Vittal and Hanuman Mandir Kuragund

Vittal and Hanuman Mandir Kuragund This page Describes about the Devotional activities which are held by the devotees of Lord Virtual and Rukmini Devi and Lord Hanuman Ji

07/01/2024
07/01/2024

ಅವರನ್ನು ಕುರುಡು ಎಂದು ಏಕೆ ಕರೆಯುತ್ತಾರೆ? ಇಂದು 75 ವರ್ಷಕ್ಕೆ ಕಾಲಿಟ್ಟ ಮಹಾನ್ ಗುರುದೇವ ಅವರು ಹುಟ್ಟಿನಿಂದಲೇ ಕುರುಡರು. ಶಾಲೆಯಲ್ಲಿ ಪ್ರತಿ ತರಗತಿಯಲ್ಲಿ ಶೇ.99ಕ್ಕಿಂತ ಕಡಿಮೆ ಅಂಕ ಪಡೆದಿರಲಿಲ್ಲ. ಅವರು 230 ಪುಸ್ತಕಗಳನ್ನು ಬರೆದಿದ್ದಾರೆ. ಶ್ರೀರಾಮ ಜನ್ಮಭೂಮಿ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ 441 ಸಾಕ್ಷ್ಯಗಳನ್ನು ನೀಡುವ ಮೂಲಕ ಭಗವಾನ್ ಶ್ರೀರಾಮ ಇಲ್ಲೇ ಜನಿಸಿದನೆಂದು ಸಾಬೀತುಪಡಿಸಿದ್ದು ದೊಡ್ಡ ವಿಷಯ
ಅವರು ನೀಡಿದ 441 ಸಾಕ್ಷ್ಯಗಳ ಪೈಕಿ 437 ಸಾಕ್ಷ್ಯಗಳನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಆ ದಿವ್ಯ ಪುರುಷನ ಹೆಸರು ಜಗದ್ಗುರು ಶ್ರೀ ರಾಮಭದ್ರಾಚಾರ್ಯರು. 300 ವಕೀಲರಿಂದ ತುಂಬಿದ ನ್ಯಾಯಾಲಯದಲ್ಲಿ, ಎದುರಾಳಿ ವಕೀಲರು ಗುರುದೇವ್ ಅವರನ್ನು ಮೌನಗೊಳಿಸಲು ಮತ್ತು ಕೋಪಗೊಳಿಸಲು ಎಲ್ಲಾ ಪ್ರಯತ್ನ ಮಾಡಿದರು. ರಾಮಚರಿತ್ ಮಾನಸ್ ನಲ್ಲಿ ರಾಮಜನ್ಮಭೂಮಿಯ ಪ್ರಸ್ತಾಪವಿದೆಯೇ ಎಂದು ಅವರನ್ನು ಕೇಳಲಾಯಿತು.
ಗುರುದೇವ ಶ್ರೀ ರಾಮಭದ್ರಾಚಾರ್ಯಜಿ ಸಂತ ತುಳಸಿದಾಸರ ಚೌಪಾಯಿಯನ್ನು ನಿರೂಪಿಸಿದರು ಅದರಲ್ಲಿ ಶ್ರೀ ರಾಮಜನ್ಮಭೂಮಿಯನ್ನು ಉಲ್ಲೇಖಿಸಲಾಗಿದೆ. ಇದಾದ ನಂತರ ವಕೀಲರು ಶ್ರೀರಾಮ ಇಲ್ಲಿಯೇ ಜನಿಸಿದರು ಎಂಬುದಕ್ಕೆ ವೇದಗಳಲ್ಲಿರುವ ಪುರಾವೆ..? ಇದಕ್ಕೆ ಉತ್ತರವಾಗಿ ಶ್ರೀ ರಾಮಭದ್ರಾಚಾರ್ಯಜಿಯವರು ಅಥರ್ವವೇದದ ಎರಡನೇ ಮಂತ್ರವಾದ ದಶಮ ಕಾಂಡದ 31ನೇ ಭಾಷಾಂತರದಲ್ಲಿ ಇದರ ಪುರಾವೆ ದೊರೆಯುತ್ತದೆ ಎಂದರು. ಇದನ್ನು ಕೇಳಿದ ಮುಸ್ಲಿಂ ನ್ಯಾಯಾಧೀಶರಾಗಿದ್ದ ಪೀಠದ ನ್ಯಾಯಾಧೀಶರು, "ಸರ್, ನೀವು ದೈವಿಕ ಆತ್ಮ" ಎಂದು ಹೇಳಿದರು.
ರಾಮ ಹುಟ್ಟಿಲ್ಲ ಎಂದು ಸೋನಿಯಾ ಗಾಂಧಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದಾಗ, ಶ್ರೀ ರಾಮಭದ್ರಾಚಾರ್ಯಜಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದರು, "ನಿಮ್ಮ ಗುರು ಗ್ರಂಥ ಸಾಹಿಬ್‌ನಲ್ಲಿ ರಾಮನ ಹೆಸರನ್ನು 5600 ಬಾರಿ ಉಲ್ಲೇಖಿಸಲಾಗಿದೆ." ಖ್ಯಾತ ಟಿವಿ ಚಾನೆಲ್ ಪತ್ರಕರ್ತ ಸುಧೀರ್ ಚೌಧರಿ ಅವರಿಗೆ ನೀಡಿದ ಸಂದರ್ಶನದಲ್ಲಿ ಶ್ರೀ ರಾಮಭದ್ರಾಚಾರ್ಯರು ಈ ಎಲ್ಲಾ ವಿಷಯಗಳನ್ನು ಹೇಳಿದ್ದಾರೆ.
ಈ ಕುರುಡು ಸಂತ ಮಹಾತ್ಮನಿಗೆ ಇಷ್ಟೊಂದು ಮಾಹಿತಿ ಸಿಕ್ಕಿದ್ದು ಹೇಗೆ ಎಂಬುದು ಸಾಮಾನ್ಯರಿಗೆ ಅರ್ಥವಾಗದ ವಿಚಾರ. ವಾಸ್ತವದಲ್ಲಿ ಅವರು ಕೆಲವು ದೈವಿಕ ಶಕ್ತಿಯನ್ನು ಹೊಂದಿರುವ ಅವತಾರ. ಅವರನ್ನು ಕುರುಡು ಎಂದು ಕರೆಯುವುದೂ ಸೂಕ್ತವಲ್ಲ. ಏಕೆಂದರೆ ಒಮ್ಮೆ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರಿಗೆ "ನಿಮ್ಮ ದರ್ಶನಕ್ಕೆ ನಾನು ವ್ಯವಸ್ಥೆ ಮಾಡಬಲ್ಲೆ" ಎಂದು ಹೇಳಿದ್ದರು. ಆಗ ಈ ಸಾಧು ಸಂತರು, "ನನಗೆ ಜಗತ್ತನ್ನು ನೋಡಲು ಇಷ್ಟವಿಲ್ಲ" ಎಂದು ಉತ್ತರಿಸಿದರು.
ಮುಂದೆ ನಾನು ಕುರುಡನಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ನಾನು ಕುರುಡು ಎಂಬ ರಿಯಾಯತಿಯನ್ನು ಎಂದಿಗೂ ತೆಗೆದುಕೊಂಡಿಲ್ಲ. ನಾನು ಶ್ರೀರಾಮನನ್ನು ಬಹಳ ಹತ್ತಿರದಿಂದ ನೋಡುತ್ತೇನೆ. ಇಂತಹ ಪವಿತ್ರ, ಅದ್ಭುತ ಪ್ರತಿಕ್ರಿಯೆಗೆ ಸೆಲ್ಯೂಟ್, ರಾಮ ಭಕ್ತ ಜೈ ಶ್ರೀ ರಾಮ್.

ಇಂತಹ ಸಂತರಿಂದ ಮಾತ್ರ ನಮ್ಮ ಸನಾತನ ಸಂಸ್ಕೃತಿ ಮತ್ತು ಅಸ್ತಿತ್ವವು ಸುಸ್ಥಿರವಾಗಿದೆ.ಇಂತಹ ಅನೇಕ ಸಂತರಿದ್ದಾರೆ, ಅವರನ್ನು ಯಾವಾಗಲೂ ಗೌರವಿಸಿ..
ಜೈ ಶ್ರೀರಾಮ್..

ನಿತ್ಯಸತ್ಯ ವಾಲ್ ನಿಂದ..

ಬಸವರಾಜ್ ಗುಬ್ಬಿ

" ಶ್ರೀ ಹರೇ  ಕೃಷ್ಣ "----------------------------ಕೃಷ್ಣ ಬಂದಾನೇಎಂದರೇ ಸಾಕುಮನವೆಲ್ಲಾ  ರೋಮಾಂಚನವಯೋಮಾನ : ವಸಂತಯಾನಹರೇ ಕೃಷ್ಣ : ಹರೇ ಕೃ...
29/08/2020

" ಶ್ರೀ ಹರೇ ಕೃಷ್ಣ "
----------------------------
ಕೃಷ್ಣ ಬಂದಾನೇ
ಎಂದರೇ ಸಾಕು
ಮನವೆಲ್ಲಾ ರೋಮಾಂಚನ
ವಯೋಮಾನ : ವಸಂತಯಾನ
ಹರೇ ಕೃಷ್ಣ : ಹರೇ ಕೃಷ್ಣ: ಹರೇ ಕೃಷ್ಣ..1

ಯಾವ ನೋವೆಗಳಿರಲಿ
ಯಾವ ಶೂಲೇಗಳಿರಲಿ
ಕೃಷ್ಣನ ನೆನೆದರೆ ಸಾಕು
ಸರ್ವವವೂ ನಿರ್ಗಮನ
ಹರೇ ಕೃಷ್ಣ : ಹರೇ ಕೃಷ್ಣ : ಹರೇ ಕೃಷ್ಣ..2

ಸರ್ವ ಶಕ್ತ : ಸರ್ವ ಸಮರ್ಥ
ಸರ್ವಂತರ್ಯಾಮಿ : ಸರ್ವಾನುಭವಿ
ಸರ್ವ ಜ್ಞಾನಿ : ತ್ರಿಕಾಲ ಜ್ಞಾನಿ
ಹರೇ ಕೃಷ್ಣ : ಹರೇ ಕೃಷ್ಣ : ಹರೇ ಕೃಷ್ಣ..3

" ಓಂ ಶ್ರೀ ಕೃಷ್ಣಾಯ ನಮಃ "
🌺🌺🌺🌺🙏🙏🙏🙏🌺🌺🌺🌺
ಎನ್ಆರ್ ಸಂಗ

ಶ್ರೇಷ್ಠ ಭಗವಧ್ಭಕ್ತನ ಲಕ್ಷಣಗಳೇನು ?ಯಾರು ಎಲ್ಲಾ ಜೀವಿಗಳ ಹಿತವನ್ನೇ ಬಯಸುತ್ತಾರೋ, ಅಸೂಯೆ, ಮತ್ಸರರಹಿತರೋ ಇಂದ್ರಿಯಗಳನ್ನು ತಮ್ಮ ವಶದಲ್ಲಿಟ್ಟುಕ...
26/08/2020

