Shree Kshetra Gejjegiri ಶ್ರೀ ಕ್ಷೇತ್ರ ಗೆಜ್ಜೆಗಿರಿ

  • Home
  • India
  • Puttur
  • Shree Kshetra Gejjegiri ಶ್ರೀ ಕ್ಷೇತ್ರ ಗೆಜ್ಜೆಗಿರಿ

Shree Kshetra Gejjegiri ಶ್ರೀ ಕ್ಷೇತ್ರ ಗೆಜ್ಜೆಗಿರಿ ಶ್ರೀ ಕ್ಷೇತ್ರ ಗೆಜ್ಜೆಗಿರಿ'

ಗೆಜ್ಜೆ ಗಿರಿ ಜಾತ್ರಾ ಮಹೋತ್ಸವಕ್ಕೆ ಸುಸ್ವಾಗತ
25/01/2025

ಗೆಜ್ಜೆ ಗಿರಿ ಜಾತ್ರಾ ಮಹೋತ್ಸವಕ್ಕೆ ಸುಸ್ವಾಗತ

ನವರಾತ್ರಿ ಉತ್ಸವ
05/10/2024

ನವರಾತ್ರಿ ಉತ್ಸವ

*ಶ್ರೀ ಗೆಜ್ಜೆಗಿರಿ ಮೇಳವು ಮೂರನೇ ವರ್ಷದ ತಿರುಗಾಟಕ್ಕೆ ಸನ್ನದ್ಧ*ಪ್ರಥಮ ಮತ್ತು ದ್ವಿತೀಯ ವರ್ಷದ ತಿರುಗಾಟದ ಭರ್ಜರಿ ಯಶಸ್ಸಿನ ಬಳಿಕ ತನ್ನ ಮೂರನೇ...
05/10/2024

