ಶ್ರೀ ಮಹೇಶ್ವರೀ ದೇವೀ ದೇವಸ್ಥಾನ Shree Maheshwari Devi Devasthana

  • Home
  • India
  • Bangalore
  • ಶ್ರೀ ಮಹೇಶ್ವರೀ ದೇವೀ ದೇವಸ್ಥಾನ Shree Maheshwari Devi Devasthana

ಶ್ರೀ ಮಹೇಶ್ವರೀ ದೇವೀ ದೇವಸ್ಥಾನ Shree Maheshwari Devi Devasthana ಬೆಂಗಳೂರಿನ ಅತಿ ಪ್ರಾಚಿನವಾದ ದೇಗುಲ.

ಓಂ ಕಾಮೇಶ್ವರ ಮುಖಾಲೋಕ-ಕಲ್ಪಿತ ಶ್ರೀಗಣೇಶ್ವರಾಯೈ ನಮಃ §ಕಾಮೇಶ್ವರ ಮುಖಾಲೋಕ-ಕಲ್ಪಿತ ಶ್ರೀಗಣೇಶ್ವರಾ ~ ಕಾಮೇಶ್ವರನ ಮುಖಾವಲೋಕನದಿಂದ ಶ್ರೀಗಣೇಶ್ವ...
15/09/2026

ಓಂ ಕಾಮೇಶ್ವರ ಮುಖಾಲೋಕ-ಕಲ್ಪಿತ ಶ್ರೀಗಣೇಶ್ವರಾಯೈ ನಮಃ §

ಕಾಮೇಶ್ವರ ಮುಖಾಲೋಕ-ಕಲ್ಪಿತ ಶ್ರೀಗಣೇಶ್ವರಾ ~ ಕಾಮೇಶ್ವರನ ಮುಖಾವಲೋಕನದಿಂದ ಶ್ರೀಗಣೇಶ್ವರನನ್ನು ಕಲ್ಪಿಸಿರುವವಳು.

ಅಸುರರಿಂದ ನಿರ್ಮಿತವಾದ ನಾನಾ ವಿಧವಾದ ವಿಘ್ನಗಳಿಂದ ದೇವತೆಗಳು ಯಂತ್ರಿತರಾಗಿರುವುದನ್ನು ನೋಡಿ, ಶ್ರೀಮಾತೆಯು, ತನ್ನ ಪತಿಯ ಮುಖಾವಲೋಕನದಿಂದಲೇ ಇಪ್ಪತ್ತೆಂಟು ವರ್ಣಗಳುಳ್ಳ ಮಹಾಗಣಪತಿಯನ್ನು ಸೃಷ್ಟಿಸಿದಳು. ಆ ಮಹಾಗಣಪತಿಯ ಸಹಾಯದಿಂದ ಅಸುರರ ವಿಘ್ನಯಂತ್ರವನ್ನು ಭೇದಿಸಿ ದೇವತೆಗಳು ವಿಮೋಚನೆ ಹೊಂದಿದರು.

ಭಂಡಾಸುರನು 'ಜಯ ವಿಘ್ನ'ವೆಂಬ ಯಂತ್ರವನ್ನು ಲಲಿತಾಂಬೆಯ ಸೈನ್ಯದ ಮಧ್ಯೆ ಸ್ಥಾಪಿಸುತ್ತಾನೆ. ಆ ಯಂತ್ರದಿಂದ ಬಿಡುಗಡೆ ಪಡೆಯಲು, ಗಣೇಶನನ್ನು ಸೃಷ್ಟಿಸಿದಳು. ಆಗ ಗಣೇಶನು 'ಜಯ ವಿಘ್ನ'ವೆಂಬ ಯಂತ್ರವನ್ನು ತೆಗೆದು ಹಾಕುತ್ತಾನೆ ಎನ್ನಲಾಗಿದೆ.

( ಶ್ರೀ ಲಲಿತಾ ಸಹಸ್ರನಾಮ ~ ೭೭)

| ಓಂ ಶ್ರೀ ಮಹೇಶ್ವರೀ ದೇವ್ಯೈ ನಮಃ |

ಶ್ರೀ ಮಹೇಶ್ವರೀ ದೇವೀ ದೇವಸ್ಥಾನ
ಪಂಪಮಹಾಕವಿ ರಸ್ತೆ, ಶಂಕರಪುರಂ , ಬೆಂಗಳೂರು .
Shree Maheshwari Devi Devasthana,
Shankarapuram ,Bengaluru