ಶ್ರೇಷ್ಠ ಭಗವಧ್ಭಕ್ತನ ಲಕ್ಷಣಗಳೇನು ?
ಯಾರು ಎಲ್ಲಾ ಜೀವಿಗಳ ಹಿತವನ್ನೇ ಬಯಸುತ್ತಾರೋ, ಅಸೂಯೆ, ಮತ್ಸರರಹಿತರೋ ಇಂದ್ರಿಯಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿರುವರೋ, ನಿಸ್ಪ್ರುಹರೋ, ಶಾಂತರೋ ಅವರೇ ಉತ್ತಮ ಭಗವದ್ಭಕ್ತರು.
ಕಾಯಾ ವಾಚಾ ಮನಸಾ ಯಾರು ಪರರನ್ನು ಪೀಡಿಸುವುದಿಲ್ಲವೋ ಪರರಿಂದ ಏನನ್ನೂ ಪಡೆದುಕೊಳ್ಳುವುದಿಲ್ಲವೋ (ಗುಣವೊಂದನ್ನುಬಿಟ್ಟು) ಅವರನ್ನೇ ಉತ್ತಮ ಭಗವದ್ಭಕ್ತರೆಂದು ತಿಳಿಯಬೇಕು.
ಯಾರ ಮನಸ್ಸು ಭಗವಂತನನ್ನು ಕುರಿತಾದ ಸತ್ಕಥೆಗಳನ್ನೇ ಕೇಳಲಿಚ್ಚಿಸುತ್ತವೆಯೋ ಅಂತಹವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.
ತಂದೆ ತಾಯಿಗಳ ಸೇವೆಯನ್ನು ಪಾರ್ವತೀ ಪರಮೇಶ್ವರರ ಪೂಜೆಯಂದರಿತು ಯಾರು ಮಾಡುವರೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.
ವ್ರತ ನಿರತರನ್ನು ಮತ್ತು ಯತಿಗಳ ಪರಿಚರ್ಯಯೆನ್ನು ಯಾರು ಮಾಡುತ್ತಾರೋ ಮತ್ತು ಪರನಿಂದೆಯನ್ನು ಯಾರು ಮಾಡುವುದಿಲ್ಲವೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.
ಎಲ್ಲರಲ್ಲೂ ಯಾರು ಹಿತವಾಕ್ಯಗಳನ್ನೇ ನುಡಿಯುತ್ತಾರೋ ಮತ್ತು ಈ ಲೋಕದಲ್ಲಿ ಅವಗುಣಗಳನ್ನು ಬಿಟ್ಟು ಗುಣಗಳನ್ನೇ ಗ್ರಹಿಸುತ್ತಾರೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.
ಎಲ್ಲ ಜೀವಿಗಳನ್ನೂ ತನ್ನಂತೆ ಯಾರು ತಿಳಿಯುತ್ತಾರೋ ಮತ್ತು ಶತ್ರುವಿನಲ್ಲೂ ಮಿತ್ರನಲ್ಲೂ ಸಮಭಾವದಿಂದಿರುವರೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.
ಪರರ ಅಭ್ಯುದಯವನ್ನು ಕಂಡು ಯಾರೋ ಕರುಬದೆ ಸಂತೋಷಪಡುತ್ತಾರೋ, ಯಾರು ಸದಾ ಹರಿನಾಮ ಸ್ಮರಣೆಯಲ್ಲೇ ನಿರತರೋ ಅವರೇ ನಿಜವಾದ ಭಗವದ್ಭಕ್ತರು.
ಬೇಧಭಾವವಿಲ್ಲದೆ, ಸಮಭಾವ, ಸಮಬುಧ್ಧಿಯಿಂದ ಯಾರು ಪ್ರವರ್ತಿಸುತ್ತಾರೋ ಅವರೇ ನಿಜವಾದ ಭಗವದ್ಭಕ್ತರು. ಮಿತ್ರರೇ ಎಲ್ಲರಲ್ಲೂ ಭಕ್ತಿಯಂಬುದು ಇರುತ್ತೆ. ಪ್ರಮಾಣ ಮತ್ತು ಉತ್ಕಟತೆ ಭಿನ್ನ ಭಿನ್ನವಾಗಿರುತ್ತದೆ.

ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

26/08/2020

#ದೇವರಿಗೆ__ಪೂಜೆ__ಪ್ರಾರ್ಥನೆ__ಯಾಕೆ__ಮಾಡಬೇಕು___
ಪೂಜೆ ಯಾಕೆ ಮಾಡಬೇಕು. ಪ್ರಾರ್ಥನೆ ಯಾಕೆ ಮಾಡಬೇಕು ಬಹಳ ಜನರನ್ನು ಕಾಡುವ ಪ್ರಶ್ನೆಯಿದು ಕಾಣದ ದೇವರಿಗೆ ಪೂಜೆ ಯಾಕೆ ಮಾಡಬೇಕು ದೇವರ ಪೂಜೆಯಿ೦ದ ನಿಜವಾಗಿಯೂ ಲಾಭವಿದೆಯೇ?
ನಾವು ದೇವರ ಪೂಜೆ ಮಾಡದಿದ್ದರೆ, ಏನಾಗುತ್ತದೆ ಪೂಜೆ' ಎನ್ನುವುದು ಒ೦ದು ಯೋಗ ಶಾಸ್ತ್ರದ ಪದ್ಧತಿ ಸಾಧನೆಗೆ ಅನು ಸಂಧಾನವಾದ ಪ್ರಕ್ರಿಯೆ ಎಂಬ ಪರಮಾರ್ಥ ಸೃಷ್ಟಿ ಸ್ಥಿತಿ ಲಯಗಳೆಂಬ ಜೀವನ ವ್ಯವಸ್ಥೆಗೆ ಕಾರಣವಾದ ದೇವಾನು ದೇವನಿಗೆ ಸರ್ವೋತ್ತಮನಿಗೆ ಕೃತಜ್ಞತೆ ಸಲ್ಲಿಸುವ ಧಾರ್ಮಿಕ ವಿಧಾನವೇ ಪೂಜೆ ___

ಪೂಜೆ ಮಾಡದೇ ಇದ್ದರೇ ಏನಾಗುತ್ತದೆಯೋ ಗೊತಿಲ್ಲ. ಅದಕ್ಕೆ ಪೂಜೆ ಮಾಡಿದರೆ, ಮಾತ್ರ ನಮ್ಮ ಜೀವನಕ್ಕೇನು ಬೇಕೋ ಎಲ್ಲವೂ ಸಿಗುತ್ತವೆ ಶಾಂತಿ, ನೆಮ್ಮದಿ, ನಂಬಿಕೆ, ಸರಿತೋಷ." ಸಹೃದಯತೆ, ಯೋಜನಾ ಮುನ್ನಡೆ, , ಧೈರ್ಯ, ಕಾರ್ಯದಕ್ಷತೆ, ದೀಕ್ಷೆ, ಆಶಾವಾದ, ಶ್ರದ್ಧೆ, ಗಹಿತ್ಯ ಕಲಿಯುವಿಕೆ, ಆರಾಧನೆ, ಐಕ್ಕತೆ, ಮು೦ತಾದ ಶಕ್ತಿ ಕ್ರಿಯೆಗಳು ಲಭಿಸುತವೆ ಪೂಜೆಯಿಂದ ಮನೋಶಕ್ತಿ ವೃದ್ಧಿಯಾಗುತ್ತದೆ.

ಅವಶ್ಯ ಮನುಭೋಕ್ತವ್ಯ೦ ಗತ೦ ಜನ್ಮಶುಭಾಶುಭಂ”

ಗತ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳನ್ನೇ ನಾವು
ಈ ಜನ್ಮದಲ್ಲಿ ಅನುಭವಿಸುತ್ತಿದ್ದೇವೆ. ಅಂದಮೇಲೆ ಗತ ಜನ್ಮದ ಕಾರಣದಿಂದ ಬಂದ ಕಷ್ಟಗಳನ್ನು ಈಗ ಅನುಭವಿಸಬೇಕಾಗಿ ಬಂದಿದೆ. ಈಗ ಮಾಡುವ ಪೂಜೆಗೂ ಕಷ್ಟಗಳಿಗೂ ಸಂಬಂಧವಿಲ್ಲ. ನಾವೀಗ ಮಾಡುವ ಪೂಜಾಫಲದಿಂದ ಕಷ್ಟ ನಿವಾರಣೆ ಯಾಗದಿದ್ದರೂ. ಉಪಶಮನ ಸಿಗುತ್ತದೆ. ಸಹನಶಕ್ತಿ ಸಿಗುತ್ತದೆ.ಗತ ಜನ್ಮದ ರೋಗಕ್ಕೆ ಈ ಜನ್ಮದ ಔಷಧಿಯೇ ಪೂಜೆ

ಪ್ರಾರ್ಥನೆ ಪೂಜೆ ನಂಬಿದವರಿಗೆ ದೇವರಿದ್ದಾನೆ ಪಾಲಿಸುತಾನೆ ರಕ್ಷಿಸುತ್ತಾನೆ. ಸಹಕರಿಸುತ್ತಾನೆ. ಎಂಬುದಕ್ಕೆ ಸಾಕ್ಷಿಯಾಗುವ ಸ್ವಾರಸ್ಯಕರ
ಪ್ರಸಂಗವೊಂದು ಇಲ್ಲಿದೆ ನಗರದಲ್ಲಿ ಔಷಧ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬ ದೇವರನ್ನು ನಂಬದ ಪರಮ ನಾಸ್ತಿಕನಾಗಿದ್ದ.

ಆದರೆ ಜನಸೇವೆಯೆಂಬ ಕಾಯಕದಿಂದ ಆಸುಪಾಸಿನವರಿಗೆಲ್ಲ ಅಚ್ಚುಮೆಚ್ಚಿನವನಾಗಿದ್ದ. ಆತನ ಮನೆಯವರೆಲ್ಲ ಆಸ್ತಿಕರಾಗಿದ್ದರು. ದೇವಸ್ಥಾನ, ದೇವರು, ಪ್ರಾರ್ಥನೆ ಇಂತಹ ವಿಚಾರದಲ್ಲಿ ನಂಬಿಕೆ ಇದ್ದ ಮನೆಮಂದಿಯೆಲ್ಲ ಈತನನ್ನು ಪ್ರಾರ್ಥಿಸುವಂತೆ ಒತ್ತಾಯಿಸುತ್ತಿದ್ದರೂ ನಾಸ್ತಿಕನಾಗಿಯೇ ಉಳಿದಿದ್ದ.

ಒಂದು ದಿನ ರಾತ್ರಿ ಜೋರಾಗಿ ಮಳೆಸುರಿಯಲಾರಂಭಿಸಿದಾಗ ವಿದ್ಯುತ್ ಕಡಿತವಾಯಿತು. ಆ ವೇಳೆಯಲ್ಲಿ ಮಳೆಯಲ್ಲಿ ತೋಯ್ದು ಹೋಗಿದ್ದ ಬಾಲಕನೊಬ್ಬ ಓಡೋಡಿ ಬಂದು ಅನಾರೋಗ್ಯ ಪೀಡಿತಳಾಗಿರುವ ತನ್ನ ತಾಯಿಗೆ ತುರ್ತಾಗಿ ಔಷಧ ಕೊಡುವಂತೆ ಕೋರಿ ಔಷಧ ಚೀಟಿಯನ್ನು ಕೊಟ್ಟ. ಅಂಗಡಿ ಮಾಲೀಕ ಒಲ್ಲದ ಮನಸ್ಸಿನಿಂದಲೇ ಟಾರ್ಚ್ ಬೆಳಕಿನಲ್ಲಿ ತಡಕಾಡಿ ಔಷಧ ಕೊಟ್ಟು ಕಳಿಸಿದ.

ಕೊಂಚ ಹೊತ್ತಲ್ಲಿ ಮಳೆ ನಿಂತು, ವಿದ್ಯುತ್ ದೀಪಗಳು ಬೆಳಗಿದವು. ಅಷ್ಟರಲ್ಲಿ ಅಂಗಡಿ ಮಾಲೀಕ, ತಾನು ಕತ್ತಲಲ್ಲಿ ಬಾಲಕನಿಗೆ ಕೊಟ್ಟ ಔಷಧಗಳತ್ತ ಗಮನ ಹರಿಸಿ ಹೌಹಾರಿದ. ಅದು ಮನುಷ್ಯರು ಸೇವಿಸುವ ಔಷಧವಾಗಿರದೆ ಕ್ರಿಮಿನಾಶಕದ ಬಾಟಲಿಯಾಗಿತ್ತು. ತನ್ನಿಂದ ಅಮಾಯಕ ಜೀವವೊಂದು ಬಲಿಯಾಗುತ್ತದಲ್ಲ ಎಂಬ ಪಾಪಪ್ರಜ್ಞೆಯ ಜತೆಗೆ ಆ ಬಾಲಕ ಅನಾಥನಾಗುತ್ತಾನಲ್ಲ, ಎಂಬ ಅಪರಾಧ ಪ್ರಜ್ಞೆಯೂ ಕಾಡಿತು. ಏನು ಮಾಡಬೇಕೆಂಬುದನರಿಯದೆ ಈ ದುರಂತವನ್ನು ಹೇಗೆ ತಪ್ಪಿಸಲಿ ಎಂದು ಯೋಚಿಸುತ್ತಾನೆ.

