Chidambar Nagar

Chidambar Nagar A page for the devotees of Shri Chidambar Mahaswami

श‍ृणुतामलसत्यवचः परमं शपथेरितं उच्छ्रितबाहुयुगम् ।न हरेः परमो न हरेः सदृशः परमः स तु सर्व चिदात्मगणात् ||O people! With ...
27/01/2026

श‍ृणुतामलसत्यवचः परमं शपथेरितं उच्छ्रितबाहुयुगम् ।
न हरेः परमो न हरेः सदृशः परमः स तु सर्व चिदात्मगणात् ||

O people! With both my arms raised, I swear that there is no one greater than Lord Hari (Vishnu), nor is there anyone equal to Him. He is the supreme of all sentient beings.

- Dwadasha Stotra 3rd Adhyaya,
Jagadguru Shriman Madhvacharya

Painting by Shri. K M Sheshagiri

श्री मध्वनवमीToday is the day on which Jagadguru Sriman Madhwacharya disappeared from Shri Ananteshwara Temple at Udupi ...
27/01/2026

श्री मध्वनवमी
Today is the day on which Jagadguru Sriman Madhwacharya disappeared from Shri Ananteshwara Temple at Udupi after delivering pravachana on Aitareya Upanishad.

अभ्रमं भङ्गरहितं अजडं विमलं सदा । आनंदतीर्थमतुलं भजे तापत्रयापहम् ।।

श्री मध्वनवमी
Today is the day on which Jagadguru Sriman Madhwacharya disappeared from Shri Ananteshwara Temple at Udupi after delivering pravachana on Aitareya Upanishad.

ब्रम्हांता गुरवः साक्षात् इष्टं दैवः श्रियः पतिः । आचार्याः श्रीमदाचार्याः सन्तु मे जन्म जन्मनि ।।
अभ्रमं भङ्गरहितं अजडं विमलं सदा । आनंदतीर्थमतुलं भजे तापत्रयापहम् ।।
धर्म विज्ञान वैराग्य परमैश्वर्यशालिनः । आनंदतीर्थभगवत्पादान् वन्दे निरंतरम् ।।

25/01/2026

ॐ ध्येयः सदा सवितृ मंडल मध्यवर्ती
नारायणः सरसिजासन सन्निविष्टः |
केयूरवान् मकर कुंडलवान् किरीटी
हारी हिरण्मय वपुर्धृतशंखचक्रः ॥

One should meditate on the form of Lord Narayana situated in the sun globe. He is seated on a lotus, with golden bracelets, crown, shark earrings; he is golden in complexion, and holds the shankha and chakra in his hands.


Art By : Shri Sheshagiri KM

https://www.facebook.com/share/p/1CBWu74Zx7/
21/01/2026

https://www.facebook.com/share/p/1CBWu74Zx7/

" ದಿನಾಂಕ : 22.01.2026 ಗುರುವಾರ - ಶ್ರೀ ವಿಶ್ವಾವಸು ನಾಮ ಸಂವತ್ಸರ ಮಾಘ ಶುದ್ಧ ಚತುರ್ಥಿ ( ಚೌತಿ ) -

" ಶ್ರೀಮನ್ಮಧ್ವ ಸಿದ್ಧಾಂತ ಪ್ರವಚನಕಾರರೂ - ಚತುಶಾಸ್ತ್ರ ಪಾರಂಗತರೂ - ಪಂಡಿತಪ್ರಕಾಂಡರೂ - ಪಂಡಿತ ಶಿರೋಮಣಿ - ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಉಭಯ ವಂಶಾಬ್ಧಿ ಚಂದ್ರಮರೂ ಆದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಜಯೀoದ್ರತೀರ್ಥರ ಆರಾಧನಾ ಮಹೋತ್ಸವ., ಮಂತ್ರಾಲಯ "

ಸುಜಯೀoದ್ರತೀರ್ಥ
ದಿಕ್ಪಾಲರಂತೆ !
ಸುಜನ ಮನಕುಮುದ
ಶರಧಿಜರಂತೆ ರಾಜಿಸುವ !! ಪ !!

ದೇವೇಂದ್ರನಂತೆ
ಭೂದೇವ ಗಢಣದಿ ! ಮೆ !
ರೆವ ಕಾಮಾದಿ ವಿಷಯ ತೃಣ !
ದೇವಾಸ್ಯನು ಆವ ಸದ್ಧರ್ಮ
ಶಿಕ್ಷಿಸುವಲ್ಲಿ ದಂಡಧರ !
ಭೂವಲಯ ನರಯಾನನೇರಿ
ದಿಗ್ವಿಜಯಿಸುವ !! ೧ !!

ವರಭಕ್ತಿ ತವ ಜ್ಞಾನ -
ಗುಣದಿ ರತ್ನಾಕರನು !
ದುರುಳ ಮತ
ಪಾನೀಯದರ ಮರುತನು !
ಶರಣ ಜನ ದೀನರಿಗೆ
ಪೆರೆಶಿರಸುಹೃದನು !
ನಿರುತ ವೈರಾಗ್ಯದಲಿ
ಸ್ಮರದೂರನೆಂತೆಸುವ !! ೨ !!

ಮೌನಿ ಗುರು ಸುಯಮೀoದ್ರ
ಕರಕಂಜಸಂಜಾತ !
ಪ್ರಾಣಪತಿ
ಶ್ರೀಮೂಲರಾಮಾರ್ಚಕ !
ಜಾನಕೀಶಾಭಿನವ -
ಪ್ರಾಣೇಶವಿಠಲನ !
ಸಾನುರಾಗದಿ ವಲಿಸಿ
ರಾರಾಜಿಸುತಲಿಪ್ಪ !! ೩ !!

ಶ್ರೀಮದಾಚಾರ್ಯರ ಸಂಸ್ಥಾನಾಧಿಪತಿಗಳಾಗಿ ತಮ್ಮ ಗುರುಪಾದರಾದ ಶ್ರೀಮತ್ಸುಯಮೀಂದ್ರತೀರ್ಥರ ಶ್ರೀಪಾದಂಗಳವರ ಅಪ್ಪಣೆಯಂತೆ ತಮ್ಮ ಪಾಂಡಿತ್ಯ; ವಿದ್ವಜ್ಜನ ಪೋಷಣೆ; ಶ್ರೀ ಮಹಾ ಸಂಸ್ಥಾನಾಭಿವೃದ್ಧಿ; ಶ್ರೀ ಕ್ಷೇತ್ರ ಮಂತ್ರಾಲಯಾಭಿವೃದ್ಧಿ ಮುಂತಾದ ಕಾರ್ಯಗಳಿಂದ ಲೋಕಮಾನ್ಯರಾದವರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಜಯೀಂದ್ರತೀರ್ಥರು.

ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯಾಧಿಪತಿಗಳಲ್ಲಿರಬೇಕಾದ ಸದ್ಗುಣಗಳೆಲ್ಲವೂ ನಿಮ್ಮಲ್ಲಿ ವಿರಾಜಿಸುತ್ತಿತ್ತು! ನೀವು ಜ್ಞಾನದಾನ; ಅನ್ನದಾನ; ಪಂಡಿತ ಪೋಷಣೆ; ತೀರ್ಥ ಯಾತ್ರೆ ಮಾಡುವುದು; ಶಿಷ್ಯರೂ - ಭಕ್ತರೂ, ಧಾರ್ಮಿಕರಾದ ಸುಜನರನ್ನು ಉದ್ಧರಿಸುವುದೇ ಮೊದಲಾದ ಸತ್ಕಾರ್ಯಗಳಲ್ಲಿ ಆಸಕ್ತರಾಗಿದ್ದೀರಿ. ನಿಮ್ಮನ್ನು ಸೇವಿಸುವ ಮತ್ತು ಸ್ತುತಿಸುವ ಜನರ ಮನೋಭೀಷ್ಟಗಳನ್ನೂ ಕೊಡುವುದರಲ್ಲಿ ಕಾಮಧೇನುವಿನಂತೆ ಮತ್ತು ಸಂಪದ್ಭಾರಿತರಾದವರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಜಯೀಂದ್ರತೀರ್ಥರು.

" ಪರಮಪೂಜ್ಯ ಶ್ರೀ ಸುಜಯೀoದ್ರತೀರ್ಥರ ಸಂಕ್ಷಿಪ್ತ ಮಾಹಿತಿ "

" ಹೆಸರು "

ಶ್ರೀ ವೆಂಕಟರಾಘವೇಂದ್ರಾಚಾರ್ಯರು

" ತಂದೆ "

ಶ್ರೀ ಸುಜ್ಞಾನೇಂದ್ರಾಚಾರ್ಯರು

" ತಾಯಿ "

ಸಾಧ್ವೀ ಲಕ್ಷ್ಮೀಬಾಯಿ

" ಜನ್ಮ ಸ್ಥಳ "