ಶ್ರೀಮಹೇಶ್ವರೀಸುತ ಮಹಾಗಣಪತಿಯ ಪೂಜೆಯೆಂಬ ಶುಭಾರಂಭದೊಂದಿಗೆ,ಅಧಿಕೃತವಾಗಿ ಆರಂಭವಾಯಿತು ಶರನ್ನವರಾತ್ರಿಯಮಹಾಸಿದ್ಧತೆ ಕಾರ್ಯಕ್ರಮ !✨ॐकार विघ्नाध...
14/09/2026

ಶ್ರೀಮಹೇಶ್ವರೀಸುತ ಮಹಾಗಣಪತಿಯ ಪೂಜೆಯೆಂಬ ಶುಭಾರಂಭದೊಂದಿಗೆ,
ಅಧಿಕೃತವಾಗಿ ಆರಂಭವಾಯಿತು ಶರನ್ನವರಾತ್ರಿಯ
ಮಹಾಸಿದ್ಧತೆ ಕಾರ್ಯಕ್ರಮ !✨

ॐकार विघ्नाधिपतिं प्रणम्य |
गुरुश्च सर्वान् सकलं प्रणम्य ||
संसार दुःखौघा विनाशनाय |
दुःखार्थी हंत्रिं प्रणामामी दुर्गाम् ||

ಓಂಕಾರ ವಿಘ್ನಾಧಿಪತಿಂ ಪ್ರಣಮ್ಯ,
ಗುರುಶ್ಚ ಸರ್ವಾನ್ ಸಕಲಂ ಪ್ರಣಮ್ಯ ,
ಸಂಸಾರ ದುಃಖೌಘ ವಿನಾಶನಾಯ,
ದುಃಖಾರ್ಥಿ ಹಂತ್ರೀಂ ಪ್ರಣಮಾಮಿ ದುರ್ಗಾಂ ||

( ಓಂಕಾರ ಸ್ವರೂಪನಾದ ವಿಘ್ನಾಧಿಪತಿಯಾದ ವಿನಾಯಕನಿಗೆ ವಂದಿಸಿ, ಸರ್ವಸಕಲ ಗುರುಗಳಿಗೂ ವಂದಿಸಿ, ಸಂಸಾರ ದುಃಖದ ವಿನಾಶಕ್ಕಾಗಿ, ದುಃಖ ವಿನಾಶಿನಿಯಾದ ದುರ್ಗೆಯನ್ನು ವಂದಿಸುವೆ )

ಮೊದಲು ಭಾದ್ರಪದ ಮಸಾದ ಶುಕ್ಲಪಕ್ಷದಲ್ಲಿ ಗಣಪತಿಯನ್ನು ಆರಾಧಿಸಿ, ..
ನಂತರ ಭಾದ್ರಪದ ಕೃಷ್ಣಪಕ್ಷ ಅರ್ಥಾತ್ ಪಿತೃಪಕ್ಷದಲ್ಲಿ ಗುರು ಹಿರಿಯರನ್ನು ಸ್ಮರಿಸಿ, ..
ಅನಂತರ ಬರುವ ಆಶ್ವಯುಜ ಮಾಸದ ಶುಕ್ಲಪಕ್ಷದಲ್ಲಿ ಸರ್ವಜೀವಿಗಳಿಗೂ ಜನನಿಯಾದ, ಜಗನ್ಮಾತೆಯಾದ, ದುರ್ಗಾ ಎಂದು ಪ್ರಖ್ಯಾತಳಾದ , ಸರ್ವಲೋಕಗಳಿಗೂ ಈಶ್ವರಿಯಾದ ಮಹೇಶ್ವರಿ ದೇವಿಯ ಆರಾಧನೆ.

| ॐ ಶ್ರೀ ವಿನಾಯಕಾಯ ನಮಃ |

| ॐ ಶ್ರೀ ಮಹೇಶ್ವರೀ ದೇವ್ಯೈ ನಮಃ |

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ ।ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದ ॥ " ಗುದಸ್ಥಾನದಲ್ಲಿ ಮೂಲಾಧಾರವೆಂಬ ಚಕ್ರದ ,ನಾಲ್ಕು ...
14/09/2026

ವಕ್ರತುಂಡ ಮಹಾಕಾಯ
ಕೋಟಿಸೂರ್ಯ ಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ
ಸರ್ವಕಾರ್ಯೇಷು ಸರ್ವದ ॥

" ಗುದಸ್ಥಾನದಲ್ಲಿ ಮೂಲಾಧಾರವೆಂಬ ಚಕ್ರದ ,
ನಾಲ್ಕು ದಳಗಳಲ್ಲಿಯೂ ನಾಲ್ಕು ಬೀಜಾಕ್ಷರಗಳಿಂದ ಕೂಡಿ , ನೀಲವರ್ಣದಿಂದ ಕೂಡಿ,
ಪಾಶಾಂಕುಶಗಳನ್ನು ಧರಿಸಿ ,
ಗಣಪತಿಯೆಂಬ ಹೆಸರಿನಿಂದ ಕ್ರೀಡಿಸುತ್ತಿರುವವಳೂ ಈ ದೇವಿಯೇ !"

