05/04/2024
ಶ್ರೀ ಮಲ್ಲೇಶ್ವರ ದೇವಾಲಯ ಮಾಚಲಘಟ್ಟ ಇತಿಹಾಸ....
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು, ಹೊನಕೆರೆ ಹೋಬಳಿ ಇದರ ವ್ಯಾಪ್ತಿಗೆ ಬರುವ ಮಾಚಲಘಟ್ಟ ಗ್ರಾಮದಲ್ಲಿರುವ ಮಲ್ಲೇಶ್ವರ ಸ್ವಾಮಿ ದೇವಾಲಯ ನಾಗಮಂಗಲದಿಂದ ಮೈಸೂರು ಕಡೆಗೆ ಹೋಗುವ ರಸ್ತೆಯಲ್ಲಿ ಚಿನ್ಯಾ ದಿಂದ ಮುಂದೆ ಎರಡು ಕಿಲೋ ಮೀಟರ್ ದೂರದಲ್ಲಿ ಮಾಚಲಘಟ್ಟ ಗೇಟ್ ಇಂದ ಸುಮಾರು ಒಂದುವರೆ ಕಿಲೋಮೀಟರ್ ದೂರದಲ್ಲಿ ದೇವಾಲಯವಿದೆ ಲೋಕ ಪಾವನಿ ನದಿಯ ಪಕ್ಕದ ಪ್ರಮುಖ ಊರುಗಳಲ್ಲಿ ಈ ಮಾಚಲ ಘಟ್ಟ ಒಂದು ಇಲ್ಲಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಹಳೆಯ ಊರಿತೆಂದು ಹೇಳಲಾಗಿದೆ ಮಾಚಲ ಘಟ್ಟ ಇಂದೇ ಬಿಜ್ಜಳೇಶ್ವರಪುರ ಎಂದು ಹೆಸರಿತ್ ಎಂದು ಶಾಸನಗಳಿಂದ ತಿಳಿದು ಬಂದಿದೆ ಇದು ಐತಿಹಾಸಿಕ ಸ್ಥಳ ಎಂಬುದಕ್ಕೆ ಅಲ್ಲಿ ದೊರೆತಿರುವ ಅವಶೇಷಗಳು ಸಾಕ್ಷಿಯಾಗಿದೆ ಹಳೆ ಜಾಗದಲ್ಲಿ ಮಲ್ಲೇಶ್ವರ ದೇವಾಲಯವಿದ್ದು ಸುತ್ತಲೂ ನೀರಾವರಿ ಪ್ರದೇಶವಾಗಿದೆ ದೇವಾಲಯ ಗರ್ಭಗುಡಿಯಲ್ಲಿ ಶಿವಲಿಂಗವಿದೆ ಇಲ್ಲಿ ಶಿವರಾತ್ರಿ ದಿನವೆಂದು ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ ಹಲವಾರು ಜಿಲ್ಲೆಗಳಿಂದ ಕರ್ನಾಟಕದ ಮೂಲೆ ಮೂಲೆಯಿಂದ ಭಕ್ತಾದಿಗಳು ಆಗಮಿಸುತ್ತಾರೆ ಅನ್ನ ಸಂತರ್ಪಣೆಯೂ ಕೂಡ ನಡೆಯುತ್ತದೆ ಈ ಮಲ್ಲೇಶ್ವರ ದೇವಾಲಯ 13ನೇ ಶತಮಾನದ ಹೊಯ್ಸಳರ ಕಾಲಕ್ಕೆ ಸೇರಿದ್ದು ಈ ದೇವಾಲಯ ಶಿಲ್ಪಕಲೆಯ ದೃಷ್ಟಿಯಿಂದ ದಕ್ಷಿಣ ಕರ್ನಾಟಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ದೇವಾಲಯ ಚಿಕ್ಕದಾದರೂ ಕಲಾ ದೃಷ್ಟಿಯಿಂದ ಉನ್ನತ ಮಟ್ಟ ಆಗಿದೆ ಬಳಪದ ಕಲ್ಲಿಂದ ಕಟ್ಟಲಾದ ಈ ದೇಗುಲ ಮುಖ ಮಂಟಪ ನವರಂಗ ಸುಖನಾಸಿಮಂಟಪ ಹಾಗೂ ಗರ್ಭಗುಡಿಯನ್ನು ಹೊಂದಿದೆ ಗರ್ಭಗುಡಿಯ ಬಾಗಿಲಲ್ಲಿ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯ ಶಿಲ್ಪಿವಿದೆ ಹಾಗೂ ಪಾರ್ವತಿ ಪರಮೇಶ್ವರ ಕೆತ್ತನೆ ಇದೆ ಬುಡದಲ್ಲಿ ಎರಡು ಭಾಗದಲ್ಲಿ ದ್ವಾರಪಾಲಕರ ಶಿಲ್ಪಿಗಳಿವೆ ನವರಂಗವನ್ನು ತುಂಬಾ ಸೊಗಸಾಗಿ ಕೆತ್ತಲಾಗಿದೆ ದೇವಾಲಯದೊಳಗೆ ನಾಲ್ಕು ಕಂಬಗಳ ಸುಂದರ ಕೆತ್ತನೆ ಇದೆ ನವರಂಗ ದೇವಕೋಷ್ಟಕದಲ್ಲಿ, ಗಣಪತಿ ಸತ್ತ ಮಾತ್ರಕೇರೂ ಹಾಗೂ ನಾಗಶಿಲ್ಪಿಗಳನ್ನು ಕೆತ್ತಲಾಗಿದೆ ನಡುವೆ ಸುಂದರವಾದ ನಂದಿ ಮೂರ್ತಿ ಇದ್ದು ಶಿವಲಿಂಗಕ್ಕೆ ಎದುರು ಮುಖ ಮಾಡಿದೆ ಪ್ರಭಾವಳಿಸಹಿತ ಸುಮಾರು ಮೂರು ಅಡಿಗಳ ಎತ್ತರವಿದೆ. ದೇವಾಲಯದ ಗೋಪುರ 9 ಶ್ರೇಣಿಗಳಿಂದ ಕೂಡಿದ್ದು ಈಗ ಮೇಲಿನ ಕೊನೆಯ ಭಾಗ ಸುಂದರವಾಗಿದೆ ನವರಂಗ ಕಂಬಗಳ ಮೇಲಿನ ಕೆತ್ತನೆ ಆಕರ್ಷಣೆಯಾಗಿದ್ದು ಮಾಮಹೇಶ್ವರಿ ತಾಂಡವಶ್ವರಿ ಪ್ರತಿನಿಧಿ. ನವರಂಗದ ಭುವನೇಶ್ವರಿ ಸಿಸ್ಟವಾದ ಕೆತ್ತನೆಯಿಂದ ಬಹು ಸುಂದರವಾಗಿದೆ ಮಧ್ಯದ ಭುವನೇಶ್ವರಿಯಲ್ಲಿ 32 ಕೋನದ ನಕ್ಷತ್ರ ಆಕಾರದ ಕೆತ್ತನೆಯ ಕಮಲದ ಮೊಗ್ಗು ಅಷ್ಟದಾರಪಾರಕರು ಮಾವಿನ ಎಲೆಯ ತೋರಣ ವಾದ್ಯಗಾರರು ಹಾಗೂ ಮುತ್ತಿನ ಅಲಂಕಾರಿಕೀಯ ಚಿತ್ರಣಗಳಿವೆ ಇದರ ಶಿಖರವು ಕಂಬದ ನಾಗರಿ ಶೈಲಿಯನ್ನು ಹೊಂದಿದೆ ಮುಖ್ಯ ವಿನ್ಯಾಸೆ ಎಂದರೆ ಮೇಲ್ಚಾವಣಿಯು ಅಂತಂತವಾಗಿ ಚಿಕ್ಕದಾಗುತ್ತಾ ಹೋಗಿದೆ ಪಿರಮಿಡ್ ಆಕೃತಿಯಾಗಿ. ಐತಿಹಾಸಿಕ ಪ್ರಕಾರ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಈ ಮಲ್ಲೇಶ್ವರ ಸ್ವಾಮಿ ದೇವಾಲಯ ಎರಡೂ ಒಂದೇ ಕಾಲದಲ್ಲಿ ನಿರ್ಮಿತವಾಗಿದ್ದು ತಿಳಿದು ಬರುತ್ತದೆ, ಈ ದೇವಾಲಯವನ್ನು ಒಂದೇ ರಾತ್ರಿಯಲ್ಲಿ ಕಟ್ಟಿದರೆ ಎಂದು ಬೆಳಕಾಗುವುದರಿಂದ ಪೂರ್ಣವಾಗಿ ಕೆಲಸ ಮುಗಿದಿಲ್ಲವೆಂದು ಹೇಳಲಾಗಿದೆ ಈ ದೇವಾಲಯವನ್ನು ನೋಡಿದರೆ ಒಂದೇ ರಾತ್ರಿಯಲ್ಲಿ ಕಟ್ಟಿರಬಹುದು ಎಂದು ನಿರ್ದಿಷ್ಟವಾಗಿ ಹೇಳಲಾಗದು ದೇವಾಲಯದ ಮುಂದೆ ಸ್ವಲ್ಪ ದೂರದಲ್ಲಿ ಎಡ ಭಾಗದಲ್ಲಿ ಒಂದು ಕಂಬವಿದೆ ಇದನ್ನು ಮಾರಿಕಾಂಬ ಎಂದು ಹೇಳಲಾಗುತ್ತದೆ. ಬಲಭಾಗದಲ್ಲಿ ಒಂದು ವೀರಗನ್ನಡಲಾಗಿದೆ ಇದರಲ್ಲಿ ಮೂರು ಅಂಕಣಗಳಲ್ಲಿ ಪ್ರತಿಮೆಗಳನ್ನು ಕೆತ್ತಲಾಗಿದೆ ಅದರ ಮೇಲ್ಭಾಗದಲ್ಲಿ ಎಡಕ್ಕೆ ಚಂದ್ರ ಬಲಕ್ಕೆ ಸೂರ್ಯ ಚಿತ್ರವಿದೆ ಮತ್ತು ಪಶ್ಚಿಮಕ್ಕೆ ದೊಡ್ಡಮ್ಮನ ಕಲ್ಲು ಪೂರ್ವಕ್ಕೆ ಗರುಡುಗಂಬ ಉತ್ತರಕ್ಕೆ ಬೋರೇದೇವರ ದೇವಸ್ಥಾನ ಅದರ ಪಕ್ಕದಲ್ಲಿ ಒಂದು ಕಲ್ಲಿನ ಕೊಳವಿದೆ ಮತ್ತು ದಕ್ಷಿಣಕ್ಕೆ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯವಿದೆ. ಮಲ್ಲೇಶ್ವರ ದೇವಾಲಯ ಶೀತಲ ವ್ಯವಸ್ಥೆಯಲ್ಲಿದ್ದಾಗ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆಯವರು ದೇವಾಲಯವನ್ನು ಜೀವನೋದ್ಧಾರಗೊಳಿಸಿದ್ದಾರೆ. ಒಂದು ಐಕ್ಯ ಎಂದರೆ ಅದು ಸ್ಥಳೀಯರು ಹೇಳುವ ಪ್ರಕಾರ ಈ ಈಶ್ವರ ದೇವರಿಗೆ ಕೋಳಿ ಸದ್ದು ಕೇಳಿದರೆ ಆಗುತ್ತಿರಲಿಲ್ಲ ಆ ಊರಿನ ವಾಸಿಸುತ್ತಿರುವ ಜನರು ಕೋಳಿ ಸಾಕುತ್ತಿದ್ದರೆ ಎಂದು ಹಾಗೂ ಮಾಂಸಾಹಾರಿಗಳೆಂದು ತಿಳಿಯುತ್ತದೆ ದೇವರಿಗೆ ಕೋಳಿ ಸದ್ದು ಕೇಳುತ್ತಿದ್ದರಿಂದ ದೇವರ ಶಾಪದಿಂದ ಊರು ನಶಿಸುತ್ತಾ ಬಂದಿದೆ ಎಂದು ಜನರು ಹೇಳಿಗೆ ಆಗಲಿಲ್ಲ ಈಗಿರುವ ಜಾಗಕ್ಕೆ ಅಂದರೆ ದೇವಾಲಯದಿಂದ ದೂರಕ್ಕೆ ಉರಿ ಕಟ್ಟಿಕೊಂಡು ವಾಸವಾಗಿರುತ್ತಾರೆ. ಈಗ ಊರಿನಲ್ಲಿ ಸುಮಾರು 40 ಮನೆಗಳಿದ್ದು ವ್ಯವಸಾಯದಲ್ಲಿ ನಿರತರಾಗಿದ್ದಾರೆ. ಟಿಪ್ಪು ಸುಲ್ತಾನನ ಆಡಳಿತ ಪತನವಾಗಿ ಮೈಸೂರು ಒಡೆಯರಿಗೆ ಆಡಳಿತ ಬಂದ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರು ತಮ್ಮ ಆಸ್ಥಾನದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಊರಿನ ಹೆಸರು ಗಡ್ಡ ಎಂಬ ಹೆಸರು ಸೇರಿರುವುದರಿಂದ ಇದು ಹಿಂದೆ ಒಂದು ವ್ಯಾಪಾರ ಕೇಂದ್ರವಾಗಿತ್ತು ಎಂದು ಗ್ರಹಿಸಬಹುದು ಇಲ್ಲಿ ಪ್ರತಿವರ್ಷ ಮಹಾಶಿವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಏರ್ಪಡಿಸಲಾಗುತ್ತದೆ ಆ ದಿನ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗುತ್ತದೆ ಇಲ್ಲಿಗೆ ಹಲವು ಜಿಲ್ಲೆಗಳಿಂದ ರಾಜ್ಯದ ಮೂಲೆ ಮೂಲೆಯಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಅಂದಿನ ರಾತ್ರೆ ಶಿವನ ಹರಿಕಥೆ ಭಜನೆ ಈ ರೀತಿಯಲ್ಲಿ ಜಾಗರಣೆಯನ್ನು ಮಾಡಲಾಗುತ್ತದೆ ಹಬ್ಬದಲ್ಲಿ ಭಕ್ತಾದಿಗಳಿಂದ ಸಂಗ್ರಹವಾದ ಹಣವನ್ನು ದೇವಾಲಯದ ಕೆಲಸ ಕಾರ್ಯಗಳಿಗೆ ಉಪಯೋಗಿಸುತ್ತಾರೆ ಈ ದೇವಾಲಯಕ್ಕೆ ಅರ್ಚಕರನ್ನು ಪೂಜೆ ಮಾಡಲು ನೇಮಿಸಿರುತ್ತಾರೆ ಪ್ರತಿ ಸೋಮವಾರ ಮತ್ತು ಶುಕ್ರವಾರ ಇಲ್ಲಿ ಪೂಜೆ ನಡೆಯುತ್ತದೆ. ಊರಿನ ಗ್ರಾಮಸ್ಥರು ಹಾಗೂ ಯುವಕರು ಮುಖಂಡರಿಂದ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಾ ಬಂದಿದೆ. ಈ ರೀತಿಯಲ್ಲಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿಗೊಳ್ಳುತ್ತಾ ಹೋಗುತ್ತಿದೆ🙏ಓಂ ನಮಃ ಶಿವಾಯ