Pourohitya

Pourohitya Pourohitya provides priest services for performing all Vedic Rituals like Homam, Pujas, Ceremonies and other exclusive services according to the your need

Pourohitya provides priest services for performing all Vedic Rituals like Homam, Pujas, Ceremonies and other exclusive services according to the your needs. Our Professional and experienced priests will perform the rituals as per the vedic standards an traditions at your place or at your desired location. We also provide priest services for performing Ancestral Rituals,Pariharams at your desired p

laces or at our venue. We undertake Marriage contracts including Wedding planner,Catering,Professional Photography, Stage Designing, Entertainment, Guest Hospitality, Return Gifts.

08/02/2022

*🙏ರಥಸಪ್ತಮಿ🙏*

*ಮಹತ್ವ ಮತ್ತು ಪೌರಾಣಿಕ ಹಿನ್ನೆಲೆ*
🚩🚩🚩🚩🚩🚩🚩

ಬಾಲ್ಯದಲ್ಲಿ ಅಜ್ಜಿ ಪಾಡ್ಯ, ಬಿದಿಗೆ, ತದಿಗೆ... ಅಮಾವಾಸ್ಯೆಯವರೆಗೆ ಕಂಠಪಾಠ ಮಾಡಿಸುವಾಗ ಒಂದೊಂದು ತಿಥಿಗೂ ಒಂದೊಂದು ಹಬ್ಬವನ್ನು ಸೇರಿಸಿ ಹೇಳಿಕೊಡುತ್ತಿದ್ದರು.ಪಾಡ್ಯ- ಉಗಾದಿ ಪಾಡ್ಯ, ಬಿದಿಗೆ-ಭಾನು ಬಿದಿಗೆ, ತದಿಗೆ-ಅಕ್ಷ ತದಿಗೆ, ಚೌತಿ-ವಿನಾಯಕನ ಚೌತಿ. . . . ಹೀಗೆ ‘ಸಪ್ತಮಿ’ಯ ಸರದಿ ಬಂದಾಗ ರಥಸಪ್ತಮಿ ಸೇರಿಕೊಳ್ಳುತ್ತಿತ್ತು. ಸಮಯ ಸಿಕ್ಕಾಗಲೆಲ್ಲ ಹಬ್ಬಗಳ ಮಹತ್ವದ ಬಗ್ಗೆ ವಿವರಿಸುತ್ತಿದ್ದರು.ಹಬ್ಬಗಳು ಪ್ರತಿವರ್ಷ ಬರುತ್ತವೆ, ಹೋಗುತ್ತವೆ. ಆದರೆ ಅವುಗಳ ಆಚರಣೆಯ ಹಿಂದಿನ ಗೂಢಾರ್ಥ, ವೈಜ್ಞಾನಿಕ ಅಂಶಗಳನ್ನು ಅರಿತಾಗ ಅರ್ಥಪೂರ್ಣ ಆಚರಣೆಯಾಗುತ್ತದೆ.

ಯುಗಾದಿ ಹೊಸತನವನ್ನು ಹೊತ್ತು ತಂದರೆ, ಅದಕ್ಕೂ ಮುನ್ನ ಬರುವ ರಥಸಪ್ತಮಿ ಹಳತರ ಜಾಗದಲ್ಲಿ ಹೊಸತನ್ನು ತಂದಿಟ್ಟು ಬದುಕನ್ನು ಆನಂದಮಯವಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ. *“ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ದಿನ ಸೂರ್ಯ ಹಳೆಯ ರಥವನ್ನು ಬಿಟ್ಟು ಹೊಸ ರಥ ಹತ್ತುತ್ತಾನಂತೆ”* ಅಂತ ಅಜ್ಜಿ ಹೇಳುತ್ತಿದ್ದುದು ನೆನಪಾಗುತ್ತದೆ.

