Sri Kshetra Daneswara Math Lokapur.

Sri Kshetra Daneswara Math Lokapur. ಶ್ರೀ ಕ್ಷೇತ್ರ ಜ್ಞಾನೇಶ್ವರ ಮಠ, ಲೋಕಾಪುರ. ಪರಮಪೂಜ್ಯ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ಪ್ರಸ್ತುತ ಪೀಠಾಧೀಶರು

ಶ್ರೀಕ್ಷೇತ್ರ ಜ್ಞಾನೇಶ್ವರ ಮಠ, ಲೋಕಾಪುರ.

|| ಪ್ರಸ್ತುತ ದ್ವಾದಶ ಪೀಠಾಧಿಶರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ಶ್ರೀಕ್ಷೇತ್ರ ಜ್ಞಾನೇಶ್ವರ ಮಠ, ಲೋಕಾಪೂರ/ ಶ್ರೀ ಭುಜಂಗ ಸ್ವಾಮಿಗಳ ಮಠ
|| ಶ್ರೀ ಗುರು ಭುಜಂಗಸ್ವಾಮಿ ಪ್ರಸನ್ ||

ಶುಭ ಹಾರೈಕೆ

|| ಮಮಾತ್ಮ ಸರ್ವಭೂತಾತ್ಕಾ ತಶ್ರೀಗುರುವೇ ನಮಃ ||

ಹಂಸ-ಪರಮಹಂಸ ಎಂಬ ಪದವಿ ಪಡೆದವರೇ ಸಾಕ್ಷಾತ ಪರಮೇಶ್ವರರು, ಪಂಢರಿನಾಥನ ಕೃಪೆಯಿಂದ ಅವರ ಅರ್ಚಕನ ಉದರದಲ್ಲಿ ತಿರುಮಲ ಎಂಬ ನಾಮದಿಂದ ಜನಿಸಿ ಗುರುವಿನ ಶೋಧಾರ್ಥಕ್ಕಾಗಿ ಹಗಲಿರುಳ

ು ಶ್ರಮಿಸುತ್ತಾ ಜಗತ್ತಿನಾದ್ಯಂತ 'ಸಂಚರಿಸಿ ಪರಮಹಂಸ ಎಂಬ ಪದವಿಯನ್ನು ಶ್ರೀಗುರು ದತ್ತಾತ್ರೆಯ ಸಂಭೂತರಾಗಿದ್ದ ಶ್ರೀ ಅಜಮೀರ ಸಾಹೇಬರಿಂದ ಪಡೆದು ಸುಮಾರು 780 ವರ್ಷಗಳವರೆಗೆ ಜೀವಂತವಾಗಿದ್ದು ಲೋಕಾಪುರದಲ್ಲಿ ಸಪರೀರ (ಜೀವಂತ) ಸಮಾಧಿಸ್ಥರಾಗಿ ಇಂದಿಗೂ-ಎಂದೆಂದಿಗೂ ಅಜರಾಮರರಾಗಿ ಜಗತ್ತನ್ನೇ ಭಕ್ತಿ ಮಾರ್ಗದಲ್ಲಿ ಕೊಂಡೊಯ್ದು ಭಕ್ತರೋದ್ದಾರ ಮಾಡುತ್ತಲಿದ್ದಾರೆ. ಇವರ ಪುತ್ರ ಶ್ರೀ ಗುರು ಜ್ಞಾನೇಶ್ವರ ಮಹಾಸ್ವಾಮಿಗಳು ಸಹ ಶ್ರೀಕ್ಷೇತ್ರ ಕಾಖಂಡಕಿಯಲ್ಲಿ ಶರೀರ ಸಮಾಧಿಸ್ಥರಾಗಿದ್ದಾರೆ. ಈ ಮಠಗಳ ಚರಿತ್ರೆಯನ್ನು ಮುರಗೋಡದ ಶ್ರೀ ಸಾಂಬ ದೀಕ್ಷಿತರು ಸಂಸ್ಕೃತದಲ್ಲಿ, ಮುಂದೆ ಶ್ರೀ ಕೃಷ್ಣ ದೀಕ್ಷಿತರು ಮರಾಠಿಯಲ್ಲಿ, ಹಾಗೇಯೇ ಕಾದಂಬರಿ ಪಿತಾಮಹರಾಗಿದ್ದ ಶ್ರೀ ವೆಂಕಟೇಶ ತಿರಕೋ ಕುಲಕರ್ಣಿ, ಸಾ : ಗಳಗನಾಥರ ಇಚ್ಛೆ ಏನಿತ್ತೆಂದರೆ ಶ್ರೀಮಠದ ಚರಿತ್ರೆಯು ಪ್ರತಿಯೊಬ್ಬ ಭಕ್ತನೂ ಅತಿ ಸರಳವಾಗಿ ಓದಿ ತಿಳಿದುಕೊಂಡು ಉದ್ದಾರವಾಗಲಿ ಎಂಬ ಕಾರಣದಿಂದ ಈ ಚರಿತ್ರೆಯನ್ನು ಕನ್ನಡದಲ್ಲಿ ಅನುವಾದಿಸಿ ಇಟ್ಟಿದ್ದು ಅವರ ಮಹತ್ವದ ಸಾಧನೆಯಾಗಿದೆ. ಶ್ರೀಯುತರು ಈ ಚರಿತ್ರೆಗೆ 'ಕಲಿಕುಠಾರ' ಎಂಬ ಸುಂದರವಾದ ನಾಮಕರಣ ಮಾಡಿದ್ದು ಕೂಡ ಅರ್ಥಗರ್ಭಿತವಾಗಿದೆ.

