬೆಳವಣಿಗೆಗಳು ಅವರ ಅರಿವಿಗೆ ಬರುವುದು ನಿಧಾನವಾಯಿತು, ತದ ನಂತರ ಬ್ರಿಟಿಷರ ವಿರುದ್ದ ಹೋರಾಡಿದ ಹೋಳ್ಕರ್ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣನಂತಹದೇಶಪ್ರೇಮಿಗಳ ಹೋರಾಟ ಜನರನ್ನು ಸಂಘಟಿಸುವ ಶಕ್ತಿ ಮತ್ತು ಯುಕ್ತಿ ಯನ್ನು ಕಂಡ ಬ್ರಿಟಿಷ್ ಸರ್ಕಾರ ಕುರುಬರನ್ನು ರಾಜ್ಯಾಡಳಿತದಿಂದ ದೂರವಿಟ್ಟಿತು. ಉತ್ತರ ಕರ್ನಾಟಕದ ಮುಸಲ್ಮಾನ್ ದೊರೆಗಳು ತಮ್ಮ ವಿಜಯನಗರ ಸಾಮ್ರಾಜ್ಯದ ಮೇಲಿನ ದ್ವೇಷದಿಂದ ಕುರುಬರನ್ನು ಹಿಂಸಿಸಲು ಪ್ರಾರಂಭಿಸಿದರು ಇದರ ಪರಿಣಾಮ ನೂರರು ವರ್ಷಗಳಿಂದ ನೆಲೆಸಿದ ನಾಡನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಇದಕ್ಕಿಂತ ಹೆಚ್ಚಾಗಿ ತಮ್ಮ ಪ್ರಾಮಾಣಿಕತೆ ಪರಾಕ್ರಮ ಆಡಳಿತ ನೈಪುಣ್ಯತೆಗಳಿಂದ ಇತಿಹಾಸದಲ್ಲಿ ದೊಡ್ಡ ದೊಡ್ಡ ರಾಜ್ಯಗಳನ್ನೇ ಸ್ಥಾಪಿಸಿ ಮೆರೆದ ಈ ನಮ್ಮ ಜನಾಂಗದ ರಾಜರು, ಚಕ್ರವರ್ತಿಗಳು ಸಹ ತಮ್ಮ ಕೀರ್ತಿ ವೈಭವಗಳ ಪ್ರಚಾರ ಪ್ರಸಿದ್ದಿಗಳಿಗಾಗಿ ಮೇಲು ವರ್ಗದ ಜನರಿಗೆ ತಮ್ಮ ಆಸ್ಥಾನದಲ್ಲಿ ಮಹತ್ತರವಾದ ಸ್ಥಾನಮಾನಗಳನ್ನು ನೀಡಿ ಗೌರವಿಸಿದರೇ ವಿನಃ ತಮ್ಮ ಸಮೂದಾಯದ ಅಭಿವೃದ್ದಿಗಾಗಿ,ವಿಕಾಸಕ್ಕಾಗಿ ಯಾವುದೇ ಮುಖ್ಯ ಯೋಜನೆಗಳನ್ನು ರೂಪಿಸಲಿಲ್ಲ. ತಾವು ದೈವಸಂಜಾತರೆಂದು,ವೀರಪುತ್ರರೆಂದು,ದಾನಚಿಂತಾಮಣಿಗಳೆಂದು ಹೆಸರುಗಳಿಸುವ ನಿರಂತರ ಪ್ರಯತ್ನದಲ್ಲಿಯೇ ಅವರ ಆಯುಷ್ಯ ಮುಗಿದು ಹೋಯಿತು.ಅವರ ಆಸ್ಥಾನಗಳಲ್ಲಿದ್ದ ವಿದ್ವಾಂಸರು ಆ ರಾಜರ, ಚಕ್ರವರ್ತಿಗಳ ಮೂಲವನ್ನು,ವೈಷಮ್ಯವನ್ನು,ವೈವಿಧ್ಯತೆಯನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಜನಾಂಗದ ಜ್ಞಾನ, ಸಮಾಜ ವಿಜ್ಞಾನಗಳ ದೃಷ್ಠಿಯಿಂದಲಾದರೂ ಅದರೆಡೆಗೆ ಗಮನಹರಿಸದೆ ಈ ಜನಾಂಗದ ಪುರಾಣ,ಇತಿಹಾಸ, ಜ್ಞಾನ,ವಿಜ್ಞಾನಗಳಲ್ಲಿಯೂ ಅರಿವಿಗೆಬಾರದಂತೆ ಮರೆವಿನ ಅವಜ್ಞೆಯ ಅನಾದರದ ಕಮರಿಗಳಲ್ಲಿ ಹೂತು ಹೋದರು.
ಕರುಬ ಜನಾಂಗದವರು ತಮ್ಮ ಸಂಸ್ಕøತಿ ಹಾಗೂ ಸಂಪ್ರದಾಯಗಳಿಗೆ ಪರಕೀಯರಿಂದ ದಕ್ಕೆಯಾದಾಗ ತಮ್ಮ ಕುಲ,ಗೋತ್ರ, ಮತ, ಬಿಟ್ಟುಕೊಡದೆ ತಾವು ನೂರಾರು ವರ್ಷಗಳಿಂದ ನೆಲೆಸಿದ್ದ ನಾಡನ್ನು ತೊರೆದು ಬಂದವರು ಇಂತಹ ಸ್ವಾಭಿಮಾನಿ “ಕುರುಬ” ಜನಾಂಗವು ಇಂದು ಭಾರತದ ಹಲವಾರು ಕಡೆ ಹರಿದು ಹಂಚಿಹೋಗಿದೆ. ಹೀಗೆ ಹರಿದು ಹಂಚಿ ಹೋದ ತಮ್ಮ ಜನಾಂಗದ “ ಕುರುಬ ” ಎಂಬ ಹೆಸರು, ಆಯಾ ಪ್ರದೇಶಗಳ ಭಾಷೆಗೆ ತಕ್ಕಂತೆ ಬದಲಾಗುತ್ತಾ ಹೋಗಿದೆ. ಹಾಗೂ ಕಾಲಕ್ಕನುಗುಣವಾಗಿ ಬಂದ ಬೇರೇ ಬೇರೇ ಧರ್ಮಗಳ ಪ್ರಭಾವ ಹಾಗೂ ವಿವಿಧ ವಿದ್ಯಮಾನಗಳಿಗೆ ಅನುಗುಣವಾಗಿ “ ಕುರುಬ ” ಪದದ ಜೊತೆಗೆ ಇತರ ಪದಗಳು ಸೇರಿಕೊಂಡಿವೆ.
