28/01/2026
*ಶ್ರೀ ಕ್ಷೇತ್ರ ಹೊಗೆವಡ್ಡಿ*
*ವಿಜಯನಗರದ ಪಾಳೆಗಾರ, ಕೆಳದಿ ಸಂಸ್ಥಾನದ ಮಹಾ ಮತ್ರಿ ಉಗ್ರಾಣಿಮನೆ ಕಾಸರಗೋಡು ತಿಮ್ಮಣ್ಣ ನಾಯ್ಕರ ಕೋಟೆ ಶ್ರೀ ವೀರಾಂಜನೇಯನ ಸಾನಿಧ್ಯ.*
2014ರಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಗೋಚರಿಸಿದ ದಟ್ಟ ಕಾನನದ ಏಳು ಪರ್ವತಗಳ ಏಳು ಸುತ್ತಿನ ಕೋಟೆಯ ಶ್ರೀ ಕ್ಷೇತ್ರ ಹೊಗೆವಡ್ಡಿ ಸಾನಿಧ್ಯವನ್ನು 2016ರಲ್ಲಿ ಪುನರಪ್ರತಿಸ್ಠಾಪನೆ ಗೊಂಡು ಇದೀಗ 10ನೇವರ್ಷದ ಜಾತ್ರಾಮಹೋತ್ಸವ ನಡೆಯಲಿದೆ.
ಅತೀ ವಿಶೇಷ ಹಾಗೂ ಅತೀ ವಿರಳ ಎನ್ನುವಂತೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಕೂಡ *2026ರ ಫೆಬ್ರವರಿ 12ರ ಗುರುವಾರದಿಂದ 14ರ ಶನಿವಾರದ ವರೆಗೆ
ನಡೆಯುವ ಜಾತ್ರಾಮಹೋತ್ಸವಕ್ಕೆ ಶ್ರೀ ಕ್ಷೇತ್ರ ಹೊಗೆವಡ್ಡಿಯಲ್ಲಿ ನೆಲೆನಿಂತ ದೈವ ದೇವರುಗಳು ತಮ್ಮನ್ನು ಸ್ವಾಗತಿಸುತ್ತಾ ಇದೆ.*
ವಿಶೇಷತೆ*
1- ಹೋಮಹವನಾದಿ ಯೊಂದಿಗೆ ಧಾರ್ಮಿಕ ಕಾರ್ಯಕ್ರಮ
2- ದೀಪೋತ್ಸವ.
3- ಪಲ್ಲಕ್ಕಿ ಉತ್ಸವ (ಪಂಚಲೋಹದ ನೂತನ ಉತ್ಸವ ಮೂರ್ತಿ)
4- ಎರಡನೇ ದಿನ ಶುಕ್ರವಾರ ಮುಂಜಾನೆ ಸದ್ಭಕ್ತರಿಗೆ ಮುಕ್ತ ಗರ್ಭಗುಡಿ ಪ್ರವೇಶ (ಸಾರ್ವತ್ರಿಕ ಅಭಿಷೇಕ).
5- ಸಾಮೂಹಿಕ ಸತ್ಯನಾರಾಯಣ ಪೂಜೆ.(ಶನಿವಾರ).
6- ಭಟ್ಕಳ ತಾಲೂಕು,ಕರೂರುಂ ಬಾರಂಗಿ ಹೋಬಳಿ ಮತ್ತು ಹೊಸನಗರ ತಾಲೂಕಿನ ಶಾಲಾ ಮಕ್ಕಳಿಗೆ ನೃತ್ಯ ಮತ್ತು ಸಾಂಸ್ಕೃತಿಕ ಪ್ರತಿಭೆ ಸ್ಪರ್ಧೆ..
ಮೊದಲನೇ ಬಹುಮಾನ: ಕಂಪ್ಯೂಟರ್ ಸೆಟ್..
ಎರಡನೇ ಬಹುಮಾನ : ಕಂಪ್ಯೂಟರ್..
