Sri Jatangi Rameshwara Betta

Sri Jatangi Rameshwara Betta ಶ್ರೀ ಕ್ಷೇತ್ರ ಶ್ರೀ ಜಟ್ಟಂಗಿ ರಾಮೇಶ್ವರ ಬೆಟ್ಟ, ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮೂರು ತಾಲ್ಲೂಕು,ದೇವಸಮುದ್ರ ಹೋಬಳಿ ರಾಮಸಾಗರ ಗ್ರಾಮ 577540

ಶ್ರೀ ಕ್ಷೇತ್ರ ಜಟಂಗಿ ರಾಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ 20.03.2026 ರಂದು ಜರಗಿತು. 22.03.2026 ರಂದು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ...
22/03/2026

ಶ್ರೀ ಕ್ಷೇತ್ರ ಜಟಂಗಿ ರಾಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ 20.03.2026 ರಂದು ಜರಗಿತು. 22.03.2026 ರಂದು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

ಶ್ರೀ ಕ್ಷೇತ್ರ ಶ್ರೀ ಜಟಂಗಿ ರಾಮೇಶ್ವರ ಸ್ವಾಮಿ ದೇವಸ್ಥಾನ, ಇಂದು ರಾಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷವಾಗಿ ರುದ್ರಾಭಿಷೇಕ, ಪೂ...
20/03/2026

ಶ್ರೀ ಕ್ಷೇತ್ರ ಶ್ರೀ ಜಟಂಗಿ ರಾಮೇಶ್ವರ ಸ್ವಾಮಿ ದೇವಸ್ಥಾನ, ಇಂದು ರಾಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷವಾಗಿ ರುದ್ರಾಭಿಷೇಕ, ಪೂಜೆ ಮತ್ತು ಅಲಂಕಾರ ಮಾಡಲಾಗಿತ್ತು ದೇವಸ್ಥಾನದ ಆವರಣದಲ್ಲಿ ಜಟಂಗಿ ರಾಮೇಶ್ವರ ಸ್ವಾಮಿಯ ಬೆಟ್ಟಕ್ಕೆ ಆಗಮಿಸಿರುವ ಭಕ್ತಾದಿಗಳಿಗೆ ಅನ್ನ ದಾಸೋಹ ಸೇವೆ ಕಾರ್ಯಕ್ರಮ ಭಕ್ತಾದಿಗಳಿಂದ ನೆರವೇರಿಸಲಾಯಿತು,ರಾಜ್ಯ ಮತ್ತು ಹೊರ ರಾಜ್ಯಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು, ಎಲ್ಲಾ ಸದ್ಭಕ್ತಾದಿಗಳಿಗೂ ಸ್ವಾಮಿಯ ಕೃಪೆ ಇರಲಿ.

|| ಓಂ ನಮಃ ಶಿವಾಯ ||

19/03/2026

ಶ್ರೀ ಕ್ಷೇತ್ರ ಶ್ರೀ ಜಟಂಗಿ ರಾಮೇಶ್ವರ ಸ್ವಾಮಿ ದೇವಸ್ಥಾನದ ಸಮಸ್ತ ಭಕ್ತ ಕುಲಕೋಟಿಗೆ ಯುಗಾದಿ ಹಬ್ಬದ ಶುಭಾಶೀರ್ವಾದಗಳು.
ಯುಗಾದಿ ಹಬ್ಬದ ವಿಶೇಷ ಪೂಜೆ ಮತ್ತು ಅಲಂಕಾರ.

ಇದು ನಮ್ಮ ಸನಾತನ ಸಂಸ್ಕೃತಿಯ ಪ್ರಕೃತಿಯ ಹೊಸ ಆರಂಭದ ಸಂಕೇತ, ಹೊಸ ನಿರೀಕ್ಷೆಗಳ ಹೊಸ್ತಿಲು. ಹಳೆಯ ನೋವುಗಳನ್ನು ಮರೆತು, ಹೊಸ ಭರವಸೆಗಳೊಂದಿಗೆ ಪ್ರಗತಿಯ ಪಥದಲ್ಲಿ ಸಾಗುವ ಶುಭದಿನ.

15/03/2026

ಸದ್ದಕ್ತಾದಿಗಳಲ್ಲಿ ಮನವಿ....

ನೂತನ ವರ್ಷ ಶುಭಾಶಯಗಳೊಂದಿಗೆ ದಿನಾಂಕ 20.03.2026 ರಂದು ಶ್ರೀ ಕ್ಷೇತ್ರ ಜಟಂಗಿ ರಾಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಐತಿಹಾಸಿಕ ಇತಿಹಾಸವುಳ್ಳ ಯುಗಾದಿ ಹಬ್ಬದ ಜಾತ್ರೆ ವಿಶೇಷ ಪೂಜೆ,ಅಭಿಷೇಕ ಅನ್ನ ಸಂತರ್ಪಣ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು ಸದ್ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿ...

"ವಿಶೇಷ ಸೂಚನೆ"
ಬೆಟ್ಟಕ್ಕೆ ಹೋಗುವ ಭಕ್ತಾದಿಗಳಿಗೆ ಶ್ರೀ ಕ್ಷೇತ್ರ ಜಟಂಗಿ ರಾಮೇಶ್ವರ ಸ್ವಾಮಿಯ ತಂಗುದಾಣದ ಹತ್ತಿರ ಮಜ್ಜಿಗೆ ವಿತರಣೆ ಹಾಗೂ ಮೊಸರನ್ನ ಸೇವೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ....

ಮೊಳಕಾಲ್ಮೂರು ತಾಲೂಕು ದೇವಸಮುದ್ರ ಹೋಬಳಿ ರಾಮಸಾಗರ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿರುವ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಬರುವ ಹಾಗೂ ತಹಶೀಲ್ದಾರ್...
13/03/2026

ಮೊಳಕಾಲ್ಮೂರು ತಾಲೂಕು ದೇವಸಮುದ್ರ ಹೋಬಳಿ ರಾಮಸಾಗರ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿರುವ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಬರುವ ಹಾಗೂ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಹಾಗೂ ದೈವಸ್ಥರ ಸಮ್ಮುಖದಲ್ಲಿ ದೇವಸ್ಥಾನದ ಆವರಣದಲ್ಲಿ ಇಂದು ಹುಂಡಿ ಎಣಿಕೆ ಕಾರ್ಯ ವಿಡಿಯೋ ಚಿತ್ರೀಕರಣ ಜೊತೆ ಜರುಗಿತು.

ಎಣಿಕೆಯ ಮೊತ್ತ "96301" ರೂ ಭಕ್ತಾದಿಗಳಿಂದ ಸಂಗ್ರಹವಾದ ಮೊತ್ತ ಇದಾಗಿತ್ತು

ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ರಾಮಸಾಗರ,ದೇವಸಮುದ್ರ,ಗ್ರಾಮಸ್ಥರು,ಪ್ರಮುಖರು ಉಪಸ್ಥಿತರಿದ್ದರು.

Address

DEVASAMUDRA
Chitradurg
577540

Telephone

+91 96636 35556

Website

Alerts

Be the first to know and let us send you an email when Sri Jatangi Rameshwara Betta posts news and promotions. Your email address will not be used for any other purpose, and you can unsubscribe at any time.

Shortcuts

Share