28/11/2023
ಓಂ ಶಕ್ತಿ!
ಈ ಭಾವಚಿತ್ರದ ಹಿಂದಿರುವ ಕಥೆಯ ಬದಲಿಗೆ, ಈ ಭಾವಚತ್ರದಲ್ಲಿರುವ ಸ್ವಯಂಭು ಬಗ್ಗೆ ತಿಳಿದುಕೊಳ್ಳೋಣ.
ಸ್ವಯಂಭು ನಾ..? ಹಾಗೆಂದರೇನು...?
ಇಂದು ಗರ್ಭಗುಡಿ ಇರುವ ಜಾಗದಲ್ಲಿ, ಬೇವಿನ ಮರವಿತ್ತು. ಆ ಬೇವಿನ ಮರದಲ್ಲಿ ಹಾಲು ಸುರಿಯುವ ಅದ್ಭುತ ನಡೆಯುತ್ತಿತ್ತು. ಅಂದಿನಿಂದ ಆ ಬೇವಿನ ಮರವನ್ನು ಪೂಜಿಸಿ ಆ ಹಾಲನ್ನು ಕುಡಿಯುತ್ತಾ ಬಂದರು ಸ್ಥಳೀಯರು. 1966,ನವಂಬರ್ 28ನೆ ತಾರೀಖಿನಂದು ಬೀಸಿದ ಬಿರುಗಾಳಿಯಲ್ಲಿ, ಆ ಬೇವಿನ ಮರ ಉರುಳಿಹೋಯಿತು. ಅದರ ಬಳಿ ಇದ್ದ ಹಾವಿನಹುತ್ತ ರಭಸದಿಂದ ಬಂದ ಮಳೆಯಲ್ಲಿ ಕರಗಿಹೋಗಿ, ಸ್ವಯಂಭುವಾಗಿ ಆ ತಾಯಿ ಉದ್ಭವಗೊಂಡಳು.
ಹೌದು, ಸ್ವಯಂಭು ಎಂದರೆ ತಾನಾಗಿ ಉದ್ಭವಿಸಿರುವುದು ಎಂದರ್ಥ. ಮೇಲ್ ಮರುವತ್ತೂರ್ ಇತಿಹಾಸದಲ್ಲಿ , ಆರಂಭದಿಂದ ಆ ತಾಯಿ ಆದಿಪರಾಶಕ್ತಿಯನ್ನು ಸ್ವಯಂಭು ರೂಪಿಣಿಯಾಗೆ ಪೂಜಿಸುತ್ತ ಬಂದರು.
ಕಾಲ ಕಳೆದ ಹಾಗೆ, ಭಕ್ತರ ಬೇಡಿಕೆಗೆ ಕೆವಿಯೊಡ್ಡಿ ಆದಿಪರಾಶಕ್ತಿ ತನ್ನ ಶಿಲಾ ಸ್ವರೊಪವನ್ನು ತಿಳಿಸಿ, ಕೆತ್ತಿಸಿ - ನಂತರ ಪ್ರತಿಷ್ಠಾಪಿಸಲಾಯಿತು .
ಇಂದು ಸಹ, ಶಿಲಾರೂಪಿಣಿಯಾದ ತಾಯಿಗೆ ಕಲಶ ತೀರ್ಥದಿಂದ ಮಾತ್ರ ಅಭಿಷೇಕ ನಡೆಯುತ್ತದೆ.
ಸ್ವಯಂಭು ರೂಪದಲ್ಲಿರುವ ತಾಯಿಗೆ ಎಲ್ಲಾ ವಿಧವಾದ - ಅರಿಶಿನ, ಕುಂಕುಮ, ಗಂಧ, ವಿಭೂತಿ, ಪನ್ನೀರು, ಎಳನೀರು, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಹಣ್ಣು, ಶೀಗೇಕಾಯಿ ಎಲ್ಲದರಿಂದ ಅಭಿಷೇಕ ನಡೆಯುತ್ತದೆ.
ಅದು ಮಾತ್ರವೇ! ನವರಾತ್ರಿಯಲ್ಲಿ ನವ ವಿಧ ಕಾಪ್ಪು (ಲೇಪನ) ದಿಂದ ಕಂಗೊಳುಸುತ್ತಾಳೆ ಸ್ವಯಂಭು ಮಾತೇ.
ಪೌರ್ಣಮಿ, ಅಮಾವಾಸ್ಯೆ, ಮರುವತ್ತೂರ್ ನಲ್ಲಿ ನಡೆಯುವ ವಿಶೇಷ ಹಬ್ಬ ದಿನಗಳಲ್ಲಿ ಬೆಳ್ಳಿ, ಚಿನ್ನದ ಕವಚವನ್ನು ಹಾಕಿ ಅಲಂಕರಿಸುತ್ತಾರೆ .
