Sri Kote Mariyamma yuvaka mithra mandali, Madikeri.

Sri Kote Mariyamma yuvaka mithra mandali, Madikeri. ಶ್ರಿ ಕೋಟೆ ಮಾರಿಯಮ್ಮ ಯುವಕ ಮಿತ್ರ ಮ೦ಡಳಿ (ರಿ). ಮಡಿಕೇರಿ
For more info on madikeri dasara visit http://www.youtube.com/watch?v=JHsgiu8KuKk&feature=share

ಶ್ರೀ ಕೋಟೆ ಮಾರಿಯಮ್ಮ: ಕೋಟೆಯ ರಕ್ಷಣೆಗೆ ನಾಲ್ಕು ದಿಕ್ಕಿನಲ್ಲಿ ರಾಜರ ಕಾಲದಲ್ಲಿ ಪ್ರತಿಷ್ಠಾಪಿಸಲಾದ ನಾಲ್ಕು ಶಕ್ತಿ ದೇವತೆಗಳಲ್ಲಿ ಪೆನ್ಸನ್ ಲೈನ್ ನಲ್ಲಿರುವ ಶ್ರೀ ಕೋಟೆ
ಮಾರಿಯಮ್ಮ ದೇವಾಲಯವೂ ಒಂದಾಗಿದೆ. ಲಕ್ಷ್ಮಿ, ಸರಸ್ವತಿ, ಪಾರ್ವತಿ ಹಾಗೂ ದುರ್ಗಿಯೂ ಆಗಿರುವ ಶ್ರೀ ಕೋಟೆ ಮಾರಿಯಮ್ಮ ದೇವಾಲಯಕ್ಕೆ ಸುಮಾರು ಎರಡು ಶತಮಾನಗಳ ಇತಿಹಾಸವಿರುವುದನ್ನು ನಾವು ಕಾಣಬಹುದು.
ರಾಜನ ಕಾಲದಲ್ಲಿ ಆಸ್ಥಾನ ದೇವತೆಯಾಗಿದ್ದ ದಿಂಡಿಗಲ್ ಮೂಲದ ಕೋಟೆ ಮಾರಿಯಮ್ಮನೊಂದಿಗೆ ಸಮಾಲೋಚಿಸಿ ಕಾರ್ಯ ನಿರ್ವಹಿಸಲಾಗುತ್ತಿತ್ತಂತೆ. ಆದರೆ ರಾಜ ದುರಾಡಳಿತ ನಡೆಸಿ ಅನಾಚಾರಗಳು ಎಲ್ಲೆ ಮೀರಿದಾಗ
ದೇವಿ ರಾಜನ ಬಗ್ಗೆ ಕೋಪಗೊಂಡಳಂತೆ ಇದರಿಂದ ದೇವಿ ಬಗ್ಗೆ ಸಿಟ್ಟಾದ ರಾಜ ದೇವಿಯ ವಿಗ್ರಹವನ್ನು ಭಗ್ನಗೊಳಿಸಿ ಕೋಟೆಯ ಹಿಂಬದಿಯಲ್ಲಿರುವ ಬಾವಿಗೆ ಎಸೆದು ಬಿಟ್ಟನಂತೆ.

ಆದರೆ ಕೋಟೆ ಮಾರಿಯಮ್ಮ ದೇವಿಯ ಭಕ್ತರಾಗಿದ್ದ ಮುತ್ತು ದಂಪತಿಗಳಿಗೆ ದೇವಿ ಕನಸಿನಲ್ಲಿ ಕಾಣಿಸಿಕೊಂಡು ನನ್ನ ವಿಗ್ರಹ ಬಾವಿಯಲ್ಲಿದ್ದು ಅದನ್ನು ಹೊರ ತೆಗೆದು ಪೂಜಿಸುವಂತೆ ತಿಳಿಸಿದಳಂತೆ
ಅದರಂತೆ ಆ ದಂಪತಿಗಳು ಬಾವಿಯಿಂದ ವಿಗ್ರಹವನ್ನು ಹೊರತೆಗೆದು ಕೋಟೆಯ ಬಳಿಯೇ ಪ್ರತಿಷ್ಠಾಪಿಸಲು ಮುಂದಾದರಂತೆ ಆದರೆ ದೇವಿ ಮಾತ್ರ ಕೋಟೆಯಿಂದ ಹೊರಗಟ್ಟಿದ ರಾಜನ ಬಳಿ ತಾನು ತಿರುಗಿಯೂ ನೋಡುವುದಿಲ್ಲ
ಆದ್ದರಿಂದ ಕೋಟೆಗೆ ವಿರುದ್ಧ ದಿಕ್ಕಿನಲ್ಲಿ ಅಂದರೆ ಈಗಿರುವ ಸ್ಥಳದಲ್ಲಿ ಉತ್ತರಾಭಿಮುಖವಾಗಿ ನೆಲೆ ನಿಂತಳು ಎನ್ನಲಾಗಿದೆ. ದೇವಾಲಯವು ಆಡಳಿತ ಮಂಡಳಿಯ ಮುತುವರ್ಜಿಯಿಂದ ಹಲವು ರೀತಿಯಲ್ಲಿ ಅಭಿವೃದ್ಧಿ ಕಂಡಿದೆ.
ಇಲ್ಲೂ ಕೂಡ ಯಾದವ ಜನಾಂಗದವರೇ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾ ಬಂದಿದ್ದು, ಈ ದೇಗಲದಿಂದ ಕರಗ ಹಾಗೂ ಭವ್ಯ ಮಂಟಪವನ್ನು ದಸರಾ ಸಂದರ್ಭ ಹೊರಡಿಸುತ್ತಾ ಬರಲಾಗುತ್ತಿದೆ.

Address

Pension Lane
Madikeri
571201

Alerts

Be the first to know and let us send you an email when Sri Kote Mariyamma yuvaka mithra mandali, Madikeri. posts news and promotions. Your email address will not be used for any other purpose, and you can unsubscribe at any time.

Shortcuts

Share

Category