17/02/2015
ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ.
ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.
^^^^^^ಓಂ ಕಾರ^^^^^^
ಈ ನಾದವು ಇಲ್ಲದಂತಹ ತಾಣವು ಮುರು ಲೋಕದಲ್ಲೂ ಇಲ್ಲ.
ಜಗದ್ರಕ್ಷಕನಾದ ಪರಶಿವನಿಗೂ ಮೊದಲು ಈ ಪ್ರಣವನಾದವೇ.
ಇದೆ ಓಂಕಾರ.
ಮಾನವನನ್ನು ದೇವತೆಯನ್ನಾಗಿ ಮಾಡುವಂತಹ ಪ್ರಣವನಾದ
ಇದರ ಮಹಿಮೆಯಂಟು ಅಗಾಧ.
ಪ್ರಣವ ಎಂದರೆ ಓಂಕಾರ ಇದೆ ಮುಲ ಬೀಜಾಕ್ಷರ.
ಒಂಕಾರವು ಮುಲಾಕ್ಷರವಾದರೆ,
ಪಂಚಾಕ್ಷಿಯು ಪರಶಿವನ ಪ್ರೀಯವಾದ ಪ್ರಾರ್ಥನಾ ಮಂತ್ರ.
'ಅ' ಕಾರ 'ಉ' ಕಾರ 'ಮ' ಕಾರಗಳ ಸಂಯೋಗದಿಂದ ಓಂಕಾರವಾದರೆ,
ನಮ; ಶಿವಾಯ ಎಂಬ ಅಕ್ಷರಗಳ ಸಂಯೋಗವೇ ಪಂಚಾಕ್ಷರಿ.
ಮುಲಾಕ್ಷರ ಹಾಗೂ ಪ್ರಾರ್ಥನಾ ಅಕ್ಷರಗಳ ಸಂಯೋಗವೇ ಪಂಚಾಕ್ಷರಿ.
ಇದುವೇ ಓಂ ನಮಃ ಶಿವಾಯ.
ಮುರು ಋಷಿಮುನಿಗಳು ಸಾಲಾಗಿ ನಿಂತು.
ಒಂದನೆಯವರು;- 'ಅ' ಕಾರವನ್ನೂ
ಎರಡನೆಯವರು;- 'ಉ' ಕಾರವನ್ನೂ
ಮುರನೆಯವರು;- ;ಮ' ಕಾರವನ್ನೂ
ನಿಲ್ಲಿಸದಂತೆ ದೀರ್ಘವಾಗಿ ಉಚ್ಚರಿಸುತ್ತಿದ್ದರೆ ಹೊರ ಹೊಮ್ಮುವ
ಶಿವನ ನಾದವೇ "ಓಂ" ಎಂದು ಬರುತ್ತದೆ.
'ಅ' ಕಾರವೆಂದರೆ ಅರಿಷಡ್ವರ್ಗಗಳ ಭ್ರಮೆಯನ್ನು ಬಿಡಿಸಿ,
'ಉ' ಕಾರವೆಂದರೆ ಉಪಾದಿಗಳನ್ನು ದೂರಮಾಡಿ,
'ಮ' ಕಾರವೆಂದರೆ ಮಾಯ ಮೋಹಾದಿಗಳನ್ನು ದೂರಮಾಡಿ.
ಶಿವಪದವನ್ನು ದೊರಕಿಸುವುದೇ ಈ ಮುರು ಅಕ್ಷರಗಳ ಸಂಯೋಗವಾದ ''ಓಂಕಾರ'' ನಾದ.........
''ಶುಭದಿನ ಶುಭ ಚಿಂತನ'' —
ಸಮಸ್ತ ಹಿಂದೂ ಭಾಂದವರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು....
ನಂಬಿದ ಭಗವಂತನು ನಮ್ಮೆಲ್ಲರ ಕಷ್ಟಗಳನ್ನು ಕಳೆದು ಮುನ್ನಡೆಸಲಿ
ಸಮಸ್ತಾ "ಹಿಂದೂ " ಬಾಂದವರಿಗೆ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು