Mahalingeshwara Temple Adyar

Mahalingeshwara Temple Adyar Contact information, map and directions, contact form, opening hours, services, ratings, photos, videos and announcements from Mahalingeshwara Temple Adyar, Religious organisation, Adyar katte Adyar, Mangalore.

10/03/2025

ಅಡ್ಯಾರ್ ಬ್ರಹ್ಮಕಲಶೋತ್ಸವದಲ್ಲಿ ಸ್ವಯಂಸೇವಕರಾಗಿ ದುಡಿದ ಎಲ್ಲಾ ಊರ ಪರವೂರ ಭಕ್ತಾದಿಗಳಿಗೆ ಈ ಹಾಡು ಅರ್ಪಣೆ.

ಎಲ್ಲರೂ ಕೊನೆತನಕ ಈ. ಹಾಡನ್ನು ಭಕ್ತಿಯಿಂದ ಕೇಳಿ

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಾಕಾಳಿ ಸಪರಿವಾರ ಶಕ್ತಿಗಳು ನಮ್ಮ ನಿಮ್ಮಲ್ಲರ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ

ಧನ್ಯೋತ್ಸವ
ಅಡ್ಯಾರ್ ಬ್ರಹ್ಮ ಕಲಶೋತ್ಸವ

pls share to all & watch till the end

16/02/2025

*ಹೊರೆ ಕಾಣಿಕೆ: ನಮ್ಮ ಭಕ್ತಿಯ ಪ್ರತೀಕ*

ಹೊರೆ ಕಾಣಿಕೆ ಎಂದರೆ ಕೇವಲ ಕಾಣಿಕೆ ಅಲ್ಲ, ಅದು ನಮ್ಮ ನಂಬಿಕೆ, ಭಕ್ತಿಯ, ಹಾಗೂ ಗ್ರಾಮ ಸಮುದಾಯದ ಒಗ್ಗೂಡಿಕೆಯ ಪ್ರತೀಕ. ಇದು ನಮ್ಮ ಊರಿನ ಪರಂಪರೆ, ನಮ್ಮ ಪಾಳೆಯದ ಗೌರವ, ಮತ್ತು ನಮ್ಮ ಊರಿನ ಒಡೆಯನಿಗೆ ಸಲ್ಲಿಸುವ ಶ್ರದ್ಧೆಯ ನಿಜವಾದ ರೂಪ.

ಇದು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ನಮ್ಮ ಸಮಾಜದ ಏಕತೆಯ ದೃಢ ಸಂಕೇತ. ನಾವು ಒಂದಾಗಿದ್ದೇವೆ, ನಮ್ಮ ಗ್ರಾಮ ದೇವರ ಕೃಪೆಗೆ ಪಾತ್ರರಾಗುತ್ತಿದ್ದೇವೆ ಎಂಬುದರ ಸಾಂಕೇತಿಕ ಹಬ್ಬ. ಇದು ನಮ್ಮ ಕರ್ತವ್ಯವೂ ಹೌದು, ನಮ್ಮ ಧರ್ಮವೂ ಹೌದು.

ನಮ್ಮ ಹೆತ್ತವರು, ಈ ಪರಂಪರೆಯನ್ನು ನಮಗೆ ಕಟ್ಟಿಕೊಟ್ಟಿದ್ದಾರೆ. ನಾವು ಅದನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಹೊಣೆ. ಹೀಗಾಗಿ, ನಾವು *ಇದೇ ಬರುವ ಮಾರ್ಚ್ 1 ನೇ ತಾರೀಕಿಗೆ ಶ್ರೀ ಅಡ್ಯಾರು ಮಹಾಲಿಂಗೇಶ್ವರ ದೇವರಿಗೆ ಸಲ್ಲಲಿರುವ ಹೊರೆ ಕಾಣಿಕೆಯಲ್ಲಿ* ನಮ್ಮ ಗ್ರಾಮದ ಪ್ರತಿ ಮನೆಯ ಪ್ರತಿ ಜನರು ಹಾಗೂ ಅವರ ಪ್ರತಿ ಮನಸುಗಳು ಒಂದಾಗಿ ಹೊರೆ ಕಾಣಿಕೆ ಸಲ್ಲಿಸಿ, ನಮ್ಮ ಗ್ರಾಮ ದೇವರ ಕೃಪೆಗೆ ಪಾತ್ರರಾಗೋಣ!