( ದೇವೀ ಮಹಾತ್ಮೆ- ೧೯ನೇ ಅಧ್ಯಾಯ )

| ॐ ಶ್ರೀ ವಿನಾಯಕಾಯ ನಮಃ |

| ॐ ಶ್ರೀ ಮಹೇಶ್ವರೀ ದೇವ್ಯೈ ನಮಃ |

ಶ್ರೀ ಮಹೇಶ್ವರೀ ದೇವೀ ದೇವಸ್ಥಾನ
ಪಂಪ ಮಹಾಕವಿ ರಸ್ತೆ, ಶಂಕರಪುರಂ , ಬೆಂಗಳೂರು .
Shree Maheshwari Devi Devasthana,
Shankarapuram ,Bengaluru

.ಸರ್ವಮಂಗಳ ಮಾಂಗಲ್ಯೆ |ಶಿವೇ ಸರ್ವಾರ್ಥ ಸಾಧಿಕೆ ||ಶರಣ್ಯೇ ತ್ರಯಂಬಿಕೇ ಗೌರೀ |ನಾರಾಯಣೀ ನಮೋಸ್ತುತೆ || हिमाचलेन्द्र तनयां सौमंगल्या प्रद...
14/09/2026

.
ಸರ್ವಮಂಗಳ ಮಾಂಗಲ್ಯೆ |
ಶಿವೇ ಸರ್ವಾರ್ಥ ಸಾಧಿಕೆ ||
ಶರಣ್ಯೇ ತ್ರಯಂಬಿಕೇ ಗೌರೀ |
ನಾರಾಯಣೀ ನಮೋಸ್ತುತೆ ||

हिमाचलेन्द्र तनयां सौमंगल्या प्रदायनीम्।
गणेश स्कन्द जननीm पार्वतीं प्रणाममयहम् ||

ಹಿಮಾಲಯ ರಾಜನ ಮಗಳಾದ, ಸೌಭಾಗ್ಯ ಮತ್ತು ಮಂಗಳವನ್ನು ಕರುಣಿಸುವವಳಾದ, ಗಣೇಶ ಸ್ಕಂದರ ಜನನಿಯಾದ, ಪಾರ್ವತಿ ದೇವಿಗೆ ನನ್ನ ಪ್ರಣಾಮಗಳು.

| ॐ ಶ್ರೀ ಮಹೇಶ್ವರೀ ದೇವ್ಯೈ ನಮಃ |

ಶ್ರೀ ಮಹೇಶ್ವರೀ ದೇವೀ ದೇವಸ್ಥಾನ
ಶಂಕರಪುರಂ , ಬೆಂಗಳೂರು .
Shree Maheshwari Devi Devasthana,
Shankarapuram ,Bengaluru

ಓಂ ವಿಶುಕ್ರ ಪ್ರಾಣಹರಣ-ವಾರಾಹೀ ವೀರ್ಯನಂದಿತಾಯೈ ನಮಃ §ವಿಶುಕ್ರ ಪ್ರಾಣಹರಣ-ವಾರಾಹೀ ವೀರ್ಯನಂದಿತಾ ~ವಿಶುಕ್ರನ ಪ್ರಾಣಹರಣಮಾಡಿದ ವಾರಾಹಿಯ ಶಕ್ತಿಯ...
08/09/2026

ಓಂ ವಿಶುಕ್ರ ಪ್ರಾಣಹರಣ-ವಾರಾಹೀ ವೀರ್ಯನಂದಿತಾಯೈ ನಮಃ §

ವಿಶುಕ್ರ ಪ್ರಾಣಹರಣ-ವಾರಾಹೀ ವೀರ್ಯನಂದಿತಾ ~
ವಿಶುಕ್ರನ ಪ್ರಾಣಹರಣಮಾಡಿದ ವಾರಾಹಿಯ ಶಕ್ತಿಯಿಂದ ಅನಂದಿತಳಾಗಿ ಇರುವವಳು.

