13/12/2025
ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಏಕೆ? ಇಲ್ಲಿದೆ ಉತ್ತರ...
ಇತ್ತೀಚೆಗೆ ಸಮಾಜದಲ್ಲಿ ಜಾತಿ-ಜಾತಿಗಳ ಬಗ್ಗೆ ಯಾವುದೇ ಸಂಘರ್ಷಗಳಾದರೂ ಅನ್ಯ ಸಮುದಾಯದವರು ಹೆಚ್ಚಿನವರು ದೂರುವುದು ಬ್ರಾಹ್ಮಣರನ್ನು. ಇದಕ್ಕೆ ಮುಖ್ಯ ಕಾರಣವೆಂದರೆ, ಒಂದು- ಬ್ರಾಹ್ಮಣರಿಗೆ ಜನ್ಮತಃ ಬಂದಿರುವ ಕೆಲವು ವೈಶಿಷ್ಟ್ಯಗಳು ತಮಗೆ ಬಂದಿಲ್ಲ ಎನ್ನುವ ಅನ್ಯರ ಹೊಟ್ಟೆಕಿಚ್ಚು, ಇನ್ನೊಂದು- ತಾವು ಏನೇ ಮಾತಾಡಿದರೂ ಇಡೀ ವಿಶ್ವದಲ್ಲಿ ಬ್ರಾಹ್ಮಣರು ಕೇವಲ 2% ಇರುವುದರಿಂದ ಬ್ರಾಹ್ಮಣರು ಸುಮ್ಮನಿರುತ್ತಾರೆ ಎನ್ನುವ ತಿಳುವಳಿಕೆ. ಮೇಲ್ಜಾತಿ- ಕೆಳಜಾತಿ ಎನ್ನುವುದು ಬ್ರಾಹ್ಮಣ ಮತ್ತು ಶೂದ್ರ ಈ ಎರಡು ಶಬ್ದಗಳಲ್ಲಿ ಮಾತ್ರ ಇರುವಂಥದ್ದಲ್ಲ. ಚತುರ್ವರ್ಣಗಳ ಎಲ್ಲಾ ಜಾತಿ-ಪಂಗಡಗಳಲ್ಲಿಯೂ ಮೇಲು-ಕೀಳು ಎನ್ನುವುದು ಇದ್ದೇ ಇದೆ. ನಾನು ಇಲ್ಲಿ ನಿರ್ದಿಷ್ಟ ಸಮುದಾಯದ ಹೆಸರನ್ನು ಉಲ್ಲೇಖಿಸುವುದಿಲ್ಲ. ಆದರೆ ಓದುಗರೇ ಅದನ್ನು ತಿಳಿದುಕೊಳ್ಳಬಹುದು; ಶೂದ್ರರಲ್ಲಿಯೇ ಇರುವ ಅನೇಕ ಜಾತಿಗಳಲ್ಲಿ ಮೇಲು-ಕೀಳು ಎನ್ನುವುದಿದೆ. ಶೂದ್ರರಲ್ಲಿ ಮೇಲ್ಜಾತಿಯ ಶೂದ್ರರು ತಮಗಿಂದ ಕೆಳಜಾತಿಯ ಶೂದ್ರರನ್ನು ತಮ್ಮ ಜೊತೆ ಊಟಕ್ಕೆ ಸೇರಿಸಿಕೊಳ್ಳುವುದಿಲ್ಲ. ಹಾಗಿರುವಾಗ ಬ್ರಾಹ್ಮಣರು ತಮ್ಮ ಊಟದ ಪಂಕ್ತಿಯಲ್ಲಿ ಉಳಿದವರನ್ನು ಸೇರಿಸಿಕೊಳ್ಳುವುದಿಲ್ಲ ಎನ್ನುವುದು ಅರ್ಥಹೀನ. ಅಷ್ಟೇ ಅಲ್ಲ, ಅನ್ಯ ಸಮುದಾಯದವರಲ್ಲಿ ಪಂಕ್ತಿಭೇದ ಇದ್ದಂತೆ ಬ್ರಾಹ್ಮಣರಲ್ಲಿ ಇಲ್ಲ. ವಾಸ್ತವದಲ್ಲಿ ಬ್ರಾಹ್ಮಣರ ಪಂಗಡಗಳಲ್ಲಿ ಮೇಲು-ಕೀಳು ಎನ್ನುವುದೇ ಇಲ್ಲ. ಆದರೂ ಕೆಲವರು ತಮ್ಮ ತಮ್ಮ ತತ್ವಗಳ ಹಾಗೂ ಆಚರಣೆಗಳ ಭೇದದಿಂದ ಮೇಲು-ಕೀಳು ಅಂತ ಹೇಳಿಕೊಳ್ಳುತ್ತಾರೆ ಅಷ್ಟೆ. ಆದರೆ ಪಂಕ್ತಿಭೇದವಂತೂ ಇಲ್ಲವೇ ಇಲ್ಲ. ಹಿಂದಿನ ಕಾಲದಲ್ಲಿ ಆರ್ಥಿಕವಾಗಿ ಅತ್ಯಂತ ದುರ್ಬಲರಾದಿದ್ದ ಕೆಲವು ಭಸ್ಮಧಾರಿ ಬ್ರಾಹ್ಮಣರನ್ನು ಕೆಲವು ನಾಮಧಾರಿ ಬ್ರಾಹ್ಮಣರು ತಮ್ಮ ಒತ್ತೆಯಾಳುಗಳನ್ನಾಗಿ ಇರಿಸಿ, ಅವರನ್ನು ಕೀಳೆಂದು ಹೇಳಿ ಪ್ರತ್ಯೇಕ ಪಂಕ್ತಿ ಹಾಕಿ ಶೋಷಣೆ ಮಾಡಿದ್ದೂ ಇದೆ. ಆದರೆ ಆ ನಿರ್ದಿಷ್ಟ ಭಸ್ಮಧಾರಿ ಬ್ರಾಹ್ಮಣ ಪಂಗಡದವರು ಕ್ರಮೇಣ ಆರ್ಥಿಕವಾಗಿ ಸಬಲರಾಗುತ್ತಾ ಹೋದಂತೆ ನಾಮಧಾರಿಗಳ ಶೋಷಣೆಗೆ ಕಡಿವಾಣ ಬಿತ್ತು. ಈಗಿನ ಕಾಲದಲ್ಲಿ ಬ್ರಾಹ್ಮಣರಲ್ಲಿ ಎಲ್ಲೂ ಪಂಕ್ತಿಭೇದವಿಲ್ಲ. ನಾನು ಬ್ರಾಹ್ಮಣ ಸಮುದಾಯದ ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಕಾರ್ಯಕ್ರಮ ಮಾಡಿಸುವವರು ಯಾವುದೇ ಬ್ರಾಹ್ಮಣ ಪಂಗಡದವರಾಗಿದ್ದರೂ ಅಲ್ಲಿ ಸ್ಮಾರ್ತರಿಗೆ ಒಂದು ಪಂಕ್ತಿ, ವೈಷ್ಣವರಿಗೆ ಇನ್ನೊಂದು ಪಂಕ್ತಿ, ಮಾಧ್ವರಿಗೆ ಮತ್ತೊಂದು ಪಂಕ್ತಿ, ಅಯ್ಯಂಗಾರರಿಗೆ ಮಗದೊಂದು ಪಂಕ್ತಿ ಅಂತ ಬೇರೆಬೇರೆ ಪಂಕ್ತಿ ಇಲ್ಲ. ಬ್ರಾಹ್ಮಣರ ಪಂಕ್ತಿ ಎಂದರೆ ಎಲ್ಲರೂ ಸೇರಿರುತ್ತಾರೆ. ಆದರೆ ಅನ್ಯ ಸಮುದಾಯದವರು ಹಾಗಲ್ಲ, ತಮ್ಮವರ ಕಾರ್ಯಕ್ರಮಕ್ಕೆ ತಮಗಿಂತ ಕೆಳ ಜಾತಿಯವರು ಬಂದರೆ ಅವರಿಗೆ ಬೇರೆಯೇ ಊಟದ ಪಂಕ್ತಿಯನ್ನು ಹಾಕುವುದು. ಇನ್ನು, ದೇವಸ್ಥಾನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಅನ್ಯ ಸಮುದಾಯದ ಬೇರೆಬೇರೆ ಜಾತಿಯವರಿಗೆ ಬೇರೆಬೇರೆ ಊಟದ ಪಂಕ್ತಿ ಇರುವುದಿಲ್ಲ. ಬ್ರಾಹ್ಮಣರದ್ದೇ ಒಂದು ಊಟದ ಪಂಕ್ತಿ, ಹಾಗೂ ಅನ್ಯ ಸಮುದಾಯದ ಎಲ್ಲರಿಗೂ ಒಟ್ಟಾಗಿ ಒಂದು ಊಟದ ಪಂಕ್ತಿ ಇರುತ್ತದೆ. ಅಲ್ಲಿ ಮಾತ್ರ ತಮಗಿಂತ ಕೆಳಜಾತಿಯವರು ತಮ್ಮ ಜೊತೆ ಕುಳಿತುಕೊಳ್ಳುವುದು ಬೇಡವೆಂದು ಯಾವ ಅನ್ಯ ಸಮುದಾಯದವರೂ ಹೇಳುವುದಿಲ್ಲ. ಹೋಗಲಿ ಬಿಡಿ. ಈಗ ಹೆಚ್ಚಿನವರ ಪ್ರಶ್ನೆ "ದೇವಸ್ಥಾನಗಳಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ಪಂಕ್ತಿ ಏಕೆ?" ಎನ್ನುವುದಾಗಿ. ಬ್ರಾಹ್ಮಣ್ಯದ ಬಗ್ಗೆ ಸಾಮಾನ್ಯ ತಿಳುವಳಿಕೆ ಇರುವ ಯಾವ ಅನ್ಯ ಸಮುದಾಯದವರೂ ಇಂತಹ ಪ್ರಶ್ನೆ ಕೇಳುವುದಿಲ್ಲ. ಆದರೆ ಭಯೋತ್ಪಾದನೆ ಮಾಡುವ ಮೊಘಲ್ ಸಂತಾನಗಳ ಹಾಗೂ ಮತಾಂತರ ಮಾಡುವ ಬ್ರಿಟಿಷ್ ಸಂತಾನಗಳ ಕುಮ್ಮಕ್ಕಿನಿಂದಲೇ ಅಧಿಕಾರ ಪಡೆದು 'ಒಡೆದು ಆಳುವ ನೀತಿ' ಅನುಸರಿಸುವ ಕಾಂಗ್ರೆಸ್ ಮುಂತಾದ ಪಕ್ಷದ ರಾಜಕಾರಣಿಗಳ ಅವಿವೇಕದ ಮಾತುಗಳಿಗೆ ಸೊಪ್ಪು ಹಾಕುವ ಕೆಲವು ಅನ್ಯ ಸಮುದಾಯದವರಲ್ಲಿ ಮಾತ್ರ ಇಂತಹ ಪ್ರಶ್ನೆಗಳು ಮೂಡುವುದು. ಸಾಮಾಜಿಕ ಜಾಲತಾಣಗಳಲ್ಲಿ ಅನ್ಯ ಸಮುದಾಯದವರ ಇಂತಹ ಪ್ರಶ್ನೆಗಳಿಗೆ ಯಾವ ಬ್ರಾಹ್ಮಣರೂ ಸರಿಯಾಗಿ ಉತ್ತರ ಕೊಡುವುದಿಲ್ಲ. ಬ್ರಾಹ್ಮಣರು ಉತ್ತರಿಸದಿರುವುದಕ್ಕೆ ಅನೇಕ ಕಾರಣಗಳಿವೆ- ಅನ್ಯ ಸಮುದಾಯದ ಹೆಚ್ಚಿನವರು ಚರ್ಚೆ ಮಾಡುವಾಗ ಸಭ್ಯತೆಯ ಮಾರ್ಗವನ್ನು ಬಿಟ್ಟು ಅಸಹ್ಯ ಹಾಗೂ ಅಶ್ಲೀಲ ಮಾತುಗಳನ್ನಾಡುತ್ತಾರೆ. ಹಾಗಾಗಿ 'ಅಲ್ಪರ ಸಂಗ ಅಭಿಮಾನ ಭಂಗ' ಎಂದು ಬಗೆದು ಅನ್ಯ ಸಮುದಾಯದವರೊಂದಿಗೆ ಚರ್ಚಿಸಲು ಬ್ರಾಹ್ಮಣರು ಇಚ್ಛಿಸುವುದಿಲ್ಲ. ಅತ್ಯಂತ ಅಲ್ಪಸಂಖ್ಯಾತರಾಗಿರುವ ಬ್ರಾಹ್ಮಣರ ವೋಟ್ ಬ್ಯಾಂಕಿಂಗ್ ಯಾವುದೇ ರಾಜಕಾರಣಿಗಳಿಗೂ ಬೇಡವಾದ್ದರಿಂದ ಬ್ರಾಹ್ಮಣರಿಗೆ ಯಾವುದೇ ಸಮಸ್ಯೆಗಳಾದರೂ ಯಾವುದೇ ರಾಜಕೀಯ ಪಕ್ಷದವರೂ ಬರುವುದಿಲ್ಲ, ಧಾರ್ಮಿಕ ಮುಖಂಡರೂ ಬರುವುದಿಲ್ಲ. ಈ ಕಾರಣದಿಂದಲೂ ಬ್ರಾಹ್ಮಣರು ತಮಗೆ ಅನ್ಯಾಯವಾದರೂ ಸುಮ್ಮನಿರುವುದಿದೆ. ತಮ್ಮವರು ತೀರಾ ಅಲ್ಪಸಂಖ್ಯಾತರಾದ್ದರಿಂದ ಬದುಕಲು ಅನ್ಯ ಸಮುದಾಯದವರನ್ನೇ ಅವಲಂಬಿಸಿರುವ ಕಾರಣ ಬಾಯಿ ಬಿಟ್ಟು ಮಾತನಾಡಲಾಗದು ಎನ್ನುವುದು ಇನ್ನೂ ಕೆಲವು ಬ್ರಾಹ್ಮಣರ ಅಭಿಪ್ರಾಯ. ಜಗತ್ತಿನಲ್ಲಿ ಯಾವುದೇ ವ್ಯಕ್ತಿಯೂ ತನ್ನ ಸಮುದಾಯದವರಲ್ಲಿ ಮಾತ್ರ ತನ್ನ ಬೇಕು-ಬೇಡಗಳನ್ನು ಪೂರೈಸಿಕೊಳ್ಳುವುದಿಲ್ಲ. ಎಲ್ಲರಿಗೂ ಎಲ್ಲರೂ ಸಂದರ್ಭಾನುಸಾರ ಅವಶ್ಯರಾಗುತ್ತಾರೆ. ಹಾಗಾಗಿ ಬ್ರಾಹ್ಮಣರು ತಮ್ಮನ್ನು ತಾವೇ ಅವಲಂಬಿತರು ಎಂದು ತಿಳಿದುಕೊಳ್ಳಬೇಕಾಗಿಲ್ಲ. ಪ್ರತ್ಯೇಕ ಊಟದ ಪಂಕ್ತಿಯ ಟೀಕೆಗಳಿಗೆ ಕೆಲವು ಬ್ರಾಹ್ಮಣರು ಉತ್ತರಿಸುವುದು ಈ ರೀತಿ ಭಿನ್ನಭಿನ್ನವಾಗಿ ಇರುತ್ತದೆ- "ನಿಮಗೆ ಬ್ರಾಹ್ಮಣರೊಂದಿಗೇ ಕೂತು ಊಟ ಮಾಡಬೇಕೆಂದೇನು?" "ಬ್ರಾಹ್ಮಣರು ನಿಮ್ಮನ್ನು ಊಟದ ಪಂಕ್ತಿಯಲ್ಲಿ ಸೇರಿಸಿಕೊಳ್ಳದಿದ್ದರೆ ನೀವೂ ಅವರನ್ನು ನಿಮ್ಮ ಊಟದ ಪಂಕ್ತಿಯಲ್ಲಿ ಸೇರಿಸಿಕೊಳ್ಳಬೇಡಿ" ಈ ರೀತಿ. ಆದರೆ ಇವು ಹಾರಿಕೆಯ ಉತ್ತರಗಳೇ ಹೊರತು, ಯಾವುವೂ ಸಮರ್ಪಕ ಉತ್ತರಗಳಲ್ಲ. ತಮಗೆ ಊಟದ ಮುಂಚೆ ಪರಿಶಿಂಚನೆ (ಸುತ್ತುಗಟ್ಟುವುದು) ಮುಂತಾದ ಕೆಲವು ಕ್ರಮಗಳಿರುತ್ತವೆ ಎನ್ನುವುದು ಇನ್ನೂ ಕೆಲವು ಬ್ರಾಹ್ಮಣರು ನೀಡುವ ಉತ್ತರ. ಈ ಉತ್ತರ ಸತ್ಯವಾದರೂ ಪರಿಪೂರ್ಣವಲ್ಲ. ಹಾಗಾದರೆ ಯಾವ ಬ್ರಾಹ್ಮಣರೂ ಪರಿಪೂರ್ಣ ಉತ್ತರ ನೀಡುವುದಿಲ್ಲ ಏಕೆ ಗೊತ್ತೇ? ಮೇಲೆ ತಿಳಿಸಿದ ಕೆಲವು ಕಾರಣಗಳಿಗಾಗಿ. ಹಾಗೂ ಈಗಾಗಲೇ ಹಿಂದೂ ಸಮಾಜ ಒಡೆದು ಹೋಗಿದೆ. ತಮ್ಮ ಸತ್ಯ ಮಾತಿನಿಂದ ಇನ್ನಷ್ಟು ಒಡೆದು ಹೋಗಬಾರದು ಎನ್ನುವ ಕಳಕಳಿಯಿಂದ. ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ಪಂಕ್ತಿ ಇರಲು ಬಹುಮುಖ್ಯ ಕಾರಣವೆಂದರೆ ಅನ್ಯ ಸಮುದಾಯದವರಲ್ಲಿ ಇರುವ ಸ್ವಚ್ಛತೆಯ ಮತ್ತು ಸಂಸ್ಕಾರಗಳ ಕೊರತೆ. ಬ್ರಾಹ್ಮಣರು ಊಟಕ್ಕೆ ಮುನ್ನ ಪರಿಶಿಂಚನೆ ಮಾಡಿ 'ಗೋವಿಂದ' ಅಥವಾ 'ಹರಹರ ಮಹಾದೇವ' ಹೇಳಿದ ಬಳಿಕ ಎಲ್ಲರೂ ಒಟ್ಟಾಗಿ ಊಟ ಪ್ರಾರಂಭಿಸುವ ಕ್ರಮ. ಆದರೆ ಅನ್ಯ ಸಮುದಾಯದವರಿಗೆ ಅದೆಲ್ಲಾ ಮಾಡಲು ತಾಳ್ಮೆ ಇರುತ್ತದೆಯೇ? ಬಹುತೇಕ ಮಂದಿಗೆ ಇರುವುದಿಲ್ಲ. ಅಷ್ಟುಮಾತ್ರವಲ್ಲ, ಪರಿಶಿಂಚನೆ ಮಾತ್ರವಾದರೆ ಅದನ್ನು ಅನ್ಯ ಸಮುದಾಯದವರೂ ಕಲಿತುಕೊಳ್ಳಬಹುದು ಎಂದುಕೊಳ್ಳೋಣ. ಆದರೆ ಅದಕ್ಕಿಂತಲೂ ಗಂಭೀರವೆಂದರೆ ಕೆಲವು ಅಸಹ್ಯವೆನಿಸುವ ಅಸಂಸ್ಕಾರಗಳು. ಈ ಅಸಂಸ್ಕಾರಗಳಿಗೆ ಕೆಲವು ಉದಾಹರಣೆಗಳನ್ನು ಕೊಡುತ್ತೇನೆ- ಅನ್ನ ಹಾಕುವ ಮುಂಚೆಯೇ ಎಲೆಯಲ್ಲಿರುವ ಉಪ್ಪಿನಕಾಯಿ ನೆಕ್ಕುವುದು, ಹಪ್ಪಳ ಮುಂತಾದವನ್ನು ತಿನ್ನುವಾಗ ಎರಡೂ ಕೈಗಳನ್ನು ಬಳಸುವುದು (ಕೆಲವರು ಅದೇ ಎಂಜಲು ಕೈಯಿಂದ ಪಕ್ಕದವರನ್ನು ಮುಟ್ಟಿ ಮಾತಾಡಿಸುವುದು), ಊಟ ಮಾಡುವಾಗ ಪಚ್ಕ ಪಚ್ಕ ಅಂತ ಶಬ್ದ ಮಾಡಿ ಜಗಿಯುವುದು, ಅನ್ನದ ಅಗುಳುಗಳನ್ನು ಎಲೆಯ ಆಸುಪಾಸಿನಲ್ಲಿ ಚೆಲ್ಲುವುದು, ಲಾಡು ಬಡಿಸುವಾಗ ಎಲೆಯಲ್ಲಿ ಹಾಕಿಸಿಕೊಳ್ಳುವ ಬದಲು ಕೈಯಲ್ಲಿ ಹಿಡಿಯುವುದು, ಸಾಂಬಾರಲ್ಲಿರುವ ಹೋಳಿನ ಸಿಪ್ಪೆಯನ್ನು ಕಚ್ಚಿ ತೆಗೆದು ಥುಪುಕ್ ಅಂತ ಎಲೆಯ ಬದಿಗೆ ಉಗುಳುವುದು, ಪಾಯಸ ಕುಡಿಯುವಾಗ ಸುರ್ ಸುರ್ಕ್ ಅಂತ ವಿಪರೀತ ಶಬ್ದ ಮಾಡಿ ಪಕ್ಕದವರಿಗೆ ಅಸಹ್ಯ ಹುಟ್ಟಿಸುವುದು, ಊಟದ ಸಮಯದಲ್ಲಿ ಬೇಡದಿದ್ದುದನ್ನು ಮಾತಾಡುವುದು ಇತ್ಯಾದಿ ಇತ್ಯಾದಿ. ನಾನು ವಿದ್ಯಾರ್ಥಿಯಾಗಿದ್ದಾಗ ಕಾಲೇಜು ರಜಾದಿನಗಳಲ್ಲಿ ಕಾರ್ಯಕ್ರಮಗಳ ಅಡುಗೆಗೆ ಸಹಾಯಕನಾಗಿ ಹಾಗೂ ಬಡಿಸಲು ಹೋಗುತ್ತಿದ್ದೆ. ಇವತ್ತು ಶಿಕ್ಷಣ ಅದೆಷ್ಟೇ ಸಾರ್ವತ್ರಿಕವಾದರೂ, ಅಲ್ಲಿ ನೆರೆದವರು ಊಟ ಮಾಡುವಾಗಲೇ ನಮಗೆ ಬ್ರಾಹ್ಮಣರು ಯಾರು, ಅನ್ಯ ಸಮುದಾಯದವರು ಯಾರೆಂದು ತಿಳಿಯುತ್ತಿತ್ತು. ಅನ್ಯ ಸಮುದಾಯದವರಿಗೂ ಬ್ರಾಹ್ಮಣರು ಸಂಸ್ಕಾರಗಳನ್ನು ಕಲಿಸಬಹುದಲ್ಲವೇ ಎಂದು ಕೆಲವರು ಕೇಳಬಹುದು. ಆದರೆ ಈಗಿನ ಕಾಲವಿದ್ಯಮಾನದಲ್ಲಿ ಅದು ಬಹುತೇಕ ಮಟ್ಟಿಗೆ ಅಸಾಧ್ಯವೆಂದೇ ಹೇಳಬಹುದು. ಏಕೆಂದರೆ ಬೆಳಿಗ್ಗೆ ಎದ್ದು ಶ್ಲೋಕ ಹೇಳಬೇಕು ಎನ್ನುವ ವಿಚಾರ ಎತ್ತಿದರೆ 'ಸಂಸ್ಕೃತ ಬ್ರಾಹ್ಮಣರ ಭಾಷೆ' ಎಂದಾಗುತ್ತದೆ, ಭಗವದ್ಗೀತೆ ಓದಿ ಎಂದರೆ 'ಕೋಮುವಾದ' ಎಂದೆನಿಸುತ್ತದೆ, ಸಾರ್ವತ್ರಿಕವಾಗಿರುವ ಹಿಂದಿಯನ್ನೂ ಸ್ವಲ್ಪ ಕಲಿಯಿರಿ ಎಂದರೆ 'ಹಿಂದಿ ಹೇರಿಕೆ' ಎಂದಾಗುತ್ತದೆ. ಹೀಗಿರುವಾಗ ಬ್ರಾಹ್ಮಣರು ಅನ್ಯ ಸಮುದಾಯದವರಿಗೆ ಭೋಜನ ಸಂಸ್ಕಾರಗಳನ್ನು ಕಲಿಸುವುದೆಂದರೆ 'ಜಂಗಮದ ರಸದೊಳಗೆ ಇಂಗಳೀಕವನ್ನರೆದು ತೆಂಗಿನ ರಸದಲ್ಲಿ ಪುಟವಿಡಲು ಬಂಗಾರವಕ್ಕುವುದೇ?' ಎಂದ ಸರ್ವಜ್ಞನ ವಚನದಂತೆಯೇ ಸರಿ. ಸಂಸ್ಕಾರಗಳು ಕಲಿಯುವಿಕೆಯಿಂದ ಬರುತ್ತವೆಯಾದರೂ, ಅವುಗಳನ್ನು ಕಲಿಯಲು ಬೇಕಾದ ಚಿತ್ತ ಬರುವುದು ಜನ್ಮದಿಂದ. "ಧರಮ್ ಕರಮ್" ಎನ್ನುವ ಹಿಂದಿ ಚಲನಚಿತ್ರವನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಆ ಚಿತ್ರದ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತೇನೆ- ಒಬ್ಬ ಸಂಗೀತ ವಿದ್ವಾಂಸ ಮತ್ತು ಒಬ್ಬ ಕಳ್ಳನ ನಡುವೆ ಚರ್ಚೆ ನಡೆಯುತ್ತದೆ. ಮಕ್ಕಳು ತಂದೆತಾಯಿಯಂತೆ ಆಗುತ್ತಾರೆ ಎನ್ನುವುದು ಒಬ್ಬನ ವಾದವಾದರೆ, ಮಕ್ಕಳು ಕಲಿಸಿದಂತಾಗುತ್ತಾರೆ ಎನ್ನುವುದು ಮತ್ತೊಬ್ಬನ ವಾದ. ಪರೀಕ್ಷಿಸೋಣ ಅಂತ ಇಬ್ಬರೂ ತಮ್ಮ ತಮ್ಮ ಮಕ್ಕಳನ್ನು ಅದಲು-ಬದಲು ಮಾಡಿಕೊಳ್ಳುತ್ತಾರೆ. ಸಂಗೀತಗಾರ ಬುದ್ಧಿ ಹೇಳಿ ಸಾಕಿದ ಕಳ್ಳನ ಮಗ ಕಳ್ಳನೇ ಆಗುತ್ತಾನೆ, ಕಳ್ಳ ಸಾಕಿದ ಸಂಗೀತಗಾರನ ಮಗನಿಗೆ ಅದೆಷ್ಟೇ ತಾನು ಕಳ್ಳತನ ಹೇಳಿಕೊಟ್ಟರೂ ಆತ ಒಳ್ಳೆಯವನಾಗಿಯೇ ಬದುಕುತ್ತಾನೆ. ಇದು ಬರೇ ಕತೆಯಲ್ಲ, ವಾಸ್ತವ ಕೂಡಾ. ರಾವಣ ತನ್ನ ಬ್ರಾಹ್ಮಣ ತಂದೆಯ ಜೀವತಂತುಗಳ ಪ್ರಭಾವದಿಂದ ಸಂಧ್ಯಾವಂದನೆ ಹಾಗೂ ಪೂಜಾಕಾರ್ಯದಲ್ಲಿ ಬಹಳ ನಿಷ್ಠಾವಂತನಾಗಿರುತ್ತಾನೆ, ಆದರೆ ತನ್ನ ರಕ್ಕಸಿ ತಾಯಿಯ ತೀವತಂತುಗಳ ಪ್ರಭಾವದಿಂದಾಗಿ ಅತ್ಯಂತ ಅಹಂಕಾರಿಯೂ ಕ್ರೂರಿಯೂ ಆಗಿರುತ್ತಾನೆ. ಇತ್ತೀಚೆಗೆ ಬ್ರಾಹ್ಮಣರಲ್ಲಿ ಅಂತರ್ಜಾತಿ ವಿವಾಹಗಳು ಹಾಗೂ ಅನಾಥಾಶ್ರಮ ಕನ್ಯೆಯರೊಂದಿಗೆ ವಿವಾಹಗಳು ಸಾಮಾನ್ಯ. ಇದು ಬ್ರಾಹ್ಮಣರು ಉದ್ದೇಶಪೂರ್ವಕವಾಗಿ ಆಗುವಂಥದ್ದಲ್ಲ, ತೀರಾ ಅನಿವಾರ್ಯತೆಯಿಂದ ಅಷ್ಟೆ. ಈ ಸಮಾಜ ಪಿತೃಪ್ರಧಾನವಾದ್ದರಿಂದ ಬ್ರಾಹ್ಮಣರ ಹೆಂಡತಿಯರೂ ಬ್ರಾಹ್ಮಣರೇ ಆಗುತ್ತಾರೆ ಎನ್ನೋಣ. ಆದರೆ ಅವರು ಬ್ರಾಹ್ಮಣರ ಸಹಪಂಕ್ತಿಯಲ್ಲಿ ಊಟಕ್ಕೆ ಕುಳಿತುಕೊಳ್ಳುವಾಗ ನಮಗೆ ಮುಜುಗರ ಎನಿಸುತ್ತದೆ. ಕಾರಣ, ಅವರು ಮೂಲತಃ ಬ್ರಾಹ್ಮಣರಲ್ಲವಾದ ಕಾರಣ ಅವರಲ್ಲಿ ಸಂಸ್ಕಾರಗಳ ಕೊರತೆ ಇರುತ್ತದೆ. ಇನ್ನು ಅನ್ಯಸಮುದಾಯದವರನ್ನೋ ಅಥವಾ ಅನಾಥಾಶ್ರಮದವರನ್ನೋ ಮದುವೆಯಾದ ಬ್ರಾಹ್ಮಣರ ಕೆಲವು ಮಕ್ಕಳಿಗೂ ಕೂಡಾ ತಮ್ಮ ತಂದೆಯ ಸಂಸ್ಕಾರ ಇರುವುದಿಲ್ಲ. ಅಂತಹ ಮಕ್ಕಳೂ ಬ್ರಾಹ್ಮಣರ ಪಂಕ್ತಿಯಲ್ಲಿ ಕುಳಿತುಕೊಳ್ಳುವಾಗ ಕೆಲವು ಬ್ರಾಹ್ಮಣರು ಸಹಜವಾಗಿ ದೂರ ಸರಿಯುವುದಿದೆ. ಆದರೆ ಅನ್ಯರನ್ನು ಮದುವೆಯಾದ ಬ್ರಾಹ್ಮಣ ಯುವಕರ ಹೆಂಡತಿ ಮಕ್ಕಳು ಜೀವನಪರ್ಯಂತ ತಮ್ಮ ಜೊತೆಗೇ ಇರುವುದರಿಂದ ಪೂರ್ಣವಲ್ಲದಿದ್ದರೂ, ಬಹುತೇಕ ಮಟ್ಟಿಗೆ ಬ್ರಾಹ್ಮಣ್ಯದ ಸಂಸ್ಕಾರಗಳನ್ನು ಕ್ರಮೇಣವಾದರೂ ಕಲಿತುಕೊಳ್ಳುವಂತೆ ಉಳಿದವರು ಕಲಿತುಕೊಳ್ಳಲು ಕಷ್ಟಸಾಧ್ಯ. ಹಾಗಾಗಿಯೇ ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಇರುವುದು. ಬ್ರಾಹ್ಮಣರ ಪ್ರತ್ಯೇಕ ಪಂಕ್ತಿಯ ಬಗ್ಗೆ ಅನ್ಯ ಸಮುದಾಯದವರು ಟೀಕಿಸುವುದು ಬ್ರಾಹ್ಮಣರ ಆಡಳಿತವಿರುವ ದೇವಸ್ಥಾನಗಳ ವಿಚಾರದಲ್ಲಿ. ಅಂದರೆ ಉದ್ದೇಶ ಪ್ರತ್ಯೇಕ ಪಂಕ್ತಿಯ ವಿಚಾರವಲ್ಲ; ಬ್ರಾಹ್ಮಣರ ಮೇಲಿನ ದ್ವೇಷವೇ ಆಗಿರುತ್ತದೆ. ಬ್ರಾಹ್ಮಣ್ಯದ ಬಗ್ಗೆ ತಿಳಿದಿರುವ ಅನ್ಯ ಸಮುದಾಯದವರ ಆಡಳಿತವಿರುವ ಕೆಲವು ದೇವಸ್ಥಾನಗಳಲ್ಲೂ ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಇರುತ್ತದೆ. ಆದರೆ ಆ ದೇವಸ್ಥಾನಗಳ ಬಗ್ಗೆ ಯಾವ ಅನ್ಯ ಸಮುದಾಯದವರೂ ಒಂದು ಶಬ್ದವನ್ನೂ ಎತ್ತುವುದಿಲ್ಲ. ಏಕೆಂದರೆ ಅನ್ಯ ಸಮುದಾಯದವರ ಆಡಳಿತವಿರುವ ದೇವಸ್ಥಾನಗಳ ಬಗ್ಗೆ 'ಬುರುಡೆ' ಬಿಟ್ಟರೆ ಏನಾಗುತ್ತದೆ ಎನ್ನುವುದು ಈಗಾಗಲೇ ಕೆಲವರಿಗೆ ಚೆನ್ನಾಗಿ ತಿಳಿದಿದೆ. ಕೆಲವೊಮ್ಮೆ ಅನ್ಯ ಸಮುದಾಯದವರು ಪ್ರತ್ಯೇಕ ಪಂಕ್ತಿಯ ವಿಚಾರ ಎತ್ತುವುದಕ್ಕೆ ಬ್ರಾಹ್ಮಣರೇ ಕಾರಣೀಕರ್ತರಾಗಿರುತ್ತಾರೆ ಕೂಡಾ. ಇದಕ್ಕೆ ನಮ್ಮವರದ್ದೇ ಉದಾಹರಣೆ ಕೊಡುತ್ತೇನೆ. ನಮ್ಮವರದ್ದೇ ದೇವಸ್ಥಾನಕ್ಕೆ ಅನ್ಯಸಮುದಾಯದ ಶ್ರೀಮಂತನೊಬ್ಬ ಎಷ್ಟೋ ಲಕ್ಷ ದುಡ್ಡು ಕೊಟ್ಟ ಅಂತ ಆತನನ್ನೂ, ಆತನ ಪರಿವಾರದವರನ್ನೂ ಬ್ರಾಹ್ಮಣರ ಪಂಕ್ತಿಯಲ್ಲಿಯೇ ಊಟಕ್ಕೆ ಕೂರಿಸಲಾಯಿತು. ಅದೇ ಅನ್ಯ ಸಮುದಾಯದ ಫೋಟೋ ಗ್ರಾಫ಼ರ್ ಒಬ್ಬನನ್ನು