Sri MalleshwaraSwami Temple Malali Sakaleshpura

Sri MalleshwaraSwami Temple Malali Sakaleshpura Sri MalleshwaraSwami Temple is located in Malali Village about 2km from the city Sakaleshpur in the State of Karnataka in Indian

*ಶ್ರೀ ಮಲೇಶ್ವರಸ್ವಾಮಿ ದೇವಾಲಯ ಮಳಲಿ ಗ್ರಾಮ,ಸಕಲೇಶಪುರ,ಹಾಸನ.*🪔 *ಕಾರ್ತಿಕದೀಪೋತ್ಸವ* 🪔 ```ದಿನಾಂಕ 14-11-2022ನೇ ಕಾರ್ತಿಕ ಮಾಸದ ಸೋಮವಾರದಂದ...
19/11/2022

*ಶ್ರೀ ಮಲೇಶ್ವರಸ್ವಾಮಿ ದೇವಾಲಯ ಮಳಲಿ ಗ್ರಾಮ,ಸಕಲೇಶಪುರ,ಹಾಸನ.*
🪔 *ಕಾರ್ತಿಕದೀಪೋತ್ಸವ* 🪔
```ದಿನಾಂಕ 14-11-2022ನೇ ಕಾರ್ತಿಕ ಮಾಸದ ಸೋಮವಾರದಂದು ದೀಪೋತ್ಸವದ ಪೂಜಾ ಕಾರ್ಯಕಮವನ್ನು ನೆರವೇರಿಸಲಾಯಿತು,
ಮುಂಜಾನೆ 7:00 ಗಂಟೆಗೆ ಶ್ರೀಸ್ವಾಮಿಗೆ ```*ಶ್ರೀಮಹಾರುದ್ರಾಭಿಷೇಕ*.
10:00 ಗಂಟೆಗೆ *ಏಕದಶ ರುದ್ರ ಮಹಾಹೋಮ * 12:30ಕ್ಕೆ ಪೂರ್ಣಹುತಿ ನಂತರ ಮಹಾಮಂಗಳಾರತಿ-ತೀರ್ಥ ಪ್ರಸಾದ ವಿನಿಯೋಗದೊಂದಿಗೆ
ಬಂದಂತಾ ಎಲ್ಲಾ ಭಕ್ತಾದಿಗಳಿಗೆ ಏಕದಶರುದ್ರ ಮಹಾಹೋಮದ ಪ್ರಸಾದವಾಗಿ ರುದ್ರಾಕ್ಷಿಯನ್ನು ನೀಡಲಾಯಿತು..
ಸಂಜೆ ಮಲೆನಾಡು ಸುಗ್ಗಿ ವಾದ್ಯದೊಂದಿಗೆ ದೀಪಗಳನ್ನು ಬೆಳಗಿಸಿ ದೀಪೋತ್ಸವನ್ನು ಆಚರಿಸಕಹಿತು..

30/09/2022
ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯ ಮಳಲಿ ಸಕಲೇಶಪುರ
15/10/2021

ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯ ಮಳಲಿ ಸಕಲೇಶಪುರ

ಶ್ರೀ ಚಾಮುಡೇಶ್ವರಿ ಅಮ್ಮನವರು ಮಳಲಿ. ಸಕಲೇಶಪುರ. ಊರಿನ ಮತ್ತು ಊರಿನ ದೇವಸ್ಥಾನಗಳ ಬಗ್ಗೆ ಮಾಹಿತಗಾಗಿ ಹಾಗೂ ಇತಿಹಾಸಗಳನ್ನು ತಿಳಿಯಲು www.malal...
15/10/2021

ಶ್ರೀ ಚಾಮುಡೇಶ್ವರಿ ಅಮ್ಮನವರು ಮಳಲಿ. ಸಕಲೇಶಪುರ.

ಊರಿನ ಮತ್ತು ಊರಿನ ದೇವಸ್ಥಾನಗಳ ಬಗ್ಗೆ ಮಾಹಿತಗಾಗಿ ಹಾಗೂ ಇತಿಹಾಸಗಳನ್ನು ತಿಳಿಯಲು

www.malalisakaleshapura.org ಗೆ ಭೇಟಿ ನೀಡಬೇಕಾಗಿ ವಿನಂತಿ.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಮಠಾಧೀಶರಾದ ಶ್ರೀ ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಸದಾಶಿವ ಮಹಾಸ್ವಾಮೀಜಿಯವರು ಇಂದು ದೇವಾಲಯಕ್ಕೆ ಆಗಮಿಸಿ ಚಾ...
14/10/2021

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಮಠಾಧೀಶರಾದ ಶ್ರೀ ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಸದಾಶಿವ ಮಹಾಸ್ವಾಮೀಜಿಯವರು ಇಂದು ದೇವಾಲಯಕ್ಕೆ ಆಗಮಿಸಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು ಭಕ್ತಾದಿಗಳಿಗೆ ಆಶೀರ್ವದಿಸಿದರು..

*ಶ್ರೀದೇವಿ ಸ್ಕಂದಮಾತಾ * ಆಹ್ವಾನ  ಪೂರ್ವಾಕ ಹೋಮದೊಂದಿಗೆ ರಾಜೋಪಚಾರ  ಪೂಜೆಗಳಿಂದ  ಪೂಜಿಸಾಲಾಹಿತು.www.malalisakaleshapura.org #ಸ್ಕಂದಮಾತ...
11/10/2021

*ಶ್ರೀದೇವಿ ಸ್ಕಂದಮಾತಾ * ಆಹ್ವಾನ ಪೂರ್ವಾಕ ಹೋಮದೊಂದಿಗೆ ರಾಜೋಪಚಾರ ಪೂಜೆಗಳಿಂದ ಪೂಜಿಸಾಲಾಹಿತು.
www.malalisakaleshapura.org
#ಸ್ಕಂದಮಾತಾ

ಭಗವಾನ್‌ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ ' #ಸ್ಕಂದಮಾತಾ' ಎಂದು ಪ್ರಸಿದ್ಧಳಾಗಿದ್ದಾಳೆ. ದೇವಿಯ ಈ ರೂಪವನ್ನು ಆರಾಧಿಸಿದರೆ ನಮ್ಮಲ್ಲಿರುವ ದೈವತ್ವವನ್ನು ಪೋಷಿಸುತ್ತಾಳೆ ಎಂಬ ನಂಬಿಕೆ ಇದೆ.

ಸ್ಕಂದ ಮಾತೆಯನ್ನು ನವರಾತ್ರಿಯ ಐದನೇ ದಿನ ಆರಾಧಿಸುವವರು ಜೀವನದಲ್ಲಿ ಶಾಂತಿ ಹಾಗೂ ಸಂತೋಷವನ್ನು ಪಡೆಯುತ್ತಾರೆ. ಹಾಗೂ ಮೋಕ್ಷದ ಮಾರ್ಗವು ಸುಲಭವಾಗಿರುತ್ತದೆ.

#ಸ್ಕಂದಮಾ : ‘ಭಗಃ’ ಎಂದರೆ ತೇಜಸ್ಸು. ‘ಭಗವತಿ’ ಎಂದರೆ ‘ವಿಶಿಷ್ಟ ಯೋಗ್ಯತೆ ಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾದಂತಹ ತೇಜಸ್ಸು’. ಬ್ರಹ್ಮದೇವ ಮತ್ತು ಭಗವತಿ ದೇವಿಯ ಸಮ್ಮಿಲಿತ ಅವಸ್ಥೆಯಿಂದ #ಸನತ್ಕುಮಾರ ಅಥವಾ #ಸ್ಕಂದ ಎಂಬ ಹೆಸರಿನ ವಿಶಿಷ್ಟ ರಚನೆಯ ಕಿರಣ ಸಮೂಹವು ಉತ್ಪನ್ನವಾಯಿತು. ಭೂಲೋಕದಿಂದ ಸತ್ಯಲೋಕದ ವರೆಗಿನ ಲೋಕಗಳನ್ನು ‘ #ಸ್ಕಂದರೇಷೆ’ ಎನ್ನುತ್ತಾರೆ. ಭೂಲೋಕದಿಂದ ಸತ್ಯಲೋಕದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ #ಸ್ಕಂದಮಾತೆ ಎನ್ನುತ್ತಾರೆ.