*ಶ್ರೀ ಗೆಜ್ಜೆಗಿರಿ ಮೇಳವು ಮೂರನೇ ವರ್ಷದ ತಿರುಗಾಟಕ್ಕೆ ಸನ್ನದ್ಧ*

ಪ್ರಥಮ ಮತ್ತು ದ್ವಿತೀಯ ವರ್ಷದ ತಿರುಗಾಟದ ಭರ್ಜರಿ ಯಶಸ್ಸಿನ ಬಳಿಕ ತನ್ನ ಮೂರನೇ ವರ್ಷದ ಅಂದರೆ 2024 - 25ನೇ ಸಾಲಿನ ತಿರುಗಾಟಕ್ಕೆ ಭರದ ಸಿದ್ದತೆ ನಡೆಸಿದೆ. ತಾ. 22-11-2024ನೇ ಶುಕ್ರವಾರದಂದು ಪ್ರಥಮ ದೇವರ ಸೇವೆ ಆಟದೊಂದಿಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಪ್ರಾರಂಭಿಸಲಿರುವೆವು.
ದೇಶ-ವಿದೇಶಗಳಲ್ಲಿ ಮತ್ತು ತುಳುನಾಡಿನಾದ್ಯಂತ ಅಷ್ಟ ದಿಕ್ಕುಗಳಲ್ಲಿ ಭರ್ಜರಿ ಪ್ರದರ್ಶನ ಗೈದು ಕ್ಷೇತ್ರದ ಭಕ್ತರು ಹಾಗೂ ಯಕ್ಷಾಭಿಮಾನಿಗಳಿಂದ ಪ್ರಶಂಸೆ ಗಳಿಸಿದ ತೆಂಕು ತಿಟ್ಟಿನ ಗಜಗಟ್ಟಿ ಮೇಳವೆಂಬ ಖ್ಯಾತಿಯನ್ನು ಪಡೆದಿರುವ ನಮ್ಮ ಅಭಿಮಾನದ ಶ್ರೀ ಗೆಜ್ಜೆಗಿರಿ ಮೇಳದ 2024/25 ನೇ ಸಾಲಿನ ತಿರುಗಾಟದ ಕ್ಯಾಂಪ್ ಬುಕ್ಕಿಂಗ್ ಗಾಗಿ ಸಂಪರ್ಕಿಸಿ...
ಹೊಸ ಕಲಾವಿದರ ಸೇರ್ಪಡೆಯೊಂದಿಗೆ , ಹೊಸ ವೇಷಭೂಷಣಗಳೊಂದಿಗೆ , ಹೊಸ ರಂಗ ವಿನ್ಯಾಸದೊಂದಿಗೆ ಮಾತ್ರವಲ್ಲದೆ ಹೊಸ ಪರಿಕಲ್ಪನೆಯೊಂದಿಗೆ ನಿಮ್ಮ ಮುಂದೆ ಬರಲಿದೆ ನಮ್ಮ ಅಭಿಮಾನದ ಶ್ರೀ ಗೆಜ್ಜೆಗಿರಿ ಮೇಳ.
ಕಳೆದೆರಡು ಭಾರಿ ಕ್ಷೇತ್ರ ಪುರಾಣ ಆಧಾರಿತ "ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ" ಭರ್ಜರಿ 231 ಪ್ರದರ್ಶನ ಕಂಡು ಕಳೆದೆರಡು ತಿರುಗಾಟದ ಬ್ಲಾಕ್ ಬಸ್ಟರ್ ಪ್ರಸಂಗ ಎಂಬ ನೆಗಲ್ತೆಯನ್ನುಗಳಿಸಿ ಎಲ್ಲರ ಮನಸೂರೆಗೊಂಡಿತು.
2024 - 25ನೇ ಸಾಲಿನ ತಿರುಗಾಟಕ್ಕೆ ಮತ್ತದೇ ಹುಮ್ಮಸ್ಸಿನಿಂದ ವಿನೂತನ ನಾಲ್ಕು ವಿಭಿನ್ನ ಶೈಲಿಯ ಪ್ರಸಂಗಗಳು ರಂಗದಲ್ಲಿ ವಿಜ್ರಂಬಿಸಲಿದೆ.
ನಮ್ಮ ಅಭಿಮಾನದ ಶ್ರೀ ಗೆಜ್ಜೆಗಿರಿ ಮೇಳದಲ್ಲಿ ಪ್ರದರ್ಶನಗೊಳ್ಳಲಿರುವ ನೂತನ ಪ್ರಸಂಗಗಳ ಸಹಿತ ಮುಂದಿನ ತಿರುಗಾಟದ ಕಲಾವಿದರ ವಿವರದೊಂದಿಗಿನ ಕರಪತ್ರವನ್ನು ಆದಷ್ಟು ಹೆಚ್ಚು ಶೇರ್ ಮಾಡಿ ಮೇಳವನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ.

Pls share & support🙏

ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವ ಆಮಂತ್ರಣ ಸರ್ವರಿಗೂ ಆತ್ಮೀಯ ಸ್ವಾಗತ
08/02/2024

ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವ ಆಮಂತ್ರಣ ಸರ್ವರಿಗೂ ಆತ್ಮೀಯ ಸ್ವಾಗತ

26/11/2023
ಶ್ರೀ ಆದಿ ಧೂಮಾವತಿ, ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಮೇಳದ ದ್ವಿತೀಯ ವರ್ಷದ ದೇವರ ಪ್ರಥಮ ಸೇವೆಯಾಟವು ಶ...
14/11/2023

ಶ್ರೀ ಆದಿ ಧೂಮಾವತಿ, ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಮೇಳದ ದ್ವಿತೀಯ ವರ್ಷದ ದೇವರ ಪ್ರಥಮ ಸೇವೆಯಾಟವು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ದಿನಾಂಕ 16-11-2023 ನೇ ಗುರುವಾರ ನಡೆಯಲಿದೆ.
ಬೆಳಗ್ಗೆ 8:00 ರಿಂದ ಸ್ವಸ್ತಿ ಪುಣ್ಯಾಹ ಸ್ಥಳ ಶುದ್ಧಿ , ದ್ವಾದಶ ನಾರಿಕೇಳ ಗಣಯಾಗ
ಮಧ್ಯಾಹ್ನ 12:30ಕ್ಕೆ ಮಹಾಪೂಜೆ
ಸಂಜೆ 4:30 ರಿಂದ ಭಜನೆ ಸಂಕೀರ್ತನೆ
ಸಂಜೆ 6:25 ಕ್ಕೆ ಗೆಜ್ಜೆಮೂರ್ತ
ನಂತರ ಚೌಕಿಪೂಜೆ ಅನ್ನಸಂತರ್ಪಣೆ.
ರಾತ್ರಿ 7:30 ರಿಂದ ಪ್ರಥಮ ದೇವರ ಸೇವೆಯಾಟ
ಪ್ರಸಂಗ:- *"ಅಶ್ವಮೇಧ"*
ನಂತರ ಪ್ರಾಯೋಗಿಕವಾಗಿ ನವರಸಭರಿತ ಹಾಸ್ಯ ಪ್ರಧಾನ ತುಳು ಸಾಮಾಜಿಕ *"ಮನ್ಮಥ ಸುಂದರಿ"* ಎಂಬ ಪ್ರಸಂಗವನ್ನು ಆಡಿ ತೋರಿಸಲಿದ್ದೇವೆ.