ಬಾಲಾ, ಮಂತ್ರಿಣೀ, ವಾರಾಹೀ-ಈ ಮೂವರೊಳಗೆ ವಾರಾಹಿಯು ಅತ್ಯಂತ ಬಲಶಾಲಿಯಾಗಿದ್ದಾಳೆ. ಲಲಿತಾದೇವಿಯ ಪೂಜೆಗೆ ಕೆಲವು ಕ್ರಮಗಳನ್ನು ಅನುಸರಿಸಬೇಕೆಂದು ವಾರಾಹಿಯು ತಿಳಿಸಿದ್ದಾಳೆ. ಆ ಮೂರು ಗುಣಗಳು ಯಾವುವೆಂದರೆ ದೈಹಿಕ ಶಕ್ತಿ, ಮನಸ್ಸಿನ ನಿಯಂತ್ರಣ (ಮಂತ್ರ ಪಠಣೆಯ ಮೂಲಕ) ಮತ್ತು ಇಂದ್ರಿಯಗಳನ್ನು ನಿಗ್ರಹಿಸುವುದು, ಪರಮಾತ್ಮನನ್ನು ಅರಿಯಲು ಮುಖ್ಯ ಎನ್ನಲಾಗಿದೆ. 'ವರಾಹನಂದನಾಥನಿಗೆ *ಮಹೇಶ್ವರಿಯು* ಪ್ರಸನ್ನಳಾದುದರಿಂದಲೂ, ವರಾಹ-ವದನವುಳ್ಳವಳಾಗಿದ್ದರಿಂದಲೂ, ಅವಳು ವಾರಾಹಿಕ ಎಂದು ಪ್ರಸಿದ್ಧಳಾಗಿದ್ದಾಳೆ" ಎಂದು ವಾರಾಹೀ-ಪದದ ನಿರುಕ್ತಿಯನ್ನು ಹೇಳಿದೆ.

( ಶ್ರೀ ಲಲಿತಾ ಸಹಸ್ರನಾಮ ~ ೭೬)

| ಓಂ ಶ್ರೀ ಮಹೇಶ್ವರೀ ದೇವ್ಯೈ ನಮಃ |

ಶ್ರೀ ಮಹೇಶ್ವರೀ ದೇವೀ ದೇವಸ್ಥಾನ
ಪಂಪಮಹಾಕವಿ ರಸ್ತೆ, ಶಂಕರಪುರಂ , ಬೆಂಗಳೂರು .
Shree Maheshwari Devi Devasthana,
Shankarapuram ,Bengaluru

04/09/2026

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 🦚

कृष्णेन संस्तुते देवि शश्वद्भक्त्या सदाम्बिके।
रुपं देहि जयं देहि यशो देहि द्विषो जहि॥

" ಗೋಪಾಲಕನಾಗಿ ಹುಟ್ಟಿ , ದ್ವಾರಕಿಯಲ್ಲಿ ವಾಸಮಾಡುತ್ತಾ , ಷೋದಶ ಸಹಸ್ರ ಸ್ತ್ರೀಯರಿಗೆ ಪತಿಯಾಗಿ ರಾಜ್ಯವನ್ನಳುತ್ತಾ, ತನಗೆ ಪ್ರತಿಭಟಿಸಿ ಬಂದ ಕಂಸನನ್ನು ನರಕಾಸುರ ಮುರಾಸುರರೆಂಬ ದೈತ್ಯರನ್ನೂ ಶಿಶುಪಾಲ ದಂತವಕ್ರರೆಂಬುವವರನ್ನೂ ಕೊಂದು , ಧರ್ಮಾರ್ಜುನ ಭೀಮಾಧಿಗಳನ್ನು ಸಂರಕ್ಷಿಸಿದ ದೇವಕೀದೇವಿಯ ಮಗನಾದ ಶ್ರೀಕೃಷ್ಣನ ಅವತಾರವನ್ನೂ ಈ ದೇವಿಯೇ ಮಾಡಿದವಳು.

ವಿಷ್ಣುರೂಪಳಾದ ನಿನ್ನ ಮಾಯೆಯನ್ನು ತಿಳಿಯುವುದು ಅಸಾಧ್ಯ. ವಿಷ್ಣುವಿಗೂ ದೇವಿಗೂ ಕಿಂಚಿತ್ತಾದರೂ ಭೇಧವಿಲ್ಲ "
( ದೇವೀ ಮಹಾತ್ಮೆ ೧೯ ನೇ ಅಧ್ಯಾಯ ;
ಶಿವ- ನಂದಿ ಸಂವಾದ )

ವಸುದೇವಸುತಂ ದೇವಂ ಕಂಸಾಚಾನುರಮರ್ಧನಂ |
ದೇವಕೀಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ||

ಭಾವರ್ಥ : ವಸುದೇವನ ಮಗನಾದ , ಕಂಸಾಚಾನುರರನ್ನು ಸಂಹರಿಸಿದವನಾದ , ತಾಯಿ ದೇವಕಿಗೆ ಪರಮಾನಂದನಾದ , ಜಗದ್ಗುರುವಾದ ಕೃಷನಿಗೆ ವಂದಿಸುತ್ತೇನೆ .

।ॐ ನಮೋ ವಾಸುದೇವಾಯ।

| ॐ ಶ್ರೀ ಮಹೇಶ್ವರೀ ದೇವ್ಯೈ ನಮಃ |

ಶ್ರೀ ಮಹೇಶ್ವರೀ ದೇವೀ ದೇವಸ್ಥಾನ
ಶಂಕರಪುರಂ , ಬೆಂಗಳೂರು .
Shree Maheshwari Devi Devasthana ,
Shankarapuram ,Bengaluru

ಓಂ ಮಂತ್ರಿಣ್ಯಂಬಾ ವಿರಚಿತ -ವಿಷಂಗ ವಧತೋಷಿತಾಯೈ ನಮಃ §ಮಂತ್ರಿಣ್ಯಂಬಾ ವಿರಚಿತ -ವಿಷಂಗ ವಧತೋಷಿತಾ ~ ಮಂತ್ರಿಣಿಯಾದ ಶ್ಯಾಮಲಾಂಬೆಯಿಂದ ಮಾಡಲ್ಪಟ್ಟ...
01/09/2026

ಓಂ ಮಂತ್ರಿಣ್ಯಂಬಾ ವಿರಚಿತ -ವಿಷಂಗ ವಧತೋಷಿತಾಯೈ ನಮಃ §

ಮಂತ್ರಿಣ್ಯಂಬಾ ವಿರಚಿತ -ವಿಷಂಗ ವಧತೋಷಿತಾ ~

ಮಂತ್ರಿಣಿಯಾದ ಶ್ಯಾಮಲಾಂಬೆಯಿಂದ ಮಾಡಲ್ಪಟ್ಟ ವಿಷಂಗನ ವಧೆಯಿಂದ ಸಂತೋಷಿತಳಾಗಿರುವವಳು.

ಭಂಡಾಸುರನಿಗೆ ವಿಷಂಗ ಮತ್ತು ವಿಶುಕ್ರ ಎಂಬ ಇಬ್ಬರು ತಮ್ಮಂದಿರಿದ್ದರು. ದೈತ್ಯಶಿಖಾಮಣಿಯಾದ ಭಂಡಾಸುರನು ವಿವಿಧ ದೈತ್ಯವರ್ಗಗಳನ್ನು ಸೃಷ್ಟಿಸಬೇಕೆಂದು ಇಚ್ಛಿಸಿ ಬಲಭುಜದಿಂದ ವಿಶುಕ್ರನನ್ನೂ, ಎಡಭುಜದಿಂದ ವಿಷಂಗನನ್ನೂ ಸೃಷ್ಟಿಸಿದನೆಂದು ಬ್ರಹ್ಮಾಂಡಪುರಾಣದಲ್ಲಿ ಹೇಳಿದೆ.

ಈ ನಾಮದಲ್ಲಿ 'ವಿ' ಎಂಬ ಬೀಜಾಕ್ಷರವಿದೆ. ಈ ಬೀಜ ಮೂಲ ವರ್ಣ ಮಾಲೆಯ ' ವ ದಿಂದ ಬಂದಿದೆ. ವ ಎರಡು ವಿಷಯಗಳನ್ನು ಸೂಚಿಸುತ್ತದೆ. ಇದು ಅಲೌಕಿಕ ಶಕ್ತಿಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಎರಡನೆಯದಾಗಿ ಇದು ದುಷ್ಟ ಶಕ್ತಿಯನ್ನು ನಾಶಮಾಡುತ್ತದೆ. ಮಂತ್ರಿಣಿಯು ಲಲಿತೆಯ ಮಂತ್ರಗಳ ಶಕ್ತಿಯನ್ನು ಪ್ರತಿನಿಧಿಸುತ್ತದೆ. ವಿಷಂಗ ಎಂದರೆ ಇಂದ್ರಿಯಗಳ ಮತ್ತು ಜ್ಞಾನೇಂದ್ರಿಯಗಳಿಂದ ಉದ್ಭವಿಸುವ ಅಸೆಗಳು ಮತ್ತು ದುಷ್ಟ ಪರಿಣಾಮಗಳು; ಮಂತ್ರಿಣೆಯು ಲಲಿತೆಯ ಭಕ್ತರ ಅಸೆಗಳು ಮತ್ತು ದುಷ್ಟ ಪರಿಣಾಮಗಳನ್ನು ನಾಶಮಾಡುತ್ತಾಳೆ ಎನ್ನಲಾಗಿದೆ.

