Sri Sadguru Bheemashankara Swami Samsthana Math, Sindagi

  • Home
  • India
  • Sindgi
  • Sri Sadguru Bheemashankara Swami Samsthana Math, Sindagi

Sri Sadguru Bheemashankara Swami Samsthana Math, Sindagi ಶ್ರೀ ಆದಿನಾಥ ಪರಂಪರಾಗತ ಗುರುಪೀಠ ಶ್ರೀ ಸದ್ಗುರು ಭೀಮಾಶಂಕರ ಸಂಸ್ಥಾನಮಠ ಸಿಂದಗಿ.

27/08/2026

ಬೆಂಗಳೂರು ಮಹಾನಗರದಲ್ಲಿ ಶ್ರೀಮಠದ ಪರಮಶಿಷ್ಯರಾದ ಸಿಂದಗಿಯ ಶ್ರೀ ವಿಜಯ ದತ್ತಾತ್ರೇಯ ಕುಲಕರ್ಣಿ ಅವರ ಚಿರಂಜೀವಿಯ ನೂತನ 'ದತ್ತ ನಿವಾಸ' ಗೃಹಪ್ರವೇಶ ಸಮಾರಂಭಕ್ಕೆ ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳವರು ಆಗಮಿಸಿ ಆಶೀರ್ವದಿಸಿದ ದಿವ್ಯ ದೃಶ್ಯ.

Divine moments from the visit of His Holiness Sri Sadguru Dattappayya Swamiji to the Griha Pravesha (housewarming ceremony) of the newly built “Datta Nivasa” in Bengaluru, where Swamiji blessed the son of Sri Vijaya Dattatreya Kulkarni of Sindagi, a devoted disciple of Sri Math.

🕉️ ಬಾಗಲಕೋಟೆ ಭಾಗೀದಾರರ ಸಮಾಲೋಚನಾ ಸಭೆಯ ವರದಿ24 ಆಗಸ್ಟ್ 2026ಏಕಾತ್ಮ ಯಾತ್ರೆಯ ಅಂಗವಾಗಿ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರ...
26/08/2026

🕉️ ಬಾಗಲಕೋಟೆ ಭಾಗೀದಾರರ ಸಮಾಲೋಚನಾ ಸಭೆಯ ವರದಿ

24 ಆಗಸ್ಟ್ 2026

ಏಕಾತ್ಮ ಯಾತ್ರೆಯ ಅಂಗವಾಗಿ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಕುರಿತು ೨೪ ಆಗಸ್ಟ್ ೨೦೨೬ರಂದು ಬಾಗಲಕೋಟೆಯಲ್ಲಿ ಪ್ರಮುಖ ಭಾಗೀದಾರರ ಸಮಾಲೋಚನಾ ಸಭೆ ನಡೆಯಿತು.

ಸಭೆಯಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಉತ್ತರಕರ್ನಾಟಕ ವಿಶೇಷ ಪ್ರತಿನಿಧಿಗಳಾದ ಸಿಂಧಗಿಯ ಶ್ರೀ ಸದ್ಗುರು ಭೀಮಾಶಂಕರ ಸ್ವಾಮಿ ಸಂಸ್ಥಾನ ಮಠದ ಪೀಠಾಧೀಶರಾದ ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ಸೇರಿದಂತೆ ಸ್ಥಳೀಯ ಗಣ್ಯರು, ಧಾರ್ಮಿಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಯಾತ್ರೆಯ ಕುರಿತು ವಿವಿಧ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಂಸ್ಥೆಗಳನ್ನು ಸಮನ್ವಯಗೊಳಿಸುವುದು, ಸ್ಥಳೀಯ ಮಟ್ಟದಲ್ಲಿ ಬಲವಾದ ಕಾರ್ಯವ್ಯವಸ್ಥೆ ರೂಪಿಸುವುದು ಹಾಗೂ ಸಾರ್ವಜನಿಕರ ಗರಿಷ್ಠ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಬಂದ ಸಲಹೆಗಳನ್ನು ಯಾತ್ರೆಯ ಮಾರ್ಗರಚನೆ, ಪ್ರಚಾರ ಹಾಗೂ ಆಯೋಜನೆಯಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಲಾಯಿತು.

ಅಂತಿಮ ಧ್ಯೇಯ: ಕರ್ನಾಟಕದಾದ್ಯಂತ ಅದ್ವೈತ ತತ್ತ್ವಜ್ಞಾನ, ಆಧ್ಯಾತ್ಮಿಕ ಜಾಗೃತಿ, ಸಾಂಸ್ಕೃತಿಕ ಐಕ್ಯತೆ ಮತ್ತು ಸಾಮಾಜಿಕ ಸೌಹಾರ್ದತೆಯ ಸಂದೇಶವನ್ನು ಪಸರಿಸುವುದು.

