22/03/2025
ಜೈ ರಾಮಕೃಷ್ಣ.
ಆತ್ಮೀಯ ಭಕ್ತರಿಗೆ ಹೋಳಿ ಹಬ್ಬದ (ಕಾಮ ದಹನದ) ಶುಭಾಶಯಗಳು.
ದಿವ್ಯತ್ರಯರ ಕೃಪಾಶೀರ್ವಾದ ತಮ್ಮ ಮೇಲೆ ಸದಾ ಇರಲಿ.
ದಾವಣಗೆರೆ ರಾಮಕೃಷ್ಣ ಮಿಷನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪೂಜ್ಯ ಸ್ವಾಮಿ ತೀರ್ಥಕರಾನಂದಜಿ ಮಹಾರಾಜರು ದಾವಣಗೆರೆಯಿಂದ ಕ್ಯಾಲಿಕಟ್ ರಾಮಕೃಷ್ಣ ಆಶ್ರಮಕ್ಕೆ ವರ್ಗವಾಗಿ ಹೋಗುವ ಮುನ್ನ(ಇಂದು) ಆಶ್ರಮಕ್ಕೆ ಆಗಮಿಸಿದ ಸುಸಂದರ್ಭ.
ಇದೇ ಸಂದರ್ಭದಲ್ಲಿ ದಿವ್ಯತ್ರಯರಿಗೆ ಹಾಗೂ ಆಶ್ರಮದ ವಿದ್ಯಾರ್ಥಿಗಳಿಗೆ ಬಣ್ಣವನ್ನು ಹಚ್ಚಿ ಸಾಂಕೇತಿಕವಾಗಿ ಬಣ್ಣದ ಹಬ್ಬವನ್ನು ಆಚರಿಸಲಾಯಿತು.