ಆಗ ಆತನಿಗೆ ಗೋಡೆಯಲ್ಲಿ ತೂಗುಹಾಕಿದ್ದ ದೇವರ ಚಿತ್ರಪಟವೊಂದು ಕಣ್ಣಿಗೆ ಬಿತ್ತು. ಬೇಡವೆಂದರೂ ಒತ್ತಾಯದಿಂದ ಆತನ ತಂದೆ ಅದನ್ನಲ್ಲಿ ತೂಗು ಹಾಕಿದ್ದರು. ‘ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ನಿನ್ನ ಕೈಮೀರಿ ಹೋದಾಗ, ಅಸಹಾಯ ಸ್ಥಿತಿಯಲ್ಲಿದ್ದಾಗಲಾದರೂ ಈ ಚಿತ್ರ ಪಟಕ್ಕೆ ಕೈಮುಗಿದು ಮನಃಪೂರ್ವಕವಾಗಿ ಪ್ರಾರ್ಥಿಸು, ದಾರಿಯೊಂದು ಗೋಚರವಾಗುತ್ತದೆ’ ಎಂದು ಅಪ್ಪ ಹೇಳಿದ್ದ ಮಾತು ಆ ಕ್ಷಣಕ್ಕೆ ನೆನಪಿಗೆ ಬಂತು. ಎಂದೂ ದೇವರಿಗೆ ಕೈಮುಗಿಯದಿದ್ದ ಆತ ಮೊದಲ ಬಾರಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿದ.

ಕೆಲವೇ ಕ್ಷಣಗಳಲ್ಲಿ ಪವಾಡವೋ ಎಂಬಂತೆ ಔಷಧ ತೆಗೆದುಕೊಂಡು ಹೋಗಿದ್ದ ಬಾಲಕ ಏದುಸಿರು ಬಿಡುತ್ತ ಓಡೋಡಿ ಅಂಗಡಿಗೆ ಬಂದು ‘ಅಂಕಲ್ ಜೋರುಮಳೆಯಲ್ಲಿ ನಾನು ಓಡೋಡಿ ಹೋಗುತ್ತಿದ್ದಾಗ ನೀವು ಕೊಟ್ಟಿದ್ದ ಔಷಧ ಬಾಟಲಿ ಕೈಜಾರಿ ಕೆಳಗೆ ಬಿದ್ದು ಒಡೆದು ಹೋಯಿತು, ನನಗೆ ಇನ್ನೊಂದು ಔಷಧ ಬಾಟಲಿ ಕೊಡಿ, ಆದರೆ ನನ್ನಲ್ಲೀಗ ಕೊಡಲು ಹಣವಿಲ್ಲ’ ಎಂದು ಗಾಬರಿಯಿಂದ ಒಂದೇ ಉಸಿರಿಗೆ ಹೇಳಿ ಕಣ್ಣೀರು ಹಾಕಿದ.

ಆಗ ಅಂಗಡಿಯವನು ಆ ಬಾಲಕನನ್ನು ತಬ್ಬಿಕೊಂಡು, ಆತನಿಗೆ ಬೇಕಾದ ಔಷಧದ ಜತೆಗೆ ಕೊಂಚ ಹಣವನ್ನೂ ಕೊಟ್ಟು ಕಳಿಸಿದ. ನಾಸ್ತಿಕನಾಗಿದ್ದರೂ ಪರಿಶುದ್ಧ ಮನಸ್ಸಿನಿಂದ ಆತ ಮೊದಲ ಬಾರಿಗೆ ದೇವರಲ್ಲಿ ಮೊರೆಇಟ್ಟು ಮಾಡಿದ ಪ್ರಾರ್ಥನೆ ಕೈಗೂಡಿತ್ತು. ಮನುಜ ಶುದ್ಧಭಕ್ತಿಯ ಮೂಲಕ ಮೋಕ್ಷವನ್ನು ಪಡೆಯಬಹುದು. ಸರ್ವಶಕ್ತನಾದ ಭಗವಂತನಲ್ಲಿ ಅನುದಿನ-ಅನುಕ್ಷಣ ಪ್ರಾರ್ಥನೆ ಸಲ್ಲಿಸುತ್ತಿರಬೇಕು. ನಿಷ್ಕಲ್ಮಶ ಮನದಿಂದ ಪ್ರಾರ್ಥನೆ ಸಲ್ಲಿಸಿದಾಗ ಅಸಾಧ್ಯವೂ ಸಾಧ್ಯವಾಗುತ್ತದೆ.

OM SRI GURU RAGHVENDRAYA NAMAHA.

🙏 Copy Pasted Content🙏

🌷 ನಿನ್ನ ಬೆಲೆ ಎಷ್ಟು - 🌷ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ " ನನ್ನ ಜೀವನದ ಬೆಲೆ ಏನು? "ಎಂದು. ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟ...
25/08/2020

🌷 ನಿನ್ನ ಬೆಲೆ ಎಷ್ಟು - 🌷

ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ " ನನ್ನ ಜೀವನದ ಬೆಲೆ ಏನು? "
ಎಂದು.

ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟು "ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ.

ಆದರೆ ಅದನ್ನು ನೀನು ಮಾರಬಾರದು" ಎಂದು ಹೇಳಿದನಂತೆ.

ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ‘ ಈ ಕಲ್ಲಿನ ಬೆಲೆ ಎಷ್ಟಿರಬಹುದು ? ‘ ಎಂದು ಕೇಳಿದನಂತೆ.

ಅದಕ್ಕಾ ಹಣ್ಣಿನ ವ್ಯಾಪಾರಿ "ಈ ಕಲ್ಲಿಗೆ ನಾನು ಒಂದು ೫ ಹಣ್ಣುಗಳನ್ನು ಕೊಡುವೆ.

ಮಾರುತ್ತೀಯಾ?" ಎಂದು ಕೇಳಿದನಂತೆ.

ಆದರೆ ದೇವರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾನಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ.

ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ ‘‘ ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. " ಈ ಕಲ್ಲಿಗೆ ನಾನು ಒಂದು ೧೦ ಕೆ ಜಿ ತರಕಾರಿಯನ್ನು ಕೊಡುವೆ, ಈ ಕಲ್ಲನ್ನು ಮಾರುತ್ತೀಯಾ?" ಎಂದು ಕೇಳಿದನಂತೆ.

ಆದರೆ ದೇವರು ಆ ಕಲ್ಲಿನ ಬೆಲೆಯನ್ನು ಮಾತ್ರ ತಿಳಿದು ಬಾ ಎಂದು ಹೇಳಿದ್ದಾನಲ್ಲ, ಮಾರಬಾರದೆಂದೂ ಹೇಳಿದ್ದಾನಲ್ಲ, ಹಾಗಾಗಿ ಆ ವ್ಯಕ್ತಿ ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ.

ಇದಾದಮೇಲೆ ಆ ವ್ಯಕ್ತಿ ಚಿನ್ನದ ಆಭರಣಗಳ ವ್ಯಾಪಾರಿಯಲ್ಲಿ ಹೋಗಿ ‘‘ ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.

ಆ ಕಲ್ಲನ್ನು ನೋಡಿ, ಆಶ್ಚರ್ಯಚಕಿತನಾಗಿ ಆ ಆಭರಣಗಳ ವ್ಯಾಪಾರಿ " ಒಂದು ೫೦ ಲಕ್ಷ ರೂಗಳನ್ನು ಕೊಡುವೆ, ನನಗೆ ಈ ಕಲ್ಲನ್ನು ಮಾರುತ್ತೀಯಾ?" ಎಂದನಂತೆ.

ಇದನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋಗುತ್ತಿರುವ ವ್ಯಕ್ತಿಗೆ "ಹೋಗಲಿ ೪ ಕೋಟಿ ರೂಗಳನ್ನು ಕೊಡುತ್ತೇನೆ" ಎಂದನಂತೆ ಆ ಚಿನ್ನದ ವ್ಯಾಪಾರಿ.

ಆ ವ್ಯಕ್ತಿಯಲ್ಲಿ ಸ್ವಲ್ಪ ಆಸೆ ಮೂಡಿತು.

ಆದರೆ ಆ ಕಲ್ಲನ್ನು ಮಾರಬಾರದೆಂದು ದೇವರು ಹೇಳಿದ್ದನಲ್ಲ, ಹಾಗಾಗಿ ಆ ವ್ಯಕ್ತಿಯು, ‘ ಇದನ್ನು ಮಾರುವುದಿಲ್ಲ ‘ ಎಂದು ಹೇಳಿ ಮುಂದಕ್ಕೆ ಹೊರಟನಂತೆ.

ಕಡೆಗೆ ನಮ್ಮ ವ್ಯಕ್ತಿ ಒಬ್ಬ ‘ವಜ್ರ‘ ಗಳ ವ್ಯಾಪಾರಿಯಲ್ಲಿಗೆ ಹೋಗಿ " ‘‘ ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.

ಆ ವಜ್ರದ ವ್ಯಾಪಾರಿ ಆ ಕಲ್ಲನ್ನು ಬಹುವಾಗಿ ಪರೀಕ್ಷಿಸಿ " ನಿಮಗೆ ಎಲ್ಲಿ ಸಿಕ್ಕಿತು ಇಷ್ಟು ಬೆಲೆಬಾಳುವ ಕಲ್ಲು? " ಎಂದು ಕೇಳಿದನಂತೆ.

ನಾನು ನನ್ನ ಆಸ್ತಿಯನ್ನೆಲ್ಲಾ
ಅಷ್ಟೇ ಏಕೆ ನನ್ನನ್ನೇ ನಾನು ಮಾರಿಕೊಂಡರೂ ಈ ಕಲ್ಲನ್ನು ಕೊಳ್ಳಲು ಸಾಧ್ಯವಿಲ್ಲ. .........

ಕಡೆಗೆ ಈ ಜಗತ್ತನ್ನೆಲ್ಲಾ ಮಾರಿದರೂ ಈ ಕಲ್ಲಿಗೆ ಬೆಲೆಕಟ್ಟಲು ಸಾಧ್ಯವಿಲ್ಲ " ಎಂದನಂತೆ
ಈ ಮಾತನ್ನು ಕೇಳಿ ನಮ್ಮ ವ್ಯಕ್ತಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ.

ತಕ್ಷಣ ಆ ಕಲ್ಲನ್ನು ತೆಗೆದುಕೊಂಡು ದೇವರ ಬಳಿ ಬಂದನಂತೆ.

ಆಗ ದೇವರು " ನಿನ್ನ ಜೀವನದ ಬೆಲೆ ಎಷ್ಟು ಎಂದು ಕೇಳಿದೆಯಲ್ಲಾ!!! ನೋಡು ನೀನು ಮೊದಲು ಈ ಕಲ್ಲನ್ನು ಹಣ್ಣಿನ ವ್ಯಾಪಾರಿಯ ಬಳಿ, ನಂತರ ತರಕಾರಿ ವ್ಯಾಪಾರಿಯ ಬಳಿ, ಬಳಿಕ ಚಿನ್ನದ ಆಭರಣಗಳ ವರ್ತಕನ ಬಳಿ ಕೊಂಡು ಹೋಗಿ ತೋರಿಸಿದಾಗ ಅವರುಗಳು ತಮ್ಮ ತಮ್ಮ ಯೋಗ್ಯತೆಗನುಸಾರ ಈ ಕಲ್ಲಿಗೆ ಬೆಲೆ ಕಟ್ಟಿದರು.

ಆದರೆ ಆ ಕಲ್ಲಿನ ನಿಜವಾದ ಬೆಲೆ ಗೊತ್ತಿದ್ದ ವಜ್ರದ ವ್ಯಾಪಾರಿಗೂ ಕೂಡ ಆ ಕಲ್ಲಿಗೆ ಬೆಲೆಕಟ್ಟಲಾಗಲಿಲ್ಲ, ಅಲ್ಲವೇ?
ಹಾಗೆಯೇ ನಿನಗೂ ಕೂಡ ಬೆಲೆಕಟ್ಟಲಾಗುವುದಿಲ್ಲ, ನಿನ್ನ ಜೀವನವೂ ‘ ಅಮೂಲ್ಯ ‘ ಎಂದರೆ ಬೆಲೆಕಟ್ಟಲಾಗದ್ದು.

