ಶ್ರೀ ಅನ್ನಪೂರ್ಣೇಶ್ವರಿ ಹೊರನಾಡು

  • Home
  • India
  • Mudigere
  • ಶ್ರೀ ಅನ್ನಪೂರ್ಣೇಶ್ವರಿ ಹೊರನಾಡು

ಶ್ರೀ ಅನ್ನಪೂರ್ಣೇಶ್ವರಿ ಹೊರನಾಡು Contact information, map and directions, contact form, opening hours, services, ratings, photos, videos and announcements from ಶ್ರೀ ಅನ್ನಪೂರ್ಣೇಶ್ವರಿ ಹೊರನಾಡು, Hindu temple, Mudigere.

*🕉ಹೊರನಾಡ ಅನ್ನಪೂರ್ಣೇಶ್ವರಿ🕉*
08/06/2019

*🕉ಹೊರನಾಡ ಅನ್ನಪೂರ್ಣೇಶ್ವರಿ🕉*

12/02/2019
ಹೊರನಾಡ ಪುರನಿಲಯೇ ಶ್ರೀ ಅನ್ನಪೂರ್ಣೆ, ಜಗಕ್ಕೆಲ್ಲ ಅನ್ನವ ನೀಡ್ವ ದೇವಿ ಕೃಪಾ ಪೂರ್ಣೇ ಎಂದು ಪಾಡುತ ಮಾತೆಯ ಕರುಣಾರವಿಂದಗಳನ್ನು ಕಂಡು ಪಾವನರಾದ ಜ...
27/01/2019

ಹೊರನಾಡ ಪುರನಿಲಯೇ ಶ್ರೀ ಅನ್ನಪೂರ್ಣೆ, ಜಗಕ್ಕೆಲ್ಲ ಅನ್ನವ ನೀಡ್ವ ದೇವಿ ಕೃಪಾ ಪೂರ್ಣೇ ಎಂದು ಪಾಡುತ ಮಾತೆಯ ಕರುಣಾರವಿಂದಗಳನ್ನು ಕಂಡು ಪಾವನರಾದ ಜನರೆ ಧನ್ಯರು.
ಆದಿಶಕ್ತಿಯಾದ ಪಾರ್ವತಿಯು ಪರಶಿವನೊಂದಿಗೆ ಪಗಡೆಯಾಡಿ ಅದರ ಮೂಲಕ ಶಕ್ತಿಯ ಅರ್ಥಾಥ್ ಅನ್ನದ ಮಹತ್ವವನ್ನು ಜಗಕ್ಕೆ ತಿಳಿಸಿಕೊಡುವ ಉದ್ದೇಶದಿಂದ ಕಾಶಿ ಕ್ಷೇತ್ರದಲ್ಲಿ ಅನ್ನಪೂಣರ್ೇಯಾಗಿ ಉದ್ಬವಿಸಿ ಸಕಲ ಜೀವರಾಶಿಗಳಿಗೆ ಅನ್ನದಾತೆಯೂ, ಮಹಾಮಾತೆಯೂ ಆಗಿ ನಿಂದವಳೆ ಶ್ರೀ ಅನ್ನಪೂರ್ಣೇಶ್ವರೀ ದೇವಿ. ಹೀಗೆ ಮಾತೆಯ ಕಾಶಿಯಲ್ಲಿ ಉದಿಸಿ ಮುಂದೆ ಜಗದಗಲ ತನ್ನ ಶಕ್ತಿಯನ್ನು ಪಸರಿಸಿ ಮೆರೆದ ಮಹಾಮಾತೆಯಾಗಿದ್ದಾಳೆ. ಜಗದ್ದಾತ್ರಿಯೂ ಆದ ಆದಿಶಕ್ತಿ ಹೊರನಾಡಿನಲ್ಲಿ ನೆಲೆಸಿದುದುರ ಬಗೆ ಒಂದು ಐತಿಹ್ಯ(ಪುರಾಣ) ಇಂತಿದೆ.

ಸ್ಥಳ ಪುರಾಣ : ಹೊರನಾಡು ಚಿಕ್ಕಮಗಳೂರು ಜಿಲ್ಲೆಯ 'ಭದ್ರಾ’ ನದಿಯ ತೀರದಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯು ಅತೀ ರಮಣ-ಮನೋಹರವಾದ ಸಸ್ಯರಾಶಿಯನ್ನು ತನ್ನಲ್ಲಿ ಇರಿಸಿಕೊಂಡು ಹಲವಾರು ಜೀವರಾಶಿಗಳಿಗೆ ಆಶ್ರಯದಾತೆಯಾದ ಪ್ರಕೃತಿ ಮಾತೆಯ ಮಡಿಲಲ್ಲಿ ಹಾಗೂ ತಂಪಾದ ವಾತಾವರಣ ಹೊಂದಿರುವ ಸುಂದರ ಜಿಲ್ಲೆಯಾಗಿದೆ. ಈ ಸುಂದರ ಪರಿಸರದ ನಡುವೆ ಅಂಬಿಕೆಯಾದ ಅನ್ನಪೂಣರ್ಣೆಯು ನೆಲೆಸಿ ಜಗಪಾವನೆಯಾಗಿದ್ದಾಳೆ. ಇಲ್ಲಿನ ಶ್ರೀ ಆದಿಶಕ್ತ್ಯಾತ್ಮ ಅನ್ನಪೂರ್ಣೇಶ್ವರೀ ಅಮ್ಮನವರ(Sri Annapoorneshwari Ammanavaru) ಮೂರ್ತಿಯು ಅಗಸ್ತ್ಯ ಮಹರ್ಷಿಗಳಿಂದ ಸಾವಿರಾರು ವರ್ಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟಿದೆ. ನಂತರದಲ್ಲಿ ಅಂದರೆ ಸುಮಾರು 400 ವರ್ಷಗಳ ಹಿಂದಿನಿಂದ ವಂಶಪಾರಂಪರ್ಯ ಆಡಳಿತ ಧರ್ಮದರ್ಶಿತ್ವ ಪದ್ದತಿ ಇಲ್ಲಿ ಆರಂಭವಾಗಿದೆ. ಹೀಗೆ ಇಲ್ಲಿ ಅಂದಿನಿಂದ ಇಂದಿಗೂ ಉಚಿತ ಅನ್ನದಾನ ಸೇವೆ ಇಂದಿನ ತನಕವೂ ನಡೆದುಕೊಂಡು ಹೀಗೆ 5ನೇ ಧರ್ಮದರ್ಶಿಗಳಿಂದ ಶ್ರೀ ಕ್ಷೇತ್ರವು ಸಂಪೂರ್ಣ ನವಿಕರಣವಾದುದಲ್ಲದೆ ಊರನ್ನು ಕೂಡಾ ಆರ್ತಿಕವಾಗಿ ಉನ್ನತಿಯತ್ತ ಕೊಂಡೊಯ್ಯುವಲ್ಲಿ ಶ್ರಮಿಸಿದರು. ಅದೇ ರೀತಿಯಲ್ಲಿ ಈ ದೇವಾಲಯವನ್ನು ಸಂಪೂರ್ಣ ಶಿಲಾಮಯವನ್ನಾಗಿ ಮಾಡಲಾಯಿತು ಮತ್ತು ಮುಂದೆ ಇಲ್ಲಿ ಬ್ರಹ್ಮಕುಂಭಾಷೇಕ ಮತ್ತು ದೇವಿಯ ನೂತನ ಬಿಂಬವನ್ನು ಪ್ರತಿಷ್ಠಾಪಿಸಲಾಯ್ತು.
