ಯಾಗಶಾಲೆ

Directions

ಯಾಗಶಾಲೆ ಧಾರ್ಮಿಕ ಕಾರ್ಯಕ್ರಮಗಳ ಆಯೋಜಕರು. Contact for Astrology suggestions, poojas and homas.

02/10/2025

ಎಲ್ಲ ಆಸ್ತಿಕ ಬಂಧು ಬಾಂಧವರಿಗೆ ವಿಜಯದಶಮಿ (ವಿದ್ಯಾ ದಶಮಿ) ಹಬ್ಬದ ಶುಭಾಶಯಗಳು...

ವಿಜಯ (ವಿದ್ಯಾ) ದಶಮಿ ಅತ್ಯಂತ ಪವಿತ್ರದಿನವಾಗಿದೆ. ಒಂಭತ್ತು ದಿನಗಳ ಕಾಲ ಮಹಿಷಾಸುರನ ವಿರುದ್ಧ ಯುದ್ಧ ಮಾಡಿದ ಚಾಮುಂಡೀ ದೇವಿಯು ಮಹಿಷನನ್ನು ಕೊಂದು ವಿಜಯವನ್ನು ಪಡೆದ ದಿನವೇ ವಿಜಯ ದಶಮಿ.
ಹತ್ತು ತಲೆಯ ರಾವಣಾಸುರನ ವಿರುದ್ಧ ಭಗವಾನ್ ಶ್ರೀರಾಮಚಂದ್ರನು ವಿಜಯವನ್ನು ಪಡೆದ ದಿನವೇ ಈ ವಿಜಯದಶಮಿ.
ಈ ದಿನದಂದೇ ಅಜ್ಞಾತವಾಸವನ್ನು ಮುಗಿಸಿ ಶಮೀ ವೃಕ್ಷವನ್ನು ಪೂಜಿಸಿದ ಪಾಂಡವರು ಸೀಮೋಲ್ಲಂಘನ ಮಾಡಿದ್ದರು.

ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶಿನಿ !
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನಿ !!

ಅಮಂಗಲಾನಾಂ ಶಮನೀಂ ಶಮನೀಂ ದುಷ್ಕೃತಸ್ಯ ಚ |
ದುಸ್ವಪ್ನನಾಶಿನೀಂ ಧನ್ಯಾಂ ಪ್ರಪದ್ಯೇಹಂ ಶಮೀಂ ಶುಭಾಂ ||

‘ ಅಮಂಗಲಗಳನ್ನು ನಿವಾರಿಸುವ, ಪಾಪಗಳನ್ನು ಹೋಗಲಾಡಿಸುವ, ದುಸ್ವಪ್ನಗಳನ್ನು ನಿವಾರಿಸುವ ಮಂಗಳರೂಪಿಯಾದ ಶಮಿಯನ್ನು ಶರಣು ಹೊಂದುತ್ತೇನೆ ’ ಎಂದು ಭಕ್ತಿಯಿಂದ ಶಮೀ ವೃಕ್ಷವನ್ನು ವಿಜಯದಶಮಿಯ ದಿನ ಪೂಜೆ ಮಾಡುತ್ತಾರೆ.

ವಿಜಯದಶಮಿಯು ವರ್ಷದ ಅತ್ಯಂತ ಪವಿತ್ರವಾದ ದಿವಸಗಳಲ್ಲಿ ಒಂದು. ಈ ದಿನ ಸೀತಾರಾಮರನ್ನೂ ಪೂಜಿಸುತ್ತಾರೆ. ವಿಶೇಷವಾಗಿ ಸರಸ್ವತೀ ಪೂಜೆ ಮತ್ತು ವಿದ್ಯಾರಂಭವನ್ನು ವಿಜಯದಶಮಿಯಂದೇ ಮಾಡುತ್ತಾರೆ.