01/09/2021

🌼……🚩✡️🕉✡️🚩………🌼
ಅಗಜಾನನ ಪದ್ಮಾರ್ಕಂ ಗಜಾನನ ಮಹನಿರ್ಶಂ।| ಅನೇಕದಂತಂ ಭಕ್ತಾನಾಂ ಏಕದಂತಮುಪಾಸ್ಮಹೇ||
www.malalisakaleshapura.org
🌸🌼🌺
ಶ್ರೀಶಕ1943 ಪ್ಲವನಾಮ ಸಂವತ್ಸರ ಭಾದ್ರಪದಮಾಸದಲ್ಲಿ ಆಚರಿಸುವಂತಹ
#ಸ್ವರ್ಣಗೌರಿ_ಮಹಾಗಣಪತಿ_ಪ್ರತಿಷ್ಠಾಪನೆಯ_ಮೂಹೂರ್ತಗಳು:-
▫️09-09-2021 ಗುರುವಾರ #ಸ್ವರ್ಣಗೌರಿವ್ರತ
ಈ ದಿನ ಬೆಳಗ್ಗೆ 05:00ರಿಂದ6:00 & 7:30ರಿಂದ 12:00ವರೆಗೆ ಸ್ವರ್ಣಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಬಹುದು..
▫️10-09-2021 ಶುಕ್ರವಾರ #ವರಸಿದ್ಧಿವಿನಾಯಕವ್ರತ_ಗಣಪತಿಹಬ್ಬ
ಚೌತಿಯ ಸಮಯ 9-09-2021ನೇ ಗುರುವಾರ ರಾತ್ರಿ2:10ರಿಂದ10-09-2021 ಶುಕ್ರವಾರ ರಾತ್ರಿ9:58ಯವರೆಗೆ ಚೌತಿ ಇರುತ್ತದೆ.
🔸 #ಗಣಪತಿಯನ್ನು🔸ಶುಕ್ರವಾರ ಬೆಳಗ್ಗೆ
5 ಗಂಟೆಯಿಂದ 10:30 & 12:00ರಿಂದ 3:00ನಿಮಿಷದವರೆಗೆ ಪ್ರತಿಷ್ಠಾಪನೆಯನ್ನು ಮಾಡಬಹುದು.
#ಗೌರಿ_ಗಣಪತಿ_ವಿಸರ್ಜನೆಯನ್ನು
▫️5ನೇ ದಿನ13-09-2021ಸೋಮವಾರ 9:30ರಿಂದ10:30 &
ಸಂಜೆ 4:00-7:00ಗಂಟೆಯವರೆಗೆ ವಿಸರ್ಜಿಸಬಹುದು.
▫️7ನೇ ದಿನ 15-09-2021 ಬುಧುವಾರ ಸಂಜೆ 4:00ರಿಂದ7:00ಗಂಟೆಯವರೆಗೆ ವಿಸರ್ಜಿಸಬಹುದು.
▫️11ನೇ ದಿನ 19-09-2021ಭಾನುವಾರ ಸಂಜೆ 3:00ರಿಂದ4:00ಗಂಟೆಯವರೆಗೆ ವಿಸರ್ಜಿಸಬಹುದು.
```ಸಾಂಪ್ರದಾಯಕವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಿ..ನಮ್ಮ ಸನಾತನ ಧರ್ಮದ ಆಚಾರ-ವಿಚಾರ,ಸಂಸ್ಕೃತಿಯನ್ನು ಉಳಿಸಿ-ಬೆಳೆಸೋಣ ```
🚩 #ನಮ್ಮ_ಸಂಸ್ಕೃತಿ_ನಮ್ಮ_ಹೆಮ್ಮೆ🚩
*ಸರ್ಕಾರದ ಮಾರ್ಗ-ಸೂಚಿಯಂತೆ ಹಬ್ಬವನ್ನು ಆಚರಿಸಿ.*