ಅಂತೆಯೇ ಶ್ರೀ ಕ್ಷೇತ್ರವು ಇಂದು ಒಂದು ಮಹಾನ್ ಶಕ್ತಿಸ್ಥಳವಾಗಿ ಬದಲಾವಣೆ ಹೊಂದಿದೆಯಲ್ಲದೆ ಇಂದು ಸಾವಿರಾರು ಭಕ್ತಾದಿಗಳು ಈ ಕ್ಷೇತ್ರವನ್ನು ನಿತ್ಯವೂ ಸಂದರ್ಶಿಸುವಂತ ಕ್ಷೇತ್ರವಾಗಿದೆ. ಶ್ರೀ ಮಾತೆಯನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದು ಎಲ್ಲರ ಭಕ್ತರ ಮನದ ಮಾತು. ಏಕೆಂದರೆ ಮಾತೆಯ ಮುಖಾರವಿಂದದಲ್ಲಿ ಅಂತಹ ಒಂದು ಸೌಮ್ಯತೆಯು, ಮಂದಹಾಸವು, ಮಮತೆಯು ಹೊರಹೊಮ್ಮುತ್ತದೆ. ಮಾತೆಯು ಮಂದಸ್ಮಿತಳಾಗಿ ಶಂಖ-ಚಕ್ರ, ಅಭಯ-ವರದಗಳನ್ನು ಹೊಂದಿದವಳಾಗಿ ನಿಂತ ಭಂಗಿಯಲ್ಲಿ ದೇವಿಯ ವಿಗ್ರಹವನ್ನು ನಿಮರ್ಾಣ ಮಾಡಲಾಗಿದೆ.
ಶ್ರೀ ಕ್ಷೇತ್ರದಲ್ಲಿ ನಿತ್ಯಾನ್ನ ಸೇವೆಯೊಂದಿಗೆ ಹಲವಾರು ಪೂಜಾ-ವಿನಿಯೋಗಾಧಿಗಳು ನಡೆಯುತ್ತದೆ. ಭಕ್ತಾದಿಗಳು ಇಲ್ಲಿ ಉಳಿಯಲು ಹಲವಾರು ವಸತಿಗೃಹಗಳು ಕೂಡಾ ಇದೆ. ಹೀಗೆ ಮಾತೆಯನ್ನು ಕಂಡು ನೀವು ಒಮ್ಮೆ ಧನ್ಯರಾಗಿ. ಮಾತೆಯ ಚರಣ ಕಮಲಗಳಲ್ಲಿ ಒಂದು ಬಾರಿ ಶಿರಭಾಗಿ ನಮಿಸಿ. ಅಮ್ಮನ ಸಿರಿಮುಡಿ ಗಂಧಪ್ರಸಾದವನ್ನು ಸೇವಿಸಿ ಅಮ್ಮನವರ ಕೃಪಾಶಿವರ್ಾದಕ್ಕೆ ಪಾತ್ರರಾಗಿ.