‘ ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ|
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

ಸುರಾsಸುರಾಸೇವಿತಪಾದಪಂಕಜಾ
ಕರೇ ವಿರಾಜತ್ಕಮನೀಯಪುಸ್ತಕಾ |
ವಿರಿಂಚಿಪತ್ನೀ ಕಮಲಾಸನಸ್ಥಿತಾ
ಸರಸ್ವತೀ ನೃತ್ಯತು ವಾಚಿ ಮೇ ಸದಾ ||

ಯಾ ಕುಂದೇಂದುತುಷಾರಹಾರಧವಲಾ ಯಾ ಶುಭ್ರವಸ್ತ್ರಾನ್ವಿತಾ ಯಾವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ |
ಯಾ ಬ್ರಹ್ಮಾಚ್ಯುತಶಂಕರಪ್ರಭೃತಿಭಿರ್ದೇವೈ: ಸದಾ ಪೂಜಿತಾ ಸಾ ಮಾಂ ಪಾತು ಸರಸ್ವತೀ ಭಗವತೀ ನಿ:ಶ್ಶೇಷಜಾಡ್ಯಾಪಹಾ || ’

ಎಂದು ದೇವತೆಗಳೂ ಆರಾಧಿಸುವ ಭಗವತಿ ಶಾರದೆಯನ್ನು ಸೇವಿಸುವ, ಪೂಜಿಸುವ ದಿನ.
“ತಮಸೋ ಮಾ ಜ್ಯೋತಿರ್ಗಮಯ” ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ - ಎಂಬ ಉಪನಿಷತ್ತಿನ ಮಾತಿನಂತೆ ಎಲ್ಲರೂ ಮಹಾಸರಸ್ವತಿಯಾದ ಭಗವತಿಯ ಅನುಗ್ರಹದಿಂದ ಜ್ಞಾನ-ವಿಜ್ಞಾನಗಳಿಗೆ ಯೋಗ್ಯ ಅಧಿಕಾರಿಗಳಾಗಿ ಶ್ರೇಯಸ್ಸನ್ನು ಹೊಂದಲಿ.
#ನವರಾತ್ರಿ #ವಿಜಯದಶಮಿ

02/10/2025

ದುಷ್ಟರು ತುಂಬಾ ಬೆಳೆಯಬಹುದು. ಆದರೆ ಉಳಿಯಲು ಸಾಧ್ಯವಿಲ್ಲ. ಸಜ್ಜನರನ್ನು ತುಂಬಾ ತುಳಿಯಬಹುದು. ಆದರೆ ನಾಶಮಾಡಲು ಸಾಧ್ಯವಿಲ್ಲ. - ಗಾಂಧೀಜಿ.
#ನುಡಿಮುತ್ತುಗಳು #ಸುಭಾಷಿತ #ಗಾಂಧಿಜಯಂತಿ

02/10/2025
02/10/2025

ಜೈ ಜವಾನ್ ಜೈ ಕಿಸಾನ್
‘ಸರಳತೆ, ಪ್ರಾಮಾಣಿಕತೆ ಮತ್ತು ಸ್ವಾಭಿಮಾನ’ವೇ ಇವರ ನಿಜವಾದ ಸಂಪತ್ತಾಗಿತ್ತು. ಆತ್ಮನಿರ್ಭರತೆಯಿಂದ ಬಾಳಿದ ಭಾರತದ ಶ್ರೇಷ್ಠ ರತ್ನ.
#ಜೈ_ಜವಾನ್_ಜೈ_ಕಿಸಾನ್

28/09/2025

ಎಲ್ಲ ಕಷ್ಟನಿವಾರಿಸುವ , ಸಂಪತ್ತನ್ನು ಕರುಣಿಸುವ ಶ್ರೀರಾಮನ ಮಂತ್ರಗಳು -

ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಂ|
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||

ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಂ| ಬಾಷ್ಪವಾರಿ ಪರಿಪೂರ್ಣಲೋಚನಂ ಮಾರುತಿಂ ನಮತ ರಾಕ್ಷಸಾಂತಕಮ್ ||

ತ್ರಯೋದಶಾಕ್ಷರೀ ಶ್ರೀರಾಮತಾರಕ ಮಂತ್ರ -

ಶ್ರೀರಾಮ ಜಯ ರಾಮ ಜಯ ಜಯ ರಾಮ||

ಶ್ರೀರಾಮ ಗಾಯತ್ರೀ ಮಂತ್ರ -
ಓಂ ದಶರಥಾಯ ವಿದ್ಮಹೇ, ಸೀತಾವಲ್ಲಭಾಯ ಧೀಮಹಿ|
ತನ್ನೋ ರಾಮ: ಪ್ರಚೋದಯಾತ್||

ಶ್ರೀರಾಮ ಮೂಲ ಮಂತ್ರ -
ಓಂ ಶ್ರೀರಾಮಾಯ ನಮ: ||

ಎಲ್ಲ ಸನಾತನೀ ಬಂಧುಗಳಿಗೆ ಶ್ರೀರಾಮ ನವಮಿಯ ಶುಭಾಶಯಗಳು.
#ಶ್ರೀರಾಮನವಮಿ

28/09/2025

ಯಾವ ಯಾವ ನಕ್ಷತ್ರದವರು ಯಾವ ಗಣಪತಿಗೆ - ಯಾವ ಪತ್ರೆ, ಯಾವ ಹೂವನ್ನು ಅರ್ಪಿಸಬೇಕು?

1- ಅಶ್ವಿನಿ : ವಿದ್ಯಾ ಗಣಪತಿ - ಮಾಚಿ ಪತ್ರೆ - ಜಾಜಿ ಹೂವು.
2 - ಭರಣಿ : ಬಾಲಗಣಪತಿ - ಗರಗ ಪತ್ರೆ - ಕಮಲದ ಹೂವು.
3 - ಕೃತ್ತಿಕಾ : ತೋರಣ ಗಣಪತಿ - ಬಿಲ್ವ ಪತ್ರೆ - ಮಾಲತೀ ಹೂವು.
4 - ರೋಹಿಣಿ : ಭಕ್ತಿಗಣಪತಿ - ಗರಿಕೆ - ಸಂಪಿಗೆ ಹೂವು.
5 - ಮೃಗಶಿರಾ : ವೀರಗಣಪತಿ - ಬದರಿ ಪತ್ರೆ - ದತ್ತೂರಿ ಹೂವು.
6 - ಆರ್ದ್ರಾ - ಶಕ್ತಿಗಣಪತಿ : ದತ್ತೂರಿ ಪತ್ರೆ - ಬೆಟ್ಟದಾವರೆ ಹೂವು.
7 - ಪುನರ್ವಸು : ದ್ವಿಭುಜಗಣಪತಿ - ಮಾಚಿ ಪತ್ರೆ - ನೈದಿಲೆ ಹೂವು.
8 - ಪುಷ್ಯ : ಸಿದ್ಧಿಗಣಪತಿ - ತುಳಸಿ ಪತ್ರೆ - ಪಾರಜಾತ ಹೂವು.
9 - ಆಶ್ಲೇಷ : ಉಚ್ಛಿಷ್ಟ ಗಣಪತಿ - ಬನ್ನಿ ಪತ್ರೆ - ದುಂಡುಮಲ್ಲಿಗೆ ಹೂವು.
10 - ಮಖ : ವಿಘ್ನಗಣಪತಿ - ಉತ್ತರಣೆ ಪತ್ರೆ - ಸೂಜಿಮಲ್ಲಿಗೆ ಹೂವು.
11 - ಪುಬ್ಬೆ : ಹೇರಂಬ ಗಣಪತಿ - ಮಾವಿನ ಪತ್ರೆ - ಬಸವನ ಪಾದ ಹೂವು.
12 - ಉತ್ತರಾ : ಲಕ್ಷ್ಮೀವಲ್ಲಭ ಗಣಪತಿ - ಕಣಗಿಲೆ ಪತ್ರೆ - ಕನ್ನೈದಿಲೆ ಹೂವು.
13 - ಹಸ್ತ : ಮಹಾಗಣಪತಿ - ಎಕ್ಕದ ಎಲೆ - ಬಕುಳ ಹೂವು.
14 - ಚಿತ್ರಾ : ವಿಜಯಗಣಪತಿ - ಲಕ್ಕಿಸೊಪ್ಪು - ನಾಗಸಂಪಿಗೆ ಹೂವು.
15 - ಸ್ವಾತಿ : ನೃತ್ಯಗಣಪತಿ - ವಿಷ್ಣುಕ್ರಾಂತಿ ಪತ್ರೆ - ಪಾದರೀ ಹೂವು.
16 - ವಿಶಾಖ : ಊರ್ಧ್ವ ಗಣಪತಿ - ದಾಳಿಂಬೆ ಎಲೆ - ನಾಗಸಂಪಿಗೆ ಹೂವು.
17 - ಅನುರಾಧ : ಏಕಾಕ್ಷರ ಗಣಪತಿ - ದವನ ಪತ್ರೆ - ಪಾದರೀ ಹೂವು.
18 - ಜ್ಯೇಷ್ಠ : ಪ್ರಸನ್ನ ಗಣಪತಿ - ಮರುಗ ಪತ್ರೆ - ಸ್ಫಟಿಕದ ಹೂವು.
19 - ಮೂಲ : ಹರಿದ್ರಾ ಗಣಪತಿ - ಅರಳೀ ಪತ್ರೆ - ಸೇವಂತಿಗೆ ಹೂವು.
20 - ಪೂರ್ವಾಷಾಢ : ತ್ರ್ಯಕ್ಷರ ಗಣಪತಿ - ಜಾಜೀ ಪತ್ರೆ - ಗುಲಾಬಿ ಹೂವು.
21 - ಉತ್ತರಾಷಾಢ : ಏಕದಂತ ಗಣಪತಿ - ಮಲ್ಲಿಗೆ ಪತ್ರೆ - ಕೆಂಪು ಗುಲಾಬಿ ಹೂವು.
22 - ಶ್ರವಣ : ಸೃಷ್ಟಿಗಣಪತಿ - ಅಗಸೆ ಪತ್ರೆ - ದಾಸವಾಳ ಹೂವು.
23 - ಧನಿಷ್ಠ : ಉದ್ದಂಡ ಗಣಪತಿ - ಆಲದ ಪತ್ರೆ - ಸುಗಂಧರಾಜ ಹೂವು.
24 - ಶತಭಿಷ : ಋಣವಿಮೋಚನ ಗಣಪತಿ - ಕಬ್ಬಿನ ಎಲೆ - ಕೆಂಪು ದಾಸವಾಳ ಹೂವು.
25 - ಪೂರ್ವಾಭಾದ್ರ : ಧುಂಡಿ ಗಣಪತಿ - ತೆಂಗಿನ ಗರಿ - ಗೋರಂಟಿ ಹೂವು.
26 - ಉತ್ತರಾಭಾದ್ರ : ಪಂಚಮುಖಿ ಗಣಪತಿ - ಬತ್ತದ ಎಲೆ - ಡೇರೆ ಹೂವು.
27 - ರೇವತಿ : ದರ್ಭೆ - ಸಂಕಟಹರ ಗಣಪತಿ - ಕೆಂಪು ತುಂಬೆ ಹೂವು.