ನಾಡಿನ ಸಮಸ್ತ ಜನತೆಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು.ಶ್ರೀಮನ್ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರವರು...
30/07/2021

ನಾಡಿನ ಸಮಸ್ತ ಜನತೆಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು.

ಶ್ರೀಮನ್ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರವರು ಚಾಮುಂಡಿ ಬೆಟ್ಟದಲ್ಲಿ ಶ್ರೀ ಅಮ್ಮನವರ ಉತ್ಸವ ವಿಗ್ರಹವನ್ನು ಆಷಾಡ ಮಾಸ ಕೃಷ್ಣಪಕ್ಷದ ರೇವತಿ ನಕ್ಷತ್ರದಂದು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿದ್ದರಿಂದ ಇದೇ ದಿನದಂದು ಶ್ರೀ ಅಮ್ಮನವರ ವರ್ಧಂತಿಯನ್ನು ಆಚರಿಸಲಾಗುತ್ತದೆ.

Greetings on the auspicious occasion of Sri Chamundeshwari Vardhanti Mahotsava.

The Vardhanti, popularly called Ammanavara Vardhanthi, is observed on the Revathi Nakshatra day of Krishna Paksha in the month of Aashada. This day marks the formal installation of the Utsav Murthy at the Chamundeshwari Temple by H.H. Mummadi Krishnaraja Wadiyar and hence is celebrated as Chamundeshwari Vardhanti

ಶ್ರೀ ಚಾಮುಂಡೇಶ್ವರಿ ದೇವಾಲಯ,ಮಳಲಿ ಗ್ರಾಮ,ಸಕಲೇಶಪುರ,ಹಾಸನ.www.malalisakaleshapura.org  🌸*ವರ್ಧಂತಿ ಮಹೋತ್ಸವ*🌸ಪ್ರತಿ ವರ್ಷದಂತೆ ಈ ವರ್ಷವ...
30/07/2021

ಶ್ರೀ ಚಾಮುಂಡೇಶ್ವರಿ ದೇವಾಲಯ,
ಮಳಲಿ ಗ್ರಾಮ,ಸಕಲೇಶಪುರ,ಹಾಸನ.

www.malalisakaleshapura.org

🌸*ವರ್ಧಂತಿ ಮಹೋತ್ಸವ*🌸

ಪ್ರತಿ ವರ್ಷದಂತೆ ಈ ವರ್ಷವೂ ಸಹಾ ಶ್ರೀಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸದ ಪ್ರಯುಕ್ತ ಇಂದು 30/07/2021ನೇ ಶುಕ್ರವಾರ ಮುಂಜಾನೆ ಬ್ರಾಹ್ಮೀ ಮೂಹೂರ್ತದಲ್ಲಿ ಅಮ್ಮನವರಿಗೆ ಸಂಪ್ರದಾಯದಂತೆ ಸುಪ್ರಭಾತಸೇವೆ ನಂತರ ಮಹಾರುದ್ರಾಭಿಷೇಕ, ರಜತ ಕವಚದೊಂದಿಗೆ ಅಲಂಕಾರ.

27/04/2021

*ಶ್ರೀ ಮಲ್ಲೇಶ್ವರಸ್ವಾಮಿ ದೇವಸ್ಥಾನ*,
ಮಳಲಿ ಗ್ರಾಮ,ಸಕಲೇಶಪುರ,ಹಾಸನ.

ಈ ಮೂಲಕ ಭಕ್ತಾಧಿಗಳಿಗೆ ತಿಳಿಸುವುದೇನೆಂದರೆ ಕೋವಿಡ್-19 ಸೋಂಕು ಹೆಚ್ಚಾಗಿದು ಸರ್ಕಾರದ ಮಾರ್ಗಸೂಚೀ ಅನ್ವಯ ಭಕ್ತಾಧಿಗಳಿಗೆ ದೇವಾಲಯಕೆ ಪ್ರವೇಶವನು ನಿರ್ಬಂಧಿಸಲಾಗಿದೆ.ಭಕ್ತಾಧಿಗಳು ಸಹಕರಿಸಬೇಕಾಗಿ ವಿನಂತಿ..

ಶ್ರೀ ಚಾಮುಂಡೇಶ್ವರಿ ದೇವಾಲಯ ಮಳಲಿ ಗ್ರಾಮ ಸಕಲೇಶಪುರ ಹಾಸನ
26/10/2020

ಶ್ರೀ ಚಾಮುಂಡೇಶ್ವರಿ ದೇವಾಲಯ ಮಳಲಿ ಗ್ರಾಮ ಸಕಲೇಶಪುರ ಹಾಸನ

*ಶ್ರೀ ಚಾಮುಂಡೇಶ್ವರಿ ದೇವಾಲಯ, ಮಳಲಿ ಗ್ರಾಮ,ಸಕಲೇಶಪುರ,ಹಾಸನ.*ನವರಾತ್ರಿ ಆಚರಣೆಯ 9ನೆಯ ದಿನವಾದ ಇಂದು ಅಮ್ಮನವರಿಗೆ *ಶ್ರೀದೇವಿ ಸಿದ್ದಿದಾತ್ರಿ*...
25/10/2020

