Sri Vanadurga Kshethra Raktheshwari Naga Sannidhi

Sri Vanadurga Kshethra Raktheshwari Naga Sannidhi The place where the temple is situated was having a history of more than 700 years old.

While acquiring the temples land, there were few stones and one trishul which was being worshipped by the vendors of the land. Deities Information:Vanadurga idolRaktheshwari Idol ( granite stone )Adishesha, i.e. 9 headed Naga devatha idol ( granite stone )

Saree Auction held today on the occasion of Sankramana
14/01/2018

Saree Auction held today on the occasion of Sankramana

14/01/2018
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
14/01/2018

ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

18/10/2017

ಆತ್ಮೀಯರೇ ನಮಸ್ತೇ,

ಮಂಗಳವಾರ (17-10-2017)ದಿಂದ ಆರಂಭಿಸಿ ಶನಿವಾರ (20-10-2017)ದವರೆಗೆ *"ದೀಪಾವಳೀ ಹಬ್ಬದ"* ಸಂಭ್ರಮ.

ಹಬ್ಬದ ಹೆಸರೇ ಹೇಳುವಂತೆ ದೀಪಗಳ ಸರಮಾಲೆ. ಹೊರಗಡೆ ದೀಪಗಳನ್ನು ಬೆಳಗಿಸಿ ಸಂಭ್ರಮಿಸುವಂತೆಯೇ ನಮ್ಮೊಳಗೆ ಮೂಲಾಧಾರ ಚಕ್ರಸ್ಥಾನದಿಂದ ಆರಂಭಿಸಿ ಸಹಸ್ರಾರದವರೆಗೆ ನಾನಾ ಹಂತಗಳಲ್ಲಿ ಬೆಳಗುತ್ತಿರುವ ಜ್ಯೋತಿಯ ಮಾಲೆಯೇ ಇದೆ. ಅದರ ಸ್ಮರಣೆಯೇ ಈ ಹಬ್ಬದ ಆಚರಣೆಯ ಮೂಲ ಉದ್ದೇಶ.

ಮಂಗಳವಾರ (17-10-2017) ಸಂಜೆ *"ನೀರುತುಂಬುವ ಹಬ್ಬ"*. ಮನೆಯ ಸ್ನಾನಗೃಹದಲ್ಲಿರುವ ಹಂಡೆ (ಈಗ ಬಾಯ್ಲರ್, ಗೀಸರ್)ಯನ್ನು ಸ್ವಚ್ಛಶುಭ್ರಗೊಳಿಸಿ ರಂಗೋಲಿ ಕೆಮ್ಮಣ್ಣುಗಳಿಂದ ಅಲಂಕರಿಸಿ ಶುದ್ಧವಾದ ನೀರನ್ನು ತುಂಬುವ ಸಂಭ್ರಮ. ಈ ದಿನ ಹಾಗೂ ಮಾರನೇ ದಿನ ಪ್ರತಿಯೊಂದು ನೀರಿನಾಸರೆಯಲ್ಲಿರುವ ನೀರಿನಲ್ಲಿ ಗಂಗೆಯ ಧರ್ಮವಿರುವುದನ್ನು ಗುರುತಿಸಿದ ನಮ್ಮ ಮಹರ್ಷಿಗಳು ಗಂಗಾಸ್ನಾನದ ಫಲವನ್ನು ಪ್ರತಿಯೊಬ್ಬರೂ ಅನುಭವಿಸಿ ಆನಂದಿಸಲಿ ಎಂಬ ಅಪಾರ ಕರುಣೆಯಿಂದ ಈ ಸಂಪ್ರದಾಯವನ್ನು ತಂದಿದ್ದಾರೆ.

ಅಂತೆಯೇ ಎಣ್ಣೆಯಲ್ಲಿ ಸಾಕ್ಷಾನ್ಮಹಾಲಕ್ಷ್ಮೀಯ ಸಾನಿಧ್ಯವಿರುತ್ತದೆ ಆದ್ದರಿಂದ ಬುಧವಾರ (18-10-2017) ಚತುರ್ದಶಿಯಂದು ಬೆಳಿಗ್ಗೆ ಅಭ್ಯಂಗ(ಎಣ್ಣೇನೀರು) ಕಡ್ಡಾಯ. ಇದರಿಂದ ದೈಹಿಕ ದೈವಿಕ ಆಧ್ಯಾತ್ಮಿಕ ಲಾಭಗಳುಂಟು.

ಆಶ್ವಯುಜ ಕೃಷ್ಣ ಚತುರ್ದಶಿ ಬುಧವಾರ (18-10-2017)ವನ್ನು *"ನರಕಚತುರ್ದಶಿ"* ಎಂದು ಹಬ್ಬವನ್ನು ಆಚರಿಸಲಾಗುತ್ತದೆ. ಶ್ರೀಕೃಷ್ಣ ನರಕನೆಂಬ ರಾಕ್ಷಸನನ್ನು ಸಂಹರಿಸಿ ಅವನ ವಶದಲ್ಲಿದ್ದ 16000 ಕನ್ಯೆಯನ್ನು ಬಂಧಮುಕ್ತಗೊಳಿಸಿ ಅವರುಗಳಿಗೆ ಸದ್ಗತಿಯನ್ನು ಕರುಣಿಸಿದ ಶುಭದಿನದ ಸ್ಮರಣೆಯಲ್ಲಿ ಆಚರಿಸುವ ಶುಭಪರ್ವ.

ನಮಗೆ ಎರಡು ಮುಖಗಳುಂಟು. ಜೀವನದಲ್ಲಿ ಹೊರಮುಖವಾಗಿ ಮುನ್ನಡೆಯುವ ಮುಖವೊಂದಾದರೆ ಒಳಮುಖವಾಗಿ, ಹಿಮ್ಮುಖವಾಗಿ ಸಾಗಿ ನಮ್ಮ ಜೀವದ ಮೂಲನೆಲೆಯಾದ ಪರಮಾತ್ಮ ಪರಂಜ್ಯೋತಿಯನ್ನು ಪಡೆಯುವ ಪ್ರಯತ್ನದ ಹಾದಿ.
ಮುಮ್ಮುಖ ನಡೆಯನ್ನು "ಪ್ರತ್ಯಙ್ಮುಖ" ಎಂದು ಕರೆದರೆ ಹಿಮ್ಮುಖ ನಡೆಯನ್ನು "ಪ್ರಾಗ್ಙ್ಮುಖ" ಎನ್ನುತ್ತಾರೆ.
ನರಕನೆಂಬ ರಾಕ್ಷಸ ಇದ್ದಿದ್ದು ಪ್ರಾಗ್ಜೋತಿಷಪುರದಲ್ಲಿ. ಈ ನಮ್ಮ ದೇಹವೇ ಪ್ರಾಗ್ಜೋತಿಷಪುರ. ಈ ನಮ್ಮ ದೇಹದೊಳಗೆ ಚೈತನ್ಯಸ್ವರೂಪಿಯಾಗಿ ಆತ್ಮಜ್ಯೋತಿ ಬೆಳಗುತ್ತಿದೆ. ಆ ಜ್ಯೋತಿಯೇ ನಮ್ಮೆಲ್ಲ ಚಟುವಟಿಕೆಗಳಿಗೆ ಮೂಲಕಾರಣ. ನಮ್ಮಲ್ಲಿರುವ ರಜೋಗುಣ ತಮೋಗುಣಗಳೇ ರಾಕ್ಷಸರು. ಈ ರಾಕ್ಷಸೀ ಗುಣಗಳು ನಮ್ಮೊಳಗಿರುವ ಆತ್ಮದ ಸಂಪರ್ಕಕ್ಕೆ ಬಾರದಂತೆ ನಮ್ಮ ದೇಹೇಂದ್ರಿಯಗಳಲ್ಲಿ ತಡೆಯೊಡ್ಡಿ ಆ ಸೌಖ್ಯದಿಂದ ವಂಚಿತರನ್ನಾಗಿ ಮಾಡುತ್ತವೆ. ನಮ್ಮ ದೇಹೇಂದ್ರಿಯಗಳು ಆತ್ಮಸೌಖ್ಯವನ್ನು ಅನುಭವಿಸುವುದು ಪ್ರಮುಖವಾಗಿ 16000ನಾಡಿಗಳ ಮೂಲಕ. ಆ 16000ನಾಡಿಗಳನ್ನೇ ಕನ್ಯೆಯರೆಂದು ಕಥೆಯಲ್ಲಿ ಹೇಳಿರುವುದು. ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳೆಂಬ ರಾಕ್ಷಸೀ ಗುಣಗಳು ಈ 16000ನಾಡಿಗಳ ಮೇಲೆ ತಮ್ಮ ಪ್ರಭಾವ ಬೀರಿ ನಮ್ಮನ್ನು ಆತ್ಮಸುಖದಿಂದ ದೂರಮಾಡುತ್ತವೆ. ಆ ರಾಕ್ಷಸೀ ಗುಣಗಳನ್ನು ಶ್ರೀಕೃಷ್ಣ ಸಂಹರಿಸಿ 16000ನಾಡೀರೂಪರಾದ ನಾರಿಯರಿಗೆ ಸದ್ಗತಿಯನ್ನು ತೋರುತ್ತಾನೆ ಎಂಬುದೇ ನರಕಾಸುರವಧೆಯ ಹಿಂದಿರುವ ಮರ್ಮ.

ಗುರುವಾರ(19-10-2017) ಅಮಾವಾಸ್ಯೆಯಂದು ಹೊರಗೆ ಕತ್ತಲು ಇರುವುದಾದರೂ ಅಂದು ಪ್ರಕೃತಿಮಾತೆಯಾದ ಶ್ರೀಮಹಾಲಕ್ಷ್ಮೀಯು ತನ್ನ ಪೂರ್ಣಾನುಗ್ರಹವನ್ನು ಹರಿಸಿ ಹರಸುವ ಶುಭದಿನ. ಅಂದು ಈಕೆಯನ್ನು ಪೂಜಿಸಿ ಸಂತುಷ್ಟಗೊಳಿಸುವುದರಿಂದ ಶರೀರಸಂಪತ್ತು, ದೈವೀಕಸಂಪತ್ತು, ಆಧ್ಯಾತ್ಮಿಕ ಸಂಪತ್ತು, ಧನಧಾನ್ಯಸಂಪತ್ತು ಸುಖ ಶಾಂತಿ ನೆಮ್ಮದಿಯ ಸಂಪತ್ತನ್ನಿತ್ತು ಹರಸುವ ಸುದಿನ.

