Vysraja Pratestapetha Kote Anjaneya Swamy Tiptur

Vysraja Pratestapetha Kote Anjaneya  Swamy Tiptur tiptur Sri vysa gurusarvabuvmha prtestapetha kote anjaneya

27/08/2026

ಶ್ರೀ ವ್ಯಾಸರಾಜ ಪ್ರತಿಷ್ಠಾಪಿತ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ತಿಪಟೂರು.

ಆಸ್ತಿಕ ಬಂಧುಗಳೇ,

ಶ್ರಾವಣಮಾಸದ ಪ್ರಯುಕ್ತ ಪ್ರತಿ ಶನಿವಾರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದು ದಿನಾಂಕ 29-08-2026 ರ ಮೂರನೇ ಶ್ರಾವಣ ಶನಿವಾರದಂದು ಮಂತ್ರಾಲಯ ಪ್ರಭುಗಳಾದ *ಶ್ರೀ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವ* ಪ್ರಯುಕ್ತ ಶ್ರೀ ಕೋಟೆ ಆಂಜನೇಯ ಸ್ವಾಮಿಯವರ ದಿವ್ಯಸಾನಿಧ್ಯದಲ್ಲಿ *ಶ್ರೀ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನ ಸ್ವರೂಪದಲ್ಲಿ ವಿಶೇಷ ಅಲಂಕಾರ ಮಾಡಲಾಗುತ್ತಿದೆ.*

ಶ್ರೀ ಸ್ವಾಮಿಯವರ ಸನ್ನಿಧಾನದಲ್ಲಿ
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಆಂಜನೇಯ ಸ್ವಾಮಿಯವರ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.

*ಜೈ ಶ್ರೀರಾಮ*

14/08/2026
ಆಷಾಢ ದ್ವಾದಶೆಯ ವಿಶೇಷ ಪೂಜೆ
26/07/2026

ಆಷಾಢ ದ್ವಾದಶೆಯ ವಿಶೇಷ ಪೂಜೆ

18/07/2026
ಶ್ರೀ ವ್ಯಾಸರಾಜ ಪ್ರತಿಷ್ಠಾಪಿತ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ತಿಪಟೂರು.                         *ಶ್ರಾವಣ ಮಾಸ ವಿಶೇಷ*ಆಸ್ತಿಕ ಬಂ...
18/07/2026

ಶ್ರೀ ವ್ಯಾಸರಾಜ ಪ್ರತಿಷ್ಠಾಪಿತ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ತಿಪಟೂರು.

*ಶ್ರಾವಣ ಮಾಸ ವಿಶೇಷ*

ಆಸ್ತಿಕ ಬಂಧುಗಳೇ,

ತಿಪಟೂರು ನಗರದ ಅತ್ಯಂತ ಪ್ರಾಚೀನ,ಐತಿಹಾಸಿಕವಾದ ಶ್ರೀ ಶ್ರೀ ಶ್ರೀ ವ್ಯಾಸರಾಜ ಗುರು ಸಾರ್ವಭೌಮರಿಂದ ಪ್ರತಿಷ್ಠಾಪಿತವಾದ ಶ್ರೀ ಕೋಟೆ ಆಂಜನೇಯ ಸ್ವಾಮಿಯವರ ಸನ್ನಿಧಾನದಲ್ಲಿ ,

ದಿನಾಂಕ 15-08-2026ನೇ ಪ್ರಥಮ ಶ್ರಾವಣ ಶನಿವಾರ ದಿಂದ.05-09-2026ರವರೆಗೆ ಪ್ರತಿ ಶ್ರಾವಣ ಶನಿವಾರ ನಡೆಯಲಿರುವ ಕಾರ್ಯಕ್ರಮದ ವಿವರ.

ಪ್ರಾತಃಕಾಲ 4:೦೦ಗಂಟೆಗೆ:- ನಿರ್ಮಾಲ್ಯ ವಿಸರ್ಜನೆ ಪೂಜೆ.

5:೦೦ಗಂಟೆಗೆ :- ಪಂಚಾಮೃತ ಅಭಿಷೇಕ (108ಲೀಟರ್ ಕ್ಷಿರಾಭಿಷೇಕ).

ಬೆಳಗ್ಗೆ 6.00 ರಿಂದ 8-00 ಗಂಟೆಗೆ:- ವಿಶೇಷ ಅಲಂಕಾರ.

ಬೆಳಗ್ಗೆ 8-00ಗಂಟೆಗೆ:- ಶ್ರೀ ಸ್ವಾಮಿಯವರ ದರ್ಶನ ಪವಮಾನಸೂಕ್ತ ಪಾರಾಯಣ.

10 ರಿಂದ 11-00ಗಂಟೆಗೆ :- ಮಹಾಪೂಜೆ ,ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ.
(108 ಲೀಟರ್ ಕ್ಷೀರಾಭಿಷೇಕ ಮಾಡಿದ ಹಾಲನ್ನು ಬಾದಾಮಿ ಹಾಲು ಮಾಡಿ ಭಕ್ತಾದಿಗಳಿಗೆ ವಿನಿಯೋಗ ಮಾಡಲಾಗುವುದು).

ರಾತ್ರಿ 7 ರಿಂದ 8-00ಗಂಟೆಗೆ :- ರಾತ್ರಿ ಪೂಜೆ, ಅಷ್ಟಾವಧಾನ ಸೇವೆ ಮಹಾಮಂಗಳಾರತಿ.

ರಾತ್ರಿ 8-30ಗಂಟೆಗೆ :- ಫಲ ಮಂತ್ರಾಕ್ಷತೆ ಮತ್ತು ಪ್ರಸಾದ ವಿನಿಯೋಗ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗ ಬೇಕಾಗಿ ವಿನಂತಿ.

ವಿಶೇಷ ಸೂಚನೆ :- ಅಭಿಷೇಕ ವೀಕ್ಷಣೆಗೆ ಪ್ರಾತಃಕಾಲ 5 ಗಂಟೆಗೆ ಸನ್ನಿಧಾನದಲ್ಲಿ ಉಪಸ್ಥಿತರಿರಬೇಕು,
ಸೇವಾ ಸಂಕಲ್ಪ ಬೆಳ್ಳಗೆ 5.00ಕ್ಕೆ ಮತ್ತು 10 ಗಂಟೆಗೆ ಮಾಡಿಸಲಾಗುವುದು.

ಅಲಂಕಾರಕ್ಕೆ ಹೂವು, ವೀಳ್ಯದೆಲೆ ಹಾರಗಳನ್ನ ಶುಕ್ರವಾರ ರಾತ್ರಿ ತಲುಪಿಸಲು ವಿನಂತಿ.


*ಜೈ ಶ್ರೀರಾಮ್*

ಕೋಟೆ ಶ್ರೀ ಆಂಜನೇಯ ಸ್ವಾಮಿ
04/07/2026

ಕೋಟೆ ಶ್ರೀ ಆಂಜನೇಯ ಸ್ವಾಮಿ

Address

Tiptur

Website

Alerts

Be the first to know and let us send you an email when Vysraja Pratestapetha Kote Anjaneya Swamy Tiptur posts news and promotions. Your email address will not be used for any other purpose, and you can unsubscribe at any time.

Shortcuts

Share

Category