01/10/2025
೨೦೨೫ ರ ಶ್ರೀ ಗಜಕರ್ಣ ಗೆಳೆಯರ ಬಳಗದ ವತಿಯಿಂದ ನಡೆದ ವಿಜಯನಗರ ಗಣೇಶೋತ್ಸವಕ್ಕೆ ಜನಪ್ರಿಯ ಶಾಸಕರಾದ ಶ್ರೀ ಎಂ ಕೃಷ್ಣಪ್ಪನವರು ಹಾಗು ಬಿಎಲ್‌ಡಿಇ ವಿಶ್ವವಿದ್ಯಾಲಯ ಕುಲಪತಿಗಳು ಮತ್ತು ಯುವ ಕಾಂಗ್ರೆಸ್ ಮುಖಂಡರಾದ ಶ್ರೀ ಬಸನಗೌಡ.ಎಂ.ಪಾಟೀಲ್ ರವರು ಹಾಗು ಜನಪ್ರಿಯ ಶಾಸಕರು, ಹಿಂದೂ ಹೃದಯ ಸಾಮ್ರಾಟರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ರವರು ಮತ್ತು ಮಾರುತಿ ಮೆಡಿಕಲ್ಸ್ ಮಾಲೀಕರಾದ ಶ್ರೀ ಮಹೇಂದ್ರ ಮನೋತ್ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯರು, ಜೆಡಿಸ್ ಹಿರಿಯ ಮುಖಂಡರಾದ ಶ್ರೀ ಟಿ.ಎನ್.ಜವರಾಯಿ ಗೌಡರವರು ಮತ್ತು ಪ್ರಸಿದ್ಧ ಚಲನಚಿತ್ರ ನಟರಾದ ಶ್ರೀ ವಿಕ್ಕಿ ವರುಣ್ ರವರು ಭಾಗಿಯಾಗಿದ್ದರು. ನಮ್ಮ ಗಣೇಶೋತ್ಸವಕ್ಕೆ ಆಗಮಿಸಿದ ಎಲ್ಲಾ ಅತಿಥಿಗಳಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು.