Gopala Sanskrit Patha Shala

Gopala Sanskrit Patha Shala Madhwa Vedanta Philosophy,
Haridasa Sahitya,
Hindu Devotional Speaker and Astrologist

19/08/2022
14/08/2022

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಅನುಗ್ರಹ ಸಂದೇಶ

11/05/2022
11/01/2022

ತಾಂಬೂಲ ವಿಚಾರಧಾರೆ

ವೀಳ್ಯದೆಲೆ ತಾಂಬೂಲ ಕೊಡೋವಾಗ, ವೀಳ್ಯದೆಲೆ ಆಗಿ ಹೋಗಿದೆ, ಏನು ಅಂದುಕೊಳ್ಳಬೇಡಿ ಅಂಥ ಬರೀ ಹಣ್ಣು ಅಥವಾ ತೆಂಗಿನಕಾಯಿ ಕೊಟ್ಟರೆ. ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ ಶುಭಕಾರ್ಯಗಳಾದರೆ ತುಂಬಾ ತೊಂದರೆಗಳಾಗುತ್ತವೆ, ಜನಸಹಾಯ ದೊರೆಯುವುದಿಲ್ಲ. ಹಣಕಾಸಿಗೆ ಪರಾದಾಟವಾಗುತ್ತದೆ.

2. ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದರೆ ಅತಿಯಾದ ನಷ್ಟ. ಅನಾರೋಗ್ಯವಾಗುತ್ತದೆ, ನಿಮ್ಮ ಕಾರ್ಯಗಳು ಅರ್ಧಕ್ಕೇ ನಿಂತು ಹೋಗುತ್ತವೆ.

3. ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸದೇ, ಯಾವುದೋ ಮೂಲೆಯಲ್ಲಿ ಇಟ್ಟುಬಿಟ್ಟರೆ, ಸಮಾಜದಲ್ಲಿ, ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ, ಮಕ್ಕಳಿಗೆ ಮರೆವಿನ ರೋಗ ಬರುತ್ತದೆ.

4. ಯಾರಾದರೂ ತಾಂಬೂಲ ಕೊಟ್ಟಾಗ ಮನೆಗೆ ತರದೆ ಎಲ್ಲಿಯಾದರೂ ಬಿಟ್ಟು ಬಂದರೆ. ನಿಮ್ಮ ಕಾರ್ಯಗಳು ತುಂಬಾ ನಿಧಾನವಾಗುತ್ತದೆ, ವಿವಾಹ ಕಾರ್ಯಗಳಿಗೆ ಅಡಚಣೆಯಾಗುತ್ತದೆ, ಶುಭ ಕಾರ್ಯ ನಿಧಾನವಾಗುತ್ತದೆ. ಮಕ್ಕಳ ಮಾನಸಿಕ ಬೆಳವಣಿಕೆ ಕಮ್ಮಿಯಾಗುತ್ತದೆ.

5. ತಾಂಬೂಲ ಕೆಳಗೆ ಬಿದ್ದರೆ ನಿಮ್ಮ ಕೆಲಸಗಳು ಇನ್ನೇನು ಆಯಿತು ಅನ್ನೋ ಸಮಯದಲ್ಲಿ ಅರ್ಧಕ್ಕೇ ನಿಂತುಹೋಗುತ್ತದೆ.

6. ತಾಂಬೂಲ ಕೊಡುವಾಗ ವೀಳ್ಯದೆಲೆ ಅಡಿಕೆ ಕೊಳೆತಿದ್ದರೆ, ದರಿದ್ರರಾಗುತ್ತೀರಿ, ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ. ಯಾರ ಮನೆಯಲ್ಲಿ ತಾಂಬೂಲ ಕೊಟ್ಟರೂ ಮೊದಲು ತಂದು ದೇವರ ಮುಂದೆ ಇಟ್ಟು ನಮಸ್ಕರಿಸಿ, ಆನಂತರ ಸರಿಯಾದ ರೀತಿಯಲ್ಲಿ ಉಪಯೋಗಿಸಿ.

"ವಿವಿಧ ರೀತಿಯ ತಾಂಬೂಲಗಳು"... !

ತಾಂಬೂಲಗಳಲ್ಲಿ ಮೂರು ರೀತಿಯ ತಾಂಬೂಲಗಳಿವೆ..
೧. ಫಲ ತಾಂಬೂಲ..
೨. ಪೂರ್ಣಫಲ ತಾಂಬೂಲ..
೩. ಸಾಮೂಹಿಕ ತಾಂಬೂಲ..

" ಫಲ ತಾಂಬೂಲ" : ತಾಂಬೂಲದಲ್ಲಿ ಹಣ್ಣನ್ನು ಇಟ್ಟು ಕೊಡುವುದೇ ಫಲತಾಂಬೂಲ..

ಫಲ ತಾಂಬೂಲದಲ್ಲಿ ಎರಡು ವಿಧಗಳಿವೆ.
೧. ಫಲ ತಾಂಬೂಲ..
೨. ಪಂಚಫಲ ತಾಂಬೂಲ ..

೧. ಫಲ ತಾಂಬೂಲ :
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ಒಂದೇ ಜಾತಿಯ ಹಣ್ಣು(ಎರಡು)
**
೨. ಪಂಚಫಲ ತಾಂಬೂಲ ::
ಐದು ವೀಳ್ಯದೆಲೆ
ಐದು ಅಡಿಕೆ
ಯಥಾ ಶಕ್ತಿ ದಕ್ಷಿಣೆ
ಐದು ಜಾತಿಯ ಹಣ್ಣುಗಳು..
(5-5 ಬೇಕಾದರು ಕೊಡಬಹುದು)

******
"ಪೂರ್ಣಫಲ ತಾಂಬೂಲ"..
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ಒಂದು ಪೂರ್ಣಫಲ..
**

" ಸಾಮೂಹಿಕ ತಾಂಬೂಲ" :
ಎರಡು ವೀಳ್ಯದೆಲೆ
ಎರಡು ಅಡಿಕೆ
ಯಥಾಶಕ್ತಿ ದಕ್ಷಿಣೆ
ತೆಂಗಿನಕಾಯಿ ಅಥವಾ ಹಣ್ಣು..!

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

11/01/2022

ಅತಿಥಿ

ಅತಿಥಿ, ಅಭ್ಯಾಗತರು ಸರ್ವಸಾಮಾನ್ಯ

ಈ ಎರಡರಲ್ಲಿ ಏನು ವ್ಯತ್ಯಾಸ,?

ಮತ್ತೆ 'ಅತಿಥಿ ದೇವೋಭವ' ಎನ್ನುತ್ತೇವೆ.

ಮನುಷ್ಯನಾದ ಅತಿಥಿ ದೇವರೇಕೆ?

ಕಿಂಚಿತ್ ತಿಳಿಯುವ ಪ್ರಯತ್ನ --

ತಿಥಿ ಎಂದರೆ ದಿನ ಅಥವಾ ಮುಹೂರ್ತ.

ಅ ತಿಥಿ ಎಂದರೆ ದಿನ ಇಲ್ಲದೇ

ಅಂದರೆ ದಿನವನ್ನು ಅಥವಾ ಮುಹೂರ್ತವನ್ನು ಗೊತ್ತುಮಾಡಿ

ಕೊಳ್ಳದೇ ಬರುವದು.

Prior appointment ಇಲ್ಲದೇ ಬರುವವರು.

ಒಟ್ಟಿನಲ್ಲಿ ಆಕಸ್ಮಿಕವಾಗಿ ಅನಿರೀಕ್ಷಿತವಾಗಿ ಮನೆಗೆ ಬರುವವರೇ ಅತಿಥಿಗಳು.

ಅತಿಥಿಗಳಲ್ಲೇ ವೈವಿಧ್ಯವಿರ ಬಹುದು.

ಬೇಕಾದವರು, ಬೇಡವಾದವರು ಮೊದಲಾಗಿ. ಅದು ಬೇರೆ.

ಇನ್ನು ಅಭಿ ಆಗತಃ - ಅಭ್ಯಾಗತಃ

ಚನ್ನಾಗಿ ಬಂದವರು ಅರ್ಥಾತ್ -

ಆಮಂತ್ರಿತಃ ಆಗತಃ -

ಆಮಂತ್ರಸಿದ್ದೆವು. ಬಂದರು - ಇವರು ಅಭ್ಯಾಗತರು.

ಬರುವ ಮುನ್ಸೂಚನೆ ಇತ್ತು.

ನಿರೀಕ್ಷಿತ ಆಗಮನ.

ಸಹಸಾ ಇವರು ಇಷ್ಟರೇ.

ಬೇಕಾಗಿ ಕರೆಸಿ ಕೊಂಡಿದ್ದೇವೆ ಅಲ್ಲವೇ!

ಇನ್ನು ಎಲ್ಲರ ಹೃದಯ ಗುಹೆಯಲ್ಲಿ ಪರಮಾತ್ಮನಿದ್ದಾನೆ.

ಅತಿಥಿಯಲ್ಲೂ ಪರಮಾತ್ಮನ ವಾಸ.

ನಮ್ಮ ನಮಸ್ಕಾರ ಅತಿಥಿಗಲ್ಲ. ಅತಿಥಿಯ ಅಂತರ್ಗತ ಪರಮಾತ್ಮನಿಗೆ.

ಅವನಿಗೇ ಭೋಜನ ನಿವೇದನೆ. ಸಕಲ ಸತ್ಕಾರ ಆತನಿಗೇ.

ಹೀಗೆ ಅತಿಥಿ ಸತ್ಕಾರವೇ

ದೇವರ ಪೂಜೆ.

ಆದುದರಿಂದ

ಅತಿಥಿಯೇ ದೇವರು.

