21/08/2023
ಹರೇರಾಮ,
ಶ್ರೀ ಅಖಿಲ ಹವ್ಯಕ ಮಹಾಸಭಾ(ರಿ) ಹಾಗೂ ಹವ್ಯಕ ಮಹಾಮಂಡಲ, ಶ್ರೀರಾಮಚಂದ್ರಪುರ ಮಠ ಆಯೋಜನೆಯಲ್ಲಿ ಹವ್ಯಕ ಸಭಾ ಭವನ ಪುತ್ತೂರು ಇಲ್ಲಿ ನೂತನ ವಧೂವರರಿಗೆ *ಮಾಂಗಲ್ಯ ತಂತು* ಕಾರ್ಯಗಾರ ಜರಗಿತು. ಇದರಲ್ಲಿ ಇತ್ತೀಚೆಗೆ ವಿವಾಹವಾದ ಒಟ್ಟು 10ದಂಪತಿಗಳು ಭಾಗವಹಿಸಿದ್ದರು.
ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಹಾಗೂ ಮಾತೆಯರು ಸೇರಿ ದೀಪ ಬೆಳಗಿಸಿದರು. ಹವ್ಯಕ ಮಹಾಮಂಡಲ ಅಧ್ಯಕ್ಷರಾದ ಶ್ರೀ ಮೋಹನ್ ಭಾಸ್ಕರ ಹೆಗಡೆ ಇವರು ಅಧ್ಯಕ್ಷೀಯ ಸ್ಥಾನ ವಹಿಸಿದ್ದರು. ಮಂಗಳೂರು ಪ್ರಾಂತ್ಯದ ಮೂರು ಮಂಡಲಗಳ ಅಧ್ಯಕ್ಷರುಗಳು, ಮತ್ತು ಪ್ರಾಂತ್ಯ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮತ್ತು ಹವ್ಯಕ ಮಹಾಸಭಾದ ನಿರ್ದೇಶಕರು ಹವ್ಯಕ ಸಭಾಭವನದ ವ್ಯವಸ್ಥಾಪಕರು ಆದ ಶಿವಶಂಕರ ಬೋನಂತಾಯ ಉಪಸ್ಥಿತರಿದ್ದರು.
ಶ್ರೀರಾಮಚಂದ್ರಾಪುರ ಮಠದ ಪ್ರೇರಣಾ ವಿಭಾಗದ ಬಾಲಸುಬ್ರಹ್ಮಣ್ಯ ಭಟ್ ಹಾಗೂ ಶ್ರೀಪ್ರಕಾಶ್ ಕುಕ್ಕಿಲ ಇವರ ತಂಡ ಕಾರ್ಯಗಾರವನ್ನು ನಡೆಸಿತು. ಪ್ರೇರಣಾ ತಂಡದ ಸುರೇಶ್ ಭಟ್ ಸೂರ್ಡೆಲು ಕಾರ್ಯಕ್ರಮ ನಿರೂಪಿಸಿದರು, ಹವ್ಯಕ ಮಹಾಮಂಡಲ ಮಂಗಳೂರು ಪ್ರಾಂತ್ಯ ಉಪಾಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಸ್ವಾಗತಿಸಿದರು, ಉಪಕಾರ್ಯದರ್ಶಿಗಳಾದ ವೇಣು ಕೆದ್ಲ ಇವರು ವಂದಿಸಿದರು. ಡಾ.ವೈವಿಕೆ ಕೃಷ್ಣ ಮೂರ್ತಿ, ಅಖಿಲ ಹವ್ಯಕ ಮಹಾಸಭಾ ನಿರ್ದೇಶಕರಾದ ಪುಳು ಈಶ್ವರ ಭಟ್, ಹವ್ಯಕ ಮಹಾಮಂಡಲ ಯುವ ವಿಭಾಗ ಪ್ರಧಾನ ಕೇಶವ ಪ್ರಕಾಶ ಯಂ ಮತ್ತು ಮಂಗಳೂರು ಹೋಬಳಿ ಮೂರು ಮಂಡಲ ಗುರಿಕ್ಕಾರರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ದಂಪತಿಗಳಿಗೂ ಶ್ರೀಗುರುಗಳ ಮಂತ್ರಾಕ್ಷತೆ ಮತ್ತು ಸ್ಮರಣಿಕೆ ನೀಡಿ ಆಶೀರ್ವಾದ ಮಾಡಲಾಯಿತು.
➖➖➖➖
ಕೇಶವ ಪ್ರಕಾಶ ಯಂ
ಯುವ ವಿಭಾಗ ಪ್ರದಾನ
ಹವ್ಯಕ ಮಹಾಮಂಡಲ