ಎರಡೂ ಮಠದ ಚರಿತ್ರೆಯು ಕಾಖಂಡಕಿ ಮಠದ ಧರ್ಮದರ್ಶಿಗಳಾದ ಹಾಗೂ ನಮ್ಮ ಆಪ್ಟಿನವರಾದ ದಿ. ಕೇಶವರಾವ್ ಭಾವುರಾವ್ ತಳಘಟ್ಟಿಯವರಿಗೆ ಮಾತ್ರ ಸಂಪೂರ್ಣವಾಗಿ ತಿಳಿದಿತ್ತು. ಕಲಿಕುಠಾರ ಗ್ರಂಥದ ಮುದ್ರಣ ಮಾಡಿ ಭಕ್ತ ಸಮೂಹಕ್ಕೆ ತಿಳಿಸುವ ಅಪೇಕ್ಷೆ ಅವರದಾಗಿತ್ತು. ಆದರೆ ದುರದೃಷ್ಟವಶಾತ್ ಅವರೂ ಈಗ ಇಲ್ಲದ ಕಾರಣದಿಂದ ಅವರ ಅಪೇಕ್ಷೆಯನ್ನು ಪೂರೈಸುವ ಉದ್ದೇಶದಿಂದ ಅವರ ಪುತ್ರರಾದ ಹಾಗೂ ನನ್ನ ಚಿಕ್ಕಪ್ಪನವರಾದ ಶ್ರೀ ಜಯರಾಮ ಕೇಶವರಾವ್ ತಳಘಟ್ಟಿಯವರು ಹೆಚ್ಚಿನ ಆಸಕ್ತಿ ವಹಿಸಿ ಮಠಗಳ ಚರಿತ್ರೆಯನ್ನು ಅಭ್ಯಾಸ ಮಾಡುತ್ತ, ನಮಗೆ ತಿಳಿಸುತ್ತ ಎಲ್ಲರ ಸಂಗಡ ಅವರ ಅನುಭವಗಳನ್ನುಹಂಚಿಕೊಳ್ಳುತ್ತ, ಕಲಿಕುಠಾರದ ಮೂರು ಭಾಗಗಳು ಮತ್ತು ಅದರ ಸಂಗಡವೇ ಮುಂದುವರಿದ ಭಾಗವನ್ನು ಸಹಿತ ಮುದ್ರಿಸಿ ಒಂದೇ ಗ್ರಂಥದಲ್ಲಿ ಪೂರ್ವದಿಂದ ಹಿಡಿದು ಪ್ರಸ್ತುತದವರೆಗೆ ಚರಿತ್ರೆಯನ್ನು ಮರು ಮುದ್ರಣ ಕಾರ್ಯದೊಂದಿಗೆ ಮುಗಿಸಿರುವದು ಶ್ಲಾಘನೀಯವಾಗಿದೆ.

ಈ ಗ್ರಂಥವನ್ನು ಮುದ್ರಿಸಿದ ಭಕ್ತವೃಂದಕ್ಕೆ ಹಾಗೂ ವಾಚಕರಿಗೆ ಶುಭವಾಗಲಿ. ಇದಕ್ಕೆ ಶ್ರಮಿಸಿದ ಎಲ್ಲ ಮಹನೀಯರಿಗೂ ನನ್ನ ಧನ್ಯವಾದಗಳು. ಹಾಗೆಯೇ ಶ್ರೀಮತ್ ಪರಮಹಂಸರ ಕೃಪಾಶೀರ್ವಾದವು ಸಕಲ ಭಕ್ತರಿಗೆ ಶಾಂತಿ, ನೆಮ್ಮದಿ, ಸಮೃದ್ಧಿ ನೀಡಲೆಂದು ಆ ಗುರುಗಳಲ್ಲಿ ಬೇಡಿಕೊಳ್ಳುತ್ತೇನೆ.

'ಜೈ ಭುಜಂಗ'

ಶ್ರೀ ಗುರು ಅಜಮೀರ ಪಾಶ್ಚಾಕೀ ದೋಸ್ತಾರಾ ಹೋ ದೀನ್

ಸ್ಥಳ : ಲೋಕಾಪುರ

ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಭುಜಂಗಸ್ವಾಮಿ ಮಠ ಪ್ರಸ್ತುತ 12ನೇ ಪೀಠಸ್ಥರು ಲೋಕಾಪುರ.

23/11/2023

Address

Shree Kshetra Jnyaneshwar Math Lokapur. ಶ್ರೀ ಕ್ಷೇತ್ರ ಜ್ಞಾನೇಶ್ವರ ಮಠ ಲೋಕಾಪುರ
Lokapur
587122

Telephone

+917026094265

Website

Alerts

Be the first to know and let us send you an email when Sri Kshetra Daneswara Math Lokapur. posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Kshetra Daneswara Math Lokapur.:

Share