Sri Mahaganapathi Temple - Sirsi

Sri Mahaganapathi Temple - Sirsi Sandalwood Complex, Korlakatta Road, Sirsi - 581402,
Post: Chipagi, District: Uttara Kannada

🙏🏼 **ಭಕ್ತಾದಿಗಳೇ,** 🙏🏼ಈ ಬರುವ **ಶ್ರಾವಣ ಮಾಸದ ಅಂಗವಾಗಿ, ದಿನಾಂಕ 20-08-2026ರ ಗುರುವಾರ**, ಲೋಕ ಕಲ್ಯಾಣಾರ್ಥವಾಗಿ **ಶ್ರೀ ಮಹಾ ಗಣಪತಿ ದೇವ...
09/08/2026

🙏🏼 **ಭಕ್ತಾದಿಗಳೇ,** 🙏🏼

ಈ ಬರುವ **ಶ್ರಾವಣ ಮಾಸದ ಅಂಗವಾಗಿ, ದಿನಾಂಕ 20-08-2026ರ ಗುರುವಾರ**, ಲೋಕ ಕಲ್ಯಾಣಾರ್ಥವಾಗಿ **ಶ್ರೀ ಮಹಾ ಗಣಪತಿ ದೇವಸ್ಥಾನ, ಶ್ರೀ ಗಂಧದ ಸಂಕಿರಣ, ಶಿರಸಿ** ಇಲ್ಲಿ ಪವಿತ್ರ **ಚಂಡಿ ಹವನ**ವನ್ನು ಆಯೋಜಿಸಲಾಗಿದೆ.

ಈ ಧಾರ್ಮಿಕ ಹಾಗೂ ಪುಣ್ಯ ಕಾರ್ಯದಲ್ಲಿ ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಮಹಾ ಗಣಪತಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಮ್ರವಾಗಿ ವಿನಂತಿಸುತ್ತೇವೆ.

ಭಕ್ತರು ತಮ್ಮ **ತನು, ಮನ, ಧನ** ಸಹಕಾರದ ಮೂಲಕ ಈ ಪುಣ್ಯ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇವೆ.

# # # 🌺 ಸೇವಾ ವಿವರಗಳು

**1. ಸೇವಾ ಪ್ರಸಾದ – ₹250/-**
**2. ಕಳಸ ಪ್ರಸಾದ – ₹500/-**

**ಕಳಸ ಪೂಜೆಯಲ್ಲಿ** ಭಾಗವಹಿಸಲು ಇಚ್ಛಿಸುವ ಭಕ್ತಾದಿಗಳು **ದಿನಾಂಕ 15-08-2026ರ ಒಳಗಾಗಿ ₹500/- ಪಾವತಿಸಿ ನೋಂದಾಯಿಸಿಕೊಳ್ಳಬೇಕಾಗಿ** ವಿನಂತಿ.

ಎಲ್ಲಾ ಭಕ್ತಾದಿಗಳು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ದೇವರ ಅನುಗ್ರಹ ಹಾಗೂ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕೋರುತ್ತೇವೆ.

🙏🏼 **ಎಲ್ಲರೂ ಒಂದಾಗಿ ಈ ಪವಿತ್ರ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.** 🙏🏼

📞 **ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ:**
**HR ಜಗದೀಶ್:** 9449373888
**ಗಿರೀಶ್ ಭಟ್ – ಪ್ರಧಾನ ಅರ್ಚಕರು:** 7019629569

**ಶ್ರೀ ಮಹಾ ಗಣಪತಿ ದೇವಸ್ಥಾನ**
**ಶ್ರೀ ಗಂಧದ ಸಂಕಿರಣ, ಶಿರಸಿ**

🙏🏼 **Dear Devotees,** 🙏🏼On the auspicious occasion of **Shravana Masa**, on **Thursday, 20th August 2026**, **Sri Maha G...
09/08/2026

🙏🏼 **Dear Devotees,** 🙏🏼

On the auspicious occasion of **Shravana Masa**, on **Thursday, 20th August 2026**, **Sri Maha Ganapati Temple, Sri Gandha Sankiran, Sirsi**, is organising a sacred **Chandi Havan** for the welfare and prosperity of all.

We humbly invite all devotees to participate in this divine programme in large numbers and seek the blessings of Lord Maha Ganapati.

Your participation and contribution through **Tanu, Mana and Dhana (body, mind and wealth)** will help us make this sacred programme a grand success.

# # # 🌺 Seva Details

**1. Seva Prasada – ₹250/-**
**2. Kalasha Prasada – ₹500/-**

Devotees wishing to participate in the **Kalasha Puja** are requested to register by paying **₹500/- on or before 15th August 2026**.

We sincerely request everyone to participate in all the programmes and receive the divine blessings and grace of the Almighty.

🙏🏼 **Let us come together and make this sacred occasion a grand success.** 🙏🏼

📞 **For Registration & Details:**
**HR Jagadish:** 9449373888
**Girish Bhat – Chief Priest:** 7019629569

**Sri Maha Ganapati Temple**
**Sri Gandha Sankiran, Sirsi**

ಇಂದು ನಡೆದ ಮಹಾ ಗಣಪತಿ ಸಂಕಷ್ಟಿ ಪೂಜೆ ಮತ್ತು ಸತ್ಯ ನಾರಾಯಣ ಕಥೆ..🙏
05/04/2026

ಇಂದು ನಡೆದ ಮಹಾ ಗಣಪತಿ ಸಂಕಷ್ಟಿ ಪೂಜೆ ಮತ್ತು ಸತ್ಯ ನಾರಾಯಣ ಕಥೆ..🙏

06/03/2026

ಸಂಕಷ್ಟಿ ಮಹಾಪೂಜೆ

ಮಹಾಗಣಪತಿ ಗೆ ಇಂದಿನ ಅಲಂಕಾರ 🙏
06/03/2026

ಮಹಾಗಣಪತಿ ಗೆ ಇಂದಿನ ಅಲಂಕಾರ 🙏

13/02/2026
ಶ್ರೀಗಂಧದ ಸಂಕೀರ್ಣದಲ್ಲಿ ಮಹಾ ಗಣಪತಿ ದೇವಾಲಯ ಉದ್ಘಾಟನೆ.ಸಿರ್ಸಿಯಲ್ಲಿ ಮಹಾ ಗಣಪತಿ ಶಿಲಾಮೂರ್ತಿ ಹಾಗೂ ಪರಿವಾರ ದೇವರುಗಳ ಪುನಃ ಪ್ರತಿಷ್ಠಾಪನೆ ಹ...
06/02/2026

ಶ್ರೀಗಂಧದ ಸಂಕೀರ್ಣದಲ್ಲಿ ಮಹಾ ಗಣಪತಿ ದೇವಾಲಯ ಉದ್ಘಾಟನೆ.

ಸಿರ್ಸಿಯಲ್ಲಿ ಮಹಾ ಗಣಪತಿ ಶಿಲಾಮೂರ್ತಿ ಹಾಗೂ ಪರಿವಾರ ದೇವರುಗಳ ಪುನಃ ಪ್ರತಿಷ್ಠಾಪನೆ ಹಾಗೂ
ನೂತನ ದೇವಾಲಯದ ಉದ್ಘಾಟನಾ ಕಾರ್ಯಕ್ರಮಳು ಫೆಭ್ರವರಿ 4,5, ರಂದು ಮತ್ತು ಇಂದು ಭಕ್ತಿಭಾವ ಹಾಗೂ ವೈದಿಕ ಸಂಪ್ರದಾಯಗಳೊಂದಿಗೆ ಯಶಸ್ವಿಯಾಗಿ ನೆರವೇರಿತು. ಈ ಧಾರ್ಮಿಕ ಕಾರ್ಯಕ್ರಮಕ್ಕೆ, ದೇವಸ್ಥಾನದ ಸಮಿತಿಯವರ ಆಹ್ವಾನದ ಮೇರೆಗೆ,ಬೆಂಗಳೂರಿನಿಂದ ಧಾರ್ಮಿಕ ದತ್ತಿ ಪರಿಷತ್ ಸದಸ್ಯರಾದ ಶ್ರೀ ಕೆ.ಎಂ. ನಾಗರಾಜು ಅವರು ನಿನ್ನೆ ಆಗಮಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.

ವೇದಮಂತ್ರೋಚ್ಚಾರಣೆ, ಹೋಮ-ಹವನಗಳೊಂದಿಗೆ ಮಹಾ ಗಣಪತಿ ದೇವರ ಶಿಲಾಮೂರ್ತಿ ಹಾಗೂ ಪರಿವಾರ ದೇವರುಗಳ ಪುನಃ ಪ್ರತಿಷ್ಠಾಪನಾ ಕಾರ್ಯಗಳು ನೆರವೇರಿದವು. ನೂತನವಾಗಿ ನಿರ್ಮಿಸಲಾದ ದೇವಾಲಯವನ್ನು ಶ್ರೀ ಕೆ.ಎಂ. ನಾಗರಾಜು ಅವರು ಉದ್ಘಾಟಿಸಿ ಮಾತನಾಡಿದರು.
ಅವರು ತಮ್ಮ ಭಾಷಣದಲ್ಲಿ, ದೇವಾಲಯಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರಗಳಾಗಿದ್ದು, ಸಮಾಜದಲ್ಲಿ ಧಾರ್ಮಿಕ ಶ್ರದ್ಧೆ, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ಏಕತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ದೇವಾಲಯದ ಚಟುವಟಿಕೆಗಳ ಮೂಲಕ ಜನರಲ್ಲಿ ಸೇವಾಭಾವ ಮತ್ತು ಧರ್ಮನಿಷ್ಠೆ ಹೆಚ್ಚಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ಗಣ್ಯರು, ಧಾರ್ಮಿಕ ಮುಖಂಡರು, ದೇವಾಲಯ ಸಮಿತಿಯ ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿಶೇಷ ಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.

ವಿವಿಧ ದೇವಾಲಯಗಳಿಗೆ ದೇವರುಗಳನ್ನು, ಬಾಗಿಲುಗಳನ್ನು, ವಿವಿಧ ಅಲಂಕಾರಿಕ ಗೋಪುರ ತೇರು ಇತ್ಯಾದಿಗಳನ್ನು ನಿರ್ಮಿಸುವ ಕಲಾ ಸಂಕಿರಣದ ಕುಶಲ ಕರ್ಮಿಗಳು ತಮ್ಮದೇ ಆದ ಮಂದಿರವನ್ನು ವೈಭವದಿಂದ ಮೋಹಕವಾಗಿ ನಿರ್ಮಿಸಿಕೊಂಡಿರುವಿದ ಕಂಡು ಕೆ ಎಂ ನಾಗರಾಜುರವರನ್ನು ಉಲ್ಲಾಸಿತಗೊಳಿಸಿದೆ. ಅದಕ್ಕಾಗಿ ಶ್ರಮಿಸಿದ ಎಲ್ಲಾ ಭಕ್ತರಿಗೆ ವಿಶೇಷವಾಗಿ ಸಮಿತಿಯವರಿಗೆ ಶುಭಕೋರಿದರು.

ಈ ದೇವಾಲಯಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ ಐದು ಲಕ್ಷ ಹಣವನ್ನು ಬಿಡುಗಡೆಗೆ ಆದೇಶ ನೀಡಲಾಗಿದೆಯೆಂದು ಸಭೆಯಲ್ಲಿ ತಿಳಿಸಿದಾಗ ಭಕ್ತರ ಸಂತೋಷಕ್ಕೆ ಕೊನೆರಲಿಲ್ಲ.ಅಷ್ಟೇ ಅಲ್ಲದೆ ಸುಂದರ ಕುಸರಿ ಕಲೆಯ ಬಾಗಿಲು, ಮೂರ್ತಿಗಳು, ಅಲ್ಲದೆ ದೇವಾಲಯವನ್ನು ನೋಡಿ ಆನಂದಿಸಿದ ಶ್ರೀ ಕೆ ಎಂ ನಾಗರಾಜಣ್ಣನವರು ವೈಯಕ್ತಿಕವಾಗಿಯೂ ಒಂದು ಲಕ್ಷ ದೇಣಿಗೆ ನೀಡಿದ್ದು, ಭಕ್ತ ವೃಂದದಲ್ಲಿ ಸಂತಸವು ಚಿಮ್ಮಿಸಿತ್ತು.

ಮೊದಲನೆಯ ದಿನದ ಸಂಜೆ ಹಾಸ್ಯಬ್ರಹ್ಮ ಗಂಗಾವತಿ ಪ್ರಾಣೇಶ್, ನರಸಿಂಹ ಜೋಶಿ, ಮಹಾ ಮನಿಯವರ ಕಾರ್ಯಕ್ರಮ ಜರುಗಿ ಸಮೂಹ ನಗೆಯಲ್ಲಿ ತೇಲಿಸಿತ್ತು.
ನಿನ್ನೆ ಸಂಜೆ ಆರ್ಕೆಸ್ಟ್ರಾ, ಹಾಗೂ ಸ್ಥಳೀಯ ಕುಶಲಕರ್ಮಿಗಳ ಮಕ್ಕಳು, ಕುಟುಂಬದವರಿಂದ ಡಾನ್ಸ್, ಹಾಡು ಇತ್ಯಾದಿಗಳು ಸಾಂಗವಾಗಿ ನೆಡೆದು, ದೇವಸ್ಥಾನದ ಕೆಲಸಕ್ಕೆ ಶ್ರಮಿಸಿದವರಿಗೆ, ಕುಟುಂಬದವರಿಗೆ ಸಂತಸದಲ್ಲಿ ಸಿಹಿ ಜೇನು ನುಂಗಿದಂತಾಗಿತ್ತು.

ಇಂದೂ ಸಹ ಧಾರ್ಮಿಕ ಕಾರ್ಯಕ್ರಮಗಳು ಸಾಗುತ್ತಾಲಿವೆ.

ಶ್ರೀ ಕೆ ಎಂ ನಾಗರಾಜು ರವರು ದೇವಸ್ಥಾನಕ್ಕೂ ಬರುವ ಮುಂಚೆ ರಾಜ್ಯದ ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಮಾರಿಕಾಂಬಾ ಗುಡಿಗೆ ದರ್ಶನವಿತ್ತು ಸಕಲರಿಗೂ ಒಳ್ಳೆಯದನ್ನು ದಯಪಾಲಿಸ

Thank you for everything support ❤️🙏
06/02/2026

Thank you for everything support ❤️🙏

Thank you sir for you're support 🙏
06/02/2026

Thank you sir for you're support 🙏

Address

Sandalwood Complex, Korlakatta Road
Sirsi
581402

Alerts

Be the first to know and let us send you an email when Sri Mahaganapathi Temple - Sirsi posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Mahaganapathi Temple - Sirsi:

Shortcuts

Share

Category