ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ

  • Home
  • India
  • Belgaum
  • ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ

ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಲಿಂಗಾಯತ ಧರ್ಮ ಪ್ರಸಾರ ಸಂಸ್ಥೆ

ಹಿರೇಮಠ ಸಂಸ್ಥಾನದಲ್ಲಿ ಬಡ ಮತ್ತು ಅನಾಥ ಬಾಲಕರಿಗಾಗಿ "ಉಚಿತ ವಸತಿ ಶಾಲೆಗೆ" ಪ್ರವೇಶಾತಿ ಆರಂಭವಾಗಿದೆ.  ಪೂಜ್ಯರ ಆಶಯದಂತೆ 1ನೇ ತರಗತಿಯಿಂದ 10ನೇ...
18/05/2026

ಹಿರೇಮಠ ಸಂಸ್ಥಾನದಲ್ಲಿ ಬಡ ಮತ್ತು ಅನಾಥ ಬಾಲಕರಿಗಾಗಿ "ಉಚಿತ ವಸತಿ ಶಾಲೆಗೆ" ಪ್ರವೇಶಾತಿ ಆರಂಭವಾಗಿದೆ. ಪೂಜ್ಯರ ಆಶಯದಂತೆ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಉಚಿತ ಊಟ, ವಸತಿ ಹಾಗೂ ಶಿಕ್ಷಣವನ್ನು ನೀಡಲಾಗುತ್ತಿದ್ದು, ಪ್ರಸ್ತುತ ಸಾಲಿನ 1ನೇ ತರಗತಿಯ ಪ್ರವೇಶಕ್ಕೆ 25 ಮಕ್ಕಳಿಗೆ ಅವಕಾಶವಿದೆ.

🗓️ ಮೇ 31- 2026 ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ದಯವಿಟ್ಟು ಈ ಪೋಸ್ಟನ್ನು ಹಂಚಿಕೊಳ್ಳಿ, ನಿಜಕ್ಕೂ ಅರ್ಹರಾದ ಬಡ ಮಕ್ಕಳಿಗೆ ಇದು ತಲುಪಲಿ. 🙏

ಜೈನ್ ಕಾಲೇಜ್ ಘಟಿಕೋತ್ಸವದಲ್ಲಿ ಬಸವ ಬಾವುಟ ಹಾರಿಸಿದ ವಿದ್ಯಾರ್ಥಿಬೆಂಗಳೂರು ನಗರದ ಜೈನ್ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಯೊಬ್...
18/05/2026

ಜೈನ್ ಕಾಲೇಜ್ ಘಟಿಕೋತ್ಸವದಲ್ಲಿ ಬಸವ ಬಾವುಟ ಹಾರಿಸಿದ ವಿದ್ಯಾರ್ಥಿ

ಬೆಂಗಳೂರು ನಗರದ ಜೈನ್ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಯೊಬ್ಬರು ಪದವಿ ಸ್ವೀಕರಿಸುವ ಸಮಯದಲ್ಲಿ ವಿಶ್ವಗುರು ಬಸವಣ್ಣನವರ ಬಾವುಟ ಹಾರಿಸುವ ವಿಡಿಯೋ ವೈರಲ್ ಆಗಿದೆ.

ಇವರು ಸಾಗರ್ ದೇವಪ್ಪ. ತಮ್ಮ ಎಂಎಸ್ಸಿ ಪದವಿಯನ್ನು ಸ್ವೀಕರಿಸಲು ವೇದಿಕೆ ಮೇಲೆ ಹೋದಾಗ ಅಲ್ಲಿ ಬಟ್ಟೆಯೊಳಗಿಂದ ಬಾವುಟ ತೆಗೆದು ಎಲ್ಲರ ಮುಂದೆ ಪ್ರದರ್ಶಿಸಿದರು.

“ನಾನು ಆರ್‌ಸಿಬಿ ಅಥವಾ ಸಿಎಸ್‌ಕೆ ಫ್ಯಾನ್‌ ಅಲ್ಲ, ನಾನು ಬಸವಣ್ಣನವರ ಫ್ಯಾನ್‌,” ಎಂದು ಬಸವ ಮೀಡಿಯಾ ಜೊತೆ ಮಾತನಾಡುತ್ತಾ ಸಾಗರ್ ಹೇಳಿದರು.

