Geddalagatte Friends

Geddalagatte Friends Contact information, map and directions, contact form, opening hours, services, ratings, photos, videos and announcements from Geddalagatte Friends, Kudligi.

12/08/2025
  ಮಾಡುವ ಹಕ್ಕು ಹೇಗೆ ಸಿಕ್ಕಿತು ನಿಮಗಿದು ಗೊತ್ತೆ?1932 ಸೆಪ್ಟೆಂಬರ್ 17 ಇಂಗ್ಲೆಂಡ್ ನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ವಾಗ್ವಾದ.ಅಂಬೇಡ್ಕರ...
08/12/2020

ಮಾಡುವ ಹಕ್ಕು ಹೇಗೆ ಸಿಕ್ಕಿತು ನಿಮಗಿದು ಗೊತ್ತೆ?

1932 ಸೆಪ್ಟೆಂಬರ್ 17 ಇಂಗ್ಲೆಂಡ್ ನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ವಾಗ್ವಾದ.

ಅಂಬೇಡ್ಕರ್ :--ಭಾರತದಲ್ಲಿರುವ 18 ವರ್ಷ ತುಂಬಿದ ಗಂಡು ಹೆಣ್ಣು, ಪ್ರತಿಯೊಬ್ಬರಿಗೆ ಓಟು ಹಾಕುವ ಹಕ್ಕು ಇರಲಿ

ಗಾಂಧೀಜಿ :--ನಾನು ಒಪ್ಪುವುದಿಲ್ಲ. ಜಮೀನ್ದಾರರಿಗೆ, ಉದ್ಯಮಿದಾರರಿಗೆ, ಡಿಗ್ರಿ,ಎಂಎ ಓದಿರುವವರಿಗೆ ಗಿರಣಿ ಮಾಲಿಕರಿಗೆ, ಓಟ್ ಮಾಡುವ ಹಕ್ಕಿರಲಿ. ಅಸ್ಪೃಶ್ಯರಿಗೆ ಓಟ್ ಮಾಡುವ ತಿಳುವಳಿಕೆ ಇಲ್ಲಾ. ಅವರು ಅನಕ್ಷರಸ್ಥರು ಅವರಿಗೆ ಓಟ್ ಅಗತ್ಯವಿಲ್ಲ ಬೇಕಾದರೆ ಅವರಿಗಾಗಿ ಶಾಲೆಗಳನ್ನ ತೆಗೆದು ಶಿಕ್ಷಣ ಕೊಡಿ. ಮತ್ತು ಅಂಬೇಡ್ಕರ್, ಮಹಿಳೆಯರಿಗಾಗಿ ಓಟಿನಹಕ್ಕು ಕೆಳುತ್ತಿರುವುದು ಹಾಸ್ಯಾಸ್ಪದ ನಾನು ಇದನ್ನ ಖಡಾಖಂಡಿತವಾಗಿ ವಿರೋಧಿಸುತ್ತೇನೆ.

ಅಂಬೇಡ್ಕರ್ :--ಓಟ್ ಹಾಕಲು ಸಾಮಾನ್ಯ ತಿಳಿವಳಿಕೆ ಇದ್ದರೆ ಸಾಕು. ಡಿಗ್ರಿ, ಎಂಎ ಒದಿರುವವರು ಇರಬೇಕೆಂದೆನಿಲ್ಲಾ. ಮೇಲಾಗಿ ಭಾರತದಲ್ಲಿ ಬಹುಸಂಖ್ಯಾತ sc St obc ಗಳು ಯಾರೂ ಶಿಕ್ಷಣ ಪಡೆದಿಲ್ಲ . ಇವರಿಗೆ ಧರ್ಮಶಾಸ್ತ್ರದ ಅನುಸಾರವಾಗಿ ಶಿಕ್ಷಣ ಮತ್ತು ಆಸ್ತಿ ಹೊಂದುವ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. 18 ವರ್ಷ ತುಂಬಿರುವವರಿಗೆ ತಿಳುವಳಿಕೆ ಬಂದಿರುತ್ತೆ ಅವರು ಅನಕ್ಷರಸ್ಥರಿದ್ದರೂ, ಅದು ಅವರಿಗೆ ಭಾದಿಸುವುದಿಲ್ಲ ಅವರು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಗಾಂಧೀಜಿ ಒಬ್ಬ ಕಪಟ, SC ST OBC rm ಮತ್ತು ಮಹಿಳೆಯರನ್ನ ಧರ್ಮಶಾಸ್ತ್ರ ಅನುಸಾರವಾಗಿ ಯತಸ್ಥಿತಿಯನ್ನಾಗಿಡಲು ಬಯಸುತ್ತಾರೆ. ಅವರ ಮಾತಿನಲ್ಲಿ ಹುರುಳಿಲ್ಲ ಅವರ ಮಾತನ್ನ ಒಪ್ಪಬೇಡಿ.