ಮಾರನೆಯ ದಿನ ಶುಕ್ರವಾರ (19-10-2017) *"ಬಲಿಪಾಡ್ಯಮಿ"*. ನಮ್ಮ ದೇಹ ಸುಸ್ಥಿತಿಯಲ್ಲಿ ಕೆಲಸ ಮಾಡಲು ಮೂರು ಶಕ್ತಿಗಳು ಅತ್ಯವಶ್ಯ. ಅದೇ ವಾತ ಪಿತ್ತ ಹಾಗೂ ಕಫ. ಈ ಮೂರೂ ಸುಸ್ಥಿತಿಯಲ್ಲಿದ್ದಾಗಲೇ ದೇಹ ಸುಸ್ಥಿತಿಯಲ್ಲಿರುವುದು. ಈ ವಾತ ಪಿತ್ತ ಕಫಗಳಿಗೆ ದೇಹದಲ್ಲಿ ಅವುಗಳದ್ದೇ ಆದ ಸ್ಥಾನಗಳುಂಟು. ಕೆಲವೊಮ್ಮೆ ಅವು ಸ್ಥಾನಪಲ್ಲಟಗೊಂಡು ದೇಹದಲ್ಲಿ ಅನಾರೋಗ್ಯವನ್ನುಂಟುಮಾಡಿ ತನ್ಮೂಲಕ ಮಾನಸಿಕ ಆಧ್ಯಾತ್ಮಿಕ ತಾಪಗಳಿಗೂ ಕಾರಣವಾಗುವುದುಂಟು. ಹಾಗೆ ವ್ಯತ್ಯಾಸಗೊಂಡ ಗುಣಗಳನ್ನು ಮತ್ತೆ ಮರಳಿ ಸುಸ್ಥಿತಿಗೆ ತರುವುದೇ ಬಲೀಂದ್ರನನ್ನು ಶ್ರೀವಿಷ್ಣುವು ವಾಮನಾವತಾರದಲ್ಲಿ ಪಾತಾಳಲೋಕಕ್ಕೆ ಮೆಟ್ಟಿದ ಕಥೆಯ ಹಿಂದೆ ಇರುವ ಮಾರ್ಮಿಕತೆ.

ಶುಕ್ರವಾರ (20-10-2017) ಬಿದಿಗೆಯಂದು ಧರ್ಮದೇವತೆಯಾದ ಸಾಕ್ಷಾತ್ ಯಮಧರ್ಮರಾಯ ತನ್ಮ ಸೋದರೀಯಾದ ಯಮುನಾದೇವಿಯ ಮನೆಗೆ ಬಂದು ಆಕೆಯನ್ನು ಸಂತೋಷಗೊಳಿಸಿ ಅನುಗ್ರಹಿಸಿ ಅವಳಿಂದ ಸತ್ಕೃತನಾದ ಶುಭದಿನ. ಇದನ್ನು *"ಯಮದ್ವಿತೀಯಾ"* ಅಥವಾ *"ಸೋದರಬಿದಿಗೆ"* ಎಂದು ಕರೆಯುತ್ತಾರೆ. ಇಂದು ಸೋದರರು ತಮ್ಮ ಸೋದರಿಯರ ಮನೆಗೆ ತೆರಳಿ ಅವರಿಗೆ ಶುಭವನ್ನು ಕೋರಿ ಅವರಿಂದ ಸತ್ಕೃತರಾಗಿ ಆನಂದಿಸಿ ಸಂಭ್ರಮಿಸುವ ಶುಭದಿನ.

🌸🌸🌸ನನ್ನೆಲ್ಲ ಆತ್ಮೀಯರಿಗೂ *"ದೀಪಾವಳಿ(ಕೌಮುದೀ) ಮಹೋತ್ಸವದ"* ಹಾರ್ದಿಕ ಶುಭಾಶಯಗಳು🌸🌸🌸

26/09/2017

*।।सर्वेजना: सुखिनो भवन्तु ।।*
*।। ಸರ್ವೇಜನಾ: ಸುಖೀನೋಭವಂತು ।।*

22/09/2017

ನವದುರ್ಗಾ (ದುರ್ಗಾ ಸಪ್ತಶತಿ) : ೧. ಶೈಲಪುತ್ರಿ : ‘ಶೈಲಮ್’ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ.

೨. ಬ್ರಹ್ಮಚಾರಿಣಿ : ‘ಬ್ರಹ್ಮಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ|’ ಅಂದರೆ ಬ್ರಹ್ಮರೂಪವಾಗುವುದು ಯಾರ ಶೀಲವಾಗಿದೆಯೋ ಮತ್ತು ಯಾರ ಆಚಾರಗಳು ಅದರಂತಿವೆಯೋ ಅವಳೇ ಬ್ರಹ್ಮಚಾರಿಣಿ.

೩. ಚಂದ್ರಘಂಟಾ : ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ| ಆಹ್ಲಾದಯತಿ ಇತಿ ಚಂದ್ರಃ|’ ಅಂದರೆ ಆಹ್ಲಾದಕಾರಕ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ. ಆಹ್ಲಾದವೆಂದರೆ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಮೂರೂ ಗುಣಗಳ ಸಮ್ಮಿಲಿತ ಸ್ಥಿತಿ.

೪. ಕೂಷ್ಮಾಂಡಾ : ‘ಕುತ್ಸಿತಃ ಉಷ್ಮಾಃ ಕೂಷ್ಮಾಃ|’ ಕುತ್ಸಿತಃ ಅಂದರೆ ಸಹಿಸಲು ಕಠಿಣ ವಾದುದು. ಉಷ್ಮಾ ಎಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಧ್ವನಿ). ‘ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|’ ಇದರ ಅರ್ಥವು ಹೀಗಿದೆ – ತ್ರಿವಿಧತಾಪಗಳೆಂದರೆ ಉತ್ಪತ್ತಿ (ಜನ್ಮ), ಸ್ಥಿತಿ (ಬೆಳವಣಿಗೆ) ಮತ್ತು ಲಯ (ಮೃತ್ಯು). ‘ಮೃತ್ಯು (ಮೋಕ್ಷ) ಅಂದರೆ ಅನಿಶ್ಚಿತ ಕಾಲಾವಧಿಯ ವರೆಗೆ ವಿಶಿಷ್ಟ ಪದ್ಧತಿಯಿಂದ ನಾಶವಾಗುವುದು’. ‘ಸಂಸಾರ’ವೆಂದರೆ ‘ಪುನಃಪುನಃ’ ಮತ್ತು ‘ಅಂಡಃ’ ಅಂದರೆ ‘ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ.’ ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧತಾಪಗಳ ಪುನರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಆವಶ್ಯಕತೆಯಿದೆಯೋ ಅವಳೇ ಕೂಷ್ಮಾಂಡಾ.

೫. ಸ್ಕಂದಮಾತಾ : ‘ಭಗಃ’ ಎಂದರೆ ತೇಜಸ್ಸು. ‘ಭಗವತಿ’ ಎಂದರೆ ‘ವಿಶಿಷ್ಟ ಯೋಗ್ಯತೆ ಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾದಂತಹ ತೇಜಸ್ಸು’. ಬ್ರಹ್ಮದೇವ ಮತ್ತು ಭಗವತಿ ದೇವಿಯ ಸಮ್ಮಿಲಿತ ಅವಸ್ಥೆಯಿಂದ ಸನತ್ಕುಮಾರ ಅಥವಾ ಸ್ಕಂದ ಎಂಬ ಹೆಸರಿನ ವಿಶಿಷ್ಟ ರಚನೆಯ ಕಿರಣ ಸಮೂಹವು ಉತ್ಪನ್ನವಾಯಿತು. ಭೂಲೋಕದಿಂದ ಸತ್ಯಲೋಕದ ವರೆಗಿನ ಲೋಕಗಳನ್ನು ‘ಸ್ಕಂದರೇಷೆ’ ಎನ್ನುತ್ತಾರೆ. ಭೂಲೋಕದಿಂದ ಸತ್ಯಲೋಕದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದಮಾತೆ ಎನ್ನುತ್ತಾರೆ.

೬. ಕಾತ್ಯಾಯನಿ : ‘ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|’ (ಕಾತ್ಯಾಯನನ ಮಗಳು ಕಾತ್ಯಾಯನಿ) ‘ಅಯನ’ ಎಂದರೆ ‘ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ’. ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಒಮ್ಮೆ ಕಾತ್ಯಾಯನರ ಅಯನಗಳಲ್ಲಿನ ದೇವತೆಗಳ ಮೇಲೆ (ತೇಜಸ್ಸಿನ ಮೇಲೆ) ಅವರದ್ದೇ ಅಯನದಲ್ಲಿನ ಅಯೋಗ್ಯ ಸ್ಪಂದನಲಹರಿಗಳ ಒಂದು ಶಕ್ತಿಯುತ ಸಮೂಹವು ಆಕ್ರಮಣ ಮಾಡಿತು. ಘರ್ಷಣೆಯಿಂದ ಬಹುದೊಡ್ಡ ಉತ್ಪಾತವಾಗುವ ಸಮಯ ಬಂದಿತು. ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು. ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು; ಆದುದರಿಂದ ಅವಳು ‘ಕಾತ್ಯಾಯನಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು. ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.

ಜಗತ್ಪ್ರಸಿದ್ಧ ಅಮೇರಿಕನ್ ಶಾಸ್ತ್ರಜ್ಞರಾದ ಡಾ.ಕಾರ್ಲ್ ಸೇಗನ್ ಹೇಳುತ್ತಾರೆ, ‘ಓರ್ವ ಹೆಸರಾಂತ ರಷ್ಯಾದ ವೈಜ್ಞಾನಿಕರು ಮಾಡಿರುವ ಸಂಶೋಧನೆಯಲ್ಲಿ ಕಂಡು ಬಂದಿರುವುದೇ ನೆಂದರೆ ಕೆಲವು ಸ್ಪಂದನಗಳು ಅವಕಾಶದಲ್ಲಿ (ಸ್ಪೇಸ್‌ನಲ್ಲಿ) ಅಘನೀಕರಣಗೊಂಡು (ಡೀಮೆಟೀರಿಯಲೈಜೇಶನ್ ಆಗಿ) ಪುನಃ ಯಾವಾಗ ಬೇಕಾದರೂ ಅವುಗಳ ಘನೀಕರಣ (ಮೆಟೀರಿಯಲೈಜೇಶನ್) ಆಗುತ್ತದೆ; ಆದರೆ ಈ ಪ್ರಕ್ರಿಯೆಯು ಯಾವ ವಿಧದಿಂದ ಆಗುತ್ತದೆ ಎಂಬುದನ್ನು ಈಗಲೂ ಖಚಿತವಾಗಿ ಹೇಳಲು ಆಗುವುದಿಲ್ಲ.’

೭. ಕಾಳರಾತ್ರಿ : ಹಲವಾರು ಅಯೋಗ್ಯ ಸ್ಪಂದನಲಹರಿಗಳು ಒಟ್ಟು ಸೇರಿ ಸಿದ್ಧವಾಗುವ ಶಕ್ತಿಯೆಂದರೆ ‘ಕಾಲ’. ವ್ಯಕ್ತಿಯ (ಅಥವಾ ಪ್ರಾಣಿಗಳ) ಅಯೋಗ್ಯ ಸ್ಪಂದನಲಹರಿಗಳು ಆ ವ್ಯಕ್ತಿಯಲ್ಲಿ ಭಯವನ್ನುಂಟು ಮಾಡುತ್ತವೆ. ಆ ಸ್ಪಂದನಲಹರಿಗಳಲ್ಲಿ ವಿಶಿಷ್ಟ ಕ್ಷಮತೆ ಉಂಟಾಯಿತೆಂದರೆ ವಾತಾವರಣದಲ್ಲಿನ ಇದೇ ಜಾತಿಯ ಇತರ ಸ್ಪಂದನಗಳನ್ನು ವ್ಯಕ್ತಿಯ (ಅಥವಾ ಆ ಪ್ರಾಣಿಯ) ಶರೀರದೆಡೆ ಆಕರ್ಷಿಸುತ್ತವೆ. ಈ ರೀತಿ ಅಯೋಗ್ಯ ಸ್ಪಂದನಲಹರಿಗಳ ಶಕ್ತಿಯು ಹೆಚ್ಚಾಯಿತೆಂದರೆ ಆಗಬಾರದಂತಹ ಘಟನೆಗಳು ಮತ್ತು ಕೃತಿಗಳು ಆ ವ್ಯಕ್ತಿಯಿಂದ ಆಗುತ್ತವೆ. ಅವುಗಳ ಪ್ರತಿಕ್ರಿಯೆಗಳನ್ನು ನಾವು ಆಪತ್ತು ಅಥವಾ ಸಂಕಟ ಎನ್ನುತ್ತೇವೆ. ಇಂತಹ ಆಪತ್ತನ್ನು ಅಥವಾ ಸಂಕಟವನ್ನು ತರುವ ಅಯೋಗ್ಯ ಸ್ಪಂದನಲಹರಿಗಳ ಸಾಮೂಹಿಕ ಶಕ್ತಿಯ, ಅಂದರೆ ಕಾಲದ ರಾತ್ರಿಯೇ (ಅಂದರೆ ವಿನಾಶಿಕಾ ಅರ್ಥಾತ್ ವಿನಾಶ ಮಾಡುವವಳು) ‘ಕಾಳರಾತ್ರಿ’. ‘ವಿನಾಶಿಕಾ’ ಅಂದರೆ ‘ವಿಶೇಷೇಣ ನಾಶಯತಿ ಇತಿ|’ (ಸಂಪೂರ್ಣವಾಗಿ ನಾಶ ಮಾಡುವವಳು). ‘ವಿಶೇಷ’ ಎಂದರೆ ‘ವಿಗತಃ ಶೇಷಃ ಯಸ್ಮಾತ್|’ (ವಿಶಿಷ್ಟ) ಶೇಷವೂ ಇಲ್ಲದಂತೆ ನಾಶ ಮಾಡುವುದು.

೮. ಮಹಾಗೌರಿ : ತಪಸ್ಯೇನೆ ಮಹಾನ್ ‘ಗೌರಃ’, ಅಂದರೆ ‘ತೇಜಸ್ಸ’ನ್ನು ಪ್ರಾಪ್ತಮಾಡಿ ಕೊಂಡವಳೇ ಮಹಾಗೌರಿ’. ಮಂತ್ರಯೋಗಸಮಿಕ್ಷೆಯಲ್ಲಿ ‘ಸಮಾಧಿ’ ಎಂಬ ಪದದ ವ್ಯುತ್ಪತ್ತಿಯನ್ನು ‘ಸಮ್ + ಆ + ಅಧಿ’ ಎಂದು ಹೇಳಲಾಗಿದೆ. ‘ಸಮ್’ ಅಂದರೆ ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, ‘ಆ’ ಅಂದರೆ ‘ವರೆಗೆ’ ಮತ್ತು ‘ಧಿ’ ಅಂದರೆ ‘ಮಾನವನ ಶರೀರದಿಂದ ನಿರಂತರವಾಗಿ ಉತ್ಸರ್ಜಿತಗೊಳ್ಳುವ ಸ್ಪಂದನಲಹರಿಗಳು’. ಧೀ ಎಂಬ ಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮಶಕ್ತಿ ಲಹರಿಗಳ ಸಮ್ಯಕ್ ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು ಸಮಾಧಿ ಎನ್ನುತ್ತಾರೆ. ಈ ರೀತಿ ಪುನಃ ಪುನಃ ಸಮಾಧಿಯನ್ನು ಸಾಧಿಸುವುದಕ್ಕೆ ‘ತಪಸ್ಯಾ’ ಎನ್ನುತ್ತಾರೆ. ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ ‘ಗೌರ’ ಅಥವಾ ‘ತೇಜಸ್ಸು’ ಪ್ರಾಪ್ತವಾಗುತ್ತದೆ. ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಯಾವಳು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ ‘ಮಹಾಗೌರಿ’.

೯. ಸಿದ್ಧಿದಾತ್ರಿ : ಸಾಮಾನ್ಯ ಸ್ಪಂದನಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳಲ್ಲಿ ಶಾಶ್ವತವಾಗಿ ಸೇರಿಸುವುದಕ್ಕೆ ‘ಮೋಕ್ಷ ಅಥವಾ ಸಿದ್ಧಿ’ ಎನ್ನುತ್ತಾರೆ. ಸಿದ್ಧಿಯನ್ನು ನೀಡುವವಳು ಸಿದ್ಧಿದಾತ್ರಿ.’

17/09/2017

ನವರಾತ್ರಿ ಆಚರಣೆಯ ಆಧ್ಯಾತ್ಮಿಕ ಮಹತ್ವ, ಆಚರಣೆಯ ಪದ್ಧತಿ ಹಾಗೂ ಲಾಭಗಳು

ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀ ದೇವಿಯ ಉತ್ಸವ ಎಂದರೆ ನವರಾತ್ರಿ, ನವರಾತ್ರಿಯಲ್ಲಿ ಶ್ರೀ ದೇವಿಯ ಉಪಾಸನೆಯನ್ನು ಭಕ್ತಿ ಶ್ರದ್ಧೆಯಿಟ್ಟು ಮಾಡುವುದರಿಂದ ದೇವಿತತ್ತ್ವದ ಲಾಭವಾಗುತ್ತದೆ.
‘ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ. ಶರದ ಋತುವಿನಲ್ಲಿನ ಪೂಜೆಗೆ ಅಕಾಲ ಪೂಜೆ ಮತ್ತು ವಾಸಂತಿಕ ಪೂಜೆಗೆ ಸಕಾಲ ಪೂಜೆಯೆಂದು ಹೇಳುತ್ತಾರೆ. ಶರದ ಋತುವಿನಲ್ಲಿ ‘ದೇವರಾತ್ರಿ’ಗಳಿರುತ್ತವೆ; ಆದುದರಿಂದ ಈ ಕಾಲದಲ್ಲಿನ ಪೂಜೆಗೆ ಅಕಾಲ ಪೂಜೆಯೆಂದು ಹೇಳುತ್ತಾರೆ. ತಾಂತ್ರಿಕ ಸಾಧಕರ ದೃಷ್ಟಿಯಲ್ಲಿ ಈ ‘ರಾತ್ರಿ’ಗಳು ಮಹತ್ವಪೂರ್ಣವಾಗಿರುತ್ತವೆ. ಹೀಗೆ ಬಹಳಷ್ಟು ರೀತಿಯ ರಾತ್ರಿಗಳಿರುತ್ತವೆ, ಉದಾ. ಕಾಲರಾತ್ರಿ, ಶಿವರಾತ್ರಿ, ಮೋಹರಾತ್ರಿ, ವೀರರಾತ್ರಿ, ದಿವ್ಯರಾತ್ರಿ, ದೇವರಾತ್ರಿ ಇತ್ಯಾದಿ. ಇವುಗಳಲ್ಲಿ ಭಗವತಿಯನ್ನು ಜಾಗೃತಗೊಳಿಸಬೇಕಾಗುತ್ತದೆ; ಆದರೆ ವಾಸಂತಿಕ ಪೂಜೆಯಲ್ಲಿ ಜಾಗೃತಗೊಳಿಸುವ ಆವಶ್ಯಕತೆಯಿರುವುದಿಲ್ಲ.’
ಒಂದು ಅಭಿಮತಕ್ಕನುಸಾರ ನವರಾತ್ರಿಯಲ್ಲಿನ ಮೊದಲ ಮೂರು ದಿನಗಳಂದು ತಮೋಗುಣವನ್ನು ಕಡಿಮೆ ಮಾಡಲು ತಮೋಗುಣಿ ಮಹಾಕಾಳಿಯ, ನಂತರದ ಮೂರು ದಿನಗಳಂದು ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮೀಯ ಮತ್ತು ಕೊನೆಯ ಮೂರು ದಿನಗಳಂದು ಸಾಧನೆಯನ್ನು ತೀವ್ರವಾಗಿ ಮಾಡಲು ಸತ್ತ್ವಗುಣಿ ಮಹಾಸರಸ್ವತಿಯ ಪೂಜೆಯನ್ನು ಮಾಡುತ್ತಾರೆ.

ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರವು ಏನು ಹೇಳುತ್ತದೆ ? :
‘ರಾತ್ರಿ’ ಎಂದರೆ ಆಗುತ್ತಿರುವ ಬದಲಾವಣೆ. ದೇವಿಯ ಒಂದು ಹೆಸರು ‘ಕಾಲರಾತ್ರಿ’ ಎಂದಾಗಿದೆ. ‘ಕಾಲರಾತ್ರಿ’ ಎಂದರೆ ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು. ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ ಬದಲಾವಣೆಗಳು ಆಗುತ್ತಿರುತ್ತವೆ, ಅಂದರೆ ರಾತ್ರಿ ಮತ್ತು ಹಗಲು ಆಗುತ್ತವೆ. ಇಂತಹ ಬದಲಾವಣೆಗಳನ್ನು ಸಹಿಸುವ ಶಕ್ತಿಯು ಶರೀರದಲ್ಲಿರಬೇಕೆಂದು ವ್ರತ-ವೈಕಲ್ಯಗಳನ್ನು ಮಾಡುತ್ತಾರೆ.

ನವರಾತ್ರಿಯ ಇತಿಹಾಸ :
ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು.

ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.

ನವರಾತ್ರಿಯ ಆಚರಣೆಯ ಮಹತ್ವ:
ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಇದು ಆ ದೇವಿಯ ವ್ರತವಾಗಿದೆ.
ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ|’ ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

ನವರಾತ್ರಿ ವ್ರತವನ್ನು ಆಚರಿಸುವ ಪದ್ಧತಿ :
‘ಅಖಂಡ ದೀಪಪ್ರಜ್ವಲನೆ ಅಂದರೆ ನವರಾತ್ರಿಯ ೯ ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತ ಶತಿಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ.

ನವದುರ್ಗೆಯರು:
ಮಾರ್ಕಂಡೇಯ ಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಭಗವಾನ ಹಿರಣ್ಯಗರ್ಭ ಮುನಿಗಳು ಮಂತ್ರಯೋಗ ಸಮೀಕ್ಷೆಯಲ್ಲಿ ಹೇಳಿರುವ ಶ್ರೀ ದುರ್ಗಾಸಪ್ತಶತಿಯಲ್ಲಿನ ದೇವಿಯ ಹೆಸರುಗಳ ಶಾಸ್ತ್ರೀಯ ಅರ್ಥ ಮತ್ತು ಇಂದಿನ ಭೌತಿಕ ವಿಜ್ಞಾನವು ಮಾಡಿರುವ ಪ್ರಗತಿಯ ಬಗ್ಗೆ ಇಲ್ಲಿ ನಾವು ವಿಚಾರ ಮಾಡೋಣ.

೧. ಶೈಲಪುತ್ರಿ : ‘ಶೈಲಮ್’ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ.

೨. ಬ್ರಹ್ಮಚಾರಿಣಿ : ‘ಬ್ರಹ್ಮಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ|’ ಅಂದರೆ ಬ್ರಹ್ಮರೂಪವಾಗುವುದು ಯಾರ ಶೀಲವಾಗಿದೆಯೋ ಮತ್ತು ಯಾರ ಆಚಾರಗಳು ಅದರಂತಿವೆಯೋ ಅವಳೇ ಬ್ರಹ್ಮಚಾರಿಣಿ.

೩. ಚಂದ್ರಘಂಟಾ : ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ| ಆಹ್ಲಾದಯತಿ ಇತಿ ಚಂದ್ರಃ|’ ಅಂದರೆ ಆಹ್ಲಾದಕಾರಕ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ. ಆಹ್ಲಾದವೆಂದರೆ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಮೂರೂ ಗುಣಗಳ ಸಮ್ಮಿಲಿತ ಸ್ಥಿತಿ.

೪. ಕೂಷ್ಮಾಂಡಾ : ‘ಕುತ್ಸಿತಃ ಉಷ್ಮಾಃ ಕೂಷ್ಮಾಃ|’ ಕುತ್ಸಿತಃ ಅಂದರೆ ಸಹಿಸಲು ಕಠಿಣ ವಾದುದು. ಉಷ್ಮಾ ಎಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಧ್ವನಿ). ‘ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|’ ಇದರ ಅರ್ಥವು ಹೀಗಿದೆ ? ತ್ರಿವಿಧತಾಪಗಳೆಂದರೆ ಉತ್ಪತ್ತಿ (ಜನ್ಮ), ಸ್ಥಿತಿ (ಬೆಳವಣಿಗೆ) ಮತ್ತು ಲಯ (ಮೃತ್ಯು). ‘ಮೃತ್ಯು (ಮೋಕ್ಷ) ಅಂದರೆ ಅನಿಶ್ಚಿತ ಕಾಲಾವಧಿಯ ವರೆಗೆ ವಿಶಿಷ್ಟ ಪದ್ಧತಿಯಿಂದ ನಾಶವಾಗುವುದು’. ‘ಸಂಸಾರ’ವೆಂದರೆ ‘ಪುನಃಪುನಃ’ ಮತ್ತು ‘ಅಂಡಃ’ ಅಂದರೆ ‘ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ.’ ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧ ತಾಪಗಳ ಪುನರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಆವಶ್ಯಕತೆಯಿದೆಯೋ ಅವಳೇ ಕೂಷ್ಮಾಂಡಾ.

೫. ಸ್ಕಂದಮಾತಾ : ‘ಭಗಃ’ ಎಂದರೆ ತೇಜಸ್ಸು. ‘ಭಗವತಿ’ ಎಂದರೆ ‘ವಿಶಿಷ್ಟ ಯೋಗ್ಯತೆ ಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾದಂತಹ ತೇಜಸ್ಸು’. ಬ್ರಹ್ಮದೇವ ಮತ್ತು ಭಗವತಿ ದೇವಿಯ ಸಮ್ಮಿಲಿತ ಅವಸ್ಥೆಯಿಂದ ಸನತ್ಕುಮಾರ ಅಥವಾ ಸ್ಕಂದ ಎಂಬ ಹೆಸರಿನ ವಿಶಿಷ್ಟ ರಚನೆಯ ಕಿರಣ ಸಮೂಹವು ಉತ್ಪನ್ನವಾಯಿತು. ಭೂಲೋಕದಿಂದ ಸತ್ಯಲೋಕದ ವರೆಗಿನ ಲೋಕಗಳನ್ನು ‘ಸ್ಕಂದರೇಷೆ’ ಎನ್ನುತ್ತಾರೆ. ಭೂಲೋಕದಿಂದ ಸತ್ಯಲೋಕದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದಮಾತೆ ಎನ್ನುತ್ತಾರೆ.

೬. ಕಾತ್ಯಾಯನಿ : ‘ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|’ (ಕಾತ್ಯಾಯನನ ಮಗಳು ಕಾತ್ಯಾಯನಿ) ‘ಅಯನ’ ಎಂದರೆ ‘ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ’. ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಒಮ್ಮೆ ಕಾತ್ಯಾಯನರ ಅಯನಗಳಲ್ಲಿನ ದೇವತೆಗಳ ಮೇಲೆ (ತೇಜಸ್ಸಿನ ಮೇಲೆ) ಅವರದ್ದೇ ಅಯನದಲ್ಲಿನ ಅಯೋಗ್ಯ ಸ್ಪಂದನಲಹರಿಗಳ ಒಂದು ಶಕ್ತಿಯುತ ಸಮೂಹವು ಆಕ್ರಮಣ ಮಾಡಿತು. ಘರ್ಷಣೆಯಿಂದ ಬಹುದೊಡ್ಡ ಉತ್ಪಾತವಾಗುವ ಸಮಯ ಬಂದಿತು. ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು. ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು; ಆದುದರಿಂದ ಅವಳು ‘ಕಾತ್ಯಾಯನಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು. ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.
ಜಗತ್ಪ್ರಸಿದ್ಧ ಅಮೇರಿಕನ್ ಶಾಸ್ತ್ರಜ್ಞರಾದ ಡಾ.ಕಾರ್ಲ್ ಸೇಗನ್ ಹೇಳುತ್ತಾರೆ, ‘ಓರ್ವ ಹೆಸರಾಂತ ರಷ್ಯಾದ ವೈಜ್ಞಾನಿಕರು ಮಾಡಿರುವ ಸಂಶೋಧನೆಯಲ್ಲಿ ಕಂಡು ಬಂದಿರುವುದೇ ನೆಂದರೆ ಕೆಲವು ಸ್ಪಂದನಗಳು ಅವಕಾಶದಲ್ಲಿ (ಸ್ಪೇಸ್‌ನಲ್ಲಿ) ಅಘನೀಕರಣಗೊಂಡು (ಡೀಮೆಟೀರಿಯಲೈಜೇಶನ್ ಆಗಿ) ಪುನಃ ಯಾವಾಗ ಬೇಕಾದರೂ ಅವುಗಳ ಘನೀಕರಣ (ಮೆಟೀರಿಯಲೈಜೇಶನ್) ಆಗುತ್ತದೆ; ಆದರೆ ಈ ಪ್ರಕ್ರಿಯೆಯು ಯಾವ ವಿಧದಿಂದ ಆಗುತ್ತದೆ ಎಂಬುದನ್ನು ಈಗಲೂ ಖಚಿತವಾಗಿ ಹೇಳಲು ಆಗುವುದಿಲ್ಲ.’

೭. ಕಾಳರಾತ್ರಿ : ಹಲವಾರು ಅಯೋಗ್ಯ ಸ್ಪಂದನಲಹರಿಗಳು ಒಟ್ಟು ಸೇರಿ ಸಿದ್ಧವಾಗುವ ಶಕ್ತಿಯೆಂದರೆ ‘ಕಾಲ’. ವ್ಯಕ್ತಿಯ (ಅಥವಾ ಪ್ರಾಣಿಗಳ) ಅಯೋಗ್ಯ ಸ್ಪಂದನಲಹರಿಗಳು ಆ ವ್ಯಕ್ತಿಯಲ್ಲಿ ಭಯವನ್ನುಂಟು ಮಾಡುತ್ತವೆ. ಆ ಸ್ಪಂದನಲಹರಿಗಳಲ್ಲಿ ವಿಶಿಷ್ಟ ಕ್ಷಮತೆ ಉಂಟಾಯಿತೆಂದರೆ ವಾತಾವರಣದಲ್ಲಿನ ಇದೇ ಜಾತಿಯ ಇತರ ಸ್ಪಂದನಗಳನ್ನು ವ್ಯಕ್ತಿಯ (ಅಥವಾ ಆ ಪ್ರಾಣಿಯ) ಶರೀರದೆಡೆ ಆಕರ್ಷಿಸುತ್ತವೆ. ಈ ರೀತಿ ಅಯೋಗ್ಯ ಸ್ಪಂದನಲಹರಿಗಳ ಶಕ್ತಿಯು ಹೆಚ್ಚಾಯಿತೆಂದರೆ ಆಗಬಾರದಂತಹ ಘಟನೆಗಳು ಮತ್ತು ಕೃತಿಗಳು ಆ ವ್ಯಕ್ತಿಯಿಂದ ಆಗುತ್ತವೆ. ಅವುಗಳ ಪ್ರತಿಕ್ರಿಯೆಗಳನ್ನು ನಾವು ಆಪತ್ತು ಅಥವಾ ಸಂಕಟ ಎನ್ನುತ್ತೇವೆ. ಇಂತಹ ಆಪತ್ತನ್ನು ಅಥವಾ ಸಂಕಟವನ್ನು ತರುವ ಅಯೋಗ್ಯ ಸ್ಪಂದನಲಹರಿಗಳ ಸಾಮೂಹಿಕ ಶಕ್ತಿಯ, ಅಂದರೆ ಕಾಲದ ರಾತ್ರಿಯೇ (ಅಂದರೆ ವಿನಾಶಿಕಾ ಅರ್ಥಾತ್ ವಿನಾಶ ಮಾಡುವವಳು) ‘ಕಾಳರಾತ್ರಿ’. ‘ವಿನಾಶಿಕಾ’ ಅಂದರೆ ‘ವಿಶೇಷೇಣ ನಾಶಯತಿ ಇತಿ|’ (ಸಂಪೂರ್ಣವಾಗಿ ನಾಶ ಮಾಡುವವಳು). ‘ವಿಶೇಷ’ ಎಂದರೆ ‘ವಿಗತಃ ಶೇಷಃ ಯಸ್ಮಾತ್|’ (ವಿಶಿಷ್ಟ) ಶೇಷವೂ ಇಲ್ಲದಂತೆ ನಾಶ ಮಾಡುವುದು.

೮. ಮಹಾಗೌರಿ : ತಪಸ್ಯೇನೆ ಮಹಾನ್ ‘ಗೌರಃ’, ಅಂದರೆ ‘ತೇಜಸ್ಸ’ನ್ನು ಪ್ರಾಪ್ತಮಾಡಿ ಕೊಂಡವಳೇ ಮಹಾಗೌರಿ’. ಮಂತ್ರಯೋಗಸಮಿಕ್ಷೆಯಲ್ಲಿ ‘ಸಮಾಧಿ’ ಎಂಬ ಪದದ ವ್ಯುತ್ಪತ್ತಿಯನ್ನು ‘ಸಮ್ + ಆ + ಅಧಿ’ ಎಂದು ಹೇಳಲಾಗಿದೆ. ‘ಸಮ್’ ಅಂದರೆ ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, ‘ಆ’ ಅಂದರೆ ‘ವರೆಗೆ’ ಮತ್ತು ‘ಧಿ’ ಅಂದರೆ ‘ಮಾನವನ ಶರೀರದಿಂದ ನಿರಂತರವಾಗಿ ಉತ್ಸರ್ಜಿತಗೊಳ್ಳುವ ಸ್ಪಂದನಲಹರಿಗಳು’. ಧೀ ಎಂಬ ಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮಶಕ್ತಿ ಲಹರಿಗಳ ಸಮ್ಯಕ್ ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು ಸಮಾಧಿ ಎನ್ನುತ್ತಾರೆ. ಈ ರೀತಿ ಪುನಃ ಪುನಃ ಸಮಾಧಿಯನ್ನು ಸಾಧಿಸುವುದಕ್ಕೆ ‘ತಪಸ್ಯಾ’ ಎನ್ನುತ್ತಾರೆ. ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ ‘ಗೌರ’ ಅಥವಾ ‘ತೇಜಸ್ಸು’ ಪ್ರಾಪ್ತವಾಗುತ್ತದೆ. ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಯಾವಳು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ ‘ಮಹಾಗೌರಿ’.

೯. ಸಿದ್ಧಿದಾತ್ರಿ : ಸಾಮಾನ್ಯ ಸ್ಪಂದನಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳಲ್ಲಿ ಶಾಶ್ವತವಾಗಿ ಸೇರಿಸುವುದಕ್ಕೆ ‘ಮೋಕ್ಷ ಅಥವಾ ಸಿದ್ಧಿ’ ಎನ್ನುತ್ತಾರೆ. ಸಿದ್ಧಿಯನ್ನು ನೀಡುವವಳು ಸಿದ್ಧಿದಾತ್ರಿ.’

ದಸರಾ ಹಬ್ಬದ ಮಹತ್ವ :
ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಅಸುರೀ ಪಾಶದಿಂದ ಮುಕ್ತರಾಗಲು ಶಕ್ತಿ ಉಪಾಸನೆಯ ಆವಶ್ಯಕತೆಯಿದೆ. ಇದಕ್ಕಾಗಿ ನವರಾತ್ರಿಯ ಒಂಭತ್ತು ದಿನ ಶಕ್ತಿಯ ಉಪಾಸನೆಯನ್ನು ಮಾಡಬೇಕು. ದಶಮಿಯಂದು ವಿಜಯೋತ್ಸವವನ್ನು ಆಚರಿಸಬೇಕು. ಇದನ್ನೇ ದಸರಾ (ದಶಹರಾ)/ವಿಜಯದಶಮಿ ಎನ್ನುತ್ತಾರೆ.

ದಸರಾ ಶಬ್ದದ ಉತ್ಪತ್ತಿ :
ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ

ಆಯುಧಪೂಜೆ (ಶಸ್ತ್ರಪೂಜೆ) ಅಂದರೆ ಏನು?:
ಈ ದಿನ ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.

ರಾಜವಿಧಾನ: ‘ದಸರಾ’ ವಿಜಯದ ಹಬ್ಬವಾಗಿರುವುದರಿಂದ ಈ ದಿನ ರಾಜರಿಗೆ ವಿಶೇಷ ವಿಧಿಯನ್ನು ಹೇಳಲಾಗಿದೆ. ಇದು ವಿಜಯದ, ಪರಾಕ್ರಮದ ಹಬ್ಬವಾಗಿದೆ. ಅರ್ಜುನನು ಅಜ್ಞಾತವಾಸದಲ್ಲಿ ಶಮಿಯ ಉಡಿಯಲ್ಲಿ ಇಟ್ಟ ಶಸ್ತ್ರಗಳನ್ನು ತೆಗೆದು, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಮಾಡಿ ಇದೇ ದಿನ ವಿಜಯವನ್ನು ಸಂಪಾದಿ ಸಿದ್ದನು. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯ ಪಡೆದು ಆತನನ್ನು ವಧಿಸಿದ್ದನು ಎಂದು ನಂಬಲಾಗುತ್ತದೆ. ಈ ಘಟನೆಗಳ ಸಂಕೇತವಾಗಿ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ. ಹಾಗೆ ನೋಡಿದರೆ ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ನಡೆದು ಬಂದಂತಿದೆ. ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧಪಟ್ಟ ಒಂದು ಲೋಕೋತ್ಸವವಾಗಿತ್ತು. ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ರೈತರು ಈ ಉತ್ಸವವನ್ನು ಆಚರಿಸುತ್ತಿದ್ದರು. ಕಲಶ ಸ್ಥಾಪನೆಯ ದಿನ ಕಲಶದ ಕೆಳಗಿನ ಪೀಠದಲ್ಲಿ ಒಂಭತ್ತು ಧಾನ್ಯಗಳನ್ನು ಬಿತ್ತುತ್ತಾರೆ. ದಸರಾದಂದು ಈ ಧಾನ್ಯದ ಮೊಳಕೆಗಳನ್ನು ತೆಗೆದು ದೇವರಿಗೆ ಅರ್ಪಿಸುತ್ತಾರೆ. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. ಈ ಪದ್ಧತಿಯಿಂದ ಕೃಷಿಗೆ ಸಂಬಂಧಪಟ್ಟ ಈ ಹಬ್ಬದ ಸ್ವರೂಪ ಸ್ಪಷ್ಟವಾಗುತ್ತದೆ. ಮುಂದೆ ಈ ಹಬ್ಬಕ್ಕೆ ಧಾರ್ಮಿಕ ಸ್ವರೂಪವನ್ನು ಕೊಡಲಾಯಿತು ಮತ್ತು ಇತಿಹಾಸ ಕಾಲದಲ್ಲಿ ಇದು ರಾಜಕೀಯ ಸ್ವರೂಪದ ಹಬ್ಬವಾಯಿತು.

04/08/2017

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೆ ಸುರ ಪೂಜಿತೇ|
ಶಂಖ-ಚಕ್ರ ಗದಾಹಸ್ತೆ ಮಹಾಲಕ್ಷ್ಮೀ ನಮೋಸ್ತುತೆ||
‌ಆತ್ಮೀಯರೆಲ್ಲರಿಗೂ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು. ಆ ತಾಯಿ ಮಹಾಮಾತೆ ಎಲ್ಲರಿಗೂ ಸುಖ ಶಾಂತಿ ಆಯುರ್-ಆರೋಗ್ಯ ಕೊಟ್ಟು ಕಾಪಾಡಲಿ. ಈ ಬಾರಿ ಈ ಸುಸಂದರ್ಭದಂದು ನಾವೆಲ್ಲರೂ ಸೇರಿ ಭಾರತವನ್ನು ಸದೃಢ ಸುಭೀಕ್ಷ ಸ್ವಚ್ಛ ಸುಂದರ ರಾಷ್ಟ್ರವನ್ನಾಗಿಸಲ ಸಶಕ್ತವನ್ನಾಗಿಸು, ಭಾರತವು ಮತ್ತೆ ವಿಶ್ವಮಾತೆ ಜಗದ್ಗುರುವಾಗಲಿ ಎಂದು ಆ ಭಗವಂತನಲ್ಲಿ ಎಲ್ಲರೂ ಪ್ರಾರ್ಥಿಸೋಣ.

