Kodipaadi Baalike Surathkal Manetana

Kodipaadi Baalike Surathkal Manetana Contact information, map and directions, contact form, opening hours, services, ratings, photos, videos and announcements from Kodipaadi Baalike Surathkal Manetana, Religious Center, Kodipaadi Baalike, Surathkal, Mangalore.

ಸುರತ್ಕಲ್ ಮೂರ್ನಾಡು ಮಾಗಣೆಯ ಬಂಟ ಸಮುದಾಯದ ಪ್ರತಿಷ್ಟಿತ, ಪ್ರಧಾನ ಮನೆತನ "ಕೊಡಿಪಾಡಿ ಬಾಳಿಕೆ ಸುರತ್ಕಲ್" :

"ಅತ್ತಾರ್" ಎಂಬ ಗಡಿಬೂಳ್ಯದ ಬಂಟರ ವಿಶೇಷ ಪಟ್ಟದ ಪುರಾಪು ಇರುವ ಕೊಡಿಪಾಡಿಬಾಳಿಕೆ ಮನೆತನಕ್ಕೆ ಐತಿಹಾಸಿಕ ಐತಿಹ್ಯಗಳು ಇವೆ. ಶ್ರೀ ಧರ್ಮದೈವ "ಕಾಂತೇರಿ ಜುಮಾದಿ,ಬಂಟ" ,ಪಟ್ಟದ ದೈವವಾಗಿ, "ಶ್ರೀಮೈಸಂದಾಯ, ಶ್ರೀಸಾರಾಳ ಜುಮಾದಿ,ಬಂಟ, ಶ್ರೀ ಮರ್ಲ್ ಜುಮಾದಿ,ಬಂಟ,, ದೈವಗಳು", ಕೊಡಿಪಾಡಿಬಾಳಿಕೆ ಮನೆತನದ ಮೂಲದೈವಗಳು. ಈ ಮನೆತನದ ಇನ್ನೊಂದು ವಿಶೇಷತೆಯೆಂದರೆ ಧರ್ಮಚಾವಡಿಯಲ್ಲಿ "ಶ್ರೀ ಉ

ಳ್ಳಾಯ, ಶ್ರೀ ಕೊಡಮಣಿತ್ತಾಯ, ಶ್ರೀ ಬ್ರಹ್ಮಬೈದರ್ಕಳ, ಮಾಯಂದಾಲೆ ಸಾನಿಧ್ಯ," ಹಾಗೂ ಒಂದೇ ಮಣೆಮಂಚದಲ್ಲಿ ಶ್ರೀಕೊಡಮಣಿತ್ತಾಯ ,ಶ್ರೀ ಬ್ರಹ್ಮಬೈದರ್ಕಳ ದೈವಗಳ ಆರಾಧನೆ ಇ ಮನೆತನದ ವೈಶಿಷ್ಟ್ಯ.