ಇವೆಲ್ಲವನ್ನು ಮರುವತ್ತೂರ್ ಹೋದರೆ, ನೋಡಿ ಆನಂದಿಸಬಹುದು.
ಅದೇನೋ ಉದ್ಭವವಾದ ಕಲ್ಲು ತಾನೇ? ಅದಕ್ಕೇಕೆ ಪ್ರಾಮುಖ್ಯತೆ ಎಂದು ನೆನೆಯಬೇಡಿ.
ಒಂದು ಭಕ್ತರಿಗೆ ನಡೆದ ಅದ್ಭುತ ಅನುಭವವನ್ನು ತಿಳಿಯಿರಿ.
ಒಂದು ದಿನ ಕರುವರೈ ಪಣಿ - (ಅಮ್ಮನ ಆಲಯ ಸೇವೆ) ಮಾಡಲು ಒಂದು ಮಂಡಳಿಯ ಶಕ್ತಿಗಳು ಹೋದರಂತೆ. ಆ ಶಕ್ತಿಗಳು ಅಭಿಷೇಕ ಸೇವೆ ಮಾಡಿ ಮುಗಿಸಿದ ನಂತರ ಆರತಿ ಬೆಳಗುವ ಸಮಯ. ಆ ಸಮಯದಲ್ಲಿ, ತನನ್ನು ಅರಿಯದೆ ದೀಪರಾಧನೆ ತಟ್ಟೆಯನ್ನು ಸ್ವಯಂಭುವಿನ ಮೇಲು ಭಾಗಕ್ಕೆ ತಾಕಿಸಿಬಿಟ್ಟರಂತೆ. ಗೊತ್ತಿಲ್ಲದೆ ತಟ್ಟಿಬಿಟ್ಟೆ ಎಂದು ಮನಸ್ಸಿನಲ್ಲಿ ಅಂದುಕೊಂಡು ಆರತಿ ಮುಗಿದ ನಂತರ ಎಲ್ಲರೂ ಪ್ರಸಾದ ಸ್ವೀಕರಿಸಿ ಆಲಯದ ಬೇರೆ ಸೇವೆಗಳಲ್ಲಿ ತೊಡಗಿಸಿಕೊಂಡರಂತೆ. ಈ ಸೇವೆಗೆ ಬರುವ ಭಕ್ತರು - ನಮ್ಮ ಗುರುದೈವಕ್ಕೆ ಪಾದಪೂಜೆ ಮಾಡುತ್ತಾರೆ. ಪಾದಪೂಜೆಯಲ್ಲಿ ಆ ಭಕ್ತ ಹೋದಾಗ, ನೋಡಿದರೆ ಗುರು ಅಮ್ಮನ ತಲೆಯಲ್ಲಿ ರಕ್ತ ಬಂದು ಅದಕ್ಕೆ ಮದ್ದು ಹಾಕಿದ್ದರಂತೆ. ಆ ಭಕ್ತ ಸ್ಥಗಿತಗೊಂದು, ಅಮ್ಮಾ ಏನಾಯಿತು ನಿಮಗೆ? ಎಂದು ಭಾವುಕನಾಗಿ ಕೇಳಲು ಅಮ್ಮ ಹೇಳಿದರಂತೆ - " ಬೆಳಗ್ಗೆ ನೀನು ಆರತಿ ತಟ್ಟೆ ತಾಕಿಸಿಬಿಟ್ಟೆಯಲ್ಲಾ, ನೋಡು ಹೇಗೆ ರಕ್ತ ಬಂದಿದೆ ಅಂತ" ಎಂದು ಹೇಳಿದರಂತೆ. ಆ ಭಕ್ತ, ಅಮ್ಮಾ ತಪ್ಪಾಯಿತು- ಕ್ಷಮಿಸಿಬಿಡು ಎಂದು ಅಮ್ಮನ ಪಾದಗಳಲ್ಲಿ ಶರಣಾದನಂತೆ. ಅವನರಿತ ವಿಷಯ "ಗುರುದೈವ (ಅವನು) - ಶೀಲಸ್ವರೂಪ ದೈವ ಆದಿಪರಾಶಕ್ತಿ (ಅವಳು) ,ಸ್ವಯಂಭು (ಅದು) ಎಲ್ಲವೂ ಒಂದೇ" ಎಲ್ಲಾ ಬೇರೆ ಬೇರೆ ಎಂದು ಇನ್ನೆಂದಿಗೋ ನೆನೆಯಬಾರದು.