12/11/2016

ಉತ್ಥಾನದ್ವಾದಶಿ
ಕಾರ್ತಿಕಮಾಸದಲ್ಲಿ ಬರುವ ಹಬ್ಬಗಳ್ಲಲ್ಲಿ ಉತ್ಥಾನದ್ವಾದಶಿಗೆ ಒಂದು ವೈಶಿಷ್ಟ್ಯವಿದೆ. ಸಾಂಪ್ರದಾಯಿಕರು ಕಾರ್ತಿಕ ಶುಕ್ಲ ದ್ವಾದಶಿಯಂದು ಈ ಹಬ್ಬವನ್ನು ಆಚರಿಸುತ್ತಾರೆ. ಆ ದಿನ ಭಗವಾನ್ ಮಹಾವಿಷ್ಣುವು ಕ್ಷೀರಸಾಗರದಲ್ಲಿ ಮಲಗಿದ್ದವನು ಎದ್ದು ಬೃಂದಾವನಕ್ಕೆ ದಯಮಾಡಿಸಿದನೆಂದೂ ಭಕ್ತರಿಗೆಲ್ಲ ದರ್ಶನವನ್ನಿತ್ತನೆಂದೂ ಪುರಾಣಗಳಲ್ಲಿ ಬರೆದಿದೆ. ವಿಶೇಷವಾಗಿ ಆ ದಿನ ತುಳಸೀಗಿಡದ ಬುಡದಲ್ಲಿ ನೆಲ್ಲಿಯ ಮರದ ರೆಂಬೆಯನ್ನು ನೆಟ್ಟು ಶ್ರೀಕೃಷ್ಣಭಗವಂತನನ್ನು ಸ್ಥಾಪಿಸಿ ಹಗಲು ತುಲಸೀ-ಧಾತ್ರೀಸಹಿತನಾದ ಭಗವಂತನಿಗೆ ಪೂಜೆಯನ್ನು ಮಾಡುವದು, ರಾತ್ರಿಯಲ್ಲಿ ಪುನಃ ಅರ್ಚನೆಮಾಡಿ ಕ್ಷೀರಾಬ್ಧಿಪೂಜೆಯೆಂಬ ವಿಶೇಷೋತ್ಸವವನ್ನೂ ನಡೆಸುವದು ರೂಢಿಯಲ್ಲಿದೆ.
ಭಗವಂತನಿಗೆ ಎಚ್ಚರವಾಗಲಿ, ನಿದ್ರೆಯಾಗಲಿ ಇಲ್ಲವೆಂದು ಅವಸ್ಥಾನತ್ರಯಗಳನ್ನೂ ಮೀರಿದ ತುರೀಯನೆಂದೂ ಅವಸ್ಥೆಯೆಂದೂ ಉಪನಿಷತ್ತುಗಳಲ್ಲಿ ವರ್ಣಿಸಿರುತ್ತದೆ. ಆದ್ದರಿಂದ ಆಷಾಢ ಶುಕ್ಲ ದ್ವಾದಶಿ (ಶಯನದ್ವಾದಶಿ)ಯಂದು ಮಲಗಿದ್ದ ಭಗವಂತನನ್ನು ಈ ದಿನ ಎಬ್ಬಿಸುವದೆಂಬ ಪುರಾಣಗಳ ಕಲ್ಪನೆಗೆ ನಿಜವಾದ ಅಭಿಪ್ರಾಯವೇನು? ಎಂದು ಈಗ ಆಲೋಚಿಸಬಹುದಾಗಿದೆ. ವೇದಗಳ ಅರ್ಥವನ್ನು ಇತಿಹಾಸಪುರಾಣಗಳಿಂದಲೇ ವಿವರವಾಗಿ ತಿಳಿಯಬೇಕೆಂಬ ನಿಯಮದಂತೆ ಏನೋ ಒಂದು ವಿಶೇಷವನ್ನಿಟ್ಟೇ ಋಷಿಗಳು ಈ ಹಬ್ಬವನ್ನು ಆಚರಿಸಿರಬೇಕು.
ನಮಗೆ ತಿಳಿದಂತೆ ಉಪನಿಷತ್ಪ್ರತಿಪಾದ್ಯನಾದ ಭಗವಂತನಿಗೆ ನಿದ್ರೆಯೆಂದರೆ ಈ ದೇಹೇಂದ್ರಿಯಗಳ ಸಂಘಾತದಲ್ಲಿ ಬೆರೆತು ಯೋಗಮಾಯಾಸಮಾವೃತನಾಗಿರುವದೇ ಆಗಿದೆ. ಆತನನ್ನು ಪ್ರಬೋಧಗೊಳಿಸುವದೆಂದರೆ ಅವನ ತತ್ತ್ವವನ್ನು ಶಾಸ್ತ್ರದಲ್ಲಿಯೂ ಇದ್ದುಕೊಂಡಿರುವ ಆತನನ್ನು ಗುಣತ್ರಯರೂಪವಾದ ತುಲಸಿ-ಮಾಲತೀ-ಧಾತ್ರೀದೇವಿಯರಿಗಿಂತ ವಿಲಕ್ಷಣನನ್ನಾಗಿ ತಿಳಿಯುವದೇ ಪ್ರಬೋಧ ಇದೇ ಉತ್ಥಾನವು ಭಗವಂತನ ಎದ್ದ ಮೇಲೆ ಪ್ರಕೃತಿಯೆಲ್ಲವೂ ಅವನ ಮಹಿಮೆಯಾಗಿ ಕಾಣುವದರಿಂದ ತುಲಸೀಧಾತ್ರೀಸಹಿತನಾದ ಆ ಮಹಮಾನ್ವಿತನಾದ ದೇವನ ಪೂಜೆಯು ಉತ್ಥಾನದ್ವಾದಶಿಯಂದು ಆಚರಣೆಗೆ ಬಂದಿರಬೇಕು.

ಭಗವಂತನು ನಮ್ಮೆಲ್ಲರ ಹೃದಯದಲ್ಲಿಯೇ ಇದ್ದರೂ ನಾವು ಆತನನ್ನು ಕಾಣದೆ ಇರುವೆವು; ಏಕೆಂದರೆ ಭಗವದ್ಬುದ್ಧಿಯು ನಮ್ಮಲ್ಲನೇಕರಲ್ಲಿ ಎಚ್ಚರವಾಗಿರುವದಿಲ್ಲ. ಭಗವಂತನು ಪುರುಷನು, ಎಂದರೆ ಹೃದಯವೆಂಬ ಪುರದಲ್ಲಿ ಶಯನಮಾಡಿರುವವನು, ಎಂದು ಶಾಸ್ತ್ರದಲ್ಲಿ ವರ್ಣಿಸಿರುತ್ತದೆ. ಜನರಿಗೆ ಅನುಗ್ರಹಮಾಡಬೇಕೆಂಬಕಾಂಕ್ಷೆಯಿಂದ ಭಗವಂತನು ನಮ್ಮ ಹೃದಯದಲ್ಲಿಯೇ ಮಲಗಿರುತ್ತಾನೆ. ಮಾನವರಲ್ಲೆಲ್ಲ ಭ್ರಾತೃಪ್ರೇಮ, ಕೀಳುಪ್ರಾಣಿಗಳಲ್ಲಿ ಕೂಡ ಕರುಣಾಯುತವಾದ ಪ್ರೇಮ, ಅಹಿಂಸೆ ಸತ್ಯ - ಮುಂತಾದ ಸಾಧನಗಳಿಂದ ಯಾರ ಅಂತಃಕರಣವು ಪರಿಶುದ್ಧವಾಗಿ ಅನಾದಿನಿದ್ರೆಯಿದೆಚ್ಚತ್ತಂತೆ ಭಗವದ್ಭಾನವನ್ನು ಪಡೆದು ಎಚ್ಚರುವದೋ ಅವರ ಹೃದಯದಲ್ಲಿ ಭಗವಂತನು ಎಚ್ಚತ್ತಂತೆ ಆ ಎಚ್ಚತ್ತ ಭಗವಂತನು ಆ ಭಕ್ತನಿಗೂ ಅವನ ಸುತ್ತು ನಳಯಕ್ಕೂ ಮಂಗಲವನ್ನುಂಟುಮಾಡುತ್ತಾನೆ. "ಭಗವಂತನೆ, ಏಳು! ಎಲ್ಲರಿಗೂ ಮಂಗಲವನ್ನುಂಟುಮಾಡು!" ಎಂಬರ್ಥವುಳ್ಳ ಈ ಶ್ಲೋಕವನ್ನು ಭಾವಪೂರಿವಾಗಿ ಗಾನಮಾಡಿರಿ. ನಿಮ್ಮ ಹೃದಯದಲ್ಲಿ ಉತ್ಥಾನದ್ವಾದಶಿಯಾಗುವದು. "ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ಉತ್ತಿಷ್ಠಕಮಲಾಕಾನ್ತ ತ್ರೈಲೋಕ್ಯಂ ಮಙ್ಗಲಂ ಕುರು."

ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ

1. ಓಂ ಹ್ರೀಂ ತುಲಸೀದೇವ್ಯೈ ನಮಃ
2. ಓಂ ಸಖ್ಯೈ ನಮಃ
3. ಓಂ ಭದ್ರಾಯೈ ನಮಃ
4. ಓಂ ಮನೋಜ್ಞಾನ ಪಲ್ಲವಾಯೈ ನಮಃ
5. ಓಂ ಪುರಂದರ ಸತೀಪೂಜ್ಯಾಯೈ ನಮಃ
6. ಓಂ ಪುಣ್ಯದಾಯೈ ನಮಃ
7. ಓಂ ಪುಣ್ಯರೂಪಿಣ್ಯೈ ನಮಃ
8. ಓಂ ಜ್ಞಾನವಿಜ್ಞಾನಜನನ್ಯೈ ನಮಃ
9. ಓಂ ತತ್ವಜ್ಞಾನ ಸ್ವರೂಪಿಣ್ಯೈ ನಮಃ
10. ಓಂ ಜಾನಕೀ ದುಃಖಶಮನ್ಯೈ ನಮಃ
11. ಓಂ ಜನಾರ್ಧನಪ್ರಿಯಾಯೈ ನಮಃ
12. ಓಂ ಸರ್ವಕಲ್ಮಷ ಸಚಿಹರ್ತ್ಯೈ ನಮಃ
13. ಓಂ ಸರ್ವಕೋಟಿ ಸಮಪ್ರಭಾಯೈ ನಮಃ
14. ಓಂ ಗೌರೀ ಶಾರದಾ ಸಂಸೇವಿತಾಯೈ ನಮಃ
15. ಓಂ ವಂದಾರುಜನಮಂದಾರಾಯೈ ನಮಃ
16. ಓಂ ನಿಲಿಂಪಾಭರಣಾಸಕ್ತಾಯೈ ನಮಃ
17. ಓಂ ಲಕ್ಷ್ಮೀಚಂದ್ರ ಸಹೋದರ್ಯೈ ನಮಃ
18. ಓಂ ಸನಕಾದಿ ಮುನಿಧ್ಯೇಯಾಯೈ ನಮಃ
19. ಓಂ ಕೃಷ್ಣಾನಂದ ಜನೀತ್ಯೈ ನಮಃ
20. ಓಂ ಚಿದಾನಂದ ಸ್ವರೂಪಿಣ್ಯೈ ನಮಃ
21. ಓಂ ನಾರಾಯಣ್ಯೈ ನಮಃ
22. ಓಂ ಸತ್ಯರೂಪಾಯೈ ನಮಃ
23. ಓಂ ಮಾಯಾತೀತಾಯೈ ನಮಃ
24. ಓಂ ಮಹೇಶ್ವರ್ಯೈ ನಮಃ
25. ಓಂ ಶುಭಪ್ರದಾಯೈ ನಮಃ
26. ಓಂ ವದನಚ್ಚವಿನಿರ್ಧೂತರಾಕಾಪೂರ್ಣನಿಶಾಕರಾಯೈ ನಮಃ
27. ಓಂ ರೋಚನಾಪಂಕ ತಿಲಕಲಸನ್ನಿಟಲಭಾಸುರಾಯೈ ನಮಃ
28. ಓಂ ಶುದ್ಧಾಯೈ ನಮಃ
29. ಓಂ ಪಲ್ಲವೋಷ್ಟ್ಯೈ ನಮಃ
30. ಓಂ ಪದ್ಮಮುಖ್ಯೈ ನಮಃ
31. ಓಂ ಪುಲ್ಲಪದ್ಮದಳೇಕ್ಷಣಾಯೈ ನಮಃ
32. ಓಂ ಚಾಂಪೇಯಕಲಿಕಾಕಾರನಾಸಾದಮ್ಡವಿರಾಜಿತಾಯೈ ನಮಃ
33. ಓಂ ಮಂದಸ್ಮಿತಾಯೈ ನಮಃ
34. ಓಂ ಮಂಜುಲಾಂಗ್ಯೈ ನಮಃ
35. ಓಂ ಮಾಧವಪ್ರಿಯ ಭಾವಿನ್ಯೈ ನಮಃ
36. ಓಂ ಮಾಣಿಕ್ಯಕಂಕಣಾರಾಯೈ ನಮಃ
37. ಓಂ ಮನಿಕುಂಡಲ ಮಂಡಿತಾಯೈ ನಮಃ
38. ಓಂ ಇಂದ್ರಸಂಪತ್ಕರ್ಯೈ ನಮಃ
39. ಓಂ ಶಕ್ತ್ಯೈ ನಮಃ
40. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
41. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
42. ಓಂ ಕ್ಷೀರಸಾಗರ ಸಂಭವಾಯೈ ನಮಃ
43. ಓಂ ಶಾಂತಿಕಾಂತಿಗುಣೋಪೇತಾಯೈ ನಮಃ
44. ಓಂ ಬೃಂದಾಮರಗುಣ ಸಂಪತ್ಯೈ ನಮಃ
45. ಓಂ ಪೂತಾತ್ಮನಾಯೈ ನಮಃ
46. ಓಂ ಪೂತನಾದಿ ಸ್ವರೂಪಿಣ್ಯೈ ನಮಃ
47. ಓಂ ಯೋಗಧ್ಯೇಯಾಯೈ ನಮಃ
48. ಓಂ ಯೋಗಾನಂದ ವಿದಾಯೈ ನಮಃ
49. ಓಂ ಚತುರ್ವರ್ಗ ಪ್ರದಾರಾಮಾಯೈ ನಮಃ
50. ಓಂ ತ್ರಿಲೋಕ ಜನನ್ಯೈ ನಮಃ
51. ಓಂ ಗೃಹಮೇಧಿಸಮಾರಾಧ್ಯಾಯೈ ನಮಃ
52. ಓಂ ಸದನಾಂಗಣಪಾವನಾಯೈ ನಮಃ
53. ಓಂ ಮುನೀಂದ್ರ ಹೃದಯವಾಸಾಯೈ ನಮಃ
54. ಓಂ ಮೂಲಪ್ರಕೃತಿ ಸಂಜ್ಞಿಕಾಯೈ ನಮಃ
55. ಓಂ ಬ್ರಹ್ಮರೂಪಿಣ್ಯೈ ನಮಃ
56. ಓಂ ಪರಂಜ್ಯೋತಿಷೇ ನಮಃ
57. ಓಂ ಅವಾಜ್ಞಾನಸಗೋಚರಾಯೈ ನಮಃ
58. ಓಂ ಪಂಚಭೂತಾತ್ಮಿಕಾಯೈ ನಮಃ
59. ಓಂ ಯೋಗಾಚ್ಯುತಾಯೈ ನಮಃ
60. ಓಂ ಯಜ್ಞರೂಪಿಣ್ಯೈ ನಮಃ
61. ಓಂ ಸಂಸಾರದುಃಖಶಮನ್ಯೈ ನಮಃ
62. ಓಂ ಸೃಷ್ಟಿಸ್ಥಿತ್ಯಂತರಕಾರಿಣ್ಯೈ ನಮಃ
63. ಓಂ ಸರ್ವಪ್ರಪಂಚನಿರ್ಮಾತ್ರ್ಯೈ ನಮಃ
64. ಓಂ ವೈಷ್ಣವ್ಯೈ ನಮಃ
65. ಓಂ ಮಧುರಸ್ವರಾಯೈ ನಮಃ
66. ಓಂ ನಿರೀಶ್ವರಾಯೈ ನಮಃ
67. ಓಂ ನಿರ್ಗುಣಾಯೈ ನಮಃ
68. ಓಂ ನಿತ್ಯಾಯೈ ನಮಃ
69. ಓಂ ನಿರಾತಂಕಾಯೈ ನಮಃ
70. ಓಂ ದೀನಜನಪಾಲನತತ್ಪರಾಯೈ ನಮಃ
71. ಓಂ ಕ್ವಣತ್ಮಿಂಕಿಣಿಕಾಜಾಲರತ್ನಕಾಂಚೀಲಸತ್ಕಜ್ಯೈ ನಮಃ
72. ಓಂ ಚಲನ್ಮಂಜೀರಚರಣಾಯೈ ನಮಃ
73. ಓಂ ಚತುರಾವಲಿಸೇವಿತಾಯ್ತೈ ನಮಃ
74. ಓಂ ಅಹೋರಾತ್ರಕಾರಿಣ್ಯೈ ನಮಃ
75. ಓಂ ಯುಕ್ತಾಹಾರಭರಾಕ್ರಾಂತಾಯೈ ನಮಃ
76. ಓಂ ಮುದ್ರಿಕಾರತ್ನಭಾಸುರಾಯೈ ನಮಃ
77. ಓಂ ಸಿದ್ಧಪ್ರದಾಯೈ ನಮಃ
78. ಓಂ ಅಮಲಾಯೈ ನಮಃ
79. ಓಂ ಕಮಲಾಯೈ ನಮಃ
80. ಓಂ ಲೋಕಸುಂದರ್ಯೈ ನಮಃ
81. ಓಂ ಹೇಮಕುಂಭಕುಚಧ್ವಯಾಯೈ ನಮಃ
82. ಓಂ ಲಸಿತಕುಂಭಕುಚದ್ವಯೈ ನಮಃ
83. ಓಂ ಚಂಚಲಾಯೈ ನಮಃ
84. ಓಂ ಲಕ್ಷ್ಮ್ಯೈ ನಮಃ
85. ಓಂ ಶಂಕರ್ಯೈ ನಮಃ
86. ಓಂ ಶಂಕರ್ಯೈ ನಮಃ
87. ಓಂ ಶಿವಶಂಕರ್ಯೈ ನಮಃ
88. ಓಂ ತುಲಸ್ಯೈ ನಮಃ
89. ಕುಂದಲಕುಟ್ಮಿಲರದನಾಯೈ ನಮಃ
90. ಓಂ ಪಕ್ವಬಿಂಬೋಷ್ಟ್ಯೈ ನಮಃ
91. ಓಂ ಶರಶ್ಚಂದ್ರಿಕಾಯೈ ನಮಃ
92. ಓಂ ಚಾಂಪೇಯನಾಸಿಕಾಯೈ ನಮಃ
93. ಓಂ ಕಂಬುಸುಂದರಗಳಾಯೈ ನಮಃ
94. ಓಂ ತಟಿಲ್ಲತಾಂಗ್ಯೈ ನಮಃ
95. ಓಂ ಮತ್ತಬಂಭರಕುಂತಲಾಯೈ ನಮಃ
96. ಓಂ ನಕ್ಷತ್ರನಿಭನಖಾಯೈ ನಮಃ
97. ಓಂ ರಂಭಾನಿಭೋರುಯುಗ್ಮಾಯೈ ನಮಃ
98. ಓಂ ಸೈಕತಶ್ರೋಣ್ಯೈ ನಮಃ
99. ಓಂ ಮಂದಕಂಠೀರವಮಧ್ಯೈ ನಮಃ
100 ಓಂ ಕೀರವಾಣ್ಯೈ ನಮಃ
101. ಓಂ ಶ್ರೀ ಮಹಾತುಲಸ್ಯೈ ನಮಃ

ಇತಿ ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ

29/10/2016

Abhyang Snan on Chaturdashi day, which is popularly known as Narak Chaturdashi, is the most significant one. It is believed that people, who do Abhyang Snan on this day, can avoid going to Narak. Til (i.e. sesame) oil should be used for Ubtan during Abhyang Snan.

Abhyang Snan on Narak Chaturdashi might be one day before or on same day of Lakshmi Puja day on English Calendar. When Chaturdashi Tithi prevails before sunrise and Amavasya Tithi prevails after sunset then Narak Chaturdashi and Lakshmi Puja fall on the same day. Abhyang Snan is always done during moonrise but before sunrise while Chaturdashi Tithi is prevailing.

Our Muhurta window for Abhyang Snan is between moonrise and sunrise while Chaturdashi Tithi prevails. We provide Abhyang Snan Muhurta exactly as it has been prescribed in religious Hindu texts. We consider all exceptions and list the best date and time for Abhyang Snan.

Narak Chaturdashi day is also known as Choti Diwali, Roop Chaturdashi and Roop Chaudas.

Often Narak Chaturdashi is considered same as Kali Chaudas. However both are two different festivals observed on the same Tithi and depending on the start and end timing of Chaturdashi Tithi might fall on two different consecutive days.

01/10/2016

🌺 *ನವರಾತ್ರಿ ವಿಶೇಷ: ಒಂಬತ್ತು ವಿಶಿಷ್ಟ ದಿನಗಳ ಮಹತ್ವ*🌺

(Suresh Halagali)
ನವರಾತ್ರಿ ಹಬ್ಬದ ತಯಾರಿಯಲ್ಲಿ ಜನರು ಹೆಚ್ಚು ನಿರತರಾಗಿದ್ದು ಈ ಹಬ್ಬವು ತನ್ನದೇ ವಿಶೇಷತೆಗಳಿಂದಲೇ ಜನರಲ್ಲಿ ಭಕ್ತಿ ಭಾವವನ್ನು ಹೆಚ್ಚಿಸುತ್ತದೆ. ಒಂಬತ್ತು ದಿನಗಳ ಕಾಲ ನಡೆಯುವ ಹಬ್ಬವು ದೇವಿಯ ಒಂಬತ್ತು ಅವತಾರಗಳ ಅಲಂಕಾರ ಮತ್ತು ಪೂಜೆಯಾಗಿದೆ. ಹತ್ತನೇ ದಿನವೇ ವಿಜಯ ದಶಮಿ ಅಥವಾ ದಸರಾ ಹಬ್ಬವಾಗಿದೆ. ದುರ್ಗಾ ಮಾತೆಯ ಅವತಾರದ ಹಿಂದಿರುವ ಕುತೂಹಲಕಾರಿ ಕಥೆ ಇಂದಿನ ಲೇಖನದಲ್ಲಿ ನವರಾತ್ರಿಗಳಂದು ದೇವಿಗೆ ಅಲಂಕಾರ ಮಾಡುವ ಒಂಬತ್ತು ವಿಧದ ಬಣ್ಣಗಳ ಪರಿಚಯವನ್ನು ನಾವು ನಿಮಗೆ ಮಾಡಿಕೊಡಲಿದ್ದು ಈ ಬಣ್ಣಗಳ ಹಿಂದಿರುವ ವಿಶೇಷತೆಯನ್ನು ನೀವು ಅರಿಯಲಿದ್ದೀರಿ. ನವರಾತ್ರಿಯನ್ನು ಹೆಚ್ಚು ಸ್ಮರಣೆಯಲ್ಲಿರಿಸಿಕೊಳ್ಳಲು ಸಹಾಯಕವಾಗಿರುವ ಈ ಬಣ್ಣಗಳ ಮಹತ್ವವವನ್ನು ಇಲ್ಲಿ ಅರಿತುಕೊಳ್ಳಿ....

*ನವರಾತ್ರಿ ದಿನ 1*

ಅಕ್ಟೋಬರ್ 1 ರಂದು ಶನಿವಾರ ನವರಾತ್ರಿಯ ಪ್ರಥಮ ದಿನ ಆರಂಭವಾಗುತ್ತದೆ. ಈ ದಿನ ಬೂದಿ ಬಣ್ಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಶೈಲಪುತ್ರಿ ದೇವಿಯನ್ನು ಈ ದಿನದಂದು ಪೂಜಿಸಲಾಗುತ್ತದೆ.

*ನವರಾತ್ರಿ ದಿನ 2*

ಅಕ್ಟೋಬರ್ 2 ರಂದು ಆದಿತ್ಯವಾರ, ನವರಾತ್ರಿ ದಿನದ ಬಣ್ಣ ಕಿತ್ತಳೆಯಾಗಿದೆ. ಕಿತ್ತಳೆ ಬಣ್ಣದ ದಿರಿಸನ್ನು ನೀವು ಈ ದಿನ ತೊಟ್ಟುಕೊಳ್ಳಬಹುದಾಗಿದೆ. ಬ್ರಹ್ಮಚಾರಿಣಿಯನ್ನು ಈ ದಿನ ಪೂಜಿಸಲಾಗುತ್ತದೆ.
*ನವರಾತ್ರಿ ದಿನ 3*

ಅಕ್ಟೋಬರ್ 3 ರಂದು ಸೋಮವಾರ ಮೂರನೇ ದಿನ ಬರುತ್ತದೆ. ಈ ದಿನ ಬಿಳಿ ಬಣ್ಣಕ್ಕೆ ಆದ್ಯತೆಯನ್ನು ನೀಡಲಾಗುತ್ತದೆ. ಚಂದ್ರಘಂಟಾ ರೂಪದಲ್ಲಿ ಈ ದಿನ ದೇವಿಯನ್ನು ಪೂಜಿಸುತ್ತಾರೆ. ಬಿಳಿ ಬಣ್ಣದ ದಿರಿಸನ್ನು ಈ ದಿನ ಭಕ್ತರು ಧರಿಸುತ್ತಾರೆ.
*ನವರಾತ್ರಿ ದಿನ 4*

ಅಕ್ಟೋಬರ್ 4 ರಂದು ಮಂಗಳವಾರ ಕೆಂಪು ಬಣ್ಣದ ದಿರಿಸನ್ನು ವಸ್ತ್ರಾಭರಣಗಳನ್ನು ನೀವು ತೊಟ್ಟುಕೊಳ್ಳಬಹುದಾಗಿದೆ. ದುರ್ಗಾ ಮಾತೆ, ಕೂಷ್ಮಾಂಡಾ ರೂಪದಲ್ಲಿ ದೇವಿಯನ್ನು ಈ ದಿನ ಪೂಜಿಸುತ್ತಾರೆ.

*ನವರಾತ್ರಿ ದಿನ 5*

ಈ ದಿನ ನೀಲಿ ಬಣ್ಣಕ್ಕೆ ಆದ್ಯತೆಯನ್ನು ನೀಡಲಾಗುತ್ತದೆ. ಸ್ಕಂದ ಮಾತಾ ರೂಪದಲ್ಲಿ ದೇವಿಗೆ ಈ ದಿನ ಪೂಜೆಯನ್ನು ನಡೆಸಲಾಗುತ್ತದೆ. ಅಕ್ಟೋಬರ್ 5 ರ ಬುಧವಾರ ನೀಲಿ ಬಣ್ಣದ ವಸ್ತ್ರವನ್ನು ಧರಿಸಿ ದೇವಿಯ ಪೂಜೆಯನ್ನು ನೀವು ಮಾಡಬಹುದು.

*ನವರಾತ್ರಿ ದಿನ 6*

ಅಕ್ಟೋಬರ್ 6 ರ ಗುರುವಾರ ಹಳದಿ ಬಣ್ಣಕ್ಕೆ ಆದ್ಯತೆಯನ್ನು ನೀಡುತ್ತಾರೆ. ನವರಾತ್ರಿಯ ಆರನೇ ದಿನ ಇದಾಗಿದೆ. ಈ ಆರನೇ ದಿನ ಕಾತ್ಯಾಯಿನಿ ರೂಪದಲ್ಲಿ ದೇವಿಯನ್ನು ಪೂಜಿಸುತ್ತಾರೆ.

*ನವರಾತ್ರಿ ದಿನ 7*

ನವರಾತ್ರಿಯ ಏಳನೇ ದಿನ, ಸಪ್ತಮಿ ಎಂಬುದಾಗಿ ಈ ದಿನವನ್ನು ಕರೆಯಲಾಗಿದ್ದು, ಹಸಿರು ಬಣ್ಣದ ದಿರಿಸನ್ನು ಭಕ್ತರು ಈ ದಿನ ತೊಡುತ್ತಾರೆ. ಅಕ್ಟೋಬರ್ 7 (ಶುಕ್ರವಾರ) ದೇವಿಯನ್ನು ಕಾಳರಾತ್ರಿ ಅವತಾರದಲ್ಲಿ ಪೂಜಿಸುತ್ತಾರೆ.

*ನವರಾತ್ರಿ ದಿನ 8*

ಅಕ್ಟೋಬರ್ 8 (ಶನಿವಾರ) ನವಿಲು ಬಣ್ಣದ ದಿರಿಸನ್ನು ಧರಿಸಬಹುದಾಗಿದೆ. ಅಷ್ಟಮಿ ಎಂಬುದಾಗಿ ಈ ದಿನವನ್ನು ಕರೆಯುತ್ತಾರೆ. ಮಹಾ ಗೌರಿ ರೂಪದಲ್ಲಿ ಈ ದಿನ ದೇವಿಯನ್ನು ಪೂಜಿಸುತ್ತಾರೆ.

*ನವರಾತ್ರಿ ದಿನ 9*

ನವರಾತ್ರಿಯ ಒಂಬತ್ತನೇ ದಿನ ನೇರಳೆ ಬಣ್ಣಕ್ಕೆ ಆದ್ಯತೆಯನ್ನು ನೀಡುತ್ತಾರೆ. ಆದಿತ್ಯವಾರ ಈ ದಿನ ಬರುತ್ತಿದ್ದು, ಸಿದ್ಧಿದಾತ್ರಿ ರೂಪದಲ್ಲಿ ದೇವಿಯನ್ನು ಪೂಜಿಸುತ್ತಾರೆ.

Address

Anegundi, Bejai
Mangalore
575004

Website

Alerts

Be the first to know and let us send you an email when Sri Vanadurga Kshethra Raktheshwari Naga Sannidhi posts news and promotions. Your email address will not be used for any other purpose, and you can unsubscribe at any time.

Share