09/09/2026
ಹಾಸನ: ಕಳೆದ 12 ವರ್ಷಗಳಿಂದ ಜನಸಾಮಾನ್ಯರಿಗೆ ಕೈಗೆಟುಕುವ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುತ್ತಿರುವ ನಗರದ ಜನಪ್ರಿಯ ಆಸ್ಪತ್ರೆ, ತನ್ನ ಸೇವಾ ನಿಸ್ವಾರ್ಥತೆಯ ಮೂಲಕ ಸಾರ್ವಜನಿಕರ ವಿಶ್ವಾಸಗಳಿಸಿದೆ ಎಂದು ಆರಸೀಕೆರೆಯ ಹಾರನಹಳ್ಳಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ತಿಳಿಸಿದ್ದಾರೆ.
ನಗರದ ಜನಪ್ರಿಯ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಆಸ್ಪತ್ರೆಯ 12ನೇ ವಾರ್ಷಿಕೋತ್ಸವದ ಸರಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಸ್ಪತ್ರೆಯ ಮುಖ್ಯಸ್ಥ ಡಾ. ಬಶೀರ್ ಅವರು ವೃತ್ತಿಧರ್ಮದ ಜತೆಗೆ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಸೇವಾ ಪರಂಪರೆ ಮುಂದುವರಿಕೆ: ಹಿರಿಯ ವೈದ್ಯರ ಹೆಜ್ಜೆಗುರುತನ್ನು ಅನುಸರಿಸುತ್ತಾ ಅವರ ಪುತ್ರರೂ ಅದೇ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ.
ಸರ್ವಧರ್ಮಗಳ ಸಂಗಮ: ಹಿಂದೂ ಸ್ವಾಮೀಜಿ, ಕಥೋಲಿಕ ಕ್ರೈಸ್ತ ಧರ್ಮಗುರು ಹಾಗೂ ಮುಸ್ಲಿಂ ಧರ್ಮಗುರುಗಳು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದು ಆಸ್ಪತ್ರೆಯ ಸೇವೆಗೆ ಶುಭ ಹಾರೈಸಿರುವುದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಶತಮಾನೋತ್ಸವದ ಆಶಯ: ಆಸ್ಪತ್ರೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆದು ಶತಮಾನೋತ್ಸವ ಆಚರಿಸುವಂತಾಗಲಿ ಎಂದು ಸ್ವಾಮೀಜಿ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಸ್ಪತ್ರೆಯ ಮುಖ್ಯಸ್ಥ ಡಾ. ಬಶೀರ್, ಜನರ ವಿಶ್ವಾಸವೇ ಆಸ್ಪತ್ರೆಯ ನಿಜವಾದ ಶಕ್ತಿಯಾಗಿದ್ದು, ಎಲ್ಲ ಧರ್ಮಗಳ ಗುರುಗಳ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಮುಂದೆಯೂ ಬಡಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಬದ್ಧವಾಗಿರುವುದಾಗಿ ತಿಳಿಸಿದರು.
ಈ ಸರಳ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಎಚ್.ಬಿ. ಮದನ್ ಗೌಡ, ರವಿ ನಾಕಲಗೂಡು, ಸಂತ ಅಂತೋಣಿಯವರ ದೇವಾಲಯದ (ಎನ್.ಆರ್. ವೃತ್ತ) ಕಥೋಲಿಕ ಧರ್ಮಗುರು ಫಾ. ಪ್ಯಾಟ್ರಿಕ್ ಜೊಹಾನಸ್ ರಾವ್, ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.