ಆದರೆ ಮನುಷ್ಯರು ಅವರವರ ಯೋಗ್ಯತೆಗೆ ಅನುಸಾರವಾಗಿ ನಿನಗೆ ಬೆಲೆ ಕಟ್ಟುತ್ತಾರೆ.

ಈ ಜಗತ್ತಿನ ಪ್ರತೀ ವಸ್ತುವಿಗೂ ಮಾನವರು ಆ ವಸ್ತು ತಮಗೆ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆ ಅದಕ್ಕೆ ಬೆಲೆಕಟ್ಟುತ್ತಾರೆ.

ನಿನಗೂ ಹಾಗೆ!!!!! ಆದರೆ ಅದು ನಿನ್ನ ಜೀವನದ ನಿಜವಾದ ಬೆಲೆಯಲ್ಲ.

ಅದು ಅವರುಗಳು ಅವರ ಉಪಯೋಗ, ಅನುಕೂಲ ಮತ್ತು ಯೋಗ್ಯತೆಗನುಸಾರ ಕಟ್ಟುವ ಬೆಲೆ. ಅವರು ಕಟ್ಟುವ ಬೆಲೆ ಕೇವಲ ಅವರ ತೋರುತ್ತದೆ.

ಆದರೆ, ನಿನ್ನ ಬೆಲೆ ಮತ್ತು ಮೌಲ್ಯ ನನಗೊಬ್ಬನಿಗೇ ಗೊತ್ತು.

ನೀನು ನನಗೆ ಎಂದೆಂದಿಗೂ ಅತ್ಯಮೂಲ್ಯ. ನಿನ್ನ ಜೀವನಕ್ಕೆ ಬೆಲೆಕಟ್ಟಲು ನನ್ನಿಂದಾಗುವುದಿಲ್ಲ " ಎಂದನಂತೆ ಆ ದೇವರೂ ಸಹ.

ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು " ಮಾನವ ಜನ್ಮ ಬಹು ಶ್ರೇಷ್ಠವಾದದ್ದು " ಎಂದು.

ಹಾಗಾಗಿ ನಾವು ನಮ್ಮನ್ನು ನಾವೇ ಅಪಮೌಲ್ಯ ಮಾಡಿಕೊಳ್ಳಬಾರದು ಮತ್ತು ನಮ್ಮ ಅಲ್ಪ ಮತಿಯಿಂದ ಅನ್ಯರಿಗೆ ಬೆಲೆ ಕಟ್ಟಲೂ ಬಾರದು.

OM SRI GURU RAGHVENDRAYA NAMAHA.

🙏Copy Pasted Content🙏
...........

🍂🌿 ಮಾನಸಿಕ ಧೈರ್ಯಕ್ಕೊಂದು ಚಿಂತನೆ 🌹ನಮಗೆ ಯಾವಾಗ ನಾನು ಮಾನಸಿಕವಾಗಿ ವೀಕ್ ಅನ್ನಿಸುತ್ತೆ ?ನೋವಾದಾಗ,ಬೇಸರಾದಾಗ,ತಡೆದುಕೊಳ್ಳಲಾಗದೆ‌ ದುಃಖಿಸುತ್ತ...
24/08/2020

🍂🌿 ಮಾನಸಿಕ ಧೈರ್ಯಕ್ಕೊಂದು ಚಿಂತನೆ 🌹
ನಮಗೆ ಯಾವಾಗ ನಾನು ಮಾನಸಿಕವಾಗಿ ವೀಕ್ ಅನ್ನಿಸುತ್ತೆ ?
ನೋವಾದಾಗ,ಬೇಸರಾದಾಗ,ತಡೆದುಕೊಳ್ಳಲಾಗದೆ‌ ದುಃಖಿಸುತ್ತೇವೆ..
ನೋವು ಯಾವಾಗ ಆಗುತ್ತೆ?
ಪ್ರೀತಿಸಿದವರು ಕೈಕೊಟ್ಟಾಗ.ಮನೆಯವರು ಅರ್ಥ ಮಾಡಿಕೊಂಡಿಲ್ಲಾ ಅನ್ನಿಸಿ.ಈಗ ಕರೋನಾ ಕೆಲಸ ಇಲ್ಲಾ,ಸಂಬಳ‌ಇಲ್ಲಾ,ಹತ್ತಿರದವರ ಸಾವು.. ಸ್ನೇಹಿತರು ಮೋಸ ಮಾಡಿದಾಗ...ಹೀಗೆ ಹಲವು ಕಾರಣಗಳಿರುತ್ತೆ ನೋವಿಗೆ..
ನಾವು ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚಿಸೋಣ..ನೊಂದುಕೊಂಡರೆ ಯಾವುದಾದರೂ ಸಮಸ್ಯೆ ಬಗೆಹರಿಯುತ್ತಾ..ಚಿಂತೆ ಮಾಡಿದರೆ ಪರಿಹಾರ ಸಿಕ್ಕಿಬಿಡುತ್ತಾ..ಖಂಡಿತ ಇಲ್ಲಾ..ಸಮಸ್ಯೆಗಳನ್ನು ನೋಡಿ ಹೆದರದೆ,ಏನು ಮಾಡಲಾಗುತ್ತೆ ಅಂತ ಯೋಚನೆ,ಚಿಂತೆ ಅಲ್ಲಾ..ಮಾಡಿದರೆ ಖಂಡಿತ ಪರಿಹಾರ ಸಿಗುತ್ತೆ..ಮೋಸ ಮಾಡಿದ್ದರೆ ಯಾರಾದರೂ..ಅದೇ ಅವರ ಗುಣ ಅಂತಾ ಬಿಟ್ಟಾಕಿ.ಪ್ರೀತಿಸಿದವರು ಕೈಕೊಟ್ಟಾಗಲು ಅಷ್ಟೇ, ಅವರಿಗೆ ನಿಮ್ಮನ್ನು ಪಡೆಯೋ ಯೋಗ್ಯತೆ ಇರಲಿಲ್ಲಾ..ಅದಕ್ಕೇ ದೂರ ಆದರು ಅಂತ ಸಂತೋಷಪಡಿ.ಮನೆಯವರಾದರೆ,ನಮ್ಮವರೆ ಅಲ್ಲವಾ ಬೈದಿದ್ದು..ಅವರಿಗೆ ಬೈಯಲು ಹಕ್ಕಿದೆ ಎಂದು ಯೋಚಿಸಿ.ದುಡ್ಡು ಇವತ್ತಿಲ್ಲಾ..ನಾಳೆ ಬರುತ್ತೆ,ದುಡಿದೇ ದುಡಿತ್ತೀನಿ ಅಂತ ನಿರ್ಧರಿಸೋಣ.ಸ್ನೇಹಿತರ ವಿಷಯ ಬಂದರೆ..ನಮ್ಮಿಂದಾದ ಸಹಾಯ ಮಾಡೋಣ.ಯಾರಿಂದಲೂ ಏನೂ ನಿರೀಕ್ಷೆ ಮಾಡೋದುಬೇಡ.
ಪ್ರೀತಿ ವ್ಯವಹಾರ ಅಲ್ಲಾ..ಕೊಟ್ಟೇ ಹಿಂತಿರುಗಿ ಕೊಡು ಅಂತ ಅನ್ನಲು.ಕೊಡೋದರಲ್ಲಿ ತುಂಬಾ ಖುಷಿಯಿದೆ.ಕೊಟ್ಟು ಅನುಭವಿಸೋಣ.
ನಾವ್ಯಾರೂ ದುರ್ಬಲರಲ್ಲಾ...
ಮೆದುಳಿನಲ್ಲಿ ತೊಂದರೆಯಾಗಿ ಮಂದಬುದ್ದಿ ಇರೋರು,ದೈಹಿಕವಾಗಿ ಕಣ್ಣು ಕೈ ಕಾಲು ಇಲ್ಲದವರು ದುರ್ಬಲರು...ಆದರೆ,ಅವರೇ ಇವತ್ತು ಚನ್ನಾಗಿ ಬದುಕಿ ತೋರುತ್ತಿದ್ದಾರೆ.ಪ್ಯಾರಾ ಒಲಂಪಿಕ್ನಲ್ಲಿ ಚಿನ್ನದ ಪದಕ ಪಡೆಯುತ್ತಿದ್ದರೆ..ಕಾಲಲ್ಲಿ SSLC ಪರೀಕ್ಷೆ ಯಲ್ಲಿ ಕಾಲಲ್ಲಿ ಬರೆದು ಹುಡುಗನೊಬ್ಬ ಫಸ್ಟ್ ಕ್ಲಾಸ್ ಪಾಸ್..ಕೂಲಿ ಕಾರ್ಮಿಕರ ಮಗ ಶೇಕಡಾ ತೊಂಬತ್ತರಷ್ಟು ಮಾರ್ಕ್ಸ್‌... ಯಾರಿಗೂ ಯಾವುದೂ ಅಸಾಧ್ಯ ಅಲ್ಲಾ...ನಾವು ಮನಸ್ಸು ‌ಮಾಡಿದರೆ ಏನು ಬೇಕಾದರೂ ಮಾಡಬಹುದು..ಹೌದಲ್ಲವಾ...
ನಾವು ಸದಾ ಹೊರಗೇ ನೋಡುತ್ತೇವೆ.ಇನ್ಬೊಬ್ಬರನ್ನು ಅವಲಂಬಿಸುತ್ತೇವೆ.ಅದನ್ನು ಕಡಿಮೆ ಮಾಡಿ.ನಮ್ಮೊಂದಿಗೆ ‌ನಾವು ಹೆಚ್ಚು ಇರಬೇಕು. ನಮ್ಮ ದೈಹಿಕ ಆರೋಗ್ಯಕ್ಕೇ‌ಹೊತ್ತೊತ್ತಿಗೆ ಊಟ,ನಿದ್ರೆ,ಮಾನಸಿಕ ಆರೋಗ್ಯಕ್ಕೇ ಉತ್ತಮ ಚಿಂತನೆಗಳು..ಒಳ್ಳೆಯ ಪುಸ್ತಕಗಳ ಓದು.ಯೋಗ,ಧ್ಯಾನ ಇದೆಲ್ಲಾ ಮಾಡಬೇಕು.
ನಮ್ಮೊಂದಿಗೆ ಸದಾ ಇರೋದು ನಮ್ಮ ದೇಹ ಮತ್ತು ಮನಸ್ಸು ಎರಡೇ...ಅಪ್ಪ, ಅಮ್ಮ,ಹೆಂಡತಿ,ಮಕ್ಕಳು, ಪ್ರೇಯಸಿ ಯಾರೂ ಅಲ್ಲಾ..ನಮಗೆ ನಾವೇ.ಹೌದಲ್ಲವಾ...ನಾವು ದುರ್ಬಲರಲ್ಲಾ..ಸಬಲರು..ನಾವು ನಮ್ಮನ್ನೂ ನೋಡಿಕೊಂಡು..ನಮ್ಮವರಿಗೂ ಕೈಲಾದ ಸಹಾಯ ಮಾಡುವಷ್ಡು ಸಮರ್ಥರು...ನಂಬಿ,ನಿಮ್ಮನ್ನು ನೀವೆ..ಸಣ್ಣ ಸಣ್ಣ ಸಂಗತಿಗಳಲ್ಲೇ ಜೀವನದ ಖುಷಿಯಿರೋದು ಅನುಭವಿಸೋಣ.ಒಂದು ಸಣ್ಣ‌ ಚಾಕಲೇಟ್ ಬಾಯಿಗೆ ಹಾಕಿಕೊಂಡು ಚೀಪುವಾಗ ಅದರ ಹನಿ ಹನಿ‌ ಕೂಡ ಮನಸ್ಸನ್ನು ಉಲ್ಲಸಿತಗೊಳಿಸುತ್ತೆ..ಹಾಗೇ ಒಂದು ಸಣ್ಣ ವಾಕ್.ಅಪ್ಪ ಅಮ್ಮನಿಗೆ ಮಾಡಿಕೊಡುವ ಸಣ್ಣ ಕೆಲಸ..ಎಲ್ಲಾ ಮುಖ್ಯ.ಅದರಲ್ಲೇ ಸಾರ್ಥಕತೆ ಇದೆ.ನಮಗಾಗಿ.ನಮ್ಮವರಿಗಾಗಿ ಬದುಕೋಣ.ನಾವು ಸಬಲರು.