ಅಲ್ಲದೆ ಈ ದಿನವನ್ನು ಸೂರ್ಯನ ಜನ್ಮದಿನವೆಂದೂ ಪ್ರಾಜ್ಞರು ಹೇಳುತ್ತಾರೆ. ಯಾವುದೇ ವಸ್ತು ಹಳೆಯದಾದ ಮಾತ್ರಕ್ಕೆ ಬದುಕು ಹಳತಾಗದು. ಅದು ನಿತ್ಯ ನವೀನ. ಹೀಗಾಗಿಯೇ ದೇಹ ಹಳತಾದಂತೆ ಹಳೆಯ ಬಟ್ಟಿ ಕಳಚಿ ಹೊಸದನ್ನು ಧರಿಸಿದಂತೆ ಅದನ್ನು ವಿಸರ್ಜಿಸಿ ಆತ್ಮ ಹೊಸತನ್ನು ಪಡೆಯುತ್ತದೆ ಎಂಬ ನಂಬಿಕೆಯಿದೆ. ಸೂರ್ಯನೂ ಹಾಗೆಯೇ, ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ. ತನ್ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ಇಂದು (ಮಾಘ ಮಾಸ, ಶುಕ್ಲಪಕ್ಷದ ಸಪ್ತಮಿ ತಿಥಿ-ಶನಿವಾರ) ದೇಶಾದ್ಯಂತ ರಥಸಪ್ತಮಿ ಆಚರಿಸಲಾಗುತ್ತಿದೆ. *ಆರೋಗ್ಯಂ ಭಾಸ್ಕರಾದಿಚ್ಛೇತ್* ಚಳಿಗಾಲದಲ್ಲಿ ಮುದುಡುವ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ. ‘

*ಆರೋಗ್ಯಂ ಭಾಸ್ಕರಾದಿಚ್ಛೇತ್* ಅಂದರೆ ಸೂರ್ಯ ಆರೋಗ್ಯದಾಯಿ. ವೈಜ್ಞಾನಿಕವಾಗಿಯಯೂ ಇದು ಸಾಬೀತಾಗಿದೆ. ಹಸುಗೂಸಿನ ಕಣ್ಣುಗಳು ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಚಂದ್ರನ ಬೆಳಕಿನಲ್ಲಿ ವಿಟಮಿನ್ ‘ಬಿ 12’ ಇದ್ದರೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ‘ಡಿ’ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿಯೇ ಪ್ರತ್ಯಕ್ಷವಾಗಿ ಕಾಣುವ ದೈವಸ್ವರೂಪಿ ಸೂರ್ಯನ ಆರಾಧನೆಗೆ ವಿಗ್ರಹಾರಾಧ ನೆ ಬಳಕೆಗೆ ಬರುವ ಮುಂಚಿನಿಂದಲೂ ಪ್ರಾಶಸ್ತ್ಯವಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿಯೂ ಹೇಳಲಾಗಿದೆ. ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ.
*ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ* ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ರಥಸಪ್ತಮಿಯ ದಿನದಿಂದಲಾದರೂ ಸೂರ್ಯಾರಾಧನೆಯನ್ನು ಮಾಡಿದರೆ ಅರ್ಥಾತ್ ಆತನ ಕಿರಣಗಳಿಗೆ ಸೂಕ್ತ ವೇಳೆಯಲ್ಲಿ ಮೈಯೊಡ್ಡಿದರೆ ಬೇಗ ಗುಣಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

*ಸೂರ್ಯರಾಧನೆಯನ್ನು ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ಟ್‌, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತಿದೆ*. 108 ಸೂರ್ಯ ನಮಸ್ಕಾರ ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯನಮಸ್ಕಾರಕ್ಕಿದೆ. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.

ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳ ಸೂರ್ಯನಿಂದ ನಡೆಯುತ್ತಿದೆ. ಸೂರ್ಯನಿಲ್ಲದೆ ಜೀವನ ಅಸ್ತಿತ್ವ ಇರಲು ಸಾಧ್ಯವಿಲ್ಲ. ಹೀಗಾಗಿ ರಥಸಪ್ತಮಿಯಂದು 108 ಸೂರ್ಯ ನಮಸ್ಕಾರಗಳು ಹಾಗೂ ಸಪ್ತಾಶ್ವಗಳ ಪ್ರತೀಕವಾಗಿ ಸಪ್ತ ನಮಸ್ಕಾರಗಳನ್ನು ಮಾಡುವ ಅಭ್ಯಾಸವಿದೆ.

*ಪೌರಾಣಿಕ ಹಿನ್ನೆಲೆಯೇನು*

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮನನಿಗೆ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ಮಾಹಿತಿ ಪಡೆದು ಸಂಚಿತಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಚರಿಸಲು ಹೇಳಿದ್ದರು. ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು. ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು.ಅಲ್ಲದೆ ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ ಆದಿತ್ಯಹೃದಯದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಶಮಂತಕಮಣಿ ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ.

*ಮಯೂರನೆಂಬ ಕವಿ ಸೂರ್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ* ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.

*ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ* ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ತುಂಬಾ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣಗಳು ಸಾರಿ ಸಾರಿ ಹೇಳುತ್ತಿವೆ. ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ.

ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಇನ್ನು, ‘ಭೂರ್ಭುವಸ್ವಃ'. . . ಎಂಬಮಂತ್ರದಲ್ಲಿvv ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುತ್ತದೆ.

*ಎಕ್ಕದೆಲೆಯ ಸ್ನಾನ ಸೂರ್ಯನ ಕಿರಣಗಳಲ್ಲಿನ ಸತ್ವಗಳನ್ನು ಹೀರಿಕೊಂಡಿರುವ ಅರ್ಕದೆಲೆ ಅಥವಾ ಎಕ್ಕದೆಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲಿರಿಸಿ ಸ್ನಾನ ಮಾಡುವುದು ರಥಸಪ್ತಮಿಯ ವಿಶೇಷತೆಗಳಲ್ಲೊಂದು* ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

*ದೇವರೆಲ್ಲಿದ್ದಾನೆ* ಎಂದು ಪ್ರಶ್ನಿಸುವ ಬದಲು ಪ್ರತ್ಯಕ್ಷವಾಗಿ ಕಾಣುವ ದೈವೀ ಸ್ವರೂಪಗಳಾದ, ಯಾವುದೇ ಜಾತಿಭೇದ, ಧರ್ಮದ ಚೌಕಟ್ಟಿಲ್ಲದ ಸೂರ್ಯ, ಚಂದ್ರ, ವೃಕ್ಷ, ಬೆಟ್ಟ, ನದೀನದಗಳ ಆರಾಧನೆಯನ್ನು ನಮ್ಮ ಪೂರ್ವಿಕರು ಆಚರಣೆಗೆ ತಂದಿರುವುದು ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ಲವ?

*ಸಪ್ತ ಸಪ್ತ ಮಹಾಸಪ್ತ!*
*ಸಪ್ತದ್ವೀಪ ವಸುಂಧರ*
*ಸಪ್ತಾರ್ಕ* *ಪ್ರಣಮಾಧ್ಯಾಯ!*
*ಸಪ್ತಮಿ ರಥ ಸಪ್ತಮಿ!*

ಎಂದು ಈ ಶ್ಲೋಕವನ್ನು ಹೇಳಿಕೊಂಡು ತಲೆಗೆ ಸ್ನಾನ ಮಾಡಿದರೆ ಓಳ್ಳಯದು
*ಈ ಮೇಲಿನ ಎಲ್ಲಾ ಸಂಗತಿಗಳನ್ನು ಓದಿ, ನಿಮ್ಮ ಕುಟುಂಬ, ಬಂದು, ಬಳಗ, ಮತ್ತು ವಿಶೇಷ ವಾಗಿ ಇಂದಿನ ಮಕ್ಕಳಿಗೆ ಮನವರಿಕೆ ಮಾಡಿ.*
ನಮ್ಮ ಸಂಸ್ಕೃತಿ ಉಳಿಸಲು ನಿಮ್ಮ ಕೊಡುಗೆ ಇರಲಿ.
*ಧರ್ಮದಲ್ಲಿ ಶ್ರೇಷ್ಠ ಮತ್ತು ಜೇಷ್ಠ ಧರ್ಮ ಅದು ನಮ್ಮೆಲ್ಲರ ಸನಾತನ ಹಿಂದೂ ಧರ್ಮ*
ಎಂಬ ಹೆಮ್ಮೆಯು ನಮ್ಮೆಲ್ಲರದಾಗಿದೆ ಎಂಬ ವಿಷಯ ನಿಮ್ಮದಾಗಲಿ.
🚩🚩🚩🚩🚩🚩🚩
🙏🙏🙏🙏🙏🙏🙏

