29/11/2023
ಫಲಾಪೇಕ್ಷೆ ಇರದೆ ಮಾಡಿದ ಪ್ರಾರ್ಥನೆಗೆ ಫಲ ಬಂದೆ ಬರುತ್ತದೆ!
ಅಂದಾಜು ಒಂದುವರೆ ಲಕ್ಷ ಜನ ಕಣ್ಣನ್ನು ಮಿಟುಕಿಸದೆ ನೋಡುತ್ತಿದ್ದಾರೆ, ಅಲ್ಲಿ ಹೆಚ್ಚಿನವರ ಪ್ರಾರ್ಥನೆ ಭಾರತ ಗೆಲ್ಲಬೇಕು, ವಿಶ್ವಕಪ್ ಭಾರತ ಪಾಲಾಗಬೇಕು, ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದರೆ, ಅನೇಕರು ಭಾರತ ಸೋಲಬೇಕು ಎಂದು ಪ್ರಾರ್ಥನೆ ಮಾಡಿದ್ದಾರೆ, ಹೌದು ಇದೊಂದು ಆಟ ಮಾತ್ರ, ಸೋಲು ಮತ್ತು ಗೆಲುವು ಆಟದಲ್ಲಿ ಸಾಮಾನ್ಯ, ಇಲ್ಲಿ ಭಗವಂತ ಇಂತಹ ಆಟದ ಗೆಲುವಿಗೆ ಪ್ರಾರ್ಥನೆ ಮಾಡಿದರೆ ಒಪ್ಪುವನೆ? ಖಂಡಿತ ಇಲ್ಲ, ಆದರೆ ಕೆಲವು ಪ್ರಾರ್ಥನೆಗಳನ್ನು ಭಗವಂತ ಕೇಳುತ್ತಾನೆ, ಅಲ್ಲಿ ಸ್ಪಂಧಿಸುತ್ತಾನೆ, ರಕ್ಷಿಸುವ ಎಲ್ಲ ಜವಾಬ್ದಾರಿಯನ್ನು ಅವನೇ ಹೊರುತ್ತಾನೆ, ಇದಕ್ಕೆ ಸಾಕ್ಷಿಯನ್ನು ಕೊಡುತ್ತಾನೆ.
ನವೆಂಬರ್ 12 ಒಂದು ಕರಾಳದಿನವಾಗಿತ್ತು, ಉತ್ತರಕಾಶಿಯ ಸುರಂಗ ಕೊರೆಯುವಾಗ ಅದು ಕುಸಿದು 41 ಜನ ಕಾರ್ಮಿಕರು ಅಲ್ಲಿ ಸಿಕ್ಕಿಹಾಕಿಕೊಂಡಿದ್ದರು, ಅಲ್ಲಿಂದ ಹೊರಬರುವ ಎಲ್ಲ ದಾರಿ ಮುಚ್ಚಿಹೋಗಿದ್ದವು, ಗಾಳಿ, ನೀರು, ಬೆಳಕು ಎಲ್ಲವೂ ಸ್ಥಗಿತ, 41 ಜನರು ಸುರಂಗದ ಒಳಗೆ, ಅವರ ಕುಟುಂಬಗಳ ಗೋಳು, ಬದುಕಿಬರುವ ಸಾಧ್ಯತೆ ಬಹಳ ಕಡಿಮೆ, ಸರ್ಕಾರಗಳು ಕೂಡಲೆ ಕಾರ್ಯಪ್ರವೃತ್ತವಾದವು, ಕೇಂದ್ರ ಮತ್ತು ರಾಜ್ಜ ಸರ್ಕಾರಗಳು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಲು ಸಿದ್ಧವಾದವು, NDRF ಪಡೆ ಹಗಲು ರಾತ್ರೆ ಎಲ್ಲವನ್ನೂ ಮರೆತು ಕಾರ್ಯಕ್ಷೇತ್ರಕ್ಕೆ ಧುಮುಕಿತು, ಶತಾಯ ಗತಾಯ 41 ಜನರನ್ನು ರಕ್ಷಿಸಲೇ ಬೇಕು ಎಂದು ಎಲ್ಲ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆಗಳು ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದವು, ದಿನಗಳು ಉರುಳುತ್ತಿದ್ದವು, ಸತತ ಪ್ರಯತ್ನದಿಂದ ಸಿಲುಕಿರುವ ಎಲ್ಲರಿಗೂ ಊಟ, ನೀರು ತಲುಪಿಸುವಷ್ಟು ಸಣ್ಣ 'ಇಲಿಮಾಟೆ' ಕೊರೆದು ಅಲ್ಲಿ ಸಿಲುಕಿಹಾಕಿಕೊಂಡವರೊಂದಿಗೆ ಸಂಪರ್ಕ ಸಾಧಿಸಿದವು, ರಕ್ಷಣಾ ಇಲಾಖೆಗಳಿಗೆ ಹುರುಪು ಹೆಚ್ಚಾಯಿತು, ಹೌದು ಸುರಂಗದಲ್ಲಿ ಸಿಕ್ಕಿಹಾಕಿಕೊಂಡ ವ್ಯಕ್ತಿಗಿಂತ, ಅವರನ್ನು ಉಳಿಸಲು ಹೊರಟ ಪಡೆಗಳಿಗೆ ಹೆಚ್ಚು ಭಯವಿರುತ್ತದೆ, ಸುರಂಗ ಇನ್ನೂ ಹೆಚ್ಚು ಕುಸಿಯದಂತೆ ಜಾಗ್ರತೆ ವಹಿಸಬೇಕು, ಒಳಗಿದ್ದವರಿಗೆ ಯಾವುದೇ ತೊಂದರೆ ಆಗಬಾರದು, ಪ್ರಧಾನ ಮಂತ್ರಿ ಪ್ರತಿಕ್ಷಣ ಮಾಹಿತಿ ಪಡೆಯುವುದಲ್ಲದೆ, ಭಾರತದ ಸೇನೆಯನ್ನು ನೆರವಿಗೆ ಕಳಿಸುವ ವ್ಯವಸ್ಥೆ ಮಾಡಿದ್ದರು.
ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ, ಮನೆ ಮನೆಯಲ್ಲಿ ಪ್ರಾರ್ಥನೆ ಪ್ರಾರಂಭವಾಯಿತು, ಪ್ರತಿಯೊಬ್ಬ ಹಿಂದು ಮನೆಯಲ್ಲಿ ದೀಪವನ್ನು ಹಚ್ಚಿ ಭಗವಂತನ ಮೋರೆಹೋಗಿದ್ದರು, ಭಗವಂತ ಅದಾಗಾಗಲೆ 41 ಜನರಿಗೆ ಅಗತ್ಯದ ಎಲ್ಲವನ್ನೂ ಕೊಟ್ಟಿರಬೇಕು, ಅಲ್ಲಿ ಸಿಲುಕ್ಕಿದ್ದವರು ಕಿಂಚಿತ್ತು ವಿಚಲಿತರಾಗಲಿಲ್ಲ, ಅವರಿಗೆ ಗೊತ್ತಿತ್ತು, ಅಲ್ಲಿರುವುದು NDRF, ಭಾರತೀಯ ಸೇನೆ ನಮ್ಮನ್ನು ಖಂಡಿತವಾಗಿ ಕಾಪಾಡುತ್ತಾರೆ, ನಾವು ಧೈರ್ಯದಿಂದ ಇರಬೇಕು. ಒಗ್ಗಟ್ಟಿನ ಫಲ16 ದಿನಗಳ ಶ್ರಮ, ಇಂದು 41 ಜನರೂ ಸುರಕ್ಷಿತವಾಗಿ ಹೊರಗೆ ಬಂದಿದ್ದಾರೆ, ಎಲ್ಲರಿಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ, ಫಲಾಪೇಕ್ಷೆ ಇಲ್ಲದೆ ಮಾಡಿದ ಪ್ರಾರ್ಥನೆಗೆ ಪೂರ್ತಿ ಫಲ ಲಭಿಸಿದೆ.