12/02/2026
........*ಶ್ರೀಮಠದ ಪ್ರಕಟಣೆ*..........
*ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ 2026*
*ದಿನಾಂಕ 08/02/2026 ಭಾನುವಾರ ಮತ್ತು ದಿನಾಂಕ: 09/02/2026*
*ಸ್ಥಳ: ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ,*
*ಜಗದ್ಗುರು ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿವರ ದಿವ್ಯ ಸಾನಿಧ್ಯದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಶಾಸಕರಾದ ಸನ್ಮಾನ್ಯ ಶ್ರೀ ಬಸವನಗೌಡ ದದ್ದಲ್ ರವರ ಅಧ್ಯಕ್ಷತೆಯಲ್ಲಿ ನಿವೃತ್ತ ಎಸಿಪಿ ಹಾಗೂ ಜಾತ್ರಾ ಸಮಿತಿ ಸಂಚಾಲಕರಾದ ಸನ್ಮಾನ್ಯ ಶ್ರೀ ಪಂಪಾಪತಿ ರವರ ಹಾಗೂ ಸಮಸ್ತ ಸಮುದಾಯದ ಬಂಧುಗಳ ಸಮಕ್ಷಮದಲ್ಲಿ 8ನೇ ವರ್ಷದ ಐತಿಹಾಸಿಕ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು*
*ಮೊದಲನೇ ದಿನ*
ಬೆಳಿಗ್ಗೆ 08 ಗಂಟೆಗೆ
*ರಾಜನಹಳ್ಳಿ ಗ್ರಾಮದ ಸಮಸ್ತ ಸರ್ವ ಸಮುದಾಯದ ಮಹಿಳೆಯರು ಕುಂಭ ಆರತಿಯೊಂದಿಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಭವ್ಯ ಮೆರವಣಿಗೆಯೊಂದಿಗೆ ಸಾಗಿ, ಹಿರಿಯ ಮುಖಂಡರು ಚಳ್ಳಕೆರೆ ತಾಲೂಕು ಸಮಾಜದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಪ್ಪ ನಾಯಕರು ಇವರ ಅಮೃತ ಹಸ್ತದಿಂದ ಶ್ರೀ ಮಹರ್ಷಿ ವಾಲ್ಮೀಕಿ ದ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು*
*ನಂತರ ಹರಿಹರ ಶಾಸಕರಾದ ಸನ್ಮಾನ್ಯ ಶ್ರೀ ಬಿ. ಪಿ ಹರೀಶ್ ರವರಿಂದ ಬುಡಕಟ್ಟು ವಸ್ತು ಪ್ರದರ್ಶನ ಮೇಳ ಹಾಗೂ ವಿವಿಧ ಘಟಕಗಳ ಉದ್ಘಾಟನೆ, ಹರಿಹರ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಎಚ್ಎಸ್ ಶಿವಶಂಕರ್ ರವರಿಂದ ಕೃಷಿ ವಸ್ತು ಪ್ರದರ್ಶನ ಮೇಳ ಹಾಗೂ ವಿವಿಧ ಘಟಕಗಳ ಉದ್ಘಾಟನೆ, ಹಾಗೂ ಹರಿಹರ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಎಸ್ ರಾಮಪ್ಪ ರವರಿಂದ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ ಉದ್ಯೋಗ ಮೇಳ ಉದ್ಘಾಟನೆ ನೆರವೇರಿತು*
*ನಂತರ "ಮಹಿಳಾ ಗೋಷ್ಠಿ ಕಾರ್ಯಕ್ರಮದಲ್ಲಿ ಶ್ರೀಮಠದ ಧರ್ಮದರ್ಶಿಗಳಾದ ಶ್ರೀಮತಿ ಶಾಂತಲಾ ರಾಜಣ್ಣರವರು ಅಧ್ಯಕ್ಷತೆ ವಹಿಸಿದ್ದರು ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮಿ ಚೌದರಿ ರವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು, ಮಹಿಳಾ ಗೋಷ್ಠಿ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣ ರವರು ಉಪಸ್ಥಿತರಿದ್ದು ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಿ ಮೀಸಲಾತಿ ಹೆಚ್ಚಿಸಿರುವ ರಾಜ್ಯ ಸರ್ಕಾರದ ಆದೇಶವನ್ನು 9ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಭರವಸೆ ನೀಡಿದರು, ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕರವರು ಉಪಸ್ಥಿತರಿದ್ದರು,*
