19/08/2026
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾರಿಕಾಂಬ ಬಡಾವಣೆಯಲ್ಲಿ ಶ್ರೀಮತಿ ರತ್ನಮ್ಮ ಮತ್ತು ಶ್ರೀ ಆರ್ ಬಾಬು ಎಣ್ಣೆ ವ್ಯಾಪಾರಿಗಳು ಶ್ರೀಮತಿ ಚಿನ್ನಮ್ಮ ಮತ್ತು ಶ್ರೀ ಶ್ರೀನಿವಾಸ್ ಎಂ ಮತ್ತು ಮಕ್ಕಳು ನೂತನವಾಗಿ ನಿರ್ಮಿಸಿರುವ "ಶ್ರೀ ಬಲಮುರಿ ಗಣಪತಿ" ಮತ್ತು "ಶ್ರೀ ನಾಗದೇವರುಗಳ ನೂತನ ಸ್ಥಿರ ಬಿಂಬ" ಪ್ರಾಣ ಪ್ರತಿಷ್ಠಾಪನೆ ಮತ್ತು ವಿಮಾನ ಗೋಪುರ ಮಹಾ ಕುಂಭಾಭಿಷೇಕ ಮಹೋತ್ಸವಕ್ಕೆ "ಶ್ರೀ ಶ್ರೀ ಶಿವಶನೇಶ್ವರ ದೇವಾಲಯ"ದ ಪೀಠಾಧಿಪತಿಗಳು ಹಾಗೂ ಧರ್ಮಾಧಿಕಾರಿಗಳಾದ "ಶ್ರೀ ಶ್ರೀ ಮುನೇಶ್ವರ ಸ್ವಾಮೀಜಿಗ"ಳನ್ನು ಮುಖ್ಯ ಅತಿಥಿಗಳಾಗಿ ಯೂಟ್ಯಬರ್ ಗೀತಕ್ಕ ಹಾಗೂ ವಿಜಯ ಕರ್ನಾಟಕ ನ್ಯೂಸ್ ಪೇಪರ್ ಮುಖ್ಯಸ್ಥರಾದ ಮಾಲೂರ್ ವಿಜಿರವರು ಸ್ವಾಮೀಜಿಗಳನ್ನು ಆಹ್ವಾನಿಸಿದ್ದರು.ಈ ಒಂದು ಕಾರ್ಯಕ್ರಮಕ್ಕೆ ದಿನಾಂಕ 16/8/2026ರಂದು ಸ್ವಾಮೀಜಿಗಳು, ಚಲನಚಿತ್ರ ನಟರಾದ ಬುಲೆಟ್ ನಾಗರಾಜ್ (ಪಾಕರಹಳ್ಳಿ), ಯುವನಟ ವಿಜಯ್ ಪ್ರಕಾಶ್,ಚಂದ್ರಪ್ಪ,ಶ್ರೀನಿವಾಸ್, ದಿಂಬ ರಾಮಕೃಷ್ಣಪ್ಪ,ನಾರಾಯಣಪ್ಪ,ಮಂಜು ಹಾಗೂ ಸುರೇಶ್ ಕಾರ್ಯಕ್ರಮಕ್ಕೆ ಭೇಟಿ ನೀಡಿದರು.ಸ್ವಾಮೀಜಿಗಳನ್ನು ಬರಮಾಡಿಕೊಂಡ ಶ್ರೀ ಶ್ರೀನಿವಾಸ್.ಎಂ ರವರ ಕುಟುಂಬದ ಸದಸ್ಯರಿಗೆ ಹಾಗೂ ವಿಜಯ ಕರ್ನಾಟಕದ ಮುಖ್ಯಸ್ಥರಾದ ಮಾಲೂರ್ ವಿಜಿ ರವರಿಗೆ ಸನ್ಮಾನ ಮಾಡಿ ಗೌರವಿಸಿದರು. Sri Muneshwara Swamiji Sri Sri ShivaShaneshwara Swamy Temple