Sri Durgaparameshwari Temple, Agraharapalya, Thotagere, Near Hesaragatta

  • Home
  • India
  • Bangalore
  • Sri Durgaparameshwari Temple, Agraharapalya, Thotagere, Near Hesaragatta

Sri Durgaparameshwari Temple, Agraharapalya, Thotagere, Near Hesaragatta Shree Durgaparameshwari Temple,
Agraharapalya, Thotagere, Near Hesaragatta, Bangalore -562162

*ಶ್ರೀ ದುರ್ಗಾಪರಮೇಶ್ವರಿಯೇ ನಮಃ*ಭಕ್ತ ಮಹಾಶಯರೇ,  ಶಕ್ತಿದೇವತೆ ಶ್ರೀದುರ್ಗಾ ದೇವಿಯ ಅಪ್ಪಣೆ ಮತ್ತು ಅನುಗ್ರಹದ ಮೇರೆಗೆ ಬೆಂಗಳೂರಿನ ಹೆಸರಘಟ್ಟ ಹ...
05/08/2024

*ಶ್ರೀ ದುರ್ಗಾಪರಮೇಶ್ವರಿಯೇ ನಮಃ*

ಭಕ್ತ ಮಹಾಶಯರೇ,
ಶಕ್ತಿದೇವತೆ ಶ್ರೀದುರ್ಗಾ ದೇವಿಯ ಅಪ್ಪಣೆ ಮತ್ತು ಅನುಗ್ರಹದ ಮೇರೆಗೆ ಬೆಂಗಳೂರಿನ ಹೆಸರಘಟ್ಟ ಹತ್ತಿರ, ಬಸವಣ್ಣ ದೇವಸ್ಥಾನದ ಹಿಂಭಾಗದಲ್ಲಿ ಇರುವ ಅಗ್ರಹಾರ ಪಾಳ್ಯ ಎಂಬ ಜಾಗದಲ್ಲಿ ಶಕ್ತಿದಾಯಿನಿ, ಶತ್ರುವಿನಾಶಿನಿ, ಸಂಕಷ್ಟಹರಿಣಿ, ಸರ್ವಾರ್ಥ ಸಾಧಿಕೆಯಾದ ಶ್ರೀದುರ್ಗಾ ಪರಮೇಶ್ವರಿ ಅಮ್ಮನವರ ಭವ್ಯವಾದ ಬೃಹತ್ ದೇಗುಲವು ಭಕ್ತಿಪೂರ್ವಕ ಕ್ಷೇತ್ರವಾಗಿ ನಿರ್ಮಾಣವಾಗುತ್ತಿದೆ ಎಂದು ತಿಳಿಸಲು ಸಂತೋಷದಾಯಕವಾಗಿದೆ.

ಈ ಕ್ಷೇತ್ರದ ತಾಯಿ ದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಅಗ್ರ ಪೂಜಾ ಆರಾಧಕ, ಸಿದ್ದಿ-ಬುದ್ಧಿದಾಯಕ, ವಿಘ್ನ ವಿನಾಶಕನಾದ ಶ್ರೀಗಣಪತಿಯ ಗರ್ಭ ಗುಡಿ
ಹಾಗೂ
ಸಂತಾನಪ್ರಧಾಯಕ, ರೋಗರುಜಿನ ನಿವಾರಕ, ಸರ್ಪದೋಷ ನಿವಾರಕ, ರಾಹುಕೇತು ಗ್ರಹ ದೋಷ ನಿವಾರಕನಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಗರ್ಭಗುಡಿ
ಹಾಗೂ
ಆರೋಗ್ಯ, ವಿದ್ಯೆ, ಬಲ, ಸೌಖ್ಯ ಇತ್ಯಾದಿಗಳ ಪ್ರಾಪ್ತಿಗಾಗಿ ಮತ್ತು ವ್ಯಾಧಿ, ಪೀಡೆ,ದಾರಿದ್ರ್ಯ, ದುಃಖ ಇತ್ಯಾದಿಗಳ ಗ್ರಹದೋಷ ನಿವಾರಣೆಗಾಗಿ ನವಗ್ರಹ ಪ್ರತಿಷ್ಟಾಪನೆ ಮಾಡಲಾಗುತ್ತಿದೆ.
ಹಾಗೂ
ದಾರಿದ್ರನಿವಾರಿಣಿ, ನಿತ್ಯನ್ನದಾಯಿನಿ,
ಸುಖ-ಸಮೃದ್ದದಾಯಿನಿ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ಪ್ರಸಾದ ಮಂದಿರ
ಹಾಗೂ
ವಿಷ್ಣುವಿನ ಅವತಾರಗಳಾದ ಮತ್ಸ್ಯ ಮತ್ತು ಕೂರ್ಮಗಳ ತೀರ್ಥ ಕಲ್ಯಾಣಿಯ ನಡುವೆ ಕುಳಿತು ಧ್ಯಾನಿಸುವ ಧ್ಯಾನ ಪೀಠವನ್ನೂ ಕೂಡ ನಿರ್ಮಿಸಲಾಗಿದೆ.