*ನೌಕರರ ಗೋಷ್ಠಿ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡ ನೌಕರ ಸಂಘದ ರಾಜ್ಯದ್ಯಕ್ಷರಾದ ಸನ್ಮಾನ್ಯ ಶ್ರೀ ಜಗದೀಶ್ವರ ಮೂರ್ತಿರವರು ಅಧ್ಯಕ್ಷತೆ ವಹಿಸಿದ್ದರು, ಸನ್ಮಾನ್ಯ ಶ್ರೀ ರಾಜಶೇಖರ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಸಿಟಿ ರವಿ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಕಾರ್ಯಕ್ರಮದಲ್ಲಿ ನೌಕರ ಸಂಘದ ಪದಾಧಿಕಾರಿಗಳು ನೌಕರರು ಉಪಸ್ಥಿತರಿದ್ದರು*
*ವೈದ್ಯರ ಗೋಷ್ಠಿ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಶಾಸಕರಾದ ಸನ್ಮಾನ್ಯ ಶ್ರೀ ಡಾ. ಎನ್ ಟಿ ಶ್ರೀನಿವಾಸ್ ರವರು ಉದ್ಘಾಟಿಸಿದರು. ಶ್ರೀಮತಿ ಡಾಕ್ಟರ್ ಶೋಭಾ ಎಚ್‌ಪಿ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಶಿವಮೊಗ್ಗ ಸಂಸದರಾದ ಸನ್ಮಾನ್ಯ ಶ್ರೀ ಬಿವೈ ರಾಘವೇಂದ್ರ ಅವರು ಮಾತನಾಡಿ ಮೀಸಲಾತಿ 9ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂಬ ಭರವಸೆ ನೀಡಿದರು, ಸನ್ಮಾನ್ಯ ಶ್ರೀ ಸುರೇಶ್ ಕನಕಣ್ಣನವರ್, ಸನ್ಮಾನ್ಯ ಶ್ರೀ ಡಾ. ಶ್ರೀಧರ್ ಪ್ರಸಾದ್, ಸನ್ಮಾನ್ಯ ಶ್ರೀ ಡಾ. ಸುನಿಲ್ ಕುಮಾರ್, ಸನ್ಮಾನ್ಯ ಶ್ರೀ ಡಾ. ಲಕ್ಷ್ಮಯ್ಯ, ರವರು ಸೇರಿದಂತೆ ಖ್ಯಾತ ವೈದ್ಯಾಧಿಕಾರಿಗಳು ವೈದ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.*
*ಕಾನೂನು ಗೋಷ್ಠಿ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎನ್ ಎಸ್ ಪಾಟೀಲ್ ರವರು ಅಧ್ಯಕ್ಷತೆ ವಹಿಸಿದ್ದರು, ಹೈಕೋರ್ಟ್ ವಕೀಲರಾದ ಸನ್ಮಾನ್ಯ ಶ್ರೀ ಸಣ್ಣ ನಾಯಕ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಹೈಕೋರ್ಟ್ ಹೆಚ್ಚುವರಿ ಅಡ್ವಕೇಟ್ ಜನರಲ್ ಸನ್ಮಾನ್ಯ ಶ್ರೀ ಎನ್ ವೈ ವಿಜಯ್ ಕುಮಾರ್ ರವರು, ಸಾಮರಸ್ಯ ವೇದಿಕೆ ಸನ್ಮಾನ್ಯ ಶ್ರೀ ವಾದಿರಾಜ ರವರು ಉಪನ್ಯಾಸ ನೀಡಿದರು, ಅ.ಕ.ವಾ.ನಾ. ಮಹಾಸಭಾ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಜಿ ಟಿ ಚಂದ್ರಶೇಖರಪ್ಪ, ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಾರೆಪ್ಪ ನಾಯಕ ವಿಷಯ ಮಂಡನೆ ಮಾಡಿದರು, ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಸೇರಿದಂತೆ ವಕೀಲರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು*
*ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸಮುದಾಯದ ಗಣ್ಯಮಾನ್ಯರು ಉಪಸ್ಥಿತರಿದ್ದರು*
*ರಾತ್ರಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಾಸನ ಜಿಲ್ಲಾ ಕಲಾತಂಡವರಿಂದ ಸಂಪೂರ್ಣ ರಾಮಾಯಣ ನಾಟಕ ನೆರವೇರಿತು*