ದೇವರೇ ಅತಿಥಿ.

ಇದು ಇರಬೇಕಾದ ಅನುಸಂದಾನ.

ಅಭ್ಯಾಗತರಲ್ಲೂ ಇದನ್ನೇ ಕಾಣುವದು.

ಇನ್ನು ಅತಿಥಿ ದೇವರು ಹೇಗೆ?

'ಅತಿಥಿ'ಶಬ್ದವೇ ತಾನು ದೇವರೆಂದು

ಹೇಳಿಕೊಳ್ಳುತ್ತದೆ ನಮ್ಮ ದೇವಭಾಷೆಯಲ್ಲಿ.

ಅತಿ ಥಿ = ಥ ಎಂದರೆ ಅನ್ನ, ಆಹಾರ. ಅತಿಯಾಗಿ ಅನ್ನ ಬೇಕಾದವನು ಅಂದರೆ ಹಸಿದು ಬಂದವನು ಅತಿಥಿ.

ಅತ್ತಿ ಇತಿ ಅತಿಥಿ.

ಎಂದರೆ ಬಹಳ ತಿನ್ನುವವನು.

ಪರಮಾತ್ಮನ ಭೊಜನ ಅಷ್ಟಿಷ್ಟಲ್ಲ.

ಪ್ರಳಯದಲ್ಲಿ ಇಡೀ ಬ್ರಹ್ಮಾಂಡ

ವನ್ನೇ ನುಂಗಿ ನೀರು ಕುಡಿದು, ಬ್ರಹ್ಮಾಂಡದ ಖರ್ಪರವನ್ನೇ ಸುಟ್ಟು

ಸುಣ್ಣ ಮಾಡಿ ಎಲೆಗೆ ಹಚ್ಚಿಕೊಂಡು ವೀಳ್ಯ ಮೆದ್ದು ಮುಗುಳು ನಗುವ

ಹೆದ್ದೈವ ಆತ.

ಇಂಥ ಹಸಿವುವುಳ್ಳ,

ಅಂಥ ಭೊಜನ ಮಾಡುವ ಪರಮಾತ್ಮನನ್ನು ಬಿಟ್ಟು ಅಂತಿಂಥವರು ಅತಿಥಿಗಳಾಗಲು ಸಾಧ್ಯವೇ?!

ಅದಕ್ಕಾಗಿ ಅತಿಥಿ ದೇವರು.

ಇನ್ನು 'ಅ' ಕಾರ ವಾಚ್ಯ ಪರಮಾತ್ಮ.

ಯಾಕೆ?

ಜೀವ, ಜಡರಿಂದ ಅನ್ಯನಾಗಿದ್ದಾನೆ.

ವಿಲಕ್ಷಣನಾಗಿದ್ದಾನೆ.

ಅ ದೋಷ ಎಂದರೆ - ದೋಷ ಒಂದೂ ಇಲ್ಲ. ನಿರ್ದೋಷನಾಗಿದ್ದಾನೆ.

ಅ - ಎಂದರೆ ಅತ್ಯುತ್ತಮ

ಸರ್ವೋತ್ತಮನಾಗಿದ್ದಾನೆ.

ಹೀಗೆ

ಜೀವ,ಜಡ ಭಿನ್ನ, ನಿರ್ದೋಷ, ಗುಣಪೂರ್ಣ ಸರ್ವೋತ್ತಮ ಪರಮಾತ್ಮ ನಾನು

ಎಂದು 'ಅತಿಥಿ' ಶಬ್ದ ತೆರೆದುಕೊಳ್ಳುತ್ತದೆ.

ಹೀಗೆ ಅತಿಥಿ ದೇವರೆಂದು ಆರಾಧನೆ ಔಚಿತ್ಯಪೂರ್ಣ.

ದೇವರೇ ಅತಿಥಿ ಪೂಜೆ ಮಾಡಿದ್ದಾನೆ.

ಜಗಕೆ ಸದಾಚರಣೆ ತೋರಿದ್ದಾನೆ.

-ರಾಮನ ಅವತಾರ.

ದುರ್ವಾಸರು ಬಂದರು.

'ಅತಿಥಿ ನಾನು. ಅತಿ ಹಸಿವೆ' ಅಂದರು.

ರಾಮ ಕಾಲು ತೊಳೆದ. ನಮಸ್ಕರಿಸಿದ.

'ಅತಿಥಿ ದೇವೋಭವ' ಎಂದ.

'ಏನುಬೇಕು ಮುನಿವರ್ಯ?'

ಕೇಳಿದ.

'ಅತಿ ಹಸಿವು ರಾಮ.

ಆಹಾರ ಬೇಕು.

ಕೊಡುವೆ ಎಂದು ಸೋತವರೇ ಎಲ್ಲ.

ಈಗಾಗಲೇ ಮಾಡಿಟ್ಟ ಅಡಿಗೆ ಬೇಡ.

ಮುಂದೆ ಮಾಡಿ ಕೊಡುವ ಅಡುಗೆ ಸಲ್ಲ.

ಇಂಥ ಆಹಾರ ಕೊಡಬಲ್ಲೆಯಾ?'

ಮುಗುಳು ನಕ್ಕ ರಘುನಂದನ.

ಬಲಗೈ ಚಾಚಿದ. ಹಸ್ತಕಮಲದ ತುದಿಯಿಂದ ಬಿಸಿ ಬಿಸಿ ಅನ್ನದ ಪ್ರವಾಹ. ಹರಿಯುತ್ತಿರುವ ಭಕ್ಷ್ಯ

ಭೋಜ್ಯಗಳು.

ಮನಸೋ ಇಚ್ಛೆ ಉಂಡ ಮುನಿ

ಸಂತೃಪ್ತ.

ಆತಿಥ್ಯ ಮಾಡಿದವ ರಾಮ.

ಅತಿಥಿ ಮುನಿ ಅಂತರ್ಯಾಮಿ ರಾಮ.

ಆತಿಥ್ಯದಲ್ಲಿ ರಾಮ.

ಹೀಗೆ ಸರ್ವತ್ರ ರಾಮ ರಾಮ.

ಇಂಥ ಅತಿಥಿ ಸತ್ಕಾರ ರಾಮ ಮಾಡಿ ತೋರಿದ.

ಕೃಷ್ಣ ಬಡ ಸುಧಾಮನ ಆಲಿಂಗಿಸಿ

ದ. ಅರಮನೆಗೆ ಕರೆದೊಯ್ದ.

ತನ್ನ ಸಿಂಹಾಸನದ ಮೇಲೆ ಅವನ

ಕುಳ್ಳಿರಿಸಿದ.

ಕಾಲು ತೊಳೆದು ಒರೆಸಿದ.

ಬಗೆ ಬಗೆಯ ಭಕ್ಷ್ಯ ಭೊಜ್ಯಗಳು.

ತನ್ನ ರಾಣಿಯ ಸಹಿತ ತಾನೇ ಬಡಿಸಿ ಉಣಿಸಿದ.

ಸುಖದ ಸುಪ್ಪತ್ತಿಗೆಯ ಮೇಲೆ ಮಲಗಿಸಿದ.

ಸತ್ಕಾರದ ವೈಭವಕ್ಕೆ ದಿಕ್ಕು ತಪ್ಪಿದಂತಾಯಿತು ಕುಚೇಲನಿಗೆ.

ಮರಳಿ ಮನೆಗೆ ಹೋದಾಗ ಸುಧಾಮನ ಬಡತನ ಮಂಗಮಾಯ.

ಕರಗದ ಸಿರಿತನ, ಕಡುಭಕ್ತಿಗಳನ್ನು ಉಡುಗೊರೆ ಕೊಟ್ಟಿದ್ದ ಕೃಷ್ಣ.

ಆತಿಥ್ಯ ಮಾಡಿದವ ಕೃಷ್ಣ.

ಅತಿಥಿಯಲ್ಲಿ ಕೃಷ್ಣ.

ಆತಿಥ್ಯದಲ್ಲಿ ಕೃಷ್ಣ.

ಎಲ್ಲ ಕೃಷ್ಣಮಯ.

ಇಂಥ ಅತಿಥಿ ಸತ್ಕಾರ ಅಂಥ ದೇವನಿಂದಲೇ ಸಾಧ್ಯ!

ತಾಯಿದೇವರು.

ತಂದೆ ದೇವರು.

ಗುರು ದೇವ.

ಮತ್ತೆ ಅತಿಥಿಯೇ ದೇವರು

ಎಂದು ಸಾರಿದ್ದು ನಮ್ಮ

ಸತ್ ಸಂಪ್ರದಾಯ.

ಅತಿಥಿ ಅಂತರ್ಗತ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು.

11/01/2022

ಗಂಡ ಹೆಂಡತಿ ಸಂಬಂಧ ಚಿರಕಾಲ ಹಾಯಾಗಿ ಇರಬೇಕಾದರೆ ಈ 11 ನಿಯಮಗಳನ್ನು ಪಾಲಿಸಿದರೆ ಸಾಕು!