ಸರ್ವರಿಗೂ ಆದರದ ಸ್ವಾಗತ

*"ಶ್ರೀದೇವೀ ನೀನೇ ಸಿರಿದೇಯಿಯೋ ??"* *"ಸಿರಿದೇಯೀ ನೀನೇ ಶ್ರೀದೇವಿಯೋ ??"**🕉️ಸಿರಿ ದೇಯೀ ಕಾತ್ಯಾಯಿನಿ 🕉️*"ಸಿರಿದೇಯೀ ಕಾತ್ಯಾಯಿನಿ....."ಕಾತ್...
20/10/2023

*"ಶ್ರೀದೇವೀ ನೀನೇ ಸಿರಿದೇಯಿಯೋ ??"*
*"ಸಿರಿದೇಯೀ ನೀನೇ ಶ್ರೀದೇವಿಯೋ ??"*

*🕉️ಸಿರಿ ದೇಯೀ ಕಾತ್ಯಾಯಿನಿ 🕉️*

"ಸಿರಿದೇಯೀ ಕಾತ್ಯಾಯಿನಿ....."

ಕಾತ್ಯಾಯಿನಿ = ಕತಿ ಅಯನಿ

ಕತಿ = ಎಷ್ಟೋ ... ಹಲವಾರು ..... ಅಂಕೆಯಿಲ್ಲದ....

ಅಯನಿ/ನ= ದಾರಿ.... ಮಾರ್ಗ

ದೇವರನ್ನು ಕಾಣಲು ಅಥವಾ ಸೇರಲು ಇರುವ ಅದೆಷ್ಟೋ.... ಅಥವಾ ಅನಂತ ಮಾರ್ಗ ಅಥವಾ ದಾರಿಯನ್ನು ನಮಗೆ ತೋರಿದವಳು "ತಾಯಿ ನೀನೇ ಅಲ್ಲವೇ ದೇಯೀ ಕಾತ್ಯಾಯಿನಿ....."

ಹುಟ್ಟೋ ಮೊದಲೇ ನಿನ್ನ ಹುಟ್ಟನ್ನು ನೀ ದೇವರಿಗೆ ಸಮರ್ಮಿಸು ಅದೇ ಅವನನ್ನು ಕಾಣುವ ಮೊದಲ ಮಾರ್ಗ ಎಂದು ತಾ ಹುಟ್ಟೋ ಮೊದಲೇ ತನ್ನ ಮೂಲ ಸ್ವರೂಪವಾದ ಬಂಗಾರದ ಬಣ್ಣದ ಮೊಟ್ಟೆಯ ರೂಪದಲ್ಲಿ ತನ್ನನ್ನು ತಾನು ಭಗವಂತನಾದ ಸೂರ್ಯನಾರಾಯಣನಿಗೆ ಅರ್ಪಿಸಿಕೊಂಡಾಕೆ ನೀನೆಯಲ್ಲವೇ ..... ಜೀವನಾರಂಭಕ್ಕೂ ಮೊದಲೆ ಕತಿಯಾದ ಅಯನದಲ್ಲಿ ಬ್ರಹ್ಮನ ಸೇರಬಹುದಾದ ಒಂದು ಅಯನ ತೋರಿದಾಕೆ ನೀನೇ "ದೇಯಿ ಕಾತ್ಯಾಯಿನಿ ಅಲ್ಲವೇ....."

