23/07/2023
ಇಮ್ಮಡಿ ಪುಲಿಕೇಶಿ ಮಹಾರಾಜರ ಪಟ್ಟಾಭಿಷೇಕವಾದ ದಿನವಿಂದು
ಇಮ್ಮಡಿ ಪುಲಿಕೇಶಿ ಮಹಾರಾಜರ ಇತಿಹಾಸ
ಇಮ್ಮಡಿ ಪುಲಿಕೇಶಿ,ಚಾಲುಕ್ಯ ವಂಶದ ಪ್ರಸಿದ್ಧ ದೊರೆ.(ಕ್ರಿ.ಶ ೬೧೦-೬೪೨) ಇವರ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು. [೧] ಕ್ರಿ.ಶ.ಸು. ೫3೦ರಲ್ಲಿ ಜಯಸಿಂಹನಿಂದ ಪ್ರಾರಂಭವಾದ ಚಾಲುಕ್ಯ ಮನೆತನದ ಆಡಳಿತವು ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಮುಕ್ತಾಯವಾಯಿತು. ಕ್ರಿ.ಶ. ೭೫೭ರ ರಾಷ್ಟ್ರಕೂಟ 'ದಂತಿದುರ್ಗ'ನು ಚಾಲುಕ್ಯ ಅರಸ 'ಇಮ್ಮಡಿ ಕೀರ್ತಿವರ್ಮ'ನನ್ನು ಯುದ್ಧದಲ್ಲಿ ಸೋಲಿಸಿ ಪ್ರಾಚೀನ ಕರ್ನಾಟಕದ ರಾಜಕೀಯ ವಲಯದಲ್ಲಿ ಚಾಲುಕ್ಯರು ವಿರಮಿಸುವಂತೆ ಮಾಡಿದನು. ಸಾರ್ವಭೌಮರಾಗಿ ಮೆರೆದ ಬಾದಾಮಿ ಚಾಲುಕ್ಯರು ಕರ್ನಾಟಕದಲ್ಲಿ ಸ್ವತಂತ್ರವಾದ ವಿಶಾಲ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದರು. ಕರ್ನಾಟಕದ ಭೌಗೋಳಿಕ ಗಡಿಗಳನ್ನು ವಿಸ್ತರಿಸಿದ ಕನ್ನಡ ಅರಸರಲ್ಲಿ ಇವರ ಪಾತ್ರ ಮಹತ್ವದ್ದು. ತಮ್ಮ ಆಡಳಿತಾವಧಿಯುದ್ದಕ್ಕೂ ಕಂಚಿ ಪಲ್ಲವರ ಜೊತೆಗೆ ಹಗೆತನ ಸಾಧಿಸಿದ ಬಾದಾಮಿ ಚಾಲುಕ್ಯರು, ಕನ್ನಡದ ಶ್ರೇಷ್ಠ ದೊರೆ 'ಇಮ್ಮಡಿ ಪುಲಕೇಶಿ'ಯನ್ನು ಕಳೆದುಕೊಂಡು ಹದಿಮೂರು ವರ್ಷಗಳ ಪರಕೀಯ ಆಡಳಿತದ ಬಿಸಿಯನ್ನು ಸಹಿಸಿದರು. ಆದರೆ ಸೋಲಿನ ಕಹಿ ಅನುಭವವನ್ನು ಇಮ್ಮಡಿ ವಿಕ್ರಮಾದಿತ್ಯನು ಪಲ್ಲವರನ್ನು ಸೋಲಿಸುವುದರ ಮೂಲಕ, ಬಾದಾಮಿ ಚಾಲುಕ್ಯ ಸಾಮ್ರಾಜ್ಯವನ್ನು ಮರುಕಟ್ಟಿದ ಕೀರ್ತಿಗೆ ಪಾತ್ರನಾದನು. ಕರ್ನಾಟಕ ಇತಿಹಾಸದಲ್ಲಿ ನಡೆದು ಹೋದ ಈ ಸೋಲು ಗೆಲುವುಗಳು ದೇಶದ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಯ ಮೇಲೆ ಅಗಾಧವಾದ ಪರಿಣಾವುವನ್ನು ಬೀರಿದವು. ಮುಖ್ಯವಾಗಿ ಕಲಾ ಸಾಂಸ್ಕೃತಿಕ ಆಯಾಮಗಳು ಬದಲಾವಣೆ ಹೊಂದಿ ಆಚರಣೆಯಲ್ಲಿ ಬಂದವು.