ದಾರಿಯ ವಿವರ : ಮಾತೆಯ ದೇವಾಯಲಯನ್ನು ಸಂದರ್ಶಿಸುವ ಭಕ್ತಾದಿಗಳು ಕಳಸವನ್ನು ತಲುಪಿ ಅಲ್ಲಿಂದ ಮಾತೆಯ ದೇವಾಲಯವನ್ನು ತಲುಪಬಹುದು. ಸ್ವಂತ ವಾಹನದಲ್ಲಿಯಾದರೆ ಹತ್ತಿರದಲ್ಲಿ ಇನ್ನಿತರ ದೇವಾಲಯಗಳು ಇವೆ. ಕಳಸದಲ್ಲಿ ಕಳಸೇಶ್ವರ ದೇವಾಲಯವು ಐತಿಹಾಸಿಕ ಮಹತ್ವವನ್ನು ಹೊಂದಿದ್ದು ನಯನ-ಮನೋಹರವಾಗಿದೆ.

ವಿಳಾಸ :-
ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನ,
ಹೊರನಾಡು, ಚಿಕ್ಕಮಗಳೂರು - ಜಿಲ್ಲೆ.

*🕉ಹೊರನಾಡ ಅನ್ನಪೂರ್ಣೇಶ್ವರಿ🕉*ಶ್ರೀ ಮತ್ಸರ್ವಜನೇಶ್ವರೀ ಸುಖಕರೀ ಮಾತಾಕೃಪಾಸಾಗರೀ।ಶ್ರೀ ಚಕ್ರಾತ್ಮಕ ದಿವ್ಯ ವೈಭವಪುರೀ ಸಾಮ್ರಾಜ್ಯ ಮಾಹೇಶ್ವರೀ।।ಶ...
20/01/2019

*🕉ಹೊರನಾಡ ಅನ್ನಪೂರ್ಣೇಶ್ವರಿ🕉*

ಶ್ರೀ ಮತ್ಸರ್ವಜನೇಶ್ವರೀ ಸುಖಕರೀ ಮಾತಾಕೃಪಾಸಾಗರೀ।
ಶ್ರೀ ಚಕ್ರಾತ್ಮಕ ದಿವ್ಯ ವೈಭವಪುರೀ ಸಾಮ್ರಾಜ್ಯ ಮಾಹೇಶ್ವರೀ।।
ಶ್ರೀ ಪಾದಾನತ ಭಕ್ತ ಪಾವನಕರೀ ನಿತ್ಯಾನ್ನದಾನೇಶ್ವರೀ।
ಶ್ರೀ ವಿದ್ಯಾದಿಭಿರರ್ಚಿತಾ ಶುಭಕರೀ ಪಾಯಾತ್‌ ಸುರಾಧೀಶ್ವರೀ।।

ಕಣ್ಣು ತುಂಬುವ ನಿಚ್ಚಂ ಪೊಸತೆನಿಸುವ ಸಸ್ಯ ಶ್ಯಾಮಲೆ. ಜಲಲ ಜಲಧಾರೆ. ಅನಂತ ಪ್ರಕೃತಿಯ ಅನನ್ಯತೆಗೆ ಸಾಕ್ಷಿಯೆಂಬಂತೆ ತೋರುವ ಕಣಿವೆ ಕಂದರ ಘಟ್ಟಗಳು. ತೇಲಿ ಅಲೆಯಾಗುವ ಹಕ್ಕಿಗಳಿಂಚರ. ಕಾಫಿ-ಚಹಾ ತೋಟಗಳಿಂದ ತೇಲಿಬರುವ ತಂಗಾಳಿಯ ಘಮಲು. ಈ ಪರಿಯ ಪರಿಸರದ ನಡುವೆ ಆದಿಶಕ್ತ್ಯಾತ್ಮಕ ಶ್ರೀಅನ್ನಪೂರ್ಣೇಶ್ವರಿ ದೇವಿಯ ನೆಲೆ. ಅದು ಹೊರನಾಡು!