ನಮ್ಮೂರಿನ ಮಹಾಲಿಂಗೇಶ್ವರನಿಗೆ ನಡೆಯುವ
ಈ *ಪುನ: ಪ್ರತಿಷ್ಠ ಬ್ರಹ್ಮ ಕಲಶೋತ್ಸವ*
ನಮ್ಮ ಜೀವಮಾನದಲ್ಲಿ ಒಮ್ಮೆ ಮಾತ್ರ ನಮಗೆಲ್ಲರಿಗೆ ಕಾಣಲು ಸಿಗುವ ಸೌಭಾಗ್ಯ .
ಈ ದಿನ ನಮ್ಮ ಜೀವನದಲ್ಲಿ ಹೊಸ ಬೆಳಕನ್ನು ತರಲು ಮತ್ತು ಶ್ರದ್ಧಾ ಭಕ್ತಿಯ ಪರಂಪರೆಯನ್ನು ಉಳಿಸಲು ನಮಗಾಗಿ ಬಂದಿದೆ. ಅದರ ಮಹತ್ವವನ್ನು ಅರಿಯೋಣ

ಇದು ನಮ್ಮ ಊರಿನ ಹಬ್ಬ ಇದು ನಮ್ಮ ಮನೆಯ ಹಾಗೂ ಮನೆತನದ ಗೌರವದ ಪ್ರತಿಕ. ಇದನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು. ಏಕೆಂದರೆ ನಮ್ಮ ಹಿರಿಯರು ಈ ನಂಬಿಕೆಯನ್ನು ಪೋಷಿಸಿದ್ದಾರೆ ಅದನ್ನು ನಮ್ಮ ಮುಂದಿನ ಪೀಳಿಗೆಗೆ ಮುಟ್ಟಿಸುವ ಜವಾಬ್ದಾರಿ ನಮ್ಮೆಲ್ಲರದು.

ನಮ್ಮ ಮನೆಯಿಂದ ದೇವರ ಪಾದಕ್ಕೆ ಸಲ್ಲಿಸುವ ಏನಾದರೂ ಒಂದು ಕಾಣಿಕೆ ನಮ್ಮ ಸಾಂಸ್ಕೃತಿಕ ಋಣ ತೀರಿಸುವ ಜವಾಬ್ದಾರಿ . *ಈ ಕಾಣಿಕೆ ಒಂದು ತೆಂಗಿನಕಾಯಿ* *ಆಗಿರಬಹುದು, ಒಂದು ಸೇರು* *ಅಕ್ಕಿಯಾಗಿರಬಹುದು, ಇಲ್ಲವೇ ಒಂದು ಪುಟ್ಟ* *ದೀಪದ ಬೆಳಕಾಗಿರಬಹುದು*. ಆದರೆ ಅದನ್ನು ನೀಡುವ ನಮ್ಮ ಭಾವನೆ ಶುದ್ಧವಾಗಿರಬೇಕು. ಮನದಲ್ಲಿ ನಂಬಿಕೆಯ ಬೆಳಕಿರಬೇಕು
ನಂಬಿಕೆ ಒಂದು ಶಕ್ತಿ ಅದರಿಂದ ಬದುಕಿನ ಯಾವುದೇ ಆಯಾಮದಲ್ಲಿ ವ್ಯಾಪಿಸಿರುವ ಕತ್ತಲೆಯನ್ನು ಬೆಳಕಾಗಿಸಬಹುದು...