ಮಗು ದೇವರಿಗೆ ಸಮಾನ ಅಲ್ಲವೇ.....
ಮಕ್ಕಳಿಲ್ಲದೆ ನರಕ ಸದೃಶ ಬದುಕು ಸಾಗಿಸುತ್ತಿದ್ದ ದಂಪತಿಗಳಿಗೆ ನೀನೇ ಮಗುವಾಗಿ ತನ್ನ ಮುಗ್ದ ರೂಪದಿಂದಲೇ ಅವರಿಗೆ ದೇವರನ್ನು ಕಾಣಿಸಿ ಅವರ ಬದುಕಲ್ಲಿ ಸ್ವರ್ಗಸುಖಮೂಡಿಸಿ ಬ್ರಹ್ಮಾನಂದ ನೀಡಿ ಈ ರೀತಿಯಲ್ಲೂ ಅಂದರೆ ಇತರರ ಬದುಕಿನಲ್ಲಿ ಸಂತೋಷ ತುಂಬೋ ಮೂಲಕವೂ ಬ್ರಹ್ಮನ ಸೇರೋ ಕತಿ ಅಯನದಲ್ಲಿ ಇದೂ ಒಂದು ಅಯನ ಎಂದು ಸಾರಿದ ಕಾತ್ಯಾಯಿನಿ ನೀನೇ ಅಲ್ಲವೇ "ಸಿರಿದೇಯೀ"

ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿನಂತೆ ಮರಣಶಯ್ಯೆಯಲ್ಲಿರುವವರಿಗೆ ಔಷದೋಪಚಾರ ಮಾಡಿ ಆತ್ಮನ ಸೇವೆಗೈದರೆ ಆ ಮಾರ್ಗವೂ ಪರಮಾತ್ಮನ ದರ್ಶನ ಮಾಡಿಸುವ ಮಾರ್ಗಗಳಲ್ಲೊಂದು ಏಂದು ಬಲ್ಲಾಳರಾದ ಕುಜುಂಬದ ಮುದ್ಯರಿಗೆ ಔಷದೋಪಚಾರ ಮಾಡಿ ಅವರಿಗೆ ಪುನರ್ಜೀವ ನೀಡಿದ ಲೋಕಮಾತೆ ಕಾತ್ಯಾಯಿನಿ ನೀನೇ ಅಲ್ಲವೇ "ಸಿರಿದೇಯಿ....."

ಇನ್ನು ಹೆಣ್ಣಾಗಿ ತಾನು ಸತ್- ಸಂತಾನವ ಲೋಕಕ್ಕೆ ನೀಡಿದರೆ ಆ ಸಂತಾನ ಮುಖೇನವೂ ಬ್ರಹ್ಮದರ್ಶನ ಪಡೆಯೋ ಮಾರ್ಗ ತೆರೆದುಕೊಳ್ಳಬಹುದೆಂದು "ಬ್ರಹ್ಮ ಬೈದೇರುಗಳಿಗೆ ಜನ್ಮನೀಡಿ" ಅವರ ಮೂಲಕ ಬ್ರಹ್ಮ ಸಾಕ್ಷಾತ್ಕಾರ ಮಾಡಿ ತೋರಿಸಿ ಜಗಕೆ ಮಾದರಿಯಾದ ಜಗನ್ಮಾತೆ ಕಾತ್ಯಾಯಿನಿ ನೀನೇ ಅಲ್ಲವೇ "ಸಿರಿದೇಯೀ....."

ಕಾತ್ಯಾಯಿನಿ ಅಂದರೆ ತೇಜೋಪುಂಜ ದೇವಿ ಸ್ವರೂಪ ಅನ್ನೋ ಅರ್ಥವೂ ಇದೆ.
ಬಂಗಾರದ ಬಣ್ಣದ ತೇಜೋಪುಂಜ ರೂಪದ ಅಂಡದಿಂದ (ಕುದುರೆಯಷ್ಟು ವೇಗ ಆನೆಯಷ್ಟು ದೊಡ್ಡ ಕುದುರೆಯಷ್ಟು ವೇಗ ಅಂದರೆ ಆ ಅಂಡದ ತೇಜೋರೂಪದ ವರ್ಣನೆ). ಆವಿರ್ಭವಿಸಿದ ಮಾತೆ ನೀವಲ್ಲವೇ.....

