Shri Guru abhinava revansiddeshwar mahaswamigal-Rayanal

  • Home
  • India
  • Hubli
  • Shri Guru abhinava revansiddeshwar mahaswamigal-Rayanal

Shri Guru abhinava revansiddeshwar mahaswamigal-Rayanal ಸದ್ಗುರು ಶ್ರೀ ರೇವಣ್ಣ ಸಿದೇಶ್ವರ ಶಿವಯೋಗಿಗಳ ಮಹಾ ಮಂದಿರ -ರಾಯನಾಳ

08/01/2026
06/09/2021
14/05/2021

*ವಿಶ್ವಮಾನವತೆ ಬೆಳಗಲಿ*
●●●●●●●●●●●●●●●●●

ಧರ್ಮದ ಮೂಲ
ದಯವೆಂದು ಸಾರಿ
ಅಂದೇ ಜಗದ ಕಣ್ಣು
ತೆರೆಸಿದ ವಿಶ್ವಜ್ಯೋತಿ ನೀನು||

ನಿಜದ ನಿಲುವಿನಲಿ
ಬದುಕು ಸಾಗಿಸಿ
ನುಡಿದಂತೆ ನಡೆದು
ನುಡಿ,ನಡೆ ಒಂದಾಗಿ ಅರುಹಿದ
ನಿಜ ಶರಣ ನೀನು ||

ಸಮಸಮಾಜದ ಸಮತಲದಲಿ
ಸರ್ವರೂ ಸಮಾನರೆಂದು ಹೇಳಿ
ಜಾತಿಯ ಗೀಳನು ಸೀಳಿ
ಸಮತೆ ಸಾರಿದ ಸರ್ವಶ್ರೇಷ್ಠ ಮಾನವತಾವಾದಿ ನೀನು ||

ಢಾಂಬಿಕರ ಡೊಂಕುಗಳನು
ಖಂಡಿಸಿ,ಧಂಡಿಸಿ ಮೂಢರ ಮತಿಗೆ
ನಿಜಭಕ್ತಿಯ,ಕಾಯಕ ಶಕ್ತಿಯ
ತೋರಿದ ಮಹಾಮಹಿಮ ನೀನು ||

ಇಂದು ಹುಸಿಮಾತುಗಳನೆ ಉಸಿರಾಗಿಸಿಕೊಂಡು,ಧರ್ಮ-ಜಾತಿಗಳ ಅಮಲಿನಲಿ ನನ್ನದೆ ಮೇಲು-ಮಿಗಿಲು
ಎಂದು ಹೊರಳಾಡುವವರಿಗೆ ಎಲ್ಲಿಯ ಅಂತರಂಗ ಶುದ್ಧಿ ಎಲ್ಲಿಯ ಬಹಿರಂಗ ಶುದ್ಧಿ ||

ಸರ್ವಕಾಲಕೂ ಸಲ್ಲುವ ನಿನ್ನ
ತತ್ವಾದರ್ಶಗಳು ಇನ್ನಾದರೂ
ನಮ್ಮಲ್ಲಿ ಮನೆ ಮಾಡಿರುವ
ದ್ವೇಷ-ಅಸೂಯೆ ಅಂದಕಾರವನು
ಅಳಿಸಲಿ ಸರ್ವರಲಿ ವಿಶ್ವಮಾನವತೆಯನು ಬೆಳೆಸಲಿ
●●●●●●●●●●●●●●●●●●
‌‌‌‌‌‌‌ (೨)
🌺 *ವಿಶ್ವಗುರು ಬಸವಣ್ಣ* 🌺
●●●●●●●●●●●●●●●●●●

ಮಾದರಸನ ಮಗನಾಗಿ
ಕಾಯಕದ ಹರಿಕಾರನಾಗಿ
ಲೋಕದ ಡೊಂಕನು ತಿದ್ದಿದ
ವಿಶ್ವ ಜ್ಯೋತಿಯಾಗಿ
ಜಗವ ಬೆಳಗಿದ ಬಸವಣ್ಣ||

ಶರಣರಿಗೆ ಸತಿಯಾಗಿ
ಅಂತರಂಗಕ್ಕೆ ಶುಧ್ದಿಯಾಗಿ
ಜಾತಿ-ಭೇದಕ್ಕೆ ಬದ್ದ ವೈರಿಯಾಗಿ
ಸಮಾಜದ ಕೊಳೆ ತೊಳೆದ
ವಿಶ್ವಗುರು-ಬಸವಣ್ಣ||

ಕರದೊಳ್ ಲಿಂಗವನಿರಿಸಿ
ಹೃದಯದಲಿ ಸಂಗಮನಿರಿಸಿ
ನೂಸಲಿಗೆ ವಿಭೂತಿ ಧರಿಸಿ
ದೇಹವ ದೇಗುಲ ಮಾಡಿ
ಕಾಯಕ ಧರ್ಮವೇ ಸತ್ಯ
ಉಳಿದುದೆಲ್ಲವೂ ಮಿಥ್ಯ
ಎಂದು ಸಾರಿದ ಕಾಯಕಯೋಗಿ ಬಸವಣ್ಣ||

ಬಿಜ್ಜಳನ ವಿತ್ತ ಭಂಡಾರಿ
ಕಲ್ಯಾಣದ ಭಕ್ತಿ ಭಂಡಾರಿ
ಮಹಾ ಮನೆಯ ರೂವಾರಿ
೧೨ನೆ ಶತಮಾನದ ಕ್ರಾಂತಿಕಾರಿ ಬಸವಣ್ಣ||

ಲಿಂಗವ ಮೆಚ್ಚಿ
ವಚನದ ದೀಪವ ಹಚ್ಚಿ
ನಿತ್ಯದಾಸೋಹದ ಮಂತ್ರ ಸ್ತುತಿಸಿ
ಧರ್ಮದ ಮೂಲ ದಯವೆಂದು ಜಪಿಸಿ
ಶರಣ ಸಂಸ್ಕೃತಿಗೆ ಶರಣು ಶರಣೆಂದ
ಮಹಾಶರಣ ಬಸವಣ್ಣ||

✍️ *ಮಲ್ಲಿಕಾರ್ಜುನ ಅರಬಿ*
🌸🌸🌸🌸🌸🌸🌸🌸🌸
( *ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು* )

Address

Hubli

Telephone

+919686426583

Website

Alerts

Be the first to know and let us send you an email when Shri Guru abhinava revansiddeshwar mahaswamigal-Rayanal posts news and promotions. Your email address will not be used for any other purpose, and you can unsubscribe at any time.

Share