ಹೆಣ್ಣಾಗಲಿ, ಗಂಡಾಗಲಿ ಮದುವೆಯಾಗದೆ ಸಿಂಗಲ್ ಆಗಿ ಇರುವವರೆಗೂ ಎಲ್ಲವೂ ಸಂತೋಷವಾಗಿ ಇರುತ್ತದೆ. ಜೀವನವನ್ನು ಎಂಜಾಯ್ ಮಾಡುತ್ತಾರೆ ಕೂಡ. ಫ್ರೆಂಡ್ಸ್ ಜತೆ ಓಡಾಡುವುದು, ಪಾರ್ಟಿ, ಪಬ್, ಟೂರ್‌ಗಳನ್ನು ಹಾಕುವುದು… ಹೀಗೆ ಬಹಳಷ್ಟು ಮಂದಿ ನಾನಾ ರೀತಿಯಲ್ಲಿ ಆ ಸಮಯದಲ್ಲಿ ಎಂಜಾಯ್ ಮಾಡುತ್ತಾರೆ. ಆದರೆ ಒಮ್ಮೆ ಮದುವೆಯಾದರೆ ಮಾತ್ರ ಇನ್ನು ಯಾರು ಏನೇ ಅಂದುಕೊಂಡರೂ, ಅಂದುಕೊಳ್ಳದಿದ್ದರೂ ಈ ರೀತಿಯ ಆಟಗಳೆಲ್ಲಾ ಬಂದ್ ಆಗುತ್ತವೆ. ಜತೆಗೆ ಕೆಲಸದ ಒತ್ತಡವೂ ಬೆಳೆಯುತ್ತದೆ. ಇದರಿಂದಾಗಿ ನಿತ್ಯ ಆಫೀಸಲ್ಲಿ ಕೆಲಸ ಮಾಡಿ ಮನೆಗೆ ಬಂದ ಮೇಲೆ ಸಂಗಾತಿ ಜತೆ ಕಳೆಯಲು ಸಮಯ ಸಹ ಸಿಗಲ್ಲ. ಕೆಲವು ಸಂದರ್ಭಗಳಲ್ಲಾದರೆ ಒಬ್ಬರನ್ನೊಬ್ಬರು ಹಿಡಿಸಿಕೊಳ್ಳುವುದೂ ಇಲ್ಲ. ಆದರೆ ದಂಪತಿಗಳು ಈ ರೀತಿ ಇರುವುದು ಒಳ್ಳೆಯದಲ್ಲ. ಅವರ ಜೀವನ ಸುಖವಾಗಿ ಇರಬೇಕೆಂದರೂ, ಯಾವುದೇ ರೀತಿಯ ತೊಂದರೆ ಇಲ್ಲದಂತೆ ಆರಾಮವಾಗಿ ಲೈಫ್ ಕಳೆಯಬೇಕೆಂದರೂ ಕೆಲವು ಸೂಚನೆಗಳನ್ನು ಪಾಲಿಸಬೇಕು ಎನ್ನುತ್ತಿದ್ದಾರೆ ವೈದ್ಯರು. ಆ ಸೂಚನೆಗಳು ಯಾವುದೆಂದರ.

ದಂಪತಿಗಳಲ್ಲಿ ಯಾರಾದರೂ ಒಬ್ಬರು ಅಥವಾ ಇಬ್ಬರೂ ಜಾಬ್ ಮಾಡಿದರೂ ಸಂಜೆ ಮನೆಗೆ ಬಂದ ಕೂಡಲೆ ತಮ್ಮ ಸಂಗಾತಿಯನ್ನು ಆತ್ಮೀಯವಾಗಿ ಒಮ್ಮೆ ಮಾತನಾಡಿಸಬೇಕಂತೆ. ಅಷ್ಟೇ ಹೊರತು ಅವರನ್ನು ಹಿಡಿಸಿಕೊಳ್ಳದೆ ಇರಬಾರದು. ಆ ರೀತಿ ಮಾತನಾಡುವುದರಿಂದ ದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚುತ್ತದೆ. ದಿನವೆಲ್ಲಾ ಆಫೀಸಲ್ಲಿ ಎದುರಾಗುವ ಒತ್ತಡ ಸಹ ದೂರವಾಗುತ್ತದೆ.ಆಫೀಸಿನಿಂದ ಮನೆಗೆ ಬರುವಾಗ ಆಫೀಸು ವಿಷಯಗಳನ್ನು ಬಿಟ್ಟು ಮನೆ ಬಗ್ಗೆ, ಜೀವನ ಸಂಗಾತಿ ಬಗ್ಗೆ ಸ್ವಲ್ಪ ಹೊತ್ತು ಆಲೋಚಿಸಬೇಕಂತೆ. ಇದರಿಂದ ನಿಮ್ಮನ್ನು ಮನೆಯ ಬಳಿ ಇರುವವರು ಎಷ್ಟು ಪ್ರೀತಿಸುತ್ತಿದ್ದಾರೋ, ಅವರು ನಿಮ್ಮನ್ನು ಎಷ್ಟು ಮಿಸ್ ಆಗುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ.

ನಿತ್ಯ ಆಫೀಸ್ ಕೆಲಸಗಳಿಂದ ಒದ್ದಾಡುತ್ತಿದ್ದರೂ, ಆಗಾಗ ಜಾಲಿಯಾಗಿ ಹೊರಗೆ ಸುತ್ತಾಡಿ ಬರಬೇಕಂತೆ. ಯಾವುದಾರು ಪಾರ್ಕ್ ಅಥವಾ ಸಿನಿಮಾ, ರೆಸ್ಟೋರೆಂಟ್‌ಗೆ ಹೋಗಿ ಎಂಜಾಯ್ ಮಾಡಿ ಬರಬೇಕು.ಬಹಳಷ್ಟು ದಂಪತಿಗಳು ತಮ್ಮ ಜೀವನ ಸಂಗಾತಿಯ ಜತೆ ಲೈಫನ್ನು ಎಂಜಾಯ್ ಮಾಡಲು ಇಷ್ಟಪಡುತ್ತಾರೆ. ಈ ಹಿನ್ನೆಲೆಯಲ್ಲಿ ಇತರರು ಯಾರಾದರು ಮನೆಗೆ ಬಂದು ಡಿಸ್ಟರ್ಬ್ ಮಾಡದಂತೆ ರೂಮಿನ ಬಾಗಿಲುಗಳನ್ನು ಹಾಕಿಕೊಂಡು ಲೈಫನ್ನು ಎಂಜಾಯ್ ಮಾಡಬೇಕಂತೆ. ಎಲ್ಲವನ್ನೂ ತೆರೆದಿಡಬಾರದು. ಆ ರೀತಿ ಇದ್ದರೆ ಕೆಲವು ದಂಪತಿಗಳಿಗೆ ಇಷ್ಟವಾಗಲ್ಲವಂತೆ.ದೇಹದಿಂದ ದುರ್ವಾಸನೆ ಬರುವುದು, ಗ್ಯಾಸ್ ಸಮಸ್ಯೆಗಳು ಇವೆಲ್ಲಾ ಪ್ರಕೃತಿ ಸಹಜ ಕ್ರಿಯೆಗಳು. ಇವು ಪ್ರತಿಯೊಬ್ಬರಿಗೂ ಸಹಜ. ಆದರೆ ಅವುಗಳಿಂದ ಬೇಸರ ಮಾಡಿಕೊಳ್ಳಬಾರದಂತೆ. ಇದೇನಿದು ದುರ್ವಾಸನೆ ಎಂದು ಅವರನ್ನು ದೂರ ತಳ್ಳಬಾರದು.ಮನೆಯಲ್ಲಿ ಯಾವುದೇ ಕೆಲಸ ಮಾಡಿದರೂ ಸಾಮಾನ್ಯವಾಗಿ ಮಹಿಳೆಯರೇ ಮಾಡುತ್ತಾರೆ. ಗಂಡಸರು ಮಾಡಲ್ಲ. ತರಕಾರಿ ಹೆಚ್ಚುವುದು, ಬಟ್ಟೆ ಒಗೆಯುವುದು, ಮನೆ ಸ್ವಚ್ಛಗೊಳಿಸುವಂತಹ ಕೆಲಸಗಳನ್ನು ಹೆಂಗಸರ ಜತೆ ಹಂಚಿಕೊಂಡರೆ ಆಗ ಆ ದಂಪತಿಗಳ ಜೀವನ ಸಂತೋಷವಾಗಿ ಇರುತ್ತದೆ.

ಬಹಳಷ್ಟು ಮಂದಿ ಸ್ರೀ ಪುರುಷರು ಮದುವೆಯಾದ ಸ್ವಲ್ಪ ದಿನಗಳಿಗೆ ಅಥವಾ ಸ್ವಲ್ಪ ತಿಂಗಳ ಬಳಿಕ ತಮ್ಮ ಹಾಬಿಗಳನ್ನು, ಇಷ್ಟಗಳನ್ನು ಬಿಟ್ಟುಬಿಡುತ್ತಾರಂತೆ. ಆದರೆ ಆ ರೀತಿ ಮಾಡಬೇಕಾದ ಅಗತ್ಯ ಇಲ್ಲವಂತೆ. ಜೀವನ ಸಂಗಾತಿ ಜತೆ ಹೊಂದಿಕೊಂಡು ಹೋಗುತ್ತಾ ತಮ್ಮ ಇಷ್ಟ, ಹಾಬಿಗಳನ್ನು ಮುಂದುವರೆಸಿದರೆ ತೊಂದರೆ ಏನೂ ಇರಲ್ಲ.ದಂಪತಿಗಳು ಎಂದ ಮೇಲೆ ಇಬ್ಬರ ನಡುವೆ ಕಠಿಣ ಸಂದರ್ಭಗಳೂ ಬರುತ್ತಿರುತ್ತವೆ. ಅಂತಹ ಸಮಯದಲ್ಲಿ ಸಾಧ್ಯವಾದಷ್ಟು ತೀವ್ರವಾಗಿ ಮನೋಭಾವಗಳನ್ನು ವ್ಯಕ್ತಪಡಿಸುವುದು, ಅಥವಾ ಬೈಯ್ಯುವುದನ್ನು ಮಾಡಬಾರದು. ಆ ರೀತಿ ಮಾಡಿದರೆ ಎದುರಿನವರಿಗೆ ಜೀವನ ಸಂಗಾತಿ ಮೇಲಿನ ಪ್ರೀತಿ ದೂರವಾಗುತ್ತದೆ.

ದಂಪತಿಗಳಲ್ಲಿ ಇಬ್ಬರೂ ತಮ್ಮ ಎರಡೂ ಕಡೆಯ ಬಂಧುಗಳು, ಕುಟುಂಬ ಸದಸ್ಯರು, ಸ್ನೇಹಿತರನ್ನು ಸಮಾನ ಗೌರವ ಕೊಡಬೇಕು. ಇದರಿಂದ ಜೀವನ ಸಂಗಾತಿಯ ಮೇಲೆ ಒಳ್ಳೆಯ ಅಭಿಪ್ರಾಯ ಉಂಟಾಗುತ್ತದೆ.ಮನೆಯಲ್ಲಿ ತುಂಬಾ ಕೋಣೆಗಳಿರುವ ದಂಪತಿಗಳು ಯಾವಾಗಲೂ ಒಂದೇ ಕೋಣೆಯಲ್ಲಿ ಅಲ್ಲದೆ ಇಬ್ಬರೂ ಸ್ವಲ್ಪ ಸಮಯ ಬೇರೆ ಬೇರೆ ರೂಮುಗಳಲ್ಲಿ ಕಳೆದರೆ ಇದರಿಂದ ಥ್ರಿಲ್ಲಿಂಗ್ ಆಗಿರುತ್ತದೆ.ದಂಪತಿಗಳಿಬ್ಬರೂ ತಮ್ಮ ಸಂಬಂಧಗಳಲ್ಲಿ ಏನೆಲ್ಲಾ ಕಳೆದುಕೊಳ್ಳುತ್ತಿದ್ದಾರೆ, ಏನೆಲ್ಲಾ ಗ್ರಹಿಸುತ್ತಿದ್ದಾರೆ ಎಂದು ಯಾವಾಗಲೂ ತಿಳಿದುಕೊಳ್ಳುತ್ತಾ ಇರಬೇಕು. ಇದರಿಂದ ಜೀವನವನ್ನು ಆನಂದವಾಗಿ ಕಳೆಯಲು ಸಾಧ್ಯವಾಗುತ್ತದೆ.

11/01/2022

*ಬ್ರಾಹ್ಮಣರೇಕೆ ಒಂದಾಗಲು ಸಾಧ್ಯವಿಲ್ಲ ಎನ್ನುವುದಕ್ಕೆ ವಿಪ್ರರೊಬ್ಬರು ಬಹಳ ಚೆನ್ನಾಗಿ ವಿವರಿಸಿದ್ದಾರೆ.*

೧) ಅತೀ ಬುದ್ಧಿವಂತಿಕೆ
ಬ್ರಾಹ್ಮಣರೆಲ್ಲರೂ ಬುದ್ದಿವಂತರೆ.. ಮತ್ತೊಬ್ಬ ಬ್ರಾಹ್ಮಣ ಹೇಳುವ ಮಾತುಗಳನ್ನು ಕೇಳುವ ತಾಳ್ಮೆ ಇನ್ನೊಬ್ಬನಲ್ಲಿ ಇರುವುದಿಲ್ಲ. ತಾನೇ ತ್ರಿಕಾಲ‌ಜ್ಞಾನಿ ಅಂದುಕೊಂಡಿರುತ್ತಾರೆ. ಈ ನಾನು ನಾನು ಎನ್ನುವ ಅಹಂ ಕೊಂಚ ಅವರ ದಾರಿ ತಪ್ಪಿಸುತ್ತಿದೆ..

೨) ಅಸಹಿಷ್ಣುತೆ ಮತ್ತು ಅಸಹಕಾರ
ವಿಪ್ರನೊಬ್ಬ ಬ್ರಾಹ್ಮಣ ಜಾತಿಯ ಒಳಪಂಗಡಗಳಿಗೆ ಸೀಮಿತನಾಗಿ ತನ್ನದೇ ಶ್ರೇಷ್ಠ ಪಂಗಡ ಎಂದುಕೊಳ್ಳುತ್ತಾನೆ. ವೈಷ್ಣವ, ಸ್ಮಾರ್ಥ, ದೇಶಸ್ಥ, ಕೊಂಕಣಸ್ಥ, ಕಣ್ವ ಹೀಗೆ ಹರಿದು ಹಂಚಿಹೋಗಿದ್ದಾನೆ. ಅವನಿಗೆ ಇನ್ನೊಬ್ಬ ಪಂಗಡದವನ ಆಚಾರ ವಿಚಾರಗಳನ್ನು ಮೂದಲಿಸುವ ವ್ಯವಧಾನ ಬಂದುಬಿಟ್ಟಿದೆ. ಇದೊಂದು ರೀತಿಯ ಅಸಹಿಷ್ಣುತಾ ಭಾವ.
ವಿಪ್ರನೊಬ್ಬ ಮಾಡುವ ಯಾವುದೇ ಸತ್ಕಾರ್ಯಗಳನ್ನು ಒಪ್ಪಿ, ಅಪ್ಪಿಕೊಳ್ಳದೆ ಅಲ್ಲಿ‌ ಏನಾದರೊಂದು ಹುಳುಕು ಹುಡುಕುವ ಮಾನಸಿಕ ವ್ಯಾಧಿಯನ್ನು ಬೆಳಸಿಕೊಂಡಿದ್ದಾರೆ. ಈ ರೀತಿಯ ಅಸಹಕಾರ ವಿಪ್ರರಲ್ಲಿಯೇ ಜಾಸ್ತಿ

೩) ಕಾಲೆಳೆಯುವಿಕೆ ಮತ್ತು ಮಾತ್ಸರ್ಯ..

ಹೆಣ್ಣಿಗೆ ಹೆಣ್ಣೆ ಶತ್ರು ಎಂದಂತೆ ವಿಪ್ರರಿಗೆ ವಿಪ್ರರೆ ಮೊದಲ ತೊಡಕು.. ಬ್ರಾಹ್ಮಣನೊಬ್ಬ ಏಳ್ಗೆಯಾಗುತ್ತಿದ್ದಾನೆಂದರೆ ಸಾಕು, ಒಂದು ಹಿಂಡು ಕಾಲು ಎಳೆಯುವದರಲ್ಲಿ ಸನ್ನದ್ಧವಾಗಿ ಬಿಡುತ್ತೆ..
ಇಂತಹ ಮಾತ್ಸರ್ಯ, ಒಳ ಬೇಗುದಿ, ಕಿಚ್ಚು, ಪಿತೂರಿ ಬಣ್ಣಿಸಲು ನನಗೆ ನಾಚಿಕೆಯಾಗುತ್ತದೆ.

ಹೀಗೆ ನಮ್ಮನ್ನು ನಾವು ತುಳಿಯೋದರಿಂದ ನಾವು ತಲತಲಾಂತರದಿಂದ ಬಡಬ್ರಾಹ್ಮಣರಾಗಿ ಉಳಿದಿದ್ದೇವೆ. ಆಳುವ ದೊರೆಗಳ ಆಳಾಗಿದ್ದೇವೆ.. ನಾವು ಈ ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡಾಗ ಮಾತ್ರವೇ ನಮ್ಮ ಏಳ್ಗೆ....ಇನ್ನು ಮುಂದಾದ್ರು ಆಲೋಚನೆ ಮಾಡಿ ಒಗ್ಗಟ್ಟು ಆಗಿರೋದಕ್ಕೆ ಪ್ರಯತ್ನ ಪಡಿ ನಮ್ಮಲ್ಲಿ ಯಾವ ಭೇದ ಭಾವ ಇಲ್ಲದೆ ಒಗ್ಗಟ್ಟಾಗಿರಲು ಪ್ರಯತ್ನಿಸೋಣ ಬಂಧುಗಳೇ.

11/01/2022

ಮಂಗಳಸೂತ್ರ ಧರಿಸುವ ಪ್ರತಿ ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ವಿಷಯ!

ಮಂಗಳಸೂತ್ರ ಎಷ್ಟು ಉದ್ದವಿರಬೇಕು ?
ಮಂಗಳಸೂತ್ರವು ಸ್ತ್ರೀಯರ ಅನಾಹತ ಚಕ್ರದ ವರೆಗೆ (ಎದೆಯ ಮಧ್ಯದ ವರೆಗೆ) ಬರುವಷ್ಟು ಉದ್ದವಿರ ಬೇಕು.ಮಂಗಳಸೂತ್ರವು ಅನಾಹತ ಚಕ್ರದವರೆಗಿದ್ದರೆ, ಅನಾಹತಚಕ್ರದ ಜಾಗೃತಿಯಿಂದ ನಿರ್ಮಾಣವಾಗುವ ಕ್ರಿಯಾಶಕ್ತಿಯ ರಜೋಗುಣೀ ಕಾರ್ಯವನ್ನು ತನ್ನಲ್ಲಿರುವ ಸತ್ತ್ವಗುಣದ ಸಹಾಯದಿಂದ ಲಯಗೊಳಿಸಿ ಸ್ತ್ರೀಯರನ್ನು ವೈರಾಗ್ಯದೆಡೆಗೆ, ಅಂದರೆ ಕಾರ್ಯವನ್ನು ಮಾಡಿಯೂ ಮಾಡದಂತಹ ಸ್ಥಿತಿಗೆ ಕೊಂಡೊಯ್ಯುತ್ತದೆ, ಅಂದರೆ ಸ್ತ್ರೀಯರನ್ನು ಸತತವಾಗಿ ವರ್ತಮಾನ ಸ್ಥಿತಿಯಲ್ಲಿಡುತ್ತದೆ.
ಮಂಗಳಸೂತ್ರದ ಬಟ್ಟಲುಗಳು ಹೇಗಿರಬೇಕು:ಮಂಗಳಸೂತ್ರದ ಬಟ್ಟಲುಗಳು ಗೋಲಾಕಾರವಾಗಿರಬೇಕು ಮತ್ತು ಅವುಗಳ ಮೇಲೆ ಯಾವುದೇ ವಿನ್ಯಾಸ ವಿರಬಾರದು.

ಗೋಲಾಕಾರ ಬಟ್ಟಲುಗಳ ಮಹತ್ವ:
೧) ಗೋಲಾಕಾರವು ಶೂನ್ಯ, ಅಂದರೆ ಟೊಳ್ಳಿರುವ ಬ್ರಹ್ಮನಿಗೆ ಸಂಬಂಧಿಸಿರುವುದರಿಂದ ಜೀವದ ಅವಶ್ಯಕತೆಗನುಸಾರ ಆಯಾಯ ಸ್ತರದಲ್ಲಿನ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಇತರ ಆಕಾರಗಳಿಗಿಂತ ಹೆಚ್ಚಿರುತ್ತದೆ. ಆದುದರಿಂದ ಗೋಲಾಕಾರವನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ.
೨. ಗೋಲಾಕಾರವು (ಗೋಲವು) ಜ್ಞಾನಶಕ್ತಿಯ ಪ್ರತೀಕವಾಗಿದೆ.
೩. ಗೋಲಾಕಾರವು ಶಿವ-ಶಕ್ತಿಯರ ಸತ್ತ್ವ ಗುಣಕ್ಕೆ ಸಂಬಂಧಿಸಿದೆ.
೪. ಗೋಲಾಕಾರದ ಮಧ್ಯಬಿಂದುವು ಆಘಾತಾತ್ಮಕ ಶಕ್ತಿರೂಪೀ ಲಹರಿಗಳನ್ನು ಪ್ರದಾನಿಸುವುದಾಗಿದ್ದರೆ, ಬಾಹ್ಯಗೋಲವು ಶಿವರೂಪಿ ಬ್ರಹ್ಮನಿಗೆ ಸಂಬಂಧಿಸಿದೆ.

ಮಂಗಳಸೂತ್ರವನ್ನು ಚಿನ್ನದ ತಂತಿಯಲ್ಲಿ ಕಟ್ಟಿಸಿರುವುದರಿಂದಾಗುವ ಲಾಭಗಳು
ಮಂಗಳಸೂತ್ರವನ್ನು ಚಿನ್ನದ ತಂತಿಯಲ್ಲಿ ಕಟ್ಟಿಸಿರುತ್ತಾರೆ. ಚಿನ್ನವು ಬ್ರಹ್ಮಾಂಡದಲ್ಲಿನ ತೊಂದರೆ ದಾಯಕ ಸ್ಪಂದನಗಳನ್ನು ತನ್ನಲ್ಲಿ ಜಾಗೃತವಾಗಿರುವ ತೇಜಶಕ್ತಿಯಿಂದ ನಾಶಗೊಳಿಸುತ್ತದೆ. ಸ್ತ್ರೀಯರ ನಿರ್ಮಿತಿಯ ಶಕ್ತಿಗೆ ಸಂಬಂಧಿಸಿದ ಮಂಗಳಸೂತ್ರದಲ್ಲಿನ ರಚನೆ, ಒಂದು ಬಟ್ಟಲು, ಅದರ ಮೇಲಿನ ಎರಡು ಮಣಿ ಮತ್ತು ಅವುಗಳನ್ನು ಜೋಡಿಸುವ ನಾಲ್ಕು ಎಸಳುಗಳ ಹೂವು ಒಟ್ಟಿಗೆ ಸೇರಿ ತ್ರಿಕೋನಾಕಾರ ನಿರ್ಮಾಣವಾಗುತ್ತದೆ. ತ್ರಿಕೋನಾಕಾರವು ಸ್ತ್ರೀಯರ ನಿರ್ಮಿತಿ ಶಕ್ತಿಗೆ ಸಂಬಂಧಿಸಿರುವುದರಿಂದ ತನ್ನ ನಿರ್ಮಿತಿಯ ಕಾರ್ಯವನ್ನು ಯಾವಾಗಲೂ ಜಾಗೃತ ಸ್ಥಿತಿಯಲ್ಲಿಡುತ್ತದೆ.

ಆದುದರಿಂದ ಸ್ತ್ರೀಯರ ‘ಪ್ರೇಮಿಸುವ ಮೂಲಭಾವವು ಸ್ಥಿರವಾಗಿ ಉಳಿದುಕೊಳ್ಳುತ್ತದೆ. ಮಂಗಳಸೂತ್ರದ ಗೋಲಮಂಡಲದ ಮಧ್ಯದಲ್ಲಿ ತಯಾರಾಗುವ ಲಂಬಗೋಲಾಕಾರವು ಶ್ರೀವಿಷ್ಣುವಿನ ಅಪ್ರಕಟ ಕ್ರಿಯಾಶಕ್ತಿಗೆ ಸಂಬಂಧಿಸಿರುವುದರಿಂದ ಸುಷುಮ್ನಾನಾಡಿಯನ್ನು ಜಾಗೃತ ಗೊಳಿಸುತ್ತದೆ: ಮಂಗಳಸೂತ್ರದ ಗೋಲಮಂಡಲದ ಮಧ್ಯದಲ್ಲಿ ನಿರ್ಮಾಣವಾಗುವ ಲಂಬಗೋಲಾ ಕಾರವು ಶ್ರೀವಿಷ್ಣುವಿನ ಅಪ್ರಕಟ ಕ್ರಿಯಾಶಕ್ತಿಗೆ ಸಂಬಂಧಿಸಿದೆ. ಈ ಆಕಾರವು ಸ್ತ್ರೀಯರಿಗೆ ನಿರ್ಗುಣ ಸ್ತರದಲ್ಲಿನ ಈಶ್ವರನ ಸ್ಪಂದನಗಳನ್ನು ಗ್ರಹಿಸಲು ಉಪಯೋಗವಾಗುತ್ತದೆ, ಅಲ್ಲದೇ ಅದು ಸುಷುಮ್ನಾ ನಾಡಿಯನ್ನು ಜಾಗೃತಗೊಳಿಸುವ ಕಾರ್ಯವನ್ನು ಮಾಡುವುದರಿಂದ ಸ್ತ್ರೀರೂಪೀ ಪ್ರಕೃತಿಗೆ ಪುರುಷಸ್ವರೂಪಿ ಶಿವನಲ್ಲಿ ಏಕರೂಪವಾಗಲು ಸಹಾಯವಾಗಿ ಸ್ತ್ರೀಯು ಬೇಗನೇ ಮಾಯೆಯಿಂದ ಮುಕ್ತಳಾಗುತ್ತಾಳೆ.

10/01/2022

*‌ಸಪ್ತ ಋಷಿಗಳು ಯಾರು ಗೊತ್ತಾ. *ವೈದಿಕ ಕ್ಷೇತ್ರದಲ್ಲಿ ಇವರ ಮಹತ್ವವೇನು ತಿಳಿಯಿರಿ*

ವೈದಿಕ ಕ್ಷೇತ್ರದಲ್ಲಿನ ಏಳು ಪ್ರಮುಖ ಮಹರ್ಷಿಗಳನ್ನು ಅಥವಾ ಋಷಿಗಳನ್ನು ಸಪ್ತ ಋಷಿಗಳು ಎನ್ನಲಾಗುತ್ತದೆ. ಸಪ್ತ ಋಷಿಗಳು ಯಾರು ಗೊತ್ತಾ..? ಇಲ್ಲಿದ್ದಾರೆ ನೋಡಿ ಸಪ್ತ ಋಷಿಗಳೆನ್ನಲಾಗುವ ಪ್ರಮುಖ ಏಳು ಋಷಿಗಳು.

ಸಾಮಾನ್ಯವಾಗಿ ಹೆಚ್ಚಿನವರು ಸಪ್ತ ಋಷಿ ಎನ್ನುವ ಶಬ್ಧವನ್ನು ಕೇಳಿರುತ್ತಾರೆ. ಆದರೆ ಸಪ್ತ ಋಷಿಗಳು ಯಾರು..? ಅವರ ಕೆಲಸವೇನು..? ಎಂಬುದರ ಕುರಿತು ಹೆಚ್ಚಿನವರಿಗೆ ಅರಿವಿಲ್ಲ. ಸಪ್ತ ಋಷಿಗಳೆಂದರೆ ವೈದಿಕ ಕ್ಷೇತ್ರದ 7 ಶ್ರೇಷ್ಠ ಋಷಿಗಳು. ಅವರು ಯೋಗದ ಶಕ್ತಿಯಿಂದ ದೀರ್ಘಾಯುಷ್ಯವನ್ನು ಹೊಂದಿದವರು. ಈ 7 ಋಷಿಗಳನ್ನು ಅಮರರು ಎನ್ನಲಾಗುತ್ತದೆ. ಭೂಮಿಯ ಮೇಲಿನ ಸಮತೋಲನವನ್ನು ಕಾಪಾಡಿಕೊಳ್ಳಲು, ಮಾನವ ಜನಾಂಗಕ್ಕೆ ಮಾರ್ಗದರ್ಶನ ನೀಡಲು, ದೇವರುಗಳ ಪ್ರತಿನಿಧಿಯಾಗಿ ಸೇವೆಸಲ್ಲಿಸಲು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಅವರನ್ನು ಭೂಮಿಯಲ್ಲಿ ನೇಮಿಸುತ್ತಾರೆ. ಬೃಹದಾರಣ್ಯಕ ಉಪನಿಷತ್‌ನ ಪ್ರಕಾರ, ಪ್ರಸ್ತುತ ಮನ್ವಂತರದ ಸಪ್ತ ಋಷಿಗಳ ಮಾಹಿತಿ....
‌ ‌ *ಭಾರಧ್ವಜ ಮರ್ಹಷಿ*