ಬ್ರಾಹ್ಮಣ ಋತ್ವಿಜರ ಯಜ್ಞಮಂಟಪದ ಒಳಗೂ ಬಿಡಲಾಯಿತು. ಇದನ್ನು ಕೆಲವರು ಖಂಡಿಸಿದ್ದರೂ, ಖಂಡಿಸಿದವರು ಬಡವರ್ಗದವರಾದ್ದರಿಂದ ಅವರ ಮಾತಿಗೆ ಬೆಲೆ ಇಲ್ಲದಂತಾಯಿತು. ಅಷ್ಟುಮಾತ್ರವಲ್ಲ, "ಅವರೂ ಜನಿವಾರದವರು" ಎನ್ನುವ ಹಾರಿಕೆಯ ಉತ್ತರ ನಮ್ಮವರಿಂದ ಬಂತು. ಇತ್ತೀಚೆಗೆ ಬ್ರಾಹ್ಮಣರಲ್ಲದ ಕೆಲವರು ಜನಿವಾರವನ್ನೂ ಹಾಕಿಕೊಳ್ಳುತ್ತಾರೆ, ತಮ್ಮ ಜಾತಿಯ ಎದುರು 'ಬ್ರಾಹ್ಮಣ' ಎನ್ನುವ ಶಬ್ದವನ್ನೂ ಸೇರಿಸಿಕೊಳ್ಳುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ಬ್ರಾಹ್ಮಣರಾಗಲು ಸಾಧ್ಯವಿಲ್ಲ. ಆದರೆ ಇಂತಹ ಒಬ್ಬಿಬ್ಬರನ್ನು ನಮ್ಮವರು ತಮ್ಮ ಸಹಪಂಕ್ತಿಯಲ್ಲಿ ಕೂರಿಸಿಕೊಂಡರೆ "ನಾವೂ ಏಕೆ ನಿಮ್ಮೊಡನೆ ಕುಳಿತುಕೊಳ್ಳಬಾರದು?" ಎಂದೋ, "ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಏಕೆ?" ಎಂದೋ ಅನ್ಯ ಸಮುದಾಯದವರು ಕೇಳುವುದರಲ್ಲಿ ತಪ್ಪಿಲ್ಲ. ನಮ್ಮವರು ಕೆಲವರು ಮಾಡುವ ತಪ್ಪಿಗೆ ಇಡೀ ಬ್ರಾಹ್ಮಣ ಸಮುದಾಯವೇ ತಲೆ ತಗ್ಗಿಸುವ ರೀತಿ ಆಗುತ್ತದೆ. ಇದು ಆಗಬಾರದು ಎಂದಾದರೆ ಬ್ರಾಹ್ಮಣರು ಹೇಗಿರಬೇಕೋ ಹಾಗೆಯೇ ಇರಬೇಕು. ಇತ್ತೀಚೆಗೆ ಬ್ರಾಹ್ಮಣರೂ ಕೆಲವರು ಆಧುನಿಕತೆಯ ಗುಂಗಿನಲ್ಲಿ ತಮ್ಮ ಸಂಸ್ಕಾರಗಳನ್ನು ಮರೆತಿರುವುದು ದೊಡ್ಡ ದುರಂತ. ಬ್ರಾಹ್ಮಣರ ಊಟದ ಪಂಕ್ತಿಯಲ್ಲಿ ಕೆಲವು ಬ್ರಾಹ್ಮಣರೇ ಎಡ ಕೈಯಲ್ಲಿ ಲಾಡು ತೆಗೆದುಕೊಳ್ಳುವುದು, ತನಗೆ ಬೇಡದಿದ್ದ ಉಪ್ಪಿನಕಾಯಿಯನ್ನೋ ಅಥವಾ ಚಟ್ನಿಯನ್ನೋ ತನ್ನ ಎಲೆಯಿಂದ ಎತ್ತಿ ಪಕ್ಕದವನ ಎಲೆಗೆ ಹಾಕುವುದು, ವಿಪರೀತ ಮಾತಾಡುವುದು, ಬಾಳೆಹಣ್ಣನ್ನು ಹಿಡಿದ ಕೈಯಿಂದಲೇ ಕಚ್ಚಿ ತಿನ್ನುವುದು ಮುಂತಾದ ದುರಭ್ಯಾಸಗಳನ್ನು ಕಲಿತಿದ್ದಾರೆ. ಬ್ರಾಹ್ಮಣರು ಹೊಟೇಲ್ ಗಳಿಗೆ ಹೋಗುತ್ತಾರೆಂದು ಬ್ರಾಹ್ಮಣರನ್ನು ಅನ್ಯ ಸಮುದಾಯದವರು ಟೀಕಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಹಿಂದಿನ ಕಾಲದಲ್ಲಿದ್ದಂತೆ 'ಜಾತಿಗೊಂದು ವೃತ್ತಿ' ವ್ಯವಸ್ಥೆ ಈಗಿನ ಕಾಲದಲ್ಲಿಲ್ಲ. ಈಗಿನ ವ್ಯಾವಹಾರಿಕ ಯುಗದಲ್ಲಿ ಕೆಲವು ವೃತ್ತಿಯವರಿಗೆ ಹೊಟೇಲ್ ಹೋಗುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಆ ವಿಚಾರದ ಟೀಕೆ ಸರಿಯಲ್ಲ. ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ ಭೂಕಂಪವಾಗಿದ್ದಾಗ ಕಟ್ಟಡಗಳ ಅಡಿಗೆ ಸಿಲುಕಿಕೊಂಡಿದ್ದವರು ತಮ್ಮ ತಮ್ಮ ಮೂತ್ರವನ್ನೇ ಕುಡಿದು ಜೀವ ಉಳಿಸಿಕೊಂಡದ್ದಿದೆ. ಹಾಗಂತ ಮೂತ್ರಪಾನವನ್ನೇ ದಿನನಿತ್ಯದ ಅಭ್ಯಾಸವಾಗಿಸುವುದಲ್ಲ. ಅಂತೆಯೇ ಅನಿವಾರ್ಯತೆ ಇಲ್ಲದ ಬ್ರಾಹ್ಮಣರು ಹೊಟೇಲ್ ಗಳಲ್ಲಿ ತಿನ್ನುವುದು ಸರಿಯಲ್ಲ. ಅಷ್ಟುಮಾತ್ರವಲ್ಲ, ಕೇವಲ ಬ್ರಾಹ್ಮಣರೆಂದಲ್ಲ, ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಹೊಟೇಲ್ ಊಟಕ್ಕಿಂತ ಮನೆಯ ಊಟ ಸೇವಿಸುವುದೇ ಉತ್ತಮ. ನಮ್ಮೂರಿನಲ್ಲಿ ಯಕ್ಷಗಾನಗಳಾಗುವಾಗ ನಮ್ಮವರೇ ಕೆಲವರು ರಸ್ತೆ ಬದಿಯಲ್ಲಿ ನಿಂತುಕೊಂಡು ಅನ್ಯರೊಂದಿಗೆ ಹಾಳುಮೂಳು ತಿನ್ನುವುದಿದೆ. ಬ್ರಾಹ್ಮಣರ ಹೊಟ್ಟೆಗೆ ಇಷ್ಟೊಂದು ಬರಗಾಲ ಬರಬಾರದು. ಇಂದು ಕೆಲವು ಬ್ರಾಹ್ಮಣರು ಮೂಲತಃ ಅಲ್ಲದಿದ್ದರೂ ಸಹವಾಸ ದೋಷದಿಂದ ತಮ್ಮತನ ಮರೆತಿದ್ದಾರೆ. ಮಹಾವಿಷ್ಣು ತನ್ನ ವರಾಹಾವತಾರದಲ್ಲಿ ರಕ್ಕಸರನ್ನೆಲ್ಲಾ ಸಂಹಾರ ಮಾಡಿದ ಬಳಿಕ ಸಹವಾಸ ದೋಷದಿಂದ ಹಂದಿಗಳೊಂದಿಗೆ ಕೆಸರಿನಲ್ಲಿ ಹೊರಳಾಡುತ್ತಿರುತ್ತಾನೆ. ಆಗ ಶಿವಪಾರ್ವತಿಯರು ಬಂದು ಆತನಿಗೆ ಬುದ್ಧಿ ಹೇಳಿ ಆತ ಪುನಃ ಮಹಾವಿಷ್ಣುವಿನ ರೂಪಕ್ಕೆ ಬರುವಂತೆ ಮಾಡುತ್ತಾರೆ. ದೇವರೇ ಸಹವಾಸ ದೋಷಕ್ಕೆ ಒಳಗಾಗಿರುವಾಗ ಬ್ರಾಹ್ಮಣರು ಸಹವಾಸ ದೋಷಕ್ಕೆ ತುತ್ತಾಗಿರುವುದು ದೊಡ್ಡದಲ್ಲವೆಂದು ಹೇಳಿದರೂ, ಆ ದೇವರೇ ಬ್ರಾಹ್ಮಣರಿಗೆ ಸ್ವ-ಚಿಂತನೆ ಮಾಡುವ ಶಕ್ತಿಯನ್ನು ಕೊಟ್ಟಿದ್ದಾನೆ. ಹಾಗಾಗಿ ಬ್ರಾಹ್ಮಣರು ತಮ್ಮ ವಿವೇಕವನ್ನು ತಮ್ಮದೇ ಹಿಡಿತದಲ್ಲಿ ಇಟ್ಟುಕೊಂಡು ಹಾಗೂ ತಮ್ಮ ಇತಿಮಿತಿಗಳನ್ನು ಅರಿತುಕೊಂಡು ವ್ಯವಹರಿಸಬೇಕಿದೆ. ಅನ್ಯ ಸಮುದಾಯದವರಲ್ಲೂ ಬಹಳ ಉತ್ತಮ ಸಂಸ್ಕಾರವಿರುವ ಕೆಲವರನ್ನು ನಾನು ನೋಡಿದ್ದೇನೆ. ಅವರನ್ನು ನೋಡಿದಾಗ ಸಂಸ್ಕಾರವೆನ್ನುವುದು ಜಾತಿಯಿಂದ ಬರುವುದಲ್ಲ ಎಂದೆನಿಸಿದ್ದೂ ಇದೆ. ಉತ್ತಮ ಸಂಸ್ಕಾರವಂತರು ಅಂತ ಒಬ್ಬಿಬ್ಬರು ಅನ್ಯ ಸಮುದಾಯದವರನ್ನು ಬ್ರಾಹ್ಮಣರು ತಮ್ಮ ಜೊತೆಗೇ ಊಟಕ್ಕೆ ಕೂರಿಸಿಕೊಂಡರೆ ಉಳಿದವರು ಅದನ್ನೇ ಎತ್ತಿಕೊಂಡು ಮಾತಾಡಿ ಕೊನೆಗೆ ಸಂಘರ್ಷವೇ ಏರ್ಪಡುತ್ತದೆ. ಇದೇ ಕಾರಣಕ್ಕೋಸ್ಕರ ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಎಂದಿರುವುದೇ ಹೊರತು ಅನ್ಯ ಸಮುದಾಯದವರನ್ನು ಕೀಳಾಗಿ ಕಾಣಲು ಅಲ್ಲ. ಹಾಗಾಗಿ, ಊಟದ ವಿಷಯದಲ್ಲಿ ಬ್ರಾಹ್ಮಣರು ಅನ್ಯ ಸಮುದಾಯದವರನ್ನು ದೂರವಿರಿಸಿದ್ದಲ್ಲ; ತಮ್ಮ ಸಂಪ್ರದಾಯಗಳಿಗಾಗಿ ಬ್ರಾಹ್ಮಣರೇ ಉಳಿದವರಿಂದ ದೂರವಿರುವುದು. ತಿಳಿಯಿತಲ್ಲವೇ? ಕರಾವಳಿ ಜಿಲ್ಲೆಗಳಲ್ಲಿ ಭೂತಗಳ ಪರ್ವಕ್ಕೆ ಪಾತ್ರಿಗಳು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಹಾಗಂತ ಬ್ರಾಹ್ಮಣರು ಯಾರಾದರೂ ಟೀಕಿಸುತ್ತಾರೆಯೇ? ಇಲ್ಲವಲ್ಲ. ಪಾತ್ರಿಯ ವೇಷ ಹಾಕುವುದು ಆ ಸಮುದಾಯದ ಪದ್ಧತಿ, ನಾವದನ್ನು ಗೌರವಿಸುತ್ತೇವೆ. ಅದರಿಂದ ಸಮಾಜಕ್ಕೂ ಏನೂ ಅಪಾಯವಿಲ್ಲ. ದೀಪಾವಳಿಯ ಸಂದರ್ಭ ಒಂದು ನಿರ್ದಿಷ್ಟ ಸಮುದಾಯದವರು ಮನೆಮನೆಗೆ ಹೋಗಿ ಜನಪದ ಹಾಡುತ್ತಾ ನೃತ್ಯ ಮಾಡುತ್ತಾರೆ ಹಾಗೂ ತಮ್ಮ ದೇವಸ್ಥಾನಕ್ಕೆ ವಂತಿಗೆ ಪಡೆಯುತ್ತಾರೆ. ಅದನ್ನು ಯಾರಾದರೂ ಬ್ರಾಹ್ಮಣರು