ಗರಳಪುರಿ ( ನಂಜನಗೂಡು )

" ವಂಶ "

ಷಾಷ್ಟೀಕ

" ಮನೆತನ "

ಬೀಗಮುದ್ರೆ

" ಗೋತ್ರ "

ಗೌತಮ

" ರಾಶಿ "

ಕುಂಭ

" ನಕ್ಷತ್ರ "

ಪೂರ್ವಾಭಾದ್ರ

ಶೀಲ ಗುಣವೃತ ಕಾಲ ಕಾಲದಿ ನೇಮ । ಪಾಲನೆಗೈದ ಸುಜ್ಞಾನೇಂದ್ರರಾ । ಬಾಲಕರೆನಿಸಿ ಶ್ರೀ । ಕೀಲಕಾಬ್ಜ ಪುಷ್ಯ ಶುಕ್ಲದ ಅಷ್ಟಮೀ ದಿನದಿ । ಶಾಲಿವಾಹನ ಶಕದ ಸಾವಿರದೆಂಟು ಶತ ಮೂವತ್ತ ಅಬ್ದದೀ ।। ಶ್ರೀ ಲಕ್ಷ್ಮೀಬಾಯಿ ಕುವರ ವೇಂಕಟರಾಘವೇಂದ್ರರು । ಎಂಬ ನಾಮದೀ ತಾಳಿ ಜನ್ಮವು ಘಟದಿ ಶಶಿ ಯಿರೆ । ಪೂರ್ವಾಭಾದ್ರದಿಂದ ಗ್ರಹ ಬಲದಿ ರಾಜಿಸುತ ಮುದದಿ । ಶಾಲೆ ಪಾಠಶಾಲೆಗಳಲ್ಲಿ ಪ್ರತಿಭಾಶಾಲಿಯರು ಯೆಂದೆನಿಸಿ ಮುದದಿ । ಸ್ಥೂಲ ಕರ್ಮಗಳನ್ನೆ ಜರಿದು ಸಕಾಲದಲಿ ಉಪನಯನಗೊಂಡರ ।।

ಭಾಷಾ ಪ್ರಾವೀಣ್ಯತೆ :

ಸಂಸ್ಕೃತ - ಕನ್ನಡ - ತೆಲುಗು - ತಮಿಳು - ಹಿಂದಿ - ಆಂಗ್ಲ

" ವಿದ್ಯಾಭ್ಯಾಸ "

1. ಬಾಲ್ಯ ಪಾಠಗಳ ಜೊತೆ ಕಾವ್ಯ, ನಾಟಕ, ಅಲಂಕಾರಾದಿ ಸಾಹಿತ್ಯ, ವೇದ, ಉಪನಿಷತ್ತುಗಳನ್ನು ತಮ್ಮ ತಂದೆಯವರಾದ ಶ್ರೀ ಸುಜ್ಞಾನೇಂದ್ರಾಚಾರ್ಯರಲ್ಲಿ ಅಧ್ಯಯನ ಮಾಡಿದರು.

2. ನ್ಯಾಯ ವೇದಾಂತ ಶಾಸ್ತ್ರಗಳ ಪ್ರಾರಂಭಿಕ ಗ್ರಂಥಗಳನ್ನು ತಮ್ಮ ಮಾತಾಮಹಂದಿರೂ - ವಿಖ್ಯಾತ ನ್ಯಾಯಶಾಸ್ತ್ರ ಕೋವಿದರೂ ಆದ ಶ್ರೀ ಹುಲಿ ಹನುಮಂತಾಚಾರ್ಯರಲ್ಲಿ ಅಧ್ಯಯನ ಮಾಡಿ ಆ ಶಾಸ್ತ್ರಗಳಲ್ಲಿ ಪ್ರಾವೀಣ್ಯತೆ ಪಡೆದರು.

3. ನ್ಯಾಯಶಾಸ್ತ್ರ ಕೋವಿದರಾದ ಶ್ರೀ ಎಲತ್ತೂರು ಕೃಷ್ಣಾಚಾರ್ಯರ ಬಳಿ " ತರ್ಕ " ಶಾಸ್ತ್ರವನ್ನೂ - ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರೂ, ಮಹಾರಾಣಿ ಕಾಲೇಜಿನ ನ್ಯಾಯ ವೇದಾಂತ ಪ್ರಾಚಾರ್ಯರಾದ ಪಂಡಿತ ರತ್ನಂ ಶ್ರೀ ದೊಡ್ಡಬಳ್ಳಾಪುರ ವಾಸುದೇವಾಚಾರ್ಯರಲ್ಲಿ ಸಮಗ್ರ ನ್ಯಾಯ ವೇದಾಂತವನ್ನು ಅಧ್ಯಯನ ಮಾಡಿ ಶ್ರೇಷ್ಠ ಪಂಡಿತರೆಂದು ಖ್ಯಾತರಾದರು.