ಭಾರಧ್ವಜ ಋಷಿಗಳು ವೈದಿಕ ಕಾಲದ ಶ್ರೇಷ್ಠ ಋಷಿಗಳಲ್ಲೊಬ್ಬರಾಗಿದ್ದರು ಮತ್ತು ಇವರು ಅಂಗೀರಸ ಮುನಿಯವರ ವಂಶಸ್ಥರಾಗಿದ್ದರು. ಭಾರಧ್ವಜ ಋಷಿಗಳ ತಂದೆ ದೇವಗುರು ಬೃಹಸ್ಪತಿ. ಋಷಿ ಭಾರಧ್ವಜರನ್ನು ಆಯುರ್ವೇದದ ಲೇಖಕ ಎಂದು ಪರಿಗಣಿಸಲಾಗುತ್ತದೆ. ಭಾರಧ್ವಜ ಋಷಿಗಳು ದ್ರೋಣಾಚಾರ್ಯರ ತಂದೆ ಹಾಗೂ ಇವರ ಆಶ್ರಮವನ್ನು ಇಂದಿಗೂ ನಾವು ಅಲಹಾಬಾದ್‌ನಲ್ಲಿ ನೋಡಬಹುದು. ಭಾರಧ್ವಜ ಋಷಿಗಳು ದೇವಾಸ್ತ್ರಗಳ ಹಾಗೂ ಯುದ್ಧ ಕಲೆಯ ಪ್ರವೀಣರಾಗಿದ್ದರು. ಭಾರಧ್ವಜ ಋಷಿಗಳ ಪತ್ನಿ ಸುಶೀಲಾ ಹಾಗೂ ದೇವವರ್ಣಿನಿ ಎನ್ನುವ ಮಗಳು ಮತ್ತು ಗರ್ಗಾ ಎನ್ನುವ ಮಗನಿದ್ದನು. ದ್ರೋಣಾಚಾರ್ಯರು ಅಪ್ಸರ ಮತ್ತು ಭಾರಧ್ವಜ ಋಷಿಗಳ ಮಗನಾಗಿದ್ದಾನೆ. ಕೆಲವು ಪುರಾಣಗಳ ಪ್ರಕಾರ, ಭಾರಧ್ವಜ ಋಷಿಯು ಗಂಗಾ ನದಿಯ ದಡದಲ್ಲಿ ಭರತ ಎನ್ನುವ ರಾಜನಿಗೆ ಸಿಕ್ಕಿದನು. ಅಲ್ಲಿಂದ ಆತನನ್ನು ಭರತ ರಾಜನು ದತ್ತುಮಗನಾಗಿ ಸಾಕಿದನೆಂದು ಹೇಳಲಾಗುತ್ತದೆ಼.

*ವಿಶ್ವಾಮಿತ್ರ ಮಹರ್ಷಿ*

ಸಪ್ತ ಋಷಿಗಳಲ್ಲಿ ವಿಶ್ವಾಮಿತ್ರ ಮುನಿಯು ಅತ್ಯಂತ ಪ್ರಸಿದ್ಧ ಋಷಿಯಾಗಿದ್ದರು. ಗಾಯತ್ರಿ ಮಂತ್ರವನ್ನು ಕಂಡುಹಿಡಿದ ವೇದಗಳ ಕಾಲದ ಪ್ರಮುಖ ಋಷಿಮುನಿಗಳಲ್ಲಿ ವಿಶ್ವಾಮಿತ್ರರು ಒಬ್ಬರಾಗಿದ್ದಾರೆ. ಬ್ರಹ್ಮರ್ಷಿಯ ಮಟ್ಟಕ್ಕೆ ಏರಲು ಕೇವಲ ಆತನ ಅರ್ಹತೆ ಮಾತ್ರವಲ್ಲ, ಅದಕ್ಕೆ ಬ್ರಹ್ಮ ದೇವನ ಅನುಮತಿಯೂ ಬೇಕಾಗುತ್ತದೆ. ಆದರೆ ವಿಶ್ವಾಮಿತ್ರರ ವಿಷಯದಲ್ಲಿ ಇದು ಸುಳ್ಳಾಗಿದೆ. ವಿಶ್ವಾಮಿತ್ರರು ಕೇವಲ ತಮ್ಮ ಸ್ವ ಅರ್ಹತೆಯಿಂದ ಬ್ರಹ್ಮರ್ಷಿಗಳಾದವರು.

ವಸಿಷ್ಠರೊಂದಿಗಿನ ವಿಶ್ವಾಮಿತ್ರರ ಹೋರಾಟ ಗಣನೀಯವಾಗಿದೆ. ವಿಶ್ವಾಮಿತ್ರರು ಬ್ರಾಹ್ಮಣರಾಗಿರಲಿಲ್ಲ. ಬದಲಾಗಿ ಇವರು ಕ್ಷತ್ರಿಯ ಧರ್ಮದಲ್ಲಿ ಜನಿಸಿದವರಾಗಿದ್ದರು. ಒಮ್ಮೆ ವಿಶ್ವಾಮಿತ್ರರ ನಡುವೆ ಮತ್ತು ವಸಿಷ್ಠರ ನಡುವೆ ಹೋರಾಟ ನಡೆದಾಗ ವಿಶ್ವಾಮಿತ್ರರು ಇದರಲ್ಲಿ ಸೋಲನ್ನು ಅನುಭವಿಸುತ್ತಾರೆ಼. ವಸಿಷ್ಠರ ವಿರುದ್ಧದ ಸೋಲಿನಿಂದ ವಿಶ್ವಾಮಿತ್ರರು ತಪಸ್ಸಿನಿಂದ ಪಡೆದ ಶಕ್ತಿಯು ದೈಹಿಕ ಶಕ್ತಿಗಿಂತ ಮಿಗಿಲಾದದ್ದು ಎಂದು ಅರಿತುಕೊಂಡರು. ಆಗ ವಿಶ್ವಾಮಿತ್ರರು ತನ್ನ ರಾಜ್ಯವನ್ನು ದಾನ ಮಾಡಿ ವಸಿಷ್ಢರಿಗಿಂತಲೂ ದೊಡ್ಡ ಋಷಿಯಾಗಬೇಕೆಂದು ಹೊರಡುತ್ತಾರೆ. ಅಂದಿನಿಂದ ಅವರ ವಿಶ್ವಾಮಿತ್ರ ಎನ್ನುವ ಹೆಸರನ್ನು ಪಡೆದರು. ವಿಶ್ವಾಮಿತ್ರರ ಮೂಲ ಹೆಸರು ಕೌಶಿಕ. ಸಾವಿರಾರು ವರ್ಷಗಳ ಕಠಿಣ ತಪಸ್ಸಿನಿಂದ, ಜ್ಞಾನದಿಂದ, ಪ್ರಯೋಗಗಳಿಂದ ಕೊನೆಗೂ ವಿಶ್ವಾಮಿತ್ರರು ಬ್ರಹ್ಮ ಮತ್ತು ವಸಿಷ್ಠರಿಂದ ಬ್ರಹ್ಮರ್ಷಿ ಎನ್ನುವ ಬಿರುದನ್ನು ಪಡೆದುಕೊಂಡರು.

​ *ವಸಿಷ್ಠ ಮರ್ಹಷಿ*

ವಸಿಷ್ಠ ಮುನಿಗಳು ಮನ್ವಂತರದಲ್ಲಿನ ಸಪ್ತಋಷಿಗಳಲ್ಲಿ ಒಬ್ಬರು ಮತ್ತು ಅರುಂಧತಿಯ ಪತಿ. ವಸಿಷ್ಠ ಮಹರ್ಷಿಯು ಬ್ರಹ್ಮನ ಮಾನಸಪುತ್ರದಿಂದ ಜನಿಸಿದ ಮಗ. ಹಾಗೂ ಸೂರ್ಯ ವಂಶದ ಅಥವಾ ಸೌರ ರಾಜವಂಶದ ರಾಜಗುರುವಾಗಿದ್ದವರು. ವಸಿಷ್ಠರು ಚುನಾವಣಾ ಜ್ಯೋತಿಷ್ಯ ಕುರಿತ ಗ್ರಂಥವಾದ ವಸಿಷ್ಠ ಸಂಹಿತೆಯ ಲೇಖಕರು. ಋಗ್ವೇದದ ಸ್ತೋತ್ರಗಳಲ್ಲಿ ವಸಿಷ್ಠ ಬ್ರಹ್ಮರ್ಷಿಯನ್ನು ಮತ್ತು ಆತನ ಕುಟುಂಬವನ್ನು ವೈಭವೀಕರಿಸಲಾಗಿದೆ. ಭಗವಾನ್‌ ರಾಮನು ಕೇಳಿದ ಲೌಕಿಕ ಪ್ರಶ್ನೆಗಳಿಗೆ ವಸಿಷ್ಠ ಮಹರ್ಷಿ ಉತ್ತರವನ್ನು ನೀಡುತ್ತಾನೆ. ಇವುಗಳೇ ಯೋಗ ವಸಿಷ್ಠ ಎನ್ನುವ ಗ್ರಂಥದ ಸಂದರ್ಭ ಮತ್ತು ವಿಷಯವಾಗಿದೆ.

*ಗೌತಮ ಮಹರ್ಷಿ*

ಮಹರ್ಷಿ ಗೌತಮರು ಸಪ್ತ ಋಷಿಗಳಲ್ಲಿ ಒಬ್ಬರು ಹಾಗೂ ಇವರು ಅಂಗೀರಸ ವಂಶಕ್ಕೆ ಸೇರಿದವರಾಗಿದ್ದರು. ಗೌತಮ ಮಹರ್ಷಿಗಳು ಗವತಮ ಧರ್ಮ ಸೂತ್ರವನ್ನು, ಋಗ್ವೇದದ ಮತ್ತು ಸಾಮವೇದದ ಮಂತ್ರಗಳನ್ನು ಬರೆದಿದ್ದಾರೆ. ಗೌತಮ ಮುನಿಗಳು ಬ್ರಹ್ಮ ದೇವನ ಮಗಳಾದ ಅಹಲ್ಯಾಳನ್ನು ವಿವಾಹವಾಗುತ್ತಾರೆ. ಬ್ರಹ್ಮನು ಸೂಕ್ತ ಸಮಯದಲ್ಲಿ ಯಾರು ಭೂಮಿಯನ್ನು ಸುತ್ತುತ್ತಾರೋ ಅವರಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡುವುದಾಗಿ ಘೋಷಿಸುತ್ತಾನೆ. ಆಗ ಎಲ್ಲಾ ಋಷಿ, ಮುನಿಗಳು ಷರತ್ತನ್ನು ಗೆಲ್ಲಲು ಮುಂದಾಗುತ್ತಾರೆ ಆದರೆ ಗೌತಮ ಮಹರ್ಷಿಗಳು ಒಂದು ದೈವಿಕ ಹಸುವಿನ ಸುತ್ತಲೂ ಸುತ್ತುತ್ತಾರೆ. ಆಗ ಅವರ ಬುದ್ಧಿವಂತಿಕೆಯನ್ನು ಹಾಗೂ ಷರತ್ತಿನಲ್ಲಿ ಗೆಲುವನ್ನು ನೋಡಿದ ಬ್ರಹ್ಮನು ತನ್ನ ಪುತ್ರಿ ಅಹಲ್ಯಾಳನ್ನು ಗೌತಮ ಮುನಿಗಳಿಗೆ ವಿವಾಹ ಮಾಡಿಕೊಡುತ್ತಾರೆ. ಗೌತಮ ಋಷಿ ಅಹಂಕಾರವಿಲ್ಲದ ವ್ಯಕ್ತಿ. ದೇಶದಲ್ಲಿ ಬರಗಾಲ ಬಂದಾಗ ಅವರು ಮಳೆಗಾಗಿ ವರುಣ ದೇವನನ್ನು ಕಠಿಣ ಧ್ಯಾನದ ಮೂಲಕ ಒಲಿಸಿಕೊಂಡು ಜನರನ್ನು ಬರಗಾಲದಿಂದ ಮುಕ್ತಿಗೊಳಿಸಿದವರು.

*ಅತ್ರಿ ಮಹರ್ಷಿ*

ಅತ್ರಿ ಮಹರ್ಷಿ ಕೂಡ ಬ್ರಹ್ಮ ದೇವನ ಮಗ ಹಾಗೂ ಮನ್ವಂತರದ ಸಪ್ತ ಋಷಿಗಳಲ್ಲಿ ಒಬ್ಬರು. ಪವಿತ್ರ ದಾರಗಳನ್ನು ಪ್ರತಿಪಾದಿಸಿದ ಋಷಿಗಳಲ್ಲಿ ಇವರೂ ಕೂಡ ಒಬ್ಬರು. ಅನುಸೂಯಾ ಅತ್ರಿ ಮಹರ್ಷಿಗಳ ಪತ್ನಿಯಾಗಿದ್ದಳು. ಅತ್ರಿಯವರನ್ನು ಪವಿತ್ರ ಮಂತ್ರಗಳ ಮಹಾನ್‌ ಅನ್ವೇಷಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ವನವಾಸದಲ್ಲಿದ್ದ ಶ್ರೀರಾಮನು ಇವರ ಆಶ್ರಮಕ್ಕೆ ಬಂದಾಗ ಅನೇಕ ಧರ್ಮರಹಸ್ಯಗಳನ್ನು ಶ್ರೀರಾಮನಿಗೆ ಬೋಧಿಸಿದ್ದರು. ಅಷ್ಟು ಮಾತ್ರವಲ್ಲ ಕೆಲವು ಕಾಲಗಳವರೆಗೆ ಬ್ರಹ್ಮರ್ಷಿ ಪಟ್ಟದಲ್ಲೂ ಕೂಡ ಕುಳಿತಿದ್ದರು. ಅತ್ರಿ ಮಹರ್ಷಿಗಳು ಅತ್ರಿ ಸಂಹಿತಾ ಮತ್ತು ಅತ್ರಿ ಸ್ಮೃತಿ ಎನ್ನುವ ಎರಡು ಮಹಾನ್‌ ಕೃತಿಗಳನ್ನು ಬರೆದಿದ್ದರು. ಗುರು ದತ್ತಾತ್ರೇಯರು ಇವರ ಪುತ್ರರು.

​ *ಕಶ್ಯಪ ಮಹರ್ಷಿ*

ಕಶ್ಯಪ ಮಹರ್ಷಿಗಳು ಅತ್ಯಂತ ಜನಪ್ರಿಯ ಹಾಗೂ ಪ್ರಾಚೀನ ಋಷಿಗಳು ಮತ್ತು ಸಪ್ತಋಷಿಗಳಲ್ಲಿ ಒಬ್ಬರಾಗಿದ್ದರು. ಕಶ್ಯಪ ಮಹರ್ಷಿಗಳು ಋಷಿ ಮಾರೀಚಿಯ ಮಗ ಮತ್ತು ಬ್ರಹ್ಮನ ಮೊಮ್ಮಗ. ಕಶ್ಯಪ ಮಹರ್ಷಿಗಳು ದೇವರ, ಅಸುರರ, ನಾಗರ, ಗರುಡರ, ವಾಮನ, ಅಗ್ನಿ, ಆದಿತ್ಯ, ದೈತ್ಯರ, ಆರ್ಯಮಾನ್‌ರ, ಮಿತ್ರ, ಪುಸಾನ, ವರುಣ ಮತ್ತು ಎಲ್ಲಾ ಮಾನವೀಯತೆಯ ತಂದೆ ಎಂದು ಹೇಳಲಾಗುತ್ತದೆ. ಕಶ್ಯಪ ಮಹರ್ಷಿಗಳು ಕಶ್ಯಪ ಸಂಹಿತೆಯ ಲೇಖಕರಾಗಿದ್ದರು. ಬ್ರಹ್ಮನ ಸೃಷ್ಟಿ ಕರ್ತವ್ಯದಲ್ಲಿ ಕಶ್ಯಪನ ಪಾತ್ರ ಮಹತ್ತರವಾದುದ್ದಾಗಿದೆ.

​ *ಜಮದಗ್ನಿ ಮಹರ್ಷಿ*

ಜಮದಗ್ನಿಯು ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ತಂದೆ. ಜಮದಗ್ನಿ ಋಷಿಯು ಬ್ರಹ್ಮನು ಸೃಷ್ಟಿಸಿದ ಪ್ರಜಾಪತಿಗಳಲ್ಲಿ ಒಬ್ಬನಾದ ಭೃಗು ಋಷಿಯ ವಂಶಸ್ಥನು. ಜಮದಗ್ನಿಯ ಪತ್ನಿ ಹೆಸರು ರೇಣುಕಾದೇವಿ. ಈಕೆ ಯಾವಾಗಲೂ ಪರಿಶುದ್ಧತೆಯ ಶಕ್ತಿಯಿಂದ ತಯಾರಿಸಿದ ಮರಳಿನ ಮಡಿಕೆಯಲ್ಲಿ ನೀರನ್ನು ತರುತ್ತಿದ್ದಳು. ಒಮ್ಮೆ ಈಕೆ ಕೊಳದಿಂದ ನೀರನ್ನು ತರುವಾಗ ಗಂಧರ್ವರನ್ನು ನೋಡುತ್ತಾಳೆ ಹಾಗೂ ಆಕೆಯ ಮನಸ್ಸು ಗಂಧರ್ವರತ್ತ ಆಕರ್ಷಿತವಾಗುತ್ತದೆ. ಇದರಿಂದಾಗಿ ಆಕೆಯ ಕೈಯಲ್ಲಿದ್ದ ಮರಳಿನ ಮಡಕೆಯು ಕರಗುತ್ತದೆ. ಇದನ್ನು ತನ್ನ ಧ್ಯಾನ ಶಕ್ತಿಯಿಂದ ಅರಿತ ಜಮದಗ್ನಿಯು ತನ್ನ ಮಕ್ಕಳನ್ನು ಕರೆದು ತಾಯಿಯನ್ನು ಕೊಲ್ಲಲು ಹೇಳುತ್ತಾನೆ. ಆದರೆ ಆತನ ಯಾವ ಮಕ್ಕಳು ಒಪ್ಪುವುದಿಲ್ಲ. ಆಗ ಜಮದಗ್ನಿಯ ಮಕ್ಕಳಲ್ಲಿ ಒಬ್ಬನಾದ ಪರಶುರಾಮನು ತಂದೆಯ ಮಾತಿಗೆ ಬೆಲೆಕೊಟ್ಟು ತಾಯಿಯ ಶಿರಚ್ಛೇದ ಮಾಡುತ್ತಾನೆ. ಜಮದಗ್ನಿಯು ತನ್ನ ಉಳಿದ ಮಕ್ಕಳು ತನ್ನ ಮಾತನ್ನು ನಿರಾಕರಿಸಿದರೆಂದು ಮಕ್ಕಳನ್ನೇ ಸಾಯಿಸುತ್ತಾನೆ.
ಸಂಗ್ರಹ..

10/01/2022

#ಬಾಡಿದ_ತುಳಸಿಗಿಡವನ್ನು_ಏನು_ಮಾಡಬೇಕು?