*ಎರಡನೇ ದಿನ*
*ಪೂಜ್ಯಶ್ರೀಗಳು ಹಾಗೂ ಸಮುದಾಯದವರಿಂದ ಶ್ರೀಮಠದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮದಿಂದ ಪ್ರಾರಂಭವಾಯಿತು.*
*ಮಹರ್ಷಿ ವಾಲ್ಮೀಕಿ ರಥೋತ್ಸವಕ್ಕೆ ಚಾಲನೆ*
*ಮೈಸೂರಿನ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮೀಜಿಯವರ ಅಮೃತ ಹಸ್ತ ಹಾಗೂ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದುರ್ಗದ ಜಲ್ಲಿ ವೆಂಕಟೇಶ್ ಮತ್ತು ಕುಟುಂಬದವರಿಂದ ಹೆಲಿಕ್ಯಾಪ್ಟರ್ ಮೂಲಕ ರಥೋತ್ಸವಕ್ಕೆ ಪುಷ್ಪಾರ್ಚನೆ ಸೇವೆ ಸಲ್ಲಿಸಿದರು*
*ಧರ್ಮಸಭೆ*
*ಮೈಸೂರಿನ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮೀಜಿಗಳವರು, ಹರಿಹರ ವೀರಶೈವ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಜಿಗಳವರು, ನಂದಿಗುಡಿ ವೃಷಭಪುರಿ ಮಹಾ ಸಂಸ್ಥಾನ ಮಠದ ಜಗದ್ಗುರು ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು, ಗೊಲ್ಲಪಲ್ಲಿ ವಾಲ್ಮೀಕಿ ಆಶ್ರಮದ ಪೂಜ್ಯ ಶ್ರೀ ವರದಾನೇಶ್ವರ ಸ್ವಾಮಿಜಿಗಳವರು, ಶಿಡ್ಲಕೋಣ ವಾಲ್ಮೀಕಿ ಆಶ್ರಮದ ಪೂಜ್ಯ ಶ್ರೀ ಸಂಜಯಕುಮಾರ ಸ್ವಾಮೀಜಿರವರು ಹರಿಹರ ಪುಣ್ಯಕೋಟಿ ಮಠದ ಪೂಜ್ಯಶ್ರೀ ಬಾಲ ಯೋಗಿ ಜಗದೀಶ್ವರ ಮಹಾಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ಧರ್ಮಸಭೆ ನಡೆಯಿತು*
*ಜನಜಾಗೃತಿ ಜಾತ್ರಾ ಮಹೋತ್ಸವ*
*ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರು ಜನಜಾಗೃತಿ ಜಾತ್ರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಸಮಸ್ತ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು ಮೀಸಲಾತಿ ಹೆಚ್ಚಿಸಿರುವ ರಾಜ್ಯ ಸರ್ಕಾರದ ಆದೇಶ ಜಾರಿ ಮಾಡುವಂತೆ 9ನೇ ಪರಿಚ್ಛೇದ ಸೇರಿಸುವಂತೆ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗುವ ಭರವಸೆ ನೀಡಿದರು, ಬಂಡೊಳ್ಳಿಯ ಶ್ರೀಮಠದ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರದಿಂದ ಐದು ಕೋಟಿ ಅನುದಾನ ಬಿಡುಗಡೆ ಮಾಡಿರುವುದು ಸೇರಿದಂತೆ ಸಮುದಾಯಕ್ಕೆ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಿ ಶೀಘ್ರವೇ ಇತ್ಯರ್ಥ ಪಡಿಸುವ ಭರವಸೆ ನೀಡಿದರು*
*ವಾಲ್ಮೀಕಿ ರತ್ನ ಪ್ರಶಸ್ತಿ ಪ್ರಧಾನ ಹಾಗೂ ಮದಕರಿ ನಾಯಕ ಪ್ರಶಸ್ತಿ ಪ್ರಧಾನ*
*ಶ್ರೀಮಠದಿಂದ ಕೊಡ ಮಾಡಲ್ಪಡುವ ಪ್ರತಿಷ್ಠಿತ ವಾಲ್ಮೀಕಿ ರತ್ನ ಪ್ರಶಸ್ತಿಯನ್ನು ವಿಶ್ರಾಂತ ನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ ಎನ್ ವೈ ಹನುಮಂತಪ್ಪ ರವರಿಗೆ ಹಾಗೂ ಮದಕರಿ ನಾಯಕ ಪ್ರಶಸ್ತಿಯನ್ನು ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿಗಳಾದ,ಹಾಗೂ ಐಪಿಎಸ್ ಅಧಿಕಾರಿಗಳಾದ ಸನ್ಮಾನ್ಯ ಶ್ರೀ ರವಿ ಡಿ ಚನ್ನಣ್ಣನವರ್ ಅವರಿಗೆ ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರಧಾನ ಮಾಡಿದರು*