ದಾರಿ ದುರ್ಗಮ ಎಂತಲೋ, ನಾಡಿಂದ ದೂರವಾಗಿ ಕಾಡಿನ ನಡುವೆ ಇರುವುದರಿಂದಲೋ ಏನೋ ಅನ್ನಪೂಣೇಶ್ವರಿ ನೆಲೆ ‘ಹೊರನಾಡು’ ಎಂದು ಪ್ರಸಿದ್ಧವಾಗಿದೆ. ನಾಡಿನ ಪುಣ್ಯಕ್ಷೇತ್ರಗಳಲ್ಲೊಂದಾದರೂ, ನಾಡು ಹೊರಗಿನದು ಆದುದರಿಂದಲೇ ಇರಬೇಕು- ಅನ್ನಪೂರ್ಣೇಶ್ವರಿ ನೆಲೆ ಮಂಜುನಾಥನ ಧರ್ಮಸ್ಥಳದಂತಾಗಲೀ, ಕೃಷ್ಣನ ಉಡುಪಿಯಂತಾಗಲೀ, ಮೂಕಾಂಬಿಕೆಯ ಕೊಲ್ಲೂರಿನಂತಾಗಲೀ, ಅಥವಾ ಶಾರದೆ ಶೃಂಗೇರಿಯಂತಾಗಲೀ- ಪ್ರಭಾವಳಿಯ ಮೊದಲ ಸಾಲಿನಲ್ಲಿಲ್ಲ . ಹಾಗೆ ನೋಡಿದರೆ ಹೊರನಾಡಿನ ಚೆಲುವು ಇತರ ಪುಣ್ಯಕ್ಷೇತ್ರಗಳಿಗಿಲ್ಲ . ಇಲ್ಲಿನ ನಿಸರ್ಗ ಉಳಿದೆಡೆಗಳಲ್ಲಿ ಕಾಣ ಸಿಗುವುದಿಲ್ಲ . ಅಚ್ಚುಕಟ್ಟಲ್ಲೂ ಹೊರನಾಡು ಎತ್ತಿದ ಕೈ.

ದೂರದ ಗರ್ಭಗುಡಿಯ ನಂದಾದೀಪದ ಬೆಳಕಿನಲ್ಲಿ ದರ್ಶನ ಕೊಡುವ ಇತರ ದೇವಿಯರಂತಲ್ಲ ಹೊರನಾಡ ಅನ್ನಪೂರ್ಣೇಶ್ವರಿ. ತೀರಾ ಹತ್ತಿರದಿಂದ ದೇವಿಯ ದರ್ಶನ ಲಭ್ಯ. ಆರು ಅಡಿ ಎತ್ತರದ ದೇವಿಯ ಶಿಲಾಮೂರ್ತಿ ಪ್ರತಿಷ್ಠಾಪನೆಯಾದದ್ದು 1973 ರಲ್ಲಿ . ತಮಿಳುನಾಡಿನ ಶಂಕೋಟೆಯಿಂದ ತಂದು ಸ್ಥಾಪಿಸಲಾಯಿತು. ಮೂರ್ತಿಯ ಕೆಳಭಾಗದಲ್ಲಿ ಮೂಲದೇವಿಯಿದ್ದಾಳೆ. ಅನ್ನಪೂರ್ಣೆ ಚತುರ್ಭುಜೆ. ಮೇಲಿನ ಎರಡೂ ಕೈಗಳಲ್ಲಿ ಶಂಖಚಕ್ರ, ಇನ್ನೊಂದು ಕೈಯಲ್ಲಿ ಶ್ರೀಚಕ್ರ, ನಾಲ್ಕನೇ ಕೈಯಲ್ಲಿ ಗಾಯತ್ರಿ.

ಹೊರನಾಡಿಗೆ ಏಕೆ ಹೋಗಬೇಕು?
ಯಾತ್ರಾಸ್ಥಳಗಳಿಗೆ ಹೋಗುವುದಾದರೂ ಏಕೆ ; ದೇವರ ದರುಶನಕೆ, ಭಕುತಿಯ ಪ್ರದರ್ಶನಕೆ. ಹೊರನಾಡಿನಲ್ಲಿ ಇನ್ನೊಂದು ಲಾಭವಿದೆ. ನಿಸರ್ಗ ಮೈ ಮುರಿದು ಬಿದ್ದಿರುವ ಅಲ್ಲಿ ನಾವು ಹಗುರಾಗಬಹುದು. ಯಂತ್ರಗಳ ನಡುವೆ ಕಿಲುಬುಗಟ್ಟಿದ ಮನಸ್ಸು ಹಗುರಾಗಲು ಹೊರನಾಡು ಸಂಜೀವಿನಿ. ಮಳೆಯ ದಿನಗಳಲ್ಲಾದರೆ ಕಣ್ಣಿಗೆ ಹಸಿರು ತುಂಬಿಕೊಳ್ಳುತ್ತ , ನೀರಿನ ಬಳುಕ ಕಿಂಕಿಣಿ-ಹಕ್ಕಿಗಳಿಂಚರಕೆ ಕಿವಿಯಾಡ್ಡಬಹುದು. ಘಟ್ಟಗಳಿಗೆ ಕಣ್ಣು ಕೀಲಿಸಿ ಕಲ್ಪನಾ ಲಹರಿ ಹರಿಬಿಡಬಹುದು.

ಬೆಳಗ್ಗೆ ಏಳರಿಂದ ರಾತ್ರಿ ಒಂಭತ್ತರವರೆಗೂ ದೇವಿಯ ದರುಶನ ಭಾಗ್ಯ ಲಭ್ಯ. ದಿನಕ್ಕೆ ಮೂರು ಸಲ ಮಹಾ ಮಂಗಳಾರತಿ. ಮಾತಾನ್ನಪೂರ್ಣೇಶ್ವರಿಯ ‘ಅನ್ನಪೂರ್ಣ ಸದನ’

ಊಟ ಇಲ್ಲಿ ಕಾಟಾಚಾರದ ಅವಸರದ್ದಲ್ಲ ; ಪ್ರೀತಿಯ ಉಪಚಾರದ್ದು . ರುಚಿಕಟ್ಟು ಹಾಗೂ ಸ್ವಾದಿಷ್ಟ . ಅವಲಕ್ಕಿ, ಮಜ್ಜಿಗೆ, ಕಾಫಿ ಬೆಳಗಿನ ಉಪಾಹಾರಕ್ಕಾದರೆ, ಮಧ್ಯಾಹ್ನದ ಭೋಜನಕ್ಕೆ ಅನ್ನ, ಸಾರು, ಚಿತ್ರಾನ್ನ ಹಾಗೂ ಪಾಯಸ. ಊಟದ ಕೊನೆಗೆ ಹೊಟ್ಟೆ ತಂಪೆನಿಸಲು ಮಜ್ಜಿಗೆ. ರಾತ್ರಿಯೂ ಸ್ವಾದಿಷ್ಟ ಭೋಜನ. ಅಡುಗೆ ಕೋಣೆ ಆಧುನಿಕ ಸೌಲಭ್ಯಗಳಿಂದ ಸಜ್ಜುಗೊಂಡಿದೆ.

ಮಲೆನಾಡಿನ ಜನಕ್ಕೆ ಅನ್ನಪೂರ್ಣೇಶ್ವರಿ ಕಾಯುವ ದೇವತೆ. ಸುಖ, ದುಃಖ ಎಲ್ಲವೂ ಅವಳಿಗೇ ಸೇರಿದ್ದು . ಆ ಕಾರಣದಿಂದಲೇ ಮೊದಲ ಕೊಯ್ಲನ್ನು ದೇವಿಗೆ ಅರ್ಪಿಸುತ್ತಾರೆ. ಭತ್ತ, ಅಡಿಕೆ, ಕಾಫಿ, ಟೀ.. ದೇವಿಯ ಸನ್ನಿಧಿಗೆ ಬಂದ ನಂತರವೇ ಮಾರುಕಟ್ಟೆಗೆ- ಮನೆ ಮಂದಿಗೆ.

ಹೊರನಾಡನ್ನು ದಕ್ಷಿಣ ಕಾಶಿ ಎಂತಲೂ ಕರೆಯುತ್ತಾರೆ. ದೇವಿಯ ಬಗ್ಗೆ ಹಲವಾರು ಐತಿಹ್ಯಗಳಿದ್ದರೂ, ಈವರೆಗೂ ಇತಿಹಾಸದ ಬಗ್ಗೆ ಅಧಿಕೃತ ಉಲ್ಲೇಖಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರಕಿಲ್ಲ . ಅನ್ನಪೂರ್ಣೇಶ್ವರಿ ಹೊರನಾಡಿನ ದೊಡ್ಡಮನೆ ಪಾಳೆಗಾರ ಮನೆತನದ ಪಟ್ಟದ ದೇವತೆ ಎಂತಲೂ ಹೇಳುತ್ತಾರೆ.