#ಹೀಗೊಂದು_ಅದ್ಬುತವಾದ_ಮಾಹಿತಿ.

ಪ್ರಶ್ನೆ : ಬಾಡಿ ಹೋದ ತುಳಸಿಗಿಡವನ್ನು ತೆಗೆಯಬಹುದೇ, ಹೌದಾದರೆ ಕ್ರಮವನ್ನು ತಿಳಿಸಿ. ಮತ್ತು ಆ ತುಳಸೀ ಗಿಡವನ್ನು ಏನು ಮಾಡಬೇಕು ಎನ್ನುವದನ್ನೂ ತಿಳಿಸಿ ?

ಉತ್ತರ: ತುಳಸಿ ಒಂದು ಸಸ್ಯ. ಆ ಸಸ್ಯದಲ್ಲಿರುವ ಜೀವಕ್ಕೆ ಎಷ್ಟು ಆಯುಷ್ಯವಿದೆಯೋ ಅಷ್ಟು ದಿವಸ ಇರುತ್ತದೆ. ಆ ನಂತರ ಗಿಡ ಬಾಡಿ ಹೋಗುತ್ತದೆ.

ಬಾಡಿ ಹೋದ ತುಳಸೀ ಗಿಡವನ್ನು ಅವಶ್ಯವಾಗಿ ತೆಗೆಯಬಹುದು. ತೆಗೆದು ಹೊಸ ಸಸಿಯನ್ನು ತಂದು ನೆಡಬೇಕು.

ಬಾಡಿ ಹೋದ ಗಿಡವನ್ನು, ಮಂಗಳವಾರ, ಶುಕ್ರವಾರ, ಅಮಾವಾಸ್ಯಾ, ಪೌರ್ಣಮಿ, ಸಂಕ್ರಾಂತಿಗಳಂದು ತೆಗೆಯತಕ್ಕದ್ದಲ್ಲ. ದ್ವಾದಶಿಯಂತೂ ಸರ್ವಥಾ ತೆಗೆಯಬಾರದು.

ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು. ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊತ್ತಿರುವ ಸ್ತ್ರೀಯರು ಅದನ್ನು ಮಾಡತಕ್ಕದ್ದಲ್ಲ. ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಸ್ತ್ರೀಯರು ಬಾಡಿ ಹೋದ ಗಿಡವನ್ನು ತೆಗೆಯಬಹುದು. (ಆದರೆ ದೇವರ ಪೂಜೆಗೆ ತುಳಸಿಯನ್ನು ಬಿಡಿಸುವಂತಿಲ್ಲ. ಹೊಸದಾದ ಗಿಡವನ್ನು ಮುತ್ತೈದೆಯಾದ ಸ್ತ್ರೀಯರು ನೆಡುವದು ಇಡಿಯ ಕುಲಕ್ಕೆ ಯಶಸ್ಸನ್ನು ನೀಡುವ ಪುಣ್ಯಕಾರ್ಯ.)

ಗಿಡ ತೆಗೆದಾದ ಮೇಲೆ ನೆರಳಿನಲ್ಲಿ ಒಂದಷ್ಟು ದಿವಸ ಪೂರ್ಣ ಒಣಗಿಸಬೇಕು.

ರೆಂಬೆ ಕೊಂಬೆಗಳಲ್ಲಿರುವ ಸಣ್ಣ ಸಣ್ಣ ಗಾತ್ರದ ಕಡ್ಡಿಗಳನ್ನೆಲ್ಲ ಪುಟ್ಟಪುಟ್ಟದಾಗಿ ಮುರಿದಿಟ್ಟುಕೊಳ್ಳಬೇಕು. ನಿತ್ಯ ವೈಶ್ವದೇವ ಮಾಡಬೇಕಾದರೆ, ಅಥವಾ ಹೋಮ ಮಾಡಬೇಕಾದರೆ ಅದನ್ನು ಬಳಸಬೇಕು.

ಸ್ವಲ್ಪ ದಪ್ಪ ಗಾತ್ರದ ಕಡ್ಡಿಗಳನ್ನು ದೀಪ ಹಚ್ಚಲು ಉಪಯೋಗಿಸಬೇಕು. ಬೆಂಕಿ ಕಡ್ಡಿಯಿಂದ ಮತ್ತು ಹೂಬತ್ತಿ ಮಂಗಳಾರತಿ ಬತ್ತಿಗಳಿಂದ ದೀಪ ಹಚ್ಚಬಾರದು. ಮೊದಲು ತುಳಸೀಕಾಷ್ಠವನ್ನು ಹಚ್ಚಿಕೊಂಡು ಆ ತುಳಸೀಕಾಷ್ಠದಿಂದಲೇ ದೀಪಗಳನ್ನು ಹಚ್ಚಬೇಕು.

ಇನ್ನೂ ಸ್ವಲ್ಪ ದಪ್ಪ ಗಾತ್ರದ ಕಡ್ಡಿಯನ್ನು ಗಂಧ ತೇಯುವಾಗ ಬಳಸಬೇಕು. ತುಳಸೀಕಾಷ್ಠವನ್ನು ಸಾಣೆಕಲ್ಲಿನ ಮೇಲೆ ತೇದ ನಂತರ ಅದರಿಂದ ಬರುವ ಗಂಧದ ನೀರನ್ನು ಸ್ವಾದೂದದಕ್ಕೆ ಸೇರಿಸಿ ದೇವರಿಗೆ ಅಭಿಷೇಕ ಮಾಡಬೇಕು. ದೇವರಿಗೆ ಅತ್ಯಂತ ಪ್ರಿಯ.

ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ತುಳಸೀ ಮಣಿಗಳನ್ನು ಮಾಡಲು ಎತ್ತಿಟ್ಟುಕೊಳ್ಳಬಹುದು.

ಮತ್ತು ವಿಗ್ರಹಗಳನ್ನು ಸ್ವಚ್ಛ ಮಾಡಲು, ಪಂಚಾಮೃತ ಅಭಿಷೇಕ ಮಾಡಿದಾಗ ವಿಗ್ರಹದಲ್ಲಿ ಉಳಿಯುವ ಅಂಶಗಳನ್ನು ತೆಗೆಯಲು ಪುಟ್ಟ ಪುಟ್ಟ ತುಳಸೀಕಾಷ್ಠಗಳು ತುಂಬ ಉಪಯೋಗವಾಗುತ್ತವೆ.

ತುಳಸಿಯ ಕಾಷ್ಠವನ್ನು ತೆಗೆಯುವಾಗ ಕೈಗೆ ಸಿಗದಷ್ಟು ಸಣ್ಣಸಣ್ಣ ತುಳಸೀಕಾಷ್ಠದ ಕಣಗಳು ನೆಲದ ಮೇಲಿರುತ್ತವೆ. ಜೋಪಾನವಾಗಿ ಅವೆಲ್ಲವನ್ನು ತೆಗೆದು ಒಂದು ಉತ್ತಮ ಪಾತ್ರೆಯಲ್ಲಿಟ್ಟುಕೊಂಡು ದೇವರಿಗೆ ಧೂಪ ಹಾಕುವಾಗ ಅದನ್ನು ಬಳಸಬೇಕು. ದೇವರಿಗೆ ಅತ್ಯಂತ ಪ್ರಿಯ.

ಮನೆಯಲ್ಲಿ ಮರಣವುಂಟಾದಾಗ, ದೇಹವನ್ನು ಸುಡಬೇಕಾದರೆ ಚಿತೆಯಲ್ಲಿನ ನೂರಾರು ಕಟ್ಟಿಗೆಗಳ ಮಧ್ಯದಲ್ಲಿ ಒಂದು ಸಣ್ಣ ತುಳಸೀಕಾಷ್ಠವಿದ್ದರೂ ಸಕಲ ಪಾಪಗಳಿಂದ ಜೀವ ಮುಕ್ತನಾಗುತ್ತಾನೆ ಎಂದು ಶಾಸ್ತ್ರದ ವಚನವಿದೆ.

ಯದ್ಯೇಕಂ ತುಲಸೀಕಾಷ್ಠಂ
ಮಧ್ಯೇ ಕಾಷ್ಠಶತಸ್ಯ ಚ
ದಾಹಕಾಲೇ ಭವೇನ್ಮುಕ್ತಿಃ
ಪಾಪಕೋಟಿಯುತಸ್ಯ ಚ

ಹೀಗಾಗಿ ಸಾವುಂಟಾದವರ ಮನೆಗೆ ಹೋಗುವಾಗ ಮನೆಯಲ್ಲಿನ ಒಂದಷ್ಟು ಕಾಷ್ಠವನ್ನು ತೆಗೆದುಕೊಂಡು ಹೋಗಿ ಕೊಡಬೇಕು.

ಹೀಗೆ, ಕೈಗೆ ಸಿಗಲಾರದಂತಹ ಕಣದಿಂದ ಪುಡಿಯಿಂದ ಆರಂಭಿಸಿ ಗಟ್ಟಿಯ ಕಾಷ್ಠದವರೆಗೆ ತುಳಸೀ ಗಿಡ ಭಗವಂತನಿಗೆ ಸಮರ್ಪಿತವಾಗಬೇಕು.

ಯಾವ ಕಾರಣಕ್ಕೂ ಬಿಸಾಡಬಾರದು.
ಒಂದೊಳ್ಳೆ ಸುವಿಚಾರ.
(ಕೃಪೆ : ವ್ಯಾಟ್ಸಪ್ ಗೆಳೆಯರು).

Address

Mantralayam Rod
Raichur
584103

Telephone

+918884223366

Website

Alerts

Be the first to know and let us send you an email when Gopala Sanskrit Patha Shala posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Gopala Sanskrit Patha Shala:

Share