ಶ್ರೀ ಗೌರೀ-ಗಣೇಶಚತುರ್ಥೀ ಪರ್ವದ ಶುಭಾಶಯಗಳು.

#ಶ್ರೀಗಣೇಶಚತುರ್ಥೀ

28/09/2025

ಶರನ್ನವರಾತ್ರ ಪರ್ವಕಾಲದಲ್ಲಿ ದುರ್ಗಾದೇವಿಯನ್ನು ಭಕ್ತರು - ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನೀ, ಕಾಲರಾತ್ರಿ:, ಮಹಾಗೌರೀ ಮತ್ತು ಸಿದ್ಧಿದಾತ್ರೀ ಎಂಬುದಾಗಿ ಒಂದೊಂದು ದಿನ ಒಂದೊಂದು ರೂಪಗಳನ್ನು ಪೂಜಿಸುತ್ತಾರೆ.

ನವರಾತ್ರಿ ಹಬ್ಬದ ಮೊದಲ ದಿನದಂದು ದುರ್ಗಾಮಾತೆಯು 'ಶೈಲಪುತ್ರಿ'ಯ ರೂಪವನ್ನು ಧರಿಸುತ್ತಾಳೆ. ಶೈಲಪುತ್ರಿ ಎಂದರೆ ಪರ್ವತರಾಜನ ಮಗಳು ಎಂಬ ಅರ್ಥ ಬರುತ್ತದೆ. ಪರ್ವತ ರಾಜ ಹಿಮವಂತನ ಪುತ್ರಿಯಾಗಿ ಅವತರಿಸಿದ ಕಾರಣ ಈಕೆ ಶೈಲಪುತ್ರಿಯಾಗಿದ್ದಾಳೆ.
ವೃಷಭವಾಹನೆಯಾದ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪವಿದೆ. ಇವಳೇ ನವದುರ್ಗೆಯರಲ್ಲಿ ಮೊದಲನೇಯವಳಾಗಿದ್ದಾಳೆ.
ನವರಾತ್ರಿಯ ಮೊದಲನೇ ದಿನದ ಪೂಜೆಯಲ್ಲಿ ಇವಳ ಪೂಜೆ - ಉಪಾಸನೆ ಮಾಡುತ್ತಾರೆ.

ಶೈಲಪುತ್ರಿಯ ಸ್ಮರಿಸುವ ಮಂತ್ರ -

ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಂ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ ||
#ನವರಾತ್ರಿ #ಶೈಲಪುತ್ರೀ

28/09/2025

ನವರಾತ್ರಿಯ ಎರಡನೆಯ ದಿನ.

ಓಂ ಬ್ರಹ್ಮಚಾರಿಣ್ಯೈ ನಮ:🙏🙏🙏

ಬ್ರಹ್ಮಚಾರಿಣೀ ದೇವಿಯ ಮಂತ್ರ -

ಓಂ ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ |
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||

ನವರಾತ್ರಿ ಹಬ್ಬದ ಎರಡನೆಯ ದಿನದಂದು ದುರ್ಗಾಮಾತೆ 'ಬ್ರಹ್ಮಚಾರಿಣಿ'ಯ ರೂಪ ಧರಿಸುತ್ತಾಳೆ.
“ವೇದಸ್ತತ್ವಂ ತಪೋ ಬ್ರಹ್ಮ ” ಎಂಬ ವಾಕ್ಯದ ಪ್ರಕಾರ ‘ಬ್ರಹ್ಮ’ ಶಬ್ದದ ಅರ್ಥ ತಪಸ್ಸು ಎಂದು. ಬ್ರಹ್ಮಚಾರಿಣೀ ಎಂದರೆ ತಪಸ್ಸು ಮಾಡುತ್ತಿರುವವಳು ಎಂದರ್ಥ. ಇವಳ ಉಪಾಸನೆಯಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ವೃದ್ಧಿಯಾಗುತ್ತದೆ. ಇವಳು ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈನಲ್ಲಿ ಕಮಂಡಲು ಧರಿಸಿದ್ದಾಳೆ.
ಜಗಜ್ಜನನಿ ಬ್ರಹ್ಮಚಾರಿಣಿಯ ಕೃಪೆಯಿಂದ ಮಾನವರಿಗೆ ವಿಜಯ ಪ್ರಾಪ್ತಿಯಾಗುತ್ತದೆ.

ಬ್ರಹ್ಮಚಾರಿಣೀ ದೇವಿಯು ತನ್ನ ಭಕ್ತರಿಗೆ ಬ್ರಹ್ಮಜ್ಞಾನವನ್ನು ಕರುಣಿಸುತ್ತಾಳೆ.

ನವರಾತ್ರಿಯ ಎರಡನೇಯ ದಿನ ಬ್ರಹ್ಮಚಾರಿಣೀ ದೇವಿಯನ್ನು ಪೂಜಿಸಲಾಗುತ್ತದೆ.
#ನವರಾತ್ರಿ #ಬ್ರಹ್ಮಚಾರಿಣೀ

28/09/2025

ನವರಾತ್ರಿಯ ಮೂರನೆಯ ದಿನ.

ಓಂ ಚಂದ್ರಘಂಟಾಯೈ ನಮ:🙏🙏🙏

ಚಂದ್ರಘಂಟಾ ದೇವಿಯ ಮಂತ್ರ -

ಓಂ ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||

ಚಂದ್ರಘಂಟಾ ದೇವಿಯ ವಾಹನ - ವ್ಯಾಘ್ರ.