ಇಷ್ಟೇ ಅಲ್ಲದೆ

ಭಕ್ತಾದಿಗಳ ಮದುವೆ, ನಾಮಕರಣ, ಅರತಕ್ಷತೆ, ಹುಟ್ಟುಹಬ್ಬ ಮುಂತಾದ ಶುಭಕಾರ್ಯಗಳನ್ನು ನೆರವೇರಿಸಲು ಸುಮಾರು 400 ರಿಂದ 500 ಜನ ಕುಳಿತುಕೊಳ್ಳುವ ಮಂದಿರವನ್ನೂ ಸಹ ಈ ದೇವಾಲಯದ ಒಂದು ಭಾಗವಾಗಿ ನಿರ್ಮಿಸಲಾಗಿದೆ.

ಇಂತಹ ಲೋಕಕಲ್ಯಾಣದ ಕ್ಷೇತ್ರದ ನಿರ್ಮಾಣವು ಈಗ ಕೊನೆಯ ಹಂತ ತಲುಪಿದ್ದು ದೇವರ ವಿಗ್ರಹಗಳು, ನವಗ್ರಹ ವಿಗ್ರಹಗಳು, ಗರುಡಗಂಭ , ಗೋಪುರಗಳ ಕಳಶಗಳು, ವಿದ್ಯುತ್ ಮತ್ತು ಸಿಸಿ ಕ್ಯಾಮೆರಾ, ಸುಣ್ಣಬಣ್ಣ, ಕಾಣಿಕೆ ಹುಂಡಿ, ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಇತ್ಯಾದಿಗಳನ್ನು ಪೂರ್ಣಗೊಳಿಸಿ ಲೋಕ ಸಮರ್ಪಣೆ ಮಾಡಲು ಸಹೃದಯ ಭಕ್ತಾದಿಗಳು ಹಾಗೂ ದಾನಿಗಳು ತಮ್ಮ ತನು ಮನ ಧನ ಸಹಾಯವನ್ನು ತಮ್ಮ ಇಚ್ಚೆಯನುಸಾರ ನೀಡಿ ಈ ಮಹಾತ್ಕಾರ್ಯವನ್ನು ಪೂರ್ಣಗೊಳಿಸಿ ಶ್ರೀ ದುರ್ಗಾದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪ್ರಾರ್ಥಿಸುತ್ತೇವೆ.

ತಮ್ಮ ಸೇವಾಕಾಂಕ್ಷಿಗಳು

*ಪರ್ಫೆಕ್ಟ್ ಸೇವಾ ಟ್ರಸ್ಟ್*

Address

Shree Durgaparameshwari Temple, Agraharapalya, Thotagere, Near Hesaragatta
Bangalore
562162

Website

Alerts

Be the first to know and let us send you an email when Sri Durgaparameshwari Temple, Agraharapalya, Thotagere, Near Hesaragatta posts news and promotions. Your email address will not be used for any other purpose, and you can unsubscribe at any time.

Shortcuts

Share