ಇಂದು ಯುವಕರು ಹೆಚ್ಚಾಗಿ ಕ್ರಿಕೆಟ್‌ನತ್ತ ಒಲುವು ಹೊಂದಿದ್ದು, ಆರ್‌ಸಿಬಿ ಅಥವಾ ಸಿಎಸ್‌ಕೆ ಟೀಂ ಗುರುತುಗಳನ್ನು ಪ್ರದರ್ಶಿಸುವುದನ್ನು ನೋಡಿದ್ದೆ. ನಾನೂ ಕೂಡ ನನಗೆ ಇಷ್ಟವಾದ ಮೊದಲ ಸಂಸತ್ತು ಸ್ಥಾಪಿಸಿದ ಬಸವಣ್ಣನವರ ಧ್ವಜವನ್ನು ಹಾರಿಸಿದೆ ಎಂದರು.

ಕಾರ್ಯಕ್ರಮ ಮುಗಿದ ಮೇಲೆ ಬೇರೆ ರಾಜ್ಯಗಳಿಂದ ಬಂದ ವಿಧ್ಯಾರ್ಥಿಗಳು ಬಸವಣ್ಣನವರ ಬಗ್ಗೆ ಕುತೂಹಲದಿಂದ ಕೇಳಿ ತಿಳಿದುಕೊಂಡರು, ಎಂದು ಸಾಗರ್ ಹೇಳಿದರು.

ಬಸವಕಲ್ಯಾಣ ತಾಲೂಕಿನ ಮುಚ್ಚಳಂಬ ಊರಿನವರಾದ ಸಾಗರ್ ಆನಂದ ದೇವಪ್ಪಾ ಹಾಗೂ ಮಹಾನಂದಾ ಅವರ ಪುತ್ರ. ಚಿಕ್ಕಂದಿನಿಂದಲೇ ಅವರು ಅಕ್ಕ ಅನ್ನಪೂರ್ಣ, ಅಕ್ಕ ಗಂಗಾಂಬಿಕಾ ಮತ್ತು ಬಸವಲಿಂಗ ಪಟ್ಟದ್ದೇವರು ಅವರುಗಳ ಪ್ರಭಾವದಲ್ಲಿ ಬೆಳೆದಿದ್ದಾರೆ.

ನಿತ್ಯ ವಿಭೂತಿ ಧರಿಸಿ ಶಾಲಾ, ಕಾಲೇಜುಗಳಿಗೆ ತೆರಳುತ್ತಿದ್ದ ಇವರು ಅನೇಕ ಸಹಪಾಠಿಗಳಿಗೆ ವಿಭೂತಿ, ಇಷ್ಟಲಿಂಗವನ್ನು ಪರಿಚಯಿಸಿ, ಬಸವ ಜ್ಞಾನವನ್ನು ನೀಡಿದ್ದಾರೆ.

ಸಮಯ ಸಿಕ್ಕಾಗ ಸರಳ ಜೀವನಕ್ಕೆ ಮಾರ್ಗಗಳಾಗಿರುವ ಬಸವಾದಿ ಶರಣರ ವಚನಗಳನ್ನು ಪಠಿಸುತ್ತಾರೆ. ಬಸವಣ್ಣನವರ ಕಾಯಕ ಹಾಗೂ ದಾಸೋಹ ತತ್ವ ಪಾಲಿಸುತ್ತೇನೆ ಎನ್ನುತ್ತಾರೆ.

01/05/2026

ಬೆಳಗಾವಿಯಲ್ಲಿ ಲಿಂಗಾಯತ ಸ್ವತಂತ್ರಧರ್ಮ ಸಂವಿಧಾನತ್ಮಕ ಮಾನ್ಯತೆಗಾಗಿ ನಡೆದ ಐತಿಹಾಸಿಕ ಸಮಾವೇಶದ ನೆನಪು..