ಟೀಕಿಸುತ್ತಾರೆಯೇ? ಇಲ್ಲವಲ್ಲ. ಅದು ಆ ಸಮುದಾಯದವರ ಕಲೆ. ನಮ್ಮ ಕೈಯಲ್ಲಾದಷ್ಟು ವಂತಿಗೆ ಕೊಡುವುದು. ಅದರಿಂದಲೂ ಸಮಾಜಕ್ಕೇನೂ ಅಪಾಯವಿಲ್ಲ. ಅಂತೆಯೇ ಬ್ರಾಹ್ಮಣರ ಪ್ರತ್ಯೇಕ ಪಂಕ್ತಿಯಿಂದಲೂ ಸಮಾಜಕ್ಕೇನೂ ಅಪಾಯವಿಲ್ಲದಿರುವಾಗ 'ಒಡೆದು ಆಳುವ ನೀತಿ'ಯ ಕುಹಕಿಗಳ ಮಾತುಗಳನ್ನು ಕೇಳಿ ಬ್ರಾಹ್ಮಣರನ್ನು ನಿಂದಿಸುವುದು ಅಕ್ಷ್ಯಮ್ಯ ಅಪರಾಧ. ನಮ್ಮ ದೇಶದ ಕಾನೂನೇ ಹೇಳುತ್ತದೆ "ನೂರು ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು" ಅಂತ. ಅದೇ ರೀತಿ ಬ್ರಾಹ್ಮಣರ ವಿರುದ್ಧ ಕಿಡಿಕಾರುವ ಬಹುಸಂಖ್ಯಾತ ಅನ್ಯ ಸಮುದಾಯದವರಿಗೆ ಬೇಸರವಾದರೂ ಪರವಾಗಿಲ್ಲ, ಅತ್ಯಂತ ಅಲ್ಪಸಂಖ್ಯಾತರಾಗಿರುವ ಬ್ರಾಹ್ಮಣರಿಗೆ ಆರೋಪದ ಕಳಂಕ ಅಂಟಬಾರದು ಎನ್ನುವುದಕ್ಕೋಸ್ಕರ ಈ ಬರಹ ಬರೆದಿದ್ದೇನೆ. ನನಗೆ ಬಹಳ ಚೆನ್ನಾಗಿ ಗೊತ್ತಿದೆ ಈ ಬರಹವನ್ನು ಓದಿದ ಅನ್ಯ ಸಮುದಾಯದವರಲ್ಲಿ ನನ್ನನ್ನು ನಿಂದಿಸುವವರೇ ಜಾಸ್ತಿ ಅಂತ. ಆದರೆ ಪ್ರತ್ಯೇಕ ಪಂಕ್ತಿಯ ವಿಚಾರದಲ್ಲಿ ಸಮಸ್ತ ಬ್ರಾಹ್ಮಣರ ಮೇಲಿರುವ ವೃಥಾ ಆರೋಪಗಳನ್ನು ತೊಲಗಿಸಲು ನನ್ನಂಥವನೊಬ್ಬ ಬೈಸಿಕೊಂಡರೂ ಪರವಾಗಿಲ್ಲ, ಸಾತ್ವಿಕತೆಯ ಪ್ರತಿರೂಪವಾಗಿರುವ ಬ್ರಾಹ್ಮಣರ ರಕ್ಷೆಯಾಗಬೇಕು ಎಂದು ದೀಕ್ಷಾಬದ್ಧನಾಗಿಯೇ ಈ ಬರಹ ಬರೆದಿರುತ್ತೇನೆ. "ಹಿಂದವಃ ಸೋದರಃ ಸರ್ವೇ". ಪ್ರತಿಯೊಬ್ಬ ಹಿಂದೂಗಳೂ ಬಾಂಧವರಂತೆ ಬದುಕಬೇಕು. ಹಾಗಂತ ಒಂದೇ ತಟ್ಟೆಯಲ್ಲಿ ಊಟ ಮಾಡಬೇಕಾಗಿಲ್ಲ, ಒಂದೇ ಹಾಸಿಗೆಯಲ್ಲಿ ಮಲಗಬೇಕಾಗಿಲ್ಲ. ಬ್ರಿಟಿಷ್ ಸಂತಾನಗಳ ಮಿಶನರಿಗಳು ತಮ್ಮ ನರಿ ಬುದ್ಧಿಯಿಂದ ಹಿಂದೂಗಳನ್ನು ವಿಭಜಿಸಲು ಮಾಡಿದ ಅಸ್ತ್ರಗಳಲ್ಲಿ ಈ ಪ್ರತ್ಯೇಕ ಪಂಕ್ತಿಯ ವಿಚಾರವೂ ಒಂದು. ಆದರೆ ಅನ್ಯ ಸಮುದಾಯದವರಲ್ಲಿ ಹೆಚ್ಚಿನವರು ಅದನ್ನು ಅರ್ಥ ಮಾಡಿಕೊಳ್ಳದೇ ಬ್ರಾಹ್ಮಣರನ್ನೇ ಸದಾ ಟೀಕಿಸುವುದರಿಂದ ಹಿಂದುತ್ವಕ್ಕೋಸ್ಕರ ಅದೆಷ್ಟೇ ಆಪಾದನೆಗಳನ್ನು ಹೊತ್ತುಕೊಂಡು ಸುಮ್ಮನಿದ್ದರೂ ಕೆಲವೊಮ್ಮೆ "ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ" ಎನ್ನುವಂತೆ ತಾಳ್ಮೆಯ ಕಡಲು ಒಡೆಯುತ್ತದೆ. ಅದರ ಪ್ರತೀಕವೇ ಈ ಬರಹ. ಇನ್ನಾದರೂ ಯಾರೂ ಯಾವುದೇ ಮತದವರ ಮಾತಿಗೂ, ಯಾವುದೇ ರಾಜಕಾರಣಿಗಳ ಮಾತಿಗೂ ಕಿವಿಗೊಡಬಾರದು. ದೇಶದಲ್ಲಿ ಅದೆಷ್ಟೇ ಜಾತಿಗಳಿರಲಿ ಅಥವಾ ಪಂಗಡಗಳಿರಲಿ; ಅವರವರ ಸಂಪ್ರದಾಯ, ಅವರವರ ಆಚಾರ-ವಿಚಾರ, ಅವರವರ ನಂಬಿಕೆ ಅವರವರಿಗೆ ಶ್ರೇಷ್ಠ. ಒಬ್ಬರನ್ನೊಬ್ಬರು ಟೀಕೆ ಮಾಡುತ್ತಿದ್ದರೆ ಮೂರನೆಯವರಿಗೆ ಲಾಭ ಖಚಿತ. ಈ ದೇಶದ ಉಳಿವಿಗಾಗಿ ಹೋರಾಡಿದವರು ಎಲ್ಲಾ ಸಮುದಾಯದವರಲ್ಲೂ ಇದ್ದಾರೆ. ಅವರು ನೀಡಿರುವ ಈ ಭವ್ಯ ಭಾರತವು ಜಾತಿಗಳ ಕಲಹದಿಂದಾಗಿ ಒಡೆದು ಚೂರಾಗದಿರಲಿ..............