ಕೊಡಿಪಾಡಿಬಾಳಿಕೆಯ ಬಂಟ ಗಡಿಪ್ರಧಾನರಾದ ಅತ್ತಾರರು ಎಲ್ಲಾ ದೈವಗಳಿಗೆ, ಪೂನೀರು ಇಡುವ ಸಂಪ್ರದಾಯ ಇಲ್ಲಿ ಇದೆ. ದೈವಗಳ ಜಗತ್ತಿನಲ್ಲಿ ಮಹಾಶಕ್ತಿದೇವತೆಗಳ ಮಹಾಸಂಗಮದಂತೆ ಇದೆ,, ಈ ಮಹಾಮನೆ,, ಕೊಡಿಪಾಡಿಬಾಳಿಕೆ ಸುರತ್ಕಲ್. ಕೊಡಿಪಾಡಿಬಾಳಿಕೆ ಮನೆತನಕ್ಕೆ ಸ್ವಂತ ಗರೋಡಿಯು ಇದೆ, ಕಾಲಾವಧಿ ಮಾಯಿ ತಿಂಗಳಿನಲ್ಲಿ ಶ್ರೀ ಉಳ್ಳಾಯ,, ಶ್ರೀಕೊಡಮಣಿತ್ತಾಯ,, ಶ್ರೀ ಬ್ರಹ್ಮಬೈದರ್ಕಳ ದೈವಗಳಿಗೆ ಧ್ವಜರೋಹಣ ಪೂರ್ವಕ ಬಲಿಮೂರ್ತಿ ಉತ್ಸವ ನಡೆದು ಮೂರುದಿನಗಳ ವಿಜ್ರಂಭಣೆಯ ಜಾತ್ರಮಹೋತ್ಸವ ಕೊಡಿಪಾಡಿಬಾಳಿಕೆಯ ಗರೋಡಿಯಲ್ಲಿನಡೆಯುತ್ತದೆ. ಹಾಗೂ ಶ್ರೀಕೊಡಮಣಿತ್ತಾಯ,,ಶ್ರೀಬ್ರಹ್ಮಬೈದರ್ಕಳ ಪರಿವಾರ ದೈವಗಳಿಗೆ ಕುಕ್ಕಿಕಟ್ಟೆ ಗಡುಪಾಡು ಸ್ಥಳದಲ್ಲಿ ಎರಡು ವರ್ಷಕ್ಕೊಮ್ಮೆ ದೊಂಪದಬಲಿ ನೇಮೋತ್ಸವ ನಡೆಯುತ್ತದೆ.ಇವಿಷ್ಟೆ ಅಲ್ಲದೆ, ಕೊಡಿಪಾಡಿಬಾಳಿಕೆ ಮನೆತನದ ಆಲಡೆಯಲ್ಲಿ ಶ್ರೀಬ್ರಹ್ಮಲಿಂಗೇಶ್ವರ, ನಾಗದೇವರು, ರಕ್ತೇಶ್ವರೀ, ನಂದಿಗೋಣ, ಕ್ಷೇತ್ರಪಾಲ,ಹಾಗೂ ತುಳುನಾಡ ಸಿರಿದೇವತೆಗಳಾದ ಅಬ್ಬಗ-ದಾರಗ, ಕುಮಾರ, ಶಕ್ತಿಗಳೂ ಇವೆ. ಇದು ಕೊಡಿಪಾಡಿಬಾಳಿಕೆ ಮನೆತನದ ಆಲಡೆ ಕ್ಷೇತ್ರವಾಗಿದೆ. ಕೊಡಿಪಾಡಿಬಾಳಿಕೆಗೆ ಸಂಬಂಧಪಟ್ಟ ಶ್ರೀಕೋರ್ದಬ್ಬು, ಸಪರಿವಾರ ದೈವಗಳ ಸಾನಿಧ್ಯವು ಇದೆ.

ಮನೆತನದ ಕುಟುಂಬದ ಅಧಿಕಾರದ ದೈವವಾಗಿ "ಶ್ರೀ ಬೀಯದ ಪಂಜುರ್ಲಿ" ದೈವದ ಸಾನಿಧ್ಯವು ಇದೆ. ಹಾಗೂ ವರ್ತೆ ದೈವಕ್ಕೆ ಆರಾಧನೆ ಸಲ್ಲುತ್ತದೆ, ಮನೆಯ ಹತ್ತಿರದಲ್ಲಿ ಇರುವ ಪವಿತ್ರ ಕೆರೆ ಇನ್ನೊಂದು ವೈಶಿಷ್ಯ,, ಶಿವಲಿಂಗದ ಪಾಣಿಪೀಠದ ಸ್ವರೂಪದಲ್ಲಿ ಕೆರೆಯ ಪ್ರಕ್ರತಿದತ್ತ ರಚನೆಯಿದೆ. ನೆಲ್ಲಿಯ ಮರದ ಹಲಗೆಯನ್ನು ಹಾಸಿ ಮಾಡಿದ ತೀರ್ಥಬಾವಿ ಇನ್ನೊಂದು ವಿಶೇಷ. ಕೊಡಿಪಾಡಿಬಾಳಿಕೆಯ ಗಡಿಪ್ರಧಾನರಲ್ಲಿ, ದಿ| ಶಾಂಭ ಅತ್ತಾರ್, ದಿ| ಚಂದು ಅತ್ತಾರ್, ತುಳುನಾಡಿನ ದೈವಾರಾಧನೆಯ ಕೊಡಿಯಡಿಯಲ್ಲಿ ಭಾರೀ ಪ್ರಸಿಧ್ಧರು, ಪ್ರಸ್ತುತ ಶ್ರೀ ಜಗನ್ನಾಥ ಅತ್ತಾರ್,, ಇವರು ದೈವದ ಗಡಿಪ್ರಧಾನರಾಗಿ ಮನೆತನದ ದೈವಗಳ ಕಟ್ಟುಕಟ್ಟಳೆಯನ್ನು ಮುನ್ನಡೆಸುತ್ತಿದ್ದಾರೆ. ಪಡ್ರೆ ಜುಮಾದಿ ಬಂಟ ದೈವಸ್ಥಾನದಲ್ಲಿ ಬಂಟದೈವಕ್ಕೆ ಮದಿಪು ಹೇಳುವ ಅಧಿಕಾರ ಕೊಡಿಪಾಡಿಬಾಳಿಕೆ ಅತ್ತಾರರಿಗೆ, ಹಾಗಾಗಿ "ಕೊಡಿಪಾಡಿ-ಬಂಟಚಾವಡಿ" ಎಂಬ ಅನ್ವರ್ಥಕ ಹೆಸರೂ ಈ ಮನೆತನಕ್ಕೆ ಇದೆ.