🙏🌺
ಬರಹ ಸುಜಾತಾ ಲಕ್ಷ್ಮೀಪುರ
🌷🌷🌷🌷🌷

🙏 Copy and Pasted Content🙏

 #ಯಾಕೆ_ನಮ್ಮ_ಪೂರ್ವಜರು_ಇನ್ನೊಬ್ಬರ_ಬಟ್ಟೆ_ಒಡವೆ_ಧರಿಸಬಾರದು_ಅಂತ_ಹೇಳುತ್ತಿದ್ದರು_ #ಕಾರಣ_ಇಲ್ಲದೆ_ಅವರು_ಹೇಳುತ್ತಿರಲಿಲ್ಲಪರೀಕ್ಷೀತ ಮಹಾರಾಜ ಪ...
24/08/2020

#ಯಾಕೆ_ನಮ್ಮ_ಪೂರ್ವಜರು_ಇನ್ನೊಬ್ಬರ_ಬಟ್ಟೆ_ಒಡವೆ_ಧರಿಸಬಾರದು_ಅಂತ_ಹೇಳುತ್ತಿದ್ದರು_
#ಕಾರಣ_ಇಲ್ಲದೆ_ಅವರು_ಹೇಳುತ್ತಿರಲಿಲ್ಲ
ಪರೀಕ್ಷೀತ ಮಹಾರಾಜ ಪಾಂಡವರ ಮೊಮ್ಮಗ.ಅಭಿಮನ್ಯು ಮತ್ತು ಉತ್ತರಾದೇವಿಯ ಪುತ್ರ.
ಇವನ ಆಳ್ವಿಕೆ ಕಾಲದಲ್ಲಿ ಕಲಿ ಪ್ರವೇಶ ಆಗಿರಲಿಲ್ಲ.
*ಗರ್ಭದಲ್ಲಿ ಇದ್ದಾಗಲೇ ಭಗವಂತನನ್ನು ಕಂಡ ಪುಣ್ಯಾತ್ಮ.*
ಇಂತಹ ರಾಜ ಏಕೆ ಅಧರ್ಮಕಾರ್ಯವನ್ನು ಮಾಡಿದ??
ಏಕೆಂದರೆ ಒಂದು ತಪ್ಪು ಮಾಡಿದ್ದ.
ಒಂದು ಸಾರಿ ಅವನು ಬೇಟೆ ಆಡಲು ಕಾಡಿಗೆ ಹೋಗಿದ್ದಾಗ ಬಾಯಾರಿಕೆ ಆಗಿ ಒಂದು ಆಶ್ರಮಕ್ಕೆ ಹೋಗಿದ್ದಾನೆ.ಅದು ಶಮೀಕ ಋಷಿಗಳ ಆಶ್ರಮ. *ಕುಡಿಯಲು ನೀರನ್ನು ಕೇಳಿದ. ಅವರು ಕೊಡಲಿಲ್ಲ. ಅವರು ಧ್ಯಾನಮಗ್ನರಾಗಿ ಕುಳಿತಿದ್ದರು.*.
*ನಾನು ನೀರು ಕೇಳಿದರು ಋಷಿಗಳು ಕೊಡಲಿಲ್ಲ ಎಂದು ಕೋಪದಿಂದ ಅಲ್ಲಿ ಸತ್ತು ಬಿದ್ದಿದ್ದ ಒಂದು ಹಾವನ್ನು ತೆಗೆದು ಅವರ ಕೊರಳಿಗೆ ಹಾಕಿ ಹೋಗಿ ಬಿಟ್ಟ.ಶಮೀಕ ಮಹರ್ಷಿಗಳು ಧರ್ಮದ ಪ್ರತೀಕ.ಅವರು ಭಗವಂತನ ಧ್ಯಾನಾವಸ್ಥೆಯಲ್ಲಿ ಇದ್ದ ಕಾರಣ ಅವನಿಗೆ ನೀರು ಕೊಡಲಿಲ್ಲ. ರಾಜನು ಇನ್ನೊಂದು ಬಾರಿ ಕೇಳಲಿಲ್ಲ*.
*ರಾಜನಾದ ತನಗೆ ಕುಡಿಯಲು ನೀರನ್ನು ಶಮೀಕ ಋಷಿಗಳು ಕೊಡಲಿಲ್ಲ ಎನ್ನುವ ಕೋಪದಿಂದ ಸತ್ತ ಹಾವನ್ನು ಅವರ ಕೊರಳಿಗೆ ಹಾಕಿ ಹೋಗುತ್ತಾನೆ.*
ಯಾಕೆ ಅವನು ಹಾಗೆ ಮಾಡಿದ

ಅಂದು ಬೇಟೆಯಾಡಲು ಪರೀಕ್ಷೀತ ಮಹಾರಾಜ ಹೊರಟಾಗ ತನ್ನ ಅಲಂಕಾರ ಗೃಹದಲ್ಲಿ ಇದ್ದ ಜರಾಸಂಧನ ಕಿರೀಟವನ್ನು ಧರಿಸಿ ಬೇಟೆ ಗಾಗಿ ಹೊರಟಿದ್ದ.}
*{ದುಷ್ಟ ನಾದ ಜರಾಸಂದನ ಕಿರೀಟ ಧರಿಸಿದ ಕಾರಣದಿಂದಾಗಿ ಒಂದು ಕ್ಷಣ ವಿಪ್ರರ ಮೇಲೆ ದ್ವೇಷ, ಸಿಟ್ಟು ಬಂದು ಮಾಡಬಾರದ ಕೆಲಸ ಮಾಡಿ ಮುಂದೆ ಅದು ಅವನ ಅವನತಿಗೆ ಕಾರಣವಾಯಿತು.*}
*ದುಷ್ಟ ಜನರ ವಸ್ತುಗಳ ಬಳಕೆ ನಮ್ಮ ಅವನತಿಗೆ ಕಾರಣವಾಗುತ್ತದೆ ಅಂದರೆ ಇನ್ನೂ ಅವರ ಸಂಗ..*
*ಯೋಚಿಸಲು ಸಾಧ್ಯವಿಲ್ಲ.*
ಹಾಗಾಗಾದಿರಲಿ ನಮ್ಮ ಬದುಕು...
ರಾಜನು ಹೊರಟು ಹೋದ ಮೇಲೆ ಅವರ ಮಗನಾದ ಶೃಂಗಿ ಅಲ್ಲಿಗೆ ಬಂದ.ಬಾಲ್ಯದಲ್ಲಿ ಗಾಯತ್ರಿ ಮಂತ್ರ ಸಿದ್ಧಿಯನ್ನು ಪಡೆದ ಋಷಿ ಪುತ್ರ.
ತನ್ನ ತಂದೆಯ ಕೊರಳ ಮೇಲೆ ಸತ್ತ ಹಾವು ಹಾಕಿರುವದನ್ನು ಕಂಡು ಕೋಪದಿಂದ ಶಪಿಸಿದ.
*"ಯಾವ ಸತ್ತ ಹಾವನ್ನು ನನ್ನ ತಂದೆಗೆ ಹಾಕಿದವನು ಯಾರೇ ಆಗಿರಲಿ. ಏಳುದಿನದ ನಂತರ ಅದೇ ಹಾವಿನ ರಾಜನಾದ ತಕ್ಷಕ ನಿಂದಲೇ ಸಾಯಲಿ" ಅಂತ..* .
*ಋಷಿ ಮುನಿಗಳಂತಹ ಹರಿಯ ಭಕ್ತರಿಗೆ ,ಜ್ಞಾನಿ ಶ್ರೇಷ್ಠ ರಿಗೆ ಮಾಡುವ ಅವಮಾನ ನಮ್ಮ ಮರಣಕ್ಕೆ ಕಾರಣ ಅಂತ ಇಲ್ಲಿ ತೋರಿಸಿಕೊಡುತ್ತದೆ.*
ತನ್ನ ತಪ್ಪನ್ನು ತಿಳಿದುಕೊಂಡ ರಾಜನು ತಾನು ಪ್ರಾಣಾಹುತಿ ಮಾಡಿಕೊಳ್ಳಲು ನಿರ್ಧಾರ ಮಾಡುತ್ತಾನೆ.ಶೃಂಗಿಯ ಶಾಪದ ವಿಚಾರದ ವಿಷಯವನ್ನು ಪರಿಕ್ಷೀತ ಮಹಾರಾಜ ತಿಳಿದು ಪಶ್ಚಾತಾಪ ಪಟ್ಟು!!
*ನಾನು ಪಾಂಡವರ ಮೊಮ್ಮಗನಾಗಿ ಚಕ್ರವರ್ತಿ ಆಗಿ ಮಾಡಿದ ಕಾರ್ಯವೇನು??*
*ನಮ್ಮ ಹಿರಿಯರು ಅರಣ್ಯ ವಾಸದಲ್ಲಿ ಇದ್ದರು ಸಹ ನಿತ್ಯ ಸಾವಿರಾರು ಋಷಿ ಗಳಿಗೆ ಪ್ರತಿದಿನ ಭಿಕ್ಷೆ ನೀಡುತ್ತಾ ಇದ್ದರು.*
*ಧ್ಯಾನ ಮಗ್ನರಾದ ಋಷಿಗಳ ಕೊರಳಿಗೆ ಹಾವನ್ನು ಹಾಕಿ ಎಂತಹ ತಪ್ಪು ಮಾಡಿದೆ??.ಒಂದು ವೇಳೆ ಅವರು ಧ್ಯಾನ ಮಗ್ನರಾಗಿಲ್ಲ ದಿದ್ದರೆ ಹೌಹಾರಿ ಬಿಡುತ್ತಾ ಇದ್ದರು.*.
ಅದಕ್ಕೆ ಸರಿಯಾದ ಶಿಕ್ಷೆ ಆಗಿದೆ ಅಂತ ಯೋಚಿಸಿ ರಾಜ್ಯವನ್ನು ತನ್ನ ಮಗನಾದ *ಜನಮೇಜರಾಯನಿಗೆ ಒಪ್ಪಿಸಿ ಗಂಗಾ ನದೀ ತೀರದಲ್ಲಿ ಪ್ರಾಯೋಪವೇಶಕ್ಕೆ ಕುಳಿತ..*.
*ಅವನ ಬಳಿಗೆ ಸಕಲ ಋಷಿ ಸಮೂಹವೇ ಬಂದಿತು..*
*ತನ್ನ ಜೀವನದ ಉದ್ದಕ್ಕೂ ಋಷಿ ಮುನಿಗಳನ್ನು ಯಜ್ಞ ಗಳಿಂದ ಆಧರಿಸಿದ್ದ. ಹಾಗಾಗಿ ಅಂತ್ಯ ಕಾಲಕ್ಕೆ ಅವರ ಸಮಾಗಮವಾಯಿತು ಅವನಿಗೆ..*.
*"ಬದುಕಿರುವವರೆಗು ಎಂತಹ ಧರ್ಮ ಕಾರ್ಯಗಳನ್ನು ಮಾಡುವೆವೋ ಅಂತ್ಯಕಾಲದಲ್ಲಿ ಅದೇ ನಮಗೆ ಕಾಪಾಡುವುದು ಅನ್ನುವದು ಇಲ್ಲಿ ತೋರಿಸುತ್ತದೆ."*
ಹೀಗೆ ಶ್ರೀ ಮದ್ ಭಾಗವತ ಧರ್ಮದ ಸೂಕ್ಷ್ಮ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
*ಅದೇ ಸಮಯದಲ್ಲಿ ಸದಾ ಸರ್ಪಭೂಷಣನಾದ ರುದ್ರಾಂಶ ಸಂಭೂತರಾದ ಶ್ರೀಶುಕ ಮುನಿಗಳು ಶ್ರೀ ವೇದವ್ಯಾಸ ದೇವರ ಅಪ್ಪಣೆಯಂತೆ* ಅಲ್ಲಿಗೆ ಬಂದು ಭಾಗವತ ವನ್ನು ಉಪದೇಶಿಸಿದರು.
ಎಂತಹ ವಿಚಿತ್ರ.!!
*ಹಾವಿನಿಂದಲೇ ಮರಣ ಅಂತಹ ಶಾಪ ರಾಜನಿಗೆ.*
*ಅದೇ ನಾಗಾಭರಣ ನಾದ ರುದ್ರಾಂಶ ಸಂಭೂತರಾದ ಶ್ರೀಶುಕ ಮುನಿಗಳಿಂದ ಭಗವಂತನ ಮಹಿಮೆ ತಿಳಿಯುವ ಭಾಗ್ಯ..*
*ನೋಡಿ ಇಲ್ಲಿ ಶಾಪ ಪರಿಕ್ಷೀತ ಮಹಾರಾಜನಿಗೆ ವರವಾಯಿತು..*.
*ಶ್ರೀ ಮದ್ಭಾಗವತವನ್ನು ಕೇಳಿ ಅಲ್ಪಾಯುವಾದ ರಾಜ ಅನಾಯಾಸವಾದ ಮರಣವನ್ನು ಪಡೆದ.*
*ತಕ್ಷಕ ಕಚ್ಚಿದ್ದು ಗೊತ್ತಿಲ್ಲ ಅವನಿಗೆ.ಶುಕ ಮುನಿಗಳಿಗೆ ನಮಸ್ಕಾರ ಮಾಡಿ ಅವರನ್ನು ಕೊಟ್ಟು ಕಳುಹಿಸಿದ್ದು ಮಾತ್ರ ನೆನಪು.*
*ಆಮೇಲೆ ಎಚ್ಚರಿಕೆಆಗಿದ್ದು ಪರಮಾತ್ಮನ ಪಾದ ಮೂಲ ವನ್ನು ಸೇರಿದಾಗ.*
*ಇದು ಶ್ರೀ ಮದ್ಭಾಗವತ ಶ್ರವಣದಿಂದ ಬಂದ ಫಲ.*
ಇಂತಹ ಶ್ರೀ ಮದ್ಭಾಗವತವನ್ನು ನಿತ್ಯ ವು ಕೇಳಬೇಕು.
*ಈ ಶ್ರೀ ಮದ್ಭಾಗವತವನ್ನು ಪ್ರತಿದಿನ ಎಷ್ಟು ಆದರೆ ಅಷ್ಟು..ಒಂದು ಶ್ಲೋಕ ವಾದರೆ ಒಂದು ಶ್ಲೋಕ.*
*ಅರ್ಧ ಆದರೆ ಅರ್ಧ.*.
*ಕೊನೆಗೆ ಒಂದು ಪಾದವಾದರೆ ಒಂದು ಪಾದ ನಿತ್ಯ ಭಾಗವತವನ್ನು ಪಾರಾಯಣ ಮಾಡಬೇಕು.*

🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ*|
*|ಏಳಿರೋ ವೈಕುಂಠಕೆ|*

🙏ಅ.ವಿಜಯವಿಠ್ಠಲ🙏

🙏Copy Pasted Content🙏

24/08/2020

💐ಶನಿ ದೇವನಿಗೆ ತೈಲವನ್ನು ಯಾಕೆ ಅರ್ಪಿಸಬೇಕು ಗೊತ್ತಾ?💐 ಶನಿ ದೇವ ಕರುಣೆ.. ಶನಿ ದೇವ ಕೊಟ್ಟರೆ ವರ.. ಇ ಟ್ಟಾರೆ ಶಾಪ.💐✍️
💐ಶನಿ ಎನ್ನುವುದು ಸಂಸ್ಕ್ರತದ ಪದ. ಈ ಪದವು ಶನಿ ದೇವ ಮತ್ತು ಗ್ರಹವನ್ನು ಸೂಚಿಸುತ್ತದೆ. ಸೂರ್ಯನ ಮಗನಾದ ಶನಿಯು ಅಧಿಕ ಶಕ್ತಿಯನ್ನು ಹೊಂದಿರುವ ದೇವನು. ಶನಿ ದೇವನ ಪ್ರತೀಕವೇ ಶನಿ ಗ್ರಹ.💐 ಪ್ರತಿಯೊಬ್ಬರ ಜನ್ಮ ಕುಂಡಲಿಯಲ್ಲಿ ಶನಿ ದೇವನು ವಿಭಿನ್ನ ಸ್ಥಾನವನ್ನು ಪಡೆದುಕೊಳ್ಳುವನು. ರಣ ಹದ್ದು ಅಥವಾ ಕಾಗೆಯನ್ನು ವಾಹನವನ್ನಾಗಿ ಆಯ್ಕೆ ಮಾಡಿಕೊಳ್ಳುವನು. ಸತ್ಯ ಮತ್ತು ಧರ್ಮದ ನೀತಿಯ ಮೇಲೆ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ನೀಡುವ ದೇವ ಎಂದು ಹೇಳಲಾಗುವುದು.
💐ಶನಿದೋಷ💐 ಓಂ ಶ0. ಶನೀಶ್ವರ ಯ.. ಓಂ pippalada..
ಕುಂಡಲಿಯಲ್ಲಿ ಶನಿಯು ದೋಷದಿಂದ ಕೂಡಿದ್ದರೆ ಅಥವಾ ವಕ್ರ ದೃಷ್ಟಿ ಇದ್ದರೆ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಆ ತೊಂದರೆಗಳನ್ನು ಅನುಸರಿಸಿಯೇ ಜೀವನದಲ್ಲಿ ಸತ್ಯ ಮಾರ್ಗದಲ್ಲಿ ನಡೆಯುವನು. ಕಷ್ಟಗಳನ್ನು ನೀಡುವ ಮೂಲಕ ಜೀವನದ ಅರ್ಥ ಹಾಗೂ ಧರ್ಮವನ್ನು ತಿಳಿಸಿಕೊಡುವನು. ಖಗೋಳದಲ್ಲಿ ಗೋಚರಿಸುವ ಗ್ರಹಗಳಲ್ಲಿ ಶನಿಯು ವಿಶೇಷ ಸ್ಥಾನ ಹಾಗೂ ಶಕ್ತಿಯನ್ನು ಪಡೆದುಕೊಂಡ ಗ್ರಹ. ಅವನ ಪ್ರಭಾವಕ್ಕೆ ಒಳಗಾದಾಗ ಉಂಟಾಗು yವ ಅಹಿತಕರ ಸಂಗತಿಗಳಿಂದ ದೂರ ಇರಲು ಕೆಲವು ಪರಿಹಾರ ಕ್ರಮಗಳನ್ನು ವೇದ ಮತ್ತು ಪುರಾಣಗಳು ತಿಳಿಸುತ್ತವೆ
💐ಶನಿದೋಷ ಪರಿಹಾರ💐
ಶನಿ ದೇವನಿಗೆ ಎಳ್ಳೆಣ್ಣೆಯ ಅಭಿಷೇಕ, ಎಳ್ಳೆಣ್ಣೆಯ ದೀಪ ಬೆಳಗುವುದು, ಎಳ್ಳೆಣ್ಣೆಯಲ್ಲಿ ಮುಖವನ್ನು ನೋಡಿ ದಾನ ಮಾಡುವುದು ಹೀಗೆ ಅನೇಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಕ್ರಮಗಳನ್ನು ಅನುಸರಿಸುವುದಕ್ಕೆ ಕಾರಣ ಏನು ಎನ್ನುವುದು ಅನೇಕರಿಗೆ ತಿಳಿದಿಲ್ಲ. ಈ ಕುರಿತು ಸಣ್ಣ ಕಥೆ ಇಲ್ಲಿದೆ. ಹಿಂದೂ ಮಹಾ ಕಾವ್ಯವಾದ ರಾಮಾಯಣದ ಪ್ರಕಾರ, ರಾಮ ಸೇನೆಯು ರಾಮೇಶ್ವರದಿಂದ ಲಂಕೆಗೆ ಸೇತುವೆಯನ್ನು ನಿರ್ಮಿಸಿದರು. ಆಗ ಆ ಸೇತುವೆಯು ಶತ್ರುಗಳಿಂದ ಯಾವುದೇ ನಾಶಕ್ಕೆ ಒಳಗಾಗಬಾರದು, ಅದರ ಸುರಕ್ಷತೆಯನ್ನು ಹನುಮಂತನು ನಿರ್ವಹಿಸಬೇಕು ಎನ್ನುವ ಜವಾಬ್ದಾರಿ ನೀಡಲಾಗಿತ್ತು.
ಶನಿಯ ಅಹಂ ಮುರಿದ ಹನುಮ
💐ಒಂದು ದಿನ ಹನುಮಂತನು ಒಂದು ಮರದ ಕೆಳಗೆ ಕುಳಿತು ಭಗವಾನ್ ರಾಮನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದನು. ಆಗ ಶನಿ ದೇವನು ಅಲ್ಲಿಗೆ ಬಂದು "ನಾನು ಶಕ್ತಿಶಾಲಿ ಶನಿ ದೇವ. ನೀನು ಸಹ ಪರಮ ಶಕ್ತಿಶಾಲಿ ಎಂದು ನಾನು ಕೇಳಿದ್ದೇನೆ. ಆದ್ದರಿಂದ ನಿಮ್ಮ ಶಕ್ತಿಯನ್ನು ಮತ್ತು ನನ್ನ ಶಕ್ತಿಯನ್ನು ಪರೀಕ್ಷಿಸಲು ನಾನು ಬಯಸುತ್ತೇನೆ. ನೀನು ನಿನ್ನ ಕಣ್ಣುಗಳನ್ನು ಒಮ್ಮೆ ತೆರೆದು ನನ್ನೊಂದಿಗೆ ಹೋರಾಡು" ಎಂದು ಹೇಳಿದನು. ಆಗ ಹನುಮಂತನು ಕಣ್ಣು ತೆರೆದು, ಈಗ ನಾನು ನನ್ನ ಸ್ವಾಮಿಯನ್ನು ಧ್ಯಾನಿಸುತ್ತಿದ್ದೇನೆ. 💐ನನ್ನ ಪ್ರಾರ್ಥನೆಗೆ ತೊಂದರೆ ನೀಡಬೇಡ. ನನ್ನನ್ನು ಒಂಟಿಯಾಗಿ ಇರಲು ಬಿಡು ಎಂದು ಕೇಳಿಕೊಂಡನು. ಆದರೂ ಶನಿ ದೇವನು ಜಗಳವಾಡಲು ಪ್ರಾರಂಭಿಸಿದನು. ಆಗ ಹನುಮಾನ್ ತನ್ನ ಬಾಲವನ್ನು ನಿಧಾನವಾಗಿ ಸುರುಳಿ ಆಕಾರಕ್ಕೆ ತಂದು ಶನಿ ದೇವನನ್ನು ಬಿಗಿಯಾಗಿ ಹಿಡಿದನು. ಅದರಿಂದ ಶನಿ ದೇವನು ಬಿಡಿಸಿಕೊಳ್ಳಲು ಪ್ರಾರಂಭಿಸಿದನು. ಆದರೆ ಅದು ಸಾಧ್ಯವಾಗಲಿಲ್ಲ. ಬದಲಾಗಿ ಹನುಮಂತನು ತನ್ನ ಬಾಲವನ್ನು ಮೇಲೆ ಮತ್ತು ಕೆಳಗೆ ಬಡಿದು, ಸೇತುವೆಯ ವಿರುದ್ಧ ದಿಕ್ಕಿಗೆ ಹೊಡೆದನು. ಆಗ ಶನಿ ದೇವನಿಗೆ ಗಾಯ ಮತ್ತು ರಕ್ತ ಸ್ರಾವ ಪ್ರಾರಂಭವಾಯಿತು.
ಹನುಮ ಭಕ್ತರಿಗೆ ತೊಂದರೆ ನೀಡೆನೆಂದು ಮಾತು ಕೊಟ್ಟ ಶನಿ
💐ಶನಿ ದೇವನು ಹನುಮಂತನಲ್ಲಿ ನನ್ನನ್ನು ಬಿಟ್ಟು ಬಿಡು ಎಂದು ಕೇಳಿಕೊಂಡನು. ದಯವಿಟ್ಟು ನನ್ನನ್ನು ಬಿಟ್ಟು ಬಿಡು, ಇನ್ನು ಮುಂದೆ ಎಂದಿಗೂ ಈ ತಪ್ಪನ್ನು ಮಾಡುವುದಿಲ್ಲ ಎಂದು ಬೇಡಿಕೊಂಡನು. ಭವಿಷ್ಯದಲ್ಲಿ ರಾಮನ ಭಕ್ತರನ್ನು ಎಂದಿಗೂ ಪೀಡಿಸುವುದಿಲ್ಲ ಎಂದು ಮಾತು ಕೊಟ್ಟರೆ ಮಾತ್ರ ಬಿಡುತ್ತೇನೆ ಎಂದು ಹನುಮಂತನು ಹೇಳಿದನು. ಬಹಳ ನೊವಿನಿಂದ ಕೂಡಿದ್ದ ಶನಿಯು ಹಾಗೇ ಮಾಡುತ್ತೇನೆ ಎಂದು ಮಾತು ಕೊಟ್ಟನು. ನಿನ್ನ ಮತ್ತು ರಾಮನ ಭಕ್ತರಿಗೆ ಎಂದಿಗೂ ತೊಂದರೆ ನೀಡುವುದಿಲ್ಲ ಎಂದು ಮಾತು ಕೊಟ್ಟನು.
ನೋವಿಗೆ ಎಣ್ಣೆ ಕೇಳಿದ ಭಗವಾನ್ ಶನಿ​
