15/08/2026
ಮಾನ್ಯರೇ,
ನಮ್ಮ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದ ಬ್ರಹ್ಮಕಲಶೋತ್ಸವವು ದಿನಾಂಕ 25-12-2026 ರಂದು ಭಕ್ತಿಭಾವ ಹಾಗೂ ವೈಭವದಿಂದ ಜರುಗಲಿದ್ದು, ಈ ಪುಣ್ಯ ಕಾರ್ಯದ ಅಂಗವಾಗಿ ವಿವಿಧ ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸ್ವಯಂಸೇವಕರ ಸಹಕಾರ ಅತ್ಯಗತ್ಯವಾಗಿದೆ.
ಈ ಪ್ರಯುಕ್ತ 20-12-2026 ರಿಂದ 30-12-2026ರ ವರೆಗೆ ವಿವಿಧ ರೀತಿಯ ಸೇವೆ ಸಲ್ಲಿಸಲು ಆಸಕ್ತಿಯುಳ್ಳ ವೈಯಕ್ತಿಕರು ಹಾಗೂ ಸಂಘ-ಸಂಸ್ಥೆಗಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.
ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ಸಹಕರಿಸಲು ಇಚ್ಛಿಸುವವರು 16-08-2026ರೊಳಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ವಿನಮ್ರವಾಗಿ ಕೋರುತ್ತೇವೆ.
ತಾವೆಲ್ಲರೂ ಈ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಅಮೂಲ್ಯ ಸಹಕಾರವನ್ನು ನೀಡಬೇಕಾಗಿ ಆತ್ಮೀಯವಾಗಿ ವಿನಂತಿಸಿಕೊಳ್ಳುತ್ತೇವೆ.
ಸಂಪರ್ಕಿಸಿ:
ಯಶವಂತ್. ಕೆ.
📞 9591045900