4. ಶ್ರೀ ಸುಶೀಲೇಂದ್ರತೀರ್ಥರು, ಶ್ರೀ ಸುವ್ರತೀಂದ್ರ ತೀರ್ಥರು ಹಾಗೂ ಶ್ರೀ ಸುಯಮೀoದ್ರತೀರ್ಥರುಗಳ ಬಳಿ ಸಮಗ್ರ ದ್ವೈತ ವೇದಾಂತವನ್ನು ಅಧ್ಯಯನ ಮಾಡಿ ನುರಿತ ಪಂಡಿತರೆನಿಸಿ ವಾದಮಲ್ಲರಾಗಿ ಖ್ಯಾತಿ ಪಡೆದರು.

ಎಲತ್ತೂರು ಮತ್ತು ಎಲೆ ಊರಿನವರಾದ । ಚೆಲುವ ನಾಮದ ಒಂದೇ ಗುರುಗಳಲ್ಲಿ ಒಲಿಸಿ ಅವರ ಮನ । ನಲಿದು ಷಟ್ ಸ್ಮೃತಿಗಳ್ ಬಿಡದಭ್ಯಾಸವ ಮಾಡಿ । ಕಲಿತನದಿ ವಿದ್ವತ್ಪೂರ್ಣ ಸಭೆಯೊಳು ।। ಹಲವು ವ್ಯಾಕ್ಯಾರ್ಥಗಳ ತಾವು ಮಾಡಿ । ಗೆಳೆಯ ಗುನ್ಹಾಳ್ ವೆಂಕೋಬಾಚಾರ್ಯರ ।
ಕಲೆತು ಉಭಯರು ಶಾಸ್ತ್ರಗಳ ನೋಡಿ । ಫಲ ಭರಿತ ಮಧುವರ ಶಾಸ್ತ್ರ । ಉಪವನ ।। ದೊಳಗೆ ಆನಂದಗೂಡಿ ಲಲನೆ ರತ್ನಾಂಬೆಯರು ಯೆಂಬ । ಚಲುವರೊಡನೆ ವೈವಾಹವಾಗುತ ಗಳಿಸಿ ಪುತ್ರ ದುಹಿತರ । ಕೆಲವು ಕಾಲದಿ ಪಡೆದು ಮೆರೆದ ।।

ಧರ್ಮಪತ್ನಿ :

ಶ್ರೀ ಸುಕೃತೀಂದ್ರತೀರ್ಥರ ಪೂರ್ವಾಶ್ರಮದ ಪುತ್ರಿ ಸಾಧ್ವೀ ಸೀತಾಬಾಯಿ ಅವರ ಕುವರಿ ಸಾಧ್ವೀ ರತ್ನಾಬಾಯಿ

ಸಂತಾನ :

ಶ್ರೀ ಸುವ್ರತೀಂದ್ರಾಚಾರ್ಯರು - ಶ್ರೀ ರಾಮಾಚಾರ್ಯರು - ಶ್ರೀ ಕೃಷ್ಣಾಚಾರ್ಯರು ಹಾಗೂ ಮಹಾಮಹೋಪಾಧ್ಯಾಯ, ಪಂಡಿತಕೇಸರಿ ಶ್ರೀ ಸುಜ್ಞಾನೇಂದ್ರಾಚಾರ್ಯರು ( ಶ್ರೀ ಗಿರಿಯಾಚಾರ್ಯರು ) ಮೊದಲಾದ ನಾಲ್ವರು ಪುತ್ರರು ಹಾಗೂ ಸಾಧ್ವೀ ಲಲಿತಾಬಾಯಿ, ಸಾಧ್ವೀ ಲಕ್ಷ್ಮೀಬಾಯಿ ಎಂಬ ಇಬ್ಬರು ಪುತ್ರಿಯರು.

A. ಶ್ರೀ ಸುಜಯೀಂದ್ರತೀರ್ಥರ ಪೂರ್ವಾಶ್ರಮ ಮೊಮ್ಮಕ್ಕಳಲ್ಲಿ " ಶ್ರೀ ಸುಬುಧೇಂದ್ರತೀರ್ಥರಾಗಿ ಸಾಕ್ಷಾತ್ ಹಂಸನಾಮಕ ಪರಮಾತ್ಮನ ಮುಖ್ಯಪೀಠವಾದ ಜಗದ್ಗುರು ಶ್ರೀಮನ್ಮಧ್ವಚಾರ್ಯರ ಮೂಲ ಮಹಾ ಸಂಸ್ಥಾನಾಧಿಪತಿಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ವೇದಾಂತ ಸಾಮ್ರಾಜ್ಯಾಧಿಪತಿಗಳಾದರೆ,

B. ಶ್ರೀ ಆನಂದವಿಠ್ಠಲ ( ಶ್ರೀ ಸಿ ಕೆ ವೆಂಕಟೇಶರಾವ್ ) ರಾಯಚೂರು ದಾಸಸಾಹಿತ್ಯ ಪರಂಪರೆಯಲ್ಲಿ ಬಂದ ಶ್ರೀ ಶ್ಯಾಮಸುಂದರದಾಸರ ಪರಂಪರೆಯಲ್ಲಿ ಮಿಂಚಿದ ಧ್ರುವ ನಕ್ಷತ್ರ.

C. ಶ್ರೀ ಕೆ ವಾದೀಂದ್ರಾಚಾರ್ಯರು, ಹಿರಿಯ ವ್ಯವಸ್ಥಾಪಕರು, ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 5ನೇ ಬಡಾವಣೆ, ಜಯನಗರ, ಬೆಂಗಳೂರು. ಈ ಮೂವರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಜಯೀoದ್ರತೀರ್ಥರ ಪೂರ್ವಾಶ್ರಮದ ಮೊಮ್ಮಕ್ಕಳು.

" ಆಶ್ರಮ "

A. ಫಲ ಮಂತ್ರಾಕ್ಷತೆ ದಿನಾಂಕ : 04.11.1963

B. ಸಂನ್ಯಾಸಾಶ್ರಮ ಸ್ವೀಕಾರದ ದಿನಾಂಕ : 05.11.1963

C. ಆಶ್ರಮವಾದ ಸ್ಥಳ : ನಂಜನಗೂಡು

" ಆಶ್ರಮ ನಾಮ "

ಶ್ರೀ ಸುಜಯೀoದ್ರತೀರ್ಥರು

" ಆಶ್ರಮ ಗುರುಗಳು "

ಶ್ರೀ ಸುಯಮೀoದ್ರತೀರ್ಥರು

" ಆಶ್ರಮ ಶಿಷ್ಯರು "

ಶ್ರೀ ಸುಶಮೀoದ್ರತೀರ್ಥರು

ಶ್ರೀ ಸುಯಮೀಂದ್ರರು ಶೋಭನ ಕೃತು ಅಬ್ಜದಿ । ಶ್ರೀ ಶುಭ ಶೋಭನ ಜನಕಾಗಲು । ಆಶ್ವೀಜ ನಂದಜ ಭೇದ ತಿಥಿ ।
ಶ್ರೀ ಶಾಂತಿ ವಾಸರ ದಿವ್ಯ ತಾರೆಯೊಳು ।। ತೋಷದಲಿ ಶ್ರೀ ಮುಖದಿಂದ ವಿದ್ವಜ್ಜನರ ಕರೆಸುತ । ಅವರ ಇದಿರಿನೊಳ್ ಭಾಸುರ ಸುಮತೀಂದ್ರಯತಿಗಳ । ಸ್ವಪ್ನಲಬ್ಧ ಶ್ರೀ ರಾಘವೇಂದ್ರರೊಳು ಭೂಸುರ । ತತಿವೇದ ಘೋಷದ ವಾದ್ಯ ವೈಭವ ದಿವ್ಯ ನಾದದೊಳು ।। ಶ್ರೀ ಗರಳ ಪುರಿಯೊಳು ಲೇಸು ತನದಿ ವೇದಾಂತ ರಾಜ್ಯವ ।
ಸೋಶಿಲಿಂದ ಪಟ್ಟಾಭಿಷೇಕವ ದೋಷ ರಹಿತ ।
ಮುಹೂರ್ತದೊಳುಗೈಯೆ ದಾಶರಥಿಪದ ಪೂಜೆಗೈದರ ।।

" ಸಮಕಾಲೀನ ಯತಿಗಳು "

ಶ್ರೀ ವಿದ್ಯಾಪಯೋನಿಧಿತೀರ್ಥರು

" ಗ್ರಂಥಗಳು "

1. ಗುರುಗುಣಸ್ತವನದ ಕನ್ನಡ ವ್ಯಾಖ್ಯಾನ

2. ರಾಮ ಚಾರಿತ್ರ್ಯಮಂಜರೀಯ ಕನ್ನಡ ವ್ಯಾಖ್ಯಾನ

3. ಕೃಷ್ಣ ಚಾರಿತ್ರ್ಯಮಂಜರೀಯ ಕನ್ನಡ ವ್ಯಾಖ್ಯಾನ

4. ಪಂಚ ಲಕ್ಷಣಿಯ ಮೇಲೆ ಒಂದು ಪ್ರೌಢ ಲೇಖನ

5. " ಶ್ರೀಮನ್ಮಧ್ವಮತಮ್ " ಮಹಾ ಪ್ರಬಂಧ.

6. ಪೂರ್ವಾಶ್ರಮದಲ್ಲಿ " ಶ್ರೀ ಗುರುಸಾರ್ವಭೌಮರು ಮತ್ತು ಭಾಟ್ಟಸಂಗ್ರಹ ಮೇಲೆ ಪ್ರೌಢ ಪ್ರಬಂಧ

7. ದಿನಾಂಕ : 10.03.1967ರಲ್ಲಿ ವಿಜಯವಾದದಲ್ಲಿ ನಡೆದ" ಅಖಿಲ ಭಾರತ ಮಾಧ್ವ ಮಹಾಮಂಡಲ ಮತ್ತು ಅಖಿಲ ಭಾರತ ಮಾಧ್ವ ತತ್ತ್ವಜ್ಞಾನ ಸಮ್ಮೇಳನದ ಆರನೆಯ ಅಧಿವೇಶನದ ಅಧ್ಯಕ್ಷ ಭಾಷಣದ ಕಿರು ಲೇಖನ.

8. ಬೆಂಗಳೂರಿನಲ್ಲಿ ದಿನಾಂಕ : 25.09.1971 to 27.09.1971ರ ವರೆಗೆ ನಡೆದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಪ್ರವೇಶ ತ್ರಿಶತಮಾನೋತ್ಸವದಲ್ಲಿ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಜಯೀoದ್ರತೀರ್ಥರ ಅಧ್ಯಕ್ಷ ಭಾಷಣದ ಕಿರು ಲೇಖನ .

ವೇದಾಂತ ಸಾಮ್ರಾಜ್ಯಾಧಿಕಾರ :

ಕ್ರಿ. ಶ. 1967 - 1986
( 12.01.1967 - 12.02.1986 )

ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಜಯೀoದ್ರತೀರ್ಥರು -

ಸಾಕ್ಷಾತ್ ಶ್ರೀ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರಮೂಲಮಹಾಸಂಸ್ಥಾನವನ್ನು 23 ವರ್ಷಗಳ ಕಾಲ ಆಳಿದ ಧೀಮಂತ ದಕ್ಷ ಆಡಳಿತಗಾರರು.

ಆರಾಧನೆ :

ಮಾಘ ಶುಕ್ಲ ಚತುರ್ಥೀ

ವಿದ್ಯಾಪೀಠವ ರಚಿಸಿ ವಿದ್ವತ್ಸಭೆಗಳಗೈದು ।
ಸದ್ಮಂತ್ರ ಸದನ ಪರ ಹೃದ್ವಾಸ ಲಕುಮೀಶನ ।
ಪದ್ಮ ಅಡಿಗಳ ಭಜಿಸಿ ಕೃದ್ಧ ರಹಿತಾ ಮಾಘ ।
ಶುದ್ಧ ಚೌತಿಯ ಶೋಕ ಅಬ್ಧಿಯೊಳಗೆನ್ನದ್ದಿ ।।

ಬೃಂದಾವನ ಸ್ಥಳ :

ಶ್ರೀ ಕ್ಷೇತ್ರ ಮಂತ್ರಾಲಯ

ಶ್ರೀ ಸುಶಮೀoದ್ರತೀರ್ಥರು ...

ಸುಯಮೀಂದ್ರಕರಾಬ್ಜೋತ್ಥಂ
ಸುವಿದ್ಯಾಬೋಧಕಂಸದಾ ।
ಸುಮೂಲರಾಮಪೂಜಾಢ್ಯ೦
ಸುಜಯೀಂದ್ರಗುರುಂ ಭಜೇ ।।

" ಉಪಸಂಹಾರ "

ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಯಮೀoದ್ರತೀರ್ಥರ ವರಕುಮಾರಕರಾದ ಪರಮಪೂಜ್ಯ ಶ್ರೀ ಸುಜಯೀoದ್ರತೀರ್ಥರು 12.01.1967ರಂದು ಮಹಾಸಂಸ್ಥಾನಾಧಿಪತಿಗಳಾದರು.

ಪರಮಪೂಜ್ಯ ಶ್ರೀ ಶ್ರೀಯವರು ತಮ್ಮ ಗುರುಗಳ ಆದೇಶದಂತೆ ಅವರು ರೂಪಿಸಿದ್ದ ಎಲ್ಲಾ ಯೋಜನೆಗಳನ್ನೂ ಪೂರ್ಣಗೊಳಿಸಿ, ಶ್ರೀ ಕ್ಷೇತ್ರ ಮಂತ್ರಾಲಯದ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡಿದರು.

ಪರಮಪೂಜ್ಯ ಶ್ರೀ ಸುಜಯೀoದ್ರತೀರ್ಥರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಅನೇಕ ವಸತಿ ಸಮುಚ್ಚಯವನ್ನು ನಿರ್ಮಾಣ ಮಾಡಿ, ಬಂದ ಭಕ್ತರಿಗೆ ಭೋಜನದ ವ್ಯವಸ್ಥೆಯನ್ನು ಶ್ರೀಮಠದಲ್ಲಿ ಏರ್ಪಾಟು ಮಾಡಿದರು.

ಪರಮಪೂಜ್ಯ ಶ್ರೀ ಶ್ರೀಪಾದರು ಭಕ್ತರು ಪ್ರಸಾದ ರೂಪದಲ್ಲಿ ಬೇರೆ ಊರುಗಳಿಗೆ ತೆಗೆದುಕೊಂಡು ಹೋಗಲು " ಪರಿಮಳ ಪ್ರಸಾದ " ವನ್ನು ಪ್ರಾರಂಭ ಮಾಡಿದರು.

ಪ್ರಪ್ರಥಮವಾಗಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಭಕ್ತ / ಶಿಷ್ಯರ ಅನುಕೂಲಕ್ಕಾಗಿ ದೇಶಾದ್ಯಂತ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕಾ ಬೃಂದಾವನ ಸನ್ನಿಧಾನಗಳನ್ನು ನಿರ್ಮಾಣ ಮಾಡಿ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಅನುಕೂಲ ಮಾಡಿಕೊಟ್ಟ ಕೀರ್ತಿ ಪರಮಪೂಜ್ಯ ಶ್ರೀ ಸುಜಯೀoದ್ರತೀರ್ಥರಿಗೆ ಸಲ್ಲುತ್ತದೆ.

ಪರಮಪೂಜ್ಯ ಶ್ರೀ ಶ್ರೀಪಾದರು ವಿದ್ಯಾ ಪಕ್ಷಪಾತಿಗಳು. ದೇಶಾದ್ಯಂತ ಇರುವ ತ್ರಿಮತಸ್ಥ ವಿದ್ವಾಂಸರನ್ನು ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ವಿವಿಧ ಶಾಸ್ತ್ರ ವಿಭಾಗಗಳಲ್ಲಿ ನೇಮಿಸಿ, ಶ್ರೇಷ್ಠ ವಿದ್ವಾಂಸರನ್ನು ತಯಾರು ಮಾಡಿಸಿದರು.

ಇಂದು ಮಂತ್ರಾಲಯ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿದ ವಿದ್ವಾಂಸರು ನಾಡಿನ ಹೆಸರಾಂತ ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ " ವಿದ್ಯಾಮಠ " ಎಂಬ ಕೀರ್ತಿ ಪತಾಕೆಯನ್ನು ಎಲ್ಲೆಡೆ ಹಾರಿಸುತ್ತಿದ್ದಾರೆ.

ಇದುವೇ ಶ್ರೀ ರಾಯರ ಮಠದ ವಿದ್ಯಾ ವೈಭವ!!