ಹೊರನಾಡು ಕ್ಷೇತ್ರವನ್ನು ಅಗಸ್ತ್ಯ ಮಹರ್ಷಿಗಳು ಸ್ಥಾಪಿಸಿದರು ಎಂಬ ಐತಿಹ್ಯವಿದೆ. ಅನ್ನಪೂರ್ಣೇಶ್ವರಿ ತಾಯಿಯ ಕೃಪೆಗೆ ಪಾತ್ರರಾದವರಿಗೆ ಜೀವನದ ಉದ್ದಕ್ಕೂ ಅನ್ನ ಸಿಗುತ್ತದೆ ಎಂಬ ನಂಬಿಕೆ ಅನೇಕರಲ್ಲಿದೆ. ಹೀಗಾಗಿ ವರ್ಷವಿಡೀ ಲಕ್ಷಾಂತರ ಭಕ್ತರು ಹೊರನಾಡಿಗೆ ಬಂದು ಅನ್ನಪೂರ್ಣೇಶ್ವರಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಾರೆ. ಅನ್ನಪೂಣೇಶ್ವರಿಯ ಕೃಪೆ ಇದ್ದರೆ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆ ಹೊರನಾಡು ಸುತ್ತ ಮುತ್ತಲಿನ ಗ್ರಾಮಗಳ ರೈತರಲ್ಲಿದೆ. ಹೀಗಾಗಿ ಅವರು ವರ್ಷಕ್ಕೊಮ್ಮೆ ತಾವು ಬೆಳೆದ ಭತ್ತ, ಅಡಿಕೆ, ಕಾಫಿ, ಏಲಕ್ಕಿ, ಕಾಳು ಮೆಣಸು ಇತ್ಯಾದಿ ಉತ್ಪನ್ನಗಳನ್ನು ತಾಯಿಯ ಸನ್ನಿಧಿಗೆ ಕಾಣಿಕೆ ರೂಪದಲ್ಲಿ ತಂದು ಒಪ್ಪಿಸುವ ಸಂಪ್ರದಾಯವಿದೆ.

ಧರ್ಮದರ್ಶಿ ಭೀಮೇಶ್ವರ ಜೋಶಿ ಅವರ ನೇತೃತ್ವದಲ್ಲಿ ಹೊರನಾಡು ಸಮಾಜಮುಖಿಯಾಗಿಯೂ ಗುರ್ತಿಸಿಕೊಂಡಿದೆ. ಪ್ರತಿ ವರ್ಷ ಬಡ ಕುಟುಂಬದ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಶಿಕ್ಷಣದ ಜವಾಬ್ದಾರಿಯನ್ನು ದೇಗುಲ ಹೊರುತ್ತದೆ. ಶಾಲೆಗಳ ವಿದ್ಯಾರ್ಥಿಗಳಿಗೆ ಅನ್ನದಾನ, ಸಪ್ತಪದಿ ಯೋಜನೆಯಡಿ ಪ್ರತಿವರ್ಷ ಉಚಿತ ವಿವಾಹ ದೇವಿಯ ಸನ್ನಿಧಿಯಲ್ಲಿ ನಡೆಯುತ್ತವೆ. ಧನ್ವಂತರಿ ಯೋಜನೆಯಡಿ ಬಡ ರೋಗಿಗಳಿಗೆ ದುಬಾರಿಯಾದ ಹೃದಯ ಶಸ್ತ್ರ ಚಿಕಿತ್ಸೆ, ಕಿಡ್ನಿ ಮರು ಜೋಡಣೆ ಮುಂತಾದ ಕಾಯಿಲೆಗಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಗುವುದು.

