02/05/2026
ಮಾನ್ಯ ಭಕ್ತ ಬಂಧುಗಳೇ
ತಾವೂರು ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ಈ ವರ್ಷ ಏಪ್ರಿಲ್ 25 ರಂದು ಬೆಟ್ಟದಿಂದ ದೇವರು ತಂದು, ಹಬ್ಬಕ್ಕೆ ಗೊನೆ ಕಡಿದು, ತಾರೀಕು 26 ರಿಂದ ದೇವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ಅಷ್ಟ ಬಂಧ ಬ್ರಹ್ಮ ಕಳಸ ನಡೆಸಿ 29 ರಂದು ದೇವಿ ಬಲಿ, ನೃತ್ಯ ಬಲಿ ನಡೆಸಿ, ದಿನಾಂಕ 30 ರಂದು ಗಣ್ಯರಿಂದ ನವಿಕೃತ ದೇವಾಲಯವನ್ನು ಉದ್ಘಾಟನೆ ಮಾಡಿ, ತಾರೀಕು 1 ರಂದು ದೊಡ್ಡಪಟ್ಟನಿಯೊಂದಿಗೆ ಆಮೆ ಮನೆ ಬನದಿಂದ ದೇವರು ತಂದು, ಸಂಜೆ 7 ಗಂಟೆಗೆ ದೇವರಿಗೆ ಅಂದಿ ಬೆಳಕು ಹಚ್ಚಿ ಅಂಜು ಕೊಟ್ಟು ಮೂಲಕ ದೇವರಿಗೆ ಹಬ್ಬದ ಸೂಚನೆಯನ್ನು ನೀಡಿ, ಇಂದು ಬೆಳಿಗ್ಗೆ ಕುರುಂಜಿ ಮನೆಯಿಂದ ಭಂಡಾರ ತಂದು, ಇಂದು ಸಂಜೆ 7 ಗಂಟೆಗೆ ಭೂತ ಬಲಿ ನಡೆಸಲಾಗುತ್ತದೆ. ನಾಳೆ ಬೆಳಿಗ್ಗೆ 9 ಗಂಟೆಯಿಂದ ದರ್ಶನ ಬಲಿ ನಡೆಸಲಾಗುವದು. ದಿನಾಂಕ 4ರಂದು ವಸಂತೋತ್ಸವ, 5ರಂದು ನೆರಪಿನ ಉತ್ಸವ, ಹೆಣ್ಣು ಕೋಲಾ, ಗಂಡು ಕೋಲ, ಹರಕೆ ಸೇವೆಗಳು, ದಿನಾಂಕ 6ರಂದು ಆರಾಟ ಉತ್ಸವಗಳು ನಡೆಯುತ್ತವೆ. ಎಲ್ಲರೂ ದೇವರ ಕಾರ್ಯಕ್ರಮ ದಲ್ಲಿ ಭಾಗವಹಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ತಮ್ಮಲ್ಲಿ ಸವಿನಯ ವಿನಂತಿ.
ಅಧ್ಯಕ್ಷರು /ಆಡಳಿತ ಮಂಡಳಿ ತಾವೂರು.
🙏🙏🙏