( ಶ್ರೀ ಲಲಿತಾ ಸಹಸ್ರನಾಮ ~ ೭೫)

| ಓಂ ಶ್ರೀ ಮಹೇಶ್ವರೀ ದೇವ್ಯೈ ನಮಃ |

ಶ್ರೀ ಮಹೇಶ್ವರೀ ದೇವೀ ದೇವಸ್ಥಾನ
ಪಂಪಮಹಾಕವಿ ರಸ್ತೆ, ಶಂಕರಪುರಂ , ಬೆಂಗಳೂರು .
Shree Maheshwari Devi Devasthana,
Shankarapuram ,Bengaluru

ಓಂ ಭಂಡಪುತ್ರ ವಧೋದ್ಯುಕ್ತ-ಬಾಲಾವಿಕ್ರಮ ನಂದಿತಾಯೈ ನಮಃ §ಭಂಡಪುತ್ರ ವಧೋದ್ಯುಕ್ತ ಬಾಲಾವಿಕ್ರಮ ನಂದಿತಾ ~ ಭಂಡಾಸುರನ ಪುತ್ರರ ವಧೆಯಲ್ಲಿ ಉದ್ಯುಕ್...
25/08/2026

ಓಂ ಭಂಡಪುತ್ರ ವಧೋದ್ಯುಕ್ತ-ಬಾಲಾವಿಕ್ರಮ ನಂದಿತಾಯೈ ನಮಃ §

ಭಂಡಪುತ್ರ ವಧೋದ್ಯುಕ್ತ ಬಾಲಾವಿಕ್ರಮ ನಂದಿತಾ ~

ಭಂಡಾಸುರನ ಪುತ್ರರ ವಧೆಯಲ್ಲಿ ಉದ್ಯುಕ್ತಳಾದ ಬಾಲೆಯ ಪರಾಕ್ರಮದಿಂದ ಆನಂದಿತಳಾಗಿರುವವಳು.

ದೇವಿಯ ರೂಪವಾದ, ಒಂಬತ್ತು ವರ್ಷದ ಮಗಳಿಗೆ 'ಬಾಲಾ' ಎಂದು ಹೆಸರು. ಇವಳು ಭಂಡಾಸುರನ ಮೂವತ್ತು ಮಕ್ಕಳನ್ನು ವಧಿಸಿ ಪ್ರಸಿದ್ಧಳಾದವಳು. 'ಬಾಲಾ' ಲಲಿತಾಂಬಿಕೆಯ ಅಂಗ ದೇವತೆ. ಇಲ್ಲಿ ಭಂಡಾಸುರನ ಮಕ್ಕಳು 30 ತತ್ವಗಳನ್ನು ಪ್ರತಿನಿಧಿಸುತ್ತಾರೆ. ಜೀವಿಯು ಈ 30 ತತ್ವಗಳನ್ನು ದಾಟದ ನಂತರ ಲಲತೆಯನ್ನು ಅರಿಯಲು ಸಾಧ್ಯವಾಗುತ್ತದೆ. 'ಬಾಲಾ' ಎನ್ನುವ ಸಣ್ಣ ಶಕ್ತಿಯು, ಈ ತತ್ತ್ವಗಳ ದುಷ್ಟ ಪ್ರಭಾವಗಳನ್ನು ಹೊಡೆದೋಡಿಸುತ್ತದೆ ಎನ್ನಲಾಗಿದೆ. 'ಬಾಲಾ' ಎನ್ನುವುದು ಶಕ್ತಿ ಸೂಚಕವೂ ಆಗಿದೆ.