01/06/2021
*ಸಾಲಿಗ್ರಾಮಕ್ಕೆ ಯಾಕಿಷ್ಟು ಮಹತ್ವ.....?*      ಪುರಾಣದಲ್ಲಿ ಹೇಳಿರುವಂತೆ ಜಲಂಧರ ( ಶಂಖಚೂಡ) ನನ್ನು ಕೊಲ್ಲಲು ವಿಷ್ಣುವು ಶಂಖಚೂಡನ ವೇಷಧಾರಿಯಾ...
28/05/2021

*ಸಾಲಿಗ್ರಾಮಕ್ಕೆ ಯಾಕಿಷ್ಟು ಮಹತ್ವ.....?*

ಪುರಾಣದಲ್ಲಿ ಹೇಳಿರುವಂತೆ ಜಲಂಧರ ( ಶಂಖಚೂಡ) ನನ್ನು ಕೊಲ್ಲಲು ವಿಷ್ಣುವು ಶಂಖಚೂಡನ ವೇಷಧಾರಿಯಾಗಿ ಆತನ ಸತಿ ವೃಂದಾಳ (ತುಳಸಿ) ಪಾತಿವ್ರತ್ಯವನ್ನು ಭಂಗ ಮಾಡಬೇಕಾಗುತ್ತದೆ. ಇದರಿಂದ ಕೋಪಗೊಂಡ ವೃಂದಾ ವಿಷ್ಣುವಿಗೆ "ಹೇ ನಾಥ ತೇ ದಯಾ ನಾಸ್ತಿ ಪಾಷಾಣ ಸದೃಶಸ್ಯ ಚ" ಕಲ್ಲಿನಂತಹ ಮನಸ್ಸಿನ ನೀನು ಕಲ್ಲಾಗಿ ಅವತರಿಸು ಎಂದು ಶಾಪವನ್ನು ಕೊಡುತ್ತಾಳೆ. ಪುನಃ ವಿಷ್ಣುವು ನೀನು ನನ್ನನ್ನು ಪತಿಯಾಗಿ ಪಡೆಯಲು ಹಲವು ವರ್ಷ ತಪಸ್ಸನ್ನು ಮಾಡಿರುವೆ ,ಆದರೆ ಅದು ನೆರವೇರಲಿಲ್ಲ ನಿನ್ನ ತಪಸ್ಸಿಗೆ ಈಗ ವರವನ್ನು ನೀಡುತ್ತಿರುವೆ, ನೀನು ಗಂಡಕಿ ನದಿಯಾಗಿ ಅವತರಿಸು ನಿನ್ನ ಒಡಲಿನಲ್ಲಿ ಸಾಲಿಗ್ರಾಮ ರೂಪದ ಕಲ್ಲಾಗಿ ನಾನು ನಿನ್ನ ಸಮೀಪದಲ್ಲಿ ಇರುವೆ.ಎಂದು ವರವನ್ನು ನೀಡುತ್ತಾರೆ. ಆದ್ದರಿಂದ ವಿಷ್ಣುವಿನ ಅವತಾರವಾದ ಸಾಲಿಗ್ರಾಮಕ್ಕೆ ಮಹತ್ವವನ್ನು ನೀಡಲಾಗಿದೆ.

ಈ ಸಾಲಿಗ್ರಾಮವು ಅವಂತಿ ದೇಶದಲ್ಲಿ ಹರಿಯೆಂಬ ಹೆಸರಿನ ಪರ್ವತ ಇದ್ದು ಅಲ್ಲಿ ಪರಮ ಪವಿತ್ರವಾದ ಶಿಲಾಮಯ ಪ್ರದೇಶದಲ್ಲಿ ಸಾಲಿಗ್ರಾಮ ವೆಂಬ ಹೆಸರಿನ ಕ್ಷೇತ್ರವಿದೆ. ಅಂದರೆ ಈಗಿನ ನೇಪಾಳದ ಮಸ್ತಾಂಗ್ ಪ್ರದೇಶದಲ್ಲಿ ಹರಿಯುವ ಕಾಲಿ-ಗಂಡಕಿ ನದಿಯ ಸಮೀಪ ಸಾಲಿಗ್ರಾಮ ಊರಿದೆ ಅಲ್ಲಿ ಹೆಚ್ಚಾಗಿ ಸಾಲಿಗ್ರಾಮ ಶಿಲೆ ಸಿಗುತ್ತದೆ.