ರಾಮ್ಸೇ ಮ್ಯಾಕಡೊನಾಲ್ಡ್ :--ಅಂಬೇಡ್ಕರ್ ಹೇಳಿದ್ದು ಸರಿಯಿದೆಯಲ್ಲಾ ಗಾಂಧೀಜಿ, ನೀವೇಕೆ ವಿರೋಧಿಸುತ್ತೀದ್ದಿರಿ.?

ಗಾಂಧೀಜಿ :--(ಸಿಟ್ಟಿನಿಂದ) ನೀವು ಇದರಲ್ಲಿ ಮೂಗು ತೂರಿಸಬೇಡಿ ಶೂಧ್ರರಾದವರು ( cat 1,2a 3a 3b SC St obc ಗಾಣಿಗ ರೆಡ್ಡಿ ಒಕ್ಕಲಿಗ ಲಿಂಗಾಯತರಾದಿಯಾಗಿ) ಸೇವೆಮಾಡಿಕೊಂಡಿರಬೇಕು ಅವರು ಓಟ್ ಪಡೆದು ರಾಜರಾಗುವುದೆಂದರೆ. ನಾನು ಒಪ್ಪುವುದಿಲ್ಲ.

ಅಂಬೇಡ್ಕರ್ :- ನೋಡಿ ಪ್ರಧಾನಮಂತ್ರಿಗಳೆ ಈತಾ ಎಂಥಾ ಕುತಂತ್ರಿ, ಸಾವಿರಾರು ವರ್ಷಗಳಿಂದ ವಿಧ್ಯ, ಅಧಿಕಾರ, ಆಸ್ತಿಯಿಂದ ವಂಚಿತರಾಗಿ ಪ್ರಾಣಿ ಪಶುಗಳಿಗಿಂತ ಕಡೆಯಾಗಿ ಬದುಕುತ್ತಿರುವ ನನ್ನ ದೇಶದ ಮೂಲನಿವಾಸಿಗಳ ಬದುಕು ಹಸನಾಗುವುದು ಗಾಂಧಿಗೆ ಬೇಡವಾಗಿದೆ. ಹಿಗಾಗಿ ಅವರ ಮಾತು ಒಪ್ಪಬೇಡಿ.

ರಾಮ್ಸೇ ಮ್ಯಾಕಡೊನಾಲ್ಡ್ :--ಡಾ ಅಂಬೇಡ್ಕರ್ ಹೇಳಿತ್ತಿರುವದು ನ್ಯಾಯಸಮ್ಮತವಾದದ್ದು ಆದ್ದರಿಂದ 18 ವರ್ಷ ತುಂಬಿದ ಭಾರತದ ಎಲ್ಲಾ ಜನರಿಗೆ ಓಟು ಹಾಕುವ ಹಕ್ಕು ನಿಡುತ್ತೇವೆಂದು ಘೋಷಿಸುತ್ತೇವೆ.

ಅರಮನೆಯ ಹೋರಗಡೆ ಪತ್ರಕರ್ತರ ಪ್ರಶ್ನೆ:--

ಬಾಬಾಸಾಹೇಬ್ ಭಾರತೀಯರೆಲ್ಲರಿಗೂ ಓಟಿನಹಕ್ಕು ಕೊಡಿಸಿದಿರಂತೆ ಏನದು?

ಅಂಬೇಡ್ಕರ್ :--"ನೋಡಿ, ಇನ್ನು ಮುಂದೆ ದೇಶವನ್ನಾಳುವ ದೊರೆ ರಾಣಿಯ ಗರ್ಭದಲ್ಲಿ ಹುಟ್ಟುವುದಿಲ್ಲ, ಬದಲಾಗಿ ಜನರು ಆರಿಸುವ ಮತಗಟ್ಟೆಗಳಲ್ಲಿ ಹುಟ್ಟುತ್ತಾನೆ ಅವರು ತಮಗೆ ಬೇಕಾದ ರಾಜನನ್ನು ಆಯ್ಕೆ ಮಾಡಿಕೊಳ್ಳಲಿ ಈ ದಿನ ನನಗೆ ತುಂಬಾ ಸಂತೋಷವಾಗಿದೆ."

2500 ವರ್ಷಗಳಷ್ಟು ಹಳೆ ಕಾಲದ ಮನುಸ್ಮೃತಿ ಆಧಾರಿತ ಮನುವ್ಯವಸ್ಥೆಯನ್ನ ನುಚ್ಚು ನೂರು ಮಾಡಿ, ಪ್ರಜಾಪ್ರಭುತ್ವವನ್ನು ಅನುಷ್ಠಾನಗೊಳಿಸಿದ ಪ್ರಜಾಪ್ರಭುತ್ವದ ಪಿತಾಮಹ ಡಾ. ಭೀಮರಾವ್ ಅಂಬೇಡ್ಕರ್.

ಬಾಬಾಸಾಹೇಬ್ ನಿಮಗಿದು ನನ್ನ ಕೋಟಿ ಕೋಟಿ ಪ್ರಣಾಮಗಳು.

"ಪ್ರತಿಯೊಂದು ಬೂತ /ಮತಗಟ್ಟೆಗಳಲ್ಲಿ ಅಂಬೇಡ್ಕರ್ ಅವರ ಫೋಟೋ ಇಟ್ಟು ಈ ಜ್ಞಾನಿಯನ್ನು ಸ್ಮರಿಸಿಕೊಳ್ಳಬೇಕು.
#ಜೈ_ಭೀಮ್
್ನಡ_ಚಾನೆಲ್

Good evening
26/11/2020

Good evening

26/08/2018

ಗೆದ್ದಲಗಟ್ಟೆ ಈಶ್ವರ ಭಕ್ತರಲ್ಲಿ ಮನವಿ.27.8.2018ನೇ ಸೋಮವಾರ ಗ್ರಾಮಕ್ಕೆ ಹಿರೇಮಠ ಸ್ವಾಮಿಗ‌ಳು ಕೂಡ್ಲಿಗಿ.ಇವರು ಆಗಮಿಸಲಿದ್ದಾರೆ ಕಾರಣ ಈಶ್ವರ ದೇವಸ್ಥಾನದಲ್ಲಿ ಅಬಿಶೇಕ ಮತ್ತು ಪ್ರಸಾದ ವ್ಯವಸ್ಥೆ ಮಾಡಲು ತನು ,ಮನ, ಧನಸಹಾಯದೊಂದಿಗೆ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿ.ವಿವರಗಳಿಗೆ ನಾಗಲಿಂಗಸ್ವಾಮಿ GM 7899455790 ನಾಗರಾಜಯ್ಯ THM
9972526909 ಸಂಪರ್ಕಿಸಿ.

Use safety precautions on the road and Drive Carefully....
02/08/2018

Use safety precautions on the road and Drive Carefully....

