Kadlur Samsthana

Kadlur Samsthana ಕಾಡ್ಲೂರು ಸಂಸ್ಥಾನ; ಅನ್ನದಾನ - ವಿದ್ಯಾದಾನ 🙏🙏

ಶ್ರೀರಾಮಚಂದ್ರನೂ ಸೀತಾನ್ವೇಷಣೆಯ (ಸೀತಾದೇವಿಯ ಹುಡುಕಾಟದಲ್ಲಿರುವ) ಸಮಯದಲ್ಲಿ ಕಾಲೂರಿದ ಸ್ಥಳ, ಕಾಡ್ಲೂರಲ್ಲಿ(ಕಾಲೂರು) ಶ್ರೀ ರಾಮನವಮಿ ಉತ್ಸವ 🏹 ...
25/03/2026

ಶ್ರೀರಾಮಚಂದ್ರನೂ ಸೀತಾನ್ವೇಷಣೆಯ (ಸೀತಾದೇವಿಯ ಹುಡುಕಾಟದಲ್ಲಿರುವ) ಸಮಯದಲ್ಲಿ ಕಾಲೂರಿದ ಸ್ಥಳ, ಕಾಡ್ಲೂರಲ್ಲಿ(ಕಾಲೂರು) ಶ್ರೀ ರಾಮನವಮಿ ಉತ್ಸವ 🏹 🙏

ಶ್ರೀ ವನವಾಸಿ ರಾಮದೇವರ, ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಮುಖ್ಯಪ್ರಾಣ ದೇವರ ಹಾಗೂ ಸ್ವಯಂಭೂ ರುದ್ರ ದೇವರ ಸನ್ನಿಧಾನ, ಕೃಷ್ಣ ನದಿ ತೀರ, ಕಾಡ್ಲೂರಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಾಡ್ಲೂರು ಸಂಸ್ಥಾನದ ವತಿಯಿಂದ ಶ್ರೀ ರಾಮನವಮಿ ಉತ್ಸವವನ್ನು ಶ್ರೀ ಪರಾಭವ
ನಾಮ ಸಂವತ್ಸರ, ಚೈತ್ರ ಮಾಸ, ಶುಕ್ಲ ಪಕ್ಷ, ನವಮಿ, ಶುಕ್ರವಾರ, ದಿ. 27.03.2026 ರಂದು ವಿಜ್ರಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು, ಎಲ್ಲ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕಾಡ್ಲೂರು ಸಂಸ್ಥಾನ ಹಾಗೂ ಕಾಡ್ಲೂರು ಗ್ರಾಮಸ್ಥರ ಪರವಾಗಿ ವಿನಂತಿಸಿಕೊಳ್ಳಲಾಗಿದೆ.

ಕಾರ್ಯಕ್ರಮಗಳ ವಿವರ:

ಬೆಳಿಗ್ಗೆ,
೭:೦೦ ಕ್ಕೆ ಧ್ವಜಾರೋಹಣ
೭:೩೦ ಕ್ಕೆ ನಿರ್ಮಾಲ್ಯ
೮:೩೦ ಕ್ಕೆ ಪಂಚಾಮೃತ ಅಭಿಷೇಕ
೧೦: ೦೦ ಕ್ಕೆ ಕಣ್ವಮಠಾಧೀಶರಾದ ಶ್ರೀ ಶ್ರೀ ೧೦೦೮ ಶ್ರೀ ವಿದ್ಯಾಕಣ್ವ ವಿರಾಜ ತೀರ್ಥ ಶ್ರೀ ಪಾದಂಗಳವರಿಂದ ಸಂಸ್ಥಾನ ಪೂಜೆ ಹಾಗೂ ಪ್ರತಿಮಾರ್ಚನೆ (ಕಾಡ್ಲೂರು ಸಂಸ್ಥಾನದ ಪುರಾತನ ಪ್ರತಿಮೆಗಳು)*

ಮಧ್ಯಾಹ್ನ,
೧೨:೦೦ ಕ್ಕೆ ಶ್ರೀ ರಾಮನ ತೊಟ್ಟಿಲೋತ್ಸವ ಹಾಗೂ ನೂತನ ವಸ್ತ್ರ ಸಮರ್ಪಣೆ
೧೨:೩೦ ಕ್ಕೆ: ಮಹಾಮಂಗಳಾರತಿ
೧:೦೦ ಕ್ಕೆ ತೀರ್ಥ ಪ್ರಸಾದ.

ಕಾಡ್ಲೂರು ಸಂಸ್ಥಾನ ಹಾಗೂ ಕಾಡ್ಲೂರು ಗ್ರಾಮಸ್ಥರು.

ರಂಗರಾವ್ ದೇಸಾಯಿ ಕಾಡ್ಲೂರು 9986004858
ಜಯಕುಮಾರ್ ದೇಸಾಯಿ ಕಾಡ್ಲೂರು 9663822903
ವಿಜಯಕುಮಾರ್ ದೇಸಾಯಿ ಕಾಡ್ಲೂರು

19/12/2025

ಸಪ್ತರಾತ್ರಂ ಕೃಷ್ಣವೇಣ್ಯೌಂ ಉಶಿತ್ವಾ ಪುನರುತ್ಥಿಥಂ |

ಜಿತಾಮಿತ್ರ ಗುರುಂವಂದೇ ವಿಭುದೇಂದ್ರ ಕರೋಧ್ಭವಂ|| 🙏🙏

05/12/2025

ರಷ್ಯಾದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ವ್ಲಾದಿಮಿರ್ ಪುಟಿನ್ ಅವರಿಗೆ ಗೌರವಾನ್ವಿತ ಪ್ರಧಾನಿಗಳಾದ ಶ್ರೀ Narendra Modi
ಅವರು ಪವಿತ್ರ ಗ್ರಂಥ #ಭಗವದ್ಗೀತೆ ಯನ್ನು ಉಡುಗೊರೆಯಾಗಿ ನೀಡಿರುವುದು ಅತ್ಯಂತ ಶ್ಲಾಘನೀಯ. ಭಾರತದ ಶ್ರೇಷ್ಠ ಪರಂಪರೆ ಮತ್ತು ನಮ್ಮ ಪುರಾಣದ ಹೆಗ್ಗುರುತುಗಳನ್ನು ಮತ್ತಷ್ಟು ಎತ್ತರಕ್ಕೇರಿಸಿ ಸಾರ್ವಕಾಲಿಕಗೊಳಿಸುವ ನಿಟ್ಟಿನಲ್ಲಿ ಪ್ರಧಾನಿಗಳ ದೃಷ್ಟಿಕೋನವು ನಮಗೆಲ್ಲರಿಗೂ ಅನುಕರಣೀಯ.

ಮನುಕುಲದ ದಾರಿದೀಪ, ಅರಿವಿನ ಬೆಳಕಾಗಿರುವ ಭಗವದ್ಗೀತೆಯನ್ನು ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಮಾತ್ರವಲ್ಲ, ಶಿಕ್ಷಣದ ಪ್ರತೀ ಹಂತದಲ್ಲಿಯೂ ಪಠ್ಯವಾಗಬೇಕು ಎಂಬುದು ನನ್ನ ಆಶಯ. ಈ ಬಗ್ಗೆ ಅಗತ್ಯ ಕ್ರಮ ವಹಿಸುವ ಬಗ್ಗೆ ನಾನು ಕೇಂದ್ರದ ಶಿಕ್ಷಣ ಮಂತ್ರಿಗಳಾದ ಶ್ರೀ Dharmendra Pradhan ಅವರಿಗೆ ಪತ್ರ ಬರೆದು ವಿನಂತಿಸಿದ್ದೇನೆ. ಹಾಗೆಯೇ ನಮ್ಮ ನೆಲದ ಅನರ್ಘ್ಯ ಸಂಪತ್ತು ಶ್ರೀ ವಾಲ್ಮೀಕಿ ವಿರಚಿತ #ರಾಮಾಯಣ ಮತ್ತು ಶ್ರೀ ವ್ಯಾಸ ವಿರಚಿತ #ಮಹಾಭಾರತ ಮಹಾಕಾವ್ಯಗಳನ್ನು ಮಕ್ಕಳಿಗೆ ಬೋಧನೆ ಮಾಡುವುದು ಅಗತ್ಯ.



PMO India

ದೀಪೋತ್ಸವ 🪔
02/12/2025

ದೀಪೋತ್ಸವ 🪔

Address

Shaktinagar

Alerts

Be the first to know and let us send you an email when Kadlur Samsthana posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Kadlur Samsthana:

Share