23/03/2026
ಸುಗ್ಗಿಮಾರಿಪೂಜೆ ಆಮಂತ್ರಣ 🙏🏻
ಕರಾವಳಿ ಕರ್ನಾಟಕದ ಸಪ್ತ ಮಹಾ ಜಾತ್ರೆಯಲ್ಲಿ ಒಂದಾದ ಇತಿಹಾಸ ಪ್ರಸಿದ್ದ
" ಕಾಪು ಕಾಲಾವಧಿ ಸುಗ್ಗಿ ಜಾತ್ರೆ 2026 "
ಮಾರ್ಚ್ 24 ಮಂಗಳವಾರ ಹಾಗೂ 25 ಬುಧವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣಿಯಿಂದ ಜರಗಲಿದೆ.
ಕಾರ್ಯಕ್ರಮ ವಿವರ :
ಮಾರ್ಚ್ 24 ಮಂಗಳವಾರ ರಾತ್ರಿ ಕಾಪು ಶ್ರೀ ವೆಂಕಟರಮಣ ದೇವಳದಲ್ಲಿ ಹೂವಿನ ಪೂಜೆ , ನಂತರ ಅಲಂಕೃತಗೊಂಡ ಶ್ರೀ ದೇವಿಯನ್ನು ರಜತ ರಥದಲ್ಲಿ ಕುಳ್ಳಿರಿಸಿ ಕೊಂಬು,ಕಹಳೆ, ತಟ್ಟಿರಾಯ ವೇಷ, ಚೆಂಡೆ, ವಿವಿಧ ವಾಧ್ಯ ತಂಡಗಳೊಂದಿಗೆ ವೈಭವೋಪೇತ ರಜತ ರಥ ಮೆರವಣಿಗೆ (ಕಾಪು ವೆಂಕಟರಮಣ ದೇವಳದಿಂದ ಹಳೇ ಮಾರಿಯಮ್ಮ ದೇವಳದವರೆಗೆ) ಜರಗಲಿದೆ. ನಂತರ ಶ್ರೀ ದೇವಿಯನ್ನು ದೇವಳದ ಮುಂಭಾಗದ ಗೋಪುರದ ಮೇಲೆ ರಜತ ಉಯ್ಯಾಲೆಯಲ್ಲಿ ಕುಳ್ಳಿರಿಸಿ ಗೋಪುರೋತ್ಸವ, ಸಿಡಿಮದ್ದು ಪ್ರದರ್ಶನ, ರಾತ್ರಿ 11.30 ಗಂಟೆಗೆ ಮಾರಿ ಪೂಜೆ, ದರ್ಶನ ಸೇವೆ, ಅಭಯ ವಾಕ್ಯ ಪ್ರಸಾದ. ಹಾಗೆಯೇ ಮಾರ್ಚ್ 25 ಬುಧವಾರ ಮಧ್ಯಾಹ್ನ ಮಹಾಪೂಜೆ, ದರ್ಶನ ಸೇವೆಯೊಂದಿಗೆ ಸುಗ್ಗಿ ಜಾತ್ರೆ ಸಂಪನ್ನಗೊಳ್ಳಲಿದೆ.