ಗೆಳೆಯರೆ,ನಮ್ಮ ಕೂಡ್ಲಿಗಿ ತಾಲೂಕಿನಲ್ಲಿ ಅನೇಕ ಜನ ಪಾಳೆಗಾರರು ಆಳಿಹೋಗಿದ್ದಾರೆ. ಇತಿಹಾಸದಲ್ಲಿ ದಾಖಲಾಗಿದ್ದಾರೆ. ಜರಿಮಲೆ, ಗುಡೇಕೋಟೆ ಪ್ರಸಿದ್ಧ ...
23/05/2018

ಗೆಳೆಯರೆ,
ನಮ್ಮ ಕೂಡ್ಲಿಗಿ ತಾಲೂಕಿನಲ್ಲಿ ಅನೇಕ ಜನ ಪಾಳೆಗಾರರು ಆಳಿಹೋಗಿದ್ದಾರೆ. ಇತಿಹಾಸದಲ್ಲಿ ದಾಖಲಾಗಿದ್ದಾರೆ. ಜರಿಮಲೆ, ಗುಡೇಕೋಟೆ ಪ್ರಸಿದ್ಧ ಐತಿಹಾಸಿಕ ಸ್ಥಳಗಳಾಗಿವೆ. ಆದರೆ ಅವುಗಳ ಬಗ್ಗೆ ಮತ್ತಷ್ಟು ಸಂಶೋಧನೆ, ಉತ್ಖನನ ನಡೆಯಬೇಕಿದೆ.

ನಾನು 1990ರಲ್ಲಿ ಕೂಡ್ಲಿಗಿಗೆ ಬಂದಾಗ ತಾಲೂಕಿನ ಬಗ್ಗೆ ಅಷ್ಟೊಂದು ಯೋಚಿಸಿರಲಿಲ್ಲ. ಆದರೆ ನಿಧಾನವಾಗಿ ತಾಲೂಕು ತನ್ನೊಳಗಿನದನ್ನೆಲ್ಲ ನನ್ನೊಂದಿಗೆ ಮ್ತಾತನಾಡುತಿದೆಯೇನೋ ಅನಿಸತೊಡಗಿತು. ಬಹುತೇಕ ತಾಲೂಕಿನ ಎಲ್ಲ ಗ್ರಾಮಗಳನ್ನೂ ಸುತ್ತಿರುವೆ. ಅಲ್ಲಿಯ ವಿಶೇಷತೆಗಳನ್ನೂ ಗಮನಿಸಿರುವೆ. ನನಗೆ ಅತ್ಯಂತ ಆಸಕ್ತಿದಾಯಕವಾಗಿರುವುದು ಇತ್ತೀಚೆಗೆ ತಾಲೂಕಿನ ಪ್ರತಿಯೊಂದು ಗ್ರಾಮಗಳ ಹೆಸರುಗಳು. ಪ್ರತಿ ಗ್ರಾಮದ ಹಿಂದೆ ಒಂದೊಂದು ಕತೆ ಇದೆ, ಐತಿಹ್ಯವಿದೆ. ಯಾವುದೇ ಒಂದು ಗ್ರಾಮದ ಹೆಸರು ಬರಬೇಕಾದರೆ ಅದಕ್ಕೊಂದು ಹಿನ್ನೆಲೆಯಿರುತ್ತದೆ. ಆ ಹಿನ್ನೆಲೆಯಲ್ಲಿ ನಾನು ತಾಲೂಕಿನ ಎಲ್ಲ ಗ್ರಾಮಗಳನ್ನೂ ವಿಶೇಷವಾಗಿ ಗಮನಿಸುತ್ತಿರುವೆ.