ಏಕಾತ್ಮ ಧಾಮ – ಅದ್ವೈತ: ಏಕತ್ವದ ಪಯಣ

18/08/2026

ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ೩೪ನೇ ವರ್ಧಂತಿ ಮಹೋತ್ಸವದ ನಿಮಿತ್ತ, ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ಪವಿತ್ರ ಕ್ಷೇತ್ರ ಶೃಂಗೇರಿಗೆ ತೆರಳಿ, ನರಸಿಂಹವನದ ಶ್ರೀ ಸಚ್ಚಿದಾನಂದ ವಿಲಾಸದಲ್ಲಿ ಜಗದ್ಗುರುಗಳವರ ಆಹ್ನಿಕ ದರ್ಶನವನ್ನು ಪಡೆದುಕೊಂಡು, ನಂತರ ಶ್ರೀ ಶಾರದಾ ಪರಮೇಶ್ವರಿ ಅಮ್ಮನವರ ದಿವ್ಯ ದರ್ಶನವನ್ನು ಪಡೆದ ಪಾವನ ಕ್ಷಣಗಳು.

On the auspicious occasion of the 34th Vardhanti Mahotsava of Sri Jagadguru Shankaracharya Sri Sri Vidhushekhara Bharati Mahaswamiji, Sri Sadguru Dattappayya Swamigalu visited the holy pilgrimage center of Sringeri. He had the sacred Aahnika Darshana of the Jagadguru at Sri Sachidananda Vilasa in Narasimhavana and subsequently sought the divine blessings and Darshana of Goddess Sri Sharada Parameshwari Ammanavaru.

14/08/2026

“ದಿನಾಂಕ ೧೩-೦೮-೨೦೨೬ (ಶ್ರಾವಣ ಶುಕ್ಲ ಪ್ರತಿಪದ) ರಂದು ಶ್ರೀ ಆದಿನಾಥ ಪರಂಪರಾಗತ ಗುರುಪೀಠ ಶ್ರೀ ಸದ್ಗುರು ಭೀಮಾಶಂಕರ ಸ್ವಾಮಿ ಸಂಸ್ಥಾನ ಮಠದ ೮ನೇ ಪೀಠಾಧಿಪತಿಗಳಾದ ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳವರ ಆರಾಧನಾ ಮಹೋತ್ಸವವು ಭಕ್ತಿಯಿಂದ ನೆರವೇರಿದ ದಿವ್ಯ ದೃಶ್ಯ.”

On 13-08-2026 (Shravana Shukla Pratipada), the Aradhana Mahotsava of Sri Sadguru Dattappayya Swamiji, the 8th Pontiff of Sri Adinatha Paramparagata Guru Peetha, Sri Sadguru Bhimashankara Swami Samsthan Math, was devotionally observed. A divine glimpse of the sacred occasion.

12/08/2026

ದಿನಾಂಕ ೦೮-೦೮-೨೦೨೬ ರಂದು, ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಶೃಂಗೇರಿಗೆ ತೆರಳಿ ಶ್ರೀ ಶಾರದಾ ಪರಮೇಶ್ವರಿ ಅಮ್ಮನವರ ದರ್ಶನವನ್ನು ಪಡೆದು, ನಂತರ ನರಸಿಂಹವನದ ಗುರುನಿವಾಸದಲ್ಲಿ ಚಾತುರ್ಮಾಸ್ಯ ವ್ರತಾನುಷ್ಠಾನದಲ್ಲಿರುವ ಉಭಯ ಜಗದ್ಗುರು ಮಹಾಸ್ವಾಮಿಗಳವರ ದರ್ಶನವನ್ನು ಪಡೆದು ಆಶೀರ್ವಾದವನ್ನು ಸ್ವೀಕರಿಸಿದ ದಿವ್ಯ ಕ್ಷಣಗಳು.

On 08-08-2026, Sri Sadguru Dattappayya Swamiji visited the Dakshinamnaya Sri Sharada Peetham, Sringeri, and received the divine darshan of goddess Sri Sharada Parameshwari Ammanavaru. Later, at Gurunivasa in Narasimhavana, he had the sacred darshan of the Ubhaya Jagadgurus Mahaswamijis observing Chaturmasya and received their divine blessings

10/08/2026

"ದಿನಾಂಕ ೦೭-೦೮-೨೦೨೬ ರಂದು 'ಆಡಿ ಕೃತ್ತಿಕಾ' ಮಹೋತ್ಸವದ ಪ್ರಯುಕ್ತ, ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ಚಿತ್ರದುರ್ಗ ನಗರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ದಿವ್ಯ ಕ್ಷಣಗಳು."

On 7 August 2026, on the auspicious occasion of Aadi Kruttika Mahotsava, Sri Sadguru Dattappayya Swamiji visited the Sri Subramanya Swamy Temple in Chitradurga and received the divine darshan of the deity.

Divine moments of Darshan.

Address

Sindgi
586128

Opening Hours

Monday 6am - 9am
Tuesday 6am - 9am
Wednesday 6am - 9am
Thursday 6am - 9am
Friday 6am - 9am
Saturday 6am - 9am
Sunday 6am - 9am

Telephone

+918722112333

Website

Alerts

Be the first to know and let us send you an email when Sri Sadguru Bheemashankara Swami Samsthana Math, Sindagi posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Sadguru Bheemashankara Swami Samsthana Math, Sindagi:

Shortcuts

Share