ಪ್ರಾಚೀನಕಾಲದಿಂದಲೂ ಕುರಿಸಾಕಾಣಿಕೆ,ಕಂಬಳಿ ತಯಾರಿಕೆಯನ್ನು ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡು ಬಂದ ಕಾರಣದಿಂದ ಅಲೆಮಾರಿತನವನ್ನು ಮೈಗೂಡಿಸಿಕೊಂಡು, ಒಂದೆಡೆ ನೆಲೆನಿಂತು ನೆಮ್ಮದಿಯ ಸುಖ ಜೀವನಕ್ಕೆ, ಸಂಪಾದನೆಗೆ, ಆರಾಮದಾಯಕವಾದ ಜೀವನಕ್ರಮಕ್ಕೆ ಒಡ್ಡಿಕೊಳ್ಳದೆ, ಸರಳವಾದ ಮಿತ ಆಸೆ ಆಕಾಂಕ್ಷೆಗಳ ವರ್ತುಲದಲ್ಲಿ ತಮ್ಮನ್ನು ತಾವೇ ಬಂಧಿಸಿಕೊಂಡು ನಡೆಸುತ್ತಿದ್ದ ಜೀವನಕ್ರಮಕ್ಕೆ ಶಿಕ್ಷಣವೂ ಅಗತ್ಯವೆಂಬುದನ್ನು ಗಂಭೀರವಾಗಿ ಪರಿಗಣಿಸದ ಮತ್ತು ಒಂದು ವೃತ್ತಿ ಹಾಗೂ ಸಮುದಾಯಕ್ಕೆ ಸೇರಿರುವ ನಾವೆಲ್ಲರೂ ವಿಚಾರ ವಿನಿಮಯಕ್ಕಾಗಿ ಕಷ್ಟ, ಸುಖ-ದುಖಃಗಳನ್ನು ಹಂಚಿಕೊಳ್ಳುವುದಕ್ಕಾಗಿ ಒಂದೆಡೆ ಸೇರಬೇಕು ಒಂದುಗೂಡಬೇಕು ಏಂಬ ಪರಿಕಲ್ಪನೆಯೇ ಇರದಿದ್ದ ಕಾರಣದಿಂದಾಗಿ ತಮ್ಮ ತಮ್ಮ ಮೂಲಗಳನ್ನು ಹುಡುಕಿಕೊಳ್ಳುವ, ಅದರಿಂದ ಅಸ್ಮಿತ ಅಭಿಮಾನವನ್ನು ರೂಢಿಸಿಕೊಳ್ಳುವ ತಮ್ಮ ಹಿರಿಮೆ ಗರಿಮೆ ಕಲಾವಂತಿಕೆ ವೈಶಿಷ್ಟ್ಯಗಳನ್ನು ಲೋಕ್ಕಕ್ಕೆ ಪರಿಚಯಿಸುವ ಪ್ರಯತ್ನವನ್ನು ನಮ್ಮ ಪೂರ್ವಿಕರು (ಜನಾಂಗ) ಮಾಡಲಿಲ್ಲ.
ಚಾರಿತ್ರಿಕವಾಗಿ ಮತ್ತು ಸಾಂಸ್ಕøತಿಕವಾಗಿ ಕರ್ನಾಟಕದಲ್ಲಿ ಬಹುದೊಡ್ಡ ಪಾತ್ರವನ್ನು ಹೊಂದಿರುವ ಕುರುಬ ಜನಸಮುದಾಯದವರನ್ನು ಹಾಲುಮತದ ಸಂಪ್ರದಾಯದವರೆಂದು ಕರೆಯುತ್ತಾರೆ.
ಕುರುಬ ಜನಾಂಗದವರು ಅನಾದಿ ಕಾಲದಿಂದಲೂ ಪ್ರಕೃತಿಯನ್ನು ಪೂಜಿಸಿಕೊಂಡು ಬಂದವರು, ಕಲ್ಲ್ಲಿನ ಶಿಲೆಯನ್ನು ಪೂಜಿಸುವುದು ಪುರಾತನವಾದ ಸಂಪ್ರದಾಯ,ಅದೇ ಸಂಸ್ಕøತಿ ಮುಂದೆ ಶಿವಲಿಂಗ ಪೂಜೆಯಾಗೆ ಮಾರ್ಪಟ್ಟಿತು. ಪ್ರಾಚೀನಕಾಲದಿಂದಲೂ ನಮ್ಮ ಜನಾಂಗದವರು ತಮ್ಮ ಮೂಲಗುರುವೆಂದು