ಈ ರೀತಿ ಗಮನಿಸಿದಾಗ ನನಗೆ ಕಂಡುಬಂದ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಈಗಾಗಲೇ ತಮಗೆಲ್ಲ ತಿಳಿದಿರುವಂತೆ ಇಲ್ಲಿ ಪಾಳೆಯಗಾರರು ಆಳ್ವಿಕೆ ನಡೆಸಿರುವುದರಿಂದಲೂ, ಹಲವಾರು ದಶಕಗಳಿಂದಲೂ ಅತಿಹೆಚ್ಚಿನ ಸಂಖ್ಯೆಯಲ್ಲಿ ವಾಲ್ಮೀಕಿ, ನಾಯಕ ಜನಾಂಗದವರು ವಾಸಿಸುತ್ತಿರುವುದರಿಂದಲೂ ಇಲ್ಲಿನ ಬಹುತೇಕ ಗ್ರಾಮಗಳ ಹೆಸರುಗಳು ಇತಿಹಾಸದೊಂದಿಗೆ ತಳುಕು ಹಾಕಿಕೊಂಡಿವೆ.

ನಾನು ಗಮನಿಸಿದಂತೆ ತಾಲೂಕಿನಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಹಟ್ಟಿ ಎಂಬ ಹೆಸರಿನಿಂದ ಕೊನೆಯಾಗುವ ಗ್ರಾಮಗಳಿವೆ, ಹಾಗೆಯೇ ಹಳ್ಳಿ, ಪುರ ಎಂಬ ಹೆಸರಿನಿಂದಲೂ ಕೊನೆಯಾಗುವ ಗ್ರಾಮಗಳಿವೆ. ಉದಾಹರಣೆಗೆ, ಯರ್ರೋಬಯ್ಯನಹಟ್ಟಿ, ಬೋರಯ್ಯನಹಟ್ಟಿ, ಗೊಲ್ಲರಹಟ್ಟಿ, ಕಾಮಯ್ಯನಹಟ್ಟಿ, ಕೆರೆಕಾವಲರಹಟ್ಟಿ, ಮ್ಯಾಸರಹಟ್ಟಿ, ಎಂ.ವಡ್ರಟ್ಟಿ, ಪಿಚ್ಚಾರಹಟ್ಟಿ, ಸಂಕಲಾಪುರದಹಟ್ಟಿ ರಾಮಸಾಗರಹಟ್ಟಿ ಹೀಗೇ ಮುಂದುವರೆಯುತ್ತದೆ. ಈ ಹೆಸರುಗಳಿಂದ ಕೊನೆಯಾಗುವ ಗ್ರಾಮಗಳು ತಮ್ಮ ಹೆಸರಿನೊಂದಿಗೆ ವಿಶೇಷತೆಯನ್ನು ಹೊಂದಿರುತ್ತವೆ.ಹಟ್ಟಿ ಎಂದರೆ ಪುಟ್ಟ ಗ್ರಾಮ ಎಂದರ್ಥ. ಆ ಗ್ರಾಮದ ದೇವರ ಹೆಸರೋ, ಅಲ್ಲಿ ವಾಸಿಸುತ್ತಿದ್ದ ಪ್ರಮುಖ ಮನೆತನದ ವೀರನ ಹೆಸರೋ ಅದಕ್ಕೆ ಜೋಡಣೆಯಾಗಿರುತ್ತದೆ.
ಇದಲ್ಲದೆ ಹಳ್ಳಿ ಎಂಬುದರಿಂದ ಕೊನೆಯಾಗುವ ಗ್ರಾಮಗಳೂ ಇವೆ. ಅಪ್ಪೇನಹಳ್ಳಿ, ಚಿಲುಮೆಹಳ್ಳಿ, ಕೆಂಚಮಲ್ಲನಹಳ್ಳಿ, ಹೊಸಹಳ್ಳಿ, ಶಾಂತನಹಳ್ಳಿ, ಬಿಷ್ಣಹಳ್ಳಿ, ಉಲ್ಲಾನಹಳ್ಳಿ ಹೀಗೆ. ಪುರ ಎಂಬ ಹೆಸರಿನಿಂದ ಕೊನೆಯಾಗುವಂತಹವೂ ಸಾಕಷ್ಟಿವೆ. ರಾಯಾಪುರ, ಕಸಾಪುರ, ಸಿದ್ದಾಪುರ, ಚಂದ್ರಶೇಖರಪುರ, ಇಮಡಾಪುರ, ತಿಮ್ಮಲಾಪುರ, ಶಿವಪುರ, ಗಜಾಪುರ ಹೀಗೇ. ಇಲ್ಲಿ ಪುರ ಎಂದರೆ ಪಟ್ಟಣ ಎಂಬರ್ಥವಿದೆ. ಬಹುಶ: ಪಾಳೆಯಗಾರರ ಕಾಲದ ಪ್ರಮುಖ ಸ್ಥಳಗಳಾಗಿರುವ ಸಾಧ್ಯತೆಗಳಿವೆ.

