Sri Udaneshwara Temple, Perdala

Sri Udaneshwara Temple, Perdala Perdala Temple, the abode of Lord Udaneshwara swamy along with Lord Kuttichatha & Sri Shastara swamy

ಪೆರಡಾಲ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಪೂಜೆಪೆರಡಾಲ, 12-08-2016:ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ಜರಗ...
14/08/2016

ಪೆರಡಾಲ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಪೂಜೆ

ಪೆರಡಾಲ, 12-08-2016:
ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ಜರಗಿತು. ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಪೂಜಾ ವಿಧಿವಿಧಾನಗಳನ್ನು ಪೂರೈಸಿದರು. ವಿದ್ವಾನ್ ಕೇಕಣಾಜೆ ಕೇಶವ ಭಟ್ ಪ್ರವಚನವನ್ನು ನಡೆಸಿಕೊಟ್ಟರು. ನೂರಾರು ಮಾತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ “ತ್ರಿಶಂಕು ಸ್ವರ್ಗ” ಜರಗಿತು.

http://perdalatemple.com/news-events/perdala-kshetradalli-varamahalakshmi-pooje-12-08-2016/

06/08/2016

ಪೆರಡಾಲದಲ್ಲಿ 12ರಂದು ಶ್ರೀ ವರಮಹಾಲಕ್ಷ್ಮೀ ಪೂಜೆ

ಪೆರಡಾಲ, 06-08-2016:
ಪೆರಡಾಲ ಶ್ರೀ ಉದನೇಶ್ವರ ಸ್ವಾಮಿ ಸನ್ನಿಧಿಯಲ್ಲಿ 12ನೇ ತಾರೀಕು ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮೀ ಪೂಜೆಯು ನಡೆಯಲಿರುವುದು. ಬೆಳಗ್ಗೆ 9 ಘಂಟೆಗೆ ಪೂಜೆ ಪ್ರಾರಂಭವಾಗಲಿರುವುದು. ಈ ಸಂದರ್ಭದಲ್ಲಿ ‘ವರಮಹಾಲಕ್ಷ್ಮೀ ಪೂಜೆಯ ಮಹತ್ವ’ ಎಂಬ ವಿಷಯದಲ್ಲಿ ವಿದ್ವಾನ್ ಕೇಕಣಾಜೆ ಕೇಶವ ಭಟ್ ಪ್ರವಚನ ನೀಡಲಿದ್ದಾರೆ. ಅಪರಾಹ್ನ 2.30ರಿಂದ ‘ತ್ರಿಶಂಕು ಸ್ವರ್ಗ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚೆಂಡೆ ಮದ್ದಳೆಯಲ್ಲಿ ಶಂಕರನಾರಾಯಣ ಭಟ್ ಪದ್ಯಾಣ, ಲಕ್ಷ್ಮೀನಾರಾಯಣ ರಾವ್ ಅಡೂರು ಹಾಗೂ ಮುಮ್ಮೇಳದಲ್ಲಿ ವಿದ್ವಾನ್ ಕೃಷ್ಣ ಕುಮಾರ್ ಆಚಾರ್ಯ ಮೈಸೂರು, ವಿದ್ವಾನ್ ಕೇಕಣಾಜೆ ಕೇಶವ ಭಟ್ಟ, ತಾರಾನಾಥ ವರ್ಕಾಡಿ, ಸುಬ್ರಾಯ ಹೊಳ್ಳ ಕಾಸರಗೋಡು, ರವಿರಾಜ ಪನೆಯಾಲ ಮೊದಲಾದವರು ಭಾಗವಹಿಸಲಿರುವರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

http://perdalatemple.com/news-events/perdaladalli-12randu-sri-varamahalakshmi-pooje/

ಪೆರಡಾಲದಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞ-ಆಮಂತ್ರಣ ಪತ್ರಿಕೆ ಬಿಡುಗಡೆಬದಿಯಡ್ಕ, 27-03-2016:ಪೆರಡಾಲ: ಕುಂಬಳೆ ಸೀಮೆಯ ಪ್ರಮುಖ ಕ್ಷೇತ್ರಗಳಲ್ಲ...
28/03/2016

ಪೆರಡಾಲದಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞ-ಆಮಂತ್ರಣ ಪತ್ರಿಕೆ ಬಿಡುಗಡೆ

ಬದಿಯಡ್ಕ, 27-03-2016:
ಪೆರಡಾಲ: ಕುಂಬಳೆ ಸೀಮೆಯ ಪ್ರಮುಖ ಕ್ಷೇತ್ರಗಳಲ್ಲೊಂದಾದ ಬದಿಯಡ್ಕ ಸಮೀಪದ ಪೆರಡಾಲ ಶ್ರೀ ಉದನೇಶ್ವರ ದೇವಾಲಯದಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞವು ಹಾಗೂ ಶ್ರೀಮದ್ಭಾಗವತ ಪುರಾಣಾಧಾರಿತ ಯಕ್ಷಗಾನ ಬಯಲಾಟ ಸಪ್ತಾಹವು ಮೇ. 11ರಿಂದ 18ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಪೂರ್ವಭಾವಿಯಾಗಿ ಶ್ರೀ ಉದನೇಶ್ವರ ಸೇವಾ ಸಮಿತಿಯ ಸಭೆಯು ಆದಿತ್ಯವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶಿವರಾಮಭಟ್ ಅವರು ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನು ನೆರವೇರಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಆಡಳಿತ ಮೊಕ್ತೇಸರ ವೆಂಕಟಕೃಷ್ಣ ಮಕ್ಕಿಕ್ಕಾನ, ಜಯದೇವ ಖಂಡಿಗೆ, ಶಿವರಾಮ ಪೆರ್ಮುಖ, ಗಂಗಾಧರ ಗೋಳಿಯಡ್ಕ, ಟಿ.ಕೆ.ನಾರಾಯಣ ಭಟ್ ಪಂಜಿತ್ತಡ್ಕ, ಜಗನ್ನಾಥ ರೈ ಪೆರಡಾಲ ಗುತ್ತು, ನೇಮಿರಾಜ ರೈ ಕೊಡಿಯಡ್ಕ, ಕ್ಷೇತ್ರದ ನೌಕರರು ಹಾಗೂ ಭಕ್ತ ಜನರು ಉಪಸ್ಥಿತರಿದ್ದರು.

http://perdalatemple.com/news-events/perdaladalli-srimadbhagavatha-sapthaha-yajna-invitation-release/

Address

PERADALA
Kasaragod
671551

Alerts

Be the first to know and let us send you an email when Sri Udaneshwara Temple, Perdala posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Udaneshwara Temple, Perdala:

Share

Category