ಸಹಸ್ರಾರು ವರ್ಷಗಳ ಪರಂಪರೆ ಐತಿಹಾಸಿಕ ದಾಖಲೆಗಳ, ದೈವಾರಾಧನ ಜಗತ್ತಿನಲ್ಲಿ ವಿಶಿಷ್ಟ ಐತಿಹ್ಯಗಳ, ಕಣಜವಾಗಿರುವ ಕೊಡಿಪಾಡಿಬಾಳಿಕೆ ಮನೆತನ ಜೀರ್ಣೋದ್ಧಾರದ ಹೊಸ್ತಿಲಲ್ಲಿ ಇದೆ. ಅಂತಹ ಪಾರಂಪಾರಿಕ ಮನೆತನದಲ್ಲಿ ಜನ್ಮತಾಳಿದ್ದು ನನ್ನ ಪೂರ್ವಜನ್ಮದ ಪುಣ್ಯ, ಧರ್ಮದೈವಗಳ ಅನುಗ್ರಹ, ಕೊಡಿಪಾಡಿಬಾಳಿಕೆ ಸುರತ್ಕಲ್ ಮನೆತನದ ಸತ್ಯ, ಧರ್ಮ, ನ್ಯಾಯ, ನೀತಿಯ ತತ್ಪರತೆಗೆ, ಈ ಕೊಡಿಪಾಡಿಬಾಳಿಕೆಯ ಮಣ್ಣಿನಲ್ಲಿ ನೆಲೆ ಆಗಿರುವ ಧರ್ಮದೈವಗಳ ಪ್ರಜ್ವಲತೆಯೆ ಕಾರಣ. ಆದಷ್ಟು ಬೇಗ ನವೀಕರಣಗೊಂಡು ತನ್ನ ಗತಪರಂಪರೆಯನ್ನು ಕಾಪಾಡಿಕೊಂಡು ಭವಿಷ್ಯದಲ್ಲಿಯೂ ಪೂರ್ವ ಸಂಪ್ರದಾಯದಂತೆ ದೈವಕಟ್ಟುಪಾಡುಗಳೂ ,ನಿರ್ವಿಘ್ನವಾಗಿ ನಡೆಯಲಿ, ಕುಟುಂಬ ಸೌಹಾರ್ದತೆಯೂ ಉಳಿಯಲಿ, ಕೊಡಿಪಾಡಿಬಾಳಿಕೆ ಮನೆತನದ ಘನಸ್ತಿಕೆಯು ಮೆರೆಯಲಿ ಎಂಬುದೇ ನನ್ನ ಅಭಿಲಾಷೆ.

05/05/2026

Śrī koḍamaṇittāya śrī brahma baidarkaḷa garōḍi, koḍipāḍi, punar pratiṣṭhā brahmakalaśōtsava.

03/04/2026
https://www.youtube.com/live/wwna6cHBDpU?feature=share
12/03/2023

https://www.youtube.com/live/wwna6cHBDpU?feature=share

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ ವರ್ಷಾವಧಿ ನೇಮೋತ್ಸವ ಕೊಡಪಾಡಿ ಬಾಳಿಕೆ ಸುರತ್ಕಲ್

11/03/2023

Kodipadi Balike Nema 2023 (10/03/23)

18/07/2022
11/10/2021
ಕೊಡಿಪಾಡಿ ಬಾಳಿಕೆ ಸುರತ್ಕಲ್ ಮನೆತನದ ಗಡಿಪ್ರಧಾನರಾದ ಜಗನ್ನಾಥ ಅತ್ತಾರ್ ಅವರು ನಾಳೆಯ Namma Tv ಯ ದೈವದ ಕಲ ಕಾರ್ಯಕ್ರಮದಲ್ಲಿ...spb...
20/06/2021