*ಹೊರೆ ಕಾಣಿಕೆ ಎಂದರೆ ನಮಗೆಲ್ಲರಿಗೆ ಅದು ಹೊರೆಯಾಗಬಾರದು ಅದು ನಮ್ಮ*
*ಗ್ರಾಮದ ಒಗ್ಗೂಡಿಕೆಯ*
*ಸಂಕೇತವಾಗಬೇಕು*.
ಹೊರೆ ಕಾಣಿಕೆ. ಇದು ಕೇವಲ ಆಚರಣೆ ಮಾತ್ರವಲ್ಲ, ಇದು ನಮ್ಮ ಧರ್ಮ, ನಮ್ಮ ಕರ್ತವ್ಯ, ನಮ್ಮ ಕುಟುಂಬಕ್ಕೆ ಆಶೀರ್ವಾದದ ಸಿಂಚನ. *ಬ್ರಹ್ಮ ಕಲಶದ ಈ ಸಮಯದಲ್ಲಿ ನಾನು ಉಣ್ಣುವ ಅನ್ನಪ್ರಸಾದದಲ್ಲಿ ನನ್ನದೊಂದು ಅಕ್ಕಿ ಕಾಳಿದೆ ಎಂಬ ಹೆಮ್ಮೆ ನಮಗಿರಬೇಕು*.

ನಾವು ಎಲ್ಲರೂ ಒಂದಾಗೋಣ, ನಮ್ಮ ಊರಿನ ಒಡೆಯನಿಗೆ ಭಕ್ತಿಯಿಂದ ಹೊರೆ ಕಾಣಿಕೆ ಸಲ್ಲಿಸಿ, ನಮ್ಮ ಜೀವನವನ್ನು ಶಾಂತಿ, ಮತ್ತು ಸುಖದಿಂದ ತುಂಬಿಸಿಕೊಳ್ಳೋಣ!

"*ಒಡೆಯನ ಪಾದದಲಿ ಭಕ್ತಿಯ ಕಾಣಿಕೆ ಸಲ್ಲಿಸಿ ಕೃತಜ್ಞರಾಗೋಣ*!

ಒಡೆಯನ ಪಾದಕ್ಕೆ ಭಕ್ತಿಯ ಕಾಣಿಕೆ, ನಮ್ಮ ಹಿತಕ್ಕಾಗಿ ನೀಡೋಣ ಸಹಕಾರ ಮತ್ತು ಸಂಘಟನೆಯಲ್ಲಿ ನಮ್ಮ ಇಡೀ ಸನಾತನ ಧರ್ಮ ನಿಂತಿದೆ ನಾವು ನಮ್ಮ ಧರ್ಮದ ಅಡಿಗಲ್ಲಾಗೋಣ.

"ಹರ ಹರ ಮಹಾದೇವ! ಓಂ ನಮಃ ಶಿವಾಯ!"

*ಓಂ ತತ್ಪುರುಷಾಯ ವಿದ್ಯಮಹೇ* |
*ಮಹಾದೇವಾಯ ಧೀಮಹಿ*
*ತನ್ನೋ ರುದ್ರಃ* *ಪ್ರಚೋದಯಾತ್* ॥

✍️ದಿವಾಕರ್ ಶೆಟ್ಟಿ ಅಡ್ಯಾರ್

*ಅಡ್ಯಾರ್ ಮಹಾಲಿಂಗೇಶ್ವರ ದೇವಾಲಯ* *ಜೀರ್ಣೋದ್ಧಾರ ಸಮಿತಿ*,
ಮತ್ತು
*ಬ್ರಹ್ಮ ಕಲಶ ಸಮಿತಿ*.

10/03/2024
10/03/2024

Address

Adyar Katte Adyar
Mangalore
575001

Telephone

+91 824 244 1210

Website

Alerts

Be the first to know and let us send you an email when Mahalingeshwara Temple Adyar posts news and promotions. Your email address will not be used for any other purpose, and you can unsubscribe at any time.

Share