( ಶ್ರೀ ಲಲಿತಾ ಸಹಸ್ರನಾಮ ~ ೭೪)

| ಓಂ ಶ್ರೀ ಮಹೇಶ್ವರೀ ದೇವ್ಯೈ ನಮಃ |

ಶ್ರೀ ಮಹೇಶ್ವರೀ ದೇವೀ ದೇವಸ್ಥಾನ
ಪಂಪಮಹಾಕವಿ ರಸ್ತೆ, ಶಂಕರಪುರಂ , ಬೆಂಗಳೂರು .
Shree Maheshwari Devi Devasthana,
Shankarapuram ,Bengaluru

ಶ್ರಾವಣ ಪೌರ್ಣಮಿ ಪೂರ್ವಸ್ಥ ಶುಕ್ರವಾರೇ ~ಚಾರುಮತಿ ಪ್ರಭೃತಿಭಿಃ ಪೂಜಿತಾಕಾರೇ ~ದೇವಾದಿ ಗುರು ಗುಹ ಸಮರ್ಪಿತ ಮಣಿಮಯ ಹಾರೇ ~ ದೀನ ಜನ ಸಂರಕ್ಷಣ ನಿ...
21/08/2026

ಶ್ರಾವಣ ಪೌರ್ಣಮಿ ಪೂರ್ವಸ್ಥ ಶುಕ್ರವಾರೇ ~
ಚಾರುಮತಿ ಪ್ರಭೃತಿಭಿಃ ಪೂಜಿತಾಕಾರೇ ~
ದೇವಾದಿ ಗುರು ಗುಹ ಸಮರ್ಪಿತ ಮಣಿಮಯ ಹಾರೇ ~ ದೀನ ಜನ ಸಂರಕ್ಷಣ ನಿಪುಣ ಕನಕ ಧಾರೇ ~
ಭಾವನಾ ಭೇದ ಚತುರೇ ~ ಭಾರತೀ ಸನ್ನುತ ವರೇ ~ ಕೈವಲ್ಯ ವಿತರಣ ಪರೇ ~ ಕಾಂಕ್ಷಿತ ಫಲ ಪ್ರದ ಕರೇ |
ಶ್ರೀ ವರಲಕ್ಷ್ಮಿ ನಮಸ್ತುಭ್ಯಂ ||

🌕 ಶ್ರಾವಣ ಪೌರ್ಣಮಿಗೆ ಮುಂಚಿನ ಶುಕ್ರವಾರದಂದು ಚಾರುಮತಿ ಮೊದಲಾದವರಿಂದ ಪೂಜಿಸಲ್ಪಟ್ಟವಳೇ !

🦚 ದೇವತೆಗಳು ಹಾಗೂ ಗುರುಗುಹನಾದ ಸುಬ್ರಹ್ಮಣ್ಯನು ಸಮರ್ಪಿಸಿದ ಮಣಿಮಯ ಹಾರವನ್ನು ಧರಿಸಿರುವವಳೇ!

💫 ದೀನಜನರನ್ನು ರಕ್ಷಿಸುವುದರಲ್ಲಿ ನಿಪುಣಳಾದವಳೇ! ಕನಕಧಾರೆಯನ್ನು ಹರಿಸುವವಳೇ!

✨ಭಕ್ತರ ವಿವಿಧ ಭಾವನೆಗಳನ್ನು ಅರಿಯುವ ಚತುರಳಾದವಳೇ! ಭಾರತೀಯಾದ ಸರಸ್ವತಿಯಿಂದ ಸ್ತುತಿಸಲ್ಪಡುವ ಶ್ರೇಷ್ಠಳಾದವಳೇ! ಕೈವಲ್ಯವನ್ನು ನೀಡುವವಳೇ! ಭಕ್ತರು ಬಯಸಿದ ಫಲವನ್ನು ನೀಡುವವಳೇ !

🪷 ಶ್ರೀ ವರಲಕ್ಷ್ಮಿ ದೇವಿ ನಿನಗೆ ನಮಸ್ಕಾರಗಳು 🌷

( ಮುತ್ತುಸ್ವಾಮಿ ದೀಕ್ಷಿತರ " ಶ್ರೀ ವರಲಕ್ಷ್ಮಿ ಸ್ತುತಿ"ಯ ಒಂದು ಚರಣ )

| ಓಂ ಶ್ರೀ ಮಹೇಶ್ವರೀ ದೇವ್ಯೈ ನಮಃ |

ಶ್ರೀ ಮಹೇಶ್ವರೀ ದೇವೀ ದೇವಸ್ಥಾನ
ಪಂಪಮಹಾಕವಿ ರಸ್ತೆ, ಶಂಕರಪುರಂ , ಬೆಂಗಳೂರು.
Shree Maheshwari Devi Devasthana ,
Shankarapuram ,Bengaluru