ಆರಂಭಿಕ ಬದುಕು, ಮತ್ತು ಪಟ್ಟಕ್ಕೆ ಏರಿದ್ದು
ತನ್ನ ಪಟ್ಟಾಭಿಷೇಕವಾದ ಮೇಲೆ ಹೆಸರು ಪುಲಿಕೇಶಿ ಎಂದು ಹೆಸರು ಬದಲಾಯಿಸಿಕೊಂಡ ಎರೆಯನು ಚಾಲುಕ್ಯ ರಾಜ ಮೊದಲನೆಯ ಕೀರ್ತಿವರ್ಮನ ಮಗನು. ಕೀರ್ತಿವರ್ಮನು ಕ್ರಿ.ಶ ೫೯೭ ರಲ್ಲಿ ರಲ್ಲಿ ನಿಧನನಾದಾಗ ಎರಯನು ಚಿಕ್ಕ ಬಾಲಕ. ಕೀರ್ತಿವರ್ಮನ ಸೋದರ ಮಂಗಳೇಶನು ಎರಯನು ವಯಸ್ಕನಾಗುವವರೆಗೆ ರಾಜಪ್ರತಿನಿಧಿಯಾಗಿ ರಾಜ್ಯದ ಆಡಳಿತವನ್ನು ವಹಿಸಿಕೊಂಡನು. ಮಂಗಳೇಶನು ಸಮರ್ಥ ಆಡಳಿತಗಾರನಾಗಿದ್ದು ರಾಜ್ಯವನ್ನು ವಿಸ್ತರಿಸುವದನ್ನು ಮುಂದುವರೆಸಿದನು. ಎರೆಯನು ವಯಸ್ಸಿಗೆ ಬಂದಾಗ, ಬಹುಶಃ ಅಧಿಕಾರದ ಆಸೆಯು ಮಂಗಳೇಶನು ಚಾಲುಕ್ಯ ಸಿಂಹಾಸನವನ್ನು ರಾಜಕುಮಾರ ಎರೆಯನಿಗೆ ನಿರಾಕರಿಸಿದನು , ಮತ್ತು ತನ್ನ ಮಗನನ್ನು ಉತ್ತರಾಧಿಕಾರಿಯನ್ನಾಗಿ ಮಾಡಿ ತನ್ನ ವಂಶದ ಆಳಿಕೆಯನ್ನು ಶಾಶ್ವತವಾಗಿಸುವ ಪ್ರಯತ್ನ ಮಾಡಿದನು. ಎರೆಯನು, ಬನಾ ಪ್ರದೇಶ(ಕೋಲಾರ) ದಲ್ಲಿ ಆಶ್ರಯ ಪಡೆದು ತನ್ನ ಸಹಚರರ ಸಹಾಯದಿಂದ ಸೈನ್ಯವನ್ನು ಸಂಘಟಿಸಿ ಚಿಕ್ಕಪ್ಪನ ಮೇಲೆ ಯುದ್ಧ ಘೋಷಿಸಿದನು. Peddavadagur ಶಾಸನದ ಪ್ರಕಾರ, ಮಂಗಳೇಶನು Elapattu Simbige ನಲ್ಲಿ ನಡೆದ ಯುದ್ಧದಲ್ಲಿ ಪರಾಭವಗೊಂಡು ಸತ್ತನು. ಎರೆಯನು "ಇಮ್ಮಡಿ ಪುಲಿಕೇಶಿ" ಎಂದು ಚಾಲುಕ್ಯ ಸಿಂಹಾಸನವನ್ನೇರಿದನು ಹಾಗೂ "ಚಾಲುಕ್ಯಪರಮೇಶ್ವರ" ಎಂಬ ಬಿರುದನ್ನು ಧರಿಸಿದನು, ಪುಲಿಕೇಶಿಯು ಹೀಗೆ ಬಾದಾಮಿ, ಪಾಪನಾಥ, ದುರ್ಗಾ ಮತ್ತು ಲಾಡಖಾನ ಮುಂತಾದ ಅನೇಕ ದೇವಾಲಯಗಳನ್ನು ನಿರ್ಮಿಸಿದನು. ರಾಜ್ಯಾಭಿಷೇಕದ ಬಳಿಕ, ಪುಲಿಕೇಶಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಯುದ್ಧದ ನಂತರ ಹೊಸ ಸಾಹಸದ ಕೆಲಸಗಳನ್ನು ಮಾಡುವ ಪ್ರಯತ್ನ, ಚಾಲುಕ್ಯರಿಗೆ ಐಹೊಳೆಯ ಶಿಲಾಶಾಸನದಲ್ಲಿ ಕೆತ್ತಿರುವ ೬೩೪ ಶಿಲೆಯ ಪ್ರಕಾರ, ಹೇಳುವಂತೆ, ವಿಶ್ವದಲ್ಲೆಲ್ಲಾ ಶತ್ರುಗಳ ಅಂಧಕಾರ ಹರಡಿತ್ತು. ಪುಲಿಕೇಶಿಯು ಅಪ್ಪಾಯಿಕ ಮತ್ತು ಗೋವಿಂದ ಮೊದಲಾದವರ ಚುನೌತಿಯನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಾಮಾಣಿಕರು ಮಂಗಲೇಶರನ್ನು ಸೋಲಿಸಿದ್ದರು. ಭೀಮಾನದಿಯ ತಟದಲ್ಲಿ ಪುಲಿಕೇಶಿ ಎದುರಾಳಿಗಳ ಸೈನ್ಯವನ್ನು ತಡೆದನು, ಅಪ್ಪಾಯಿಕ ರಣಭೂಮಿಯಿಂದ ಪಲಾಯನಮಾಡಿದನು. ಗೋವಿಂದನನ್ನು ಸೆರೆಹಿಡಿಯಲಾಯಿತು. ತನ್ನ ವಿಜಯವನ್ನು ಘೋಷಿಸಿ ಆಚರಿಸಲು ಇಮ್ಮಡಿ ಪುಲಿಕೇಶಿಯು ಒಂದು ವಿಜಯಸ್ಥಂಭವನ್ನು ಕಟ್ಟಿಸಿದನು.
ಪುಲಿಕೇಶಿಯ ದಿಗ್ವಿಜಯ
ಇಮ್ಮಡಿ ಪುಲಿಕೇಶಿ ತನ್ನ ಸಮಕಾಲೀನ ಚಕ್ರವರ್ತಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತ ಅರಸು. ಮಹಮ್ಮದೀಯರ ಆಕ್ರಮಣದ ವರೆಗೂ ಸ್ಥಾಪಿತವಾದ ಹಲವು ಪ್ರಬುದ್ಧ ಹಿಂದೂ ಸಾಮ್ರಾಜ್ಯಗಳಲ್ಲಿ ಚಾಲುಕ್ಯ ವಂಶವು ಗಣನೀಯವಾದದ್ದು. ಅಪ್ಪಾಯಿಕ ಮತ್ತು ಗೋವಿಂದನನ್ನು ಮೊದಲ್ಗೊಂಡು ಹರ್ಷ ಚಕ್ರವರ್ತಿಯನ್ನು ಗೆಲ್ಲುವುದರ ವರೆಗೂ ಪುಲಿಕೇಶಿಯ ದಿಗ್ವಿಜಯ ಪರಿಕ್ರಮಿಸಿತ್ತು.
ಹರ್ಷವರ್ಧನನನ್ನು ಎದುರಿಸಿ
ಇವನ ಕಾಲದಲ್ಲಿಯೇ ಸಕಲೋತ್ತರಾಪಥೇಶ್ವರನೆಂದು ಕರೆದು ಕೊಳ್ಳುತ್ತಿದ್ದ ಹರ್ಷವರ್ಧನನು ದಕ್ಷಿಣಾಪಥವನ್ನು ಜಯಿಸಬೇಕೆಂಬ ಮಹದಾಕಾಂಕ್ಷೆಯಿಂದ ವಿಂಧ್ಯಪರ್ವತದ ಸಮೀಪದಲ್ಲಿ ರೇವಾ ನದಿಯ ತೀರದಲ್ಲಿ ಬೀಡುಬಿಟ್ಟಿದ್ದನು. ಇದನ್ನು ಸಹಿಸಲಾರದೆ ಇಮ್ಮಡಿ ಪೊಲೆಕೇಶಿಯು ಹರ್ಷವರ್ಧನನನ್ನು ಎದುರಿಸಿ ಅವನ ಸೈನ್ಯವನ್ನು ಧ್ವಂಸ ಮಾಡಿ ಅವನನ್ನು ಹೊಡೆದಟ್ಟಿ ಪರಮೇಶ್ವರನೆಂಬ ಬಿರುದನ್ನು ಪಡೆದು, ದಕ್ಷಿಣಾಪಥಸ್ವಾಮಿ/ದಕ್ಷಿಣಾಪಥೇಶ್ವರ ಎಂಬ ಬಿರುದನ್ನು ಧರಿಸಿ, ಪಶ್ಚಿಮ ಸಮುದ್ರದಿಂದ ಬಂಗಾಳ ಕೊಲ್ಲಿಯವರೆಗೂ,ನರ್ಮದಾನದಿಯಿಂದ ದಕ್ಷಿಣ ಸಮುದ್ರದವರೆಗೂ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿ, ಬಾದಾಮಿ ರಾಜಧಾನಿಯಿಂದ ಈ ಸಾಮ್ರಾಜ್ಯವನ್ನು ಆಳುತ್ತಿದ್ದನೆಂದು ಇವನ ಸುಪ್ರಸಿದ್ಧ ಐಹೊಳೆ ಶಾಸನವು (ಕ್ರಿ.ಶ.೬೩೪) ತಿಳಿಸುತ್ತದೆ. ಇವನ ಖ್ಯಾತಿಯು ಭಾರತದಲ್ಲಿ ಮಾತ್ರವಲ್ಲದೆ ಪರದೇಶಗಳಲ್ಲಿಯೂ ಹಬ್ಬಿತ್ತು.