ನಾಗರು ಎಂಬ ಹೆಸರಿನಿಂದ ಆರಂಭಗೊಳ್ಳುವ ಗ್ರಾಮಗಳು ನನಗೆ ವಿಶೇಷವೆನಿಸಿದವು. ನಾಗರಹುಣಸೆ ಹಾಗೂ ನಾಗರಕಟ್ಟೆ. ಇಲ್ಲಿ ನಾಗರು ಎಂಬ ಜನಾಂಗವನ್ನು ಪ್ರತಿನಿಧಿಸುವುದಾದರೂ ಬಹುಶ: ನಾಗದೇವತೆಗಳನ್ನು ಪೂಜಿಸುವ ಪ್ರಮುಖ ಸ್ಥಳಗಳೆಂಬ ಹಿನ್ನೆಲೆಯಲ್ಲಿ ಈ ಗ್ರಾಮಗಳ ಹೆಸರುಗಳು ಬಂದಿರಲೂಬಹುದು.

ಈಗ ಕೆಲವು ಗ್ರಾಮಗಳ ಹೆಸರುಗಳನ್ನು ಪರಿಶೀಲಿಸೋಣ. ಗುಡೇಕೋಟೆ ಪ್ರಮುಖವಾದ ಸ್ಥಳ. ಈ ಹೆಸರಿನ ಹಿನ್ನೆಲೆ ಗಮನಿಸಿದಾಗ ಗುಡ್ಡವನ್ನು ಈ ಸ್ಥಳ ಹೊಂದಿರುವುದರಿಂದಾಗಿ, ಕೋಟೆಯನ್ನು ಹೊಂದಿರುವುದರಿಂದಾಗಿ ಗುಡ್ಡದ ಕೋಟೆ ಗುಡೇಕೋಟೆ ಎಂಬ ಹೆಸರು ಬಂದಿರಬಹುದಾಗಿದೆ.

ಯರ್ರೋಬಯ್ಯನಹಟ್ಟಿ ಒಂದು ಗ್ರಾಮ. ಇಲ್ಲಿ ಯರ್ರೋಬಯ್ಯ ಎಂಬುದು ವ್ಯಕ್ತಿಯ ಹೆಸರು. ಈ ಗ್ರಾಮದಲ್ಲಿ ಹಿಂದೆ ಒಂದು ಪ್ರಮುಖ ಮನೆತನದ ವೀರನ ಅಥವಾ ಪ್ರಮುಖನ ಹೆಸರನ್ನೇ ಗ್ರಾಮಕ್ಕೆ ಇಟ್ಟೀರುವ ಸಾಧ್ಯತೆ ಇದೆ. ಹೀಗಾಗಿ ಇದು ಯರ್ರೋಬಯ್ಯನ ಹಟ್ಟಿ ಎಂಬ ಹೆಸರು ಬಂದಿರಬಹುದಾಗಿದೆ. ಬೋರಯ್ಯನಹಟ್ಟಿ ಎಂಬ ಹೆಸರೂ ಇದೇ ರೀತಿ ಬಂದಿರುವ ಸಾಧ್ಯತೆಗಳಿವೆ.

ಶ್ರೀಕಂಠಾಪುರ ಗ್ರಾಮದ ಹೆಸರೂ ಸಹ ದೇವರ ಹೆಸರಿನಿಂದ ಬಂದುದಾಗಿದೆ. ಶ್ರೀಕಂಠ ಎಂಬುದು ಶಿವನ ಹೆಸರು. ಶಿವನ ದೇವಾಲಯ ಇರುವ ಗ್ರಾಮವಾಗಿದ್ದುದರಿಂದ ಆ ಹೆಸರನ್ನಿರಿಸಿರಬಹುದಾಗಿದೆ.

ನನಗೆ ತುಂಬ ಆಸಕ್ತಿದಾಯಕವಾಗಿ ಕಾಣಿಸಿದ ಹೆಸರೆಂದರೆ ಕುದುರೆಡವು. ಈ ಕುರಿತು ಪರಿಶೀಲಿಸಿದಾಗ, ಕುದಿರ್ ಎಂದರೆ ಧಾನ್ಯವನ್ನು ಸಂಗ್ರಹಿಸುವ ಮಣ್ಣಿನ ಕಣಜ ಎಂಬರ್ಥವಿದೆ. ಎಡೆ ಎಂದರೆ ಸ್ಥಳ ಎಂದರ್ಥ್ ಹೀಗಾರಿ ಕುದಿರ್ + ಎಡೆ = ಕುದಿರೆಡವು ಎಂಬ ಹೆಸರು ಬಂದಿದೆ. ಈಗಲೂ ಈ ಗ್ರಾಮದಲ್ಲಿ ನಾನು ಪರಿಶೀಲಿಸಿದಂತೆ ಮಣ್ಣಿನ ಕಣಜಗಳಿವೆ(ವಡೇವು). ಇದು ತುಂಬ ಆಸಕ್ತಿದಾಯಕ ಹೆಸರು.

ಇನ್ನೂ ಹಂಚಿಕೊಳ್ಳುವ ವಿಷಯಗಳು ಬಹಳ ಇವೆ. ಇವತ್ತಿಗೆ ಇಷ್ಟು ಸಾಕು. ಮುಂದಿನ ದಿನಗಳಲ್ಲಿ ಮತ್ತೆ ಬೇರೆ ಬೇರೆ ಗ್ರಾಮಗಳ ಕುರಿತು ಹಂಚಿಕೊಳ್ಳುತ್ತೇನೆ.

ಏನೇ ಇರಲಿ ನಮ್ಮ ತಾಲೂಕಿನ ಇತಿಹಾಸವನ್ನು ಕೆದಕಿದಷ್ಟು ಅನೇಕ ವಿಷಯಗಳು ಹೊರಬಹುತ್ತವಲ್ಲ, ಇಂತಹ ಸ್ಥಳದಲ್ಲಿ ನಾನಿದ್ದೀನಲ್ಲ. ಅದೇ ನನಗೆ ಹೆಮ್ಮೆ. ಕೂಡ್ಲಿಗಿ ತಾಲೂಕಿನ ಮಣ್ಣಿಗೆ ನನ್ನ ನಮನಗಳು.
ಧನ್ಯವಾದಗಳು,

ƘօԵɾҽՏհ ցҽժժɑӀɑցɑԵԵҽ

Good morning friends
10/04/2018

Good morning friends

29/03/2018

GM

23/02/2018

.......✍🏻
*ಬರೆದಿಟ್ಟಂತೆ ಜೀವನ ಮಾಡಲು ಯಾರಿಗೂ ಸಾಧ್ಯವಿಲ್ಲ*
*ಆದರೆ........*
*ಮಾಡಿರುವ ಜೀವನವನ್ನು*
*ಯಾರಾದರೂ* *ಬರೆದಿಡಬಹುದಂತ ಜೀವನ ಮಾಡಲು ಸಾಧ್ಯಇದೆ*
*🙏🌻ಶುಭೋದಯ🌻🙏*
*🙏🙏ಶುಭದಿನ🙏🙏*

Address

Kudligi

Telephone

+919591074965

Website

Alerts

Be the first to know and let us send you an email when Geddalagatte Friends posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Geddalagatte Friends:

Share