*ಶ್ರೀ ಚಾಮುಂಡೇಶ್ವರಿ ದೇವಾಲಯ, ಮಳಲಿ ಗ್ರಾಮ,ಸಕಲೇಶಪುರ,ಹಾಸನ.*

ನವರಾತ್ರಿ ಆಚರಣೆಯ 9ನೆಯ ದಿನವಾದ ಇಂದು ಅಮ್ಮನವರಿಗೆ
*ಶ್ರೀದೇವಿ ಸಿದ್ದಿದಾತ್ರಿ* ಆಹ್ವಾನ ಪೂರ್ವಾಕ ಷೋಡೋಪಚಾರ ಪೂಜೆಗಳೊಂದಿಗೆ ಪೂಜಿಸಿ ಆರಾಧಿಸಲಾಯಿತು.
www.malalisakaleshapura.org
ನವರಾತ್ರಿಯ #ಒಂಬತ್ತನೇ ದಿನ #ಮಹಾನವಮಿಯ #ನವದುರ್ಗೆಯರ ಆರಾಧನೆಯಲ್ಲಿ #ತಾಯಿಸಿದ್ದಿದಾತ್ರಿ

#ಸಿದ್ದಿದಾತ್ರಿ

ಸಿದ್ಧಿಧಾತ್ರಿ ದೇವಿಯ ಸ್ತುತಿ ಯಾ ದೇವಿ ಸರ್ವಭೂತೇಶು ಸಿದ್ಧಿಧಾತ್ರಿ ರೂಪೇಣ ಸಂತಿತಃ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ನವ ದುರ್ಗೆಯರಲ್ಲಿ ಕೊನೆಯವಳು #ಸಿದ್ದಿದಾತ್ರಿ.

ಮಾರ್ಕಂಡೇಯ ಪುರಾಣಗಳ ಪ್ರಕಾರ ಇವಳು ಎಲ್ಲಾ ರೀತಿಯ ಸಿದ್ದಿಯನ್ನು ಕರುಣಿಸುವಳು, ಆದ್ದರಿಂದಲೇ ಇವಳನ್ನು ಸಿದ್ಧಿದಾತ್ರಿ ಎನ್ನಲಾಗುತ್ತದೆ. ಸಿದ್ಧಿದಾತ್ರಿ ಸ್ವರೂಪ ಅತ್ಯಂತ ವಿಶಿಷ್ಟವಾಗಿದೆ. ಇವಳು ಕಮಲದ ಮೇಲೆ ಕುಳಿತಿದ್ದಾಳೆ, ಸಿದ್ಧಿದಾತ್ರಿ ಚತುರ್ಭುಜಗಳಿವೆ, ಮೇಲಿನ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಕ ಹಿಡಿದಿದ್ದಾಳೆ , ಮತ್ತು ಕಮಲ ಪುಷ್ಪವನ್ನು ಹಿಡಿದುಕೊಂಡಿದ್ದಾಳೆ. ಸಿದ್ಧಿದಾತ್ರಿ ಮಹಾಲಕ್ಷ್ಮಿಯ ಸ್ವರೂಪ , ಭಕ್ತರ ಭಕ್ತಿಗೆ ಪ್ರಸನ್ನಳಾಗಿ ದೇವಿ ವರವನ್ನು ಕೊಡುತ್ತಾಳೆ.

ನವರಾತ್ರಿಯು ಹಲವು ರೂಪಗಳ ಮೂಲಕ ಮಾನವರಿಗೆ ಅಗತ್ಯ ಸಂದೇಶಗಳನ್ನು ನೀಡಿ ತನ್ಮೂಲಕ ಬದುಕನ್ನು ಹೆಚ್ಚು *ಸಮರ್ಥವಾಗಿ ಬದುಕುವ ದಾರಿಯನ್ನು ತೋರುತ್ತವೆ.

ಹೆಸರೇ ಸೂಚಿಸುವಂತೆ #ಸಿದ್ಧಿಧಾತ್ರಿಬಗೆ ಬಗೆಯ ಸಿದ್ಧಿಗಳನ್ನು ನೀಡುವವಳು.
ಅಷ್ಟಸಿದ್ಧಿಗಳಾದ "ಅಣಿಮ, ಮಹಿಮ, ಗರಿಮ, ಲಘಿಮ,ಪ್ರಾಪ್ತಿ,ಪ್ರಾಖ್ಯಮ್ಯ, ಈಷಿತ್ವ,ವಷಿತ್ವ"ಇವುಗಳನ್ನು ನೀಡುತ್ತಾಳೆ ಎಂದೂ ಉಲ್ಲೇಖಿಸಿದೆ....