ಇವನ ಸಮಕಾಲೀನನಾಗಿ ಇರಾನ್ ದೇಶದ ದೊರೆಯಾಗಿದ್ದ ಎರಡನೆಯ ಖುಸ್ರುವು ತನ್ನ ರಾಯಭಾರಿಯ ಕೈಯಲ್ಲಿ ಅನೇಕ ಬೆಲೆಬಾಳುವ ಬಹುಮಾನಗಳನ್ನು ಪುಲಕೇಶಿಗೆ ಕಳುಹಿಸಿಕೊಟ್ಟನೆಂದೂ, ಇವರಿಬ್ಬರಿಗೂ ಆಗಿಂದಾಗ್ಗೆ ಪತ್ರವ್ಯವಹಾರವು ನಡೆಯುತ್ತಿದ್ದಿತೆಂದೂ ತಿಳಿದುಬಂದಿದೆ. ಪುಲಕೇಶಿಯ ಕಾಲದಲ್ಲಿ ಭಾರತದಲ್ಲಿ ಸಂಚಾರ ಮಾಡಿದ ಹ್ಯೂಯೆನ್‌ತ್ಸಾಂಗ್ ಎಂಬ ಚೀನಾ ದೇಶದ ಯಾತ್ರಿಕನು ಪುಲಕೇಶಿಯ ರಾಜ್ಯವನ್ನು ಅತಿ ವಿವರವಾಗಿ ವರ್ಣಿಸಿದ್ದಾನೆ.
ಹುಲಿಯ ಕೂದಲನ್ನು ಹೋಲುವ ಕೂದಲುಳ್ಳವ
ಇಂತಹ ಕೀರ್ತಿವಂತರಾದ ರಾಜರ ಹೆಸರಿನ ಅರ್ಥವನ್ನು ವಿದ್ವಾಂಸರು ಬೇರೆ ಬೇರೆ ವಿಧವಾಗಿ ಹೇಳಿದ್ದಾರೆ. ಮೊದಮೊದಲಿಗೆ ಹುಟ್ಟಿದ ಈ ವಂಶದ ಶಾಸನಗಳಲ್ಲಿ ಈ ಹೆಸರಿನ ರೂಪವು ಪೊಲೆಕೇಶಿ ಎಂದೇ ಕಾಣಬರುತ್ತಿದ್ದರೂ, ಪುಲಿಕೇಶಿ, ಪುಲಕೇಶಿ ಮೊದಲಾದ ರೂಪಾಂತರಗಳೂ ಶಾಸನಗಳಲ್ಲಿ ಸಿಕ್ಕುತ್ತವೆ. ಬಹುಮಂದಿ ವಿದ್ವಾಂಸರು ಈ ಹೆಸರಿನ ಪೂರ್ವಾರ್ಧವನ್ನು “ಪುಲಿ” ಎಂದರೆ ಹುಲಿ ಎಂದೂ, “ಕೇಶಿನ್” ಎಂದರೆ ಕೂದಲುಳ್ಳವ ನೆಂದೂ, ಈ ಎರಡು ಪದಗಳೂ ಸೇರಿ “ಹುಲಿಯ ಕೂದಲನ್ನು ಹೋಲುವ ಕೂದಲುಳ್ಳವ” ನೆಂದೂ ಅರ್ಥ ಮಾಡಿದ್ದಾರೆ. ಆದರೆ ಹನ್ನೊಂದನೆಯ ಶತಮಾನದ ಈ ಮನೆತನದ ಶಾಸನಗಳಲ್ಲಿ ಈ ರಾಜರ ವಂಶಾವಳಿಯನ್ನು ಕೊಡುವ ಪದ್ಯಗಳಲ್ಲೊಂದು ಇಮ್ಮಡಿ ಪುಲಕೇಶಿಯನ್ನು ಈ ರೀತಿ ವರ್ಣಿಸುತ್ತದೆ :
ಚಾಲುಕ್ಯರ ಕಾಲದ ನಾಣ್ಯಗಳು