ಮೂರನೇ ಬಹುಮಾನ : ಶಾಲಾ ಕೊಠಡಿಗಳಿಗೆ ಫ್ಯಾನ್ ಅಳವಡಿಕೆ.
7- ಭಟ್ಕಳ ತಾಲೂಕು,ಕರೂರುಂ ಬಾರಂಗಿ ಹೋಬಳಿ ಮತ್ತು ಹೊಸನಗರ ತಾಲೂಕಿನ ಸಾರ್ವಜನಿಕರಿಗೆ ಭಜನಾ ಸ್ಪರ್ಧೆ.
ಮೊದಲನೇ ಬಹುಮಾನ: ರೂಪಾಯಿ- 3,000 ನಗದು.
ಎರಡನೇ ಬಹುಮಾನ: ರೂಪಾಯಿ- 2,000 ನಗದು.
ಮೂರನೇ ಬಹುಮಾನ: ರೂಪಾಯಿ- 1,000 ನಗದು.
8- ಭಟ್ಕಳ ತಾಲೂಕು,ಕರೂರು ಬಾರಂಗಿ ಹೋಬಳಿ ಮತ್ತು ಹೊಸನಗರ ತಾಲೂಕಿನ ಮಹಿಳೆಯರಿಗಾಗಿ ಮಲೆನಾಡಿನ ಸವಿ ರುಚಿ ಎನ್ನುವ ಅಡುಗೆ ಸ್ಪರ್ಧೆ..
ಮೊದಲನೇ ಬಹುಮಾನ- ಫ್ರಿಜ್.
ಎರಡನೇ ಬಹುಮಾನ- ಗ್ರೈಂಡರ್.
ಮೂರನೇ ಬಹುಮಾನ- ಮಿಕ್ಸಿ.
9- ಭಟ್ಕಳ ತಾಲೂಕು,ಕರೂರುಂ ಬಾರಂಗಿ ಹೋಬಳಿ ಮತ್ತು ಹೊಸನಗರ ತಾಲೂಕಿನ ಸಾರ್ವಜನಿಕರಿಗೆ ಮುಕ್ತ ರಂಗೋಲಿ ಸ್ಪರ್ಧೆ..
ಮೊದಲನೇ ಬಹುಮಾನ- ರೂಪಾಯಿ 3,000 ನಗದು.
ಎರಡನೇ ಬಹುಮಾನ- ರೂಪಾಯಿ- 2,000 ನಗದು.
ಮೂರನೇ ಬಹುಮಾನ- ರೂಪಾಯಿ- 1,000 ನಗದು.
10- ಆಯ್ದ ಕಲಾವಿದರಿಂದ ನೃತ್ಯ ಮತ್ತು ರಸಮಂಜರಿ.
11- ಎರಡು ಮತ್ತು ಮೂರನೇ ದಿನ ಸದ್ಭಕ್ತರಿಗೆ ಬೆಳಗ್ಗಿನ ಉಪಹಾರಕ್ಕೆ ದಾವಣಗೆರೆ ದಾನಿಗಳಿಂದ ಉಚಿತ ಬೆಣ್ಣೆ ದೋಸೆ.
12- ಮಹಾ ಅನ್ನ ಪ್ರಸಾದ, ಮದ್ಯಾಹ್ನ ಮತ್ತು ರಾತ್ರಿ.
*ಶ್ರೀ ಕ್ಷೇತ್ರ ಹೊಗೆವಡ್ಡಿ ಸಾನಿಧ್ಯವು ಸದ್ಭಕ್ತರ ಸಹಕಾರದಿಂದ ಹಂತಹಂತವಾಗಿ ಅಭಿವೃದ್ಧಿ ಕಾಣತ್ತಿರುವುದು ಹೆಮ್ಮೆಯ ಸಂಗತಿ.*
ಧನ್ಯವಾದಗಳು.
*ಧರ್ಮದರ್ಶಿಗಳೊಂದಿಗೆ.*
ಆಡಳಿತ ಮಂಡಳಿ.
*ಶ್ರೀ ಕ್ಷೇತ್ರ ಹೊಗೆವಡ್ಡಿ*