ಕೊಡಿಪಾಡಿ ಬಾಳಿಕೆ ಸುರತ್ಕಲ್ ಮನೆತನದ ಗಡಿಪ್ರಧಾನರಾದ ಜಗನ್ನಾಥ ಅತ್ತಾರ್ ಅವರು ನಾಳೆಯ Namma Tv ಯ ದೈವದ ಕಲ ಕಾರ್ಯಕ್ರಮದಲ್ಲಿ.
..spb...

ಕೊಡಿಪಾಡಿ ಬಾಳಿಕೆ ಸುರತ್ಕಲ್ ಮನೆತನದ ಶ್ರೀಕೊಡಮಣಿತ್ತಾಯ ಶ್ರೀಬ್ರಹ್ಮ-ಬೈದರ್ಕಳ ಗರೋಡಿ ( ಶ್ರೀಕ್ಷೇತ್ರ ಬ್ರಹ್ಮಸ್ಥಾನ ಗರೋಡಿ ) ಕಾಲಾವಧಿ ಬೈದರ್...
15/03/2021

ಕೊಡಿಪಾಡಿ ಬಾಳಿಕೆ ಸುರತ್ಕಲ್ ಮನೆತನದ ಶ್ರೀಕೊಡಮಣಿತ್ತಾಯ ಶ್ರೀಬ್ರಹ್ಮ-ಬೈದರ್ಕಳ ಗರೋಡಿ ( ಶ್ರೀಕ್ಷೇತ್ರ ಬ್ರಹ್ಮಸ್ಥಾನ ಗರೋಡಿ ) ಕಾಲಾವಧಿ ಬೈದರ್ಕಳ ಹಾಗೂ ಮಾಯಂದಾಲೆ ನೇಮೋತ್ಸವ... #2021

03/03/2021

ಕೊಡಿಪಾಡಿ ಬಾಳಿಕೆ ಸುರತ್ಕಲ್ ಮನೆತನದ ಶ್ರೀಬ್ರಹ್ಮಸ್ಥಾನ ಗರೋಡಿಯ ಇತಿಹಾಸ :

ಸುರತ್ಕಲ್ ಮೂರ್ನಾಡು ಮಾಗಣೆಯ ಬಂಟ ಸಮುದಾಯದ ಪ್ರಸಿಧ್ದ ಮನೆತನಗಳಲ್ಲಿ ಕೊಡಿಪಾಡಿ ಬಾಳಿಕೆ ಮನೆತನವು ಅಗ್ರಪಂಕ್ತಿಯಲ್ಲಿ ಕಾಣಸಿಗುತ್ತದೆ. ಇಂತಹ ಮಹಾಮನೆಯಲ್ಲಿ ತುಳುನಾಡಿನ ಅನೇಕ ಧರ್ಮದೈವಗಳು ನೆಲೆಸಿವೆ. ಮನೆತನದ ಪಟ್ಟದ ದೈವವಾಗಿ ಶ್ರೀಕಾಂತೇರಿ ಧೂಮಾವತಿ - ಬಂಟ.

ದೈವಗಳಿದ್ದರೆ, ಸಪರಿವಾರ ದೈವಗಳಾಗಿ ಶ್ರೀಮೈಸಂದಾಯ, ಶ್ರೀಸಾರಾಳ ಧೂಮಾವತಿ ಬಂಟ, ಶ್ರೀಮರಳು ಧೂಮಾವತಿ-ಬಂಟ ದೈವಗಳು ನೆಲೆಸಿವೆ. ಇದರೊಂದಿಗೆ ಕೊಡಿಪಾಡಿಬಾಳಿಕೆ ಮನೆತನದ ಶ್ರೀಉಳ್ಳಾಯ,
ಶ್ರೀ ಕೊಡಮಣಿತ್ತಾಯ, ಶ್ರೀ ಬ್ರಹ್ಮಬೈದರ್ಕಳ, ಮಾಯಂದಾಲೆ ಗರೋಡಿಯು ಇದೆ. ಗರೋಡಿಯ ಸಮಸ್ತ ಧರ್ಮದೈವಗಳ ಭಂಡಾರ ಕೊಡಿಪಾಡಿ ಬಾಳಿಕೆ ಮನೆತನದಲ್ಲಿ ಇದೆ. ಕಾಲಾವಧಿ ಮಾಯಿ ತಿಂಗಳಿನ ತದಿಗೆಯ ದಿನದಂದು ಕೊಡಿಪಾಡಿಬಾಳಿಕೆಯಿಂದ ಭಂಡಾರ ಹೊರಟು ಮೂರು ದಿನಗಳ ಧ್ವಜಾರೋಹಣ ಪೂರ್ವಕ ವೈಭವದ ಗರೋಡಿ ಜಾತ್ರೆ ನಡೆಯುತ್ತದೆ.