ಭಗವಾನ್ ಶನಿಯು ರಕ್ತ ಸ್ರಾವ ಹಾಗೂ ಗಾಯಗಳನ್ನು ಹೊಂದಿದ್ದರಿಂದ ಅದನ್ನು ನಿವಾರಿಸಿಕೊಳ್ಳಲು ಹನುಮಂತನಲ್ಲಿ ಸ್ವಲ್ಪ ಎಣ್ಣೆಯನ್ನು ಕೇಳಿದನು. ಆಗ ಹನುಮಂತನು ಶನಿ ದೇವನಿಗೆ ಎಳ್ಳೆಣ್ಣೆಯನ್ನು ನೀಡಿದನು. ಅದನ್ನು ಅನ್ವಯಿಸಿದ ಮೇಲೆ ಶನಿ ದೇವನಿಗೆ ಆದ ಗಾಯ ಮತ್ತು ನೋವು ಗುಣಮುಖವಾದವು ಎಂದು ಹೇಳಲಾಗುವುದು.
ಶನಿಯನ್ನು ತೃಪ್ತಗೊಳಿಸಲು ಎಣ್ಣೆ
ಅಂದಿನಿಂದ ಶನಿ ದೇವರಿಗೆ ಎಣ್ಣೆಯನ್ನು ಅರ್ಪಿಸುವುದು ಒಂದು ಪದ್ಧತಿ ಅಥವಾ ವಾಡಿಕೆಯಾಯಿತು. ಎಳ್ಳೆಣ್ಣೆಯು ಎಲ್ಲಾ ಬಗೆಯ ನೋವುಗಳನ್ನು ಸುಲಭವಾಗಿ ನಿವಾರಿಸುವುದು. ಶನಿಯು ನೋವಿನಿಂದ ಮುಕ್ತನಾದ ಮೇಲೆ ಶಾಂತವಾದನು. ಇಲ್ಲವಾದರೆ ಭಯಭೀತರಾಗುವಷ್ಟು ಕೋಪಕ್ಕೆ ಒಳಗಾಗುತ್ತಿದ್ದನು ಎನ್ನಲಾಗುತ್ತದೆ. ಹಾಗಾಗಿ ಎಣ್ಣೆಯನ್ನು ಅರ್ಪಿಸುವ ಮೂಲಕ ಶನಿಯನ್ನು ಶಾಂತ ಮತ್ತು ತೃಪ್ತನನ್ನಾಗಿ ಮಾಡಲಾಗುವುದು.
​ಶನಿ ದೇವರನ್ನು ಮೆಚ್ಚಿಸಲು ಪರಿಹಾರ ಕ್ರಮಗಳು
ಎಳ್ಳೆಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಅರ್ಪಿಸುವುದು ಭಗವಾನ್ ಶನಿಗೆ ಅತ್ಯಂತ ಪ್ರಿಯವಾದ ಸಂಗತಿ. ಹಾಗಾಗಿ ಯಾರು ಶನಿ ದೋಷವನ್ನು ಅಥವಾ ಶನಿಯ ಪ್ರಭಾವಕ್ಕೆ ಒಳಗಾದವರು ಶನಿ ದೇವರಿಗೆ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ನೀಡಬೇಕು. ಆಗ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುವುದು. ಶನಿ ದೋಷ ಇರುವವರು ಪ್ರತಿ ಶನಿವಾರ ಸೂರ್ಯೋದಯಕ್ಕೂ ಮುಂಚೆ ಎದ್ದು ಅಶ್ವತ್ತ್ಥ ಮರದ ಸುತ್ತ ಒಂದು ಸುತ್ತನ್ನು ಸುತ್ತಬೇಕು. ಅಶ್ವತ್ಥ ಮರದ ಕೊಂಬೆಗಳ ಮೇಲೆ ಸಾಸಿವೆ ಎಣ್ಣೆಯನ್ನು ಸುರಿಯಬೇಕು. ಜೊತೆಗೆ ಮರಕ್ಕೆ ಕಪ್ಪು ಎಳ್ಳನ್ನು ಅರ್ಪಿಸಬೇಕು ಎಂದು ಹೇಳಲಾಗುವುದು
💐​ಬಡವರಿಗೆ ದಾನ💐
ಭಗವಾನ್ ಶನಿಯ ಅನುಗ್ರಹ ಪಡೆಯಲು ಬಡವರಿಗೆ ಹಾಗೂ ನಿರ್ಗತಿಕರಿಗೆ ದಾನ ಮತ್ತು ಸಹಾಯವನ್ನು ಮಾಡಬೇಕು. ಸಹಾಯದ ಅಗತ್ಯ ಇರುವ ವ್ಯಕ್ತಿಗಳಿಗೆ ಆಹಾರ, ಬಟ್ಟೆ ಹಾಗೂ ಹಣದ ಸಹಾಯ ಮಾಡಿ. ಅದು ವಿಶೇಷವಾಗಿ ಶನಿವಾರ ನೀಡಬೇಕು. ಕಪ್ಪು ಬಣ್ಣದ ಬಟ್ಟೆ, ಧಾನ್ಯ ಹಾಗೂ ಆಹಾರವನ್ನು ಶನಿವಾರ ನೀಡಿದರೆ ಅತ್ಯಂತ ಪುಣ್ಯ ಪ್ರಾಪ್ತಿಯಾಗುವುದು. ಜೊತೆಗೆ ಶನಿ ದೋಷವು ನಿವಾರಣೆಯಾಗುವುದು.
ವಾಯುಪುತ್ರ ಹನುಮಂತನನ್ನು ಆರಾಧಿಸ
ಭಗವಾನ್ ಶನಿ ಮತ್ತು ಹನುಮಂತನು ಅತ್ಯಂತ ಆಪ್ತ ಸ್ನೇಹಿತರು ಎಂದು ಹೇಳಲಾಗುವುದು. 💐ಹಾಗಾಗಿಯೇ ಶನಿ ದೋಷ ಇದ್ದಾಗ ಭಗವಾನ್ ಹನುಮಂತನನ್ನು.. ಆರಾಧಿಸುವುದು,.. ಹನುಮಾನ್ ಚಾಲಿಸ ಹೇಳುವುದು,... ವಿಶೇಷ ಪೂಜೆಯನ್ನು ನೀಡುವುದು ಮಾಡಿದರೆ ಶನಿ ದೇವನು ಸಂತೋಷ ಪಡುತ್ತಾನೆ. ಸಾಡೆಸಾತಿ ಮತ್ತು ಶನಿ ದೆಸೆ ನಡೆಯುವಾಗ ವಿಶೇಷವಾಗಿ ಹನುಮಾನ್ ಮತ್ತು ಶನಿಯ ಆರಾಧನೆ ಮಾಡಬೇಕು ಗಣೇಶ.. ನರಸಿಂಹ ಮೂರ್ತಿ ದೇವರು. ವಿಷ್ಣು ಸಹಸ್ರ ನಾಮ ಹೇಳುವುದು. ಎಂದು ಹೇಳಲಾಗುವುದು.
ಕಪ್ಪು ಬಟ್ಟೆಯನ್ನು ಧರಿಸಿ ಕೆಲವರಿಗೆ ಕಪ್ಪು ಬಣ್ಣ ಆಗಿ ಬರುವುದು.. ಕೆಲವರಿಗೆ. ರಾಶಿ ಗೆ,,,? ಅಯ್ಯಪ್ಪ ಸ್ವಾಮಿಯ ದೀಕ್ಷೆ ಅಥವಾ ಮೊದಲ ಬಾರಿಗೆ ಹಾಕುವರು.. ಕ ನ್ನೀ ಸ್ವಾಮಿ. ಕಪ್ಪು ಬಣ್ಣದ ಬಟ್ಟೆ.. . ದೊಡ್ಡ ಸ್ವಾಮಿ. ನೀಲಿ ಬಣ್ಣದ ಬಟ್ಟೆ
ಕಪ್ಪು ಭಗವಾನ್ ಶನಿಯ ಬಣ್ಣ. ಹಾಗಾಗಿ ಶನಿವಾರ ಕಪ್ಪು ಅಥವಾ ನೀಲಿ ಬಣ್ಣವನ್ನು ಧರಿಸಬೇಕು. ಅವು ಶನಿಗೆ ಪ್ರಿಯವಾದ ಬಣ್ಣವಾದ್ದರಿಂದ ಒಳ್ಳೆಯ ಪರಿಣಾಮಗಳು ನಿಮ್ಮ ಮೇಲೆ ಉಂಟಾಗುವುದು. ಆದರೆ ಶನಿವಾರದಂದು ಚರ್ಮದ ವಸ್ತು ಮತ್ತು ಕಪ್ಪು ಬಟ್ಟೆಯನ್ನು ಖರೀದಿಸಬಾರದು. ಅದು ಶನಿ ದೇವರಿಗೆ ಕೋಪವನ್ನು ತರಿಸುವುದು.
ತಾಮಸ ಗುಣವಿರುವ ಪದಾರ್ಥ ತ್ಯಜಿಸಬೇಕು
ಭಗವನ್ ಶನಿದೇವರನ್ನು ಮೆಚ್ಚಿಸಲು ಮದ್ಯಪಾನ ಮಾಡಬಾರದು. ಮದ್ಯ ಮತ್ತು ಧೂಮಪಾನ ಹವ್ಯಾಸ ಇರುವವರು ಅದನ್ನು ಬಿಡಬೇಕು. 💐ಮದ್ಯವು ಅನ್ಯಾಯದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಮದ್ಯಪಾನ ಮತ್ತು ಮಾಂಸವನ್ನು ಸೇವಿಸುವ ಚಟಗಳನ್ನು ಶನಿಯು ದ್ವೇಷಿಸುತ್ತಾನೆ. ತಾಮಸ ಗುಣಗಳನ್ನು ಹಾಳು ಮಾಡುವ ವಸ್ತುಗಳ ಸೇವನೆ ಮಾಡಿದರೆ ಶನಿಯು ಶಿಕ್ಷೆ ನೀಡುವನು. ಶನಿಯ ಪ್ರಭಾವ ಇರುವ ಸಮಯದಲ್ಲಿ ವ್ಯಕ್ತಿ ಇಂತಹ ಕೆಟ್ಟ ಚಟಗಳಿಂದ ದೂರ ಉಳಿಯಬೇಕು.
​ಪ್ರಾಮಾಣಿಕರಾಗಿರಬೇಕು
💐ಲಂಚ ನೀಡುವುದು ಮತ್ತು ಪಡೆಯುವುದು ಹಾಗೂ ಇತರರಿಗೆ ನೋಯಿಸುವುದು ಅತ್ಯಂತ ಪಾಪದ ಕೃತ್ಯ. ಅಂತಹ ಕೆಲಸವನ್ನು ಮಾಡಿದರೆ ಶನಿಯು ಇಷ್ಟಪಡುವುದಿಲ್ಲ. ನ್ಯಾಯ ದೇವನಾದ ಶನಿಯು ಈ ರೀತಿಯ ಕೃತ್ಯ ಮಾಡಿದವರಿಗೆ ಸೂಕ್ತ ಶಿಕ್ಷೆ ನೀಡುವನು. ಜನರು ಸಾಕಷ್ಟು ನೋವು ಹಾಗೂ ಕಷ್ಟವನ್ನು ಎದುರಿಸಬೇಕಾಗುವುದು. ಹಾಗಾಗಿ ಪ್ರತಿಯೊಬ್ಬರು ತಾವು ಮಾಡುವ ಕೆಲಸ ಹಾಗೂ ಕರ್ತವ್ಯಗಳ ಮೇಲೆ ಸೂಕ್ತ ಗಮನವನ್ನು ಹೊಂದಿದ್ದರೆ ಜೀವನವು ಉತ್ತಮವಾಗಿ ಸಾಗುವುದು. 💐ಓಂ ಶನಿ