ಚಾಲುಕ್ಯರ ಕಾಲದಲ್ಲಿ ಹಲವಾರು ಲೋಹದ ನಾಣ್ಯಗಳು ಚಲಾವಣೆಯಲ್ಲಿದವು. ಈ ನಾಣ್ಯಗಳಲ್ಲಿ ವೃತ್ತಾಕಾರದ ದೊಡ್ಡ ನಾಣ್ಯಗಳ ಅಂಚಿನಲ್ಲಿ 'ರಂಧ್ರ'ಗಳಿವೆ. ನಾಣ್ಯದ ಮೇಲೆ ಹಲವು ಸಮಕಾಲೀನ ಚಿಹ್ನೆಗಳಿವೆ. ಮಧ್ಯಭಾಗದಲ್ಲಿ ವರಾಹರೂಪದ ಮುದ್ರೆಯಿದೆ. ವರಾಹ ಚಿಹ್ನೆ ಚಾಲುಕ್ಯ ಸಾಮ್ರಾಜ್ಯದ ಲಾಂಛನವಾಗಿತ್ತು. ದಕ್ಷಿಣ ಭಾರತದ ರಾಜರ ಆಳ್ವಿಕೆಯ ಬಗ್ಗೆ ಬರೆದ ಸಮಕಾಲೀನ ಸಾಹಿತ್ಯದಲ್ಲಿ ಸುವರ್ಣ ಮುದ್ರಗಳ ಬಗ್ಗೆ ದಾಖಲಾತಿಯಿದೆ. ಬಂಗಾರದ ವರಾಹಗಳೆಂಬ ಹೆಸರನ್ನು ಕಾಣಬಹುದು.
ಇಮ್ಮಡಿ ಪುಲಿಕೇಶಿಯ ಸಂತತಿ
ಇತಿಹಾಸ ತಜ್ಞರ ಪ್ರಕಾರ, ಶಾಸನ ದಾಖಲಾತಿಗಳಲ್ಲಿ ಕಂಡು ಬಂದಂತೆ ಇಮ್ಮಡಿ ಪುಲಿಕೇಶಿಗೆ ೫ ಮಕ್ಕಳಿದ್ದರು.
ಚಂದ್ರಾದಿತ್ಯ,
ಆದಿತ್ಯವರ್ಮ,
ವಿಕ್ರಮಾದಿತ್ಯ,
ಜಯಸಿಂಹ,
ಅಂಬರ
ಈ ಐವರ ಬಗ್ಗೆ ಇನ್ನು ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಹಾಗೆಯೇ, ಗಂಗವಂಶದ ಅರಸು 'ದುರ್ವಿನೀತ', ತನ್ನ ಒಬ್ಬಳು ಮಗಳನ್ನು ಪುಲಿಕೇಶಿಗೆ ಕೊಟ್ಟು ವಿವಾಹಮಾಡಿದನು ಎಂದು ಕೆಲ ಶಾಸನಗಳಲ್ಲಿ ದಾಖಲಾಗಿದೆ. ಆಕೆಯ ಮಗನೇ 'ಒಂದನೆಯ ವಿಕ್ರಮಾದಿತ್ಯ' ಎಂದು ಇತಿಹಾಸ ತಜ್ಞರ ಅಭಿಪ್ರಾಯ. ಪುಲಿಕೇಶಿಯ ಮರಣಾನಂತರ ಮಕ್ಕಳು ಅಧಿಕಾರಕ್ಕಾಗಿ ಪರಸ್ಪರ ಹೊಡೆದಾಡಿ ರಾಜ್ಯವನ್ನು ಚಿಕ್ಕ ಚಿಕ್ಕ ಪ್ರಾಂತ್ಯಗಳಾಗಿ ವಿಂಗಡಿಸಿ ಆಡಳಿತ ಪ್ರಾರಂಭಿಸಿದರು. ಆದರೆ ಪುಲಿಕೇಶಿಯ ಮೂರನೆಯ ಮಗ, ಒಂದನೆಯ ವಿಕ್ರಮಾದಿತ್ಯ, ಸೋದರರ ಮೇಲೆ ಯುದ್ಧಮಾಡಿ ಸೋಲಿಸಿದ ಮೇಲೆ ಅವರನ್ನು ಮನ್ನಿಸಿ, ಸೋದರರನ್ನನ್ನೆಲ್ಲಾ ಒಂದುಗೂಡಿಸಿ ಕ್ರಿ.