ವಿದ್ಯಾ ಇರಲೀ - ಇಲ್ಲದಿರಲೀ, ಪರಮಪೂಜ್ಯ ಶ್ರೀ ಗುರುಗಳ ಬಳಿ ಬಂದು ಪ್ರಾರ್ಥನೆ ಮಾಡಿದರೆ ಸಾಕು, ಅವರಿಗೆ ಅವರ ವಿದ್ಯಾರ್ಹತೆ ಕೂಡಾ ಗಣನೆಗೆ ತೆಗೆದು ಕೊಳ್ಳದೆ ಊಟ, ವಸತಿ ಹಾಗೂ ಕೈತುಂಬಾ ಸಂಬಳ ಕೊಟ್ಟು ಪರಮಾನುಗ್ರಹ ಮಾಡಿದ ಮಾತೃಮೂರ್ತಿ.

ಇಷ್ಟೆಲ್ಲಾ ಉಪಕಾರ ಮಾಡಿದ ಪರಮಪೂಜ್ಯ ಶ್ರೀ ಗುರುಗಳಿಗೆ ಭಕ್ತಿ ಶ್ರದ್ಧೆಗಳಿಂದ ದೀರ್ಘ ದಂಡ ಪ್ರಣಾಮಗಳನ್ನು ಮಾಡಿ, ಅವರ ಸ್ಮರಣೆ ಮಾಡುವುದೇ ಜೀವನ ಸಾರ್ಥಕವಾದೀತು.

ಅಂಥ ಪರಮ ಕರುಣಾಳು ಶ್ರೀ ಗುರುಗಳ ಕೃಪಾಛಾತ್ರದಲ್ಲಿದ್ದ ನಾವುಗಳೇ ಧನ್ಯರೂ - ಮಾನ್ಯರು!!

ಇಂಥಾ ಗುರುಗಳ ಕಾಣೆನೋ -
ಶ್ರೀ ಸುಜಯೀoದ್ರರಂಥಾ -
ಮಹಿಮರ ಕಾಣೆನೋ !!

ಅಂತರಂಗದಿ ಸೀತೆಕಾಂತ -
ಶ್ರೀ ಮೂಲರಾಮನ !
ಸಂತತ ಭಜಿಸುತ ಸಂತರು
ಸುಜಯೀoದ್ರರಂಥಾ !!

ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

21/01/2026

Experiences with Maha Periyava: The union of the separated ones

In a small village in Thanjavur district, all the families were devoted to the SriMatham. There was bitter enmity in the street where the Brahmins lived and they had fallen apart to form two groups. The reason was not worth a pinch of salt, though the enmity grew to enormous proportions.

By some quirk of circumstances, both Ananthu and Sethu, who spear-headed the two groups respectively, came to Sri Maha Periyava at the same time. They prostrated to Periyava.

"Excellent!" said Periyava. "Have you both come together?"

"Yes", they lied in one voice, not wanting to broadcast their enmity in Periyava's presence. Periyava chatted with them for long. In between, He gestured to the attendants in a way in which they alone could understand, to pack a separate parcel of prasada and put it aside.

Practically everything concerning the two families featured in the conversation - Ananthu's son's higher studies, his uncle's eightieth birthday celebrations, the celebrations of Sethu's daughter's pregnancy, the fire-walking festival at the Mariamman temple, Chinna Mirasdar Chittayyan's cows, everything!

As He gave them prasada and leave to depart, Periyava asked, "You are both going straight back home, aren't you?"

"Yes".

"Do you know the Mannargudi estate Srinivasa Iyengar?

"Yes", said both in one voice.

"The two of you may go straight to his residence and hand over this prasada to him before you go home".

The huge mountain of enmity that stood between the two crumbled as Periyava's words descended upon it forcefully. How could the two of them travel to Mannargudi from Kanchipuram and not look at each other or talk to each other?

When the two gentlemen came out of SriMatham with the prasada, they had once again become steadfast friends. The Iyengar who accepted the prasada with reverence and devotion was very surprised and delighted. "Usually Periyava sends prasada through the attendants of SriMatham. Today He has sent it through the two dignitaries such as you both!"

Only the dignitaries knew why it was so.

Narrated by SriMatham Balu Mama
Source: Maha Periyaval Darisana Anubhavangal

21/01/2026
20/01/2026
ಶ್ರೀ ಅನ್ನವಿಠ್ಠಲೋ ಭವತು ಪ್ರಸನ್ನಃ
20/01/2026

ಶ್ರೀ ಅನ್ನವಿಠ್ಠಲೋ ಭವತು ಪ್ರಸನ್ನಃ

Address

Belgaum
590006

Website

Alerts

Be the first to know and let us send you an email when Chidambar Nagar posts news and promotions. Your email address will not be used for any other purpose, and you can unsubscribe at any time.

Share

Category