"ಪಶ್ಚಾತ್ ಸಹಸ್ರ ವರ್ಷಾಣಾಂ ಸಾಲಿಗ್ರಾಮ ಸ್ಯ ಚಕ್ರಕೇ
ವಜ್ರ ಕೀಟ ಇತಿಖ್ಯಾತೋಜಂತುರ್ಭೂತ್ವಾ ಹರಿಃ ಸ್ವಯಂ" ||

ಈ ಸಾಲಿಗ್ರಾಮದಲ್ಲಿ ಸಾಕ್ಷಾತ್ ವಿಷ್ಣು ಕೀಟ ಜಂತು ವಾಗಿರುವನು ಈ ಸಾಲಿಗ್ರಾಮಗಳು ಹಿರಣ್ಮಯ ವಾಗಿಯೂ,ಮಹಾ ಶಕ್ತಿಶಾಲಿಯಾಗಿಯೂ, ವಿದ್ಯುತ್ ಸಂಚಾರ ಉಳ್ಳವುಗಳಾಗಿಯೂ,ಪ್ರಕಾಶಮಾನವಾಗಿ ಯೂ ಇರುವವು.

"ನಾನಾ ವಿಧಾನಿ ಚಕ್ರಾಣಿ ನಾನಾ ರೂಪಾಣಿ ಲೀಲಯಾ"
ಇಂತಹ ಸಾಲಿಗ್ರಾಮ ಗಳಲ್ಲಿ ಚಕ್ರ ಮೊದಲಾದ ಚಿಹ್ನೆಗಳು ನಾನಾ ವಿಧವಾಗಿ, ನಾನಾ ರೂಪದಿಂದ ತಮ್ಮಷ್ಟಕ್ಕೆ ತಾವೇ ಲೀಲಾಯ ಮಾನವಾಗಿ ಚಿತ್ರಿಸಲ್ಪಡುವವು. ಸಹಸ್ರಾರು ವರ್ಷಗಳಿಂದ ನಿರ್ಮಾಣವಾಗುತ್ತಿರುವ ಇಂತಹ ಸಾಲಿಗ್ರಾಮಗಳಲ್ಲಿ ಸಾಕ್ಷಾತ್ ಲಕ್ಷ್ಮಿ ಪತಿಯಾದ ಭಗವಾನ್ ವಿಷ್ಣು ಪರಮಾತ್ಮನ ಸಾನ್ನಿಧ್ಯವು ಸದಾಕಾಲ ಇರುವುದು. ಆದ್ದರಿಂದ ಸಾಲಿಗ್ರಾಮದಲ್ಲಿ ವಿಷ್ಣುವಿನ ಆವಾಹನೆ ವಿಸರ್ಜನೆಯ ಅವಶ್ಯಕತೆ ಇರುವುದಿಲ್ಲ.
" ಸಾಲಿಗ್ರಾಮ ಶಿಲಾಯಾಂತು ನಾ$$ವಾಹನ ವಿಸರ್ಜನೇ".

ಒಂದು ಸಾಲಿಗ್ರಾಮವನ್ನು ಪೂಜಿಸಿದರೆ ನೂರು ಶಿವಲಿಂಗವನ್ನು ದರ್ಶನ ಮತ್ತು ಪೂಜಿಸಿದ ಫಲ ದೊರೆಯುತ್ತದೆ.
" ಮಹಾಲಿಂಗ ಕೋಟಿಬಿಃ ದೃಷ್ಟಿ ಯದ್ ಫಲಂ ಪೂಜತಿ
ಸಾಲಿಗ್ರಾಮ ಶಿಲಾಯಾಂತು ಏಕಸ್ಯಂ ಇವ ತದ್ಭವೇತ್".