ಶ. ೬೪೨ರಲ್ಲಿ ರಾಜನೆಂದು ಘೋಷಿಸಿಕೊಂಡು, ಸಾಮ್ರಾಜ್ಯವನ್ನು ಪುನರ್ಸ್ಥಾಪಿಸಿದನು. ಆತನು ೧೩ ವರ್ಷದ ಆಡಳಿತದ ನಡೆಸಿದ ಬಳಿಕ ಕೊನಯಲ್ಲಿ ಪಲ್ಲವರನ್ನು ಬಾದಾಮಿಯಿಂದ ಹೊಡೆದೋಡಿಸಿದನು. ಅಂತಿಮವಾಗಿ, ವಂಶದ ಎರಡನೆಯ ವಿಕ್ರಮಾದಿತ್ಯ ಸಂಪೂರ್ಣವಾಗಿ ಪುನರ್ನಿರ್ಮಾಣಮಾಡಿ,೨ ನೆಯ ಪುಲಿಕೇಶಿಯ ಕಾಲದ ಸಾಮ್ರಾಜ್ಯಕ್ಕೆ ಹೋಲುವ ಮೇರು ಸ್ಥಿತಿಗೆ ತಲುಪಿಸಿದನು.
ವರ್ಣನೆ
ಪುಲಕೇಶಿ ರಾಜನನ್ನು ವರ್ಣಿಸುತ್ತಿದ್ದರೆ ನಮ್ಮ ಶರೀರವು ಸಂತೋಷದಿಂದ ಪುಲಕಾಂಕಿತವಾಗುತ್ತದೆ” ಎಂದಿರುವುದರಿಂದ, ಹನ್ನೊಂದನೇ ಶತಮಾನದಲ್ಲಿಯೇ ಆಸ್ಥಾನ ಕವಿಗಳು ಈ ಪುಲಕೇಶಿ ಎಂಬ ಪದವು “ಪುಲಕ” ಎಂಬ ಶಬ್ದದಿಂದ ಹುಟ್ಟಿರಬಹುದೆಂದು ಭಾವಿಸಿದ್ದರೆಂದು ತೋರುತ್ತದೆಯೆ ವಿನಾ ಪುಲಿ=ಹುಲಿ ಎಂಬ ಮಾತಿಗೂ ಈ ಪದಕ್ಕೂ ಸಂಬಂಧವನ್ನು ಅವರು ಕಲ್ಪಿಸಿದ್ದಂತೆ ಕಾಣುವುದಿಲ್ಲ. ಈ ಶ್ಲೋಕವು ಈ ಮನೆತನದ ಬೇರೆ ಬೇರೆ ಮೂವರು ರಾಜರ (ಐದನೆಯ ವಿಕ್ರಮಾದಿತ್ಯ ಕ್ರಿ.ಶ. ೧೦೯೯ ಇಮ್ಮಡಿ ಜಯಸಿಂಹ‑ ೧೦೨೪; ಆರನೆಯ ವಿಕ್ರಮಾದಿತ್ಯ ೧೦೭೭) ಶಾಸನಗಳಲ್ಲಿ ದೊರಕುವುದರಿಂದ, ಈ ಶ್ಲೋಕವನ್ನೊಳಗೊಂಡ ವಂಶಾವಳಿಯು ರಾಜರಿಂದ ಅನುಮೋದಿಸಲ್ಪಟ್ಟು ಅರಮನೆಯ ಕೋಷ್ಠಾಗಾರದಲ್ಲಿ ಇಟ್ಟಿದ್ದು ಅವಶ್ಯಕವಾದಾಗಲೆಲ್ಲಾ ಉಪಯೋಗಿಸಲ್ಪಡುತ್ತಿದ್ದಿತೆಂದು ತಿಳಿಯುತ್ತದೆ. ಕ್ರಿ.ಶ. ೧೦೭೭ರ ಆರನೆಯ ವಿಕ್ರಮಾದಿತ್ಯನ ಯೇವೂರು ಶಾಸನದಲ್ಲಿ ವಂಶಾವಳಿಯ ಕೊನೆಯಲ್ಲಿ “ಇದು ತಾಮ್ರ ಶಾಸನದೊಳಿಱ್ದ ಚಾಳುಕ್ಯ ಚಕ್ರವರ್ತಿಗಳ ವಂಶದ ರಾಜ್ಯಂಗೆಯ್ದರಸುಗಳ ರಾಜಾವಳಿ” ಎಂದು ಕೊಟ್ಟಿರುವ ವಾಕ್ಯವು ಈ ಅಂಶವನ್ನು ಸ್ಪಷ್ಟಗೊಳಿಸುತ್ತದೆ. ಪ್ರೊ. ನೀಲಕಂಠಶಾಸ್ತ್ರಿಗಳು ಮಾತ್ರ ಈ ಹೆಸರಿನ ಪೂರ್ವಾರ್ಧವು ಸಂಸ್ಕೃತ “ಪುಲ್” ಎಂದರೆ “ಅಭಿವೃದ್ದಿಗೊಳ್ಳು” ಅಥವಾ “ಹಿರಿಮೆಯನ್ನು ಪಡೆ” ಎಂಬ ಧಾತುವಿನಿಂದ ಹುಟ್ಟಿದ್ದೆಂದೂ ಉತ್ತರಾರ್ಧವಾದ “ಕೇಶಿನ್” ಅಂದರೆ “ಸಿಂಹ”ವೆಂದೂ ತೆಗೆದುಕೊಂಡು ಈ ಹೆಸರಿನ ಅರ್ಥವನ್ನು ಶ್ರೇಷ್ಠವಾದ ಸಿಂಹವೆಂದು ವಿವರಿಸಿದ್ದಾರೆ. ಅವರು ಈ ಹೆಸರಿಗೂ ಪುಲಿ =ಹುಲಿಗೂ ಸಂಬಂಧವಿದ್ದಿತೆಂಬುದನ್ನು ಒಪ್ಪುವುದಿಲ್ಲ.ಆದರೆ ಮೇಲೆಯೇ ಹೇಳಿರುವಂತೆ ಈ ವಂಶದ ಅತಿ ಪ್ರಾಚೀನವಾದ ಶಾಸನಗಳಲ್ಲಿರುವ ಈ ಹೆಸರಿನ ರೂಪವಾದ “ಪೊಲೆಕೇಶಿ”ಯೇ ಮೂಲರೂಪವಿರಬೇಕೆಂದು ಡಾ.ಫ್ಲೀಟ್ ಹೇಳಿದ್ದಾರೆ. ಈ ರೂಪವನ್ನೇ ಶಾಸನ ಪರಿಶೋಧಕರಲ್ಲಿ ಅಗ್ರಗಣ್ಯರಾದ ಡಾ.ಕೀಲ್‌ಹಾರ್ನ್ ಅವರೂ ಸಹ ಬಳಸಿದ್ದಾರೆ. ಮೊಟ್ಟಮೊದಲಿನ ಈ ಹೆಸರಿನ ರೂಪವಾದ “ಪೊಲೆಕೇಶಿ” ಎಂಬ ಪದವು ನನ್ನ ಅಭಿಪ್ರಾಯದಂತೆ ಪೊಲೆ ಮತ್ತು ಕೇಶಿ ಎಂಬ ಶುದ್ಧ ಕನ್ನಡ ಶಬ್ದಗಳ ಸಂಯೋಗದಿಂದ ಉಂಟಾದ ಪದ. ಇದರ ಪೂರ್ವಾರ್ಧವಾದ “ಪೊಲೆ” ಎಂಬುದಕ್ಕೆ “ಹೊಲೆಮನೆ” ಎಂದರ್ಥ. “ಕೇಶಿ” ಎಂಬುದು “ಕೇಶವ” ಎಂಬ ಹೆಸರಿನ ಸಂಕ್ಷಿಪ್ತರೂಪ. ಈ ರೂಪದಲ್ಲಿ ಈ ಪದವು ಕನ್ನಡ ಸಾಹಿತ್ಯದಲ್ಲಿಯೂ ಶಾಸನಗಳಲ್ಲಿಯೂ ಸಿಕ್ಕುತ್ತದೆ. “ಶಬ್ದಮಣಿದರ್ಪಣ”ವನ್ನು ರಚಿಸಿದ ಕೇಶಿರಾಜನು ತನ್ನ ಹೆಸರಿನ ಕೇಶಿ, ಕೇಶವ ಎಂಬ ಎರಡು ರೂಪಗಳನ್ನೂ ಈ ಗ್ರಂಥದಲ್ಲಿ ಕೊಟ್ಟಿದ್ದಾನೆಂಬುದು ಗಮನಾರ್ಹವಾಗಿದೆ. ಇದೇ ರೀತಿಯಲ್ಲಿ ಶಾಸನಗಳಲ್ಲಿ ಕೇಶವ ಎಂಬ ಹೆಸರುಳ್ಳ ಅನೇಕ ಸಾಮಂತಾದಿಗಳು ಕೇಶಿರಾಜ, ಕೇಶಿಗೌಂಡ, ಕೇಶಿಮಯ್ಯ ಎಂಬ ಹೆಸರುಗಳಿಂದಲೂ ತಮ್ಮನ್ನು ಕರೆದುಕೊಂಡಿದ್ದಾರೆ. ಆದುದರಿಂದ “ಪೊಲೆಕೇಶಿ” ಎಂದರೆ ಹೊಲೆಮನೆಯಲ್ಲಿದ್ದಾಗಿನಿಂದಲೇ ಕೇಶವ(ಶ್ರೀಕೃಷ್ಣ)ನಂತೆ ಅಪರಿಮಿತ ಪ್ರಭಾವಶಾಲಿ ಎಂದರ್ಥ. ಈ ಸಂದರ್ಭದಲ್ಲಿ ಮೇಲೆ ಉಲ್ಲೇಖಿಸಿರುವ ಹನ್ನೊಂದನೇ ಶತಮಾನದ ಚಾಲುಕ್ಯ ಶಾಸನವು ಇಮ್ಮಡಿ ಪುಲಕೇಶಿಯನ್ನು, “ಪುಲಕೇಶಿ ಕೇಶಿ ನಿಪೂದನಸಮೋ,” ಅಂದರೆ ಪುಲಕೇಶಿಯು ಕೇಶಿ ಎಂಬ ರಾಕ್ಷಸನನ್ನು ಸಂಹರಿಸಿದ ಶ್ರೀಕೃಷ್ಣನಿಗೆ ಸಮಾನನಾದವನು ಎಂದು ವರ್ಣಿಸುತ್ತದೆ ಎಂಬ ಅಂಶವನ್ನು ಗಮನಿಸಬಹುದು. ಹೊಲೆಮನೆಯಲ್ಲಿದ್ದಾಗಿನಿಂದಲೇ ಶ್ರೀಕೃಷ್ಣನು ಅದ್ಭುತವಾದ ಸಾಹಸಗಳನ್ನು ತೋರಿದನೆಂಬ ವಿಷಯವನ್ನು ಪುರಾಣಗಳು ವರ್ಣಿಸುತ್ತವೆ. ಆದುದರಿಂದ ಚಿಕ್ಕಂದಿನಿಂದಲೇ ಶ್ರೀಕೃಷ್ಣನಂತೆ ಅದ್ಭುತವಾದ ಕಾರ್ಯಗಳನ್ನು ಸಾಧಿಸಿದ ಪುರುಷನೆಂದು “ಪೊಲೆಕೇಶಿ” ಎಂಬ ಪದದ ಅರ್ಥ. ಇದು ಬಾಲ್ಯದಿಂದಲೇ ಮಹತ್ಕಾರ್ಯಗಳನ್ನು ಸಾಧಿಸಿದ ಪೊಲೆಕೇಶಿ ಎಂಬ ಹೆಸರಿನ ಇಬ್ಬರು ಚಾಲುಕ್ಯ ರಾಜರಿಗೆ (ಮುಖ್ಯವಾಗಿ ಇಮ್ಮಡಿ ಪೊಲೆಕೇಶಿಗೆ) ಅರ್ಥವತ್ತಾಗಿದ್ದು ಎಷ್ಟು ಚೆನ್ನಾಗಿ ಒಪ್ಪುತ್ತದೆ! ಹೆಸರಿಗೆ ತಕ್ಕ ಶೌರ್ಯ, ಪರಾಕ್ರಮ ಸಾಹಸ, ಕೀರ್ತಿ!
💛ಜೈ ಇಮ್ಮಡಿ ಪುಲಿಕೇಶಿ❤️