ಹತ್ತು ಕೈಗಳನ್ನು ಹೊಂದಿರುವ ಚಂದ್ರಘಂಟಾ ದೇವಿಯು

ಬಲಗೈಯಲ್ಲಿ - ಜಪಮಣಿ , ಪದ್ಮ, ಶರ, ಧನಸ್ಸು,ಅಭಯ ಮುದ್ರೆ ಮತ್ತು

ಎಡಗೈಯಲ್ಲಿ - ತ್ರಿಶೂಲ,ಕಮಂಡಲ, ಖಡ್ಗ, ಗದೆ, ಜ್ಞಾನಮುದ್ರೆಯನ್ನು ಧರಿಸಿದ್ದಾಳೆ.

ಚಕ್ರ - ಮಣಿಪೂರ

ತತ್ವ - ಆಕಾಶ

ನವರಾತ್ರಿ ಹಬ್ಬದ ಮೂರನೆಯ ದಿನದಂದು ದುರ್ಗಾಮಾತೆ "ಚಂದ್ರಘಂಟಾ" ರೂಪವನ್ನು ಧರಿಸುತ್ತಾಳೆ.
ಇವಳ ಮಸ್ತಕದಲ್ಲಿ ಗಂಟೆಯ ಆಕಾರದಲ್ಲಿ ಅರ್ಧಚಂದ್ರನಿದ್ದಾನೆ. ಈ ಕಾರಣದಿಂದಲೇ ಇವಳನ್ನು ಚಂದ್ರಘಂಟಾದೇವಿ ಎಂದು ಕರೆಯಲಾಗುತ್ತದೆ. ಈ ದೇವಿಯ ರೂಪವು ಸೌಂದರ್ಯ ಮತ್ತು ಧೈರ್ಯವನ್ನು ಬಿಂಬಿಸುತ್ತದೆ. ಇವಳ ಸ್ವರೂಪವು ಪರಮ ಶಾಂತಿದಾಯಕ ಹಾಗೂ ಶ್ರೇಯಸ್ಕರವಾಗಿದೆ.
ದಶಹಸ್ತಗಳುಳ್ಳ ದೇವಿಯು ಶಸ್ತ್ರ ಸಜ್ಜಿತಳಾಗಿ, ಯುದ್ಧ ಸನ್ನದ್ಧಳಾಗಿರುವಂತೆ ಕಾಣುತ್ತಾಳೆ.

‘ಶ್ರದ್ಧಾ ಮಾತ್ರೇಣ ಸಿದ್ಧಿದಾಂ’ ಕೇವಲ ಶ್ರದ್ಧೆಯ ಮಾತ್ರದಿಂದಲೇ ಅನುಗ್ರಹಿಸುವ ಚಂದ್ರಘಂಟಾ ದೇವಿಯನ್ನು ನವರಾತ್ರಿಯ ಮೂರನೇಯ ದಿನ ಯೋಗಸಾಧಕರು “ಮಣಿಪೂರ”ಚಕ್ರದಲ್ಲಿ ಆರಾಧಿಸುತ್ತಾರೆ.
ಜಗಜ್ಜನನಿ ಚಂದ್ರಘಂಟಾದೇವಿಯ ಕೃಪೆಯಿಂದ ಭಕ್ತರ ಸಮಸ್ತ ಪಾಪ - ತಾಪಗಳು ನಾಶವಾಗುತ್ತವೆ.
#ನವರಾತ್ರಿ #ಚಂದ್ರಘಂಟಾ

Address

Chamundipuram
Mysore
570004

Opening Hours

Monday 5pm - 8pm
Tuesday 5pm - 8pm
Wednesday 5pm - 8pm
Thursday 5pm - 8pm
Friday 5pm - 8pm
Saturday 3pm - 8pm
Sunday 3pm - 8pm

Website

Alerts

Be the first to know and let us send you an email when ಯಾಗಶಾಲೆ posts news and promotions. Your email address will not be used for any other purpose, and you can unsubscribe at any time.

Shortcuts

Share