ಆರಾದಿಸಿಕೊಂಡು ಬಂದಿರುವ ಶ್ರೀಜಗದ್ಗುರು ರೇವಣಸಿದ್ದರಿಗೆ ಅಗ್ರಸ್ಥಾನವನ್ನು ನೀಡುತ್ತಾರೆ. ಕುರುಬ ಜನಾಂಗದವರಾದ ನಾವು ಶಿವನನ್ನು ಬೀರೆಶ್ವರ,ಮೈಲಾರಲಿಂಗ, ಮಾದೇಶ್ವರ,ಮಲ್ಲಪ್ಪ, ಮಲ್ಲಿಕಾರ್ಜುನ, ಮುಂತಾದ ಹೆಸರಿನಲ್ಲಿ ಪೂಜಿಸುತ್ತೆವೆ.ಎಲ್ಲಮ್ಮ, ಭೀಮವ್ವ, ಚೌಡಮ್ಮ ಮುಂತಾದ ಹೆಸರಿನಲ್ಲಿ ಶಕ್ತಿದೇವಿಯನ್ನು ಪೂಜಿಸುತ್ತೇವೆ. ಕರ್ನಾಟಕ ಮತ್ತು ಆಂದ್ರಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಬೀರೇಶ್ವರ ಅಥವಾ ಮೈಲಾರಲಿಂಗೇಶ್ವರ ದೇವಾಲಯಗಳಿರುತ್ತದೆ ಹಾಗೂ ಈ ದೇವಾಲಯದ ಪೂಜಾರಿಗಳು (ಅರ್ಚಕರು)ಕುರುಬ ಜನಾಂಗದವರೇ ಆಗಿರುತ್ತಾರೆ.
ಕುರುಬ ಸಮುದಾಯದಲ್ಲಿ ಸಿಗುವ ಎರಡು ಪ್ರಧಾನ ಸಂಪ್ರದಾಯವೆಂದರೆ, ಒಂದು ಹತ್ತಿಕಂಕಣ ಮತ್ತೊಂದು ಉಣ್ಣೆ ಕಂಕಣ ಯಾವುದೇ ಕ್ರಮಬದ್ದ ಹಾಗೂ ಸಮಾಜಕ್ಕೆ ಉಪಯುಕ್ತವಾಗುವ ಅಲ್ಲದೆ ಮಾನವನಿಗೆ ಮಂಗಳಕರವೆನಿಸುವ ಸಂದರ್ಭದಲ್ಲಿ ನಾವು ಇಚ್ಛಾಶಕ್ತಿಯನ್ನು ತೊಡುತ್ತೇವೆ. ಆ ಇಚ್ಛಾಶಕ್ತಿಯು ಕಂಕಣಬದ್ದವಾಗಿರಬೇಕೆಂದು ಆಶಿಸುತ್ತೇವೆ, ಅದಕ್ಕೆ ಸಾಂಕೇತಿಕವಾಗಿ ಅನಾದಿ ಕಾಲದಿಂದಲೂ ನಮ್ಮ ಸಮುದಾಯದವರು ಕಂಕಣವನ್ನು ಕಟ್ಟುವ ಪದ್ದತಿಯನ್ನು ರೂಡಿಸಿಕೊಂಡಿದ್ದಾರೆ.
ನಾವು ನಮ್ಮ ಸಂಸ್ಕøತಿಯ ಮೂಲ ಸೊಗಡನ್ನು,ಪರಂಪರಾಗತ ಜೀವನ ಪದ್ದತಿಯನ್ನು ಯಥಾವತ್ತಾಗಿ ಉಳಿಸಿಕೊಂಡು ಬಂದಿದ್ದೇವೆ. ಅದೇ ರೀತಿಯಲ್ಲಿ ಮುಂದುವರೆಸುತ್ತಾ ಸಮಸ್ತ ಕುಲಭಾಂದವರೆಲ್ಲರು ಒಂದುಗೂಡಿ ಕರ್ನಾಟಕದ ಇತಿಹಾಸದಲ್ಲಿ ಸ್ವರ್ಣಯುಗವೆಂದೆ ಕರೆಯಲಾದ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯನ್ನು ಮತ್ತೆ ಮರುಕಳಿಸುವತ್ತ ದಿಟ್ಟಹೆಜ್ಜೆಯನ್ನು ಹಾಕೋಣ.