ಸತ್ಯವನ್ನು ಅರೆಯಲು ಈ ವಿಡಿಯೋ ತಪ್ಪದೇ ವಿಕ್ಷೀಸಿ.. ಯಾರು ಲಿಂಗಾಯತ, ವೀರಶೈವ, ಹಿಂದೂ ಎಂಬುವುದರ ಸ್ಪಷ್ಠತೆಯನ್ನು ತಿಳಿಯಿರಿ..
24/04/2026

ಸತ್ಯವನ್ನು ಅರೆಯಲು ಈ ವಿಡಿಯೋ ತಪ್ಪದೇ ವಿಕ್ಷೀಸಿ.. ಯಾರು ಲಿಂಗಾಯತ, ವೀರಶೈವ, ಹಿಂದೂ ಎಂಬುವುದರ ಸ್ಪಷ್ಠತೆಯನ್ನು ತಿಳಿಯಿರಿ..

2 likes, 1 comment. "ವೀರಶೈವ-ಲಿಂಗಾಯತ ಭಿನ್ನತೆಗೆ ಸ್ಪಷ್ಟ ಉತ್ತರಗಳು ಇಲ್ಲಿವೆ... ತಪ್ಪದೇ ವೀಕ್ಷಿಸಿ.. "

20/04/2026
ವೀರಶೈವ ಮತ್ತು ಲಿಂಗಾಯತ ಎರಡು ಒಂದೇ ಎಂದು ಹೇಳುವವರೇ ಇಲ್ಲಿ ಬಸವಣ್ಣನವರು & ಲಿಂಗಾಯತ ಪದ ಎಲ್ಲಿ ಯಾಕೆ ಮರೆಯಾದರು..ಈ ಫೋಟೋ ನೋಡಿ
13/03/2026

ವೀರಶೈವ ಮತ್ತು ಲಿಂಗಾಯತ ಎರಡು ಒಂದೇ ಎಂದು ಹೇಳುವವರೇ ಇಲ್ಲಿ ಬಸವಣ್ಣನವರು & ಲಿಂಗಾಯತ ಪದ ಎಲ್ಲಿ ಯಾಕೆ ಮರೆಯಾದರು..
ಈ ಫೋಟೋ ನೋಡಿ

 #ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರಿ! ----------------------------------------ಆನೆಯನೇರಿಕೊಂಡು ಹೋದಿರೇ ನೀವು, ಕುದುರೆಯನೇರಿಕೊಂಡು ...
11/03/2026

#ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರಿ!
----------------------------------------
ಆನೆಯನೇರಿಕೊಂಡು ಹೋದಿರೇ ನೀವು, ಕುದುರೆಯನೇರಿಕೊಂಡು ಹೋದಿರೇ ನೀವು, ಕುಂಕುಮ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣಾ ! #ಸತ್ಯದ ನಿಲವನರಿಯದೆ ಹೋದಿರಲ್ಲಾ, ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ ! ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ ! ನಮ್ಮ #ಕೂಡಲಸಂಗಮದೇವನರಿಯದೆ ನರಕಕ್ಕೆ ಭಾಜನವಾದಿರಲ್ಲಾ - ಬಸವಣ್ಣ 💖🙏✨

 #ಲಿಂಗಾಯತದಿನದರ್ಶಿಕೆ2026ಪ್ರತಿಗಳಿಗಾಗಿ ಇಂದೇ ಸಂಪರ್ಕಿಸಿ:8884000008, 9741544397ಪ್ರತಿಯೊಬ್ಬ ಲಿಂಗಾಯತ ಧರ್ಮೀಯರ ಮನೆಯಲ್ಲಿ ಇರಲೇಬೇಕಾದ ಮ...
30/12/2025

#ಲಿಂಗಾಯತದಿನದರ್ಶಿಕೆ2026

ಪ್ರತಿಗಳಿಗಾಗಿ ಇಂದೇ ಸಂಪರ್ಕಿಸಿ:8884000008, 9741544397

ಪ್ರತಿಯೊಬ್ಬ ಲಿಂಗಾಯತ ಧರ್ಮೀಯರ ಮನೆಯಲ್ಲಿ ಇರಲೇಬೇಕಾದ ಮಹತ್ವ ದಿನದರ್ಶಿಕೆ. ಇದರಲ್ಲಿ ನಮ್ಮ ಲಿಂಗಾಯತ ಧರ್ಮದ ಸಂಸ್ಕಾರಗಳು, ನಿಜಾಚರಣೆಗಳು, ವೈಚಾರಿಕ & ವೈಜ್ಞಾನಿಕತೆಯ ಬೆಳೆಸುವ ವಚನಗಳು, ಬಸವಾದಿ ಶರಣರ ಜೀವನ ಚರಿತ್ರೆಗಳು, ಲಿಂಗಾಯತ ವಿರಕ್ತಮಠಗಳಲ್ಲಿ, ಬಸವತತ್ವದ ಮಠ, ಪೀಠಗಳಲ್ಲಿ, ಲಿಂಗಾಯತ ಸಂಘ-ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳ ಸಂಪೂರ್ಣ ವಿವರಣೆ ದೊರೆಯಲಿದೆ.

ನಿಮ್ಮ ಮನೆಯ ವಿಳಾಸಕ್ಕೆ ತಲುಪಿಸಲು ಅಂಚೆ ವೆಚ್ಚ 50/-ಪ್ರತ್ಯೇಕವಾಗಿ ಹಾಕಬೇಕು.

10ಕ್ಕೂ ಅಧಿಕ ಪ್ರತಿ ಪಡೆದರೆ ಅಂಚೆ ವೆಚ್ಚ ರಿಯಾಯಿತಿ ಇರುತ್ತದೆ.

01 copy 100/-
02 copy 150/-
05 copy 300/-
10 copy 500/-
50 copy 2200/-
100 copy 3700/-

 #ಲಿಂಗಾಯತದಿನದರ್ಶಿಕೆ2026ಪ್ರತಿಯೊಬ್ಬ ಲಿಂಗಾಯತ ಧರ್ಮೀಯರ ಮನೆಯಲ್ಲಿ ಇರಲೇಬೇಕಾದ ಮಹತ್ವ ದಿನದರ್ಶಿಕೆ.  ಇದರಲ್ಲಿ ನಮ್ಮ ಲಿಂಗಾಯತ ಧರ್ಮದ ಸಂಸ್ಕ...
23/12/2025

#ಲಿಂಗಾಯತದಿನದರ್ಶಿಕೆ2026

ಪ್ರತಿಯೊಬ್ಬ ಲಿಂಗಾಯತ ಧರ್ಮೀಯರ ಮನೆಯಲ್ಲಿ ಇರಲೇಬೇಕಾದ ಮಹತ್ವ ದಿನದರ್ಶಿಕೆ. ಇದರಲ್ಲಿ ನಮ್ಮ ಲಿಂಗಾಯತ ಧರ್ಮದ ಸಂಸ್ಕಾರಗಳು, ನಿಜಾಚರಣೆಗಳು, ವೈಚಾರಿಕ & ವೈಜ್ಞಾನಿಕತೆಯ ಬೆಳೆಸುವ ವಚನಗಳು, ಬಸವಾದಿ ಶರಣರ ಜೀವನ ಚರಿತ್ರೆಗಳು, ಲಿಂಗಾಯತ ವಿರಕ್ತಮಠಗಳಲ್ಲಿ, ಬಸವತತ್ವದ ಮಠ, ಪೀಠಗಳಲ್ಲಿ, ಲಿಂಗಾಯತ ಸಂಘಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳ ಸಂಪೂರ್ಣ ವಿವರಣೆ ದೊರೆಯಲಿದೆ.

ನಿಮ್ಮ ಮನೆಯ ವಿಳಾಸಕ್ಕೆ ತಲುಪಿಸಲು
ಅಂಚೆ ವೆಚ್ಚ 50/-ಪ್ರತ್ಯೇಕವಾಗಿ ಹಾಕಬೇಕು.

10ಕ್ಕೂ ಅಧಿಕ ಪ್ರತಿ ಪಡೆದರೆ ಅಂಚೆ ವೆಚ್ಚ ರಿಯಾಯಿತಿ ಇರುತ್ತದೆ..

ಪ್ರತಿಗಳಿಗಾಗಿ ಇಂದೇ ಸಂಪರ್ಕಿಸಿ : 9741544397

Address

Belgaum
590010

Alerts

Be the first to know and let us send you an email when ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ posts news and promotions. Your email address will not be used for any other purpose, and you can unsubscribe at any time.

Share