*ವಾಲ್ಮೀಕಿ ವಿಜಯ ಸ್ಮರಣ ಸಂಪುಟ 8ರ ಬಿಡುಗಡೆ*
*ಸಂಪಾದನಾ ಸಮಿತಿ ಅಧ್ಯಕ್ಷರಾದ ಕುವೆಂಪು ವಿಶ್ವವಿದ್ಯಾನಿಲಯದ ಸನ್ಮಾನ್ಯ ಶ್ರೀ ಪ್ರೊII ಜಿ ಪ್ರಶಾಂತ್ ನಾಯಕ್ ರವರು ಹಾಗೂ ಸಂಪಾದನಾ ಮಂಡಳಿಯ ಸದಸ್ಯರು ಹೊರತಂದಿರುವ ವಾಲ್ಮೀಕಿ ವಿಜಯ ಸ್ಮರಣ ಸಂಪುಟ 8 ನ್ನು ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು*
*ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಹೆಚ್ ಸಿ ಮಹದೇವಪ್ಪ ರವರು, ಲೋಕೋಪಯೋಗಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ರವರು ವಿಧಾನಸಭಾ ಉಪ ಸಭಾಪತಿಗಳಾದ ಸನ್ಮಾನ್ಯ ಶ್ರೀ ರುದ್ರಪ್ಪ ಲಮಾಣಿ ರವರು, ವಿಧಾನಸಭಾ ವಿರೋಧ ಪಕ್ಷದ ಉಪನಾಯಕರಾದ ಸನ್ಮಾನ್ಯ ಶ್ರೀ ಅರವಿಂದ್ ಬೆಲ್ಲದ್ ರವರು, ಸಂಸದರಾದ ಸನ್ಮಾನ್ಯ ಶ್ರೀ ಜಿ ಕುಮಾರ್ ನಾಯಕ ರವರು, ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಸಿರಾ ಶಾಸಕರಾದ ಸನ್ಮಾನ್ಯ ಶ್ರೀ ಟಿಬಿ ಜಯಚಂದ್ರ ಅವರು, ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಎಂಪಿ ರೇಣುಕಾಚಾರ್ಯರವರು, ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಶಿವನಗೌಡ ನಾಯಕ ಅವರು, ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು, ಸನ್ಮಾನ್ಯ ಶ್ರೀ ರಘುಮೂರ್ತಿ ರವರು, ಸನ್ಮಾನ್ಯ ಶ್ರೀ ಯತೀಂದ್ರ ಸಿದ್ದರಾಮಯ್ಯರವರು, ಸುರಪುರ ಶಾಸಕರಾದ ಸನ್ಮಾನ್ಯ ಶ್ರೀ ರಾಜ ವೇಣುಗೋಪಾಲ ನಾಯಕ ರವರು, ಹೊನ್ನಾಳಿ ಶಾಸಕರಾದ ಸನ್ಮಾನ್ಯ ಶ್ರೀ ಡಿ.ಜಿ ಶಾಂತನಗೌಡರವರು, ಮಾಜಿ ಸಂಸ್ಥರಾದ ಸನ್ಮಾನ್ಯ ಶ್ರೀ ಪ್ರತಾಪ್ ಸಿಂಹ ರವರು, ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಎಸ್ ವಿ ರಾಮಚಂದ್ರಪ್ಪ ರವರು, ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಪ್ರತಾಪ್ ಗೌಡ ಪಾಟೀಲ್ ರವರು, ಬಿಜೆಪಿ ಎಸ್ ಟಿ ಮೋರ್ಚ ರಾಜ್ಯಾಧ್ಯಕ್ಷರಾದ ಶ್ರೀ ಬಂಗಾರು ಹನುಮಂತು, ಕಾಂಗ್ರೆಸ್ ಎಸ್ ಟಿ ಸೆಲ್ ರಾಜ್ಯಾಧ್ಯಕ್ಷರಾದ ಶ್ರೀ ವಿಜಯಕುಮಾರ್ ಸೇರಿದಂತೆ ವಿವಿಧ ರಾಜ್ಯದ ಮುಖಂಡರುಗಳು, ಅನೇಕ ಹಾಲಿ ಮತ್ತು ಮಾಜಿ ಶಾಸಕರುಗಳು, ನಿಗಮ ಮಂಡಳಿ ಅಧ್ಯಕ್ಷರುಗಳು, ಶ್ರೀಮಠದ ಧರ್ಮದರ್ಶಿಗಳು ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರುಗಳು ತಾಲೂಕು ಶ್ರೀಮಠದ ಪ್ರತಿನಿಧಿಗಳು, ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸೇರಿದಂತೆ ವಿದ್ಯಾರ್ಥಿನಿಯರು ಸಮಾಜದ ಬಂಧುಗಳು ಮುಖಂಡರು ಯುವಕರು ಉಪಸ್ಥಿತರಿದ್ದರು*
*ಜಾತ್ರಾ ಮಹೋತ್ಸವ ಯಶಸ್ವಿಗೆ ಕಾರಣರಾದ ಸಮಸ್ತ ಬಂಧುಗಳಿಗೆ ತುಂಬು ಹೃದಯದ ಅಭಿನಂದನೆಗಳು*