ಓಂ ನಿತ್ಯಾ ಪರಾಕ್ರಮಾಟೋಪ-ನಿರೀಕ್ಷಣ ಸಮುತ್ಸುಕಾಯೈ ನಮಃ §ನಿತ್ಯಾ ಪರಾಕ್ರಮಾಟೋಪ ನಿರೀಕ್ಷಣ ಸಮುತ್ಸುಕಾ ~ನಿತ್ಯರ ಪರಾಕ್ರಮದ ಅಟೋಪವನ್ನು (ವಿಸ್ತಾ...
18/08/2026

ಓಂ ನಿತ್ಯಾ ಪರಾಕ್ರಮಾಟೋಪ-ನಿರೀಕ್ಷಣ ಸಮುತ್ಸುಕಾಯೈ ನಮಃ §

ನಿತ್ಯಾ ಪರಾಕ್ರಮಾಟೋಪ ನಿರೀಕ್ಷಣ ಸಮುತ್ಸುಕಾ ~

ನಿತ್ಯರ ಪರಾಕ್ರಮದ ಅಟೋಪವನ್ನು (ವಿಸ್ತಾರವನ್ನು) ನೋಡಿ ಹರ್ಷಿತಳಾಗಿರುವವಳು.

ಕಾಮೇಶ್ವರಿಯಿಂದ ಚಿತ್ರೆಯವರೆಗಿನ ನಿತ್ಯದೇವತೆಯರು, ಹದಿನೈದು ತಿಥಿಗಳ ಅಧಿಷ್ಠಾತೃ ದೇವತೆಗಳು, ಅಥವಾ ಅನಾದಿಸಿದ್ಧವಾದ ನಿತ್ಯಶಕ್ತಿಗಳಿಗೆ 'ನಿತ್ಯರು' ಎಂದು ಹೆಸರು. ಉಭಯ ಗುಣಗಳು ನಾಶವಾಗಿ, ಮಾಯೆ ಎನ್ನುವ ಪರದೆಯನ್ನು ತೆಗೆದ ನಂತರ, ಪರಮಾತ್ಮನ ಜ್ಞಾನವು ವೃದ್ಧಿಯಾಗುತ್ತಾ ಹೋಗುತ್ತದೆ. ಇವು ಒಂದು ಸಲ ಉತ್ಪನ್ನವಾದರೆ ಬೆಳೆಯುತ್ತಲೇ ಹೋಗುತ್ತವೆ. 'ಎಲ್ಲಾ ಲೌಕಿಕ ಕಲೆಗಳು ಅನಭ್ಯಾಸದಿಂದ ನಾಶವಾಗುವುವು. ಈ ಜ್ಞಾನಕಲೆಯಾದರೋ, ಒಂದು ಸಲ ಉತ್ಪನ್ನವಾದರೆ ವರ್ಧಿಸುತ್ತ ಹೋಗುವುದು' ಎಂಬುದು ಈ ನಾಮದ ರಹಸ್ಯಾರ್ಥ.

( ಶ್ರೀ ಲಲಿತಾ ಸಹಸ್ರನಾಮ ~ ೭೩)

| ಓಂ ಶ್ರೀ ಮಹೇಶ್ವರೀ ದೇವ್ಯೈ ನಮಃ |

ಶ್ರೀ ಮಹೇಶ್ವರೀ ದೇವೀ ದೇವಸ್ಥಾನ
ಪಂಪಮಹಾಕವಿ ರಸ್ತೆ, ಶಂಕರಪುರಂ , ಬೆಂಗಳೂರು .
Shree Maheshwari Devi Devasthana,
Shankarapuram ,Bengaluru

Address

ಪಂಪ ಮಹಾ ಕವಿ ರಸ್ತೆ
Bangalore
560004

Opening Hours

Monday 6:30am - 11am
5:30pm - 8:05pm
Tuesday 6:30am - 8:35pm
Wednesday 6:30am - 11am
5:30pm - 8:05pm
Thursday 6:30am - 11am
5:30pm - 8:05pm
Friday 6:30am - 8:35pm
Saturday 6:30am - 11am
5:30pm - 8:05pm
Sunday 6:30am - 11am
5:30pm - 8:05pm

Telephone

+919900499999

Website

Alerts

Be the first to know and let us send you an email when ಶ್ರೀ ಮಹೇಶ್ವರೀ ದೇವೀ ದೇವಸ್ಥಾನ Shree Maheshwari Devi Devasthana posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಶ್ರೀ ಮಹೇಶ್ವರೀ ದೇವೀ ದೇವಸ್ಥಾನ Shree Maheshwari Devi Devasthana:

Shortcuts

Share