ಕೊಡಿಪಾಡಿ ಬಾಳಿಕೆಯ ಮನೆತನದ ಗಡಿಪ್ರಧಾನರಾದ ಕೀರ್ತಿಶೇಷ ಶ್ರೀಯುತ ತಪ್ಪ ಅತ್ತಾರರ ಕಾಲದಲ್ಲಿ ಗ್ರಾಮದ ಕೂಡುಕಟ್ಟಿನೊಳಗೆ ಬಂದ ಸಣ್ಣ ವೈಮನಸ್ಸಿನಿಂದ ಊರಿನಲ್ಲಿ ಇಲ್ಲದ ದೈವಗಳನ್ನು ನಂಬಿ ಧ್ವಜಾರೋಹಣ ಪೂರ್ವಕ ಉತ್ಸವ ನಡೆಸುತ್ತೇನೆ ಎಂದು ಛಲ ಕಟ್ಟುತ್ತಾರೆ ಆ ಪ್ರಕಾರವಾಗಿ ಮಿಜಾರು ಇರ್ಂದಾಲ ಪಟ್ಟದಲ್ಲಿ ಶ್ರೀಕೊಡಮಣಿತ್ತಾಯ ಶ್ರೀಬ್ರಹ್ಮಬೈದರ್ಕಳ ದೈವಗಳಿಗೆ ಧ್ವಜಾರೋಹಣ ಪೂರ್ವಕ ಉತ್ಸವ ನಡೆಯುವುದನ್ನು ತಿಳಿದುಕೊಳ್ಳುತ್ತಾರೆ.

ಅದರಂತೆ ತುಳುನಾಡಿನ 66 ಗರೋಡಿಗಳಲ್ಲಿ ಮೇಲಾದ ಗರೋಡಿ ಎಂಬ ಹಿರಿಮೆಯ ಮಿಜಾರು ಗರೋಡಿಗೆ ನೇಮ ನೋಡಲು ತೆರಳುತ್ತಾರೆ ಮಿಜಾರು ಗ್ರಾಮದ ದೈವಗಳ ಮಹಿಮೆಯನ್ನು ಕಣ್ಣಾರೆ ಕಂಡು ಕ್ಷೇತ್ರದ ಪವಿತ್ರ ಪಾಣಿಗಳಾದ ಪೆಜತ್ತಾಯರ ಮುಖಾಂತರ ನಿಡ್ಡೋಡಿ ಮಚ್ಚಾರು ಗುತ್ತಿನ ಗರೋಡಿಗೆ ತೆರಳಿ ಅಲ್ಲಿನ ಗಂಧಪ್ರಸಾದ, ಮಣ್ಣನ್ನು ಹಿಡಿದುಕೊಂಡು ಬರುತ್ತಾರೆ.

ಹಾಗೆ ಗಂಧಪ್ರಸಾದ ಮಣ್ಣನ್ನು ಹಿಡಿದುಕೊಂಡು ಹಿಂದಿರುಗುವಾಗ ನಿಡ್ಡೋಡಿ ಮಚ್ಚಾರು ಗುತ್ತಿನ ಗರೋಡಿ ಧರಾಶಾಹಿಯಾಗುತ್ತದೆ. ಅಲ್ಲಿನ ದೈವಸಾನಿಧ್ಯ ಕೊಡಿಪಾಡಿಬಾಳಿಕೆಯ ಶ್ರೀಯುತ ತಪ್ಪ ಅತ್ತಾರರು ಹಾಗೂ ಮಿಜಾರು ಪೆಜತ್ತಾಯರ ಬೆಂಬತ್ತಿ ಕೊಡಿಪಾಡಿಗೆ ಪ್ರವೇಶಿಸುತ್ತದೆ. ಹಾಗೆ ನಿಡ್ಡೋಡಿ ಮಚ್ಚಾರಿನಿಂದ ದಾರಿಕ್ರಮಿಸಿ ನಡೆದು ಬರುವಾಗ ಕೊಡಿಪಾಡಿಯ ಗಡುಪಾಡು ಸ್ಥಳ ಕುಕ್ಕಿಕಟ್ಟೆಯಲ್ಲಿ ಇವರು ಆಯಾಸ ಪರಿಹರಿಸಲು ವೀಳ್ಯ ತಿನ್ನಲು ಕುಳಿತಾಗ ಮಳೆ ಬಂದು ಸ್ವಲ್ಪ ಮಣ್ಣು,,ಗಂಧಪ್ರಸಾದ ಅಲ್ಲಿ ಅರ್ಪಿತವಾಗುತ್ತದೆ. ಮುಂದೆ ಆ ಸ್ಥಳವೇ ದೈವಗಳಿಗೆ ಗಡುಪಾಡು ದೊಂಪದಬಲಿಯ ಜಾಗವೆಂದು ನಿರ್ಣಯವಾಗುತ್ತದೆ ಹಾಗೆ ಅಲ್ಲಿಂದ ಮುಂದುವರೆದ ಶ್ರೀಯುತ ತಪ್ಪ ಅತ್ತಾರರು ಹಾಗೂ ಮಿಜಾರು ಪೆಜತ್ತಾಯರು ದೈವಗಳನ್ನು ಕೊಡಪಾಡಿಬಾಳಿಕೆಯಲ್ಲಿ ಪ್ರತಿಷ್ಟಾಪಿಸಿ ನಂತರ ನಾಗನಡೆಯ ಬ್ರಹ್ಮಸಾರಥ್ಯದ ಸ್ಥಳದಲ್ಲಿ ಗರೋಡಿ ನಿರ್ಮಿಸಿ ಮಾಯಿ ತಿಂಗಳ ತದಿಗೆಯಂದು ದೈವಗಳಿಗೆ ವೈಭವದ ನೇಮೋತ್ಸವ ನೀಡುತ್ತಾರೆ.

ಶ್ರೀಉಳ್ಳಾಯ,ಶ್ರೀಕೊಡಮಣಿತ್ತಾಯ ದೈವಕ್ಕೆ ಬಲಿಮೂರ್ತಿ ಉತ್ಸವ, ಶ್ರೀಬ್ರಹ್ಮಬೈದರ್ಕಳ ದೈವಗಳಿಗೆ ಜೋಡು ಗುರ್ಜಿ ಹಾಕಿಸಿ ನೇಮ, ಆ ಕಾಲದಿಂದ ಈ ಕಾಲದವರೆಗೆ ಪೂರ್ವ
ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ. ಮೂಲ ಮಿಜಾರು ಆ ನಂತರ ನಿಡ್ಡೋಡಿ ಮಚ್ಚಾರಗುತ್ತು
ಆ ನಂತರ ಸತ್ಯದನಡೆ ಕೊಡಿಪಾಡಿಬಾಳಿಕೆ, ಬ್ರಹ್ಮಸ್ಥಾನ ಗರೋಡಿ, ಕುಕ್ಕಿಕಟ್ಟೆ ಗಡುಪಾಡು ಜಾಗವೆಂದು ಕಟ್ಟಳೆ ಮಾಡಿಸಿ ಶ್ರೀಉಳ್ಳಾಯ, ಶ್ರೀಕೊಡಮಣಿತ್ತಾಯ, ಶ್ರೀಬ್ರಹ್ಮಬೈದರ್ಕಳ, ಶ್ರೀಮಾಯಂದಾಲೆ ದೈವಗಳು ಕೊಡಿಪಾಡಿ ಬಾಳಿಕೆ ಕುಟುಂಬಿಕರ ಕುಲದೈವಗಳಾಗಿ ಕಾರಣೀಕ ಮೆರೆಯುತ್ತಿದ್ದಾರೆ.

✍ಅಭಿಲಾಷ್ ಚೌಟ ಕೊಡಿಪಾಡಿಬಾಳಿಕೆ ಸುರತ್ಕಲ್
..spb...

Address

Kodipaadi Baalike, Surathkal
Mangalore

Website

Alerts

Be the first to know and let us send you an email when Kodipaadi Baalike Surathkal Manetana posts news and promotions. Your email address will not be used for any other purpose, and you can unsubscribe at any time.

Share