ಇದನ್ನು ಪೂಜಿಸುವುದರಿಂದ ಇಷ್ಟಾರ್ಥಸಿದ್ಧಿ ಆರೋಗ್ಯ ಐಶ್ವರ್ಯ ಶಾಂತಿ ದೊರೆಯುತ್ತದೆ ಇದರ ನೀರಿನ ಸ್ಪರ್ಶದಿಂದ ಚಿಂತೆ ಒತ್ತಡ ಕಡಿಮೆಯಾಗುತ್ತದೆ. ಆದರೆ ಹೆಣ್ಣು ಮಕ್ಕಳಿಗೆ ಸಾಲಿಗ್ರಾಮವನ್ನು ಮುಟ್ಟುವ ಮತ್ತು ಪೂಜಿಸುವ ಅಧಿಕಾರ ಇಲ್ಲ.

ಇಂತಹ ಭಗವಂತನ ನಿತ್ಯ ಸಾನ್ನಿಧ್ಯಹೊಂದಿರುವ ಸಾಲಿಗ್ರಾಮದಲ್ಲಿ ಹಲವು ವರ್ಣಗಳು ಹಲವು ವಿಧಗಳು ಇದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿದುಕೊಳ್ಳೋಣ.

🙏 ಸರ್ವೇಜನಾಃ ಸುಖಿನೋಭವಂತು 🙏

ಎಲ್ಲರಿಗೂ ನರಸಿಂಹ ಜಯಂತಿಯ ಶುಭಾಶಯಗಳು
25/05/2021

ಎಲ್ಲರಿಗೂ ನರಸಿಂಹ ಜಯಂತಿಯ ಶುಭಾಶಯಗಳು

Rama Taraka homa on the occasion of Srirama Navami
21/04/2021

Rama Taraka homa on the occasion of Srirama Navami

🌿🌱🎋🌱🌿🎋🌱🌿🎋ಹೊಸಾ ವರುಷ ನೂತನ ಸಂವತ್ಸರದ ಹೊಸ ದಿನ,ಹೊಸ ಕನಸುಗಳೆಲ್ಲ ಹೊಸೆದುಕೊಳ್ಳಲಿ,ಕನಸುಗಳು ನನಸಾಗಲು ಶ್ರೀ ಪ್ಲವನಾಮ ಸಂವತ್ಸರನಮಗೆಲ್ಲ ಸಕಲ ಶಕ...
13/04/2021

🌿🌱🎋🌱🌿🎋🌱🌿🎋

ಹೊಸಾ ವರುಷ ನೂತನ ಸಂವತ್ಸರದ ಹೊಸ ದಿನ,

ಹೊಸ ಕನಸುಗಳೆಲ್ಲ ಹೊಸೆದುಕೊಳ್ಳಲಿ,

ಕನಸುಗಳು ನನಸಾಗಲು ಶ್ರೀ ಪ್ಲವನಾಮ ಸಂವತ್ಸರ

ನಮಗೆಲ್ಲ ಸಕಲ ಶಕ್ತಿ ಸಾಮರ್ಥ್ಯ ಕಲ್ಪಿಸಲಿ

*ಯುಗಾದಿ ಹಬ್ಬದ ಶುಭಾಶಯಗಳು*

🎋🌿🌱🎋🌿🌱🎋🌿🌱

Wedding decorations... Pls contact us for all your event requirements
03/03/2021

Wedding decorations... Pls contact us for all your event requirements

Kobbari design for wedding... Delivered to Chennai and happy customer
05/02/2021

Kobbari design for wedding...
Delivered to Chennai and happy customer

Mrutyunjaya, ayushya and navagraha homa successfully done at our client's place in JP Nagar
03/02/2021

Mrutyunjaya, ayushya and navagraha homa successfully done at our client's place in JP Nagar

25/01/2021

Happy customer..

18/01/2021

Address

Malleshwaram
Bangalore
560003

Telephone

+919742269514

Website

Alerts

Be the first to know and let us send you an email when Pourohitya posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Pourohitya:

Share