01/09/2022
#ಶ್ರೀ_ಗಣೇಶ_ಚತುರ್ಥಿ_ಅಲಂಕಾರ ದಿನಾಂಕ 31/08/22 ರಂದು ಮಂದಿರದಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ನಡೆದ ವಿಶೇಷ ಭಜನೆ ಹಾಗೂ ಕದಿರು ವಿತರಣೆ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಮಂದಿರದಲ್ಲಿ ರಂಗೋಲಿ ರಚಿಸಿ ವಿಶಿಷ್ಟ ರೀತಿಯಲ್ಲಿ ಅಲಂಕಾರ ಸೇವೆ ನಡೆಸಿಕೊಟ್ಟ ಶ್ರೀ ಮನೋಜ್ ಸುವರ್ಣ ಸೊರಕೆ ಮತ್ತು ಅವರ ತಂಡಕ್ಕೆ ಹೃದ್ಪೂರ್ವಕ ಧನ್ಯವಾದಗಳು.
ಇವರಿಗೆ ಶ್ರೀ ರಾಮ ಭಜನಾ ಮಂದಿರದ ಆಡಳಿತ ಸಮಿತಿ ಹಾಗೂ ಗ್ರಾಮಸ್ಥರ ಪರವಾಗಿ ಧನ್ಯವಾದಗಳು. ಮುಂದೆಯೂ ಶ್ರೀ ರಾಮ ದೇವರ ಸೇವೆಯನ್ನು ಮಾಡುವ ಶಕ್ತಿ ಹಾಗೂ ಭಕ್ತಿಯನ್ನು ದೇವರು ತಮಗೆ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತ..
ವಂದನೆಗಳೊಂದಿಗೆ
ಶ್ರೀ ಸುಭ್ರಮಣ್ಯ ಕರಂಬಾರು (ಅಧ್ಯಕ್ಷರು)
ಕಾರ್ಯದರ್ಶಿ ಪದಾಧಿಕಾರಿಗಳು ಹಾಗೂ ಸದಸ್ಯರು
ಶ್ರೀ ರಾಮ ಭಜನಾ ಮಂಡಳಿ ಭಕ್ತಕೋಡಿ(ರಿ) ಸರ್ವೆ