🙏 Copy Pasted Content🙏
✍️💐 D. N. Narayana ಶರ್ಮ. ✍️

ಕೃಷ್ಣನಾಮದ ಕೀರ್ತನೆ- "ಅತಿಥಿ ಬರದೇ ಭೋಜನ ಮಾಡಲಾರೆ"ಮಹಾಭಾರತ ಯುದ್ಧದ ನಂತರ ಶ್ರೀಕೃಷ್ಣ ಮತ್ತು ಅರ್ಜುನ ದ್ವಾರಕಾ ನಗರಿಗೆ ಹೋದರು. ಈ ಬಾರಿ ಅರ್ಜ...
24/08/2020

ಕೃಷ್ಣನಾಮದ ಕೀರ್ತನೆ- "ಅತಿಥಿ ಬರದೇ ಭೋಜನ ಮಾಡಲಾರೆ"
ಮಹಾಭಾರತ ಯುದ್ಧದ ನಂತರ ಶ್ರೀಕೃಷ್ಣ ಮತ್ತು ಅರ್ಜುನ ದ್ವಾರಕಾ ನಗರಿಗೆ ಹೋದರು. ಈ ಬಾರಿ ಅರ್ಜುನನೇ ರಥವನ್ನು ನಡೆಸಿದನು. ದ್ವಾರಕೆ ತಲುಪಿದಾಗ ಅರ್ಜುನನು ತುಂಬಾ ಬಳಲಿದ್ದನು. ಆದುದರಿಂದ ವಿಶ್ರಾಂತಿ ಪಡೆಯಲು ಅತಿಥಿ ಭವನಕ್ಕೆ ತೆರಳಿದನು.
ಸಂಜೆಯ ವೇಳೆ ರುಕ್ಮಿಣಿಯು ಶ್ರೀಕೃಷ್ಣನಿಗೆ ಊಟವನ್ನು ಬಡಿಸಿದಳು. ಆಗ ಶ್ರೀಕೃಷ್ಣನು, "ಮನೆಗೆ ಅತಿಥಿ ಬಂದಿದ್ದಾರೆ, ಅವರನ್ನು ಬಿಟ್ಟು ಹೇಗೆ ಊಟ ಮಾಡಲಿ?".
ರುಕ್ಮಿಣೀ,"ಭಗವನ್ ನೀವು ಊಟವನ್ನು ಆರಂಭಿಸಿರಿ, ನಾನು ಹೋಗಿ ಅರ್ಜುನನ್ನು ಕರೆತರುತ್ತೇನೆ" ಎಂದು ಹೇಳಿ, ಅತಿಥಿ ಭವನಕ್ಕೆ ಹೋದಾಗ ಅರ್ಜುನನು ನಿದ್ರಿಸುತ್ತಿದ್ದನು ಹಾಗೂ ಅವನ ರೋಮ-ರೋಮದಲ್ಲಿ ಕೃಷ್ಣನಾಮದ ಕೀರ್ತನೆ ಹೊರಹೊಮ್ಮುತ್ತಿತ್ತು. ಹೀಗಾಗಿ ರುಕ್ಮೀಣಿಯು ಕೃಷ್ಣನನ್ನು ಮರೆತು, ಮೆಲ್ಲನೆ ಚಪ್ಪಾಳೆ ತಟ್ಟುತ್ತಾ ಕೃಷ್ಣನಾಮದಲ್ಲಿ ತಲ್ಲೀನನಾದಳು.
ಇತ್ತ ನಾರದರು ಶ್ರೀಕೃಷ್ಣನ ಬಳಿ ಬಂದು, "ಭಗವಾನ್ ಭೋಜನ ತಣ್ಣಗಾಗುತ್ತಿದೆ" ಎಂದಾಗ, ಕೃಷ್ಣನು,"ಅತಿಥಿ ಬರದೇ ಭೋಜನ ಮಾಡಲಾರೆ" ಎಂದನು.
ನಾರದರು, "ನಾನು ಹೋಗಿ ಅರ್ಜುನನ್ನು ಕರೆತರುತ್ತೇನೆ" ಎಂದು ಹೇಳಿ ಅತ್ತ ಹೋದಾಗ ಅಲ್ಲಿನ ದೃಶ್ಯ ನೋಡಿ, ಅರ್ಜುನನ್ನು ಎಬ್ಬಿಸುವ ಬದಲು ತಮ್ಮ ವೀಣೆಯನ್ನು ನುಡಿಸಲು ಪ್ರಾರಂಭಿಸಿದರು.
ಸತ್ಯಭಾಮೆಯು ಕೃಷ್ಣನಿಗೆ, 'ಭಗವನ್, ಭೋಜನ ತಣ್ಣಗಾಗುತ್ತಿದೆ, ನೀವು ಆರಂಭವಾದರೂ ಮಾಡಿ. ಕೃಷ್ಣನು, "ಅತಿಥಿ ಬರದೇ ಭೋಜನ ಮಾಡಲಾರೆ"
ಸತ್ಯಭಾಮೆಯು, "ನಾನು ಹೋಗಿ ಕರೆತರುತ್ತೇನೆ" ಎಂದು ಹೇಳಿ ಅರ್ಜುನನಿರುವ ಕಡೆಗೆ ಹೋದಾಗ, ನಿದ್ರಿಸುತ್ತಲೇ ಇದ್ದ ಅರ್ಜುನನ ರೋಮ-ರೋಮದಿಂದ ಹೊರಹೊಮ್ಮುತ್ತಿದ್ದ 'ಕೃಷ್ಣನಾಮ ಕೀರ್ತನೆಯಿಂದಾಗಿ' ರುಕ್ಮಿಣಿಯು ಚಪ್ಪಾಳೆ ತಟ್ಟುತ್ತಿದ್ದಳು, ನಾರದರು ವೀಣೆಯನ್ನು ನುಡಿಸುತ್ತಿದ್ದರು. ಸತ್ಯಭಾಮೆಯೂ ನರ್ತಿಸಲು ಪ್ರಾರಂಭಿಸಿದಳು.
ಇಲ್ಲಿ ಕೃಷ್ಣ, "ಎಲ್ಲರೂ ನನ್ನ ಭೋಜನ ತಣ್ಣಗಾಗುತ್ತಿದೆಯೆಂದೂ, ಅರ್ಜುನನ್ನು ಕರೆತರುವುದಾಗಿ ಹೇಳಿ ಹೊರಟವರು ಎಲ್ಲಿ? ನನ್ನ ಚಿಂತೆ ಯಾರಿಗೂ ಇಲ್ಲ. ನಾನೇ ಹೋಗಿ ಅಲ್ಲೇನಾಗುತ್ತಿದೆ ಎಂದು ನೋಡುವೆ" ಎಂದು ಅರ್ಜುನ ನಿದ್ರಿಸುತ್ತಿದ್ದ ಅತಿಥಿ ಭವನಕ್ಕೆ ಹೋಗಿ ನೋಡಿದಾಗ, ಅಲ್ಲಿ ಸ್ವರ ಲಹರಿ ನಡೆಯುತ್ತಿತ್ತು.
ಅರ್ಜುನ ಮಲಗಿಕೊಂಡೇ ಕೀರ್ತನೆ ಮಾಡುತ್ತಿದ್ದಾನೆ.
ರುಕ್ಮೀಣಿಯು ಚಪ್ಪಾಳೆ ತಟ್ತುತ್ತಿದ್ದಾಳೆ.
ನಾರದರು ವೀಣೆಯನ್ನು ನುಡಿಸುತ್ತಿದ್ದಾರೆ.
ಮತ್ತು ಸತ್ಯಭಾಮೆಯು ನೃತ್ಯ ಮಾಡುತ್ತಿದ್ದಾಳೆ.
ಈ ದೃಶ್ಯವನ್ನು ನೋಡಿ ಕೃಷ್ಣನ ಕಣ್ಣುಗಳಲ್ಲಿ ಆನಂದ ಭಾಷ್ಪ ಸುರಿಯತೊಡಗಿತು ಹಾಗೂ ಸ್ವಯಂ ಅರ್ಜುನನ ಕಾಲುಗಳನ್ನು ಒತ್ತತೊಡಗಿದನು.
ಕೃಷ್ಣನ ಕಣ್ಣೀರು ಅರ್ಜುನನ ಕಾಲುಗಳ ಮೇಲೆ ಬಿದ್ದಾಗ ಎಚ್ಚರಗೊಂಡು ಗಲಿಬಿಲಿಯಾದ ಅರ್ಜುನನು, "ಪ್ರಭು ಇದೇನಾಗುತ್ತಿದೆ...? ಎಂದಾಗ,
ಕೃಷ್ಣನೆಂದನು, "ಅರ್ಜುನಾ, ನಿನ್ನ ರೋಮ-ರೋಮದಲ್ಲಿ ನನ್ನನ್ನು ಆವರಿಸಿಕೊಂಡಿದ್ದೀಯಾ. ಆದುದರಿಂದ ನೀನು ನನಗೆ ತುಂಬಾ ಪ್ರಿಯನಾಗಿದ್ದೀಯಾ ಎಂದು ಹೇಳಿ ಅರ್ಜುನನ್ನು ಪ್ರೇಮದಿಂದ ಆಲಂಗಿಸಿಕೊಂಡನು.
ಲೀಲಾಧಾರಿಯಾದ ಕೃಷ್ಣನೇ,
ಭಕ್ತನೂ ನೀನೇ..
ದೇವನೂ ನೀನೇ...
ಮಾಡುವವನೂ ನೀನೇ....
ಮಾಡಿಸುವವನೂ ನೀನೇ.....
ಭಕ್ತ ಮತ್ತು ದೇವರಿಗೆ ಜಯವಾಗಲಿ......
ಯಾರ ಆಚರಣೆಗಳು ಪೂಜಿಸಲು ಯೋಗ್ಯವಾಗಿದೆಯೋ ಅಂತಹವರ ಚರಣಗಳನ್ನೇ ಪೂಜಿಸಲಾಗುತ್ತದೆ.

ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

🙏Copy and Pasted from Nithya Sathya Page 🙏

Ganesh Chaturthi is Celebrated in Vittal Rukmini Devi Mandir in in Vittal Rukmini and Hanuman Mandir in Kuragund on 22 S...
23/08/2020

Ganesh Chaturthi is Celebrated in Vittal Rukmini Devi Mandir in in Vittal Rukmini and Hanuman Mandir in Kuragund on 22 September 2020.

Address

Honnudike
591118

Website

Alerts

Be the first to know and let us send you an email when Vittal and Hanuman Mandir Kuragund posts news and promotions. Your email address will not be used for any other purpose, and you can unsubscribe at any time.

Share