01/01/2024
ನಾವೆಲ್ಲಾ ಭಾರತೀಯರು, ನಮ್ಮದು ಭವ್ಯ ಸಂಸ್ಕೃತಿ, ನಮ್ಮ ನೆಲ, ಜಲ, ಭಾಷೆ ಇದನೆಲ್ಲ ಮೊದಲು ಗೌರವದಿಂದ ಕಾಣುವುದು ನಮ್ಮ ಮೊದಲ ಪ್ರಾಶಸ್ತ್ಯ ಆಗಬೇಕು., ನಮ್ಮ ಸಂಸ್ಕೃತಿಯನ್ನು ಉಳಿಸುವುದು, ಆಚರಣೆಗಳಲ್ಲಿದೆ(ಅರಿವಿನ ಸಹಿತ), ನಮ್ಮ ದೇಶದ ಪ್ರತಿ ಆಚರಣೆಗಳಲ್ಲಿ ವಿಜ್ಞಾನ ಇದೆ, ಅದನ್ನು ಆದಷ್ಟು ಅರಿತು ಆಚರಿಸುವಲ್ಲಿ ಸಫಲರಾಗೋಣ. ನಮ್ಮ ದೇಶ ಹಳ್ಳಿಗಳ ದೇಶ, ಹಳ್ಳಿಗಳಲ್ಲಿ ಮೂಲ ಕಸುಬು ಕೃಷಿ ಆಗಿತ್ತು, ಕೃಷಿಯ ಪ್ರತಿ ಚಟುವಟಿಕೆಗಳನ್ನು ಹಬ್ಬಗಳಾಗಿ ಆಚರಣೆ ಮಾಡಲಾಗುತ್ತಿತ್ತು, ವರ್ಷದ ಒಂದು ದಿನ ಅಥವಾ ಹಲವು ದಿನ ಮಾತ್ರ ಆಚರಣೆ ನಮ್ಮ ಸಂಸ್ಕೃತಿ ಅಲ್ಲ, ಪ್ರತಿ ದಿನ ಪ್ರತಿ ಕ್ಷಣ, ಸಂತೋಷದಿಂದ ಇರುವ ಅರಿವಿನ ದಿನಗಳಾಗಲಿ, ಅನ್ವೇಷಣೆ ಆದ ಸನಾತನ ಧರ್ಮದ ಇನ್ನಷ್ಟು ಸತ್ಯಗಳು ನಮಗೆ ಕಾಣಿಸಲಿ, ನಮ್ಮಲ್ಲಿ ಆ ಸತ್ಯ ದರ್ಶನದ ಹಸಿವು ಯಾವಾಗಲು ಇರಲಿ, ಆ ಹಸಿವನ್ನು ನಮ್ಮೆಲ್ಲರಿಗೆ ಭಗವಂತ ಕರುಣಿಸಲಿ ಎಂದು ಕೇಳಿಕೊಳ್ಳುತ್ತಾ.
ಭವ್ಯ ರಾಮ ಮಂದಿರದ ಉದ್ಘಾಟನೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸೋಣ. ನಮ್ಮದು ದೀಪ ಬೆಳಗುವ ಸಂಸ್ಕೃತಿ,(ಆರಿಸುವುದಲ್ಲ ) ಜನೆವರಿ ೨೨ ರಂದು ನಮ್ಮ ಮನೆಗಳಲ್ಲಿ , ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ, ಸಂಘ ಸಂಸ್ಥೆಗಳಲ್ಲಿ., ಶಾಲಾ ಕಾಲೇಜುಗಳಲ್ಲಿ, ಮಠ - ಮಂದಿರಗಳಲ್ಲಿ ಶ್ರೀರಾಮ ಜ್ಯೋತಿ ಬೆಳಗುವ ಮೂಲಕ, ಶ್ರೀ ರಾಮ ಮಂತ್ರ ಅಥವಾ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಆಚರಿಸೋಣ.