Shree Vyaasatattwajna Teertha Seva Samiti , Venisomapura

  • Home
  • India
  • Gadwal
  • Shree Vyaasatattwajna Teertha Seva Samiti , Venisomapura

Shree Vyaasatattwajna Teertha Seva Samiti , Venisomapura ಶ್ರೀ ವ್ಯಾಸತತ್ತ್ವಜ್ಞ ತೀರ್ಥರ ಮೂಲ ಬೃಂದಾವನ ಸನ್ನಿಧಿ .

ಸುಮಾರು 300 ವರ್ಷಗಳ ಹಿಂದೆ ಐಜಿ ಶ್ರೀವೇಂಕಟರಾಮಾಚಾರ್ಯರು (ಶ್ರೀ ವ್ಯಾಸತತ್ವಜ್ಞ ತೀರ್ಥರ ಪೂರ್ವಾಶ್ರಮ) ಶ್ರೀ ಕ್ಷೇತ್ರ ವೇಣೀಸೋಮಪುರದಲ್ಲಿ ಪ್ರತ...
07/05/2025

ಸುಮಾರು 300 ವರ್ಷಗಳ ಹಿಂದೆ ಐಜಿ ಶ್ರೀವೇಂಕಟರಾಮಾಚಾರ್ಯರು (ಶ್ರೀ ವ್ಯಾಸತತ್ವಜ್ಞ ತೀರ್ಥರ ಪೂರ್ವಾಶ್ರಮ) ಶ್ರೀ ಕ್ಷೇತ್ರ ವೇಣೀಸೋಮಪುರದಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದ ಶ್ರೀ ಸಂತಾನ ವೇಣುಗೋಪಾಲ ಕೃಷ್ಣ ದೇವಾಲಯದ ಉತ್ಸವ ಮೂರ್ತಿಗಳನ್ನು, ದುಷ್ಕರ್ಮಿಗಳು 2023ರ ಜುಲೈ 2 ರಂದು ಅಪಹರಿಸಿದ್ದರು.
ಐಜಿ ಆಚಾರ್ಯರು ವೈಶಾಖ ಶುದ್ಧ ದಶಮಿಯಂದೇ ರುಕ್ಮಿಣಿ ಸತ್ಯಭಾಮಾ ಸಮೇತ ಶ್ರೀ ಸಂತಾನ ವೇಣುಗೋಪಾಲ ಕೃಷ್ಣನನ್ನು ಪ್ರತಿಷ್ಠಾಪಿಸಿದ್ದರಿಂದ, ಈ ಪವಿತ್ರ ದಿನದ (ವಿಶ್ವಾವಸು ವೈಶಾಖ ಶುದ್ಧ ದಶಮಿ, 07 ಮೇ 2025 ರಂದು) ಶುಭ ಸಂದರ್ಭದಲ್ಲಿ, ಅವರ ವಂಶಜರಾದ ದಿ|| ಐಜಿ ಗೋಪಾಲಕೃಷ್ಣಾಚಾರ್ಯರ ಕುಟುಂಬದವರು ಮತ್ತು ಶ್ರೀ ವ್ಯಾಸತತ್ವಜ್ಞ ತೀರ್ಥ ಸೇವಾ ಸಮಿತಿಯ ಸಹಯೋಗದಲ್ಲಿ ನೂತನ ಉತ್ಸವ ಮೂರ್ತಿಗಳನ್ನು ತಯಾರಿಸಲಾಯಿತು.
ಈ ನೂತನ ರುಕ್ಮಿಣೀ ಸತ್ಯಭಾಮಾ ಸಮೇತ ವೇಣುಗೋಪಾಲ ಕೃಷ್ಣನ ಉತ್ಸವ ಮೂರ್ತಿಗಳನ್ನು ತಮಿಳುನಾಡಿನ ಶ್ರೀರಂಗದಲ್ಲಿ ತಯಾರಿಸಿ, ಮೊದಲು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತಗಳಿಂದ ಪೂಜೆ ಸಲ್ಲಿಸಿ, ನಂತರ ಶ್ರೀ ಕ್ಷೇತ್ರ ವೇಣೀಸೋಮಪುರದ ಸಂತಾನ ವೇಣುಗೋಪಾಲ ಕೃಷ್ಣ ದೇವಾಲಯಕ್ಕೆ ಕರೆದೊಯ್ಯಲಾಯಿತು.
ಕ್ಷೇತ್ರದ ಸನ್ನಿಧಿಯಲ್ಲಿ ಕೃಷ್ಣ ಷಡಕ್ಷರ ಹೋಮದ ಮೂಲಕ ಈ ನೂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಅಭಿಷೇಕ ಮಾಡಿ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.

Around 300 years ago, Sri Ieji Venkataramacharya (later known as Sri Vyasatattwajna Teertha) installed and worshipped the Utsava idols of Sri Santana Venugopala Krishna at Venisomapura. Unfortunately, on July 2, 2023, miscreants stole these sacred idols.

Since the original installation was done on Vaishakha Shuddha Dashami, the new Utsava idols of Sri Venugopala Krishna with Rukmini and Satyabhama were reinstalled on same auspicious day— Vishvavasu Vaishaka Shuddha Dashami, May 7, 2025. The initiative was taken up by the descendants of Late Sri Ieji Gopalakrishnacharya and supported by Shree Vyasatattwajna Teertha Seva Samiti.

These new idols were made in Srirangam, Tamil Nadu, and were first offered puja by Sri 108 Subudhendra Teertha Swamiji, Pontiff of Mantralaya Sri Raghavendra Swamy Mutt. They were then brought to the Venisompura temple, where they were consecrated through Krishna Shadakshara Homa, abhisheka, and traditional rituals.

It is most unfortunate to note that there has been a case of theft of 300 yr old Shree Rukmini Satyabhama sameta Shri Kr...
02/07/2023

It is most unfortunate to note that there has been a case of theft of 300 yr old Shree Rukmini Satyabhama sameta Shri Krishna utsava idols which were worshipped by Shree Vyaasatattwajna teertharu at Shree Kshetra Venisomapura during the wee hours of 02-07-2023. An FIR has been registered at Ieji Police station regarding the same. If any information regarding the idols is received, please contact below: 7780550360, 9701873880. Gadwal District, Ieji Taluk, Venisomapura

ಶ್ರೀ ವ್ಯಾಸತತ್ತ್ವಜ್ಞ ತೀರ್ಥರ ಸನ್ನಿಧಾನ ಶ್ರೀ ಕ್ಷೇತ್ರ ವೇಣಿಸೋಮಪುರದಲ್ಲಿ ನಿನ್ನೆ ಮಧ್ಯ ರಾತ್ರಿಯ ಸಮಯದಲ್ಲಿ (02-07-23) ಶ್ರೀ ವ್ಯಾಸತತ್ತ್ವಜ್ಞ ತೀರ್ಥರಿಂದ ಪೂಜಿತವಾದ ಸುಮಾರು 300 ವರ್ಷ ಪುರಾತನವಾದ ಶ್ರೀ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀಕೃಷ್ಣ ದೇವರ ಉತ್ಸವ ಮೂರ್ತಿಗಳು ಕಳುವಾಗಿದೆ. ಸಮೀಪದ ಪೊಲೀಸ್ ಠಾಣೆಯಾದ ಐಜಿ ಗ್ರಾಮದಲ್ಲಿ FIR ದಾಖಲೆಯಾಗಿದ್ದು ಇಲಾಖೆಯ ವತಿಯಿಂದ ತನಿಖೆ ನಡೆಯುತ್ತಿದೆ . ಈ ಬಗ್ಗೆ ಯಾರಿಗಾದರೂ ತಿಳಿದ ಪಕ್ಷದಲ್ಲಿ ತಕ್ಷಣವೇ ತಿಲಿಸತಕ್ಕದ್ದು
Phone - 7780550360 , 9701873880.
ಗದ್ವಾಲ್ ಜಿಲ್ಲೆ , ಐಜಿ ತಾಲೂಕು , ವೇಣಿಸೋಮಪುರ

23/06/2023
ಶ್ರೀ ಕ್ಷೇತ್ರ ವೇಣಿಸೋಮಪುರದಲ್ಲಿ ವೈಶಾಖ ಬಹುಳ ಪಾಡ್ಯದಂದು- ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ಕೃಷ್ಣದೇವರಿಗೆ- ಅಮೃತಸ್ನಾನ ಸಂಪನ್ನ.
07/05/2023

ಶ್ರೀ ಕ್ಷೇತ್ರ ವೇಣಿಸೋಮಪುರದಲ್ಲಿ ವೈಶಾಖ ಬಹುಳ ಪಾಡ್ಯದಂದು- ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ಕೃಷ್ಣದೇವರಿಗೆ- ಅಮೃತಸ್ನಾನ ಸಂಪನ್ನ.

ಶ್ರೀ ವ್ಯಾಸತತ್ತ್ವಜ್ಞ ತೀರ್ಥರ ಉಪಾಸ್ಯ ಮೂರ್ತಿ ಶ್ರೀ ನರಸಿಂಹ ದೇವರು , ಶ್ರೀ ಕ್ಷೇತ್ರ ವೇಣಿಸೋಮಪುರ
07/05/2023

ಶ್ರೀ ವ್ಯಾಸತತ್ತ್ವಜ್ಞ ತೀರ್ಥರ ಉಪಾಸ್ಯ ಮೂರ್ತಿ ಶ್ರೀ ನರಸಿಂಹ ದೇವರು , ಶ್ರೀ ಕ್ಷೇತ್ರ ವೇಣಿಸೋಮಪುರ

07/05/2023

ರುಕ್ಮಿಣಿ ಸತ್ಯಭಾಮ ಸಮೇತ ಶ್ರೀಕೃಷ್ಣ ದೇವರಿಗೆ ಪಂಚಾಮೃತ ಅಭಿಷೇಕ 🙏🙏

ಶ್ರೀ ಕ್ಷೇತ್ರ ವೇಣಿಸೋಮಪುರದಲ್ಲಿ ನೆಡೆದ ಪಂಚರತ್ರೋತ್ಸವು ಸಂಪನ್ನ. ( ವೈಶಾಖ ಶುದ್ಧ ದಶಮಿಯಿಂದ - ಪಾಡ್ಯದ ವರೆಗೆ ) ಶ್ರೀ ವ್ಯಾಸತತ್ತ್ವಜ್ಞ ತೀರ...
07/05/2023

ಶ್ರೀ ಕ್ಷೇತ್ರ ವೇಣಿಸೋಮಪುರದಲ್ಲಿ ನೆಡೆದ ಪಂಚರತ್ರೋತ್ಸವು ಸಂಪನ್ನ. ( ವೈಶಾಖ ಶುದ್ಧ ದಶಮಿಯಿಂದ - ಪಾಡ್ಯದ ವರೆಗೆ )
ಶ್ರೀ ವ್ಯಾಸತತ್ತ್ವಜ್ಞ ತೀರ್ಥರು ವೈಶಾಖ ಶುದ್ಧ ದಶಮಿಯಂದು ರುಕ್ಮಿಣೀ-ಸತ್ಯಾ ಸಮೇತ ಶ್ರೀ ಕೃಷ್ಣ ದೇವರನ್ನು ಪ್ರತಿಷ್ಠೆ ಮಾಡಿದ್ದಾರೆ, ತದಂಗವಾಗಿ ನೆಡೆದ ಈ ಉತ್ಸವ ಕಾರ್ಯಕ್ರಮ.
ಶ್ರೀ ಕೃಷ್ಣ ದೇವರರಿಗೆ ಪಂಚಾಮೃತ ಅಭಿಷೇಕ ,- ರುಕ್ಮಿಣೀ - ಸತ್ಯಭಾಮ ಶ್ರೀಕೃಷ್ಣ ದೇವರ ಕಲ್ಯಾಣೋತ್ಸವ ಹಾಗೂ ನೈವೇದ್ಯ ಪ್ರದಾನ .
ಶ್ರೀ ವ್ಯಾಸತತ್ತ್ವಜ್ಞ ತೀರ್ಥರ ಮೂಲ ಬೃಂದಾವನಕ್ಕೆ ಪಾದ್ಯ ಹಾಗೂ ಹಸ್ತೋದಕ ಪ್ರದಾನ .

ಇಂದು ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥರ 52 ನೇ ವರ್ಧಂತಿ ಸುಸಂದರ್ಭದಲ್ಲಿ ಪ್ರಾತಃಸ್ಮರಣೀಯರು ಹಾಗೂ ಪರಮಪೂಜ್ಯರಾದ ಶ್ರೀ ಶ್ರ...
05/04/2023

ಇಂದು ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥರ
52 ನೇ ವರ್ಧಂತಿ ಸುಸಂದರ್ಭದಲ್ಲಿ ಪ್ರಾತಃಸ್ಮರಣೀಯರು ಹಾಗೂ ಪರಮಪೂಜ್ಯರಾದ ಶ್ರೀ ಶ್ರೀ1008 ಶ್ರೀ ವ್ಯಾಸತತ್ತ್ವಜ್ಞತೀರ್ಥರ ಫಲ ಮಂತ್ರಾಕ್ಷತೆ ಹಾಗೂ ಶೇಷವಸ್ತ್ರವನ್ನು ಸಮರ್ಪಣೆ ಮಾಡಿರುವುದು....🙏🙏🙏🙏🙏

On the auspicious occasion of 52nd Vardhanti (Birth Anniversary), Phala Mantrakshate and Shesha Vastra of Pratasmaraneeya and Paramapoojya Shree 1008 Shree Vyaasatattwajna teertharu was presented to Paramapoojya Shree 1008 Shree Subudhendra Teertharu, Pontiff, Mantralayam Shree Raghavendra Swamy Mutt

ಶ್ರೀ ವ್ಯಾಸತತ್ತ್ವಜ್ಞ ತೀರ್ಥ ಕರಾರ್ಚಿತ ಭಾವೀಸಮೀರಶ್ರೀ ವಾದಿರಾಜಗುರುಸಾರ್ವಭೌಮರ ರುಜುತ್ವವನ್ನು ಸಾರುವಂತಹ ಮೃತ್ತಿಕಾ ವೃಂದಾವನ , ವೇಣಿಸೋಮಪುರ...
10/03/2023

ಶ್ರೀ ವ್ಯಾಸತತ್ತ್ವಜ್ಞ ತೀರ್ಥ ಕರಾರ್ಚಿತ ಭಾವೀಸಮೀರ
ಶ್ರೀ ವಾದಿರಾಜಗುರುಸಾರ್ವಭೌಮರ ರುಜುತ್ವವನ್ನು ಸಾರುವಂತಹ ಮೃತ್ತಿಕಾ ವೃಂದಾವನ , ವೇಣಿಸೋಮಪುರ 🙏🙏

ಅವಧೂತ ಶಿರೋಮಣಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಷ್ಣುತೀರ್ಥರ ಆರಾಧನಾ ನಿಮಿತ್ತ ಅವರ ವಿದ್ಯಾ ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ವ್ಯಾಸತತ್ತ್ವಜ್ಞ ತ...
18/02/2023

ಅವಧೂತ ಶಿರೋಮಣಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಷ್ಣುತೀರ್ಥರ ಆರಾಧನಾ ನಿಮಿತ್ತ ಅವರ ವಿದ್ಯಾ ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ವ್ಯಾಸತತ್ತ್ವಜ್ಞ ತೀರ್ಥರ ಸನ್ನಿಧಾನದಲ್ಲಿ ವಿಶೇಷವಾಗಿ ಪಂಚಾಮೃತ ಅಭಿಷೇಕ ಮೊದಲಾದ ವಿಶೇಷ ಪೂಜೆ ಜರುಗಿತು 🙏 -
ಶ್ರೀ ಕ್ಷೇತ್ರ ವೇಣಿಸೋಮಪುರ

Address

Santana Venugopalakrishna Temple, Venisomapuram, Ieeja Mandal
Gadwal
509135

Telephone

+918686525403

Website

Alerts

Be the first to know and let us send you an email when Shree Vyaasatattwajna Teertha Seva Samiti , Venisomapura posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shree Vyaasatattwajna Teertha Seva Samiti , Venisomapura:

Share

Category