ಈ ತೇಜೋಪುಂಜ ರೂಪವೇ ಕಾತ್ಯಾಯಿನಿ ರೂಪವೆಂದಾದರೆ ಈ ಹೆಸರು ಬಂಗಾರದ ಬಣ್ಣದ ಅಂಡದ ರೂಪದಲ್ಲಿ ಕಾಣಿಸಿಕೊಂಡ ನಿಮಗೇ ಅಕ್ಷರಶಃ ಅನುಸಂಧಾನ ಆಗುವುದಲ್ಲವೇ "ಸಿರಿದೇಯೀ ಕಾತ್ಯಾಯಿನಿ....."

ವಿಶೇಷ ಅಗೋಚರ ಹುಟ್ಟಿನಿಂದ ಆರಂಭಗೊಂಡ (ಅಂಡದಿಂದ ಪಿಂಡಜೆಯಾಗಿ ಬಂದು) ತಮ್ಮ ಬದುಕು "ಮಡಲಾಯ" ರೂಪದಿ ಅಂತ್ಯವಾಗಿ ಆರಾಧಕತೆಗೆ ಎರೋ ತನಕ ವಿಭಿನ್ನ/ಬಹಳಷ್ಟು /ಕತಿ ಯ ಅಯನ ಮುಖೇನ ಬ್ರಹ್ಮರ ದರ್ಶನ ಮಾಡಬಹುದೆಂದು ತೋರಿಸಿಕೊಟ್ಟ ಜೀವನಕಥೆ. ಅಂತಹ ಶ್ರೇಷ್ಠ ಜೀವನಗಾಥೆಯ ತಾವೇ ನಿಜವಾದ ಕಾತ್ಯಾಯಿನಿ ಅಲ್ಲವೇ "ಸಿರಿದೇಯೀ"....

*ಸಿರಿದೇಯೀ ಕಾತ್ಯಾಯಿನಿಯೇ ನಮೋನಮಃ*

- *_ಬೈದ್ಯ ಆರಾಧನೆ_*

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಪೂಜೆಯ ಆರನೇ ದಿನ ಭಜನಾ ಸಂಕೀರ್ತನೆ ನಡೆಸುವ ಭಜನಾ ತಂಡಗಳು
20/10/2023

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಪೂಜೆಯ ಆರನೇ ದಿನ ಭಜನಾ ಸಂಕೀರ್ತನೆ ನಡೆಸುವ ಭಜನಾ ತಂಡಗಳು

*ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಹಾಮಾತೆಯ ನವರಾತ್ರಿ ಪೂಜೆಯ ಐದನೇ ದಿನದ ಅಲಂಕಾರ*
19/10/2023

*ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಹಾಮಾತೆಯ ನವರಾತ್ರಿ ಪೂಜೆಯ ಐದನೇ ದಿನದ ಅಲಂಕಾರ*

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ                  ನಾಲ್ಕನೇ ದಿನದ ವಿಶೇಷ ಅಲಂಕಾರ ಸೇವೆ ಮತ್ತು ಅನ್ನದಾನ ಸೇವೆಯ ಸೇವಾಕರ್ತರು             ...
18/10/2023

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಾಲ್ಕನೇ ದಿನದ ವಿಶೇಷ ಅಲಂಕಾರ ಸೇವೆ ಮತ್ತು ಅನ್ನದಾನ ಸೇವೆಯ ಸೇವಾಕರ್ತರು ⭕ *ಜಯಂತಿ ಪೂಜಾರಿ. ಬಿ*
ನವರಾತ್ರಿಯ ಈ ಶುಭ ಸಂದರ್ಭದಲ್ಲಿ ವಿಶೇಷ ಸೇವೆಯ ಸೇವಾರ್ಥಿಗಳಾಗಿ ರೂಪಾಯಿ5000ವನ್ನು ನೀಡಿ ಸಹಕರಿಸಿದ ಶ್ರೀಮತಿ ಜಯಂತಿ .ಬಿ ಯರಿಗೆ ದೇಯಿಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರ ಆಡಳಿತ ಸಮಿತಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು

Address

Puttur
574223

Website

Alerts

Be the first to know and let us send you an email when Shree Kshetra Gejjegiri ಶ್ರೀ ಕ್ಷೇತ್ರ ಗೆಜ್ಜೆಗಿರಿ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shree Kshetra Gejjegiri ಶ್ರೀ ಕ್ಷೇತ್ರ ಗೆಜ್ಜೆಗಿರಿ:

Share

Category