ಶಿವನು ಈಕೆಯನ್ನು ಪೂಜಿಸಿ ಸಿದ್ಧಿಯನ್ನು ಪಡೆದನು ಎಂದು ಉಲ್ಲೇಖಿಸಿದೆ.... ಶಕ್ತಿಯನ್ನು ಒಲಿಸಿದ ಶಿವ ಅರ್ಧನಾರೀಶ್ವರನಾದ ಗಂಡು ಹೆಣ್ಣು ಒಂದೇ ಎಂದು ಸಾರಿದ್ದು ಅರ್ಧನಾರೀಶ್ವರ ತತ್ವ...

ಈಕೆ ಕಮಲದ ಮೇಲೆ ಕುಳಿತಿದ್ದು ಶಂಖ, ಚಕ್ರ, ಗಧಾ, ಪದ್ಮ ಧಾರಣೆ ಮಾಡಿದ್ದಾಳೆ...

ಗಂಧರ್ವ, ಯಕ್ಷ, ಸಿದ್ಧ, ಅಸುರ, ದೇವತೆಗಳೆಲ್ಲರೂ ಈಕೆಯನ್ನು ಪೂಜಿಸುತ್ತಾರೆ ಎಂದು ಉಲ್ಲೇಖಿಸಿದೆ.....

ತಂತ್ರ ಮಾಡುವವರು, ಸಾಧಕರು, ಯೋಗಿಗಳು ಈಕೆಯ ಪೂಜೆಯನ್ನು ಮಾಡಿ ಸಿದ್ಧಿಗಳಿಸುತ್ತಾರೆ ಎಂಬ ಪ್ರತೀತಿ ಇದೆ...

ಎಲ್ಲಾ ಚಕ್ರ ಜಾಗ್ರತವಾದ ಮೇಲೆ ಮನುಷ್ಯ ಮಹಾಗೌರಿಯಂತೆ ಪರಿಶುದ್ಧನಾದ ಮೇಲೆ ಎಲ್ಲಾ ರೀತಿಯ ಸಿದ್ಧಿಯನು ಹೊಂದಬಹುದು..ತಥಾ ಸಿದ್ಧಿದಾತ್ರಿ ಸಿದ್ಧಿಯನ್ನ ತನ್ಮೂಲಕ ಕರುಣಿಸುತ್ತಾಳೆ....

ಸಿದ್ಧಗಂಧರ್ವ ಯಕ್ಷದೈರಸುರೈರಮರೈರಪಿ ಸೇವ್ಯಮಾನಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ

ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿಯನ್ನು ಆರಾಧನೆ ಮಾಡಿದರೆ ಶ್ರೇಯಸ್ಕರ, ಪ್ರತಿಯೊಬ್ಬ ಮನುಷ್ಯನು ತಾಯಿ ಸಿದ್ಧಿದಾತ್ರಿಯ ಕೃಪೆ ಪಡೆಯುವುದಕ್ಕೆ, ನಿರಂತರ ಪ್ರಯತ್ನ ಮಾಡಬೇಕು. ಈ ದೇವಿಯ ಉಪಾಸನೆಯಿಂದ ಭಕ್ತರ ಮತ್ತು ಸಾಧಕರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.ಈ ದೇವಿಯ ಆರಾಧನೆಯ ಪಲಗಳು ಹೀಗಿವೆ… ಸರ್ವ ಸಿದ್ಧಿಗಳನ್ನು ಕೊಡುವ ದೇವಿ #ಸಿದ್ಧಿದಾತ್ರಿ.

ಈ ದೇವಿಯ ಉಪಾಸನೆಯಿಂದ ಅಷ್ಟ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ.ಈ ದೇವಿಯನ್ನು ಪೂಜಿಸಿದರೆ ರಕ್ಷಣೆ ಸಿಗುತ್ತದೆ, ಸರ್ವ ಕಾರ್ಯದಲ್ಲಿ ವಿಜಯ ದೊರಕಿಸುವ ಸಾಮರ್ಥ್ಯ ಕರುಣಿಸುತ

Address

Sri MalleshwaraSwami Temple, Malali Village And Post , Sakaleshpura Taluk, Hassan District State
Sakleshpur
573134

Opening Hours

Monday 8am - 9am
Tuesday 8am - 9am
Wednesday 8am - 9am
Thursday 8am - 9am
Friday 8am - 9am
Saturday 8am - 9am
Sunday 8am - 9am

Telephone

+917337769648

Alerts

Be the first to know and let us send you an email when Sri MalleshwaraSwami Temple Malali Sakaleshpura posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri MalleshwaraSwami Temple Malali Sakaleshpura:

Share

Category