ಕ್ಷೇತ್ರಕ್ಕೆ ಹೋಗುವ ಮಾರ್ಗ

ಬೆಂಗಳೂರಿನಿಂದ ಹೊರನಾಡು 330 ಕಿಮೀ ದೂರ. ಶೃಂಗೇರಿಯಿಂದಾದರೆ 75 ಕಿಮೀ. ಚಿಕ್ಕಮಗಳೂರಿನಿಂದ ಬರೋಬ್ಬರಿ 100 ಕಿಮೀ. ರೈಲು ಸಂಪರ್ಕವಿಲ್ಲ . ಬಸ್ಸಲ್ಲೇ ಹಾದಿ ಸವೆಸಬೇಕು.

ಜಾಗೃತ ಸ್ಥಳ ಶ್ರೀಕ್ಷೇತ್ರ ಹೊರನಾಡು ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯವು, ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿನ  ಭದ್ರಾ ...
19/01/2019

ಜಾಗೃತ ಸ್ಥಳ ಶ್ರೀಕ್ಷೇತ್ರ ಹೊರನಾಡು ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯವು, ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿನ ಭದ್ರಾ ನದಿಯ ದಂಡೆಯ ಸುಂದರ ಪರಿಸರದಲ್ಲಿದೆ. ಸುತ್ತಮುತ್ತಲೂ ದಟ್ಟ ಕಾಡುಗಳಿಂದ ಮತ್ತು ಹಚ್ಚ ಹಸರಿನಿಂದ ಸುತ್ತುವರೆದಿದೆ. ಇಲ್ಲಿದ್ದ ಹಳೆಯ ದೇವಾಲಯವನ್ನು ಮರುನಿರ್ಮಿಸಿ ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಎಂದು ಮರುನಾಮಕರಣ ಮಾಡಲಾಗಿದೆ.
ಈ ದೇವಾಲಯದಲ್ಲಿ ದೇವತೆಯಾದ ದೇವಿ ಅನ್ನಪೂರ್ಣೇಶ್ವರಿಯು ಶ್ರೀಚಕ್ರ, ಚಕ್ರ, ಶಂಖ ಮತ್ತು ದೇವಿ ಗಾಯತ್ರಿಯನ್ನು ತನ್ನ ನಾಲ್ಕು ಹಸ್ತಗಳಲ್ಲಿ ಹಿಡಿದಿರುವ ಸುಂದರ ಬಂಗಾರದ ಮೂರ್ತಿಯನ್ನು ಕಾಣಬಹುದು.ಹಲವು ಶತಮಾನಗಳ ಹಿಂದೆ ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿಯ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಈ ದೇವಾಲಯದಲ್ಲಿ ಸ್ಥಾಪಿಸಿದರು ಎಂಬ ಪ್ರತೀತಿ ಇದೆ. ಈ ದೇವಾಲಯದ ಹೆಸರು ಅನ್ನಪೂರ್ಣೇಶ್ವರಿ, ಅಂದರೆ ಎಲ್ಲರ ಹಸಿವನ್ನು ನೀಗಿಸುವವಳು ಎಂದರ್ಥ ಅದೇ ಕಾರಣದಿಂದ ಇಲ್ಲಿಗೆ ಬರುವ ಭಕ್ತರಿಗೆ ದಿನಕ್ಕೆ ಮೂರು ಭಾರಿ ಭೋಜನ ಮತ್ತು ಉಳಿಯಲು ಜಾಗವನ್ನೂ ನೀಡಲಾಗುತ್ತದೆ.

Address

Mudigere
577181

Website

Alerts

Be the first to know and let us send you an email when ಶ್ರೀ ಅನ್ನಪೂರ್ಣೇಶ್ವರಿ ಹೊರನಾಡು posts news and promotions. Your email address will not be used for any other purpose, and you can unsubscribe at any time.

Share

Category